Saturday, Jan 25 2020 | Time 01:20 Hrs(IST)
National

ಹರಿಯಾಣ ಕಾಂಗ್ರೆಸ್ ನಾಯಕ ಶಮ್ಶರ್ ಸಿಂಗ್ ಸುರ್ಜೆವಾಲಾ ನಿಧನ

20 Jan 2020 | 12:06 PM

ನವದೆಹಲಿ, ಜನವರಿ 20 (ಯುಎನ್‌ಐ) ಹರಿಯಾಣದ ಮಾಜಿ ಕಾಂಗ್ರೆಸ್ ಮುಖ್ಯಸ್ಥ ಶಮ್ಶರ್ ಸಿಂಗ್ ಸುರ್ಜೆವಾಲಾ ಅವರು ದೀರ್ಘಕಾಲದ ಅನಾರೋಗ್ಯದ ನಂತರ ಸೋಮವಾರ ನಿಧನ ಹೊಂದಿದರು ಅವರಿಗೆ 87 ವರ್ಷವಯಸ್ಸಾಗಿತ್ತು, ಶಮ್ಶರ್ ಹರಿಯಾಣದಲ್ಲಿ ವಿರೋಧ ಪಕ್ಷದ ನಾಯಕರಾಗಿಯೂ ಕೆಲಸ ಮಾಡಿದ್ದರು.

 Sharesee more..

ಪರೀಕ್ಷಾ ಪೇ ಚರ್ಚಾ, ವಿದ್ಯಾರ್ಥಿಗಳಿಗೆ ಮೋದಿ ಪಾಠ

20 Jan 2020 | 9:50 AM

ನವದೆಹಲಿ, ಜನವರಿ 20 (ಯುಎನ್ಐ) ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅತ್ಯಂತ ಪ್ರಿಯವೆನಿಸಿರುವ 'ಪರೀಕ್ಷಾ ಪೇ ಚರ್ಚಾ' ಕಾರ್ಯಕ್ರಮದ ಮೂರನೇ ಅವತರಣಿಕೆ ಇಂದು ನಡೆಯಲಿದೆ ತಾಲಕಟೋರ ಸ್ಟೇಡಿಯಂನಲ್ಲಿ 11 ಗಂಟೆಗೆ ಈ ಕಾರ್ಯಕ್ರಮ ಜರುಗಲಿದ್ದು, ಪರೀಕ್ಷಾ ಒತ್ತಡ ನಿಭಾಯಿಸುವ ವಿದ್ಯಾರ್ಥಿಗಳಿಗೆ ಅವರು ಅನುಭವ, ಉಪಯುಕ್ತ ಸಲಹೆ ನೀಡಲಿದ್ದಾರೆ.

 Sharesee more..

ಬಿಜೆಪಿಗೆ ನಡ್ಡಾ ಸಾಮ್ರಾಟ, ಇಂದಿನಿಂದ ಹೊಸ ಪರ್ವ ಆರಂಭ

20 Jan 2020 | 9:03 AM

ನವದೆಹಲಿ, ಜನವರಿ 20 (ಯುಎನ್‌ಐ) ಜಗತ್ ಪ್ರಕಾಶ್ ನಡ್ಡಾ ಆಡಳಿತಾರೂಡ ಬಿಜೆಪಿಯ 11 ನೇ ರಾಷ್ಟ್ರೀಯ ಅಧ್ಯಕ್ಷರಾಗಲು ಸಜ್ಜಾಗಿದ್ದು, ಇಂದಿನಿಂದ ಹೊಸ ಪರ್ವ ಆರಂಭವಾಗಲಿದೆ ಪಕ್ಷದ ಅತ್ಯಂತ ಯಶಸ್ವಿ ಮುಖ್ಯಸ್ಥ ಸೂತ್ರಧಾರ, ಅಧ್ಯಕ್ಷ ಎನಿಸಿಕೊಂಡಿದ್ದ ಅಮಿತ್ ಶಾ ಅವರಿಂದ ಅಧಿಕಾರ ವಹಿಸಿಕೊಳ್ಳಲಿದ್ದಾರೆ.

 Sharesee more..

ಸಿಎಎ, ಭಾರತದ ಸಂವಿಧಾನದ ಮೇಲಿನ ದಾಳಿ: ಕಾಂಗ್ರೆಸ್

19 Jan 2020 | 8:29 PM

ನವದೆಹಲಿ, ಜ 19 (ಯುಎನ್ಐ) ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರು 'ಪಂಥೀಯತೆ, ಧರ್ಮಾಂಧತೆ ಮತ್ತು ಮತಾಂಧತೆಯ' ಜೀವಂತ ಸಂಕೇತಗಳಾಗಿ ಮಾರ್ಪಟ್ಟಿದ್ದಾರೆ, ದೇಶದ ನೀತಿ ಮತ್ತು ಅದರ ಸಂವಿಧಾನದ ಮೇಲೆ ದಾಳಿ ಮಾಡಲು ಅವರು ದೇಶವನ್ನು ಒಂದು ಸಾಧನವಾಗಿ ಬಳಸಿಕೊಳ್ಳುತ್ತಿದ್ದಾರೆ ಎಂದು ಭಾನುವಾರ ಕಾಂಗ್ರೆಸ್ ವಕ್ತಾರ ರಂದೀಪ್ ಸುರ್ಜೇವಾಲಾ ಟೀಕಿಸಿದ್ದಾರೆ.

 Sharesee more..

ಶ್ರೀಲಂಕಾ ನೌಕಾಪಡೆಯಿಂದ ನಾಲ್ವರು ಭಾರತೀಯ ಮೀನುಗಾರರ ಬಂಧನ, ದೋಣಿ ವಶ

19 Jan 2020 | 12:21 PM

ಪುದುಕೋಟೈ, ಜ 19 (ಯುಎನ್‌ಐ) ಅಂತಾರಾಷ್ಟ್ರೀಯ ಕಡಲ ಗಡಿ ರೇಖೆ (ಐಎಂಬಿಎಲ್) ದಾಟಿ ತನ್ನ ವಿಶೇಷ ಆರ್ಥಿಕ ವಲಯದಲ್ಲಿ ಮೀನುಗಾರಿಕೆ ನಡೆಸಲಾಗಿದೆ ಎಂದು ಶ್ರೀಲಂಕಾ ನೌಕಾಪಡೆ ಭಾನುವಾರ ನಾಲ್ವರು ಭಾರತೀಯ ಮೀನುಗಾರರನ್ನು ಬಂಧಿಸಿದ್ದು, ಅವರ ಯಾಂತ್ರಿಕೃತ ಮೀನುಗಾರಿಕೆ ದೋಣಿಯನ್ನು ವಶಪಡಿಸಿಕೊಂಡಿದೆ.

 Sharesee more..

ಪರೀಕ್ಷಾ ಪೇ ಚರ್ಚಾ ಸಂವಾದಲ್ಲಿ 50 ದಿವ್ಯಾಂಗ ವಿದ್ಯಾರ್ಥಿಗಳು ಭಾಗಿ

19 Jan 2020 | 11:12 AM

ನವದೆಹಲಿ, ಜನವರಿ, 19 (ಯುಎನ್ಐ ) ನಾಳೆ ನಡೆಯಲಿರುವ ಪರೀಕ್ಷಾ ಪೇ ಚರ್ಚಾ ಕಾರ್ಯಕ್ರಮದಲ್ಲಿ ಇದೇ ಮೊದಲ ಬಾರಿಗೆ ದೇಶದ ವಿವಿಧ ಶಾಲೆಗಳ 50 ದಿವ್ಯಾಂಗ ವಿದ್ಯಾರ್ಥಿಗಳು ಪ್ರಧಾನಿ ಜೊತೆ ಸಂವಾದ ನಡೆಸಲಿದ್ದಾರೆ ರಾಷ್ಟ್ರ ರಾಜಧಾನಿ ನವದೆಹಲಿಯ ತಾಲ್ಕೊಟರಾ ಕ್ರೀಡಾಂಗಣಲದಲ್ಲಿ ಪರೀಕ್ಷಾ ಪೇ ಚರ್ಚಾ ಕಾರ್ಯಕ್ರಮ ನಡೆಯಲಿದೆ.

 Sharesee more..
ಕಿರಣ್ ಮಜುಂದಾರ್‌ಗೆ ಆಸ್ಟ್ರೇಲಿಯಾದ ಅತ್ಯುನ್ನತ ನಾಗರಿಕ ಪ್ರಶಸ್ತಿ

ಕಿರಣ್ ಮಜುಂದಾರ್‌ಗೆ ಆಸ್ಟ್ರೇಲಿಯಾದ ಅತ್ಯುನ್ನತ ನಾಗರಿಕ ಪ್ರಶಸ್ತಿ

18 Jan 2020 | 10:05 PM

ನವದೆಹಲಿ, ಜ.18 (ಯುಎನ್‌ಐ) ಆಸ್ಟ್ರೇಲಿಯಾದ ಅತ್ಯುನ್ನತ ನಾಗರಿಕ ಪ್ರಶಸ್ತಿಗೆ ಖ್ಯಾತ ಉದ್ಯಮಿ ಕಿರಣ್ ಮಜುಂದಾರ್-ಶಾ ಅವರು ಭಾಜನರಾಗಿದ್ದಾರೆ.

 Sharesee more..

ಅಪಘಾತದಲ್ಲಿ ನಟಿ ಶಬನಾಜ್ಮಿಗೆ ಗಾಯ, ಚೇತರಿಕೆ ಪ್ರಧಾನಿ ಹಾರೈಕೆ

18 Jan 2020 | 9:55 PM

ನವದೆಹಲಿ, ಜನವರಿ 18 (ಯುಎನ್‌ಐ) ರಸ್ತೆ ಅಪಘಾತದಲ್ಲಿ ಶಬಾನಾ ಅಜ್ಮಿ ಗಾಯಗೊಂಡಿದ್ದಾರೆ ಎಂಬ ಸುದ್ದಿ ನಿಜಕ್ಕೂ ದುಃಖಕರ ಎಂದು ಪ್ರಧಾನಿ ನರೇಂದ್ರ ಮೋದಿ ಶನಿವಾರ ಹೇಳಿದ್ದಾರೆ ಅವರ ಶೀಘ್ರ ಚೇತರಿಕೆಗಾಗಿ ಪ್ರಾರ್ಥಿಸುವುದಗಿ ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ.

 Sharesee more..

ದೇವಿಂದರ್ ಸಿಂಗ್ ಪ್ರಕರಣದ ತನಿಖೆ ವಹಿಸಿಕೊಂಡ ಎನ್‌ಐಎ

18 Jan 2020 | 9:20 PM

ನವದೆಹಲಿ, ಜ 18 (ಯುಎನ್‌ಐ) ಸೇವೆಯಿಂದ ವಜಾಗೊಳಿಸಲ್ಪಟ್ಟ ಕಾಶ್ಮೀರ ಉಪ ಪೊಲೀಸ್ ವರಿಷ್ಠಾಧಿಕಾರಿ (ಡಿಎಸ್‌ಪಿ) ದೇವಿಂದರ್ ಸಿಂಗ್ ಅವರ ಪ್ರಕರಣದ ತನಿಖೆಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಅಧಿಕೃತವಾಗಿ ವಹಿಸಿಕೊಂಡಿದೆ ಎಂದು ಅಧಿಕೃತ ಹೇಳಿಕೆ ಶನಿವಾರ ತಿಳಿಸಿದೆ.

 Sharesee more..

ಗುಡಿಯಾ ಪ್ರಕರಣ: ಇಬ್ಬರನ್ನು ಅಪರಾಧಿಗಳು ಎಂದು ಘೋಷಿಸಿದ ನ್ಯಾಯಾಲಯ

18 Jan 2020 | 8:57 PM

ನವದೆಹಲಿ, ಜ 18 (ಯುಎನ್ಐ) ಐದು ವರ್ಷ ಪ್ರಾಯದ ಬಾಲಕಿಯನ್ನು ಅಪಹರಿಸಿ ಅತ್ಯಾಚಾರ ಎಸಗಿದ ಪ್ರಕರಣಕ್ಕೆ ಸಂಬಂಧಿಸಿ ಇಲ್ಲಿನ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ನರೇಶ್ ಕುಮಾರ್ ಮಲ್ಹೋತ್ರಾ ಅವರು ಶನಿವಾರ ಮನೋಜ್ ಶಾ ಮತ್ತು ಪ್ರದೀಪ್ ಕುಮಾರ್ ಎಂಬಿಬ್ಬರು ಆರೋಪಿಗಳನ್ನು ಅಪರಾಧಿಗಳು ಎಂದು ಘೋಷಿಸಿದ್ದಾರೆ.

 Sharesee more..

ನಿರ್ಭಯಾ ಅಪರಾಧಿಯ ಕೊನೆಯ ಪ್ರಯತ್ನ; ಸುಪ್ರೀಂಗೆ ಮತ್ತೊಂದು ಅರ್ಜಿ

18 Jan 2020 | 8:53 PM

ನವದೆಹಲಿ, ಜ 18 (ಯುಎನ್ಐ) ನಿರ್ಭಯಾ ಪ್ರಕರಣ ನಡೆದ ಸಂದರ್ಭದಲ್ಲಿ ತಾನು ಅಪ್ರಾಪ್ತನಾಗಿದ್ದೆ, ಈ ವಿಷಯವನ್ನು ದೆಹಲಿ ನ್ಯಾಯಾಲಯ ಪರಿಗಣಿಸಿಲ್ಲ ಎಂದು ಆರೋಪಿಸಿ ಸಜಾಬಂಧಿಗಳಲ್ಲಿ ಒಬ್ಬನಾದ ಪವನ್ ಕುಮಾರ್ ಗುಪ್ತಾ ಸಲ್ಲಿಸಿರುವ ಅರ್ಜಿಯನ್ನು ಸುಪ್ರೀಂಕೋರ್ಟ್ ಸೋಮವಾರ ವಿಚಾರಣೆ ನಡೆಸಲಿದೆ.

 Sharesee more..
ಗುಡಿಯಾ ಅತ್ಯಾಚಾರ ಪ್ರಕರಣ: ನ್ಯಾಯ ವಿಳಂಬ ನ್ಯಾಯದ ನಿರಾಕರಣೆ- ಅರವಿಂದ ಕೇಜ್ರಿವಾಲ್

ಗುಡಿಯಾ ಅತ್ಯಾಚಾರ ಪ್ರಕರಣ: ನ್ಯಾಯ ವಿಳಂಬ ನ್ಯಾಯದ ನಿರಾಕರಣೆ- ಅರವಿಂದ ಕೇಜ್ರಿವಾಲ್

18 Jan 2020 | 8:47 PM

ನವದೆಹಲಿ, ಜ.18 (ಯುಎನ್‌ಐ) ನ್ಯಾಯ ವಿಳಂಬ ನ್ಯಾಯದ ನಿರಾಕರಣೆಯಾಗಿದೆ. ನ್ಯಾಯದ ವಿಳಂಬವನ್ನು ನಿವಾರಿಸಲು ಕಾಯ್ದೆಗಳಿಗೆ ತಿದ್ದುಪಡಿ ಅಗತ್ಯವಿದೆ ಎಂಬುದು 2013 ರ 'ಗುಡಿಯಾ' ಅತ್ಯಾಚಾರ ಪ್ರಕರಣದ ತೀರ್ಪಿನಿಂದ ಸ್ಪಷ್ಟವಾಗಿದೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ.

 Sharesee more..
ಭಾರತವನ್ನು ‘ವಿಶ್ವಗುರು’ ವನ್ನಾಗಿಸುವತ್ತ ಸ್ವಯಂ ಸೇವಕರು ಶ್ರಮಿಸಬೇಕು-ಮೋಹನ್ ಭಾಗವತ್

ಭಾರತವನ್ನು ‘ವಿಶ್ವಗುರು’ ವನ್ನಾಗಿಸುವತ್ತ ಸ್ವಯಂ ಸೇವಕರು ಶ್ರಮಿಸಬೇಕು-ಮೋಹನ್ ಭಾಗವತ್

18 Jan 2020 | 6:14 PM

ಮೊರಾದಾಬಾದ್, ಉತ್ತರ ಪ್ರದೇಶ ಜ 18(ಯುಎನ್‍ಐ)- ಸ್ಫೂರ್ತಿ ಮತ್ತು ಸಮರ್ಪಣಾ ಮನೋಭಾವದಿಂದ ಭಾರತವನ್ನು ‘ವಿಶ್ವಗುರು’ ವನ್ನಾಗಿಸುವತ್ತ ಸ್ವಯಂ ಸೇವಕರು ಶ್ರಮಿಸಬೇಕು ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘ(ಆರೆಸ್ಸೆಸ್) ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ.

 Sharesee more..

‘ಪಂಜಾಬ್ ಕೇಸರಿ’ ಸಂಪಾದಕ ಅಶ್ವಿನಿ ಕುಮಾರ್ ಚೋಪ್ರ ನಿಧನಕ್ಕೆ ಪ್ರಧಾನಿ ಮೋದಿ ಸಂತಾಪ

18 Jan 2020 | 5:45 PM

ನವದೆಹಲಿ, ಜ 18(ಯುಎನ್‍ಐ)- ‘ಪಂಜಾಬ್ ಕೇಸರಿ’ ಹಿಂದಿ ಪತ್ರಿಕೆಯ ಸಂಪಾದಕ ಹಾಗೂ ಮಾಜಿ ಬಿಜೆಪಿ ಸಂಸದ ಅಶ್ವಿನ್ ಕುಮಾರ್ ಚೋಪ್ರ ಅವರ ನಿಧನಕ್ಕೆ ಪ್ರಧಾನಿ ನರೇಂದ್ರಮೋದಿ ಸಂತಾಪ ವ್ಯಕ್ತಪಡಿಸಿದ್ದಾರೆ ‘ ಅಶ್ವಿನ್ ಕುಮಾರ್ ಚೋಪ್ರ ಜೀ ಅವರ ನಿಧನದಿಂದ ದಿಗ್ಭ್ರಮೆಯಾಗಿದೆ.

 Sharesee more..

ಎನ್ ಟಿಆರ್ ಜನ್ಮ ವಾರ್ಷಿಕಾಚರಣೆ : ಚಂದ್ರಬಾಬು ನಾಯ್ಡು ಅವರಿಂದ ಗೌರವ ನಮನ

18 Jan 2020 | 5:24 PM

ವಿಜಯವಾಡ, ಜ18(ಯುಎನ್‍ಐ)- ಆಂಧ್ರಪ್ರದೇಶ ಮಾಜಿ ಮುಖ್ಯಮಂತ್ರಿ, ತೆಲುಗುದೇಶಂ ಸ್ಥಾಪಕ ಹಾಗೂ ಖ್ಯಾತ ಚಿತ್ರನಟರಾದ ಎನ್ ಟಿ ರಾಮರಾವ್ ಅವರ 24ನೇ ಜನ್ಮ ವಾರ್ಷಿಕಾಚರಣೆ ಅಂಗವಾಗಿ ಇಲ್ಲಿನ ಮಂಗಳಗಿರಿಯಲ್ಲಿನ ಪಕ್ಷದ ಕೇಂದ್ರ ಕಚೇರಿಯಲ್ಲಿ ಮಾಜಿ ಮುಖ್ಯಮಂತ್ರಿ ಹಾಗೂ ತೆಲುಗುದೇಶಂ ರಾಷ್ಟ್ರೀಯ ಅಧ್ಯಕ್ಷ ಎನ್ ಚಂದ್ರಬಾಬು ನಾಯ್ಡು ಮತ್ತು ಇತರ ನಾಯಕರು ಅವರಿಗೆ ಗೌರವ ನಮನ ಸಲ್ಲಿಸಿದರು.

 Sharesee more..