Saturday, May 25 2019 | Time 04:58 Hrs(IST)
Flash
ಭಾರತದ ಜೊತೆ ಮಾತುಕತೆಗೆ ಪಾಕ್ ಸಿದ್ಧ: ಖುರೇಷಿ

ಭಾರತದ ಜೊತೆ ಮಾತುಕತೆಗೆ ಪಾಕ್ ಸಿದ್ಧ: ಖುರೇಷಿ

23 May 2019 | 4:29 PM

ಇಸ್ಲಾಮಾಬಾದ್, ಮೇ 23 (ಯುಎನ್ಐ ) ಪ್ರಧಾನಿ ನರೇಂದ್ರ ಮೋದಿ ಅಧಿಕಾರಕ್ಕೆ ಮರಳುವ ಕೇವಲ ಒಂದು ದಿನ ಮುನ್ನವೇ ಭಾರತದ ಜೊತೆ ಎಲ್ಲ ವಿಷಯಗಳ ಬಗ್ಗೆ ದೀರ್ಘ ಸಮಾಲೋಚನೆ ನಡೆಸಲು ಪಾಕಿಸ್ತಾನ ಮುಂದಾಗಿದೆ.

 Sharesee more..

ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡರಿಗೆ ಸೋಲು

23 May 2019 | 1:27 PM

ತುಮಕೂರು, ಮೇ 23 [ಯುಎನ್ಐ] ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ತುಮಕೂರು ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಜಿ ಎಸ್ ಬಸವರಾಜ್ ವಿರುದ್ಧ ಪರಾಭವಗೊಂಡಿದ್ದಾರೆ ಬಸವರಾಜ್ ವಿರುದ್ಧ ದೇವೇಗೌಡರು 27 ಸಾವಿರ ಮತಗಳ ಅಂತರದಲ್ಲಿ ಸೋಲು ಅನುಭವಿಸಿದ್ದಾರೆ.

 Sharesee more..

ಪುಟಿನ್ - ಟ್ರಂಪ್ ಶೃಂಗಸಭೆ : ನಾಳೆ ಪೂರ್ವಭಾವಿ ಮಾತುಕತೆ

13 May 2019 | 2:27 PM

ಮಾಸ್ಕೋ, ಮೇ 13 (ಸ್ಪುಟ್ನಿಕ್) ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಮತ್ತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಡುವೆ ಜಪಾನ್ ನಗರದ ಒಸಾಕಾದಲ್ಲಿ ಜೂನ್ ಅಂತ್ಯದಲ್ಲಿ ನಡೆಯಲಿರುವ ಶೃಂಗಸಭೆಯ ಬಗ್ಗೆ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಜೊತೆಮೈಕ್ ಪೊಂಪಿಯೋ ಮತ್ತು ರಷ್ಯಾ ನಾಯಕರ ನಡುವೆ ಪೂರ್ವಭಾವಿ ಮಾತುಕತೆ ನಾಳೆ ನಡೆಯಲಿದೆ ಎಂದು ರಷ್ಯಾದ ಉಪ ವಿದೇಶಾಂಗ ಸಚಿವ ಸೆರ್ಗೆ ರೈಬ್ಕೊವ್ ಸೋಮವಾರ ತಿಳಿಸಿದ್ದಾರೆ.

 Sharesee more..

ಕಾಬೂಲ್ ನಲ್ಲಿ ಸ್ಫೋಟ: 12 ಜನರಿಗೆ ಗಾಯ

08 May 2019 | 4:06 PM

ಕಾಬುಲ್, ಮೇ 8 (ಸ್ಪುಟ್ನಿಕ್) ಕಾಬೂಲ್ ನಲ್ಲಿ ಸಂಭವಿಸಿದ ಸ್ಫೋಟದಲ್ಲಿ ಕನಿಷ್ಠ 12 ಮಂದಿ ಗಾಯಗೊಂಡಿದ್ದಾರೆಂದು ಅಫ್ಘಾನಿಸ್ತಾನ ಸಾರ್ವಜನಿಕ ಆರೋಗ್ಯ ಸಂಸ್ಥೆ ಬುಧವಾರ ತಿಳಿಸಿದೆ ಅಫ್ಘಾನಿಸ್ತಾನದಲ್ಲಿನ ಅಮೆರಿಕ ಸಹಾಯದಿಂದ ನಿರ್ಮಿತವಾದ ಕಚೇರಿಯನ್ನು ಗರಿಯಾಗಿಟ್ಟುಕೊಂಡು ಸ್ಪೋಟ ಮಾಡಲಾಗಿದೆ ಎಂದು ಸಾರ್ವಜನಿಕ ಆರೋಗ್ಯ ಸಚಿವಾಲಯದ ವಕ್ತಾರ ವಹೀತುಲ್ಲಾ ಮಯರ್ ತಿಳಿಸಿದ್ದಾರೆ.

 Sharesee more..

ಲಾಹೋರ್ ದರ್ಗಾ ಬಳಿ ಬಾಂಬ್ ಸ್ಫೋಟ : ಕನಿಷ್ಠ 8 ಸಾವು

08 May 2019 | 1:17 PM

ಲಾಹೋರ್, ಮೇ 8 (ಯುಎನ್ಐ) ಪಾಕಿಸ್ತಾನದ ಲಾಹೋರ್ ನಲ್ಲಿರುವ ದಾತಾ ದರ್ಬಾರ್ ದರ್ಗಾ ಬಳಿ ಇಂದು ಬೆಳಗ್ಗೆ ಬಾಂಬ್ ಸ್ಫೋಟಗೊಂಡು ಕನಿಷ್ಠ ಎಂಟು ಜನ ಮೃತಪಟ್ಟು ಇತರೆ 25 ಮಂದಿ ಗಾಯಗೊಂಡಿದ್ದಾರೆ ದರ್ಗಾದ ಹೊರಗಡೆ ನಿಲ್ಲಿಸಲಾಗಿದ್ದ ಪೊಲೀಸ್ ಉತ್ಕೃಷ್ಟ ಪಡೆಯ ವಾಹನದ ಬಳಿ ಆತ್ಮಾಹುತಿ ದಾಳಿ ನಡೆಸಲಾಗಿದೆ ಎಂದು ಆರಂಭಿಕ ವರದಿಗಳು ತಿಳಿಸಿವೆ.

 Sharesee more..

ಗಾಜಾ ಪಟ್ಟಿಯಲ್ಲಿ ಇಸ್ರೇಲ್ ದಾಳಿ: 4 ಪ್ಯಾಲೇಸ್ಟಿನಿಯರಿಗೆ ಗಾಯ

04 May 2019 | 4:10 PM

ಗಾಜಾ, ಮೇ 4 (ಸ್ಪುಟ್ನಿಕ್) ಉತ್ತರ ಗಾಜಾ ಪಟ್ಟಿಯಲ್ಲಿ ಇಸ್ರೇಲ್ ನಡೆಸಿದ ವೈಮಾನಿಕ ದಾಳಿಯಲ್ಲಿ ಕನಿಷ್ಠ ನಾಲ್ಕು ಪ್ಯಾಲೆಸ್ಟೀನಿಯರು ಗಾಯಗೊಂಡಿದ್ದಾರೆ ಎಂದು ಗಾಜಾ ಆರೋಗ್ಯ ಸಚಿವಾಲಯದ ವಕ್ತಾರ ಆಶ್ರಫ್ ತಿಳಿಸಿದ್ದಾರೆ ಇಸ್ರೇಲ್ ವಾಯುಪಡೆ ಉತ್ತರದ ಬೀಟ್ ಹಾನೌನ್ ನಗರದ ಬಳಿ ನಡೆಸಿದ ದಾಳಿಯಲ್ಲಿ ನಾಲ್ವರು ಗಾಯಗೊಂಡಿದ್ದಾರೆ.

 Sharesee more..

ಪೋನಿ ಚಂಡಮಾರುತ: ವಿದೇಶದಿಂದಲೇ ಹಸೀನಾ ಸೂಚನೆ

03 May 2019 | 2:20 PM

ಢಾಕಾ, ಬುಧವಾರ, ಮೇ 3 (ಯುಎನ್ಐ ) ಪೋನಿ ಚಂಡಮಾರುತ ಹಿನ್ನಲೆಯಲ್ಲಿ ಎಲ್ಲಾ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳುವಂತೆ ಅಧಿಕಾರಿಗಳಿಗೆ ಬಾಂಗ್ಲಾದೇಶ ಪ್ರಧಾನ ಮಂತ್ರಿ ಶೇಖ್ ಹಸೀನಾ ವಿದೇಶದಿಂದಲೇ ಸೂಚನೆ ನಿಡಿದ್ದಾರೆ ಪ್ರಸ್ತುತ ಲಂಡನ್ ಪ್ರವಾಸಲ್ಲಿ ಇರುವ ಅವರು ಅಲ್ಲಿಂದಲೇ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ ಶುಕ್ರವಾರ ಬಾಂಗ್ಲಾದೇಶದ ಕರಾವಳಿ ಪ್ರದೇಶಗಳಿಗೆ ಅಪ್ಪಳಿಸುವ ಸಾಧ್ಯತೆ ಕಾರಣ ಜೀವ ಮತ್ತು ಆಸ್ತಿ ಪಾಸ್ತಿಗಳ ನಷ್ಟವನ್ನು ಕಡಿಮೆ ಮಾಡಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಎಲ್ಲಾ ಇಲಾಖೆಗಳಿಗೆ ಸೂಚನೆ ನೀಡಿದ್ದಾರೆ ಎಂದು ಪ್ರಧಾನಿಯವರ ಮಾಧ್ಯಮ ಕಾರ್ಯದರ್ಶಿ ಇಹ್ಸಾನುಲ್ ಕರೀಮ್ ಯುಎನ್ಐಗೆ ತಿಳಿಸಿದ್ದಾರೆ.

 Sharesee more..

ಐ ಎಸ್ ಉಗ್ರ ಬಾಗ್ದಾದಿ ಬಗ್ಗೆ ಮಾಹಿತಿಯಿಲ್ಲ: ಕ್ರೆಮ್ಲಿನ್ ಸ್ಪಷ್ಟಣೆ

30 Apr 2019 | 3:55 PM

ಮಾಸ್ಕೋ, ಏ 30 (ಸ್ಪುಟ್ನಿಕ್) ಇಸ್ಲಾಮಿಕ್ ಸ್ಟೇಟ್‌ ಭಯೋತ್ಪಾದಕ ಅಬೂಬಕರ್ ಬಾಗ್ದಾದಿ ಜೀವಂತ ಇದ್ದಾನೋ ಸತ್ತಿದ್ದಾನೋ ಎಂಬ ಬಗ್ಗೆ ಕ್ರೆಮ್ಲಿನ್‌ಗೆ ಯಾವುದೇ ಅಧಿಕೃತ ಮಾಹಿತಿ ಇಲ್ಲ ಎಂದು ವಕ್ತಾರ ಡಿಮಿಟ್ರಿ ಪೆಸ್ಕೊವ್ ಹೇಳಿದ್ದಾರೆ ಭಯೋತ್ಪಾದಕರು ಐದು ವರ್ಷಗಳಲ್ಲಿ ಮೊದಲ ಬಾರಿಗೆ ಬಾಗ್ದಾದಿಯಂತೆ ಕಾಣುವ ವ್ಯಕ್ತಿಯ ವೀಡಿಯೊವೊಂದನ್ನು ಪ್ರಕಟಿಸಿದ್ದಾರೆಂಬ ಮಾಧ್ಯಮ ವರದಿಗಳ ಹಿನ್ನೆಲೆಯಲ್ಲಿ ವಕ್ತಾರರು ಈ ಸ್ಪಷ್ಟನೆ ನೀಡಿದ್ದಾರೆ.

 Sharesee more..

ಜಿಂಬಾಬ್ವೆ ವಿಮಾನಕ್ಕೆ ಬೆಂಕಿ : ಪ್ರಯಾಣಿಕರು ಪಾರು

29 Apr 2019 | 3:54 PM

ಹರಾರೆ, ಏ 29(ಯುಎನ್ಐ ) ಏರ್ ಜಿಂಬಾಬ್ವೆ ವಿಮಾನ ಹಾರಾಡುತ್ತಿರುವಾಗಲೇ ಅದಕ್ಕೆ ಬೆಂಕಿ ತಗುಲಿ ಎಂಜಿನ್ ಸ್ಥಗಿತವಾಗಿದ್ದರೂ ವಿಮಾನ ಸುರಕ್ಷಿತವಾಗಿ ಕೆಳಕ್ಕೆ ಇಳಿದು ಎಲ್ಲ ಪ್ರಯಾಣಿಕರು ಪಾರಾಗಿದ್ದಾರೆ ಈ ಘಟನೆಯಲ್ಲಿ ಸುದೈವವಶಾತ್ ಯಾರೊಬ್ಬರಿಗೂ ಗಾಯಗಳಾಗಿಲ್ಲ ಎಂದು ಸಿಬ್ಬಂದಿ ಹೇಳಿಕೊಂಡಿದೆ.

 Sharesee more..

ಇಂಡೋನೇಶಿಯಾ ಪ್ರವಾಹ: ಸಾವಿನ ಸಂಖ್ಯೆ 31 ಕ್ಕೆ ಏರಿಕೆ

29 Apr 2019 | 12:19 PM

ಜಕಾರ್ತಾ, ಏಪ್ರಿ 29 (ಕ್ಸಿನ್ಹುವಾ) ಇಂಡೋನೇಷ್ಯಾ ಪಶ್ಚಿಮ ಪ್ರಾಂತ ಮತ್ತು ಜಕಾರ್ತಾದ ರಾಜಧಾನಿಯಲ್ಲಿ ಪ್ರವಾಹ ಹಾಗೂ ಭೂಕುಸಿತದಿಂದ ಸತ್ತವರ ಸಂಖ್ಯೆ 31 ಕ್ಕೆ ಏರಿಕೆಯಾಗಿದೆ ಇದರ ಜೊತೆಗೆ 13ಜನರು ಕಾಣೆಯಾಗಿದ್ದಾರೆ ಎಂದು ಸಂಸ್ಥೆ ಅಧಿಕಾರಿಗಳು ಹೇಳಿದ್ದಾರೆ.

 Sharesee more..

ವಾಯು ದಾಳಿಗೆ ಏಳು ತಾಲಿಬಾನ್ ಉಗ್ರರ ಬಲಿ

28 Apr 2019 | 11:53 AM

ಕಾಬೂಲ್, ಏ (ಯುಎನ್ಐ ) ಎ 28: ಗಝ್ನಿ ಪ್ರಾಂತ್ಯದ ಅಂಡಾರ್ ಮತ್ತು ಗೀರೋ ಜಿಲ್ಲೆಗಳಲ್ಲಿ ತಾಲಿಬಾನ್ ಅಡಗುದಾಣಗಳನ್ನು ಗುರಿಯಾಗಿಟ್ಟು ನಡೆಸಿದ ವಾಯು ದಾಳಿಯಲ್ಲಿ ಕೊಂಡಿದ್ದ ಏಳು ತಾಲಿಬಾನ್ ಯೋಧರು ಮತ್ತು ಒಬ್ಬ ಗಣಿಗಾರ ಮೃತಪಟ್ಟಿದ್ದಾನೆ ಎಂದು ಪ್ರಾಂತೀಯ ಸರ್ಕಾರದ ವಕ್ತಾರ ಅರೆಫ್ ನುರಿ ಭಾನುವಾರ ತಿಳಿಸಿದ್ದಾರೆ.

 Sharesee more..

ಉತ್ತರ ಸೊಮಾಲಿಯಾದಲ್ಲಿ ಮೂವರು ಐಎಸ್ ಐಎಸ್ ಭಯೋತ್ಪಾದಕರ ಹತ್ಯೆ; ಅಮೆರಿಕಾ ಸೇನೆ ಹೇಳಿಕೆ

27 Apr 2019 | 4:21 PM

ಮೊಗದಿಶು, ಏಪ್ರಿಲ್ 27(ಕ್ಸಿನುವಾ) ತನ್ನ ವಿಶೇಷ ಪಡೆಗಳು ಉತ್ತರ ಸೊಮಾಲಿಯಾದಲ್ಲಿ ಐಎಸ್ಐಎಸ್ ಭಯೋತ್ಪಾದಕರ ವಿರುದ್ಧ ಶುಕ್ರವಾರ ವೈಮಾನಿಕ ದಾಳಿ ನಡೆಸಿ ಮೂವರು ಉಗ್ರರನ್ನು ಹತ್ಯೆಮಾಡಿವೆ ಎಂದು ಅಮೆರಿಕಾ ಸೇನೆ ಅಫ್ರಿಕಾ ಖಂಡದಲ್ಲಿರುವ ಅಮೆರಿಕಾ ಪಡೆಗಳ ಮೇಲುಸ್ತುವಾರಿ ನೋಡಿಕೊಳ್ಳುತ್ತಿರುವ ಅಮೆರಿಕಾ ಅಫ್ರಿಕಾ ಕಮ್ಯಾಂಡ್ (ಅಫ್ರಿಕಾಂ), ಗೊಲೀಸ್ ಪರ್ವತ ಪ್ರದೇಶಗಳಲ್ಲಿ ಸೊಮಾಲಿಯಾ ಸರ್ಕಾರದ ಸಹಕಾರದೊಂದಿಗೆ ಈ ದಾಳಿ ನಡೆಸಲಾಯಿತು ಎಂದು ತಿಳಿಸಿದೆ.

 Sharesee more..

ಅಮೆರಿಕದಲ್ಲಿ ಹೆದ್ದಾರಿ ದುರಂತ: ನಾಲ್ವರ ಸಾವು

27 Apr 2019 | 4:18 PM

ಡೆನ್ವರ್, ಏ 27(ಯುಎನ್ಐ) ಅಮೆರಿಕಾದ ಕೊಲೊರೆಡೊ ಬಳಿಯ ಹೆದ್ದಾರಿಯಲ್ಲಿ ಸಂಭವಿಸಿದ ಭೀಕರ ಅಗ್ನಿ ಅಪಘಾತದಲ್ಲಿ 28 ವಾಹನಗಳು ಬೆಂಕಿಗಾಹುತಿಯಾಗಿ, ಕನಿಷ್ಠ ನಾಲ್ವರು ಮೃತಪಟ್ಟು ಇತರೆ 10 ಜನ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ ಈ ಅವಘಡದಲ್ಲಿ 28 ವಾಹನಗಳಿಗೆ ಬೆಂಕಿ ಹೊತ್ತಿದೆ, ಇದರಿಂದ ಹೆದ್ದಾರಿಯಲ್ಲಿ ಕೆಲ ಕಾಲ ರಸ್ತೆ ಸಂಚಾರ ಅಸ್ತವ್ಯಸ್ತವಾಗಿತ್ತು ಎಂದೂ ಪೊಲಿಸರು ತಿಳಿಸಿದ್ದಾರೆ.

 Sharesee more..

ಅಫ್ಘಾನಿಸ್ತಾನದಲ್ಲಿ ಸ್ಫೋಟ : ನಾಲ್ವರು ಉಗ್ರರ ಸಾವು

27 Apr 2019 | 2:19 PM

ಕಾಬೂಲ್ ,ಎ 27(ಯುಎನ್ಐ) ಅಫ್ಘಾನಿಸ್ತಾನದ ಬಡಾಖ್ಶಾನ್ ಪ್ರಾಂತ್ಯದ ವಾರ್ಡೋಜ್ ಜಿಲ್ಲೆಯಲ್ಲಿ ಇಂದು ಸಂಭವಿಸಿದ ಸ್ಫೋಟ ದುರಂತದಲ್ಲಿ ನಾಲ್ವರು ತಾಲಿಬಾನ್ ಉಗ್ರರು ಮೃತಪಟ್ಟಿದ್ದು ಇತರೆ ಇಬ್ಬರು ಗಾಯಗೊಂಡಿದ್ದಾರೆ ಎಂದು ಸ್ಥಳೀಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ ಶಸ್ತ್ರಾಸ್ತ್ರ ದಂಗೆಕೋರರ ಗುಂಪು,ತಿರ್ಗರಾನ್ ಪ್ರದೇಶದಲ್ಲಿ ರಸ್ತೆಯಲ್ಲಿ ನೆಲ ಬಾಂಬ್ ಇಟ್ಟು ಸ್ಫೋಟಿಸಿ ದುರಂತಕ್ಕೆ ಕಾರಣವಾಗಿದ್ದಾರೆ ಎಂದು ಆರೋಪಿಸಲಾಗಿದೆ.

 Sharesee more..

ಈಜಿಪ್ಟ್ ; ಬಿಷಪ್ ಕೊಲೆ, ಇಬ್ಬರು ಕಾಪ್ಟ್ ಪಂಥದ ಸನ್ಯಾಸಿಗಳಿಗೆ ಗಲ್ಲು ಶಿಕ್ಷೆ

25 Apr 2019 | 6:20 PM

ಕೈರೋ,ಏಪ್ರಿಲ್ 25 (ಯುಎನ್ಐ) – ಈಜಿಪ್ಟ್ ನಲ್ಲಿ ಕಳೆದ ವರ್ಷ ನಡೆದಿದ್ದ ಕ್ರೈಸ್ತ ಧರ್ಮಗುರುವೊಬ್ಬರ ಕೊಲೆ ಪ್ರಕರಣ ಸಂಬಂಧ ಇಬ್ಬರು ಕಾಪ್ಟಿಕ್ ಪಂಥದ ಮಾಜಿ ಕ್ರೈಸ್ತ ಸನ್ಯಾಸಿಗಳಿಗೆ ಮರಣದಂಡನೆ ಶಿಕ್ಷೆಯನ್ನು ದೃಢಪಡಿಸಲಾಗಿದೆ ಬಿಷಪ್ ಎಪಿಫನಿಯಸ್ (64) ಎಂಬುವವರನ್ನು, ವಾಯುವ್ಯ ಕೈರೋದ ಧಾರ್ಮಿಕ ಕೇಂದ್ರವೊಂದರಲ್ಲಿ ಕಳೆದ ವರ್ಷದ ಜುಲೈನಲ್ಲಿ ಭೀಕರವಾಗಿ ಹತ್ಯೆಗೀಡಾಗಿದ್ದರು.

 Sharesee more..