Monday, Jul 22 2019 | Time 07:09 Hrs(IST)
  • ಶಾಸಕರು ರಾಜಕೀಯ ವ್ಯಭಿಚಾರ ಮಾಡಿದ್ದಾರೆ : ದಿನೇಶ್ ಗುಂಡೂರಾವ್ ಗಂಭೀರ ಆರೋಪ
Entertainment

‘ನೀನು ನನಗೆ ಸದಾ ಹೊಸತು’ 'ಆದಿಲಕ್ಷ್ಮಿ' ಅಭಿನಯಕ್ಕೆ ಯಶ್ ಫಿದಾ

19 Jul 2019 | 2:22 PM

ಬೆಂಗಳೂರು, ಜುಲೈ 19 (ಯುಎನ್ಐ) ಸ್ಯಾಂಡಲ್ ವುಡ್ ನ ಸಿಂಡ್ರೆಲ್ಲಾ ರಾಧಿಕಾ ಪಂಡಿತ್, ನಿರೂಪ್ ಭಂಡಾರಿ ಅಭಿನಯದ ‘ಆದಿಲಕ್ಷ್ಮಿ ಪುರಾಣ’ ಚಿತ್ರ ಇಂದು ರಾಜ್ಯಾದ್ಯಂತ ತೆರೆ ಕಂಡಿದ್ದು, ಪ್ರೇಕ್ಷಕರನ್ನು ತನ್ನತ್ತ ಸೆಳೆಯುತ್ತಿದೆ ರಾಧಿಕಾ ಪಂಡಿತ್ ವಿವಾಹದ ಬಳಿಕ ಒಪ್ಪಿಕೊಂಡಿದ್ದ ಚಿತ್ರ ಇದಾಗಿದ್ದು, ಪ್ರೇಕ್ಷಕರಿಗೂ ಮುನ್ನ ತಮ್ಮ ಪತಿ, ರಾಕ್ ಸ್ಟಾರ್ ಯಶ್ ಅವರ ಮೆಚ್ಚುಗೆ ಪಡೆದುಕೊಂಡಿದ್ದಾರೆ ‘ಪ್ರತಿ ಬಾರಿ ತೆರೆಯ ಮೇಲೆ ನಿನ್ನನ್ನು ನೋಡಿದಾಗಲೆಲ್ಲ ಹೊಸತು ಎನಿಸುತ್ತದೆ ಹೊಸದಾಗಿ ಪ್ರೀತಿ ಮೂಡುತ್ತದೆ” ಎಂದು ಯಶ್ ಟ್ವೀಟ್ ಮಾಡಿದ್ದಾರೆ ಅಲ್ಲದೆ, “ನಾಯಕ ನಟ ನಿರೂಪ್ ಭಂಡಾರಿ ಅದ್ಭುತವಾಗಿ ಕಾಣಿಸಿಕೊಂಡಿದ್ದಾರೆ ನಿರ್ದೇಶಕಿ ಪ್ರಿಯಾ, ಛಾಯಾಗ್ರಾಹಕಿ ಪ್ರೀತಾ ಜಯರಾಮ್, ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಹಾಗೂ ತಂಡಕ್ಕೆ ಯಶಸ್ಸು ಸಿಗಲಿ” ಎಂದು ಹಾರೈಸಿದ್ದಾರೆ ರಾಧಿಕಾ ಪಂಡಿತ್ ಪ್ರತಿಭಾವಂತೆ ಮದುವೆಯಾದ ನಂತರ ನಟಿಸಬಾರದು ಎಂಬ ಯಾವ ಷರತ್ತನ್ನೂ ವಿಧಿಸಿಲ್ಲ ಯಾವುದೇ ಕಾರಣಕ್ಕೂ ಆಕೆಯಲ್ಲಿನ ಪ್ರತಿಭೆ ವ್ಯರ್ಥವಾಗಲು ಬಿಡುವುದಿಲ್ಲ ಎಂದು ಇತ್ತೀಚೆಗಷ್ಟೆ ಟ್ರೇಲರ್ ಬಿಡುಗಡೆ ಸಂದರ್ಭದಲ್ಲಿ ಯಶ್ ಹೇಳಿದ್ದರು.

 Sharesee more..

ರೀಬಾಕ್ ಬ್ರಾಂಡ್ ಗೆ ವರುಣ್ ಸೇರ್ಪಡೆ

18 Jul 2019 | 4:07 PM

ನವದೆಹಲಿ, ಜುಲೈ 18 (ಯುಎನ್ಐ) ರೀಬಾಕ್‌ನಂತಹ ಬ್ರಾಂಡ್‌ನೊಂದಿಗೆ ಸೇರ್ಪಡೆಗೊಳ್ಳುವುದು ಅದ್ಭುತ ಅನುಭವ ಎಂದು ಬಾಲಿವುಡ್ ಚಾಕೊಲೇಟ್ ಹೀರೋ ವರುಣ್ ಧವನ್ ಹೇಳಿದ್ದಾರೆ ಪ್ರಮುಖ ಫಿಟ್‌ನೆಸ್ ಬ್ರಾಂಡ್ ರೀಬಾಕ್, ವರುಣ್ ಧವನ್ ಅವರನ್ನು ಭಾರತದ ಹೊಸ ಬ್ರಾಂಡ್ ಅಂಬಾಸಿಡರ್ ಎಂದು ಘೋಷಿಸಿದೆ.

 Sharesee more..

ಸಿಮಿ ಚಾಟ್ ಶೋನಲ್ಲಿ ಬಾಜೀರಾವ್ ಮಸ್ತಾನಿ

18 Jul 2019 | 3:40 PM

ಮುಂಬೈ, ಜುಲೈ 18 (ಯುಎನ್ಐ) ಬಾಲಿವುಡ್ ನಟಿ ಸಿಮಿ ಗರೇವಾಲ್ ನಡೆಸಿಕೊಂಡ ಪ್ರಖ್ಯಾತ ಚಾಟ್ ಶೋ 'ರೆಂಡೆಜ್ವಸ್ ವಿತ್ ಸಿಮಿ ಗರೇವಾಲ್' ಹೊಸ ಸೀಸನ್ ನಲ್ಲಿ ಮೊದಲ ಬಾರಿಗೆ 'ಬಾಜಿರಾವ್ ಮಸ್ತಾನಿ' ಖ್ಯಾತಿಯ ರಣವೀರ್ ಸಿಂಗ್ ಹಾಗೂ ದೀಪಿಕಾ ಅತಿಥಿಯಾಗಿ ಪಾಲ್ಗೊಳ್ಳಲಿದ್ದಾರೆ.

 Sharesee more..

ದೆವ್ವವನ್ನೇ ಓಡಿಸ್ತಾರಂತೆ ಸಾಧು ಅಂಡ್ ಗ್ಯಾಂಗ್! ಕುರಿ ಪ್ರತಾಪ್ ಡಾನ್ಸ್ ಮಾಡಿ ಸುಸ್ತಾದ್ರಂತೆ

18 Jul 2019 | 3:11 PM

ಬೆಂಗಳೂರು, ಜುಲೈ 18 (ಯುಎನ್ಐ) ಕಾಮಿಡಿ ಮತ್ತು ಹಾರರ್ ಒಟ್ಟೊಟ್ಟಿಗೆ ಇರುವ ಚಿತ್ರ ‘ಮನೆ ಮಾರಾಟಕ್ಕಿದೆ’ ಮುಂದಿನ ತಿಂಗಳು ಬಿಡುಗಡೆಯಾಗುವ ನಿರೀಕ್ಷೆಯಿದೆ ಮಂಜು ಸ್ವರಾಜ್‌.

 Sharesee more..
‘ಮೋಹನದಾಸ’ನಿಗೆ ಸಿಗರೇಟ್ ಅಭ್ಯಾಸ ಮಾಡಿಸಿದ ‘ಮಾಧವಲಾಲ್’ ಜೊತೆ ಚಿಟ್ ಚಾಟ್

‘ಮೋಹನದಾಸ’ನಿಗೆ ಸಿಗರೇಟ್ ಅಭ್ಯಾಸ ಮಾಡಿಸಿದ ‘ಮಾಧವಲಾಲ್’ ಜೊತೆ ಚಿಟ್ ಚಾಟ್

17 Jul 2019 | 8:10 PM

ಬೆಂಗಳೂರು, ಜುಲೈ 17 (ಯುಎನ್ಐ) ಮಹಾತ್ಮ ಗಾಂಧಿಯವರ 150ನೇ ಜನ್ಮದಿನದ ಅಂಗವಾಗಿ ಕನ್ನಡ, ಹಿಂದಿ, ಇಂಗ್ಲೀಷ್ ಭಾಷೆಗಳಲ್ಲಿ ಅಕ್ಟೋಬರ್ ನಲ್ಲಿ ತೆರೆಕಾಣಲಿರುವ, ಖ್ಯಾತ ನಟ ಪಿ ಶೇಷಾದ್ರಿಯವರ ‘ಮೋಹನದಾಸ’ ಅತ್ಯುತ್ತಮ ಚಿತ್ರತಂಡವನ್ನು ಒಳಗೊಂಡಿದೆ ಅನಂತ ಮಹಾದೇವನ್, ಶ್ರುತಿ, ನಂದಿನಿ, ಶಶಿ, ಕಿಟ್ಟಿ, ಕಲಾವಿದೆ ದೀಪಾ ರವಿಶಂಕರ್ ಪುತ್ರ ಪರಂ ಮೊದಲಾದ ಕಲಾವಿದರಿದ್ದು, ‘ಮೂಕಜ್ಜಿಯ ಕನಸುಗಳು’ ಚಿತ್ರದ ಛಾಯಾಗ್ರಾಹಕ ಭಾಸ್ಕರ್ ಅವರ ಛಾಯಾಗ್ರಹಣವಿದೆ ಜೊತೆಗೆ ಹೊಸ ಬಾಲ ಪ್ರತಿಭೆಗಳಿಗೂ ಅವಕಾಶ ನೀಡಲಾಗಿದೆ ಅವಳಿ ಸೋದರ, ಸೋದರಿಯರಾದ ಅಭಯಂಕರ್ ಹಾಗೂ ಜ್ಯೋತಿರ್ಮಯಿ ಯುಎನ್ಐ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿ, ಚಿತ್ರದಲ್ಲಿ ಅವಕಾಶ ದೊರಕಿದ ಬಗ್ಗೆ ಸಂತಸ ಹಂಚಿಕೊಂಡರು

 Sharesee more..

“ನಾನು ನಿರ್ದೇಶಕರ ನಟ” ಅನಂತ್ ಮಹಾದೇವನ್

17 Jul 2019 | 5:14 PM

ಬೆಂಗಳೂರು, ಜುಲೈ 17 (ಯುಎನ್ಐ) ಚಂದನವನದ ರಾಷ್ಟ್ರಪ್ರಶಸ್ತಿ ವಿಜೇತ ನಿರ್ದೇಶಕ ಪಿ ಶೇಷಾದ್ರಿ ಅವರ ‘ಮೋಹನದಾಸ’ ಚಿತ್ರದಲ್ಲಿ ಕರಮಚಂದ ಗಾಂಧಿ ಪಾತ್ರದಲ್ಲಿ ಖ್ಯಾತ ನಿರ್ದೇಶಕ, ನಟ ಅನಂತ್ ನಾರಾಯಣ್ ಮಹಾದೇವನ್ ನಟಿಸಿದ್ದಾರೆ ಬಹುಮುಖ ಪ್ರತಿಭೆ ಅನಂತ್ ಮಹಾದೇವನ್ ಮೂಲತಃ ತ್ರಿಶೂರಿನವರಾಗಿದ್ದು, ಹಿಂದಿ, ಮರಾಠಿ ಸಿನೆಮಾ ಹಾಗೂ ಧಾರಾವಾಹಿಗಳಲ್ಲಿ ನಟ, ನಿರ್ದೇಶಕ, ಬರಹಗಾರರಾಗಿ ಜನಪ್ರಿಯತೆ ಗಳಿಸಿದ್ದಾರೆ “ಕನ್ನಡದಲ್ಲಿ ‘ಮೋಹನದಾಸ’ ಮೊದಲ ಚಿತ್ರ ಪಿ ಶೇಷಾದ್ರಿಯವರಂತಹ ಮಹಾನ್ ನಿರ್ದೇಶಕರ ಜೊತೆ ಕೆಲಸ ಮಾಡುವ ಅವಕಾಶ ಸಿಕ್ಕಿದ್ದು ಸೌಭಾಗ್ಯ” ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು ಪ್ರಶ್ನೆಯೊಂದಕ್ಕೆ ಉತ್ತರಿಸುತ್ತ, “ನಾನು ನಿರ್ದೇಶಕ ಅಥವಾ ವಯಸ್ಸಿನಲ್ಲಿ ಅವರಿಗಿಂತ ಹಿರಿಯನಾಗಿದ್ದರೂ, ಅಭಿನಯದ ವಿಷಯಕ್ಕೆ ಬಂದಾಗ ನಾನು ನಿರ್ದೇಶಕರ ನಟ ಪಾತ್ರ ಹೇಗೆ ಬಂದರೆ ಚೆನ್ನ ಎಂಬ ಕಲ್ಪನೆ ಅವರಲ್ಲಿರುವುದರಿಂದ ಅದಕ್ಕೆ ಜೀವ ತುಂಬಬೇಕಾದ್ದು ಕಲಾವಿದರ ಕರ್ತವ್ಯ” ಎಂದರು ‘ಮೋಹನದಾಸ’ ಚಿತ್ರದಲ್ಲಿ ಪುತಲೀಬಾಯಿ ಪಾತ್ರದಲ್ಲಿ ಖ್ಯಾತ ನಟಿ ಶ್ರುತಿ ನಟಿಸಿದ್ದಾರೆ “ಪಿ ಶೇಷಾದ್ರಿಯವರ ಜೊತೆ ಚಿತ್ರ ಮಾಡಬೇಕೆಂಬ ಬಹುದಿನಗಳ ಕನಸು ನನಸಾಗಿದೆ ತನ್ನ ನಡೆ, ನುಡಿ ಹಾಗೂ ಹಲವು ಕಥೆಗಳ ಮೂಲಕ ಮೋಹನದಾಸನಿಗೆ ಪ್ರೇರೇಪಣದೆ ನೀಡುವ ಪುತಲೀಬಾಯಿ ಪಾತ್ರ ಸಿಕ್ಕಿದ್ದು ಅದೃಷ್ಟವೇ ಸರಿ” ಎಂದು ಹೇಳಿದರು.

 Sharesee more..

‘ಮೋಹನದಾಸ’ನಿಗೆ ಬಯೋಸ್ಕೋಪ್ ತೊರಿಸ್ತಾರಾ ಬಿಗ್ ಬಿ ಅಮಿತಾಭ್?

17 Jul 2019 | 4:47 PM

ಬೆಂಗಳೂರು, ಜುಲೈ 17 (ಯುಎನ್ಐ) ಜಗತ್ತು ಕಂಡ ಮಹಾನ್ ವ್ಯಕ್ತಿ ಮಹಾತ್ಮ ಗಾಂಧಿ ಗಾಂಧಿಯವರ ಬಗ್ಗೆ ಹಲವು ಚಿತ್ರಗಳು ತೆರೆ ಕಂಡಿವೆಯಾದರೂ, ಅವರ ಬಾಲ್ಯವನ್ನು ಸಮಗ್ರವಾಗಿ ಕಟ್ಟಿಕೊಟ್ಟಿರುವ ಚಿತ್ರಗಳಿಲ್ಲ ಈ ಕೊರತೆಯನ್ನು ನಿರ್ದೇಶಕ ಪಿ ಶೇಷಾದ್ರಿ ನಿವಾರಿಸಲಿದ್ದಾರೆ ಕನ್ನಡ ಚಿತ್ರರಂಗದ ಅತ್ಯುತ್ತಮ ನಿರ್ದೇಶಕ, ಒಂಬತ್ತು ರಾಷ್ಟ್ರ ಪ್ರಶಸ್ತಿಗಳನ್ನು ಬಾಚಿಕೊಂಡಿರುವ ಶೇಷಾದ್ರಿ ‘ನವ್ಯಚಿತ್ರ’ ಬ್ಯಾನರ್ ಅಡಿಯಲ್ಲಿ ಮೋಹನದಾಸ’ ಚಿತ್ರವನ್ನು ನಿರ್ಮಿಸುತ್ತಿದ್ದು, ಬಾಲ ಗಾಂಧಿಗೆ ಅತ್ಯಂತ ಪ್ರಭಾವ ಬೀರಿದ ‘ಶ್ರವಣ ಕುಮಾರ’ ಬಯೋಸ್ಕೋಪ್ ತೋರಿಸುವ ವ್ಯಕ್ತಿಯ ಪಾತ್ರಕ್ಕೆ ಬಿಗ್ ಬಿ ಅಮಿತಾಭ್ ಬಚ್ಚನ್ ರನ್ನು ಆಯ್ಕೆ ಮಾಡುವ ಬಯಕೆ ಹೊಂದಿದ್ದಾರೆ “ಮೋಹನದಾಸ ಚಿತ್ರ ಕನ್ನಡ, ಹಿಂದಿ, ಇಂಗ್ಲೀಷ್ ಭಾಷೆಗಳಲ್ಲಿ ತೆರೆಕಾಣಲಿದ್ದು, ಬಯೋಸ್ಕೋಪ್ ತೋರಿಸುವ ವ್ಯಕ್ತಿಯ ಪಾತ್ರಕ್ಕೆ ಅಮಿತಾಭ್ ಅವರನ್ನು ಆಯ್ಕೆ ಮಾಡುವತ್ತ ಪ್ರಯತ್ನ ನಡೆಯುತ್ತಿದೆ ಒಪ್ಪದಿದ್ದಲ್ಲಿ ಅಮೀರ್ ಖಾನ್ ಅಥವಾ ಅಕ್ಷಯ್ ಕುಮಾರ್ ಅವರನ್ನು ಕರೆತರುವ ಬಗ್ಗೆ ಚಿಂತನೆಯಿದೆ” ಎಂದು ತಿಳಿಸಿದ್ದಾರೆ ಖ್ಯಾತ ಸಾಹಿತಿ ಬೋಳುವಾರು ಮೊಹಮದ್ ಕುಂಯಿ ‘ಪಾಪು ಗಾಂಧಿ ಬಾಪುವಾದ ಕಥೆ’ ಈ ಚಿತ್ರಕ್ಕೆ ಸ್ಫೂರ್ತಿಯಾಗಿದ್ದು, ಗಾಂಧಿಯವರ 150ನೇ ಜನ್ಮದಿನದ ಕೊಡುಗೆಯಾಗಿ ಚಿತ್ರವನ್ನು ಸಮರ್ಪಿಸಲಾಗುತ್ತದೆ ಗಾಂಧಿ ಸಿಗರೇಟ್ ಸೇದಿದ್ದು, ಮಾಂಸ ತಿಂದಿದ್ದು ಸೇರಿದಂತೆ ಬಾಲ್ಯದ ಒಂದಷ್ಟು ವಿವರಗಳು ಎಲ್ಲರಿಗೂ ಗೊತ್ತಿದೆ ಆದರೆ ತಿಳಿಯಬೇಕಾದ ಇನ್ನೊಂದಷ್ಟು ಅಂಶಗಳ ಮೇಲೆ ಬೆಳಕು ಚೆಲ್ಲಲಾಗುವುದು ಮೋಹನದಾಸನ 16ನೆಯ ವಯಸ್ಸಿನವರೆಗಿನ ಕಥೆ ಚಿತ್ರದಲ್ಲಿ ಅನಾವರಣಗೊಳ್ಳಲಿದೆ ತುಂಟಾಟ, ಚೇಷ್ಟೆ, ತಪ್ಪುಗಳನ್ನು ತಿದ್ದುಕೊಂಡು ಮುಂದೆ ಮಹಾತ್ಮ ಎನಿಸಿಕೊಂಡ ಐತಿಹಾಸಿಕ ವ್ಯಕ್ತಿಯ ಬಾಲ್ಯವನ್ನಷ್ಟೆ ‘ಮೋಹನದಾಸ’ ಚಿತ್ರದಲ್ಲಿ ತೋರಿಸಲಾಗಿದೆ ಎಂದು ನಿರ್ದೇಶಕ ಪಿ ಶೇಷಾದ್ರಿ ಹೇಳಿದ್ದಾರೆ.

 Sharesee more..
ಚಿತ್ರೀಕರಣ ಮುಗಿಸಿದ`ಕಪಟನಾಟಕ ಪಾತ್ರಧಾರಿ’

ಚಿತ್ರೀಕರಣ ಮುಗಿಸಿದ`ಕಪಟನಾಟಕ ಪಾತ್ರಧಾರಿ’

17 Jul 2019 | 4:27 PM

ಬೆಂಗಳೂರು, ಜುಲೈ 17 (ಯುಎನ್ಐ) ಗರುಡ ಕ್ರಿಯೇಷನ್ಸ್ ಲಾಂಛನದಲ್ಲಿ ನಿರ್ಮಾಣವಾಗುತ್ತಿರುವ `ಕಪಟನಾಟಕ ಪಾತ್ರಧಾರಿ` ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದೆ ಬೆಂಗಳೂರಿನ ಸುತ್ತಮುತ್ತ ಚಿತ್ರೀಕರಣ ನಡೆದಿದ್ದು, ಸದ್ಯದಲ್ಲೇ ಚಿತ್ರದ ಧ್ವನಿಸಾಂದ್ರಿಕೆ ಬಿಡುಗಡೆಯಾಗಲಿದೆ

 Sharesee more..
ಮಲೆ ಮಹದೇಶ್ವರನ ಸನ್ನಿಧಿಯಲ್ಲಿ `ಜೈಹೋ ಪರಬ್ರಹ್ಮ’

ಮಲೆ ಮಹದೇಶ್ವರನ ಸನ್ನಿಧಿಯಲ್ಲಿ `ಜೈಹೋ ಪರಬ್ರಹ್ಮ’

17 Jul 2019 | 4:13 PM

ಬೆಂಗಳೂರು, ಜುಲೈ 17 (ಯುಎನ್ಐ) ಮೈಸೂರು ಟೂರಿಂಗ್ ಟಾಕೀಸ್ ಲಾಂಛನದಲ್ಲಿ ಎಸ್.

 Sharesee more..

`ವೀಕ್ ಎಂಡ್` @ 50 ಡೇಸ್

17 Jul 2019 | 3:54 PM

ಬೆಂಗಳೂರು, ಜುಲೈ 17 (ಯುಎನ್ಐ) ಮಯೂರ ಮೋಷನ್ ಪಿಕ್ಚರ್ಸ್ ಲಾಂಛನದಲ್ಲಿ ಮಂಜುನಾಥ್ ಡಿ ಅವರು ನಿರ್ಮಿಸಿರುವ `ವೀಕ್ ಎಂಡ್` ಚಿತ್ರ ಬೆಂಗಳೂರಿನ ಕಾಮಾಕ್ಯ ಹಾಗೂ ಸಪ್ನ ಚಿತ್ರಮಂದಿರಗಳಲ್ಲಿ ಐವತ್ತು ದಿನಗಳನ್ನು ಪೂರೈಸಿದೆ ಎಂದು ನಿರ್ದೇಶಕರು ತಿಳಿಸಿದ್ದಾರೆ.

 Sharesee more..

ವರಮಹಾಲಕ್ಷ್ಮೀ ಹಬ್ಬಕ್ಕೆ ಬರ್ತಾರೆ ‘ಕೆಂಪೇಗೌಡ 2’

17 Jul 2019 | 3:31 PM

ಬೆಂಗಳೂರು, ಜುಲೈ 17 (ಯುಎನ್ಐ) ವರಮಹಾಲಕ್ಷ್ಮೀ ಹಬ್ಬಕ್ಕೆ ‘ಕೆಂಪೇಗೌಡ’ 2 ಚಿತ್ರ ರಾಜ್ಯಾದ್ಯಂತ ತೆರೆಕಾಣಲಿದ್ದು, ಪ್ರೇಕ್ಷಕರನ್ನು ರಂಜಿಸಲಿದೆ ಕಾನೂನು ಹಾಗೂ ರಾಜಕೀಯ ಮಿಳಿತಗೊಂಡಿದ್ದು, ಪ್ರಾಮಾಣಿಕ ಪೊಲೀಸ್ ಅಧಿಕಾರಿಗಳ ಕಥೆ ಹೊಂದಿರುವ ಚಿತ್ರವನ್ನು ಪಂಚಮುಖಿ ಹನುಮಾನ್ ಸಿನಿ ಪ್ರೊಡಕ್ಷನ್ ಲಾಂಛನದಲ್ಲಿ ಎ ವಿನೋದ್ ನಿರ್ಮಿಸಿದ್ದಾರೆ `ಕೆಂಪೇಗೌಡ 2` ಚಿತ್ರವನ್ನು ಮೆಚ್ಚಿರುವ ಸೆನ್ಸಾರ್ ಮಂಡಳಿ ಯು/ಎ ಅರ್ಹತಾಪತ್ರವನ್ನು ನೀಡಿದೆ ಕೋಮಲ್ ಕುಮಾರ್ ನಾಯಕರಾಗಿ ನಟಿಸಿರುವ ಚಿತ್ರವನ್ನು ಶಂಕರ್ ಗೌಡ ನಿರ್ದೇಶಿಸಿದ್ದಾರೆ ನಿರ್ದೇಶಕರೇ ಬರೆದಿರುವ ಕಥೆಗೆ ಕೆ.

 Sharesee more..

ದಿಲ್ಜಿತ್ ಗೆ ಕರೀನಾ ಪ್ರೇರಣೆ!

17 Jul 2019 | 12:50 PM

ಮುಂಬೈ, ಜುಲೈ 17 (ಯುಎನ್ಐ) ಪಂಜಾಬಿ ಚಿತ್ರದ ಸೂಪರ್ ಸ್ಟಾರ್ ಹಾಗೂ ಗಾಯಕ ದಿಲ್ಜಿತ್ ದೋಸಾಂಜ್ ಗೆ ನಟಿ ಕರೀನಾ ಪ್ರೇರಣೆಯಾಗಿದ್ದಾರಂತೆ 2016ರಲ್ಲಿ 'ಉಡ್ತಾ ಪಂಜಾಬ್' ಚಿತ್ರದ ಮೂಲಕ ದಲ್ಜಿತ್ ಬಿಟೌನ್ ಅಂಗಳಕ್ಕೆ ಪಾದಾರ್ಪಣೆ ಮಾಡಿದ್ದರು.

 Sharesee more..

ಹಿರಿಯ ಬೆಂಗಾಳಿ ನಟ ಸ್ವರೂಪ ದತ್ತ ನಿಧನ

17 Jul 2019 | 12:31 PM

ಕೋಲ್ಕತಾ, ಜುಲೈ 17 (ಯುಎನ್‌ಐ) ಹಿರಿಯ ಬೆಂಗಾಳಿ ನಟ ಸ್ವರೂಪ ದತ್ತಾ ಬುಧವಾರ ಬೆಳಗ್ಗೆ ನಿಧನರಾದರು; ಅವರಿಗೆ 78 ವರ್ಷ ವಯಸ್ಸಾಗಿತ್ತು ಸ್ನಾನದ ಕೋಣೆಯಲ್ಲಿ ಅಸ್ವಸ್ಥರಾಗಿ ಬಿದ್ದ ನಂತರ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು.

 Sharesee more..

ವಯಸ್ಸಿಗೆ ತಕ್ಕ ಪಾತ್ರ ಮಾಡಲು ಸಂಜಯ್ ಸಿದ್ಧ

17 Jul 2019 | 12:04 PM

ಮುಂಬೈ, ಜುಲೈ 17 (ಯುಎನ್ಐ) ತಮ್ಮದೀಗ ನಟಿಯರೊಂದಿಗೆ ಗುಡ್ಡ ಗಾಡು ಪ್ರದೇಶದಲ್ಲಿ ಸುತ್ತುತ್ತ ನೃತ್ಯ ಮಾಡುವ ವಯಸ್ಸಲ್ಲ ಹೀಗಾಗಿ ವಯಸ್ಸಿಗೆ ತಕ್ಕಂತೆ ಪಾತ್ರ ಮಾಡಲು ತಾವು ಸಿದ್ಧವಿರುವುದಾಗಿ ಬಾಲಿವುಡ್ ನಟ ಸಂಜಯ್ ದತ್ ತಿಳಿಸಿದ್ದಾರೆ.

 Sharesee more..

ಸಾರಾಗೆ ಬನ್ಸಾಲಿ ಚಿತ್ರದಲ್ಲಿ ನಟಿಸುವಾಸೆ

17 Jul 2019 | 11:20 AM

ಮುಂಬೈ, ಜುಲೈ 17 (ಯುಎನ್ಐ) ಬಾಲಿವುಡ್ ನಟಿ ಸಾರಾ ಅಲಿ ಖಾನ್ ಗೆ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ಅವರ ಚಿತ್ರದಲ್ಲಿ ನಟಿಸುವ ಆಸೆ ಇದೆಯಂತೆ ಈಗಾಗಲೇ ಸಾರಾ ಅಭಿನಯಿಸಿದ್ದ 'ಕೇದರನಾಥ್' ಹಾಗೂ 'ಸಿಂಬಾ' ಚಿತ್ರಗಳು ಗಲ್ಲಾಪೆಟ್ಟಿಗೆ ತುಂಬಿಸುವಲ್ಲಿ ಯಶಸ್ವಿಯಾಗಿವೆ.

 Sharesee more..