Monday, Jun 1 2020 | Time 01:38 Hrs(IST)
Special

ಮಹಾರಾಷ್ಟ್ರದಲ್ಲಿ ಗುಡುಗು ಸಹಿತ ಭಾರಿ ಮಳೆ

31 May 2020 | 11:58 PM

ಪುಣೆ, ಮೇ 31 (ಯುಎನ್ಐ) ಮಹಾರಾಷ್ಟ್ರ ಮತ್ತು ಗೋವಾ ರಾಜ್ಯಗಳ ಕೆಲವೆಡೆ ಬಿರುಗಾಳಿ ಬೀಸಲಿದ್ದು ಮಿಂಚು, ಗುಡುಗು ಸಹಿತ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ ಮಹಾರಾಷ್ಟ್ರದ ಮಧ್ಯ ಭಾಗದಲ್ಲಿ, ಕೊಂಕಣ ಪ್ರದೇಶ ಮತ್ತು ಗೋವಾಗಳಲ್ಲಿ ಭಾರಿ ಮಳೆಯಾಗಲಿದೆ ಎಂದು ಇಲಾಖೆ ಮುನ್ಸೂಚನೆ ನೀಡಿದೆ.

 Sharesee more..

ಉತ್ತರಾಖಂಡದ ಮುಖ್ಯಮಂತ್ರಿ ಮತ್ತು ಎಲ್ಲಾ ಸಚಿವರಿಗೆ ಹೋಂ ಕ್ವಾರಂಟೈನ್

31 May 2020 | 11:48 PM

ನವದೆಹಲಿ, ಮೇ 31 (ಯುನ್ಐ ) ಉತ್ತರಾಖಂಡದ ಮುಖ್ಯಮಂತ್ರಿ ತ್ರಿವೇಂದ್ರ ಸಿಂಗ್ ರಾವತ್ ಸೇರಿದಂತೆ ಸಂಪುಟದ ಎಲ್ಲಾ ಸಚಿವರನ್ನು ಹೋಂ ಕ್ವಾರಂಟೈನ್‌ಗೆ ಹಾಕಲಾಗಿದೆ ರಾಜ್ಯದ ಮುಖ್ಯ ಕಾರ್ಯದರ್ಶಿ ಈ ಕುರಿತು ಮಾಹಿತಿ ನೀಡಿದ್ದಾರೆ.

 Sharesee more..

ಗೂಡಚರ್ಯೆ ಆರೋಪ; ದೇಶ ತೊರೆಯಲು ಪಾಕ್ ಅಧಿಕಾರಿಗಳಿಗೆ ಸೂಚನೆ

31 May 2020 | 10:51 PM

ನವದೆಹಲಿ, ಮೇ ೩೧(ಯುಎನ್‌ಐ) ಗೂಡಚರ್ಯೆ ನಡೆಸಿದ ಆರೋಪದ ಮೇಲೆ ಭದ್ರತಾ ಸಂಸ್ಥೆಗಳು ಬಂಧಿಸಿದ ನಂತರ ೨೪ ಗಂಟೆಗಳೊಳಗೆ ಭಾರತವನ್ನು ತೊರೆಯುವಂತೆ ಪಾಕಿಸ್ತಾನ ಹೈ ಕಮೀಷನ್ ಕಚೇರಿಯ ಇಬ್ಬರು ಅಧಿಕಾರಿಗಳಿಗೆ ಭಾನುವಾರ ಸೂಚನೆ ನೀಡಲಾಗಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಹೇಳಿದೆ.

 Sharesee more..

ಗೋವಾದಲ್ಲಿ ಒಬ್ಬರಿಗೆ ಕೊರೊನಾ ಸೋಂಕು; ಇಬ್ಬರು ಗುಣಮುಖ

31 May 2020 | 10:33 PM

ಪಣಜಿ, ಮೇ 31 (ಯುಎನ್ಐ) ಗೋವಾದಲ್ಲಿ ಭಾನುವಾರ ಒಬ್ಬರಿಗೆ ಕೊರೊನಾ ವೈರಾಣು ಸೋಂಕು ದೃಢಪಟ್ಟಿದ್ದು ಇಬ್ಬರು ಗುಣಮುಖರಾಗಿದ್ದಾರೆ ಸೋಂಕು ದೃಢಪಟ್ಟ ವ್ಯಕ್ತಿ ಮಹಾರಾಷ್ಟ್ರ ರಾಜ್ಯಕ್ಕೆ ಭೇಟಿ ನೀಡಿದ್ದರು ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.

 Sharesee more..

ನಾಳೆಯಿಂದ ೨೦೦ ವಿಶೇಷ ಪ್ಯಾಸೆಂಜರ್ ರೈಲು ಸಂಚಾರ

31 May 2020 | 10:17 PM

ನವದೆಹಲಿ, ಮೇ ೩೧ (ಯುಎನ್‌ಐ) ನಾಳೆಯಿಂದ ದೇಶಾದ್ಯಂತ ೨೦೦ ವಿಶೇಷ ರೈಲುಗಳು ಸಂಚರಿಸಲಿವೆ ಶ್ರಮಿಕ್ ವಿಶೇಷ ರೈಲುಗಳು ಹಾಗೂ ೩೦ ವಿಶೇಷ ಹವಾ ನಿಯಂತ್ರಿತ ರೈಲುಗಳಿಗೆ ಹೆಚ್ಚುವರಿಯಾಗಿ ಈ ರೈಲುಗಳು ಸಂಚರಿಸಿವೆ.

 Sharesee more..

ಮೊಬೈಲ್ ಗಳಿಗೆ ೧೧ ಅಂಕಿಗಳ ಸಂಖ್ಯೆ; ಮಾಧ್ಯಮಗಳ ವರದಿ ತಳ್ಳಿಹಾಕಿದ ಟ್ರಾಯ್

31 May 2020 | 9:04 PM

ನವದೆಹಲಿ, ಮೇ ೩೧(ಯುಎನ್‌ಐ) ದೇಶದಲ್ಲಿ ಮೊಬೈಲ್ ದೂರವಾಣಿಗಳಿಗೆ ಈಗಿನ ೧೦ ಸಂಖ್ಯೆಗಳಿಗೆ ಬದಲಾಗಿ ೧೧ ಸಂಖ್ಯೆಯ ಯೋಜನೆಯನ್ನು ತಾನು ಶಿಫಾರಸ್ಸು ಮಾಡಿರುವುದಾಗಿ ಮಾಧ್ಯಮಗಳು ಮಾಡಿರುವ ವರದಿಗಳನ್ನು ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (ಟ್ರಾಯ್) ಭಾನುವಾರ ತಳ್ಳಿಹಾಕಿದೆ.

 Sharesee more..

ಬೀದಿ ಬದಿ ವ್ಯಾಪಾರಿಗಳ ಅನುಕೂಲಕ್ಕಾಗಿ ಕೇಂದ್ರದಿಂದ ‘ಮುದ್ರಾ ಶಿಶು ಸಾಲ’ ಯೋಜನೆ ಘೋಷಣೆ

31 May 2020 | 8:43 PM

ನವದೆಹಲಿ,ಮೇ ೩೧(ಯುಎನ್‌ಐ) ದೇಶದಲ್ಲಿ ಕೋವಿಡ್ -೧೯ ಸಾಂಕ್ರಾಮಿಕ ಸೃಷ್ಟಿಸಿರುವ ಸಂಕಷ್ಟದಿಂದ ಸಣ್ಣ ಪುಟ್ಟ ಹಾಗೂ ಬೀದಿ ಬದಿ ವ್ಯಾಪಾರಿಗಳು ಸಮಸ್ಯೆ ಎದುರಿಸದಂತೆ ನೆರವಾಗಲು ಕೇಂದ್ರ ಸರ್ಕಾರ ಹಲವು ಕ್ರಮಗಳನ್ನು ಕೈಗೊಂಡಿದೆ ನಾಳೆಯಿಂದ ದೇಶಾದ್ಯಂತ ಲಾಕ್ ಡೌನ್ ಸಡಿಲಿಕೆಯ ಮೊದಲ ಹಂತ ಆರಂಭಗೊಳ್ಳುತ್ತಿದ್ದು, ಅಂಗಡಿ ಮಾಲಿಕರು ಹಾಗೂ ತಳ್ಳುವ ಗಾಡಿ ವ್ಯಾಪಾರಿಗಳು ತಮ್ಮ ವಹಿವಾಟು ಪುನರಾಂಭಿಸಲು ಯಾವುದೇ ಚಿಂತೆಗೊಳಗಾಗುವ ಆಗತ್ಯವಿಲ್ಲ ಎಂದು ಸರ್ಕಾರ ಹೇಳಿದೆ.

 Sharesee more..

ಮುಂಬೈ ಹೈಕೋರ್ಟ್‌ ಮಾಜಿ ಡೆಪ್ಯುಟಿ ರಿಜಿಸ್ಟ್ರಾರ್‌ ಖಲೀಮುಲ್ಲಾ ಖಾನ್‌ ವಿಧಿವಶ

31 May 2020 | 7:30 PM

ಔರಂಗಾಬಾದ್‌, ಮೇ 31 (ಯುಎನ್ಐ) ಮುಂಬೈ ಹೈಕೋರ್ಟ್‌ನ ಔರಂಗಾಬಾದ್‌ ಪೀಠದ ಮಾಜಿ ಉಪ ರಿಜಿಸ್ಟ್ರಾರ್‌ ಖಲೀಮುಲ್ಲಾ ಖಾನ್‌ ಬಿಸ್ಮಿಲ್ಲಾ ಖಾನ್‌ ಶನಿವಾರ ರಾತ್ರಿ ನಿಧನರಾಗಿದ್ದಾರೆ ಅವರಿಗೆ 88 ವರ್ಷ ವಯಸ್ಸಾಗಿತ್ತು.

 Sharesee more..

ಕೇರಳ: ಹೆತ್ತ ತಾಯಿಯನ್ನೇ ಕತ್ತು ಸೀಳಿ ಹತ್ಯೆ ಮಾಡಿದ ಪುತ್ರ

31 May 2020 | 3:49 PM

ಕೊಟ್ಟಾಯಂ, ಮೇ 31 (ಯುಎನ್ಐ) ಕ್ರೂರಿ ಮಗನೊಬ್ಬ ತನ್ನ ತಾಯಿಯನ್ನೇ ಕರುಳು ಸೀಳಿ ಹತ್ಯೆ ಮಾಡಿರುವ ಘಟನೆ ಚಂಗನಚ್ಚೇರಿಯ ತ್ರಿಕೊಡಿತ್ತನಂ ಎಂಬಲ್ಲಿ ನಡೆದಿದ್ದು, ಘಟನೆಯ ಬಳಿಕ ಈ ವಿಷಯವನ್ನು ನೆರೆ ಮನೆಯವರಿಗೆ ಆತನೇ ತಿಳಿಸಿದ್ದಾನೆ.

 Sharesee more..

ಕೋವಿಡ್ 19: ಭಾರತದಲ್ಲಿ ಒಂದೇ ದಿನ ಎಂಟು ಸಾವಿರಕ್ಕೂ ಅಧಿಕ ಪ್ರಕರಣ

31 May 2020 | 10:56 AM

ನವದೆಹಲಿ, ಮೇ 31 (ಯುಎನ್ಐ)- ದೇಶದಲ್ಲಿ ಕೊರೊನಾ ವೈರಸ್ (ಕೋವಿಡ್ 19) ಸಾಂಕ್ರಾಮಿಕದ ತೀವ್ರತೆ ಹೆಚ್ಚುತ್ತಿದೆ ಭಾರತ ಅತಿ ಹೆಚ್ಚು ಸೋಂಕು ಹೊಂದಿರುವ ದೇಶಗಳಲ್ಲಿ ಒಂಬತ್ತನೇ ಸ್ಥಾನದಲ್ಲಿದೆ.

 Sharesee more..

ಭಾರತದಲ್ಲಿ ಒಂದೇ ದಿನ ಎಂಟು ಸಾವಿರಕ್ಕೂ ಅಧಿಕ ಪ್ರಕರಣ

31 May 2020 | 10:55 AM

ನವದೆಹಲಿ, ಮೇ 31 (ಯುಎನ್ಐ)- ದೇಶದಲ್ಲಿ ಕೊರೊನಾ ವೈರಸ್ (ಕೋವಿಡ್ 19) ಸಾಂಕ್ರಾಮಿಕದ ತೀವ್ರತೆ ಹೆಚ್ಚುತ್ತಿದೆ ಭಾರತ ಅತಿ ಹೆಚ್ಚು ಸೋಂಕು ಹೊಂದಿರುವ ದೇಶಗಳಲ್ಲಿ ಒಂಬತ್ತನೇ ಸ್ಥಾನದಲ್ಲಿದೆ.

 Sharesee more..

ಪಶ್ಚಿಮ ಬಂಗಾಳದಲ್ಲಿ ಮತ್ತೋರ್ವ ವಲಸೆ ಕಾರ್ಮಿಕ ಸಾವು

31 May 2020 | 10:16 AM

ಕೇಶ್‌ಪುರ, ಪಶ್ಚಿಮ ಮಿಡ್ನಾಪುರ, ಮೇ 31 (ಯುಎನ್ಐ) ಇಲ್ಲಿನ ಖಾರಗ್‌ಪುರ ನಿಲ್ದಾಣದಿಂದ ಹೂಗ್ಲಿ ಜಿಲ್ಲೆಯ ಗೊಗಾಟ್‌ನಲ್ಲಿರುವ ತಮ್ಮ ಮನೆಗೆ ಹೊರಟಿದ್ದ ಐವರು ವಲಸೆ ಕಾರ್ಮಿಕರ ಪೈಕಿ ಓರ್ವ ಕಾರು ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ ಅಪಘಾತದಲ್ಲಿ ಮೃತಪಟ್ಟವರನ್ನು ಅಬ್ದುಲ್ ಕರೀಂ ಎಂದು ಗುರುತಿಸಲಾಗಿದೆ.

 Sharesee more..

ಅನಂತ್‌ನಾಗ್ ಜಿಲ್ಲೆಯಲ್ಲಿ ಭದ್ರತಾ ಪಡೆ-ಉಗ್ರರ ನಡುವೆ ಗುಂಡಿನ ಚಕಮಕಿ

31 May 2020 | 9:10 AM

ಶ್ರೀನಗರ, ಮೇ 31 (ಯುಎನ್ಐ) ದಕ್ಷಿಣ ಕಾಶ್ಮೀರದ ಆನಂತನಾಗ್ ಜಿಲ್ಲೆಯಲ್ಲಿ ಭದ್ರತಾ ಪಡೆ ಭಾನುವಾರ ಶೋಧ ಕಾರ್ಯ ಕೈಗೊಂಡಾಗ ಉಗ್ರರೊಂದಿಗೆ ಗುಂಡಿನ ಚಕಮಕಿ ನಡೆದಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ ಉಗ್ರರು ಅಡಗಿರುವ ಬಗ್ಗೆ ಖಚಿತ ಮಾಹಿತಿಯ ಹಿನ್ನೆಲೆಯಲ್ಲಿ ರಾಷ್ಟ್ರೀಯ ರೈಫಲ್ಸ್‌, ಜಮ್ಮು-ಕಾಶ್ಮೀರ ಪೊಲೀಸ್‌ನ ವಿಶೇಷ ಕಾರ್ಯಾಚರಣಾ ಪಡೆ ಮತ್ತು ಸಿಆರ್‌ಪಿಎಫ್ ಜಂಟಿಯಾಗಿ ಅನಂತ್‌ನಾಗ್‌ ಜಿಲ್ಲೆಯ ಪೋಶ್‌ಕೀರಿ ಎಂಬಲ್ಲಿ ಶೋಧ ಕಾರ್ಯ ಆರಂಭಿಸಿದೆ.

 Sharesee more..

ಕೇಂದ್ರ ಯೋಜನೆಗಳ ವೆಚ್ಚವನ್ನು ಕೇಂದ್ರ ಸರ್ಕಾರವೇ ಭರಿಸಲಿ : ಸುಶೀಲ್ ಕುಮಾರ್ ಮೋದಿ

30 May 2020 | 11:12 PM

ಪಾಟ್ನಾ, ಮೇ 30 (ಯುಎನ್ಐ) ಕೇಂದ್ರ ಸರ್ಕಾರದ ಯೋಜನೆಗಳ ಸಂಪೂರ್ಣ ವೆಚ್ಚವನ್ನು ಕೇಂದ್ರ ಸರ್ಕಾರವೇ ಭರಿಸಲಿ ಎಂದು ಬಿಹಾರ ಉಪಮುಖ್ಯಮಂತ್ರಿ ಸುಶೀಲ್ ಕುಮಾರ್ ಮೋದಿ ಶನಿವಾರ ಆಗ್ರಹಿಸಿದ್ದಾರೆ ಈ ಕುರಿತಂತೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಗೆ ಪತ್ರ ಬರೆದಿರುವ ಅವರು, ಎಲ್ಲಾ 66 ಕೇಂದ್ರ ಸರ್ಕಾರಿ ಯೋಜನೆಗಳ ಸಂಪೂರ್ಣ ವೆಚ್ಚವನ್ನು ಕೇಂದ್ರ ಸರ್ಕಾರವೇ ಭರಿಸುವಂತೆ ಒತ್ತಾಯಿಸಿದ್ದಾರೆ.

 Sharesee more..

ಮಣಿಪುರದಲ್ಲಿ 62 ಕ್ಕೇರಿದ ಕೊರೊನಾ ಸೋಂಕಿತರ ಸಂಖ್ಯೆ

30 May 2020 | 11:07 PM

ಇಂಫಾಲ, ಮೇ 30 (ಯುಎನ್ಐ) ಮಣಿಪುರದಲ್ಲಿ ಶನಿವಾರ ಮೂರು ಹೊಸ ಕೊರೊನಾ ವೈರಾಣು ಸೋಂಕು ಪ್ರಕರಣಗಳು ದೃಢಪಟ್ಟಿದ್ದು ಒಟ್ಟು ಸೋಂಕಿತರ ಸಂಖ್ಯೆ 62 ಕ್ಕೆ ಏರಿಕೆಯಾಗಿದೆ ಗುಜರಾತ್ ನಿಂದ ವಾಪಸ್ಸಾಗಿದ್ದ 19 ವರ್ಷದ ಬಾಲಕಿಯಲ್ಲಿ ಕೊರೊನಾ ಸೋಂಕು ದೃಢಪಟ್ಟಿದ್ದು ಆಕೆಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

 Sharesee more..