Sunday, Mar 29 2020 | Time 00:34 Hrs(IST)
Entertainment Share

'ಇಂಡಿಯಾ ವರ್ಸಸ್ ಇಂಗ್ಲೆಂಡ್' . . . . . ವೇದಗಳ ಕಾಲದಲ್ಲೇ ಹೆಣ್ಣುಮಕ್ಕಳ ಶಿಕ್ಷಣ ಇತ್ತಲ್ವೇ ಮೇಷ್ಟ್ರೇ?

'ಇಂಡಿಯಾ ವರ್ಸಸ್ ಇಂಗ್ಲೆಂಡ್' . . . . . ವೇದಗಳ ಕಾಲದಲ್ಲೇ ಹೆಣ್ಣುಮಕ್ಕಳ ಶಿಕ್ಷಣ ಇತ್ತಲ್ವೇ         ಮೇಷ್ಟ್ರೇ?
'ಇಂಡಿಯಾ ವರ್ಸಸ್ ಇಂಗ್ಲೆಂಡ್

-ಎಸ್‍ ಆಶಾ ಕಶ್ಯಪ್



ಬೆಂಗಳೂರು, ಜ 24 (ಯುಎನ್‍ಐ) ಚಂದನವನದ ಪ್ರೀತಿಯ ಮೇಷ್ಟ್ರು, ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ ‘ಇಂಡಿಯಾ ವರ್ಸಸ್ ಇಂಗ್ಲೆಂಡ್’ ಚಿತ್ರ ರಾಜ್ಯಾದ್ಯಂತ ಬಿಡುಗಡೆಯಾಗಿ, ಉತ್ತಮ ಓಪನಿಂಗ್ ಪಡೆದಿದೆ



ನಾಯಕ ನಟನಾಗಿ ವಸಿಷ್ಠ ಸಿಂಹ,ನಾಯಕಿಯಾಗಿ ಮಾನ್ವಿತಾ ಹರೀಶ್‍ ಅಭಿನಯ ಚೆನ್ನಾಗಿದೆ, ಇಂಗ್ಲೆಂಡ್ ದೇಶವನ್ನೂ ವೈಭವಯುತವಾಗಿ ತೋರಿಸಲಾಗಿದೆ ಇನ್ನು ಅನಂತನಾಗ್ ಅವರು ಎಂದಿನಂತೆ ತಮ್ಮ ಪಾತ್ರಕ್ಕೆ ಜೀವ ತುಂಬಿ ನಟಿಸಿದ್ದಾರೆ ತಿರುಚಿದ ಇತಿಹಾಸವನ್ನು ಸರಿಪಡಿಸುವಾಟಕ್ಕೆ ಪ್ರೇಕ್ಷಕ ಮೆಚ್ಚುಗೆ ನೀಡಿದ್ದಾನೆ



ಎಲ್ಲವೂ ಸರಿ, ಆದರೆ ನಾಯಕ, ನಾಯಕ ಇಂಗ್ಲೆಂಡ್ ಹಾಗೂ ಇಂಡಿಯಾದ ಬಗ್ಗೆ ವಾಗ್ವಾದ ನಡೆಸುವಾಗ ಬ್ರಿಟಿಷರಿಂದ ಭಾರತಕ್ಕದ ಪ್ರಯೋಜನಗಳಲ್ಲಿ ‘ಹೆಣ್ಣುಮಕ್ಕಳ ಶಿಕ್ಷಣ’ದ ಬಗ್ಗೆ ಹೇಳುತ್ತಾರೆ ಇದು ನಿಜಕ್ಕೂ ಬೇಸರದ ಸಂಗತಿ



ನಾಗತಿಹಳ್ಳಿ ಚಂದ್ರಶೇಖರ್ ಅವರು ಭಾರತದ ಪುರಾಣ, ಇತಿಹಾಸ, ಪರಂಪರೆಗಳ ಬಗ್ಗೆ ಓದಿಕೊಂಡಿದ್ದರೂ, ಬ್ರಿಟಿಷರು ಬಂದ ಬಳಿಕ ಹೆಣ್ಣುಮಕ್ಕಳ ಶಿಕ್ಷಣಕ್ಕೆ ಒತ್ತು ನೀಡಲಾಯಿತು ಎಂದು ನಾಯಕನ ಬಾಯಲ್ಲಿ ಹೇಳಿಸಿರುವುದು ಸರಿಯಲ್ಲ



ಋಗ್ವೇದದಲ್ಲಿಯೇ 22 ಋಷಿಕೆಯರ ಹೆಸರುಗಳಿವೆ ಶೌನಕ ಮಹರ್ಷಿಗಳ ಬೃಹದ್ದೇವತಾ ಗ್ರಂಥ ಈ ಬಗ್ಗೆ ಉಲ್ಲೇಖಿಸುತ್ತಾ, ಲೋಪಾಮುದ್ರಾ, ವಿಶ್ವವಾರಾ, ಸಿಕತಾ, ನೀವಾವರಿ, ಘೋಷಾ, ಅಪಾಲಾ, ಶಾಶ್ವತಿ ಮುಂತಾದವರನ್ನು ಹೆಸರಿಸಿದ್ದಾರೆ



ಇನ್ನು, ಮೈತ್ರೇಯಿ, ಗಾರ್ಗಿ ವಾಚಕ್ನವಿ, ಕಾತ್ಯಾಯನಿ ಮೊದಲಾದವರ ಬಗ್ಗೆಯೂ ನೀವು ಕೇಳಿದ್ದೀರಿ ಎಂದುಕೊಂಡಿದ್ದೇವೆ



ಬ್ರಿಟಿಷರಿಗೂ ಮುನ್ನ ನಡೆದ ಪಾಶ್ಚಿಮಾತ್ಯರ ದಾಳಿಯ ಕಾರಣ ಹೆಣ್ಣುಮಕ್ಕಳಿಗೆ ವಿದ್ಯಾಭ್ಯಾಸ ಮಾಡಿಸದೆ, ಮದುವೆ ಹೆಸರಿನಲ್ಲಿ ಸುರಕ್ಷಿತಳನ್ನಾಗಿಸಲು ಸಮಾಜ ಮುಂದಾಯಿತು ‘ಬ್ರಿಟಿಷರು ಬಂದ ನಂತರ ಮತ್ತೆ ಹೆಣ್ಣು ಮಕ್ಕಳ ಶಿಕ್ಷಣ ವ್ಯವಸ್ಥೆಗೆ ಮರುಜೀವ ನೀಡುವ ಕಾರ್ಯ ನಡೆಯಿತು’ ಎಂದು ಹೇಳಿಸಿದ್ದರೆ, ಇಂದಿನ ಹಾಗೂ ಮುಂದಿನ ಪೀಳಿಗೆಗೆ ಉತ್ತಮ ಮಾಹಿತಿ ಸಿಗುತ್ತಿತ್ತು



ವೇದಗಳ ಕಾಲದ ಪರಿಚಯವೇ ಇಲ್ಲದವರು ‘ಇಂಡಿಯಾ ವರ್ಸಸ್ ಇಂಗ್ಲೆಂಡ್’ ಚಿತ್ರ ವೀಕ್ಷಿಸಿದಲ್ಲಿ, ಬ್ರಿಟಿಷರಿಂದಲೇ ಭಾರತದಲ್ಲಿ ಹೆಣ್ಣುಮಕ್ಕಳು ಶಾಲೆಗೆ ಹೋಗುವಂತಾಯಿತು ಎಂದು ತಪ್ಪಾಗಿ ಅರ್ಥೈಸಿಕೊಳ್ಳುವ ಅಪಾಯವಿದೆ ಏನಂತೀರಿ ಮೇಷ್ಟ್ರೇ?



ಯುಎನ್‍ಐ ಎಸ್‍ಎ ವಿಎನ್ 2015