Monday, Sep 28 2020 | Time 13:15 Hrs(IST)
 • ಪಿಎಂ ಕೇರ್ಸ್ ನಿಧಿಗೆ ಬ್ಯಾಂಕ್ ಉದ್ಯೋಗಿಗಳಿಂದ 200 ಕೋಟಿರೂ ದೇಣಿಗೆ
 • ಸಂಸತ್ತಿನ ಒಳಗೆ ಮತ್ತು ಹೊರಗೆ ರೈತರ ಧ್ವನಿಯನ್ನು ಹತ್ತಿಕ್ಕಲಾಗುತ್ತಿದೆ; ರಾಹುಲ್‌
 • ರಾಜ್ಯದೆಲ್ಲೆಡೆ ರೈತರ ಆಕ್ರೋಶ: ಕರ್ನಾಟಕ ಬಂದ್ ಗೆ ಉತ್ತಮ ಪ್ರತಿಕ್ರಿಯೆ; ರಾಜಧಾನಿಯಲ್ಲಿ ಬೃಹತ್ ಪ್ರತಿಭಟನೆ
 • ರೈತರ ಪ್ರತಿಭಟನೆಯಲ್ಲಿ ರಾಹುಲ್ ಗಾಂಧಿ ಪಾಲ್ಗೊಳ್ಳುವ ಸಾಧ್ಯತೆ
 • ಸೆನ್ಸೆಕ್ಸ್ 300 ಅಂಕ ಏರಿಕೆ
 • ವಿಧಾನಸಭೆ ವಿಸರ್ಜಿಸಿ, ಚುನಾವಣೆ ಎದುರಿಸಿ; ಸಿದ್ದರಾಮಯ್ಯ
 • ಎಚ್ ಕೆ ಪಾಟೀಲ್ ಅವರಿಗೆ ಕೊರೊನಾ ಸೋಂಕು ದೃಢ
 • ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಆರ್‌ಸಿಬಿ ಸಂಭಾವ್ಯ ಇಲೆವೆನ್ ಇಂತಿದೆ
 • ಎಸ್ ಪಿ ಬಿ ನಿಧನ: ಸುಳ್ಳು ಸುದ್ದಿಗಳನ್ನು ಖಂಡಿಸಿರುವ ಪುತ್ರ ಎಸ್ ಪಿ ಚರಣ್
 • ಪುಲ್ವಾಮಾದಲ್ಲಿ ಶೋಧ ಕಾರ್ಯಾಚರಣೆ ಪುನರಾರಂಭ: ಈವರೆಗೆ ಇಬ್ಬರು ಎಲ್‍ ಇಟಿ ಉಗ್ರರು ಹತ
 • ಮಧ್ಯ ಕಾಶ್ಮೀರದಲ್ಲಿ ಭದ್ರತಾ ಪಡೆಗಳಿಂದ ಶೋಧ ಕಾರ್ಯಾಚರಣೆ ಆರಂಭ
 • ದೇಶದಲ್ಲಿ 50 ಲಕ್ಷ ಕೋವಿಡ್ -19 ಸೋಂಕಿತರು ಚೇತರಿಕೆ
 • ಕೊಡಗು, ಉಡುಪಿ, ಚಿಕ್ಕಮಗಳೂರಿನಲ್ಲಿ ರೈತರಿಂದ ಪ್ರತಿಭಟನೆ: ವಶಕ್ಕೆ ಪಡೆದ ಪೊಲೀಸರು
 • ದಾವಣಗೆರೆಯಲ್ಲಿ ಮುಖ್ಯಮಂತ್ರಿ ಪ್ರತಿಕೃತಿ ದಹನ , ಕೋಲಾರದಲ್ಲಿ ಕತ್ತೆ ಮೆರವಣಿಗೆ
 • ಭಾರತೀಯರೆಲ್ಲರಿಗೂ ಭಗತ್ ಸಿಂಗ್ ಸ್ಪೂರ್ತಿ: ಅಮಿತ್ ಶಾ
International

ನವೆಂಬರ್ 21-22ಕ್ಕೆ ಜಿ 20 ಶೃಂಗಸಭೆ

28 Sep 2020 | 8:22 AM

ಮಾಸ್ಕೋ, ಸೆ 28 (ಸ್ಪುಟ್ನಿಕ್) ಈ ವರ್ಷದ ಜಿ 20 ಶೃಂಗಸಭೆ ನವೆಂಬರ್ 21-22ರಂದು ನಡೆಯಲಿದ್ದು ಕೊರೋನಾ ಕಾರಣ ಆನ್ ಲೈನ್ ಮೂಲಕ ಆಯೋಜನೆಯಾಗಲಿದೆ "21 ನೇ ಶತಮಾನದ ಅವಕಾಶಗಳನ್ನು ಅರಿತುಕೊಳ್ಳುವುದು" ಎಂಬ ವಿಷಯದ ಅಡಿಯಲ್ಲಿ ಈ ವರ್ಷದ ಜಿ 20 ನಾಯಕರ ಶೃಂಗಸಭೆಯು ಕೊರೋನಾ ವೈರಸ್ ಸಾಂಕ್ರಾಮಿಕದ ಮಧ್ಯೆ ಆನ್‌ಲೈನ್ ರೂಪದಲ್ಲಿ ನಡೆಯಲಿದೆ” ಎಂದು ಜಿ 20 ಸೌದಿ ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿದೆ.

 Sharesee more..

ಬಾರ್‌ನಲ್ಲಿ ಬಂದೂಕುಧಾರಿಗಳ ದಾಳಿಗೆ 11 ಜನ ಬಲಿ

28 Sep 2020 | 7:57 AM

ಮೆಕ್ಸಿಕೊ ನಗರ, ಸೆಪ್ಟೆಂಬರ್ 28 (ಯುಎನ್‌ಐ) ಮೆಕ್ಸಿಕೊದ ಕೇಂದ್ರ ರಾಜ್ಯವಾದ ಗುವಾನಾಜುವಾಟೊದ ಬಾರ್‌ನಲ್ಲಿ ಬಂದೂಕುಧಾರಿಗಳು ನಡೆಸಿದ ಗುಂಡಿನ ದಾಳಿಗೆ ನಾಲ್ವರು ಮಹಿಳೆಯರು ಸೇರಿದಂತೆ ಒಟ್ಟು 11 ಜನರು ಸಾವನ್ನಪ್ಪಿದ್ದಾರೆ ಜರಾಲ್ ಡೆಲ್ ಪ್ರೊಗ್ರೆಸೊ ಪಟ್ಟಣದ ಬಾರ್ನಲ್ಲಿ ನಡೆದ ದಾಳಿಯಲ್ಲಿ 7 ಪುರುಷರು ಮತ್ತು ನಾಲ್ಕು ಮಹಿಳೆಯರು ಸಾವನ್ನಪ್ಪಿದ್ದು, ಇನ್ನೊಬ್ಬ ಮಹಿಳೆ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಪ್ರಾಸಿಕ್ಯೂಟರ್ ಕಚೇರಿಯ ಹೇಳಿಕೆ ಉಲ್ಲೇಖಿಸಿ ಕ್ಸಿನ್ಹುವಾ ವರದಿ ಮಾಡಿದೆ.

 Sharesee more..

ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ಶಾಶ್ವತ ಸದಸ್ಯತ್ವ ಪಡೆಯುವ ಭಾರತದ ಪ್ರಯತ್ನಕ್ಕೆ ಪಾಕ್ ಮತ್ತೆ ವಿರೋಧ

27 Sep 2020 | 9:40 PM

ವಿಶ್ವಸಂಸ್ಥೆ, ಸೆ 27 (ಯುಎನ್‌ಐ) ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ಶಾಶ್ವತ ಸದಸ್ಯತ್ವ ಪಡೆಯುವ ಭಾರತದ ಪ್ರಯತ್ನಕ್ಕೆ ಪಾಕಿಸ್ತಾನ ಮತ್ತೊಮ್ಮೆ ವಿರೋಧಿಸಿದೆ ಪ್ರಧಾನಿ ನರೇಂದ್ರ ಮೋದಿ ಶನಿವಾರ ವಿಶ್ವಸಂಸ್ಥೆ ಸಾಮಾನ್ಯ ಅಧಿವೇಶನ ಉದ್ದೇಶಿಸಿ ಮಾಡಿದ ಭಾಷಣದಲ್ಲಿ, ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ಭಾರತಕ್ಕೆ ಶಾಶ್ವತ ಸ್ಥಾನ ನೀಡುವ ಕುರಿತು ಬಲವಾಗಿ ಪ್ರತಿಪಾದಿಸಿದ್ದರು.

 Sharesee more..

ಕಂದಹಾರ್ ಪ್ರಾಂತ್ಯದಲ್ಲಿ ಘರ್ಷಣೆ:ಆಫ್ಘನ್ ಭದ್ರತಾ ಪಡೆಗಳಿಂದ 28 ಬಂಡುಕೋರರ ಹತ್ಯೆ

27 Sep 2020 | 5:28 PM

ಕಾಬೂಲ್, ಸೆ 27 (ಸ್ಪುಟ್ನಿಕ್) ದಕ್ಷಿಣ ಆಫ್ಘಾನಿಸ್ತಾನ ಪ್ರಾಂತ್ಯದ ಕಂದಹಾರ್‌ನಲ್ಲಿ ಭದ್ರತಾ ಪಡೆಗಳು ನಡೆಸಿದ ಕಾರ್ಯಾಚರಣೆಯಲ್ಲಿ 28 ಬಂಡುಕೋರರು ಸಾವನ್ನಪ್ಪಿದ್ದಾರೆ ಎಂದು ಪ್ರಾಂತ್ಯದ ಪೊಲೀಸ್ ಮುಖ್ಯಸ್ಥರ ವಕ್ತಾರರು ಭಾನುವಾರ ತಿಳಿಸಿದ್ದಾರೆ ಈ ಕಾರ್ಯಾಚರಣೆಯನ್ನು ಪ್ರಾಂತ್ಯದ ಮೈವಾಂಡ್ ಜಿಲ್ಲೆಯಲ್ಲಿ ಆರಂಭಿಸಲಾಗಿದ್ದು, 28 ಬಂಡುಕೋರರು ಸಾವನ್ನಪ್ಪಿದ್ದಾರೆ.

 Sharesee more..

ಅರ್ಮೇನಿಯ ಸೇನೆಯಿಂದ ಅಜರ್ ಬೈಜಾನ್ ನ 2 ಹೆಲಿಕಾಪ್ಟರ್, 3 ಡ್ರೋನ್‌ಗಳ ನಾಶ

27 Sep 2020 | 2:10 PM

ಯೆರೆವಾನ್, ಸೆ 27 (ಯುಎನ್‌ಐ) ನಾಗೋರ್ನೊ-ಕಾರ್ಬಖ್ ಪ್ರದೇಶದಲ್ಲಿ ಅಜರ್ ಬೈಜಾನ್ ಗೆ ಸೇರಿದ ಎರಡು ಹೆಲಿಕಾಪ್ಟರ್‌ಗಳು ಮತ್ತು ಮೂರು ಡ್ರೋನ್‌ಗಳನ್ನು ನಾಶಪಡಿಸಿರುವುದಾಗಿ ಅರ್ಮೇನಿಯ ರಕ್ಷಣಾ ಸಚಿವಾಲಯ ಭಾನುವಾರ ತಿಳಿಸಿದೆ ವಿವಾದಾತ್ಮಕ ಪ್ರದೇಶದಲ್ಲಿನ ನಾಗರಿಕರ ವಸಾಹತುಗಳ ಮೇಲೆ ಅಜರ್ ಬೈಜಾನ್ ನಡೆಸಿದ ದಾಳಿಗೆ ಪ್ರತೀಕಾರವಾಗಿ ಈ ದಾಳಿ ನಡೆದಿದೆ ಎಂದು ಎಂದು ಸಚಿವಾಲಯ ತಿಳಿಸಿದೆ.

 Sharesee more..

ಭಯೋತ್ಪಾದಕ ದಾಳಿಗೆ ಸಂಚು, ಇರಾಕಿನಲ್ಲಿ ಐವರು ಉಗ್ರರು ಹತ

27 Sep 2020 | 9:14 AM

ಕೈರೋ, ಸೆಪ್ಟೆಂಬರ್ 27 (ಯುಎನ್ಐ) ಇರಾಕಿನಲ್ಲಿ ಭಯೋತ್ಪಾದಕ ದಾಳಿಗೆ ಸಂಚು ಮಾಡಿ, ಸ್ಫೋಟಕ ಸಾಧನ ಅಳವಡಿಕೆ ಮಾಡುತ್ತಿದ್ದಾಗ ಸಿಡಿದು ಐವರು ಉಗ್ರರು ಹತರಾಗಿದ್ದಾರೆ ಇರಾಕ್‌ನ ಪಶ್ಚಿಮ ಅಲ್ ಅನ್ಬರ್ ಪ್ರಾಂತ್ಯದ ರುತ್ಬಾ ಪಟ್ಟಣದಲ್ಲಿ ಇಸ್ಲಾಮಿಕ್ ಸ್ಟೇಟ್ ಭಯೋತ್ಪಾದಕ ಗುಂಪು ಅಡಗಿರುವ ಸ್ಥಳದಲ್ಲಿ ಉಗ್ರರ ವಾಹನ ಸ್ಫೋಟಗೊಂಡಿದೆ ಎಂದು ಇರಾಕಿ ಭದ್ರತಾ ಪಡೆ ಹೇಳಿವೆ .

 Sharesee more..

ಲೆಬನಾನಿನಲ್ಲಿ ಘರ್ಷಣೆ: 13 ಉಗ್ರರ ಹತ್ಯೆ

27 Sep 2020 | 8:20 AM

ಬೈರೂತ್ , ಸೆಪ್ಟೆಂಬರ್ 27 (ಯುಎನ್ಐ) ಉತ್ತರ ಲೆಬನಾನಿನ ವಾಡಿ ಖಲೀದ್‌ನಲ್ಲಿ ಲೆಬನಾನಿನ ಸೇನೆ ಮತ್ತು ಶಸ್ತ್ರ ಸಜ್ಜಿತ ಬಂಡುಕೋರರ ನಡುವೆ ನಡೆದ ಘರ್ಷಣೆಯಲ್ಲಿ ಒಟ್ಟು 13 ಉಗ್ರರು ಹತರಾಗಿದ್ದಾರೆ ಎಂದು ಮಧ್ಯಮ ಶನಿವಾರ ವರದಿ ಮಾಡಿವೆ.

 Sharesee more..

ಪಾಕಿಸ್ತಾನದಲ್ಲಿ ವ್ಯಾನ್ ಅಪಘಾತ: 13 ಮಂದಿ ಸಾವು

27 Sep 2020 | 8:10 AM

ಇಸ್ಲಾಮಾಬಾದ್, ಸೆಪ್ಟೆಂಬರ್ 27 (ಯುಎನ್ಐ) ಪಾಕಿಸ್ತಾನದ ದಕ್ಷಿಣ ಸಿಂಧ್ ಪ್ರಾಂತ್ಯದಲ್ಲಿ ಶನಿವಾರ ರಾತ್ರಿ ಪ್ರಯಾಣಿಕರ ವ್ಯಾನ್ ಉರುಳಿಬಿದ್ದು, ನಂತರ ಬೆಂಕಿಗೆ ಆಹುತಿಯಾಗಿ 13 ಜನರು ಸಾವನ್ನಪ್ಪಿದ್ದು ಇತರೆ ಮತ್ತು 7 ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

 Sharesee more..

ವಿಶ್ವಸಂಸ್ಥೆಗೆ ಪರೋಕ್ಷ ಎಚ್ಚರಿಕೆ- ನಿರ್ಧಾರಗಳಿಂದ ಭಾರತವನ್ನು ಎಷ್ಟು ಕಾಲ ಹೊರಗಿಡಲು ಸಾಧ್ಯ? -ಪ್ರಧಾನಿ ಮೋದಿ

26 Sep 2020 | 9:09 PM

ನವದೆಹಲಿ, ಸೆ 26 (ಯುಎನ್‌ಐ) ವಿಶ್ವದಲ್ಲಿನ ಸದ್ಯದ ಬದಲಾವಣೆಗಳನ್ನು ಪ್ರತಿಬಿಂಬಿಸುವಂತೆ ವಿಶ್ವಸಂಸ್ಥೆಗೆ ಕರೆ ನೀಡಿರುವ ಪ್ರಧಾನಿ ನರೇಂದ್ರ ಮೋದಿ, ನಿರ್ಧಾರಗಳನ್ನು ತೆಗೆದುಕೊಳ್ಳುವ ಪ್ರಕ್ರಿಯೆಯಿಂದ ಭಾರತವನ್ನು ಎಷ್ಟು ಕಾಲ ದೂರವಿಡಲು ಸಾಧ್ಯ ? ಎಂದು ಪ್ರಶ್ನಿಸಿದ್ದಾರೆ.

 Sharesee more..
ಲಸಿಕೆಗೆ ಮೊದಲೇ 20 ಲಕ್ಷ ಜನರ ಬಲಿ ಪಡೆಯಲಿರುವ ಕರೋನ: ಡಬ್ಲ್ಯೂಎಚ್ಒ

ಲಸಿಕೆಗೆ ಮೊದಲೇ 20 ಲಕ್ಷ ಜನರ ಬಲಿ ಪಡೆಯಲಿರುವ ಕರೋನ: ಡಬ್ಲ್ಯೂಎಚ್ಒ

26 Sep 2020 | 6:12 PM

ಜಿನೇವಾ, ಸೆಪ್ಟೆಂಬರ್ 26 (ಯುಎನ್ಐ ) ಕರೋನ ಮಣಿಸಲು ಪರಿಣಾಮಕಾರಿ ಲಸಿಕೆ ಬಳಕೆಗೆ ಬರುವ ಮೊದಲೇ ಜಗತ್ತಿನಲ್ಲಿ ಸಾವಿನ ಸಂಖ್ಯೆ 20 ಲಕ್ಷ ದಾಟಬಹುದು ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯೂಎಚ್ಒ) ಕಳವಳ ವ್ಯಕ್ತಪಡಿಸಿದೆ.

 Sharesee more..
ಕಿಮ್‍ ಜಾಂಗ್‍ ಉನ್‍ ಬೇಷರತ್‍ ಭೇಟಿಗೆ ಸಿದ್ಧ- ಜಪಾನ್‌ನ ಹೊಸ ಪ್ರಧಾನಿ ಸುಗಾ

ಕಿಮ್‍ ಜಾಂಗ್‍ ಉನ್‍ ಬೇಷರತ್‍ ಭೇಟಿಗೆ ಸಿದ್ಧ- ಜಪಾನ್‌ನ ಹೊಸ ಪ್ರಧಾನಿ ಸುಗಾ

26 Sep 2020 | 6:03 PM

ವಿಶ್ವಸಂಸ್ಥೆ, ಸೆ 26 (ಸ್ಪುಟ್ನಿಕ್) ಯಾವುದೇ ಷರತ್ತುಗಳಿಲ್ಲದೆ ಉತ್ತರ ಕೊರಿಯಾದ ಅಧಿನಾಯಕ ಕಿಮ್ ಉನ್ ಅವರನ್ನು ಭೇಟಿಯಾಗಲು ಸಿದ್ಧ ಎಂದು ಜಪಾನ್‌ನ ಹೊಸ ಪ್ರಧಾನಿ ಯೋಶಿಹಿಡೆ ಸುಗಾ ವಿಶ್ವಸಂಸ್ಥೆಯ ಸಾಮಾನ್ಯ ಅಧಿವೇಶನದಲ್ಲಿ ಮಾಡಿದ ಭಾಷಣದಲ್ಲಿ ಎಂದು ಹೇಳಿದ್ದಾರೆ.

 Sharesee more..
ವಿಶ್ವಸಂಸ್ಥೆ ಸಾಮಾನ್ಯ ಅಧಿವೇಶನ: ಇಡೀ ಪಾಕ್ ಆಕ್ರಮಿತ ಕಾಶ್ಮೀರ ತೆರವುಗೊಳಿಸಲು ಪಾಕ್ ಗೆ ಭಾರತ ಖಡಕ್ ಕರೆ

ವಿಶ್ವಸಂಸ್ಥೆ ಸಾಮಾನ್ಯ ಅಧಿವೇಶನ: ಇಡೀ ಪಾಕ್ ಆಕ್ರಮಿತ ಕಾಶ್ಮೀರ ತೆರವುಗೊಳಿಸಲು ಪಾಕ್ ಗೆ ಭಾರತ ಖಡಕ್ ಕರೆ

26 Sep 2020 | 5:06 PM

ನ್ಯೂಯಾರ್ಕ್, ಸೆ 26(ಯುಎನ್ಐ)- ಸದ್ಯಕ್ಕೆ ಇರುವ ಒಂದೇ ವಿವಾದವಾಗಿರುವ ಪಾಕ್ ಆಕ್ರಮಿತ ಕಾಶ್ಮೀರವನ್ನು ತೆರವುಗೊಳಿಸುವಂತೆ ಪಾಕಿಸ್ತಾನಕ್ಕೆ ಕರೆ ನೀಡಿರುವ ಭಾರತ, ಭಯೋತ್ಪಾದನೆಗೆ ನೈತಿಕ, ಹಣಕಾಸು ಮತ್ತು ಇತರ ನೆರವು ಒದಗಿಸುವುದನ್ನು ಬಿಟ್ಟು ಸಾಮಾನ್ಯ ರಾಷ್ಟ್ರವಾಗಿರುವಂತೆ ಸೂಚಿಸಿದೆ.

 Sharesee more..

ಸಂಪೂರ್ಣ ಪಿಒಕೆ ಖಾಲಿ ಮಾಡಿ: ವಿಶ್ವಸಂಸ್ಥೆ ಸಭೆಯಲ್ಲಿ ಪಾಕ್‍ ಗೆ ಭಾರತ ಆಗ್ರಹ

26 Sep 2020 | 3:45 PM

ನ್ಯೂಯಾರ್ಕ್, ಸೆ 26 (ಯುಎನ್‍ಐ) ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಮಾಡಿರುವ ಭಾಷಣ ಸುಳ್ಳು , ತಪ್ಪು ಮಾಹಿತಿ ಎಂದು ಖಂಡಿಸಿರುವ ಭಾರತ, ಆಕ್ರಮಿತ ಕಾಶ್ಮೀರವನ್ನು ಸಂಪೂರ್ಣವನ್ನು ತೆರವುಗೊಳಿಸುವಂತೆ ಆಗ್ರಹಿಸಿದೆ.

 Sharesee more..

ಥಾಯ್ಲೆಂಡ್ ನಲ್ಲಿ ಪ್ರವಾಸಿ ಬಸ್ ಅಪಘಾತ: ಏಳು ಮಂದಿ ಸಾವು, 40 ಜನರಿಗೆ ಗಾಯ

26 Sep 2020 | 1:52 PM

ಬ್ಯಾಂಕಾಕ್, ಸೆ 26(ಯುಎನ್ಐ)- ಥಾಯ್ಲೆಂಡ್ ಈಶಾನ್ಯ ಪ್ರಾಂತ್ಯದಲ್ಲಿ ಪ್ರವಾಸಿ ಬಸ್ ಮತ್ತು ಟ್ರಕ್ ನಡುವೆ ಸಂಭವಿಸಿದ ಡಿಕ್ಕಿಯಿಂದ ಕನಿಷ್ಠ ಏಳು ಜನರು ಮೃತಪಟ್ಟು ಇತರ 40 ಜನರಿಗೆ ಗಾಯಗೊಂಡಿರುವ ಘಟನೆ ಶನಿವಾರ ಬೆಳಿಗ್ಗೆ ನಡೆದಿದೆ.

 Sharesee more..

ಟ್ರಿಪೋಲಿಯಲ್ಲಿ ಸಶಸ್ತ್ರ ಗುಂಪುಗಳ ನಡುವಿನ ಘರ್ಷಣೆ ಬಗ್ಗೆ ವಿಶ್ವಸಂಸ್ಥೆ ಕಳವಳ

26 Sep 2020 | 9:37 AM

ಟ್ರಿಪೊಲಿ, ಸೆ 26 (ಕ್ಸಿನ್ಹುವಾ) ಪೂರ್ವ ಟ್ರಿಪೊಲಿಯಲ್ಲಿ ಎರಡು ಸಶಸ್ತ್ರ ಗುಂಪುಗಳ ನಡುವಿನ ಘರ್ಷಣೆಯ ಬಗ್ಗೆ ಲಿಬಿಯಾದಲ್ಲಿನ ವಿಶ್ವಸಂಸ್ಥೆ ನೆರವು ಮಿಷನ್‍ ಕಳವಳ ವ್ಯಕ್ತಪಡಿಸಿದೆ ತಕ್ಷಣವೇ ಯುದ್ಧವನ್ನು ನಿಲ್ಲಿಸಬೇಕೆಂದು ಕರೆ ನೀಡಿರುವ ಮಿಷನ್ ಅಂತಾರಾಷ್ಟ್ರೀಯ ಮಾನವೀಯ ಕಾನೂನಿಗೆ ಅನುಸಾರವಾಗಿ ಎಲ್ಲಾ ಕಡೆಯವರು ಜವಾಬ್ದಾರಿಯಿಂದ ನಡೆದುಕೊಳ್ಳಬೇಕು ಎಂದು ಹೇಳಿದೆ.

 Sharesee more..