Saturday, Jan 25 2020 | Time 01:21 Hrs(IST)
National

ಚೆನ್ನೈ ರಾಜಭವನದಲ್ಲಿ ವೆಂಕಯ್ಯನಾಯ್ಡು ಅವರಿಂದ ನೇತಾಜಿ ಪ್ರತಿಮೆ ಅನಾವರಣ

23 Jan 2020 | 5:56 PM

ಚೆನ್ನೈ, ಜ 23 (ಯುಎನ್‍ಐ) ಸ್ವಾತಂತ್ರ್ಯ ಹೋರಾಟಗಾರ ನೇತಾಜಿ ಸುಬಾಶ್ ಚಂದ್ರ ಬೋಸ್ ಅವರ 124 ನೇ ಜನ್ಮ ವಾರ್ಷಿಕೋತ್ಸವದ ಸಂದರ್ಭದಲ್ಲಿ ಉಪರಾಷ್ಟ್ರಪತಿ ಎಂ ವೆಂಕಯ್ಯ ನಾಯ್ಡು ಅವರು ಇಲ್ಲಿನ ರಾಜಭವನದಲ್ಲಿ ಗುರುವಾರ ಇಂಡಿಯನ್ ನ್ಯಾಷನಲ್ ಆರ್ಮಿ ನಾಯಕನ ಆಳೆತ್ತರದ ಕಂಚಿನ ಪ್ರತಿಮೆಯನ್ನು ಅನಾವರಣಗೊಳಿಸಿದರು ತಮಿಳುನಾಡು ರಾಜ್ಯಪಾಲ ಬನ್ವರಿಲಾಲ್ ಪುರೋಹಿತ್, ಮುಖ್ಯಮಂತ್ರಿ ಎಡಪ್ಪಾಡಿ ಕೆ ಪಳನಿಸ್ವಾಮಿ ಮತ್ತು ಅವರ ಸಂಪುಟ ಸಹೋದ್ಯೋಗಿಗಳು ಸಮಾರಂಭದಲ್ಲಿ ಉಪಸ್ಥಿತರಿದ್ದರು.

 Sharesee more..
ಪ್ರಚಾರ ರಂಗು, ಕೇಜ್ರಿವಾಲ್ ವಿರುದ್ಧ 90 ಅಭ್ಯರ್ಥಿಗಳು  ಕಣಕ್ಕೆ

ಪ್ರಚಾರ ರಂಗು, ಕೇಜ್ರಿವಾಲ್ ವಿರುದ್ಧ 90 ಅಭ್ಯರ್ಥಿಗಳು ಕಣಕ್ಕೆ

23 Jan 2020 | 5:25 PM

ನವದೆಹಲಿ, ಜನವರಿ, 23(ಯುಎನ್ಐ ) ಮುಂದಿನ ತಿಂಗಳ 8ರಂದು ನಡೆಯಲಿರುವ ದೆಹಲಿ ವಿಧಾನಸಭೆ ಚುನಾವಣೆಗೆ ಪ್ರಚಾರ ದಿನದಿಂದ ದಿನಕ್ಕೆ ರಂಗೇರುತ್ತಿದೆ.

 Sharesee more..

ಗಣರಾಜ್ಯೋತ್ಸವ ಹಿನ್ನಲೆ: ಶ್ರೀನಗರದಲ್ಲಿ ಬಿಗಿ ಭದ್ರತೆ, ಎಲ್ಲಾ ಸಿದ್ಧತೆಗಳು ಪೂರ್ಣ

23 Jan 2020 | 5:12 PM

ಶ್ರೀನಗರ, ಜ23 (ಯುಎನ್‍ಐ)- ಗಣರಾಜ್ಯೋತ್ಸವ ಹಿನ್ನೆಲೆಯಲ್ಲಿ ಕಾಶ್ಮೀರ ಕಣಿವೆಯಲ್ಲಿ ಶಾಂತಿಯನ್ನು ಭಂಗಗೊಳಿಸುವ ಉಗ್ರರ ಯಾವುದೇ ಪ್ರಯತ್ನವನ್ನು ತಡೆಯಲು ಕೇಂದ್ರಾಡಳಿತ ಪ್ರದೇಶದ ಬೇಸಿಗೆ ರಾಜಧಾನಿಯಾದ ಇಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ ಕಣಿವೆಯಲ್ಲಿ ಈ ವರ್ಷದ ಸಂಭ್ರಮಾಚರಣೆಯ ಮುಖ್ಯ ಸ್ಥಳವಾದ ಸೊನ್ವಾರ್‍ನ ಎಸ್ ಕೆ ಕ್ರಿಕೆಟ್ ಕ್ರೀಡಾಂಗಣದಲ್ಲಿ ಗಣರಾಜ್ಯೋತ್ಸವ ಸುಗಮವಾಗಿ ನಡೆಯುವಂತಾಗಲು ಎಲ್ಲಾ ವ್ಯವಸ್ಥೆಗಳನ್ನು ಪೂರ್ಣಗೊಳಿಸಲಾಗಿದೆ.

 Sharesee more..
26 ರಂದು ಸಂಜೆ ಮೋದಿ   ಮನ್ ಕೀ ಬಾತ್ ಪ್ರಸಾರ

26 ರಂದು ಸಂಜೆ ಮೋದಿ ಮನ್ ಕೀ ಬಾತ್ ಪ್ರಸಾರ

23 Jan 2020 | 5:03 PM

ನವದೆಹಲಿ, ಜನವರಿ 23 (ಯುಎನ್ಐ ) ಪ್ರಧಾನಿ ನರೇಂದ್ರ ಮೋದಿ ಅವರು ಇದೇ ಮೊದಲ ಬಾರಿಗೆ 26 ರಂದು ಭಾನುವಾರ ಮನ್ ಕೀಬಾತ್ ಕಾರ್ಯಕ್ರಮದಲ್ಲಿ ಬೆಳಿಗ್ಗೆ ಬದಲಿಗೆ ಸಂಜೆ ಭಾಷಣ ಮಾಡಲಿದ್ದಾರೆ.

 Sharesee more..
ಸುಭಾಷ್ ಚಂದ್ರಬೋಸ್ ಅವರ ಜನ್ಮವಾರ್ಷಿಕೋತ್ಸವ: ರಾಷ್ಟ್ರಪತಿ, ಉಪರಾಷ್ಟ್ರಪತಿಯವರಿಂದ ಶ್ರದ್ಧಾಂಜಲಿ

ಸುಭಾಷ್ ಚಂದ್ರಬೋಸ್ ಅವರ ಜನ್ಮವಾರ್ಷಿಕೋತ್ಸವ: ರಾಷ್ಟ್ರಪತಿ, ಉಪರಾಷ್ಟ್ರಪತಿಯವರಿಂದ ಶ್ರದ್ಧಾಂಜಲಿ

23 Jan 2020 | 4:57 PM

ನವದೆಹಲಿ, ಜ23(ಯುಎನ್‍ಐ)-ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಜನ್ಮ ವಾರ್ಷಿಕೋತ್ಸವ ಅಂಗವಾಗಿ ರಾಷ್ಟ್ರಪತಿ ಭವನದಲ್ಲಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಮತ್ತು ಉಪರಾಷ್ಟ್ರಪತಿ ಎಂ ವೆಂಕಯ್ಯನಾಯ್ಡು ಗುರುವಾರ ಮಹಾ ನಾಯಕನಿಗೆ ಗೌರವ ನಮನ ಸಲ್ಲಿಸಿದ್ದಾರೆ.

 Sharesee more..
ಕೊನೆ ಆಸೆ , ಇನ್ನೂ ಬಾಯಿಬಿಡದ ನಿರ್ಭಯ ಹಂತಕರು..!!

ಕೊನೆ ಆಸೆ , ಇನ್ನೂ ಬಾಯಿಬಿಡದ ನಿರ್ಭಯ ಹಂತಕರು..!!

23 Jan 2020 | 4:49 PM

ನವದೆಹಲಿ, ಜನವರಿ 23 (ಯುಎನ್ಐ) ನಿರ್ಭಯ ಅತ್ಯಾಚಾರ , ಕೊಲೆ ಪ್ರಕರಣದ ನಾಲ್ವರು ಅಪರಾಧಿಗಳನ್ನು ಬರುವ ಫೆಬ್ರವರಿ 1 ರಂದು ಗಲ್ಲಿಗೇರಿಸುವ ಮೊದಲು ತಮ್ಮ ಕೊನೆಯ ಆಸೆ, ಕೋರಿಕೆ ಪಟ್ಟಿ ಕೊಡುವಂತೆ ತಿಹಾರ್ ಜೈಲಿನ ಅಧಿಕಾರಿಗಳು ಕೇಳಿದ್ದರೂ ಯಾರೊಬ್ಬರು ಈವರೆಗೂ ಪ್ರತಿಕ್ರಿಯೆ ನೀಡಿಲ್ಲ.

 Sharesee more..

ವಿಧಾನಪರಿಷತ್ ಸಭಾಪತಿ ಮೇಲೆ ವೈಎಸ್‍ಆರ್ ಸಿಪಿ ಸದಸ್ಯರಿಂದ ಬಲಪ್ರಯೋಗ-ನಾಯ್ಡು ಆರೋಪ

23 Jan 2020 | 2:27 PM

ಅಮರಾವತಿ, ಜ 23(ಯುಎನ್‍ಐ)- ಆಂಧ್ರ ವಿಧಾನ ಪರಿಷತ್ ನಲ್ಲಿ ಬುಧವಾರ ರಾತ್ರಿ ರಾಜಧಾನಿ ವಿಕೇಂದ್ರೀಕರಣ ಕುರಿತ ಮಸೂದೆ ಮೇಲಿನ ಚರ್ಚೆಯ ವೇಳೆ ಸಭಾಪತಿ ಎಂ ಎ ಷರೀಫ್ ಅವರ ಮೇಲೆ ಆಡಳಿತಾರೂಢ ವೈಎಸ್‍ಆರ್ ಪಿ ಪಕ್ಷದ ಕೆಲ ಸಚಿವರು ಬಲ ಪ್ರಯೋಗಿಸಿದ್ದಾರೆ ಎಂದು ತೆಲುಗುದೇಶಂ ಪಕ್ಷ (ಟಿಡಿಪಿ) ಅಧ್ಯಕ್ಷ ಮತ್ತು ಮಾಜಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಆರೋಪಿಸಿದ್ದಾರೆ.

 Sharesee more..
ಪುಲ್ವಾಮದಲ್ಲಿ ಶೋಧ ಕಾರ್ಯಾಚರಣೆ ಪುನರಾರಂಭ: ಇದುವರೆಗೆ ಇಬ್ಬರು ಭದ್ರತಾ ಪಡೆ ಸಿಬ್ಬಂದಿ ಹುತಾತ್ಮ, ಓರ್ವ ಉಗ್ರ ಹತ

ಪುಲ್ವಾಮದಲ್ಲಿ ಶೋಧ ಕಾರ್ಯಾಚರಣೆ ಪುನರಾರಂಭ: ಇದುವರೆಗೆ ಇಬ್ಬರು ಭದ್ರತಾ ಪಡೆ ಸಿಬ್ಬಂದಿ ಹುತಾತ್ಮ, ಓರ್ವ ಉಗ್ರ ಹತ

23 Jan 2020 | 2:18 PM

ಶ್ರೀನಗರ, ಜ 23(ಯುಎನ್‍ಐ)- ಕಾಶ್ಮೀರದ ದಕ್ಷಿಣ ಜಿಲ್ಲೆಯಾದ ಪುಲ್ವಾಮದಲ್ಲಿ ಭದ್ರತಾ ಪಡೆಗಳು ತೀವ್ರ ಶೋಧ ಕಾರ್ಯಾಚರಣೆಯನ್ನು ಪುನರಾರಂಭಿಸಿವೆ ಎಂದು ಅಧಿಕೃತ ಮೂಲಗಳು ತಿಳಿಸಿವೆ. ಮಂಗಳವಾರ ಮಧ್ಯಾಹ್ನ 12ಕ್ಕೆ ಖ್ರೆವ್ ನ ಜಂತರಾಗ್ ಗ್ರಾಮದಲ್ಲಿ ಶುರುವಾದ ಗುಂಡಿನ ಚಕಮಕಿಯಲ್ಲಿ ಇದುವರೆಗೆ ಸೈನಿಕನೋರ್ವ ಮತ್ತು ಜಮ್ಮು-ಕಾಶ್ಮೀರ ಪೊಲೀಸ್ ನ ವಿಶೇಷ ಕಾರ್ಯಾಚರಣೆ ತಂಡದ ಓರ್ವ ಯೋಧ ಹತರಾಗಿದ್ದಾರೆ.

 Sharesee more..

ಅಸ್ಸಾಂನಲ್ಲಿ 200 ಶಸ್ತ್ರಾಸ್ರ, ಮದ್ದುಗುಂಡುಗಳೊಂದಿಗೆ 644 ಉಗ್ರರು ಶರಣಾಗತಿ

23 Jan 2020 | 1:50 PM

ಗುವಾಹತಿ, ಜ 23(ಯುಎನ್‍ಐ)- ಅಸ್ಸಾಂನಲ್ಲಿ ಉಲ್ಫಾ ಮತ್ತು ಎನ್ ಡಿಎಫ್ ಬಿ ಸೇರಿದಂತೆ ಎಂಟು ಉಗ್ರ ಸಂಘಟನೆಗಳ 644 ಉಗ್ರರ ನಾಯಕರು ಮತ್ತು ಸದಸ್ಯರು ಇಂದು ಶಸ್ತ್ರಾಸ್ತ್ರ ತ್ಯಜಿಸಿ, ಸಮಾಜದ ಮುಖ್ಯವಾಹಿನಿಗೆ ಸೇರ್ಪಡೆಯಾಗಿದ್ದಾರೆ ಅಸ್ಸಾಂ ಮುಖ್ಯಮಂತ್ರಿ ಸರ್ಬಾನಂದ ಸೋನೊವಾಲ್ ಮತ್ತು ಇತರ ಹಿರಿಯ ಸೇನಾ ಮತ್ತು ಪೊಲೀಸ್ ಅಧಿಕಾರಿಗಳು ಉಪಸ್ಥಿತರಿದ್ದ ಶಸ್ತ್ರಾಸ್ತ್ರ ತ್ಯಾಗ ಸಮಾರಂಭದಲ್ಲಿ ಉಗ್ರರು ಔಪಚಾರಿಕವಾಗಿ ಶರಣಾಗಿದ್ದಾರೆ.

 Sharesee more..

ಅನಂತ್ ನಾಗ್ ನಲ್ಲಿ ಭದ್ರತಾ ಪಡೆಗಳಿಂದ ತೀವ್ರ ಶೋಧ ಕಾರ್ಯಾಚರಣೆ

23 Jan 2020 | 12:33 PM

ಅನಂತನಾಗ್, ಜ23(ಯುಎನ್‍ಐ)- ದಕ್ಷಿಣ ಕಾಶ್ಮೀರದ ಈ ಜಿಲ್ಲೆಯ ಗ್ರಾಮವೊಂದರಲ್ಲಿ ಭದ್ರತಾ ಪಡೆಗಳು ಗುರುವಾರ ತೀವ್ರ ಶೋಧ ಕಾರ್ಯಾಚರಣೆ ಆರಂಭಿಸಿವೆ ಎಂದು ಅಧಿಕೃತ ಮೂಲಗಳು ತಿಳಿಸಿವೆ ಉಗ್ರರು ಅಡಗಿರುವ ನಿರ್ದಿಷ್ಟ ಮಾಹಿತಿಯನ್ನಾಧರಿಸಿ ರಾಷ್ಟ್ರೀಯ ರೈಫಲ್ಸ್, ಜಮ್ಮು-ಕಾಶ್ಮೀರ ಪೊಲೀಸ್ ನ ವಿಶೇಷ ಕಾರ್ಯಾಚರಣೆ ತಂಡ ಹಾಗೂ ಸಿಆರ್ ಪಿಎಫ್ ಅನಂತ್ ನಾಗ್ ಜಿಲ್ಲೆಯ ಬಿಜ್ ಬೆಹರಾ ಸಮೀಪದ ಪಜಲ್ ಪೊರಾದಲ್ಲಿ ಜಂಟಿ ಶೋಧ ಕಾರ್ಯಾಚರಣೆಯನ್ನು ಆರಂಭಿಸಿವೆ ಎಂದು ಅಧಿಕಾರಿಗಳು ಹೇಳಿದ್ದಾರೆ.

 Sharesee more..

ಬಾಳಠಾಕ್ರೆ ಅವರಿಗೆ ಪ್ರಧಾನಿ ಶ್ರದ್ಧಾಂಜಲಿ: ಶಿವಸೇನೆ, ಎಂಎನ್‍ಎಸ್ ನಿಂದ ಪ್ರತ್ಯೇಕ ಸಭೆಗಳ ಆಯೋಜನೆ

23 Jan 2020 | 12:20 PM

ನವದೆಹಲಿ, ಜ23(ಯುಎನ್‍ಐ)- ಶಿವಸೇನಾ ಸ್ಥಾಪಕ ಬಾಳಠಾಕ್ರೆ ಅವರಿಗೆ ಪ್ರಧಾನಿ ನರೇಂದ್ರಮೋದಿ ಗುರುವಾರ ಶ್ರದ್ಧಾಂಜಲಿ ಸಲ್ಲಿಸಿದ್ದು, ಠಾಕ್ರೆಯವರ ಧೈರ್ಯ ಮತ್ತು ದಿಟ್ಟತನ ಲಕ್ಷಾಂತರ ಜನರಿಗೆ ಸ್ಫೂರ್ತಿಯಾಗಿದೆ ಎಂದು ಬಣ್ಣಿಸಿದ್ದಾರೆ ‘ಬಾಳಸಾಹೇಬ್ ಠಾಕ್ರೆ ಅವರ ಜನ್ಮದಿನದ ಅಂಗವಾಗಿ ಅವರಿಗೆ ಶ್ರದ್ಧಾಂಜಲಿ ಅರ್ಪಿಸುತ್ತಿದ್ದೇನೆ.

 Sharesee more..

ಸಿಬಿಐನಿಂದ ಛೋಟಾ ರಾಜನ್ ಪ್ರಕರಣಗಳ ವಿಚಾರಣೆ

23 Jan 2020 | 11:06 AM

ನವದೆಹಲಿ, ಜನವರಿ 23(ಯುಎನ್ಐ) ಭೂಗತ ಪಾತಕಿ ಛೋಟಾ ರಾಜನ್ ಪಾತ್ರ, ಮತ್ತು ಕೈವಾಡವಿದೆ ಎನ್ನಲಾದ 4 ಪ್ರಕರಣಗಳ ತನಿಖೆಯನ್ನು ಸಿಬಿಐ ಕೈಗೆತ್ತಿಕೊಂಡಿದೆ 1997ರಲ್ಲಿ ಪತ್ರಕರ್ತ ಬಲ್ಜೀತ್ ಶೆರ್ಸಿಂಗ್ ಪರ್ಮಾರ್ ಕೊಲೆಯತ್ನವೂ ಇದರಲ್ಲಿ ಸೇರಿದೆ, ಸದ್ಯ ಛೋಟಾ ರಾಜನ್ ಬಂಧನದಲ್ಲಿ ಇದ್ದಾನೆ.

 Sharesee more..

ದೇಶಕ್ಕೆ ಸುಭಾಷ್‍ ಚಂದ್ರ ಬೋಸ್ ಕೊಡುಗೆ ಅಪಾರ : ಪ್ರಧಾನಿ ಮೋದಿ

23 Jan 2020 | 10:51 AM

ಕೋಲ್ಕತಾ/ನವದೆಹಲಿ, ಜ 23 (ಯುಎನ್‍ಐ) ದೇಶಾದ್ಯಂತ ಇಂದು ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ 123ನೇ ಜನ್ಮದಿನ ಆಚರಿಸಲಾಗುತ್ತಿದ್ದು, ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಈ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿದ್ದು, ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಧೈರ್ಯ ಮತ್ತು ದೇಶಕ್ಕಾಗಿ ಅವರು ನೀಡಿದ ಕೊಡುಗೆಯನ್ನು ಎಂದಿಗೂ ಮರೆಯಲಾಗದು ಭಾರತೀಯರ ಪ್ರಗತಿ ಮತ್ತು ಯೋಗಕ್ಷೇಮಕ್ಕಾಗಿ ಟೊಂಕಕಟ್ಟಿ ನಿಂತ ಅವರಿಗೆ ಜನತೆ ಕೃತಜ್ಞರಾಗಿರಬೇಕು ಎಂದು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

 Sharesee more..

ಕಾಶ್ಮೀರ ಬಿಕ್ಕಟ್ಟು, ಟ್ರಂಪ್ ಸಹಾಯ, ಆಹ್ವಾನ ತಿರಸ್ಕರಿಸಿದ ಭಾರತ

22 Jan 2020 | 10:34 PM

ನವದೆಹಲಿ,ಜನವರಿ 22(ಯುಎನ್ಐ ) ಕಾಶ್ಮೀರದ ಬಿಕ್ಕಟ್ಟು ಭಾರತ-ಪಾಕಿಸ್ತಾನ ನಡುವಿನ ದ್ವಿಪಕ್ಷೀಯ ವಿಷಯವಾಗಿದ್ದು, ಮೂರನೆಯವರ ಹಸ್ತಕ್ಷೇಪ, ಮಧ್ಯಸ್ತಿಕೆ ಸಹಿಸುವ ಪ್ರಶ್ನೆಯೇ ಇಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟ, ಖಡಕ್ ಸಂದೇಶ ರವಾನಿಸಿದೆ ದಾವೋಸ್ನಲ್ಲಿ ನಡೆದ ಅಂತಾರಾಷ್ಟ್ರೀಯ ಆರ್ಥಿಕ ಶೃಂಗಸಭೆಯಲ್ಲಿ ವಿಶೇಷ ಭಾಷಣದ ವೇಳೆ ಕಾಶ್ಮೀರದ ಬಿಕ್ಕಟ್ಟನ್ನು ಉಲ್ಲೇಖಿಸಿ ಮಾತನಾಡಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, 'ಕಾಶ್ಮೀರಕ್ಕೆ ಸಂಬಂಧಿಸಿದ ವಿಚಾರವನ್ನು ಅಮೆರಿಕ ಗಮನಿಸುತ್ತಿದೆ.

 Sharesee more..
ಮೂರು ರಾಜಧಾನಿಗಳ ಸ್ಥಾಪನೆಗೆ ಟಿಡಿಪಿ ಸದಸ್ಯರ ವಿರೋಧ: ಆಂಧ್ರ ವಿಧಾನಸಭೆಯಲ್ಲಿ ಕೋಲಾಹಲ

ಮೂರು ರಾಜಧಾನಿಗಳ ಸ್ಥಾಪನೆಗೆ ಟಿಡಿಪಿ ಸದಸ್ಯರ ವಿರೋಧ: ಆಂಧ್ರ ವಿಧಾನಸಭೆಯಲ್ಲಿ ಕೋಲಾಹಲ

22 Jan 2020 | 9:28 PM

ಅಮರಾವತಿ, ಜ22(ಯುಎನ್‍ಐ)-ಆಂಧ್ರ ವಿಧಾನಸಭೆಯಲ್ಲಿ ಬುಧವಾರ ಪ್ರತಿಪಕ್ಷ ತೆಲುಗುದೇಶಂ ಪಕ್ಷ(ಟಿಡಿಪಿ)ದ ಸದಸ್ಯರು ಪೋಡಿಯಂಗೆ ನುಗ್ಗಿ ‘ಜೈ ಅಮರಾವತಿ’ ಎಂಬ ಘೋಷಣೆಗಳನ್ನು ಕೂಗಿದ್ದರಿಂದ ಕೋಲಾಹಲ ಸೃಷ್ಟಿಯಾಗಿತ್ತು.

 Sharesee more..