Saturday, Jan 25 2020 | Time 01:50 Hrs(IST)
National

ಸಿಎಎ ಪರ ಜನರ ಬೆಂಬಲ ಪಡೆಯಲು ಬಿಜೆಪಿಯಿಂದ ಟೋಲ್ ಫ್ರೀ ಸಂಖ್ಯೆ

03 Jan 2020 | 1:37 PM

ನವದೆಹಲಿ, ಜ 03 (ಯುಎನ್‌ಐ) ಹೊಸದಾಗಿ ಜಾರಿಯಾಗಿರುವ ವಿವಾದಾತ್ಮಕ ಪೌರತ್ವ ಕಾನೂನಿಗೆ ತಮ್ಮ ಬೆಂಬಲವನ್ನು ನೋಂದಾಯಿಸಲು ಮಿಸ್ಡ್ ಕರೆಗಳನ್ನು ನೀಡಲು ಜನರಿಗೆ ಅನುಕೂಲವಾಗುವಂತೆ ಟೋಲ್-ಫ್ರೀ ಸಂಖ್ಯೆಯೊಂದಿಗೆ ಆಡಳಿತಾರೂಢ BJP ಬಿಜೆಪಿ ಶುಕ್ರವಾರ ಅಭಿಯಾನವನ್ನು ಪ್ರಾರಂಭಿಸಿದೆ.

 Sharesee more..

ಸಾವಿತ್ರಿಬಾಯಿ ಪುಲೆ ಜನ್ಮದಿನ: ಪ್ರಧಾನಿ ಮೋದಿ ಗೌರವ ಸಲ್ಲಿಕೆ

03 Jan 2020 | 10:57 AM

ನವದೆಹಲಿ, ಜ 3 (ಯುಎನ್‌ಐ) ಸಾಮಾಜಿಕ ಸುಧಾರಕಿ, ಶಿಕ್ಷಣ ತಜ್ಞೆ ಸಾವಿತ್ರಿಬಾಯಿ ಫುಲೆ ಅವರ ಜನ್ಮ ದಿನಾಚರಣೆ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಅವರಿಗೆ ಗೌರವ ಸಲ್ಲಿಸಿದರು.

 Sharesee more..

ಭಾರತದಲ್ಲಿ ಅಕ್ರಮವಾಗಿ ವಾಸಿಸುತ್ತಿದ್ದ 1000 ಬಾಂಗ್ಲಾ ಪ್ರಜೆಗಳ ಬಂಧನ: ಬಾಂಗ್ಲಾದೇಶ

03 Jan 2020 | 10:12 AM

ನವದೆಹಲಿ, ಜ 3 (ಯುಎನ್ಐ) ಭಾರತದಲ್ಲಿ "ಅಕ್ರಮವಾಗಿ" ವಾಸವಾಗಿದ್ದಕ್ಕಾಗಿ ಸುಮಾರು 1,000 ಬಾಂಗ್ಲಾದೇಶ ಪ್ರಜೆಗಳನ್ನು 2019 ರಲ್ಲಿ ಬಾಂಗ್ಲಾದೇಶದಲ್ಲಿ ಬಂಧಿಸಿ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಬಾರ್ಡರ್ ಗಾರ್ಡ್ ಬಾಂಗ್ಲಾದೇಶದ (ಬಿಜಿಬಿ)ದ ಮಹಾನಿರ್ದೇಶಕ ಮೇಜರ್ ಜನರಲ್ ಶಫೀನುಲ್ ಇಸ್ಲಾಂ ಗುರುವಾರ ಢಾಕಾದಲ್ಲಿ ಹೇಳಿದ್ದಾರೆ.

 Sharesee more..

ರೈಲ್ವೆ ಸಮಸ್ಯೆ, ದೂರು, ದುಮ್ಮಾನಗಳಿಗೆ ಇನ್ನು ಒಂದೇ ಸಹಾಯವಾಣಿ

03 Jan 2020 | 9:58 AM

ನವದೆಹಲಿ, ಜನವರಿ 3 (ಯುಎನ್ಐ) ರೈಲ್ವೆ ಪ್ರಯಾಣಿಕರು ಇಲಾಖೆಗೆ ಸಂಬಂಧಿಸಿದ ಯಾವುದೇ ಸಮಸ್ಯೆ ಅಥವಾ, ದುಮ್ಮಾನಗಳಿಗೆ ದೂರು ನೀಡಲು ರೈಲ್ವೇ ಸಹಾಯವಾಣಿಗೆ ಕರೆ ಮಾಡಲು ನಾನಾ ಸಂಖ್ಯೆಗಳಿಗಾಗಿ ಇನ್ನೂ ಹುಡುಕಾಡಬೇಕಿಲ್ಲ ಹಾಗೂ ತಡಕಾಡಬೇಕಿಲ್ಲ ಕೇವಲ 139 ಸಂಖ್ಯೆಗೆ ಕರೆ ಮಾಡಿದರೆ, ಅದು ರೈಲ್ವೇ ತ್ವರಿತ ದೂರು ವಿಲೇವಾರಿ ಘಟಕ ಸಂಪರ್ಕಿಸಿ ಪ್ರಯಾಣಿಕರಿಗೆ ಅಗತ್ಯವಾದ ಸಹಾಯ, ನೆರವು ಒದಗಿಸಲಿದೆ ಎಂದು ರೈಲ್ವೇ ಇಲಾಖೆ ತಿಳಿಸಿದೆ.

 Sharesee more..

ನಿರ್ಭಯಾ ಹಂತಕರನ್ನು ಗಲ್ಲಿಗೇರಿಸಲು ತಿಹಾರ್ ಜೈಲಿನಲ್ಲಿ ಹೊಸ ಗಲ್ಲು ಕಂಬ.!

03 Jan 2020 | 8:31 AM

ನವದೆಹಲಿ, ಜನವರಿ 3 (ಯುಎನ್ಐ) ನಿರ್ಭಯಾ ಅತ್ಯಾಚಾರ ಕೊಲೆ ಪ್ರಕರಣದ ನಾಲ್ವರು ಹಂತಕರನ್ನು ಗಲ್ಲಿಗೇರಿಸಲು ತಿಹಾರ್ ಜೈಲಿನಲ್ಲಿ ಹೊಸ ಗಲ್ಲುಕಂಬ ಸಿದ್ಧಗೊಳಿಸಲಾಗುತ್ತಿದೆ ನಾಲ್ವರನ್ನೂ ಒಟ್ಟಿಗೆ ಗಲ್ಲಿಗೇರಿಸುವ ಸಲುವಾಗಿ ಈ ಗಲ್ಲುಕಂಬ ಸಿದ್ಧಪಡಿಸಲಾಗಿದೆ ಎಂದು ಹೇಳಲಾಗುತ್ತಿದೆ.

 Sharesee more..

ವಾಯುಗಡಿ ನೀಲನಕ್ಷೆಗೆ, ಸಿಡಿಎಸ್ ಮುಖ್ಯಸ್ಥ ರಾವತ್ ಗಡುವು

02 Jan 2020 | 9:20 PM

ನವದೆಹಲಿ, ಜ 2 (ಯುಎನ್ಐ) ಭಾರತೀಯ ವಾಯುಗಡಿಯನ್ನು ಮತ್ತಷ್ಟು ಶಕ್ತಿಶಾಲಿಗೊಳಿಸುವ ನಿಟ್ಟಿನಲ್ಲಿ ಬರುವ ಜೂನ್ ಅಂತ್ಯದೊಳಗೆ ನೀಲನಕ್ಷೆ ತಯಾರಿಸುವಂತೆ ರಕ್ಷಣಾ ಪಡೆಗಳ ಮುಖ್ಯಸ್ಥರಾಗಿ (ಸಿಡಿಎಸ್) ಅಧಿಕಾರ ಸ್ವೀಕರಿಸಿದ ಬಿಪಿನ್ ರಾವತ್, ಆದೇಶಿಸಿದ್ದಾರೆ ಅಧಿಕಾರ ವಹಿಸಿಕೊಂಡ ನಂತರ ಇದು ಅವರ ಮೊದಲ ಆದೇಶವಾಗಿದೆ.

 Sharesee more..
ಜಮ್ಮು-ಕಾಶ್ಮೀರದ ರಜೋರಿಯಲ್ಲಿ ರಸ್ತೆ ಅಪಘಾತ: ಏಳು ಮಂದಿ ಸಾವು

ಜಮ್ಮು-ಕಾಶ್ಮೀರದ ರಜೋರಿಯಲ್ಲಿ ರಸ್ತೆ ಅಪಘಾತ: ಏಳು ಮಂದಿ ಸಾವು

02 Jan 2020 | 7:29 PM

ಜಮ್ಮು, ಜ 2(ಯುಎನ್‍ಐ)- ಕೇಂದ್ರಾಡಳಿತ ಪ್ರದೇಶ ಜಮ್ಮು-ಕಾಶ್ಮೀರದ ರಜೋರಿಯಲ್ಲಿ ಬಸ್‍ವೊಂದು ಅಪಘಾತಕ್ಕೀಡಾಗಿ ಅದರಲ್ಲಿ ಪ್ರಯಾಣಿಸುತ್ತಿದ್ದ ಕನಿಷ್ಟ 7 ಮಂದಿ ಮೃತಪಟ್ಟು, ಇತರ 38 ಮಂದಿ ಗಾಯಗೊಂಡಿದ್ದಾರೆ.

 Sharesee more..

ದೆಹಲಿಯಲ್ಲಿ ಜ 4ರಿಂದ ವಿಶ್ವ ಪುಸ್ತಕ ಮೇಳ: ಪೊಖ್ರಿಯಾಲ್ ಉದ್ಘಾಟನೆ

02 Jan 2020 | 5:00 PM

ನವದೆಹಲಿ, ಜ2(ಯುಎನ್‍ಐ)- ನಗರದ ಪ್ರಗತಿ ಮೈದಾನದಲ್ಲಿ ಈ ತಿಂಗಳ 4ರಿಂದ 12ರವರೆಗೆ ನಡೆಯುವ ವಿಶ್ವ ಪುಸ್ತಕ ಮೇಳದ 28 ಆವೃತ್ತಿಯನ್ನು ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ರಮೇಶ್ ಪೊಖ್ರಿಯಾಲ್ ನಿಶಾಂಕ್ ಉದ್ಘಾಟಿಸಲಿದ್ದಾರೆ ‘ಗಾಂಧಿ: ಲೇಖಕರ ಲೇಖಕ’ ಎಂಬುದು ವಿಶ್ವ ಪುಸ್ತಕ ಮೇಳದ ಘೋಷವಾಕ್ಯವಾಗಿದೆ ಎಂದು ರಾಷ್ಟ್ರೀಯ ಪುಸ್ತಕ ಟ್ರಸ್ಟ್(ಎನ್‍ಬಿಟಿ)ನ ಅಧ್ಯಕ್ಷ ಗೋವಿಂದ್ ಪ್ರಸಾದ್ ಶರ್ಮಾ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

 Sharesee more..

ಪ್ರಧಾನಿ, ಅಮಿತ್‍ಷಾ ವಿರುದ್ಧ ಅವಹೇಳನಕಾರಿ ಹೇಳಿಕೆ: ಕಣ್ಣನ್ ನ್ಯಾಯಾಂಗ ಕಸ್ಟಡಿಗೆ

02 Jan 2020 | 4:36 PM

ಚೆನ್ನೈ, ಜ 2(ಯುಎನ್‍ಐ)- ಪ್ರಧಾನಿ ನರೇಂದ್ರಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದ ಕಾಂಗ್ರೆಸ್ ನಾಯಕ ನೀಲೈ ಕಣ್ಣನ್ ಅವರನ್ನು ನ್ಯಾಯಾಂಗ ಕಸ್ಟಡಿಗೆ ಒಪ್ಪಿಸಲಾಗಿದೆ ಈ ಮಧ್ಯೆ, ಪೊಲೀಸರ ಪೂರ್ವಾನುಮತಿ ಇಲ್ಲದೆ, ಮರೀನಾದಲ್ಲಿ ಗಾಂಧಿ ಪ್ರತಿಮೆ ಎದುರು ಧರಣಿ ನಡೆಸಲು ಯತ್ನಿಸಿದ 300ಕ್ಕೂ ಹೆಚ್ಚು ಬಿಜೆಪಿ ನಾಯಕರು ಮತ್ತು ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ತೆಗೆದಕುಕೊಂಡಿದ್ದಾರೆ.

 Sharesee more..

ದೆಹಲಿ ಪೀರ್ ಗರ್ಹಿ ಅಗ್ನಿ ಅವಘಡ: ಓರ್ವ ಅಗ್ನಿಶಾಮಕ ಸಿಬ್ಬಂದಿ ನಿಧನ

02 Jan 2020 | 4:20 PM

ನವದೆಹಲಿ, ಜ 02 (ಯುಎನ್‍ಐ) ದೆಹಲಿಯ ಪೀರ್ ಗರ್ಹಿ ಬ್ಯಾಟರಿ ಕಾರ್ಖಾನೆಯಲ್ಲಿ ಗುರುವಾರ ಮುಂಜಾನೆ ಸಂಭವಿಸಿದ ಅಗ್ನಿ ಅವಘಡದಲ್ಲಿ ಓರ್ವ ಅಗ್ನಿಶಾಮಕ ಸಿಬ್ಬಂದಿ ಮೃತಪಟ್ಟಿದ್ದಾರೆ ಪೀರ್ ಗರ್ಹಿ ಉದ್ಯೋಗ್ ನಗರದಲ್ಲಿನ ಬ್ಯಾಟರಿ ಕಾರ್ಖಾನೆಯಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂದು ಮುಂಜಾನೆ 4 ಗಂಟೆ ಸುಮಾರಿಗೆ ಕರೆ ಸ್ವೀಕರಿಸಿದ ನಂತರ 35 ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬೆಂಕಿಯನ್ನು ನಂದಿಸಲು ಶ್ರಮಿಸಿದ್ದಾರೆ.

 Sharesee more..

ದೆಹಲಿ ಪಿರ್‍ಗರ್ಹಿ ಕಾರ್ಖಾನೆ ಅಗ್ನಿ ಅವಘಡ : 12 ಮಂದಿಗೆ ಗಾಯ

02 Jan 2020 | 1:39 PM

ನವದೆಹಲಿ, ಜ 012(ಯುಎನ್‍ಐ) ರಾಷ್ಟ್ರ ರಾಜಧಾನಿ ದೆಹಲಿಯ ಪಿರ್‍ಗರ್ಹಿ ಬ್ಯಾಟರಿ ಕಾರ್ಖಾನೆಯಲ್ಲಿ ಗುರುವಾರ ಮುಂಜಾನೆ ಸಂಭವಿಸಿದ ಅಗ್ನಿ ಅವಘಡದಲ್ಲಿ 12 ಜನರು ಗಾಯಗೊಂಡಿದ್ದಾರೆ ಪಿರ್‍ಗರ್ಹಿಯ ಉದ್ಯೋಗ್ ನಗರದಲ್ಲಿನ ಬ್ಯಾಟರಿ ಕಾರ್ಖಾನೆಯಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂದು ಮುಂಜಾನೆ 4 ಗಂಟೆ ಸುಮಾರಿಗೆ ಕರೆ ಸ್ವೀಕರಿಸಿದ ನಂತರ 35 ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬೆಂಕಿಯನ್ನು ನಂದಿಸಿದ್ದಾರೆ ಎಂದು ಅಗ್ನಿಶಾಮಕ ಅಧಿಕಾರಿ ತಿಳಿಸಿದ್ದಾರೆ.

 Sharesee more..

ಸೈರಸ್ ಮಿಸ್ತ್ರಿ ಮರು ನೇಮಕ: ಮತ್ತೆ ಕೋರ್ಟ್ ಮೆಟ್ಟಿಲೇರಿದ ಟಾಟಾ ಮಕ್ಕಳು

02 Jan 2020 | 12:21 PM

ನವದೆಹಲಿ, ಜ2(ಯುಎನ್ಐ) ದೇಶದ ಅತಿದೊಡ್ಡ ಕೈಗಾರಿಕಾ ಸಮೂಹ ಗುಂಪಿನ ಟಾಟಾ ಸಂಸ್ಥೆಯ ಮುಖ್ಯಸ್ಥ ಸ್ಥಾನಕ್ಕೆ ಸೈರಸ್ ಮಿಸ್ತ್ರಿ ಅವರು ಮರು ನೇಮಕವಾಗಿ ಹದಿನೈದು ದಿನ ಕಳೆಯುವ ಮುನ್ನವೇ ರತನ್ ಟಾಟಾ ಮಕ್ಕಳು ಮತ್ತೆ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾರೆ.

 Sharesee more..

ಕಟ್ಟಡ ಕುಸಿತ: ಅವಶೇಷಗಳಡಿ ಸಿಲುಕಿದ ಅಗ್ನಿಶಾಮಕ ಸಿಬ್ಬಂದಿ

02 Jan 2020 | 12:08 PM

ನವದೆಹಲಿ ಜ, 2(ಯುಎನ್ಐ) ಬೆಂಕಿ ಅವಘಡ ಸಂಭವಿಸಿದ್ದ ಫ್ಯಾಕ್ಟರಿಯಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದ್ದ ವೇಳೆ ಕಟ್ಟಡ ಕುಸಿದು ಬಿದ್ದು ಅನೇಕ ಅಗ್ನಿಶಾಮಕ ಸಿಬ್ಬಂದಿ ಅವಶೇಷಗಳಡಿ ಸಿಲುಕಿದ್ದಾರೆ ಪ್ರಾಥಮಿಕ ಮೂಲಗಳ ಪ್ರಕಾರ, ಪೀರಗರ್ಹಿಯ ಫ್ಯಾಕ್ಟರಿಯೊಂದಲ್ಲಿ ಇಂದು ಮುಂಜಾನೆ ಆಕಸ್ಮಿಕ ಬೆಂಕಿ ಅವಘಡ ಸಂಭವಿಸಿತ್ತು.

 Sharesee more..

ಸಿಖ್ ಧರ್ಮಗುರು ಗುರು ಗೋವಿಂದ್ ಸಿಂಗ್ ಅವರಿಗೆ ಪ್ರಧಾನಿ ಗೌರವ ಸಮರ್ಪಣೆ

02 Jan 2020 | 10:24 AM

ನವದೆಹಲಿ, ಜನವರಿ 2 (ಯುಎನ್‌ಐ) ಪ್ರಧಾನಿ ನರೇಂದ್ರ ಮೋದಿ ಅವರು ಹತ್ತನೇ ಸಿಖ್ ಗುರು, ಗುರು ಗೋವಿಂದ್‌ ಸಿಂಗ್‌ ಅವರ ಪ್ರಕಾಶ್ ಪರ್ವ ದಿನದ ಅಂಗವಾಗಿ ಅವರಿಗೆ ಗೌರವ ಸಲ್ಲಿಸಿದರು ಶ್ರೀ ಗುರು ಗೋವಿಂದ್ ಸಿಂಗ್‌ ಜಿ ಅವರ ಪ್ರಕಾಶ್ ಪರ್ವದ ಅಂಗವಾಗಿ ಅವರಿಗೆ ನಮನ ಸಲ್ಲಿಸುತ್ತೇನೆ ಎಂದು ಪ್ರಧಾನಮಂತ್ರಿ ಟ್ವೀಟ್ ಮಾಡಿದ್ದಾರೆ.

 Sharesee more..

ಹೊಸ ವರ್ಷ: ಮಕ್ಕಳ ಜನನದಲ್ಲೂ ಭಾರತಕ್ಕೆ ಆಗ್ರಸ್ಥಾನ

02 Jan 2020 | 9:37 AM

ನವದೆಹಲಿ, ಜ 2 (ಯುಎನ್ಐ) ಹೊಸ ವರ್ಷ ಆರಂಭದ ಮೊದಲ ದಿನ, ಅಂದರೆ ಜನವರಿ ಒಂದರಂದು ಭಾರತದಲ್ಲಿ ಒಟ್ಟು 67, 385 ಮಕ್ಕಳು ಜನಿಸಿವೆ ಎಂದು ಯುನಿಸೆಫ್ ಅಂಕಿ, ಅಂಶ ಬಿಡುಗಡೆ ಮಾಡಿದೆ 2020ರ ಮೊದಲ ದಿನ ಗರಿಷ್ಠ ಮಕ್ಕಳು ಹುಟ್ಟಿದ ದೇಶ ಎಂಬ ಹೆಗ್ಗಳಿಕೆಗೆ ಭಾರತ ಪಾತ್ರವಾಗಿದೆ.

 Sharesee more..