Monday, Jul 22 2019 | Time 07:17 Hrs(IST)
  • ಶಾಸಕರು ರಾಜಕೀಯ ವ್ಯಭಿಚಾರ ಮಾಡಿದ್ದಾರೆ : ದಿನೇಶ್ ಗುಂಡೂರಾವ್ ಗಂಭೀರ ಆರೋಪ
Entertainment

`ತಿರುಗಿಸೋ ಮೀಸೆ’ ಶೀರ್ಷಿಕೆ ಬಿಡುಗಡೆ

04 Jul 2019 | 4:09 PM

ಬೆಂಗಳೂರು, ಜುಲೈ 04 (ಯುಎನ್ಐ) ಶ್ರೀ ಶ್ರೀನಿವಾಸ ಮೂವೀಸ್ ಲಾಂಛನದಲ್ಲಿ ಶ್ರೀನಿವಾಸ್ ಜಿ ಹಾಗೂ ರಿಜ್ವಾನ್ ನಿರ್ಮಾಣದ ‘ತಿರುಗಿಸೋ ಮೀಸೆ’ ಚಿತ್ರದ ಶೀರ್ಷಿಕೆ ಇತ್ತೀಚೆಗೆ ಬಿಡುಗಡೆಯಾಗಿದೆ ಖುಷಿ ಹಾಗೂ ಅಚ್ಯುತ ರಾಮರಾವ್ ಬಂಡವಾಳ ಹೂಡಿದ್ದು, ಕೃಷ್ಣವಿಜಯ್ ಎಲ್ ನಿರ್ದೇಶಿಸುತ್ತಿರುವ ಚಿತ್ರದ ಚಿತ್ರೀಕರಣ ಭರದಿಂದ ಸಾಗಿದೆ ಸುರೇಶ್ ಬಾಬ್ಲಿ ಸಂಗೀತ ನಿರ್ದೇಶಿಸುತ್ತಿದ್ದು, ಎಸ್ಐಡಿ ಛಾಯಾಗ್ರಹಣವಿದೆ.

 Sharesee more..

ಜಾರ್ಜ್ ಫರ್ನಾಂಡೀಸ್ ಆಗಿ ನವಾಜುದ್ದೀನ್!

04 Jul 2019 | 3:06 PM

ಮುಂಬೈ, ಜುಲೈ 4 (ಯುಎನ್ಐ) ತಮ್ಮ ವಿಭಿನ್ನ ಅಭಿನಯದ ಮೂಲಕ ಜನಮೆಚ್ಚುಗೆ ಗಳಿಸಿದ ಬಾಲಿವುಡ್ ನಟ ನವಾಜುದ್ದೀನ್ ಸಿದ್ದೀಖಿ, ಬೆಳ್ಳಿ ತೆರೆಯ ಮೇಲೆ ಸಮಾಜವಾದಿ ನಾಯಕ ಮತ್ತು ಮಾಜಿ ರಕ್ಷಣಾ ಸಚಿವ ಜಾರ್ಜ್ ಫರ್ನಾಂಡಿಸ್ ಅವರ ಪಾತ್ರದಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಇದೆ.

 Sharesee more..
ನಟನೊಬ್ಬ ನಿರಾಕರಿಸಿದ ಪಾತ್ರ ಹಾಸ್ಯ ಪ್ರತಿಭೆ ಧರ್ಮಣ್ಣನಿಗೆ ದಕ್ಕಿತಂತೆ!

ನಟನೊಬ್ಬ ನಿರಾಕರಿಸಿದ ಪಾತ್ರ ಹಾಸ್ಯ ಪ್ರತಿಭೆ ಧರ್ಮಣ್ಣನಿಗೆ ದಕ್ಕಿತಂತೆ!

03 Jul 2019 | 6:19 PM

ಬೆಂಗಳೂರು, ಜುಲೈ 03 (ಯುಎನ್ಐ) ಧರ್ಮಣ್ಣ ಕಡೂರ್ ಚಂದನವನದ ಪ್ರತಿಭಾವಂತ ನಟ “ರಾಮಾ ರಾಮಾ ರೇ” ಚಿತ್ರದ ಮೂಲಕ ಮನೆ ಮಾತಾಗಿ, ಸಾಲು ಸಾಲು ಚಿತ್ರಗಳಲ್ಲಿ ಅವಕಾಶ ಗಿಟ್ಟಿಸಿಕೊಳ್ಳುತ್ತಿರುವ ಪ್ರತಿಭಾವಂತ ಅಂದಹಾಗೆ ಧರ್ಮಣ್ಣ ಅಭಿನಯದ “ಕಾಣದಂತೆ ಮಾಯವಾದನು” ಸದ್ಯದಲ್ಲೆ ಬಿಡುಗಡೆಯಾಗಲಿದೆ

 Sharesee more..

ತೆರೆಯ ಮೇಲೆ ಕ್ರಿಕೆಟ್ ಆಡಲಿದ್ದಾರೆಯೇ ತಾಪ್ಸಿ?

03 Jul 2019 | 6:18 PM

ಮುಂಬೈ, ಜುಲೈ 3 (ಯುಎನ್ಐ) ತಮ್ಮ ಮೊದಲ ಚಿತ್ರದಿಂದಲೂ ವಿಭಿನ್ನ ಪಾತ್ರಗಳಲ್ಲಿಯೇ ಕಾಣಿಸಿಕೊಳ್ಳುವ ಮೂಲಕ ಪ್ರೇಕ್ಷಕರಿಗೆ ಅಚ್ಚರಿ ಮೂಡಿಸುತ್ತಿರುವ ಬಾಲಿವುಡ್ ನಟಿ ತಾಪ್ಸಿ ಪನ್ನು ಈಗ ಭಾರತೀಯ ಮಹಿಳಾ ಕ್ರಿಕೆಟ್ ತಂಡದ ನಾಯಕಿ ಮಿಥಾಲಿ ರಾಜ್ ಆಗಿ ತೆರೆಯ ಮೇಲೆ ಬರುವ ಸಾಧ್ಯತೆಯಿದೆ.

 Sharesee more..
ಸಿಂಧು ಲೋಕನಾಥ್ ಯೋಗ ಶಿಕ್ಷಕಿ!

ಸಿಂಧು ಲೋಕನಾಥ್ ಯೋಗ ಶಿಕ್ಷಕಿ!

03 Jul 2019 | 6:17 PM

ಬೆಂಗಳೂರು, ಜುಲೈ 03 (ಯುಎನ್ಐ) ಕನ್ನಡ ಚಿತ್ರರಂಗದ ಸಹಜಾಭಿನಯ ನೀಡುವ ನಟಿಯರ ಸಾಲಿನಲ್ಲಿ ನಿಲ್ಲುವ ಅಭಿನೇತ್ರಿ ಸಿಂಧು ಲೋಕನಾಥ್ ಬೆಂಗಳೂರಿನ ಸೆಂಟ್ ಜೋಸೆಫ್ ಕಲಾ ಮತ್ತು ವಿಜ್ಞಾನ ಕಾಲೇಜಿನಲ್ಲಿ ಬಯೋಟೆಕ್ ವಿಷಯದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದು, ಚಿತ್ರರಂಗದತ್ತ ವಾಲಿದವರು

 Sharesee more..

'ಕಬೀರ್ ಸಿಂಗ್' ನಂತರ 21 ಕೋಟಿ ರೂ.ಗಳಿಗೆ ಸಂಭಾವನೆ ಏರಿಸಿಕೊಂಡ ಶಾಹಿದ್

03 Jul 2019 | 5:38 PM

ಮುಂಬೈ, ಜುಲೈ 3 (ಯುಎನ್ಐ) ಬಾಲಿವುಡ್ ನ ಚಾಕಲೇಟ್ ಹೀರೋ ಶಾಹಿದ್ ಕಪೂರ್, ತಮ್ಮ ಇತ್ತೀಚಿನ ಚಿತ್ರ 'ಕಬೀರ್ ಸಿಂಗ್' ಬಾಕ್ಸ್ ಆಫೀಸ್ ಕೊಳ್ಳೆ ಹೊಡೆಯುತ್ತಿದ್ದಂತೆ ಸಂಭಾವನೆಯನ್ನು 21 ಕೋಟಿ ರೂ ಗಳಿಗೆ ಏರಿಸಿಕೊಂಡಿದ್ದಾರಂತೆ.

 Sharesee more..

ಮಿನುಗುತಾರೆಯ ‘ಆತ್ಮ’ ಕತೆ ‘ಕಲ್ಪನಾ ನಿವಾಸ’

03 Jul 2019 | 4:49 PM

ಬೆಂಗಳೂರು, ಜುಲೈ 03 (ಯುಎನ್ಐ) ದಿಟ್ಟ ಅಭಿನಯ, ವಿಶಿಷ್ಟ ಸಂಭಾಷಣಾ ಶೈಲಿಯಿಂದ ಮಿನುಗುತಾರೆ ಎನಿಸಿಕೊಂಡ ನಟಿ ಕಲ್ಪನಾ ಮದುವೆ, ಮನೆ, ಗಂಡ, ಮಕ್ಕಳು ಎಂದು ತಾನು ಕಂಡ ಕನಸು ನನಸಾಗುವ ಮೊದಲೇ ಇಹಲೋಕ ತ್ಯಜಿಸಿದ ನತದೃಷ್ಟೆ ಚಂದನವನಕ್ಕೆ ಕಾಲಿಟ್ಟ ನಂತರ ಕೆಲವೇ ಸಮಯದಲ್ಲಿ ಅತಿಹೆಚ್ಚು ಸಿನಿಮಾಗಳಲ್ಲಿ ನಟಿಸಿ, ಸೂಪರ್ ಹಿಟ್ ಚಿತ್ರಗಳನ್ನು ನೀಡಿ, ವೈಯಕ್ತಿಕ ಕಾರಣಗಳಿಗಾಗಿ ಬೇಸತ್ತು ಗೋಟೂರು ಐಬಿಯಲ್ಲಿ ಆತ್ಮಹತ್ಯೆಗೆ ಶರಣಾದ ಕಲ್ಪನಾ, ಈಗಲೂ ಅತೃಪ್ತ ಆತ್ಮವಾಗಿ ಹುಣ್ಣಿಮೆ, ಅಮಾವಾಸ್ಯೆಗಳಲ್ಲಿ ನೋವು ಹೊರಹಾಕುತ್ತಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ ಈ ವಿಷಯವನ್ನೇ ಆಧಾರವಾಗಿಟ್ಟುಕೊಂಡು ‘ಕಲ್ಪನಾ ನಿವಾಸ’ ತೆರೆಗೆ ಬರಲು ಸಿದ್ಧವಾಗುತ್ತಿದೆ ಕಲ್ಪನಾ ಸಾವಿನ ನಂತರ ಆ ಊರಿನ ಸುತ್ತಮುತ್ತಲು ಹರಿದಾಡುತ್ತಿರುವ ಕಲ್ಪನ ಭೂತದ ವಿಚಾರವನ್ನು ಹಾಗೂ ಆ ಊರಿನ ಜನಕ್ಕೆ ಈ ವಿಚಾರವಾಗಿ ಆದ ಅನುಭವವನ್ನು ಇಟ್ಟುಕೊಂಡು ಐಟಿ ಉದ್ಯೋಗಿಗಳು ಸಿನಿಮಾ ಮಾಡಲು ಮುಂದಾಗಿದ್ದಾರೆ.

 Sharesee more..

ದೇಶಾದ್ಯಂತ 300 ಜಿಮ್ ಆರಂಭಿಸಲಿರುವ ಸಲ್ಮಾನ್ ಖಾನ್

03 Jul 2019 | 4:09 PM

ನವದೆಹಲಿ, ಜುಲೈ 3 (ಯುಎನ್ಐ) ತಮ್ಮ 'ಬೀಯಿಂಗ್ ಹ್ಯೂಮನ್' ಸರಣಿಯನ್ನು ವಿಶ್ವಾದ್ಯಂತ ಪಸರಿಸುವಲ್ಲಿ ಯಶಸ್ವಿಯಾಗಿರುವ ಬಾಲಿವುಡ್ ನಟ ಸಲ್ಮಾನ್ ಖಾನ್, ಈಗ ದೇಶಾದ್ಯಂತ ಜಿಮ್ ಗಳು ಹಾಗೂ ಫಿಟ್ ನೆಸ್ ಕೇಂದ್ರಗಳ ಸರಣಿ ತೆರೆಯಲು ಮುಂದಾಗಿದ್ದಾರೆ.

 Sharesee more..

ದೇಶಾದ್ಯಂತ 300 ಜಿಮ್ ಆರಂಭಿಸಲಿರುವ ಸಲ್ಮಾನ್ ಖಾನ್

03 Jul 2019 | 3:30 PM

ನವದೆಹಲಿ, ಜುಲೈ 3 (ಯುಎನ್ಐ) ತಮ್ಮ 'ಬೀಯಿಂಗ್ ಹ್ಯೂಮನ್' ಸರಣಿಯನ್ನು ವಿಶ್ವಾದ್ಯಂತ ಪಸರಿಸುವಲ್ಲಿ ಯಶಸ್ವಿಯಾಗಿರುವ ಬಾಲಿವುಡ್ ನಟ ಸಲ್ಮಾನ್ ಖಾನ್, ಈಗ ದೇಶಾದ್ಯಂತ ಜಿಮ್ ಗಳು ಹಾಗೂ ಫಿಟ್ ನೆಸ್ ಕೇಂದ್ರಗಳ ಸರಣಿ ತೆರೆಯಲು ಮುಂದಾಗಿದ್ದಾರೆ.

 Sharesee more..

‘ಕಾಣದಂತೆ ಮಾಯವಾದನು’ ಸದ್ಯದಲ್ಲೇ ತೆರೆಗೆ

02 Jul 2019 | 9:18 PM

ಬೆಂಗಳೂರು, ಜುಲೈ 2 (ಯುಎನ್ಐ) ವಿಭಿನ್ನ ಟೈಟಲ್ ಮತ್ತು ಕ್ಯಾರೆಕ್ಟರ್ ಮೂಲಕ ಗಮನ ಸೆಳೆಯುತ್ತಿರುವ 'ಕಾಣದಂತೆ ಮಾಯವಾದನು' ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ ಪಕ್ಕಾ ಕಮರ್ಶಿಯಲ್ ಜಾನರ್ ನ ಅಂಶಗಳನ್ನು ಒಳಗೊಂಡಿದೆ ರಾಜ್ ಪತ್ತಿಪಾಟಿ ನಿರ್ದೇಶನದಲ್ಲಿ ಸುಮಾರು ಎರಡು ವರ್ಷಗಳ ಅಗಾಧ ಪರಿಶ್ರಮದಿಂದ ತಯಾರಾಗಿರುವ ಸಿನಿಮಾ ಮುಂದಿನ ತಿಂಗಳು ಪ್ರೇಕ್ಷಕರ ಮುಂದೆ ಬರಲು ಉತ್ಸುಕವಾಗಿದೆ “ಒಂದೇ ಶೇಡ್ ನಲ್ಲಿ ಇಬ್ಬರು ನಾಯಕರು ನಟಿಸಿರುವ ವಿಶೇಷ ಚಿತ್ರದಲ್ಲಿ ಪ್ರೀತಿ, ಫ್ಯಾಂಟಸಿ, ಸಸ್ಪೆನ್ಸ್ ಎಲ್ಲವೂ ಅಡಗಿದೆ ಕೊಲೆಯಾದ ನಾಯಕನನ್ನು ಹುಡುಕಿಕೊಂಡ ಹೋಗುವ ನಾಯಕಿ, ಮತ್ತೊಬ್ಬ ನಾಯಕನಲ್ಲಿ ಸೇರಿಕೊಂಡು ರಿವೇಂಜ್ ತೀರಿಸಿಕೊಳ್ಳುವ ಆತ್ಮದ ಕಥೆ ಇದಾಗಿದೆ.

 Sharesee more..

ಸಾಮಾಜಿಕ ಕಳಕಳಿಯ ‘ಜ್ಞಾನಂ’ ಟ್ರೇಲರ್ ಬಿಡುಗಡೆ

02 Jul 2019 | 9:02 PM

ಬೆಂಗಳೂರು, ಜುಲೈ 02 (ಯುಎನ್ಐ) ನಾವೆಲ್ಲ ಮನುಷ್ಯರೇ ಆದರೂ, ಪ್ರತಿಯೊಬ್ಬರೂ ಒಂದೊಂದು ವಿಶೇಷ ಒಬ್ಬರು, ಇನ್ನೊಬ್ಬರಂತಿಲ್ಲ ಅದರಲ್ಲೂ ವಿಶೇಷ ಚೇತನರ ಬಗ್ಗೆ ಸಮಾಜದ ಬಹುತೇಕ ಮಂದಿ ತಾತ್ಸಾರ ಭಾವವನ್ನೇ ಹೊಂದಿದ್ದಾರೆ ಇದೇ ವಿಷಯವನ್ನಾಧರಿಸಿ ವಸಂತ ಸಿನಿ ಕ್ರಿಯೇಷನ್ಸ್ ‘ಜ್ಞಾನಂ’ ಚಿತ್ರ ನಿರ್ಮಿಸಿದೆ ಬುದ್ಧಿವಂತ ಹಾಗೂ ಬುದ್ಧಿಮಾಂದ್ಯ ಮಕ್ಕಳಿಬ್ಬರ ಕಥೆಯ ಎಳೆಯನ್ನಿಟ್ಟುಕೊಂಡು ಚಿತ್ರ ಹೆಣೆಯಲಾಗಿದೆ.

 Sharesee more..
ಹರೀಶ್ ರಾಜ್ ಈಗ ‘ಕಿಲಾಡಿ ಪೊಲೀಸ್’

ಹರೀಶ್ ರಾಜ್ ಈಗ ‘ಕಿಲಾಡಿ ಪೊಲೀಸ್’

02 Jul 2019 | 8:50 PM

ಬೆಂಗಳೂರು, ಜುಲೈ 02 (ಯುಎನ್ಐ) ಹಲವು ಜನಪ್ರಿಯ ಧಾರಾವಾಹಿಗಳು ಮತ್ತು ಸಿನಿಮಾಗಳಲ್ಲಿ ಅಭಿನಯಿಸಿ, ಸಿನಿರಸಿಕರ ಮೆಚ್ಚುಗೆಗೆ ಪಾತ್ರರಾಗಿರುವ ನಟ ಹರೀಶ್ ರಾಜ್ ಈಗ ಕಿಲಾಡಿ ಪೊಲೀಸ್` ಆಗಿದ್ದಾರೆ ಈಗಾಗಲೇ ಜಾಲತಾಣಗಳಲ್ಲಿ ಟ್ರೇಲರ್ ಬಿಡುಗಡೆಯಾಗಿದ್ದು, ವೈರಲ್ ಆಗಿದೆ ಸದ್ಯದಲ್ಲೇ ಚಿತ್ರ ತೆರೆಕಾಣಲಿದೆ

 Sharesee more..

‘ಖನನ’ ಯಶಸ್ಸಿನ ಸಂಭ್ರಮದಲ್ಲೇ ಮತ್ತೊಂದು ಚಿತ್ರದಲ್ಲಿ ಆರ್ಯವರ್ಧನ್!

02 Jul 2019 | 8:17 PM

ಬೆಂಗಳೂರು, ಜುಲೈ 2 (ಯುಎನ್ಐ) ಅಕ್ಷನ್, ಥ್ರಿಲ್ಲರ್ ಚಿತ್ರ ‘ಖನನ’ 50 ದಿನ ಪೂರೈಸಿದ ಬೆನ್ನಲ್ಲೇ ನಾಯಕ ನಟ ಆರ್ಯವರ್ಧನ್, ಮತ್ತೊಂದು ಪ್ರಾಜೆಕ್ಟ್ ಗೆ ಕೈ ಹಾಕಿದ್ದಾರೆ ನಲಿಗೆ ಪ್ರೊಡಕ್ಷನ್ ಸಹಯೋಗದೊಡನೆ ಅವಿರಾ ಎಂಟರ್ ಟೈನ್ ಮೆಂಟ್ ನ ಇನ್ನೂ ಹೆಸರಿಡದ ಚಿತ್ರಕ್ಕೆ ಆಯ್ಕೆಯಾಗಿದ್ದಾರೆ ಸದ್ಯಕ್ಕೆ ಪ್ರೊಡಕ್ಷನ್ ನಂ 2 ಹೆಸರಿನಲ್ಲಿ ಚಿತ್ರದ ಕೆಲಸ ಶುರು ಮಾಡಿದ್ದು, ಪೋಸ್ಟರ್ ಬಿಡುಗಡೆಯಾಗಿದೆ.

 Sharesee more..

ಫ್ಲೆಕ್ಸ್ ಬ್ಯಾನರ್ ಬಳಕೆಗಾಗಿ ಸರ್ಕಾರಕ್ಕೆ ಮನವಿ ಮಾಡಲಾಗಿದೆ-ಕೆಎಪ್ ಸಿಸಿ ನೂತನ ಅಧ್ಯಕ್ಷ ಜೈರಾಜ್

02 Jul 2019 | 8:00 PM

ಬೆಂಗಳೂರು, ಜುಲೈ, 2 (ಯುಎನ್ಐ) ರಾಜ್ಯದಲ್ಲಿ ನೂತನ ಚಿತ್ರಗಳ ಬಗ್ಗೆ ಸಾರ್ವಜನಿಕರ ಗಮನ ಸೆಳೆಯುವ ಫ್ಲೆಕ್ಸ್ ಬ್ಯಾನರ್ ಬಳಕೆಗೆ ಹೈಕೋರ್ಟ್ ಹೇರಿರುವ ನಿಷೇದ ತೆರವಿಗೆ ಮನವಿ ಮಾಡಲಾಗಿದೆ ಎಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ನೂತನ ಅಧ್ಯಕ್ಷ ಗುಬ್ಬಿ ಜೈರಾಜ್ ತಿಳಿಸಿದ್ದಾರೆ ‘ಖನನ’ ಚಿತ್ರದ 50ನೇ ದಿನದ ಸಂಭ್ರಮದ ಕಾರ್ಯಕ್ರಮದಲ್ಲಿ ಭಾಗವಹಿಸಿ, ಚಿತ್ರತಂಡವನ್ನು ಹಾರೈಸಿ ಮಾತನಾಡಿದ ಅವರು, “ಸಾರ್ವಜನಿಕವಾಗಿ ಎಲ್ಲೆಂದರಲ್ಲಿ ಸಿನಿಮಾಗಳ ಫ್ಲೆಕ್ಸ್ ಬ್ಯಾನರ್ ಹಾಕುವುದು ಅಪರಾಧವಾಗಿದೆ ಹೀಗಾಗಿ ಅವುಗಳಿಗೆ ಒಂದು ನಿರ್ಧಿಷ್ಟ ಜಾಗ ನೀಡಿದರೆ, ಸಮರ್ಪಕವಾಗಿ ಬಳಸಿಕೊಳ್ಳಬಹುದು ಈ ಸಂಬಂಧ ಸರ್ಕಾರದ ಗಮನವನ್ನೂ ಸೆಳೆಯಲಾಗಿದೆ ಈಗ ಕಾಟನ್ ಮೆಟಿರಿಯಲ್ ನಲ್ಲೇ ಬ್ಯಾನರ್ ತಯಾರಾಗುತ್ತಿದ್ದು, ಅವುಗಳನ್ನೇ ಉಪಯೋಗಿಸಬಹುದು ಆದಾಗ್ಯೂ ಫ್ಲೆಕ್ಸ್ ಬ್ಯಾನರ್ ಬಳಕೆ ಬಗ್ಗೆ ಕಾರ್ಪೊರೇಷನ್ ನಿಯಮದಲ್ಲಿ ಅವಕಾಶವಿದೆ ಎಂಬುದರ ಮಾಹಿತಿಯನ್ನು ಸರಿಯಾಗಿ ನೀಡಿಲ್ಲ ” ಎಂದು ಹೇಳಿದರು.

 Sharesee more..

ನಗೆಮೊಗದರಸ ಗಣೇಶ್ ಜನ್ಮದಿನಕ್ಕೆ ಗೀತಾ ಚಿತ್ರದ ಸರ್ ಪ್ರೈಸ್ ಗಿಫ್ಟ್!

02 Jul 2019 | 7:07 PM

ಬೆಂಗಳೂರು, ಜುಲೈ 2 (ಯುಎನ್ಐ) ಚಂದನವನದ ನಗೆಮೊಗದ ಸರದಾರ, ಗೋಲ್ಡನ್ ಸ್ಟಾರ್ ಗಣೇಶ್ ಈ ವರ್ಷ ಹುಟ್ಟುಹಬ್ಬ ಆಚರಿಸಿಕೊಂಡಿಲ್ಲ ಅವರು ಕೇಕ್ ಕಟ್ ಮಾಡಿ ಹಾರ, ತುರಾಯಿ ಹಾಕಿಸಿಕೊಳ್ಳದಿದ್ದರೇನು, ನಾವಂತೂ ಶುಭ ಹಾರೈಸುತ್ತೇವೆ ಎಂದು ಚಿತ್ರರಂಗದ ಗಣ್ಯರು, ಕಲಾಭಿಮಾನಿಗಳು ಜಾಲತಾಣಗಳಲ್ಲಿ ‘ಹ್ಯಾಪಿ ಬರ್ತ್ ಡೇ’ ಹೇಳಿದ್ದಾರೆ ಅವರ ಅಭಿನಯದ ‘ಗೀತಾ; ಚಿತ್ರತಂಡ ಟೀಸರ್ ಬಿಡುಗಡೆಗೊಳಿಸುವ ಮೂಲಕ ಸರ್ ಪ್ರೈಸ್ ಗಿಫ್ಟ್ ನೀಡಿದೆ ಹೌದು, ಮಂಗಳವಾರ ಜುಲೈ 2 ಗಣೇಶ್ ಹುಟ್ಟಿದ ದಿನ ಆದರೆ ತಂದೆ ವಿಧಿವಶರಾದ ದುಃಖದಲ್ಲಿರುವ ಗಣೇಶ್, ಈ ವರ್ಷ ತಾವು ಹುಟ್ಟು ಹಬ್ಬ ಆಚರಿಸಿಕೊಳ್ಳುವುದಿಲ್ಲ ಎಂದು ಮುಂಚಿತವಾಗಿಯೇ ಟ್ವೀಟ್ ಮಾಡಿದ್ದರು ರಾಜ್ಯದ ಬೇರೆ ಬೇರೆ ಪ್ರದೇಶಗಳಿಂದ ಆಭಿಮಾನಿಗಳು ಮನೆಗೆ ಬರುವುದು ಬೇಡ, ಹಾರ, ತುರಾಯಿಗೆ ಹಣ ಖರ್ಚು ಮಾಡಬೇಡಿ, ಅದೇ ದುಡ್ಡನ್ನು ಅನಾಥಾಶ್ರಮಕ್ಕೆ ನೀಡಿ, ನಿಮ್ಮ ಪ್ರೀತಿಗೆ ನಾನೆಂದೂ ಋಣಿಯಾಗಿರುವೆ ಎಂದು ಮನವಿಯನ್ನೂ ಮಾಡಿಕೊಂಡಿದ್ದರು.

 Sharesee more..