Tuesday, Nov 12 2019 | Time 04:07 Hrs(IST)
Entertainment

ನವೆಂಬರ್ ೧ಕ್ಕೆ ಲಗ್ಗೆಯಿಡಲಿದೆ ದಂಡುಪಾಳ್ಯಂ-೪

18 Oct 2019 | 7:05 PM

ಬೆಂಗಳೂರು, ಅ ೧೮ (ಯುಎನ್‌ಐ) ಕ್ರೈಮ್ ಕಥಾಹಂದರದ ದಂಡುಪಾಳ್ಯಂ-೪ ಮುಂದಿನ ತಿಂಗಳು ನವೆಂಬರ್ ೧ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ ಚಿತ್ರಕ್ಕೆ ಕೆ ಟಿ ನಾಯಕ್ ನಿರ್ದೇಶನವಿದ್ದು, ವೆಂಕಟ್ ಬಂಡವಾಳ ಹೂಡಿದ್ದಾರೆ ಗುರುವಾರ ಚಿತ್ರದ ಆಡಿಯೋ ಬಿಡುಗಡೆಯಾಗಿದ್ದು, ನಟ ಧ್ರುವ ಸರ್ಜಾ, ಸಂಗೀತ ನಿರ್ದೇಶಕ ಅರ್ಜುನ್ ಜನ್ಯ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಮಾಜಿ ಕಾರ್ಯದರ್ಶಿ ಭಾ ಮಾ ಹರೀಶ್, ಭಾ ಮಾ ಗಿರೀಶ್ ಮೊದಲಾದವರು ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ ಈವರೆಗೂ ದಂಡುಪಾಳ್ಯ ಚಿತ್ರದ ೩ ಭಾಗಗಳು ತೆರೆಕಂಡಿವೆ ನಾಲ್ಕನೆಯ ಭಾಗಕ್ಕೆ ದಂಡುಪಾಳ್ಯಂ ಎಂಬ ಶೀರ್ಷಿಕೆಯಿದೆಕಾನೂನು ಎಷ್ಟೇ ಬಲವಾಗಿದ್ದರೂ, ಅಪರಾಧಗಳು ನಿಲ್ಲದು ಅಂತೆಯೇ ಅಪರಾಧಿ ಎಷ್ಟೇ ಚತುರಮತಿಯಾಗಿದ್ದರೂ, ಕಾನೂನಿನಿಂದ ತಪ್ಪಿಸಿಕೊಳ್ಳಲಾಗದು ಇದನ್ನೇ ದಂಡುಪಾಳ್ಯಂನಲ್ಲಿ ತೋರಿಸಲಾಗಿದೆ.

 Sharesee more..

ಒಂದೇ ಇಂಡಸ್ಟ್ರಿಯಲ್ಲಿ ಇಬ್ಬರು ಆಂಗ್ರಿ ಮ್ಯಾನ್ ಇರಲು ಹೇಗೆ ಸಾಧ್ಯ ಎಂದಿದ್ದೇಕೆ ಕಿಚ್ಚ?

18 Oct 2019 | 6:15 PM

ಬೆಂಗಳೂರು, ಅ ೧೮ (ಯುಎನ್‌ಐ) ಕಂಚಿನ ಕಂಠ ಹಾಗೂ ಅಭಿನಯದ ಮೂಲಕ ಸ್ಯಾಂಡಲ್ ವುಡ್ ನಲ್ಲಿ ಗುರುತಿಸಿಕೊಂಡಿರುವ ವಸಿಷ್ಠ ಸಿಂಹ ಅಭಿನಯದ ’ಕಾಲಚಕ್ರ’ ಚಿತ್ರದ ಹಾಡೊಂದರ ಟೀಸರ್ ಲಾಂಚ್ ಆಗಿದೆ ಟೀಸರ್ ಬಿಡುಗಡೆಗೊಳಿಸಿದ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್, ನನಗೆ ಒಂದು ವಿಷಯ ಅರ್ಥವಾಗ್ತಿಲ್ಲ ಒಂದೇ ಇಂಡಸ್ಟ್ರಿಯಲ್ಲಿ ಇಬ್ಬರು ಆಂಗ್ರಿ ಯಂಗ್ ಮ್ಯಾನ್ ಇರಲು ಹೇಗೆ ಸಾಧ್ಯ? ಎಂದರು ಸುದೀಪ್ ಅಭಿನಯದ ’ಮದಕರಿ’ ಚಿತ್ರದ ಡೈಲಾಗ್ ಹೇಳಿ ವಸಿಷ್ಠ ಸಿಂಹ ಅಭಿಮಾನಿಗಳನ್ನು ರಂಜಿಸಿದರೆ, ಒಂದೇ ಚಿತ್ರೋದ್ಯಮದಲ್ಲಿ ಇಬ್ಬರು ಆಂಗ್ರಿಮ್ಯಾನ್ ಗಳು ಇರಲು ಹೇಗೆ ಸಾಧ್ಯ ಈಗ ಶೀರ್ಷಿಕೆಯ ಪೈರಸಿಯೂ ನಡೆಯುವಂತಿದೆ ಸಿಕ್ಕಿರುವ ಅಲ್ಪಸ್ವಲ್ಪ ಬಿರುದುಗಳನ್ನೂ ಕಿತ್ತುಕೊಂಡರೆ ಮಾಡೋದೇನು ಎನ್ನುವ ಮೂಲಕ ವಸಿಷ್ಠ ಸಿಂಹ ಅವರ ಧ್ವನಿ, ಅಭಿನಯವನ್ನು ಮೆಚ್ಚಿಕೊಂಡರು ಧ್ವನಿ ಮುಖ್ಯವಲ್ಲ ವಸಿಷ್ಠ ಸಿಂಹ ಉತ್ತಮ ಕಲಾವಿದ ಅದು ಎಂದಿಗೂ ಮುರುಟದಂತೆ ನೋಡಿಕೊಳ್ಳಬೇಕು ಎಂದು ಸಲಹೆ ನೀಡಿದರು.

 Sharesee more..

`ಗಂಟುಮೂಟೆ’ ಬಲು ಭಾರ

18 Oct 2019 | 4:58 PM

ಬೆಂಗಳೂರು, ಅ ೧೮ (ಯುಎನ್‌ಐ) ಅಮೇಯುಕ್ತ ಸ್ಟುಡಿಯೋಸ್ ನಿರ್ಮಾಣದಲ್ಲಿ ರೂಪಾ ರಾವ್ ನಿರ್ದೇಶನದ ’ಗಂಟುಮೂಟೆ’ ಚಿತ್ರ ಬಿಡುಗಡೆಯಾಗಿದೆ ಪ್ರೌಢಶಾಲೆಯ ವಿದ್ಯಾರ್ಥಿನಿಯ ಜೀವನದಲ್ಲಿ ನಡೆಯುವ ಘಟನೆಗಳು, ಮೊದಲ ಪ್ರೇಮದ ತುಡಿತ, ಮಿಡಿತ ಚಿತ್ರದ ಕಥಾವಸ್ತುಸಿನಿಮಾದ ಬಗ್ಗೆ ಅತೀವ ಆಸಕ್ತಿ ಹೊಂದಿದ ಬಾಲಕಿ ಚಿತ್ರಮಂದಿರದಲ್ಲಿ ಲೈಂಗಿಕ ಕಿರುಕುಳ ಅನುಭವಿಸುತ್ತಾಳೆ ಮುಂದೆ ಹೈಸ್ಕೂಲ್ ಗೆ ಬರುವ ವೇಳೆಗೆ ಓರ್ವ ವಿದ್ಯಾರ್ಥಿಯತ್ತ ಆಕರ್ಷಿತಳಾಗುತ್ತಾಳೆ ಓದಿನ ಕಡೆ ಹೆಚ್ಚು ಗಮನ ಕೊಡಬೇಕಾದ ವಿದ್ಯಾರ್ಥಿ ಸದಾ ಈಕೆಯ ಸಾಮಿಪ್ಯ ಬಯಸುತ್ತಾನೆ ಪರಿಣಾಮ ಪರೀಕ್ಷೆಯಲ್ಲಿ ’ಫೇಲ್’ ಕೊನೆಗೆ ಆತ್ಮಹತ್ಯೆ ಚಿತ್ರದ ಮೂಲಕ ವಿದ್ಯಾರ್ಥಿಗಳಿಗೆ ಉತ್ತಮ ಸಂದೇಶ ನೀಡುವಲ್ಲಿ ನಿರ್ದೇಶಕಿ ರೂಪಾ ರಾವ್ ಸೋತಿದ್ದಾರೆ ಕಾಲೇಜು ಮೆಟ್ಟಿಲು ಹತ್ತಿದರೂ, ಆತನ ನೆನಪಿನಲ್ಲಿಯೇ ಬದುಕುತ್ತೇನೆ, ಆ ಗಂಟುಮೂಟೆ ಹೊತ್ತೇ ಮುಂದೆ ಸಾಗುತ್ತೇನೆ ಎಂದು ನಾಯಕಿ ನುಡಿಯುವ ಮೂಲಕ ಚಿತ್ರ ಮುಕ್ತಾಯವಾಗುತ್ತದೆಆದರೆ ಈ ನಡುವೆ ಪ್ರೇಕ್ಷಕರು ಹೈರಾಣಾಗಿರುತ್ತಾರೆ ಚಿತ್ರದ ಮೊದಲಾರ್ಧ ಪರವಾಗಿಲ್ಲ ಎನ್ನಬಹುದು ದ್ವಿತೀಯಾರ್ಧದಲ್ಲಿ ನಾಯಕ, ನಾಯಕಿಯರಿಬ್ಬರ ಲಿಪ್ ಲಾಕ್, ಕಿಸ್ಸಿಂಗ್, ಹಗ್ಗಿಂಗ್ ದೃಶ್ಯಗಳನ್ನು ಇಂದಿನ ವಿದ್ಯಾರ್ಥಿಗಳು ನೋಡಿದರೆ ’೯೦ರ ದಶಕದಲ್ಲೇ ಹೀಗೆಲ್ಲಾ ಇತ್ತಾ? ನಾವು ಯಾರಿಗೇನು ಕಮ್ಮಿ?’ ಎಂದು ಸಲ್ಲದ ವಿಷಯಗಳ ಬಗ್ಗೆ ಗಮನ ಕೊಡಲು ಚಿತ್ರ ಪ್ರೇರೇಪಣೆ ನೀಡುತ್ತದೆ ಕೊನೆಗಾದರೂ ನಾಯಕಿ ಎಲ್ಲ ನೆನಪುಗಳನ್ನು ’ಗಂಟುಮೂಟೆ’ ಕಟ್ಟಿ ಹೊಸ ಬದುಕಿನತ್ತ ಮುನ್ನಡೆಯುತ್ತಾಳೇನೋ ಎಂಬ ಪ್ರೇಕ್ಷಕರ ನಿರೀಕ್ಷೆ ಹುಸಿಯಾಗಿ ಬೇಸರವಾಗುತ್ತದೆತೇಜು ಬೆಳವಾಡಿ, ನಿಶ್ಚಿತ್ ಕರೋಡಿ, ಅಪರಾಜಿತ್ ಸ್ರಿಸ್ ಮೊದಲಾದವರು ತಾರಾಗಣದಲ್ಲಿದ್ದಾರೆ.

 Sharesee more..

ಲಿವರ್ ಸಮಸ್ಯೆ: ಬಿಗ್ ಬಿ ಅಮಿತಾಭ್ ಆಸ್ಪತ್ರೆಗೆ

18 Oct 2019 | 12:04 PM

ಮುಂಬೈ/ಬೆಂಗಳೂರು, ಅ ೧೮ (ಯುಎನ್‌ಐ) ಬಾಲಿವುಡ್ ಬಿಗ್ ಬಿ ಅಮಿತಾಭ್ ಬಚ್ಚನ್ ಅವರು ಯಕೃತ್ತಿನ ಚಿಕಿತ್ಸೆಗಾಗಿ ಮುಂಬೈನ ನಾನಾವತಿ ಆಸ್ಪತ್ರೆಗೆ ದಾಖಲಾಗಿದ್ದಾರೆ ಮೂರು ದಿನಗಳ ಹಿಂದೆ ನಿಯಮಿತ ಆರೋಗ್ಯ ತಪಾಸಣೆಗೆಂದು ಆಸ್ಪತ್ರೆಗೆ ತೆರಳಿದ ಅವರು, ದಾಖಲಾಗಿದ್ದು, ಭಾನುವಾರ ಡಿಸ್ಚಾರ್ಜ್ ಆಗುವ ಸಾಧ್ಯತೆಯಿದೆ ಎಂದು ತಿಳಿದುಬಂದಿದೆ.

 Sharesee more..

’ಬಿಲ್ ಗೇಟ್ಸ್’ ಆಡಿಯೋ ಬಿಡುಗಡೆ

16 Oct 2019 | 9:02 PM

ಬೆಂಗಳೂರು, ಅ ೧೬ (ಯುಎನ್‌ಐ) ಕಾಮಿಡಿ ಸ್ಟಾರ್ ಚಿಕ್ಕಣ್ಣ ಹಾಗೂ ಶಿಶಿರ್ ನಟನೆಯ ’ಬಿಲ್ ಗೇಟ್ಸ್’ ಸದ್ಯದಲ್ಲೇ ತೆರೆಗೆ ಬರಲಿದ್ದು, ಇತ್ತೀಚೆಗೆ ಚಿತ್ರದ ಆಡಿಯೋ-ವಿಡಿಯೊ ಬಿಡುಗಡೆಯಾಗಿದೆ ಖ್ಯಾತ ಸಂಗೀತ ಸಂಯೋಜಕ ವಿ ಮನೋಹರ್, ನಟ ಧರ್ಮ ಕೀರ್ತಿ, ರವಿ ಬಸ್ರೂರ್ ಮೊದಲಾದವರು ಆಡಿಯೋ ಬಿಡುಗಡೆಗೊಳಿಸಿ ಶುಭ ಹಾರೈಸಿದರುಚಿತ್ರದ ನಾಯಕರ ಬಾಲ್ಯವನ್ನು ನೆನಪಿಸುವ ಗ್ರಾಮೀಣ ಸೊಗಡಿನ ’ಮಾವಿನ ತೋಪಿಗೆ ಹೊಡಿತಾರೆ ಬಂಡಿ’ ಸೊಗಸಾಗಿದೆ ಈ ಹಾಡಿಗಾಗಿ ೫೦ ಮಕ್ಕಳನ್ನು ಬಳಸಿಕೊಂಡಿರುವುದು ವಿಶೇಷ ನೊಬಿನ್ ಪಾಲ್‌ಸಂಗೀತ ನಿರ್ದೇಶನದಲ್ಲಿ ವೈ ಕಂ ವಿಜಯಲಕ್ಷ್ಮೀ ಕಂಠಸಿರಿಯಲ್ಲಿ ಹಾಡು ಮೂಡಿಬಂದಿದೆಶಿಶರ್ ಸಖತ್ತಾಗಿ ಸ್ಟೆಪ್ ಹಾಕಿರುವ, ಸಂಜಿತ್ ಹೆಗಡೆ ದನಿಯಾಗಿರುವ ’ತಂಗಾಳಿ ಮೆಲ್ಲಗೆ ಕೈಬೀಸಿ ಕೂಗಿದೆ’ ಹಾಡು ಕೂಡ ರಿಚ್ ಆಗಿ ಚಿತ್ರೀಕರಣಗೊಂಡಿದ್ದು, ಕುಣಿಸುವಂತಿದೆ’ಬಿಲ್ ಗೆಟ್ಸ್’ ಚಿತ್ರಕ್ಕೆ ಈಗಾಗಲೇ ನಟ ರವಿಚಂದ್ರನ್, ದರ್ಶನ್ ಸೇರಿದಂತೆ ಹಲವು ಸ್ಟಾರ್ ನಟರ ಬೆಂಬಲ ದೊರಕಿದೆ.

 Sharesee more..

‘೧೯ ಏಜ್ ಈಸ್ ನಾನ್ ಸೆನ್ಸ್?’ ಟೀಸರ್ ಬಿಡುಗಡೆ

16 Oct 2019 | 7:52 PM

ಬೆಂಗಳೂರು, ಅ ೧೬ (ಯುಎನ್‌ಐ) ರಾಜೇಶ್ವರಿ ಫಿಲಂ ಲಾಂಛನದಲ್ಲಿ ಎಸ್ ಲೋಕೇಶ್ ನಿರ್ಮಾಣದ ’೧೯ ಏಜ್ ಈಸ್ ನಾನ್‌ಸೆನ್ಸ್?’ ಚಿತ್ರದ ಟೀಸರ್ ಹಾಗೂ ಧ್ವನಿಸುರುಳಿ ಬಿಡುಗಡೆಯಾಗಿದೆ ಕಥೆ, ಚಿತ್ರಕಥೆ, ಸಂಭಾಷಣೆ ಹಾಗೂ ನಿರ್ದೇಶನದ ಜವಾಬ್ದಾರಿಯನ್ನು ಎಂ ಸುರೇಶ್ ಗಿಣಿ ಹೊತ್ತಿದ್ದಾರೆ ಲವ್-ಆಕ್ಷನ್ ಜೊತೆಗೆ ೧೯ ರಿಂದ ೨೫ ವಯೋಮಿತಿ ಇರುವ ಹರೆಯದ ವಯಸ್ಸಿನ ನಾಯಕ, ನಾಯಕಿಯ ಜೀವನದಲ್ಲಿ ನಡೆಯುವ ಕಥಾಹಂದರವಿದೆಕೌಟುಂಬಿಕ ಕಥಾವಸ್ತುವಿನ ಜತೆಗೆ ವಿಭಿನ್ನವಾದ ತ್ರಿಕೋನ ಪ್ರೇಮಕಥೆಯನ್ನು ಚಿತ್ರ ಹೊಂದಿದೆ ಗಂಡು, ಹೆಣ್ಣು ಸಮಾನರು ಎಂಬುದನ್ನು ತೋರಿಸಲಾಗಿದೆ ಎಂದು ನಿರ್ದೇಶಕ ಸುರೇಶ್ ಗಿಣಿ ತಿಳಿಸಿದ್ದಾರೆನಿರ್ಮಾಪಕ ಲೋಕೇಶ್ ಪುತ್ರ ಮನೀಷ್ ’೧೯ ಏಜ್ ಈಸ್ ನಾನ್‌ಸೆನ್ಸ್?’ ಮೂಲಕ ನಾಯಕ ನಟನಾಗಿ ಚಿತ್ರರಂಗಕ್ಕೆ ಕಾಲಿಡುತ್ತಿದ್ದಾರೆ.

 Sharesee more..

'ಅಪ್ಪನನ್ನು ಮರೆಯಲಾದೀತೇ’ ಸುಧಾ ನರಸಿಂಹರಾಜು

16 Oct 2019 | 7:25 PM

ಬೆಂಗಳೂರು, ಅ ೧೬ (ಯುಎನ್‌ಐ) ಕಳೆದ ೩ ದಶಕಗಳಿಂದ ಚಿತ್ರರಂಗದಲ್ಲಿದ್ದು, ಮಧ್ಯೆ ಕೊಂಚ ಬಿಡುವು ತೆಗೆದುಕೊಂಡರೂ, ಇದೀಗ ಕಿರುತೆರೆಯ ’ಗಟ್ಟಿಮೇಳ’ ಧಾರಾವಾಹಿಯಲ್ಲಿ ಮಿಂಚುತ್ತಿರುವ ಸುಧಾ ನರಸಿಂಹರಾಜು ಅಭಿನಯದ ’ಸಿದ್ಧಿ ಸೀರೆ’ ಅಕ್ಟೋಬರ್ ೧೧ರಂದು ತೆರೆಕಂಡಿದೆಕಿಸ್ ಇಂಟರ್ ನ್ಯಾಷನಲ್ ಬುದ್ಧ ಕ್ರಿಯೇಷನ್ಸ್ ಸಹಯೋಗದೊಡನೆ ಐಟಿ ಉದ್ಯೋಗಿ ನವೀನ್ ಕುಮಾರ್ ನಿರ್ಮಿಸಿರುವ ಚಿತ್ರ ನ್ಯೂಯಾರ್ಕ್ ಫಿಲ್ಮ್ ಫೆಸ್ಟಿವೆಲ್ ನಲ್ಲಿ ’ಗ್ರೇಟ್ ಕ್ಲಾಸಿಕ್ ಕಲೆಕ್ಷನ್’ ವಿಭಾಗದಲ್ಲಿ ೯ನೇ ಸ್ಥಾನ ಪಡೆದುಕೊಂಡಿದೆಚಾಮರಾಜನಗರ ಜಿಲ್ಲೆಯ ಮಿರ್ಲೆ ಗ್ರಾಮದಲ್ಲಿ ಎರಡು ದಶಕಗಳ ಹಿಂದೆ ನಡೆದ ಸತ್ಯ ಘಟನೆ ಆಧಾರಿತ ’ಸಿದ್ಧಿ ಸೀರೆ’ಯಲ್ಲಿ ಸುಧಾ ನರಸಿಂಹರಾಜು ವಿಭಿನ್ನ ಗೆಟಪ್ ನಲ್ಲಿ ಕಾಣಿಸಿಕೊಂಡಿದ್ದಾರೆಕನ್ನಡ ಚಿತ್ರರಂಗದ ಹಾಸ್ಯ ಚಕ್ರವರ್ತಿ ನರಸಿಂಹರಾಜು ಅವರ ಪುತ್ರಿ ಎಂದು ಹೇಳಿಕೊಳ್ಳಲು ಹೆಮ್ಮೆಯಾಗುತ್ತದೆ ತಮ್ಮ ಎಲ್ಲ ಮಕ್ಕಳನ್ನೂ ಸರಿ ಸಮನಾಗಿ ಕಾಣುತ್ತಿದ್ದ ಅಪ್ಪ ’ಸುಧಾ ನನ್ನ ಹೆಸರು ಉಳಿಸುತ್ತಾಳೆ’ ಎನ್ನುತ್ತಿದ್ದರು ಯಾವುದೇ ಕ್ಷಣದಲ್ಲೂ ಅವರನ್ನು ಮರೆಯಲು ಸಾಧ್ಯವಿಲ್ಲ ಎಂದಿದ್ದಾರೆಈ ಚಿತ್ರದಲ್ಲಿ ಕೊಳಕು ಸೀರೆ, ಮಣ್ಣು ಮೆತ್ತಿದ ತಲೆಗೂದಲು, ಬರಿಗಾಲಿನ ಗೆಟಪ್ ನಲ್ಲಿರಬೇಕಾಗುತ್ತದೆ ಎಂದು ನಿರ್ದೇಶಕ ರು ತಿಳಿಸಿದ್ದರು ಅದಕ್ಕೆಲ್ಲ ಒಪ್ಪಿಗೆಯಿತ್ತು ಅಭಿನಯಿಸಿದೆ ಎಂದು ಸುಧಾ ಹೇಳಿದ್ದಾರೆಒಳ್ಳೆ ಸೀರೆಗಾಗಿ ಪರದಾಡುವ ಸಿದ್ಧಿ ಗುರು ಸ್ಥಾನದಲ್ಲಿರುವ ವ್ಯಕ್ತಿ, ಸತ್ತ ನಂತರ ಶವಕ್ಕೆ ಒಳ್ಳೆಯ ಸೀರೆ ಉಡಿಸಿದರೆ ಕೈಲಾಸಕ್ಕೆ ಹೋಗುತ್ತಾರೆ ಎಂದು ತಿಳಿಸಿರುತ್ತಾರೆ.

 Sharesee more..

ಪೋಲೆಂಡ್ ೪೨೦ ಯಿಂದ ಪಾರಾದ ’ಕೋಟಿಗೊಬ್ಬ’ ಸೂರಪ್ಪ ಬಾಬು

16 Oct 2019 | 6:46 PM

ಬೆಂಗಳೂರು, ಅ ೧೬ (ಯುಎನ್‌ಐ) ಕಿಚ್ಚ ಸುದೀಪ್ ಅಭಿನಯದ ’ಕೋಟಿಗೊಬ್ಬ ೩’ ಚಿತ್ರೀಕರಣ ಬಹುತೇಕ ಮುಕ್ತಾಯವಾಗಿದ್ದು, ೩ ಹಾಡುಗಳ ಚಿತ್ರೀಕರಣ ಬಾಕಿಯಿದೆ ಈ ನಡುವೆ ಚಿತ್ರದ ಸೊಬಗು ಹೆಚ್ಚಿಸಲು ಪೋಲೆಂಡ್ ಗೆ ತೆರಳಿದ್ದ ಸಿನೆಮಾ ತಂಡದ ಸದಸ್ಯರು ಅಲ್ಲಿನ ೪೨೦ ವ್ಯಕ್ತಿಯಿಂದ ಹೈರಾಣಾಗಿ ಕೊನೆಗೂ ಸುಖವಾಗಿ ತಾಯ್ನಾಡಿಗೆ ಮರಳಿದ್ದಾರೆಸ್ಥಳೀಯ ವ್ಯಕ್ತಿ ಹ್ಯಾರಿಸ್ ಮೂಲಕ ಮುಂಬೈ ಮೂಲದ ಸಂಜಯ್ ಪಾಲ್ ಹೆಸರಿನ ವ್ಯಕ್ತಿ ಹಾಗೂ ಆತನ ಸೋದರ ಅಜಯ್ ಪಾಲ್ ಈ ಘಟನೆಯ ರೂವಾರಿಗಳು ಕೊನೆಗೆ ನಟ ಜಗ್ಗೇಶ್ ಸಹಕಾರದೊಡನೆ ಪೊಲೀಸ್ ಮಹಾ ನಿರ್ದೇಶಕರನ್ನು ಸಂಪರ್ಕಿಸಿ, ಅವರ ಮೂಲಕ ಪೋಲೆಂಡ್ ಭಾರತೀಯ ರಾಯಭಾರ ಕಚೇರಿ ಅಧಿಕಾರಿಗಳಿಗೆ ವಿಷಯ ತಿಳಿಸಿ, ಸೂರಪ್ಪ ಬಾಬು ಅವರ ಅಕೌಂಟೆಂಟ್ ಹಾಗೂ ಅಸಿಸ್ಟೆಂಟ್ ಡೈರೆಕ್ಟರ್ ಅವರನ್ನು ಸುರಕ್ಷಿತವಾಗಿ ಕರೆಸಿಕೊಳ್ಳಲಾಗಿದೆ ಈ ಕುರಿತು ಅಲ್ಲಲ್ಲಿ ಹರಿದಾಡುತ್ತಿದ್ದ ಸುದ್ದಿಯ ಬಗ್ಗೆ ಸ್ಪಷ್ಟೀಕರಣ ನೀಡಲು ಇಂದು ಸೂರಪ್ಪ ಬಾಬು ಸುದ್ದಿಗೋಷ್ಠಿ ಕರೆದು ನಡೆದ ಘಟನೆಯ ಬಗ್ಗೆ ಸಂಪೂರ್ಣ ವಿವರ ನೀಡಿದ್ದಾರೆ ಈ ಹಿಂದೆ ಕೂಡ ವಿದೇಶದಲ್ಲಿ ಶೂಟಿಂಗ್ ಗೆ ತೆರಳಿದ ಅನೇಕ ಚಿತ್ರ ತಂಡಕ್ಕೆ ವಚನೆಯಾಗಿದೆ ಹೀಗಾಗಿ ಮುಂದೆ ಯಾವುದೇ ಚಿತ್ರತಂಡಕ್ಕೂ ಇಂತಹ ತೊಂದರೆಯಾಗದಿರಿಲಿ ಎಂಬ ಉದ್ದೇಶದಿಂದ ಮಾಹಿತಿ ನೀಡುತ್ತಿರುವುದಾಗಿ ತಿಳಿಸಿದ್ದಾರೆ.

 Sharesee more..

ಧರ್ಮೆಂದ್ರ ಪಾತ್ರ ನಿರ್ವಹಿಸುವುದು ಗಂಭೀರ ಕೆಲಸ : ರಾಜ್ ಕುಮಾರ್ ರಾವ್

16 Oct 2019 | 5:53 PM

ಮುಂಬೈ, ಅ 16 (ಯುಎನ್ಐ) ಬಾಲಿವುಡ್ ಚಿತ್ರರಂಗದಲ್ಲಿ ವಿಭಿನ್ನ ಪಾತ್ರಗಳ ಮೂಲಕ ಗಮನ ಸೆಳೆದಿರುವ ನಟ ರಾಜ್ ಕುಮಾರ್ ರಾವ್, " ಹಿರಿಯ ನಟ ಧರ್ಮೆಂದ್ರ ಅವರ ಪಾತ್ರದಲ್ಲಿ ನಟಿಸುವುದು ಅತ್ಯಂತ ಗಂಭೀರ ವಿಚಾರ " ಎಂದು ಅಭಿಪ್ರಾಯ ಪಟ್ಟಿದ್ದಾರೆ.

 Sharesee more..

ಮತ್ತೆ ಮಣಿರತ್ನಂ ಚಿತ್ರದಲ್ಲಿ ಐಶ್ !

16 Oct 2019 | 5:45 PM

ಮುಂಬೈ, ಅ 16 (ಯುಎನ್ಐ) ಬಾಲಿವುಡ್ ನೀಲಿ ಕಣ್ಣಿನ ತಾರೆ ಐಶ್ವರ್ಯ ರೈ, ನಿರ್ದೇಶಕ ಮಣಿರತ್ನಂ ಚಿತ್ರದಲ್ಲಿ ಮತ್ತೊಮ್ಮೆ ಕಾಣಿಸಿಕೊಳ್ಳುವ ಸಾಧ್ಯತೆ ಇದೆ ಐಶ್ವರ್ಯ ಹಲವು ಸಮಯದಿಂದ ಚಿತ್ರರಂಗದಿಂದ ದೂರ ಉಳಿದಿದ್ದಾರೆ.

 Sharesee more..

ಸಾರಾ ಉಡುಪು, ಸ್ಟೈಲ್ ಮೇಲೆ ನಿಗಾ ಇಟ್ಟಿದ್ದಾರಂತೆ ಕರೀನಾ!

16 Oct 2019 | 4:11 PM

ಮುಂಬೈ, ಅ 16 (ಯುಎನ್ಐ) ತನ್ನ ಆರಂಭಿಕ ಚಿತ್ರಗಳಿಂದಲೇ ಭಾರಿ ಸುದ್ದಿ ಮಾಡಿದ್ದ ಸಾರಾ ಅಲಿ ಖಾನ್ ಅವರ ವಸ್ತ್ರ ವಿನ್ಯಾಸ ಹಾಗೂ ಉಡುಗೆತೊಡಗೆಯ ಜವಾಬ್ದಾರಿಯಲ್ಲಿ ಆಕೆಯ ತಂದೆ ಸೈಫ್ ಅಲಿ ಖಾನ್ ರ ಎರಡನೇ ಪತ್ನಿ ಹಾಗೂ ಖ್ಯಾತ ನಟಿ ಕರೀನಾ ಕಪೂರ್ ವಹಿಸಿಕೊಂಡಿದ್ದಾರಂತೆ.

 Sharesee more..

ರಾಧಿಕೆಗೆ ಸೀಮಂತ ಸಂಭ್ರಮ

15 Oct 2019 | 9:40 PM

ಬೆಂಗಳೂರು, ಅ ೧೫ (ಯುಎನ್‌ಐ) ಸ್ಯಾಂಡಲ್ ವುಡ್ ಸಿಂಡ್ರೆಲಾ ರಾಧಿಕಾ ಪಂಡಿತ್ ಇತ್ತೀಚೆಗೆ ಸೀಮಂತ ಆಚರಿಸಿಕೊಂಡಿದ್ದಾರೆ ಮೊದಲ ಮಗು ತೊದಲು ನುಡಿಯುತ್ತಿರುವಾಗಲೇ ಮತ್ತೊಂದು ಮಗುವಿನ ಆಗಮನದ ನಿರೀಕ್ಷೆಯಲ್ಲಿರುವ ರಾಧಿಕಾಗೆ ಸ್ನೇಹಿತೆಯರು, ಕುಟುಂಬ ವರ್ಗದವರು ಸೀಮಂತ ಶಾಸ್ತ್ರ ನೆರವೇರಿಸಿದ್ದಾರೆ.

 Sharesee more..

ಸಾವಯವ ಕೃಷಿಯ ’ಮುತ್ತುಕುಮಾರ’ ನಿಗೆ 'ಪವರ್' ಹಾರೈಕೆ

14 Oct 2019 | 11:21 PM

ಬೆಂಗಳೂರು, ಅ ೧೪ (ಯುಎನ್‌ಐ) ಪ್ರೀತಿ, ಪ್ರೇಮ, ಹಾಸ್ಯ, ಕೌಟುಂಬಿಕ ಬಾಂಧವ್ಯದ ಜತೆಗೆ ಸಾಮಾಜಿಕ ಸಂದೇಶವನ್ನೂ ಸಾರುವ ’ಮುತ್ತುಕುಮಾರ್’ ಚಿತ್ರದ ಧ್ವನಿಸುರಳಿ ಹಾಗೂ ಟ್ರೇಲರ್ ಬಿಡುಗಡೆಯಾಗಿದೆವರನಟ ಡಾ ರಾಜಕುಮಾರ್ ಅಭಿಮಾನಿ ಪಿ ವಿ ಶ್ರೀನಿವಾಸ್ ನಿರ್ಮಿಸಿರುವ ಚಿತ್ರದ ಧ್ವನಿಸುರುಳಿಯನ್ನು ನಟ ರಾಘವೇಂದ್ರ ರಾಜಕುಮಾರ್, ನಿರ್ದೇಶಕ ನಂದಕಿಶೋರ್ ಬಿಡುಗಡೆಗೊಳಿಸಿ ಚಿತ್ರತಂಡಕ್ಕೆ ಶುಭ ಕೋರಿದ್ದಾರೆ ಅಲ್ಲದೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್, ಯೋಗರಾಜ್ ಭಟ್.

 Sharesee more..

'ಆಸ್ಕರ್' ಪ್ರಶಸ್ತಿ ದಯಾಳ್ ಬಿಗ್ ಬಯಕೆ!

14 Oct 2019 | 10:48 PM

ಬೆಂಗಳೂರು, ಅ ೧೪ (ಯುಎನ್‌ಐ) ಅವಕಾಶ ಆಕಾಶದಾಚೆಗೂ ವ್ಯಾಪಿಸಬಹುದು, ಕನಸಿನ ಹಕ್ಕಿಗೆ ರೆಕ್ಕೆ ಮೂಡಿದರೆ ಇಚ್ಛೆಯಿದ್ದೆಡಿಗೆ ಹಾರಬಹುದು ಅಲ್ಲವೇ? ವಿಭಿನ್ನ ರೀತಿಯ ಚಿತ್ರಗಳನ್ನು ನಿರ್ಮಿಸಿ, ಪ್ರಸ್ತುತ ಗೋವಾದ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಪನೋರಮಾ ವಿಭಾಗಕ್ಕೆ ಆಯ್ಕೆಯಾಗಿರುವ ’ರಂಗನಾಯಕಿ’ ಚಿತ್ರದ ನಿರ್ದೇಶಕ ದಯಾಳ್ ಪದ್ಮನಾಭನ್ ಕನಸೇನು ಗೊತ್ತೇ? ಆಸ್ಕರ್ ಪ್ರಶಸ್ತಿ ಪಡೆಯಬಲ್ಲ ಚಿತ್ರ ನಿರ್ಮಿಸುವುದು!ಮಹಿಳಾ ಪ್ರಧಾನ ಚಿತ್ರ ’ರಂಗನಾಯಕಿ’ ಯ ಅಧಿಕೃತ ಧ್ವನಿಸುರುಳಿ ಬಿಡುಗಡೆ ಕಾರ್ಯಕ್ರಮದಲ್ಲಿ ತಮ್ಮ ಚಿತ್ರ ನವೆಂಬರ್ ೨೪ರಂದು ಪನೋರಮಾದಲ್ಲಿ ಪ್ರದರ್ಶನಗೊಳ್ಳಲಿದೆ ಎಂದು ಮಾಹಿತಿ ನೀಡುವುದರ ಜತೆಗೆ, ತಮ್ಮ ಕನಸನ್ನೂ ಹಂಚಿಕೊಂಡಿದ್ದಾರೆಈ ಹಿಂದೆ ಹಗ್ಗದ ಕೊನೆ, ಆಕ್ಟರ್, ಆ ಕರಾಳ ರಾತ್ರಿ ಚಿತ್ರಗಳನ್ನು ಪನೋರಮಾಗೆ ಕಳುಹಿಸಲು ಯತ್ನಿಸಿ ವಿಫಲವಾದೆ ಆದರೆ ಈಗ ’ರಂಗನಾಯಕಿ’ ಯ ಮೂಲಕ ಸಫಲವಾಯಿತು ಆದರೆ ಆಸ್ಕರ್ ಪ್ರಶಸ್ತಿ ಪಡೆಯುಬೇಕು ಎಂಬುದು ನನ್ನ ಬಹುದೊಡ್ಡ ಕನಸು ಎಂದು ಹೇಳಿಕೊಂಡಿದ್ದಾರೆಈಗಾಗಲೇ ಆಸ್ಕರ್ ಗೆ ಬೇಕಾಗುವಂತಹ ಕಥೆ ಸಿದ್ಧವಾಗುತ್ತಿದೆ ಜಾತಿ, ಭಾಷೆ, ವರ್ಣಗಳ ಕುರಿತ ಕಥೆ ಇದಾಗಿದ್ದು, ವಿಶಿಷ್ಟ ಬಗೆಯ ಹಕ್ಕಿಯೊಂದು ಪ್ರಧಾನವಾಗಿ ಕಾಣಿಸಿಕೊಳ್ಳಲಿದೆ.

 Sharesee more..

ರವಿ ಬೆಳಗೆರೆ ಮತ್ತೆ ಬಿಗ್ ಬಾಸ್ ಮನೆಗೆ ಹೋಗ್ತಾರಾ?

14 Oct 2019 | 10:19 PM

ಬೆಂಗಳೂರು, ಅ ೧೪ (ಯುಎನ್‌ಐ) ಖಾಸಗಿ ವಾಹಿನಿಯ ಜನಪ್ರಿಯ ಕಾರ್ಯಕ್ರಮವೆನಿಸುರವ ಬಿಗ್ ಬಾಸ್ ೭ನೇ ಆವೃತ್ತಿ ಭಾನುವಾರದಿಂದ ಶುರುವಾಗಿದ್ದು, ಆರಂಭದ ದಿನವೇ ಪತ್ರಕರ್ತ ರವಿ ಬೆಳಗೆರೆ ಬಿಗ್ ಬಾಸ್ ಮನೆಯಿಂದ ಹೊರಬಂದಿದ್ದಾರೆ ಮೂಲಗಳ ಪ್ರಕಾರ, ಆರೋಗ್ಯ ಸಮಸ್ಯೆ ಹಿನ್ನೆಲೆಯಲ್ಲಿ ರಿಯಾಲಿಟಿ ಶೋ ಬಿಗ್ ಬಾಸ್‌ನಿಂದ ಅನುಮತಿ ಪಡೆದು ಹೊರ ಬಂದಿದ್ದು, ತಮ್ಮ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ ಎನ್ನಲಾಗಿದೆ ಶೋನಲ್ಲಿ ೧೮ ಸ್ಪರ್ಧಿಗಳಿದ್ದು ೫೦ ಲಕ್ಷ ಬಹುಮಾನಕ್ಕಾಗಿ ಒಟ್ಟು ೧೦೦ ದಿನಗಳ ಕಾಲ ಬಿಡದಿಯ ಇನ್ನೋವೇಟಿವ್ ಫಿಲ್ಮ್ ಸಿಟಿಯಲ್ಲಿರುವ ಬಿಗ್ ಬಾಸ್ ಮನೆಯ ಕ್ಯಾಮೆರಾಗಳನ್ನು ಎದುರಿಸಲಿದ್ದಾರೆ.

 Sharesee more..