Tuesday, Nov 12 2019 | Time 03:54 Hrs(IST)
Entertainment

‘ಕೃಷ್ಣ ಟಾಕೀಸ್’ನಲ್ಲಿ ’ನೈಟಿ ಮಾತ್ರ ಹಾಕೋಬೇಡ’ ಐಟಂ ಸಾಂಗ್

28 Oct 2019 | 5:00 PM

ಬೆಂಗಳೂರು, ಅ ೨೮ (ಯುಎನ್‌ಐ) ಗೋಕುಲ ಎಂಟರ್ ಟೈನರ್ ಲಾಂಛನದಲ್ಲಿ ಗೋವಿಂದರಾಜು ಎ ಎಚ್ ನಿರ್ಮಿಸುತ್ತಿರುವ, ಅಜಯ್ ರಾವ್ ನಾಯಕರಾಗಿ ನಟಿಸುತ್ತಿರುವ ‘ಕೃಷ್ಣ ಟಾಕೀಸ್‘ ಚಿತ್ರಕ್ಕಾಗಿ ಐಟಂ ಸಾಂಗ್ ನ ಚಿತ್ರೀಕರಣ ನಡೆಸಲಾಗಿದೆಅಭಿಷೇಕ್ ಹಾಗೂ ಪ್ರಮೋದ್ ಮರವಂತೆ ಬರೆದಿರುವ ‘ನೈಟಿ ಮಾತ್ರ ಹಾಕೋಬೇಡ ಮೇನಕ.

 Sharesee more..

ಕನ್ನಡ ರಾಜ್ಯೋತ್ಸವಕ್ಕೆ `ಒಡೆಯ’ ಟೀಸರ್

28 Oct 2019 | 4:52 PM

ಬೆಂಗಳೂರು, ಅ ೨೮ (ಯುಎನ್‌ಐ) ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ’ಒಡೆಯ’ ಟೀಸರ್ ಕನ್ನಡ ರಾಜ್ಯೋತ್ಸವದಂದು ಬಿಡುಗಡೆಯಾಗಲಿದೆಸಂದೇಶ್ ನಾಗರಾಜ್ ಅರ್ಪಿಸುವ, ಸಂದೇಶ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ಎನ್ ಸಂದೇಶ್ ನಿರ್ಮಿಸುತ್ತಿರುವ, ‘ಒಡೆಯ’ ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದ್ದು, ಡಿಸಂಬರ್‌ನಲ್ಲಿ ತೆರೆಗೆ ಬರಲಿದೆ.

 Sharesee more..

ಎಲ್ಲರ ಬಾಳಲ್ಲಿ ಹೊಸ ಬೆಳಕು ಮೂಡಲಿ: ದೀಪಾವಳಿ ಹಬ್ಬಕ್ಕೆ ದಚ್ಚು ಹಾರೈಕೆ

26 Oct 2019 | 8:17 PM

ಬೆಂಗಳೂರು, ಅ ೨೬ (ಯುಎನ್‌ಐ) ಹೊರಗಿನ ಹಾಗೂ ಒಳಗಿನ ಅಂಧಕಾರ ನಿವಾರಿಸುವ ದೀಪಾವಳಿ ಹಬ್ಬಕ್ಕೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ತಮ್ಮ ಅಭಿಮಾನಿಗಳಿಗೆ ಶುಭ ಕೋರಿದ್ದಾರೆಬೆಳಕಿನ ಹಬ್ಬ ದೀಪಾವಳಿಯ ಹಾರ್ದಿಕ ಶುಭಾಶಯಗಳು ಈ ಹಬ್ಬವು ನಿಮ್ಮ ಬಾಳಿಗೆ ಮತ್ತಷ್ಟು ಹೊಸ ಬೆಳಕನ್ನು ತರಲೆಂದು ಆಶಿಸುತ್ತೇನೆ ಎಂದು ಟ್ವೀಟ್ ಮಾಡಿದ್ದಾರೆ.

 Sharesee more..

ಮತ್ತೆ ಪೌರಾಣಿಕ ಪಾತ್ರದಲ್ಲಿ ಮಿಂಚಲಿದ್ದಾರೆ ದೀಪಿಕಾ ಪಡುಕೋಣೆ

25 Oct 2019 | 12:49 PM

ಮುಂಬೈ, ಅ 25 (ಯುಎನ್ಐ) ಪೌರಾಣಿಕ ಹಿನ್ನೆಲೆಯ ‘ಮಹಾಭಾರತ’ ಬಿಗ್ ಬಜೆಟ್ ಸಿನಿಮಾದಲ್ಲಿ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ದ್ರೌಪದಿಯ ಪಾತ್ರ ನಿಭಾಯಿಸಲಿದ್ದಾರೆ.

 Sharesee more..

ಮುದ್ದೆ ಉಂಡವರ `ಆನೆಬಲ’

24 Oct 2019 | 10:22 PM

ಬೆಂಗಳೂರು, ಅ ೨೪ (ಯುಎನ್‌ಐ) ಗ್ರಾಮೀಣ ಸೊಗಡಿನ, ಅದರಲ್ಲೂ ವಿಶೇಷವಾಗಿ ಮಂಡ್ಯ ನೆಲದ ಕಥಾಹಂದರದ ಚಿತ್ರ ’ಆನೆಬಲ’ ಧ್ವನಿಸಾಂದ್ರಿಕೆ ಬಿಡುಗಡೆಯಾಗಿದೆರಾಗಿ ಮುದ್ದೆಯ ಮಹಿಮೆ ಸಾರುವ ’ಮುದ್ದೆ ಮುದ್ದೆ ರಾಗಿ ಮುದ್ದೆ, ನಿದ್ದೆ ನಿದ್ದೆ ತಂಪು ನಿದ್ದೆ’, ’ಮಳವಳ್ಳಿ ಜಾತ್ರೇಲಿ’ ಹಾಡುಗಳ ಸಾಹಿತ್ಯ, ಸಂಗೀತ ಕೇಳುಗರ ಗಮನ ಸೆಳೆಯುತ್ತದೆ ಮೇಕಿಂಗ್ ಕೂಡ ಸೊಗಸಾಗಿ ಮೂಡಿಬಂದಿದೆ ನಾಯಕ ನಟ ಸಾಗರ್ ದೇಸಿ ಸ್ಟೆಪ್ಸ್ ಸಖತ್ತಾಗಿದೆಜನತಾ ಟಾಕೀಸ್ ಅಡಿಯಲ್ಲಿ ನಿರ್ಮಾಣವಾಗಿರುವ ಚಿತ್ರಕ್ಕೆ ಎ ವಿ ವೇಣುಗೋಪಾಲ್ ಅಡಕಿಮಾರನಹಳ್ಳಿ ಹಾಗೂ ಎಮ್ ಎಸ್ ರಘುನಂದನ್ ಬಂಡವಾಳ ಹೂಡಿದ್ದಾರೆ ಸೂನಗಹಳ್ಳಿ ರಾಜು ಕತೆ, ಚಿತ್ರಕತೆ, ಸಂಭಾಷಣೆ ಹಾಗೂ ನಿರ್ದೇಶನವಿದೆಚಿತ್ರದುದ್ದಕ್ಕೂ ರಾಗಿ ಹಾಗೂ ರಾಗಿ ಮುದ್ದೆ ಪ್ರಮುಖ ಪಾತ್ರ ವಹಿಸುತ್ತದೆ ಇದುವರೆಗೂ ಈ ವಸ್ತುವಿಷಯದಡಿ ಯಾವುದೇ ಚಿತ್ರ ಮೂಡಿಬಂದಿಲ್ಲ ಜತೆಗೆ ಜನಪದ ಸಂಸ್ಕೇತಿ, ಸೋಬಾನೆ ಪದಗಳ ಬಳಕೆ, ಹಳ್ಳಿಯ ಸೊಬಗನ್ನು ಅತ್ಯದ್ಭುತವಾಗಿ ಚಿತ್ರಿಸಲಾಗಿದೆ ಎಂದು ನಿರ್ದೇಶಕ ಸೂನಗಹಳ್ಳಿ ರಾಜು ತಿಳಿಸಿದ್ದಾರೆಹಳ್ಳಿಯ ಕೆಲಸಗಳಿಗೆ ಕೈ ಜೋಡಿಸುವ ಯುವಪಡೆ, ಓದಿನ ಜತೆಗೆ ಅವರ ತುಂಟಾಟ, ತಮಾಷೆಗಳನ್ನು ಮಂಡ್ಯ ನೆಲದ ಭಾಷೆಯಲ್ಲಿ ಹಾಸ್ಯಮಯವಾಗಿ ಹೆಣೆಯಲಾಗಿದೆ ೧೨೦ಕ್ಕೂ ಹೆಚ್ಚುಯ ಕಲಾವಿದರು ಅಭಿನಯಿಸಿದ್ದಾರೆ ೧೦೨ ವರ್ಷ ವಯಸ್ಸಿನ ವಳಗೆರೆಹಳ್ಳಿ ಗೌರಮ್ಮ ಕೂಡ ಪಾತ್ರವೊಂದಕ್ಕೆ ಜೀವ ತುಂಬಿರುವುದಲ್ಲದೆ ಸ್ವತಃ ಡಬ್ಬಿಂಗ್ ಮಾಡಿದ್ದಾರೆ ಚಿತ್ರದಲ್ಲಿ ನೈಜತೆ ಮತ್ತು ಸಹಜತೆ ಢಾಳಾಗಿದೆ ಎಂದಿದ್ದಾರೆ’ಮುದ್ದೆ ಮುದ್ದೆ’ ಹಾಡಿಗೆ ಡಾ ನಾಗೇಂದ್ರ ಪ್ರಸಾದ್ ಸಾಹಿತ್ಯ ಒದಗಿಸಿದ್ದರೆ, ’ಮಳವಳ್ಳಿ ಜಾತ್ರೇಲಿ ತುಂಡ್ ಹೈಕ್ಳಾ ದರ್ಬಾರು’ ಹಾಡನ್ನು ನಿರ್ದೇಶಕ ಸೂನಗಹಳ್ಳಿ ರಾಜು ಅವರೇ ಬರೆದಿದ್ದಾರೆನಿರ್ಮಾಪಕ ಎ ವಿ ವೇಣುಗೋಪಾಲ್, ನಾಟಿ ಸೈಲ್ ಕತೆ ಮತ್ತು ನೇರ ನಿರೂಪಣೆಯ ಕತೆಯನ್ನು ಕೇಳಿ, ಇಷ್ಟಪಟ್ಟು ಬಂಡವಾಳ ಹೂಡಿದ್ದೇವೆ ಚಿತ್ರೀಕರಣ ಮುಕ್ತಾಯವಾಗಿದ್ದು, ಡಿಸೆಂಬರ್ ಗೆ ತೆರೆಗೆ ತರುವ ಪ್ರಯತ್ನ ನಡೆದಿದೆ ಎಂದು ಹೇಳಿದ್ದಾರೆ’ಆನೆಬಲ’ ಚಿತ್ರದ ತಾರಾಗಣದಲ್ಲಿ ಸಾಗರ್, ರಕ್ಷಿತ, ಮಲ್ಲರಾಜು, ಚಿರಂಜೀವಿ, ಹರೀಶ್ ಶೆಟ್ಟಿ, ಮುತ್ತುರಾಜು, ಕೀಲಾರ ಉದಯ್, ಶಂಭೂಗೌಡ, ಸಿದ್ದು, ರೂಪ, ಸುಮಾ, ಕಾಳೇನಹಳ್ಳಿಕೆಂಚೇಗೌಡ, ಲಂಕೇಶ್ ಸೇರಿದಂತೆ ೧೨೦ಕ್ಕೂ ಹೆಚ್ಚು ಕಲಾವಿದರಿದ್ದಾರೆ.

 Sharesee more..

ಥಾಮಸ್ ಕುಕ್ ಯುಕೆ ಕುಸಿತದಿಂದ ಭಾರತದಲ್ಲಿ ಯಾವುದೇ ಪರಿಣಾಮ ಉಂಟಾಗಿಲ್ಲ: ರಾಜೀವ್ ಕಾಲೆ

24 Oct 2019 | 6:53 PM

ಬೆಂಗಳೂರು, ಅ 24 (ಯುಎನ್ಐ) ಥಾಮಸ್ ಕುಕ್ ಯುಕೆ ದಿವಾಳಿಯಾಗಿದ್ದರಿಂದ ಥಾಮಸ್ ಕುಕ್ ಇಂಡಿಯಾದ ವ್ಯವಹಾರದ ಮೇಲೆ ಯಾವುದೇ ಪರಿಣಾಮ ಬೀರಿಲ್ಲ, ಏಕೆಂದರೆ ಇದು ಸಂಪೂರ್ಣವಾಗಿ ವಿಭಿನ್ನ ಘಟಕ ಮತ್ತು ಲಾಭ ಗಳಿಸುವ ಕಂಪನಿಯಾಗಿದೆ ಎಂದು ಸಂಸ್ಥೆಯ ಮುಖ್ಯಸ್ಥ ರಾಜೀವ್ ಕಾಲೆ ತಿಳಿಸಿದ್ದಾರೆ.

 Sharesee more..

ದೀಪಿಕಾ ವಸ್ತ್ರಸಂಗ್ರಹ ೨ ಗಂಟೆಗಳಲ್ಲೇ ಮಾರಾಟ!

24 Oct 2019 | 3:55 PM

ನವದೆಹಲಿ, ಅ ೨೪ (ಯುಎನ್‌ಐ) ದೀಪಾವಳಿ ಹಬ್ಬ ಹತ್ತಿರವಾಗುತ್ತಿದ್ದು, ಬಾಲಿವುಡ್‌ನ ಪ್ರಮುಖ ನಟಿ ದೀಪಿಕಾ ಪಡುಕೋಣೆ ಅಭಿಮಾನಿಗಳಿಗೆ ವಿಶೇಷ ವಿಷಯ ತಿಳಿಸಿದ್ದಾರೆ ಆಕೆಯ ಬಟ್ಟೆಗಳು ಹಾಗೂ ಹಬ್ಬದ ವಸ್ತುಗಳ ಸಂಗ್ರಹವನ್ನು ವೆಬ್ ಸೈಟ್ ನಲ್ಲಿ ಲಾಂಚ್ ಮಾಡಿದ ೨ ಗಂಟೆಗಳಲ್ಲೇ ಮಾರಾಟವಾಗಿದೆ.

 Sharesee more..

ಕಿಚ್ಚ ಸುದೀಪ್ ಇಸ್ ಬೆಸ್ಟ್, ಕ್ಲೀನ್ ಮ್ಯಾನ್: ಸಲ್ಮಾನ್ ಖಾನ್

24 Oct 2019 | 1:46 PM

ಬೆಂಗಳೂರು, ಅ ೨೩ (ಯುಎನ್‌ಐ) ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಮತ್ತು ಕನ್ನಡದ ಅಭಿನಯ ಚಕ್ರವರ್ತಿ ಅಭಿನಯದ ಬಹುನಿರೀಕ್ಷೆಯ ದಬಾಂಗ್ ೩ ಸಿನಿಮಾದ ಟ್ರೈಲರ್ ರಿಲೀಸ್ ಆಗಿದೆನಿರೀಕ್ಷೆಯಂತೆ ಟ್ರೈಲರ್ ಅದ್ಭುತವಾಗಿ ಮೂಡಿಬಂದಿದ್ದು, ಚುಲ್ ಬುಲ್ ಪಾಂಡೆಯಾಗಿ ಸಲ್ಲು ಭಾಯ್ ಅಬ್ಬರಿಸಿದ್ದಾರೆ.

 Sharesee more..

“ರಾಧೆ; ಯುವರ್ ಮೋಸ್ಟ್ ವಾಂಟೆಡ್ ಭಾಯಿ” ಚಿತ್ರ ಅವತರಣಿಕೆಯಲ್ಲ; ಸಲ್ಮಾನ್

24 Oct 2019 | 1:26 PM

ಮುಂಬೈ, ಅ 24 (ಯುಎನ್ಐ) ಬಾಲಿವುಡ್ ನಟ ಸಲ್ಮಾನ್ ಖಾನ್, ಮುಂಬರುವ ಚಿತ್ರ ‘ರಾಧೆ; ಯುವರ್ ಮೋಸ್ಟ್ ವಾಂಟೆಡ್ ಭಾಯಿ’ ಚಿತ್ರ ತಮ್ಮ ಹಿಂದಿನ ವಾಂಟೆಡ್ ಚಿತ್ರದ ಅವತರಣಿಕೆಯಲ್ಲ ಎಂದು ಸ್ಪಷ್ಟಪಡಿಸಿದ್ದಾರೆ ಇತ್ತೀಚೆಗಷ್ಟೇ ಸಲ್ಮಾನ್, ತಮ್ಮ ಹೊಸ ಚಿತ್ರದ ಮೊದಲ ಲುಕ್ ಬಿಡುಗಡೆ ಮಾಡಿದ್ದರು.

 Sharesee more..

ಹಾರಲಿದೆ ಮತ್ತೊಂದು ’ಗಾಳಿಪಟ’

22 Oct 2019 | 5:42 PM

ಬೆಂಗಳೂರು, ಅ ೨೨(ಯುಎನ್‌ಐ) ಯೋಗರಾಜ್ ಭಟ್ ನಿರ್ದೇಶನದಲ್ಲಿ ಸಿದ್ಧವಾಗಲಿದೆ ಮತ್ತೊಂದು ಗಾಳಿಪಟ ಹೌದು, ಗಾಳಿಪಟ-೨ ಮುಂದಿನ ತಿಂಗಳಿನಿಂದ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಚಿತ್ರೀಕರಣ ಆರಂಭಿಸಲಿದೆ ಅಂದಹಾಗೆ ಗಾಳಿಪಟದಲ್ಲಿದ್ದ ಗಣೇಶ್, ದಿಗಂತ್ ಭಾಗ ೨ರಲ್ಲೂ ಇದ್ದಾರೆ ಆದರೆ ರಾಜೇಶ್ ಕೃಷ್ಣನ್ ಬದಲು ಲೂಸಿಯಾ ಪವನ್ ಅಭಿನಯಿಸಲಿದ್ದಾರೆಈ ಮೂವರ ಜೋಡಿಯಾಗಿ ವೈಭವಿ ಶಾಂಡಿಲ್ಯಾ, ಮಲಯಾಳಂ ನಟಿ ಸಂಯುಕ್ತಾ ಮೆನನ್, ಶರ್ಮಿಳಾ ಆಯ್ಕೆಯಾಗಿದ್ದಾರೆ ಖ್ಯಾತ ನಟ ಅನಂತನಾಗ್ ಪ್ರಮುಖ ಪಾತ್ರ ನಿರ್ವಹಿಸಲಿದ್ದಾರೆ.

 Sharesee more..
ಅಮಿತ್ ಶಾ ಜನ್ಮದಿನ: ಬಿಜೆಪಿ ನಾಯಕರಿಂದ ಶುಭಾಶಯ

ಅಮಿತ್ ಶಾ ಜನ್ಮದಿನ: ಬಿಜೆಪಿ ನಾಯಕರಿಂದ ಶುಭಾಶಯ

22 Oct 2019 | 3:10 PM

ನವದೆಹಲಿ, ಅ ೨೨ (ಯುಎನ್‌ಐ) ಕೇಂದ್ರ ಗೃಹ ಸಚಿವ, ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರು ಮಂಗಳವಾರ ಜನ್ಮದಿನ ಆಚರಿಸಿಕೊಂಡಿದ್ದು, ಪಕ್ಷದ ನಾಯಕರು, ಕಾರ್ಯಕರ್ತರು ಶುಭಾಶಯ ಕೋರಿದ್ದಾರೆ.

 Sharesee more..

ಬೇರೆ ಭಾಷೆ ಕಲಿಯಿರಿ, ಕನ್ನಡ ಪ್ರಧಾನವಾಗಿರಲಿ: ’ಕಾಳಿದಾಸ ಕನ್ನಡ ಮೇಷ್ಟ್ರು’ ಜಗ್ಗೇಶ್ ಕಳಕಳಿ

22 Oct 2019 | 1:04 PM

ಬೆಂಗಳೂರು, ಅ ೨೨ (ಯುಎನ್‌ಐ) ಮೇರುನಟ ಡಾ ರಾಜ್ ಕುಮಾರ್ ಹೇಳಿರುವಂತೆ, ’ಕಲಿಯೋಕೆ ಕೋಟಿ ಭಾಷೆ, ಆಡೋಕೆ ಕನ್ನಡ ಒಂದೇ ಭಾಷೆ’ ಹೀಗಾಗಿ ಯಾವ ಭಾಷೆ ಕಲಿತರೂ ತಪ್ಪಿಲ್ಲ ಆದರೆ ಕನ್ನಡ ಪ್ರಧಾನವಾಗಿರಲಿ ಎಂದು ನವರಸನಾಯಕ ಜಗ್ಗೇಶ್ ಹೇಳಿದ್ದಾರೆ’ಕಾಳಿದಾಸ ಕನ್ನಡ ಮೇಷ್ಟ್ರು’ ಚಿತ್ರದ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಪ್ರಸ್ತಾಪಿಸಿದ ಜಗ್ಗೇಶ್, ನನ್ನ ಪತ್ನಿ ಮಾತೃಭಾಷೆ ಬೇರೆ, ಸೊಸೆಯೂ ವಿದೇಶಿ ಆದರೆ ಇಂದು ಇಬ್ಬರೂ ಸ್ಪಷ್ಟವಾಗಿ ಕನ್ನಡ ಮಾತನಾಡುತ್ತಾರೆ ಹೀಗೆ ಪ್ರತಿಯೊಬ್ಬರೂ ತಮ್ಮ ಸುತ್ತಲಿನ ನಾಲ್ಕು ಜನರು ಕನ್ನಡ ಕಲಿಯುವಂತೆ ಪ್ರೇರೇಪಿಸಿದರೆ ಭಾಷೆ ಬೆಳೆಯಲು ಅನುಕೂಲವಾಗುತ್ತದೆ ಎಂದಿದ್ದಾರೆಈ ಮೊದಲು ಮರ್ಡರ್ ಮಿಸ್ಟರಿ ಸಿನಿಮಾ ಮಾಡುವ ಬಗ್ಗೆ ಚಿಂತನೆ ಇತ್ತು ಬಳಿಕ ಕಥೆ ಬದಲಾಯಿತು ಕಾಳಿದಾಸನ ಕಥೆ ಕೇಳಿ ಮೆಚ್ಚುಗೆಯಾಯಿತು ಅಚ್ಚರಿಯೂ ಆಯಿತು.

 Sharesee more..

ಕನ್ನಡ, ಮರಾಠಿ ಬೆಸೆವ `ಗಡಿನಾಡು’

22 Oct 2019 | 12:37 PM

ಬೆಂಗಳೂರು, ಅ ೨೨ (ಯುಎನ್‌ಐ) ಮಹಾರಾಷ್ಟ್ರ, ಕರ್ನಾಟಕ ಗಡಿಯಲ್ಲಿ ಭಾಷೆ, ಶಿಕ್ಷಣದ ಬಗ್ಗೆ ಕನ್ನಡಿಗರು ಅನುಭವಿಸುತ್ತಿರುವ ಸಮಸ್ಯೆಯನ್ನು ಪ್ರಧಾನವಾಗಿಟ್ಟುಕೊಂಡು ’ಗಡಿನಾಡು’ ಚಿತ್ರ ನಿರ್ಮಾಣವಾಗಿದ್ದು, ಶೀಘ್ರದಲ್ಲೇ ತೆರೆಗೆ ಬರಲಿದೆಅಕ್ಷಯ ಫಿಲ್ಮ ಮೇಕರ್ಸ್ ಅಡಿಯಲ್ಲಿ ವಸಂತ್ ಮುರಾರಿ ದಳವಾಯಿ ಬಂಡವಾಳ ಹೂಡಿದ್ದು, ನಾಗ್ ಹುಣಸೋಡು ಅವರ ಕಥೆ, ಚಿತ್ರಕಥೆ, ಸಂಭಾಷಣೆ ಹಾಗೂ ನಿರ್ದೇಶನವಿದೆ ಬೆಂಗಳೂರಿನಲ್ಲಿ ವಿದ್ಯಾಭ್ಯಾಸ ಮುಗಿಸಿ ಬೆಳಗಾವಿಗೆ ಬರುವ ನಾಯಕ, ಗಡಿ ಸಮಸ್ಯೆಗಳನ್ನು ಎದುರಿಸಲು ಸೇನೆಯೊಂದನ್ನ ಕಟ್ಟುತ್ತಾನೆಕನ್ನಡದ ಈ ಹೋರಾಟಗಾರನಿಗೆ ಮರಾಠಿಗ ನಾಯಕಿಯ ಪರಿಚಯವಾಗುತ್ತದೆ ವಿಭಿನ್ನ ಭಾಷೆ, ಸಂಸ್ಕೃತಿಯ ಈ ಪ್ರೇಮಿಗಳು ಎಲ್ಲರನ್ನೂ ಒಪ್ಪಿಸಿ ಹೇಗೆ ಒಂದಾಗುತ್ತಾರೆ, ಮರಾಠಿಗರು ಹಾಗೂ ಕನ್ನಡಿಗರ ಸಂಬಂಧ ಹೇಗೆ ಬೆಳೆಯುತ್ತದೆ ಎಂಬುದು ಚಿತ್ರದ ತಿರುಳು ಎಂದು ನಿರ್ದೇಶಕರು ತಿಳಿಸಿದ್ದಾರೆಮರಾಠಾ ಸಂಘಟನೆಗಳಿಂದ ಬೆದರಿಕೆ!ಅಕ್ಟೋಬರ್ ೧೯ರಂದು ’ಗಡಿನಾಡು’ ಚಿತ್ರಕ್ಕೆ ಮುಹೂರ್ತವಾದ ಬಳಿಕ ಕೆಲ ಮರಾಠಾ ಸಂಘಟನೆಗಳಿಂದ ಬೆದರಿಕೆ ಬಂತು ಸಚಿವರವರೆಗೂ ದೂರು ಹೋಯಿತು ಆದರೆ ರಾಜಕೀಯಕ್ಕೂ ಚಿತ್ರಕ್ಕೂ ಸಂಬಂಧವಿಲ್ಲದ ಕಾರಣ ಅದೇ ಸಚಿವರು ಪ್ರೋತ್ಸಾಹಿಸಿದರು ಎಂದು ನಿರ್ದೇಶಕರು ಮಾಹಿತಿ ನೀಡಿದ್ದಾರೆಮರಾಠಿ ಯುವತಿ ದಿಶಾ ಪಾತ್ರದಲ್ಲಿ ಸಂಚಿತಾ ಪಡುಕೋಣೆ, ನಾಯಕ ನಟನಾಗಿ ಪ್ರಭು ಸೂರ್ಯ, ಚರಣ್ ರಾಜ್, ಶೋಭರಾಜ್, ದೀಪಕ್ ಶೆಟ್ಟಿ, ರಘುರಾಜ್ ರಘು ಸೀರುಂಡೆ(ಕಾಮಿಡಿ ಕಿಲಾಡಿ) ಮಮತ, ಪುಷ್ಪ ಮೊದಲಾದವರಿದ್ದಾರೆಗೌರಿ ವೆಂಕಟೇಶ್, ರವಿ ಸುವರ್ಣ ಛಾಯಾಗ್ರಹಣ, ಸಂತೋಷ್ ನಾಯ್ಕ್, ನಾಗ ಹುಣಸೋಡು ಸಾಹಿತ್ಯ, ಥ್ರಿಲ್ಲರ್ ಮಂಜು, ಡಿಫರೆಂಟ್ ಡ್ಯಾನಿ ಸಾಹಸ ಹಾಗೂ ಧನಂಜಯ್ ಹರಿಕೃಷ್ಣ ನೃತ್ಯ ನಿರ್ದೇಶನವಿದೆ.

 Sharesee more..

’ರೈಮ್ಸ್’ ಹಾಡು, ಫೈಟ್ ಇಲ್ಲದ ಕ್ರೈಮ್ ಥ್ರಿಲ್ಲರ್ ಚಿತ್ರ

22 Oct 2019 | 12:11 PM

ಬೆಂಗಳೂರು, ಅ ೨೨ (ಯುಎನ್‌ಐ) ಕ್ರೈಮ್ ಥ್ರಿಲ್ಲರ್ ಕಥಾಹಂದರದ ನೂತನ ಚಿತ್ರ ’ರೈಮ್ಸ್’ ನಿರ್ಮಾಣವಾಗುತ್ತಿದೆ ಅರ್ಜುನ್, ಶಕ್ತಿ, ಸುಷ್ಮಾ ನಾಯರ್ ಮುಂತಾದರ ತಾರಾಗಣವಿದ್ದು, ಅಜಿತ್ ಕುಮಾರ್ ನಿರ್ದೇಶನವಿದೆಕಮರ್ಷಿಯಲೈಸ್ಡ್ ಫೈಟಿಂಗ್, ಸಾಂಗ್ಸ್ ಅಳವಡಿಸದೆ, ವಿಎಫ್‌ಎಕ್ಸ್ ಬಳಸಿ ವಿಭಿನ್ನ ರೀತಿಯಲ್ಲಿ ಚಿತ್ರ ನಿರ್ಮಿಸಲಾಗುತ್ತಿದೆ ಕಥೆಗೆ ಅನಗತ್ಯವಾಗಿದ್ದರಿಂದ ಹಾಡು, ಫೈಟ್ ಬಳಸಿಲ್ಲ ಎಂದು ನಿರ್ದೇಶಕರು ತಿಳಿಸಿದ್ದಾರೆ ಕಾಲೇಜು ದಿನಗಳಲ್ಲೇ ಅತ್ಯುತ್ತಮ ಕಿರುಚಿತ್ರಗಳನ್ನು ನಿರ್ದೇಶಿಸಿರುವ ಅಜಿತ್ ತಮಿಳಿನ ಕಿರುತೆರೆಯಲ್ಲೂ ಕಾರ್ಯನಿರ್ವಹಿಸಿ ಅನುಭವ ಪಡೆದುಕೊಂಡಿದ್ದಾರೆಚಿತ್ರ ಹಲವು ಟ್ವಿಸ್ಟ್ ಗಳಿದ್ದು, ಕುರ್ಚಿಯ ತುದಿಯಲ್ಲಿ ಕುಳಿತು ನೋಡುವಂತಿರುತ್ತದೆ ’ರೈಮ್ಸ್’ ಎಂಬ ಪದ ಇಡೀ ಚಿತ್ರವನ್ನು ಆವರಿಸಿಕೊಂಡಿರುತ್ತದೆ ಎಂದು ನಾಯಕ ನಟ ಅಜಿತ್ ಜೈರಾಜ್ ಹೇಳಿದ್ದು, ಪೊಲೀಸ್ ಪಾತ್ರ ನಿರ್ವಹಿಸುತ್ತಿರುವುದಾಗಿ ತಿಳಿಸಿದ್ದಾರೆ.

 Sharesee more..

ಕನ್ನಡ ಚಿತ್ರರಂಗದ ಪ್ರಯೋಗಕ್ಕೆ ನೆರೆ ರಾಜ್ಯಗಳು ನಡುಗಿಹೋಗಿವೆ : ಮಾಲ್ಗುಡಿ ಡೇಸ್ ಪೋಸ್ಟರ್ ಗೆ ಜಗ್ಗೇಶ್ ಮೆಚ್ಚುಗೆ

22 Oct 2019 | 11:26 AM

ಬೆಂಗಳೂರು, ಅ ೨೨ (ಯುಎನ್‌ಐ) ಕನ್ನಡ ಚಿತ್ರರಂಗ ಎಂದಿಗೂ ಮರೆಯದ ನಟ ಆಟೋರಾಜ ಶಂಕರ್ ನಾಗ್ ನಿರ್ಮಿಸಿ ಪ್ರಖ್ಯಾತವಾಗಿರುವ ಧಾರಾವಾಹಿ ’ಮಾಲ್ಗುಡಿ ಡೇಸ್’ ಇದೀಗ ಅದೇ ಶೀರ್ಷಿಕೆಯ ಚಿತ್ರ ವಿಜಯ್ ರಾಘವೇಂದ್ರ ಅವರ ಅಭಿನಯದಲ್ಲಿ ನಿರ್ಮಾಣವಗುತ್ತಿದ್ದು, ಪೋಸ್ಟರ್ ಬಿಡುಗಡೆಯಾಗಿದೆ ಕಿಶೋರ್ ಮೂಡಬಿದ್ರಿ ಕಥೆ, ಚಿತ್ರಕಥೆ, ಸಂಭಾಷಣೆಯೊಂದಿಗೆ ನಿರ್ದೇಶನದ ಹೊಣೆ ಹೊತ್ತಿದ್ದಾರೆ ನವರಸನಾಯಕ ಜಗ್ಗೇಶ್ ಪೋಸ್ಟರ್ ಬಿಡುಗಡೆಗೊಳಿಸಿದ್ದು, ವಯೋವೃದ್ಧನ ಶೇಡ್ ನಲ್ಲಿರುವ ವಿಜಯ್ ರಾಘವೇಂದ್ರ ನೆನಪಿನ ಬುತ್ತಿಯನ್ನು ಅವಲೋಕಿಸುವಂತಿರುವ ಈ ಮೊದಲ ಪೋಸ್ಟರ್ ತೀವ್ರ ಕುತೂಹಲ ಮೂಡಿಸಿದೆ ಪೋಸ್ಟರ್ ಅನ್ನು ಮೆಚ್ಚಿಕೊಂಡಿರುವ ಜಗ್ಗೇಶ್, ಪ್ರತಿ ವರ್ಷ ಕನ್ನಡ ಚಿತ್ರರಂಗದಲ್ಲಿ ನೂತನ ಪ್ರಯೋಗಗಳು ನಡೆಯುತ್ತಿದ್ದು, ಈ ಪ್ರಯತ್ನ ಕಂಡ ನೆರೆ ರಾಜ್ಯಗಳು ನಡುಗಿಹೋಗಿವೆ ರಾಷ್ಟ್ರಮಟ್ಟದಲ್ಲಿ ಕನ್ನಡ ಚಿತ್ರಗಳು ಹೆಸರು ಮಾಡುತ್ತಿವೆ ’ಮಾಲ್ಗುಡಿ ಡೇಸ್’ ಕೂಡ ಯಶಸ್ವಿಯಾಗಲಿ ಪ್ರಶಸ್ತಿಗಳನ್ನು ಬಾಚಿಕೊಳ್ಳಲಿ ಎಂದರು.

 Sharesee more..