Saturday, Jan 25 2020 | Time 01:20 Hrs(IST)
Entertainment

ಸಂಯೋಗಿತಾ ಆದ ವಿಶ್ವ ಸುಂದರಿ

24 Jan 2020 | 10:17 PM

ಮುಂಬೈ, ಜ 24 (ಯುಎನ್ಐ) ವಿಶ್ವ ಸುಂದರಿ - 2017 ಮಾನುಷಿ ಚಿಲ್ಲರ್, ಇದೇ ಮೊದಲ ಬಾರಿಗೆ ಬಣ್ಣದ ಲೋಕಕ್ಕೆ ಪ್ರವೇಶಿಸುತ್ತಿದ್ದಾರೆ ಶೀಘ್ರದಲ್ಲಿಯೇ ಖ್ಯಾತ ಬಾಲಿವುಡ್ ನಟ ಅಕ್ಷಯ್ ಕುಮಾರ್ ಅವರ ಮುಂಬರುವ 'ಪೃಥ್ವಿರಾಜ್' ಚಿತ್ರದಲ್ಲಿ ಮಾನುಷಿ ಸಂಯೋಗಿತಾ ಅವರ ಭೂಮಿಕೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ.

 Sharesee more..

ನಾನು ಮತ್ತು ಗುಂಡ : ಶ್ವಾನ ಪ್ರೇಮದ ಭಾವುಕತೆಯ ಯಾನ

24 Jan 2020 | 9:29 PM

ಬೆಂಗಳೂರು, ಜ 24(ಯುಎನ್‍ಐ) ಮನುಷ್ಯ ಹಾಗೂ ಶ್ವಾನದ ನಡುವಿನ ಅವಿನಾಭಾವ ಸಂಬಂಧವನ್ನು ಸಾರುವ ‘ನಾನು ಮತ್ತು ಗುಂಡ’ ಶುಕ್ರವಾರ ಬಿಡುಗಡೆಯಾಗಿದ್ದು, ಗುಂಡನ ಪಾತ್ರದಲ್ಲಿ ಶ್ವಾನ ಸಿಂಭಾ ಪ್ರೇಕ್ಷಕರ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾನೆ ಆಟೋ ಶಂಕರನ ಪಾತ್ರದಲ್ಲಿ ಶಿವರಾಜ್ ಕೆ ಆರ್ ಪೇಟೆ, ಗೆಳೆಯನಾಗಿ ಗೋವಿಂದೇಗೌಡ ಹಾಗೂ ಗೃಹಿಣಿಯಾಗಿ ಸಂಯುಕ್ತ ಹೊರನಾಡು ಪ್ರಮುಖ ಪಾತ್ರದಲ್ಲಿದ್ದಾರೆ ಶ್ವಾನ ಪ್ರೇಮಕ್ಕೆ ಸಂಬಂಧಿಸಿ ಈಗಾಗಲೇ ಹಲವು ಚಿತ್ರಗಳು ತೆರೆಕಂಡಿವೆಯಾದರೂ, ನಾನು ಮತ್ತು ಗುಂಡ ಇಂದಿನ ಕಾಲಘಟಕ್ಕೆ ಹೊಂದಿಕೊಂಡಿದ್ದು, ಬೌ ಬೌ ಬಿರಿಯಾನಿಗಾಗಿ ಮೂಕ ಶ್ವಾನಗಳ ಮಾರಣ ಹೋಮದ ಬಗ್ಗೆಯೂ ಕೊಂಚ ಬೆಳಕು ಚೆಲ್ಲಿದೆ ಆಕಸ್ಮಿಕವಾಗಿ ಸಿಗುವ ಗುಂಡನನ್ನು ಬಿಟ್ಟಿರಲಾರದಷ್ಟು ಹೊಂದಿಕೊಳ್ಳುವ ಆಟೋ ಶಂಕರ್, ಅದನ್ನು ಕಳೆದುಕೊಂಡಾಗ ಅನುಭವಿಸುವ ನೋವನ್ನು ನಿರ್ದೇಶಕ ಶ್ರೀನಿವಾಸ್ ತಿಮ್ಮಯ್ಯ ಮನೋಜ್ಞವಾಗಿ ಚಿತ್ರಿಸಿದ್ದಾರೆ ಗುಂಡ ಹಾಗೂ ಶಂಕರನ ಸಮಗ್ರ ಕಥೆ ಹಾಗೂ, ಕೊನೆಗೆ ಇಬ್ಬರ ಬಾಂಧವ್ಯ ಯಾವ ಹಂತಕ್ಕೆ ತಲುಪುತ್ತದೆ ಎಂಬುದನ್ನು ತಿಳಿಯಬೇಕಾದರೆ ಸಿನಿಮಾ ನೋಡಬೇಕು, ಗುಂಡನಾಗಿ ಶ್ವಾನ ಸಿಂಭಾ ಪಾತ್ರವನ್ನು ಕಣ್ತುಂಬಿಕೊಳ್ಳಬೇಕು.

 Sharesee more..
'ಇಂಡಿಯಾ ವರ್ಸಸ್ ಇಂಗ್ಲೆಂಡ್' . . . . . ವೇದಗಳ ಕಾಲದಲ್ಲೇ ಹೆಣ್ಣುಮಕ್ಕಳ ಶಿಕ್ಷಣ ಇತ್ತಲ್ವೇ         ಮೇಷ್ಟ್ರೇ?

'ಇಂಡಿಯಾ ವರ್ಸಸ್ ಇಂಗ್ಲೆಂಡ್' . . . . . ವೇದಗಳ ಕಾಲದಲ್ಲೇ ಹೆಣ್ಣುಮಕ್ಕಳ ಶಿಕ್ಷಣ ಇತ್ತಲ್ವೇ ಮೇಷ್ಟ್ರೇ?

24 Jan 2020 | 9:03 PM

ಬೆಂಗಳೂರು, ಜ 24 (ಯುಎನ್‍ಐ) ಚಂದನವನದ ಪ್ರೀತಿಯ ಮೇಷ್ಟ್ರು, ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ ‘ಇಂಡಿಯಾ ವರ್ಸಸ್ ಇಂಗ್ಲೆಂಡ್’ ಚಿತ್ರ ರಾಜ್ಯಾದ್ಯಂತ ಬಿಡುಗಡೆಯಾಗಿ, ಉತ್ತಮ ಓಪನಿಂಗ್ ಪಡೆದಿದೆ

 Sharesee more..

ಸಂಯೋಗಿತಾ ಆದ ವಿಶ್ವ ಸುಂದರಿ

24 Jan 2020 | 3:17 PM

ಮುಂಬೈ, ಜ 24 (ಯುಎನ್ಐ) ವಿಶ್ವ ಸುಂದರಿ - 2017 ಮಾನುಷಿ ಚಿಲ್ಲರ್, ಇದೇ ಮೊದಲ ಬಾರಿಗೆ ಬಣ್ಣದ ಲೋಕಕ್ಕೆ ಪ್ರವೇಶಿಸುತ್ತಿದ್ದಾರೆ ಶೀಘ್ರದಲ್ಲಿಯೇ ಖ್ಯಾತ ಬಾಲಿವುಡ್ ನಟ ಅಕ್ಷಯ್ ಕುಮಾರ್ ಅವರ ಮುಂಬರುವ 'ಪೃಥ್ವಿರಾಜ್' ಚಿತ್ರದಲ್ಲಿ ಮಾನುಷಿ ಸಂಯೋಗಿತಾ ಆಗಿ ಭೂಮಿಕೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ.

 Sharesee more..

ಮಧ್ಯಮ ವರ್ಗದ ನೊಂದ ಹೆಣ್ಣಿನ ಕಥೆ ‘ಬೆಂಕಿಯಲ್ಲಿ ಅರಳಿದ ಹೂವು’

24 Jan 2020 | 8:04 AM

ಬೆಂಗಳೂರು, ಜ 24 (ಯುಎನ್‍ಐ) ‘ಬೆಂಕಿಯಲ್ಲಿ ಅರಳಿದ ಹೂವು’ ಹೆಸರು ಕೇಳಿದ ಕೂಡಲೇ ಖ್ಯಾತ ನಟಿ ಸುಹಾಸಿನಿ ನೆನಪಾಗುತ್ತಾರೆ ಹೌದು, ಕೆ ಬಾಲಚಂದರ್ ನಿರ್ದೇಶನದಲ್ಲಿ ಮೂಡಿ ಬಂದ ಚಿತ್ರ ಇಂದಿಗೂ ಜನಮಾನಸದಲ್ಲಿ ಅಚ್ಚಳಿಯದೆ ಉಳಿದೆ ಇದೀಗ ಇದೇ ಶೀರ್ಷಿಕೆಯ ಮತ್ತೊಂದು ಚಿತ್ರ ತೆರೆಗೆ ಬರಲು ಸಿದ್ಧವಾಗಿದೆ ಅನುಪಮಾ ಗೌಡ ಪ್ರಧಾನ ಭೂಮಿಯಲ್ಲಿದ್ದು, ದೇವಿಶ್ರೀ ಪ್ರಸಾದ್ ನಿರ್ದೇಶನವಿದೆ ಸೋಮಾರಿ ಗಂಡನ ಜತೆ ಹೆಣಗಾಡುವ ಪಾತ್ರಕ್ಕೆ ಅನುಪಮಾ ಗೌಡ ಜೀವ ತುಂಬಿದ್ದು, ಹೆಣ್ಣಿನ ಮೇಲೆ ನಡೆಯುವ ಶೋಷಣೆ, ಗಾರ್ಮೆಂಟ್ ಗಳಲ್ಲಿ ದುಡಿಯುವ ಮಹಿಳೆಯರ ದಳ್ಳುರಿಯ ಮೇಲೆ ಬೆಳಕು ಚೆಲ್ಲಲಾಗಿದೆ ಎಂದು ನಿರ್ಮಾಪಕ ಹಾಗೂ ಚಿತ್ರಕ್ಕೆ ಬಂಡವಾಳ ಹೂಡಿರುವ ವಿಶು ಆಚಾರ್ ತಿಳಿಸಿದ್ದಾರೆ.

 Sharesee more..

ಡಾರ್ಲಿಂಗ್ ಕೃಷ್ಣ ‘ಲೋಕಲ್ ಟ್ರೈನ್’ ಹಾಡುಗಳಿಗೆ ‘ಪವರ್ ಹಸಿರು ನಿಶಾನೆ

24 Jan 2020 | 7:12 AM

ಬೆಂಗಳೂರು, ಜ 24 (ಯುಎನ್‍ಐ) ಡಾರ್ಲಿಂಗ್ ಕೃಷ್ಣ ಅಭಿನಯದ ‘ಲೋಕಲ್ ಟ್ರೈನ್’ ಚಿತ್ರದ ಮೂರು ಸುಂದರ ಹಾಗೂ ಕಲರ್‍ಫುಲ್ ಹಾಡುಗಳು ಬಿಡುಗಡೆಯಾಗಿವೆ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಧ್ವನಿಸಾಂದ್ರಿಕೆ ಬಿಡುಗಡೆಗೊಳಿಸಿ ಲೋಕಲ್ ಟ್ರೈನ್ ಯಶಸ್ವಿಯಾಗಲಿ ಎಂದು ಚಿತ್ರತಂಡಕ್ಕೆ ಶುಭ ಕೋರಿದರು ‘ಪುನೀತ್ ರಾಜ್‍ಕುಮಾರ್ ನನ್ನ ದೊಡ್ಡಣ್ಣನ ಹಾಗೆ ಮುಂಚಿನಿಂದಲೂ ನನ್ನೆಲ್ಲ ಸಿನೆಮಾಗಳಿಗೆ ಪ್ರೋತ್ಸಾಹ ನೀಡುತ್ತ ಬಂದಿದ್ದಾರೆ’ ಎಂದ ಡಾರ್ಲಿಂಗ್ ಕೃಷ್ಣ, ಈ ಚಿತ್ರದಲ್ಲಿ ಕಾಲೇಜು ಯುವಕನ ಪಾತ್ರದಲ್ಲಿ ಕಾಣಿಸಿಕೊಂಡಿರುವೆ ವಿದ್ಯಾಭ್ಯಾಸಕ್ಕೆ ಹಳ್ಳಿಯಿಂದ ಬೆಂಗಳೂರಿಗೆ ನಿತ್ಯ ರೈಲಿನಲ್ಲಿ ಬರುತ್ತಿರುತ್ತಾನೆ ಚಿತ್ರದ ಬಹುತೇಕ ದೃಶ್ಯಗಳು ರೈಲಿನಲ್ಲೇ ನಡೆಯುವ ಕಾರಣ ‘ಲೋಕಲ್ ಟ್ರೈನ್’ ಅಂತ ಹೆಸರಿಟ್ಟಿದ್ದೇವೆ ಟ್ರೈನ್ ಲೋಕಲ್ ಆದ್ರೂ ಪ್ರೊಡಕ್ಷನ್ ಹೈ ಕ್ಲಾಸ್ ಇಬ್ಬರು ನಾಯಕಿಯರಿದ್ದಾರೆ ಎಂದರು ಚಿತ್ರಕ್ಕೆ ರುದ್ರಮಣಿ ನಿರ್ದೇಶನವಿದೆಯಾದರೂ, ಕೆಲ ಭಿನ್ನಾಭಿಪ್ರಾಯಗಳಿಂದಾಗಿ ಅವರು ಚಿತ್ರತಂಡದಿಂದ ಹೊರನಡೆದರು ಹೀಗಾಗಿ ಪೋಸ್ಟ್ ಪ್ರೊಡಕ್ಸನ್ ಕೆಲಸದ ಹೊಣೆಯನ್ನು ನಿರ್ದೇಶಕ ಮಾರುತಿ ವಹಿಸಿಕೊಂಡಿದ್ದಾರೆ ಎಂದು ನಿರ್ಮಾಪಕ ಸುಬ್ರಾಯ ವಾಲ್ಕಿ ತಿಳಿಸಿದರು.

 Sharesee more..

ಹುತಾತ್ಮ ಭಗತ್ ಸಿಂಗ್ ಪಾತ್ರದಲ್ಲಿ ಅಜಯ್ ದೇವಗನ್!

23 Jan 2020 | 7:07 PM

ಮುಂಬೈ, ಜ 23 (ಯುಎನ್ಐ) ಬಾಲಿವುಡ್ ಸಿಂಗಂ ಸ್ಟಾರ್ ಅಜಯ್ ದೇವಗನ್, ತಮ್ಮ ಮುಂಬರುವ ಚಿತ್ರದಲ್ಲಿ ಹುತಾತ್ಮ‌ ಭಗತ್ ಸಿಂಗ್ ಪಾತ್ರಕ್ಕೆ ಬಣ್ಣ ಹಚ್ಚಲು ಸಜ್ಜಾಗಿದ್ದಾರಂತೆ ಬಾಹುಬಲಿ ಚಿತ್ರ ಖ್ಯಾತಿಯ ನಿರ್ದೇಶಕ ರಾಜ ಮೌಳಿ, 400 ಕೋಟಿ ರೂ ಬಂಡವಾಳದಲ್ಲಿ ಆರ್ ಆರ್ ಆರ್ ಚಿತ್ರ ನಿರ್ದೇಶಿಸುತ್ತಿದ್ದಾರೆ.

 Sharesee more..

“ಓಲೆ ಓಲೆ” ಹಾಡನ್ನು ಮರು ಸೃಷ್ಟಿಸಿದ ಸೈಫ್

23 Jan 2020 | 3:18 PM

ಮುಂಬೈ, ಜ 23 (ಯುಎನ್ಐ)- ಬಾಲಿವುಡ್‌ನ ಸ್ಟಾರ್ ನಟ ಸೈಫ್ ಅಲಿ ಖಾನ್ ತಮ್ಮ ಸೂಪರ್ ಹಿಟ್ ಹಾಡು ಓಲೆ ಓಲೆ ಹಾಡನ್ನು ಮರು ಸೃಷ್ಟಿಸಿದ್ದಾರೆ.

 Sharesee more..

ಸಲ್ಮಾನ್ ಜೊತೆ ಚಿತ್ರ ನಿರ್ಮಿಸಲಿದ್ದಾರೆ ಸೂರಜ್

23 Jan 2020 | 3:18 PM

ನವದೆಹಲಿ, ಜ 23 (ಯುಎನ್ಐ)- ಬಾಲಿವುಡ್‌ನ ಖ್ಯಾತ ಚಲನಚಿತ್ರ ನಿರ್ಮಾಪಕ ಸೂರಜ್ ಬರ್ಜತ್ಯ ಅವರು ಮತ್ತೆ ದಬಾಂಗ್ ಸ್ಟಾರ್ ಸಲ್ಮಾನ್ ಖಾನ್ ಅವರೊಂದಿಗೆ ಚಿತ್ರ ನಿರ್ಮಿಸುವ ಸಾಧ್ಯತೆ ಇದೆ.

 Sharesee more..

ಮದುವೆ ನಿಶ್ಚಯವಾಗಿಲ್ಲ, ವದಂತಿ ಹರಡದಿರಿ: ರಚಿತಾರಾಮ್‍

23 Jan 2020 | 8:06 AM

ಬೆಂಗಳೂರು, ಜ 23 (ಯುಎನ್‍ಐ) ಸ್ಯಾಂಡಲ್‍ವುಡ್‍ ನ ಗುಳಿಕೆನ್ನೆ ಚೆಲುವೆ ರಚಿತಾರಾಮ್ ಬಗ್ಗೆ ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಒಂದಿಲ್ಲೊಂದು ಸುದ್ದಿ ಹರಿದಾಡುತ್ತಿದೆ ‘ಸೀತಾರಾಮ ಕಲ್ಯಾಣ’ದ ನಾಯಕ ನಿಖಿಲ್ ಕುಮಾರಸ್ವಾಮಿಯ ಜೊತೆ ಕುಚ್ ಕುಚ್ ನಡೆಯುತ್ತಿದೆ.

 Sharesee more..

ಚಿತ್ರೋದ್ಯಮ ಆರಾಧಿಸುವ ಏಕೈಕ ದೇವರು .. ಹಣ; ನಾಸೀರುದ್ದೀನ್ ಷಾ

22 Jan 2020 | 8:30 PM

ಮುಂಬೈ, ಜ ೨೨( ಯುಎನ್‌ಐ) ಬಾಲಿವುಡ್ ಹಿರಿಯ ನಟ, ನಿರ್ದೇಶಕ ನಾಸೀರುದ್ದೀನ್ ಷಾ, ನಟಿ ದೀಪಿಕಾ ಪಡುಕೋಣೆ ಅವರ ಧೈರ್ಯವನ್ನು ಕೊಂಡಾಡಿದ್ದಾರೆ ಪತ್ರಿಕೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ನಾಸೀರುದ್ದೀನ್ ಹಲವು ವಿಷಯಗಳ ಕುರಿತು ಸಾಕಷ್ಟು ಚರ್ಚಿಸಿದ್ದಾರೆ.

 Sharesee more..
ಮತ್ತೆ ಕೈ ಹಿಡಿದ ‘ಗುಂಡ’ : ನಿರ್ದೇಶಕ ಶ್ರೀನಿವಾಸ್ ತಿಮ್ಮಯ್ಯ

ಮತ್ತೆ ಕೈ ಹಿಡಿದ ‘ಗುಂಡ’ : ನಿರ್ದೇಶಕ ಶ್ರೀನಿವಾಸ್ ತಿಮ್ಮಯ್ಯ

22 Jan 2020 | 7:24 PM

ಬೆಂಗಳೂರು, ಜ 22 (ಯುಎನ್ಐ) ಶ್ವಾನ ಹಾಗೂ ಆಟೋ ಚಾಲಕನ ನಡುವಿನ ಬಾಂಧ್ಯವದ ಮೇಲೆ ಬೆಳಕು ಚೆಲ್ಲುವ ‘ಗುಂಡ ಮತ್ತು ನಾನು’ ಚಿತ್ರ ಇದೇ ಶುಕ್ರವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ ಈ ಸಂದರ್ಭದಲ್ಲಿ ನಿರ್ದೇಶಕ ಶ್ರೀನಿವಾಸ್ ತಿಮ್ಮಯ್ಯ, ತಮ್ಮ ಸಿನಿ ಜರ್ನಿಯಲ್ಲಿ ಕಂಡುಂಡ ಕಹಿ, ಸಿಹಿಯ ಬಗ್ಗೆ ಹೇಳಿಕೊಳ್ಳುತ್ತ, ‘ಗುಂಡ’ನ ಕಥೆ ಮತ್ತೆ ತಮ್ಮ ಕೈಹಿಡಿಯಿತು ಎಂದು ತಿಳಿಸಿದ್ದಾರೆ

 Sharesee more..

‘ಊರೊಂದು ಕರೆದಂತೆ, ಹಿಂದೇನೋ ಮರೆತಂತೆ’

22 Jan 2020 | 11:03 AM

ಬೆಂಗಳೂರು, ಜ 22(ಯುಎನ್‍ಐ) ಸಾಮಾಜಿಕ ಜಾಲತಾಣ ಟ್ವಿಟರ್‍ ನಲ್ಲಿ ವಿಜಯ ರಾಘವೇಂದ್ರ ಅಭಿನಯದ ಮಾಲ್ಗುಡಿ ಡೇಸ್ ಚಿತ್ರದ ‘ಊರೊಂದು ಕರೆದಂತೆ, ಹಿಂದೇನೋ ಮರೆತಂತೆ’ ಹಾಡು ಸದ್ದು ಮಾಡುತ್ತಿದೆ ಪಿಆರ್​ಕೆ ಆಡಿಯೋ ಕಂಪನಿಯ ಯೂಟ್ಯೂಬ್ ತಾಣದಲ್ಲಿ ಬಿಡುಗಡೆಯಾದ 35 ಸೆಕೆಂಡ್‍ ಗಳ ಹಾಡನ್ನು, ಒಂದೇ ಗಂಟೆಯ ಅವಧಿಯಲ್ಲಿ 7 ಸಾವಿರಕ್ಕೂ ಹೆಚ್ಚು ಅಧಿಕ ಮಂದಿ ವೀಕ್ಷಿಸಿದ್ದಾರೆ.

 Sharesee more..

ಕ್ರೋಕ್ಸ್ ಪಾದರಕ್ಷೆ ಜಾಗತಿಕ ಅಭಿಯಾನದ ರಾಯಭಾರಿ ಪಟ್ಟಿಗೆ ಪ್ರಿಯಾಂಕಾ ಚೋಪ್ರಾ ಸೇರ್ಪಡೆ

22 Jan 2020 | 10:38 AM

ನವದೆಹಲಿ, ಜ 22(ಯುಎನ್‍ಐ) ಬಾಲಿವುಡ್ ನಟ ಪ್ರಿಯಾಂಕಾ ಚೋಪ್ರಾ ಜೊನಸ್ ಅವರು ವಿಶ್ವದಾದ್ಯಂತದ ಹಲವಾರು ಪ್ರಸಿದ್ಧ ವ್ಯಕ್ತಿಗಳೊಂದಿಗೆ ಕ್ರೋಕ್ಸ್ ಪಾದರಕ್ಷೆ ಜಾಗತಿಕ ಅಭಿಯಾನದ ರಾಯಭಾರಿ ಪಟ್ಟಿಗೆ ಸೇರ್ಡೆಯಾಗಿದ್ದಾರೆ ಅಭಿಯಾನದ ನಾಲ್ಕನೇ ವರ್ಷದಲ್ಲಿ ' ಕಮ್ ಯಾಸ್ ಯು ಆರ್ 'ಅಭಿಯಾನದ ಘೋಷವಾಕ್ಯವಾಗಿದೆ ಎಂದು ಕ್ರೋಕ್ಸ್ ಮುಖ್ಯ ಮಾರುಕಟ್ಟೆ ಅಧಿಕಾರಿ ಟೆರೆನ್ಸ್ ರೀಲ್ಲಿ ಬುಧವಾರ ಹೇಳಿಕೆಯಲ್ಲಿ ತಿಳಿಸಿದ್ದಾರೆ.

 Sharesee more..

ಬೆಂಗಳೂರು ಅಂತಾರಾಷ್ಟ್ರೀಯ ಸಿನಿಮೋತ್ಸವ: ಚಿತ್ರರಂಗದ ಗಣ್ಯರೊಂದಿಗೆ ಅಕಾಡೆಮಿ ಅಧ್ಯಕ್ಷರ ಸಭೆ

21 Jan 2020 | 8:55 PM

ಬೆಂಗಳೂರು, ಜ 21 (ಯುಎನ್‍ಐ) 12ನೇ ಬೆಂಗಳೂರು ಅಂತಾರಾಷ್ಟ್ರೀಯ ಸಿನಿಮೋತ್ಸವವನ್ನು ಅದ್ದೂರಿಯಾಗಿ ಹಾಗೂ ಯಶಸ್ವಿಯಾಗಿ ನಡೆಸುವ ಸಂಬಂಧ ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸುನೀಲ್ ಪುರಾಣಿಕ್ ಅವರು ಮಂಗಳವಾರ ಚಿತ್ರರಂಗದ ಗಣ್ಯರೊಂದಿಗೆ ವಿಶೇಷ ಸಭೆ ನಡೆಸಿದರು.

 Sharesee more..