Sunday, Mar 29 2020 | Time 00:48 Hrs(IST)
Entertainment

ಈ ವರ್ಷ ನಿಮ್ಜೊತೆ ಹುಟ್ದಬ್ಬ ಆಚರಣೆ ಇಲ್ಲ, ಬೈಕೋಬೇಡಿ: ರಾಧಿಕಾ ಪಂಡಿತ್

07 Mar 2020 | 11:20 AM

ಬೆಂಗಳೂರು, ಮಾ 07 (ಯುಎನ್‍ಐ) ಸ್ಯಾಂಡಲ್‍ವುಡ್ ಸಿಂಡ್ರೆಲ್ಲಾ ರಾಧಿಕಾ ಪಂಡಿತ್ ಇಂದು ತಮ್ಮ 36ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ ಈ ಹಿನ್ನೆಲೆಯಲ್ಲಿ ಅವರು ಇನ್‍ಸ್ಟಾದಲ್ಲಿ ವಿಡಿಯೋವೊಂದನ್ನು ಪೋಸ್ಟ್ ಮಾಡಿ ಅಭಿಮಾನಿಗಳ ಬಳಿ ಕ್ಷಮೆ ಕೇಳಿದ್ದಾರೆ.

 Sharesee more..

ಕೊರೋನಾ ಎಫೆಕ್ಟ್ : ನಾಳೆ ಸ್ಯಾಂಡಲ್ ವುಡ್ ಸಿಂಡ್ರೆಲಾ ಹುಟ್ಟು ಹಬ್ಬ ಆಚರಿಸಿಕೊಳ್ಳಲ್ವಂತೆ!

06 Mar 2020 | 12:55 PM

ಬೆಂಗಳೂರು, ಮಾ 06 (ಯುಎನ್‍ಐ) ಮಾರಣಾಂತಿಕ ಕೊರೋನಾ ವೈರಸ್ ಜಗತ್ತಿನ ಹಲವು ದೇಶಗಳಲ್ಲಿ ಭೀತಿ ಹುಟ್ಟಿಸಿದೆ ಸೋಂಕು ಹರಡದಂತೆ ತಡೆಗಟ್ಟೋದಿಕ್ಕೆ ಸರ್ಕಾರಗಳು ಶ್ರಮಿಸುತ್ತಿವೆ ಇದು ಸೆಲೆಬ್ರಿಟಿಗಳ ಸೆಲೆಬ್ರೇಷನ್ ಮೇಲೂ ಪರಿಣಾಮ ಬೀರುತ್ತಿದೆ ಹ್ಯಾಗೆ ಅಂತೀರಾ? ನಾಳೆ ರಾಕಿಂಗ್ ಸ್ಟಾರ್ ಯಶ್ ಮನದನ್ನೆ, ಸ್ಯಾಂಡಲ್ ವುಡ್ ಸಿಂಡ್ರೆಲಾ ರಾಧಿಕಾ ಪಂಡಿತ್ ಹುಟ್ದಬ್ಬ ಆದ್ರೆ ಹುಟ್ದಬ್ಬ ಆಚರಿಸಲ್ಲ ಅಂತ ಖಾಸಗಿ ಮಾಧ್ಯಮವೊಂದಕ್ಕೆ ನೀಡಿದ ಹೇಳಿಕೆಯಲ್ಲಿ ಯಶ್ ತಿಳಿಸಿದ್ದಾರೆ “ಕೊರೋನಾ ವೈರಸ್ ಸೋಂಕು ಹರಡುವ ಹಿನ್ನೆಲೆಯಲ್ಲಿ ಹೆಚ್ಚು ಜನರು ಒಂದೆಡೆ ಸೇರಕೂಡದು ಅಂತ ಸರ್ಕಾರ ಸಲಹೆ ನೀಡಿದೆ ಅದೂ ಅಲ್ದೆ ಎರಡು ಪುಟ್ಟ ಮಕ್ಕಳನ್ನು ನೋಡಿಕೊಳ್ಳಬೇಕಾದ ಜವಾಬ್ದಾರಿ ಆಕೆಗಿದೆ.

 Sharesee more..

ಚಿರು ಅಭಿನಯದ ‘ಶಿವಾರ್ಜುನ’

05 Mar 2020 | 6:41 PM

ಬೆಂಗಳೂರು, ಮಾ 05 (ಯುಎನ್‍ಐ) ಚಿರಂಜೀವಿ ಸರ್ಜಾ ನಾಯಕನಾಗಿ ನಟಿಸಿದ ಮೊದಲ ಚಿತ್ರ ‘ವಾಯುಪುತ್ರ’ ಈಗ ವೃತ್ತಿ ಬದುಕಿನಲ್ಲಿ ಒಂದು ದಶಕ ಪೂರೈಸಿದ ಖುಷಿಯಲ್ಲಿರುವ ಚಿರು, ಸಾಲು ಸಾಲು ಚಿತ್ರಗಳಲ್ಲಿ ಬ್ಯುಸಿಯಾಗಿದ್ದಾರೆ.

 Sharesee more..

‘ನರಗುಂದ ಬಂಡಾಯ’ ಧ್ವನಿ ಸುರುಳಿ ಬಿಡುಗಡೆ

05 Mar 2020 | 6:34 PM

ಬೆಂಗಳೂರು, ಮಾ 05 (ಯುಎನ್‍ಐ) ಎರಡು ದಶಕಗಳ ಹಿಂದೆ 1980ರಲ್ಲಿ ನಡೆದ ರೈತ ಹೋರಾಟದ ನೈಜ ಘಟನೆಯನ್ನು ಆಧರಿಸಿ ತಯಾರಾಗುತ್ತಿರುವ ಚಿತ್ರ ‘ನರಗುಂದ ಬಂಡಾಯ’ ನಾಗೇಂದ್ರ ಮಾಗಡಿ ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿರುವ ಈ ಚಿತ್ರದ ಲಿರಿಕಲ್ ವಿಡಿಯೋ ಟ್ರೈಲರ್ ಬಿಡುಗಡೆಯಾಗಿದೆ.

 Sharesee more..

ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ : ‘ಬೆಲ್ ಬಾಟಮ್’ 2ನೇ ಅತ್ಯುತ್ತಮ ಜನಪ್ರಿಯ ಚಿತ್ರ

05 Mar 2020 | 4:59 PM

ಬೆಂಗಳೂರು, ಮಾ 05 (ಯುಎನ್‍ಐ) ಹನ್ನೆರಡನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ರಿಷಬ್ ಶೆಟ್ಟಿ ಅಭಿನಯದ ‘ಬೆಲ್ ಬಾಟಮ್’ ಎರಡನೇ ಅತ್ಯುತ್ತಮ ಜನಪ್ರಿಯ ಚಿತ್ರವೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ ಕಿಕ್ ನೀಡುವ ಪಂಚಿಂಗ್ ಡೈಲಾಗ್‌ಗಳ ಮೂಲಕ ರಾಬರಿ ಪತ್ತೇದಾರಿಕೆಯ ಪ್ರಸಂಗ ಹೊಂದಿರುವ ಚಿತ್ರವನ್ನು ಕನ್ನಡ ಚಿತ್ರ ರಸಿಕರ ಮೆಚ್ಚುಗೆ ಪಡೆಯುವಲ್ಲಿಯೂ ಯಶಸ್ವಿಯಾಗಿತ್ತು.

 Sharesee more..

‘ಫಿಲಂ ಸಿಟಿ ನಿರ್ಮಾಣ’ ಉತ್ತಮ ನಿರ್ಧಾರ: ನಾಗಾಭರಣ

05 Mar 2020 | 4:44 PM

ಬೆಂಗಳೂರು, ಮಾ 05 (ಯುಎನ್‍ಐ) ರಾಜ್ಯದಲ್ಲಿ ಫಿಲಂ ಸಿಟಿ ನಿರ್ಮಾಣವಾಗಬೇಕೆಂಬ ಕನ್ನಡ ಚಿತ್ರರಂಗದ ಬೇಡಿಕೆಗೆ ಮತ್ತೆ ಗರಿ ಮೂಡಿದೆ 500 ಕೋಟಿ ರೂಪಾಯಿ ವೆಚ್ಚದಲ್ಲಿ ಖಾಸಗಿ ಸಹಭಾಗಿತ್ವದೊಡನೆ ಫಿಲ್ಮ್ ಸಿಟಿ ನಿರ್ಮಾಣ ಮಾಡುವುದಾಗಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಇಂದು ಮಂಡಿಸಿದ ರಾಜ್ಯ ಬಜೆಟ್ ನಲ್ಲಿ ಘೋಷಿಸಿದ್ದಾರೆ ಈ ಕುರಿತು ಹಿರಿಯ ನಟ, ನಿರ್ದೇಶಕ ಟಿ ಎಸ್‍ ನಾಗಾಭರಣ, ಸರ್ಕಾರದ ನಿರ್ಮಾಣ ಒಳ್ಳೆಯದು ಇದು ಬಹುದಿನಗಳ ಬೇಡಿಕೆಯಾಗಿದ್ದು, ನೀಡಿರುವ ಭರವಸೆ ಬೇಗನೆ ಕಾರ್ಯಗತವಾಗಲಿ ಎಂದು ಯುಎನ್‍ಐ ಸುದ್ದಿ ಸಂಸ್ಥೆಗೆ ಪ್ರತಿಕ್ರಿಯಿಸಿದ್ದಾರೆ ಫಿಲಂ ಸಿಟಿ ನಿರ್ಮಾಣದ ಕುರಿತು ಎಲ್ಲ ಮುಖ್ಯಮಂತ್ರಿಗಳೂ ತಮ್ಮ ಅವಧಿಯಲ್ಲಿ ಪ್ರಸ್ತಾಪಿಸಿ ಭರವಸೆ ನೀಡುತ್ತಲೇ ಇದ್ದಾರೆ ಈ ಬಾರಿಯಾದರೂ ಅದು ಅನುಷ್ಠಾನಗೊಳ್ಳಲಿ ಎಂದು ಹೇಳಿದ್ದಾರೆ.

 Sharesee more..

ರಾಜ್ಯ ಬಜೆಟ್‍ 2020 : ಸ್ಯಾಂಡಲ್ ವುಡ್ ಗೆ ಸಿಹಿ

05 Mar 2020 | 4:28 PM

ಬೆಂಗಳೂರು, ಮಾ 05 (ಯುಎನ್‍ಐ) ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಮಂಡಿಸಿರುವ 2020ರ ರಾಜ್ಯ ಬಜೆಟ್ ನಲ್ಲಿ 500 ಕೋಟಿ ರೂ ಗಳ ವೆಚ್ಚದಲ್ಲಿ ಖಾಸಗಿ ಸಹಭಾಗಿತ್ವದೊಂದಿಗೆ ಬೆಂಗಳೂರಿನಲ್ಲಿ ಜಾಗತಿಕ ಗುಣಮಟ್ಟದ ಫಿಲಂ ಸಿಟಿ ನಿರ್ಮಾಣ ಮಾಡುವುದಾಗಿ ಘೋಷಿಸುವ ಮೂಲಕ ಚಂದನವನಕ್ಕೆ ಸಿಹಿ ಸುದ್ದಿ ನೀಡಿದ್ದಾರೆ.

 Sharesee more..

‘ಅಂಬಾನಿಪುತ್ರ’

05 Mar 2020 | 10:58 AM

ಬೆಂಗಳೂರು, ಮಾ 05 (ಯುಎನ್‍ಐ) ವರುಣ್ ಗೌಡ, ವೆಂಕಟೇಶ್ ಕೆ ಎನ್ ನಿರ್ಮಿಸಿ, ದೊರೆ ರಾಜ್ ತೇಜ ಕಥೆ, ಚಿತ್ರಕಥೆ, ಸಂಭಾಷಣೆಯ ಜತೆಗೆ ನಿರ್ದೇಶನದೊಡನೆ ‘ಅಂಬಾನಿಪುತ್ರ’ಸಿದ್ಧವಾಗುತ್ತಿದೆ ಸುಪ್ರೀಂ, ಪ್ರೀತಮ್, ಅಶಾ ಭಂಡಾರಿ, ಚಂದ್ರಿಕಾ ಗೌಡ, ಮಿಮಿಕ್ರಿ ಗೋಪಿ ಮೊದಲಾದವರ ತಾರಾಬಳಗವಿದ್ದು ಅಭಿಜಿತ್ ಜಿ ರಾಯ್ ಸಂಗೀತ ನೀಡಲಿದ್ದಾರೆ ಸುಪ್ರೀಂ ಎಂಬ ಯುವಕ ಈ ಚಿತ್ರದಿಂದ ನಾಯಕ ನಟ ನಾಗಿ ಪಾದಾರ್ಪಣೆ ಮಾಡುತಿದಾರೆ ಹಳ್ಳಿಯ ಹಿನ್ನೆಲೆಯ ಕಥೆ ಜೊತೆ ಸಿಟಿ ವರ್ಷನ್ ಕೂಡ ಇರಲಿದೆಯಂತೆ ಮಿಮಿಕ್ರಿ ಗೋಪಿ ಅವರದ್ದು ಮದುವೆ ಆಗಿರದ ವಯಸ್ಸಿನ ಹುಡುಗರ ಜತೆ ಸೇರಿ ತರ್ಲೆ ಮಾಡುವ ಪಾತ್ರವಂತೆ.

 Sharesee more..

‘ನಾನೊಂಥರ’ 7ರಂದು ಧ್ವನಿಸುರುಳಿ ಬಿಡುಗಡೆ

05 Mar 2020 | 10:44 AM

ಬೆಂಗಳೂರು, ಮಾ 05 (ಯುಎನ್‍ಐ) ತಂದೆ ಮಗನ ಪ್ರೀತಿಯನ್ನು ಸಾರುವುದರ ಜತೆಗೆ ಕುಡುಕನೊಬ್ಬ ಲವ್ವಲ್ಲಿ ಬಿದ್ದಾಗ ಏನಾಗುತ್ತೆ ಎಂಬ ಕಥಾಹಂದರವಿರುವ ‘ನಾನೊಂಥರ’ ಚಿತ್ರೀಕರಣ ಪೂರ್ಣಗೊಂಡಿದ್ದು, ಇದೇ 7ರಂದು ಧ್ವನಿಸುರುಳಿ ಬಿಡುಗಡೆಗೊಳಿಸಲು ಚಿತ್ರತಂಡ ಸಿದ್ಧಗೊಂಡಿದೆ ನಿರ್ಮಾಪಕ ಜಾಕ್ಲಿನ್ ಫ್ರಾನ್ಸೀಶ್ ಚಿತ್ರಕ್ಕೆ ಬಂಡವಾಳ ಹೂಡಿದ್ದು, ರಮೇಶ್ ಕಗ್ಗಲ್ ನಿರ್ದೇಶನವಿದೆ ಮೂಲತಃ ವೈದ್ಯ ರಾದ ತಾರಕ್ ಶೇಖರಪ್ಪ ನಾಯಕ ನಟನಾಗಿದ್ದು, ಇದು ಅವರಿಗೆ ಮೂರನೇ ಸಿನಿಮಾ ಮದ್ಯಪಾನದ ಅಭ್ಯಾಸ ಮಾಡಿಕೊಂಡಿರೋ ನಾಯಕ ಪ್ರೀತಿಯ ಬಲೆಯಲ್ಲಿ ಸಿಲುಕೋದು ಹೇಗೆ, ಆತ ಒಳ್ಳೆಯವನೋ, ಕೆಟ್ಟವನೋ ಅನ್ನೋದನ್ನ ಚಿತ್ರದಲ್ಲೇ ನೋಡಬೇಕು ‘ನಾನೊಂಥರ’ ಶೀರ್ಷಿಕೆಯೇ ಹೇಳೋ ಹಾಗೆ ವಿಭಿನ್ನವಾಗಿದೆ ಎಂದು ತಾರಕ್ ಹೇಳಿಕೊಂಡರು ಹಿರಿಯ ನಟ ದೇವರಾಜ್ ನಾಯಕನ ತಂದೆ ಪಾತ್ರದಲ್ಲಿ ಕಾಣಿಸಿಕೊಂಡಿದ್ದರೆ, ನಾಯಕನ ಸೋದರನ ಪಾತ್ರದಲ್ಲಿ ನಿರ್ಮಾಪಕರ ಪುತ್ರ ಜಾಯ್ ಸನ್ ಅಭಿನಯಿಸಿದ್ದಾರೆ ನಾಯಕಿಯಾಗಿ ರಕ್ಷಿಕ ಪಾತ್ರ ಕೂಡ ಉತ್ತಮವಾಗಿದೆ ಎಂದಿರುವ ಚಿತ್ರತಂಡ, ಸದ್ಯದಲ್ಲೇ ಟೀಸರ್ ಹಾಗೂ ಟ್ರೇಲರ್ ಅನ್ನು ಬಿಡುಗಡೆ ಮಾಡಲಿದೆಯಂತೆ.

 Sharesee more..
ಈ ವಾರ ತೆರೆಗೆ ‘ಒಂದು ಶಿಕಾರಿಯ ಕಥೆ’

ಈ ವಾರ ತೆರೆಗೆ ‘ಒಂದು ಶಿಕಾರಿಯ ಕಥೆ’

03 Mar 2020 | 10:01 PM

ಬೆಂಗಳೂರು, ಫೆ 03 (ಯುಎನ್‍ಐ) ಶೆಟ್ಟೀಸ್ ಫಿಲಂ ಫ಼್ಯಾಕ್ಟರಿ ಲಾಂಛನದಲ್ಲಿ ರಾಜೀವ್ ಶೆಟ್ಟಿ ಹಾಗೂ ಸಚಿನ್ ಶೆಟ್ಟಿ ನಿರ್ಮಿಸಿರುವ ‘ಒಂದು ಶಿಕಾರಿಯ ಕಥೆ‘ ಚಿತ್ರ ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.

 Sharesee more..
ಇಂದು ‘ಮಂಗಳವಾರ ರಜಾದಿನ’ ಟ್ರೇಲರ್ ಬಿಡುಗಡೆ

ಇಂದು ‘ಮಂಗಳವಾರ ರಜಾದಿನ’ ಟ್ರೇಲರ್ ಬಿಡುಗಡೆ

03 Mar 2020 | 9:57 PM

ಬೆಂಗಳೂರು, ಮಾ 03 (ಯುಎನ್‍ಐ) ತ್ರಿವರ್ಗ ಫಿಲಂಸ್ ಲಾಂಛನದಲ್ಲಿ ನಿರ್ಮಾಣವಾಗಿರುವ ‘ಮಂಗಳವಾರ ರಜಾದಿನ‘ ಚಿತ್ರದ ಟ್ರೇಲರ್ ಯೂಟ್ಯೂಬ್‌ನಲ್ಲಿ ಇಂದು ಬಿಡುಗಡೆಯಾಗಲಿದೆ ಇದೇ 10ರಂದು ಆಡಿಯೋ ರಿಲೀಸ್ ಆಗಲಿದ್ದು, ಮಾಸಾಂತ್ಯಕ್ಕೆ ಚಿತ್ರ ತೆರೆಗೆ ಬರಲಿದೆ

 Sharesee more..
ಡೈರೆಕ್ಟರ್ಸ್ ಫಿಲಂ ಬಜಾರ್ ಆರಂಭ

ಡೈರೆಕ್ಟರ್ಸ್ ಫಿಲಂ ಬಜಾರ್ ಆರಂಭ

03 Mar 2020 | 9:51 PM

ಬೆಂಗಳೂರು, ಮಾ 03(ಯುಎನ್ಐ) ಕನ್ನಡ ಚಲನಚಿತ್ರ ರಂಗಕ್ಕೆ ವಿಶ್ವಮಾರುಕಟ್ಟೆ ಕಲ್ಪಿಸುವ ನಿಟ್ಟಿನಲ್ಲಿ ಮೊದಲ ಬಾರಿಗೆ 'ಡೈರೆಕ್ಟರ್ಸ್ ಫಿಲಂ ಬಜಾರ್ 2020' ಆರಂಭವಾಗಿದೆ

 Sharesee more..

ಬೆಂಗಳೂರು ಸಿನಿಮೋತ್ಸವದಲ್ಲಿ ಅನಂತನಾಗ್ ಚಿತ್ರಗಳ ಸುಗ್ಗಿ

03 Mar 2020 | 9:24 PM

ಬೆಂಗಳೂರು, ಮಾ 3(ಯುಎನ್‌ಐ) ಯಾವುದೇ ಪಾತ್ರಕ್ಕೂ ಜೀವ ತುಂಬಬಲ್ಲ ಲವಲವಿಕೆಯ ನಟ ಅನಂತನಾಗ್.

 Sharesee more..
ಏಪ್ರಿಲ್‌ ಗೆ ‘ಅರ್ಜುನ್ ಗೌಡ’

ಏಪ್ರಿಲ್‌ ಗೆ ‘ಅರ್ಜುನ್ ಗೌಡ’

03 Mar 2020 | 7:10 PM

ಬೆಂಗಳೂರು, ಮಾ 03 (ಯುಎನ್‍ಐ) ನಿರ್ಮಾಪಕ ರಾಮು ನಿರ್ಮಾಣದ ‘ಅರ್ಜುನ್ ಗೌಡ‘ ಚಿತ್ರದ ಚಿತ್ರೀಕರಣ ಮುಕ್ತಾಯಾವಾಗಿದೆ ನಾಯಕ ಪ್ರಜ್ವಲ್ ದೇವರಾಜ್ ಹಾಗೂ ಪ್ರಿಯಾಂಕ ಅಭಿನಯದ ಸನ್ನಿವೇಶವೊಂದನ್ನು ಅರುಣ್ ಸಿನಿ ಸರ್ವಿಸ್‌ನಲ್ಲಿ ಚಿತ್ರಿಸಿಕೊಳ್ಳುವುದರೊಂದಿಗೆ ಚಿತ್ರೀಕರಣ ಸಮಾಪ್ತಿಯಾಗಿ ಕುಂಬಳಕಾಯಿ ಒಡೆಯಲಾಯಿತು ಎಂದು ನಿರ್ದೇಶಕರು ತಿಳಿಸಿದ್ದಾರೆ

 Sharesee more..
ಓಲ್ಡ್ ಮಾಂಕ್’ ಚಿತ್ರದಲ್ಲಿ ಎಸ್ ನಾರಾಯಣ್

ಓಲ್ಡ್ ಮಾಂಕ್’ ಚಿತ್ರದಲ್ಲಿ ಎಸ್ ನಾರಾಯಣ್

03 Mar 2020 | 7:05 PM

ಬೆಂಗಳೂರು, ಮಾ 03 (ಯುಎನ್‍ಐ) ಶ್ರೀನಿವಾಸ ಕಲ್ಯಾಣ ಹಾಗೂ ಬೀರ್‌ಬಲ್ ಚಿತ್ರದ ನಿರ್ದೇಶಕ ಹಾಗೂ ನಾಯಕ ಎಂ ಜಿ ಶ್ರೀನಿ ನಾಯಕನಾಗಿ ನಟಿಸಿ, ನಿರ್ದೇಶಿಸುತ್ತಿರುವ ‘ಓಲ್ಡ್ ಮಾಂಕ್‘ ಚಿತ್ರದಲ್ಲಿ ಖ್ಯಾತ ನಿರ್ದೇಶಕ ಎಸ್ ನಾರಾಯಣ್ ಅಭಿನಯಿಸಿದ್ದಾರೆ

 Sharesee more..