Friday, Feb 28 2020 | Time 07:38 Hrs(IST)
  • ಸಿರಿಯಾದಿಂದ ವೈಮಾನಿಕ ದಾಳಿ; 34 ಟರ್ಕಿ ಸೈನಿಕರು ಬಲಿ
  • ಚೀನಾಗೆ ಭಾರತದಿಂದ ವೈದ್ಯಕೀಯ ನೆರವು
  • ಮಹಾದಾಯಿ ನ್ಯಾಯಾಧಿರಣ ಅಧಿಸೂಚನೆ ಪ್ರಕಟ : ಯಡಿಯೂರಪ್ಪ ಹುಟ್ಟು ಹಬ್ಬಕ್ಕೆ ಕೇಂದ್ರದ ಭರ್ಜರಿ ಕೊಡುಗೆ
International Share

ಮಧ್ಯಪ್ರಾಚ್ಯ ಶಾಂತಿ ಯೋಜನೆ ಮುಂದಿನ ವಾರ ಬಿಡುಗಡೆ: ಟ್ರಂಪ್

ಮಧ್ಯಪ್ರಾಚ್ಯ ಶಾಂತಿ ಯೋಜನೆ ಮುಂದಿನ ವಾರ ಬಿಡುಗಡೆ: ಟ್ರಂಪ್
ಮಧ್ಯಪ್ರಾಚ್ಯ ಶಾಂತಿ ಯೋಜನೆ ಮುಂದಿನ ವಾರ ಬಿಡುಗಡೆ: ಟ್ರಂಪ್

ವಾಷಿಂಗ್ಟನ್, ಜ 24 (ಯುಎನ್‍ಐ) ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ಶಾಂತಿ ಸ್ಥಾಪನೆಗೆ ಅಗತ್ಯವಾದ ಯೋಜನೆಗಳಲನ್ನು ಶ್ವೇತಭವನ ಮುಂದಿನ ವಾರ ಬಿಡುಗಡೆ ಮಾಡಲಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‍ ತಿಳಿಸಿದ್ದಾರೆ.

ಇಸ್ರೇಲಿ ಪ್ರಧಾನಿ ಬೆಂಜಮಿನ್ ನೆತನ್ಯಾಹು ಮುಂದಿನ ವಾರ ವಾಷಿಂಗ್ಟನ್ ಗೆ ಭೇಟಿ ನೀಡುವ ಮೊದಲು ಮಧ್ಯಪ್ರಾಚ್ಯ ಶಾಂತಿ ಯೋಜನೆಯನ್ನು ಶ್ವೇತಭವನವು ಬಿಡುಗಡೆ ಮಾಡಲಿದೆ ಎಂದು ಟ್ರಂಪ್ ಹೇಳಿದ್ದಾರೆ.

ರಾಜಕೀಯ ಕಾರ್ಯಕ್ರಮಕ್ಕಾಗಿ ಮಿಯಾಮಿಗೆ ಹೋಗುವ ಮಾರ್ಗದಲ್ಲಿ ಏರ್ ಫೋರ್ಸ್ ಒನ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಟ್ರಂಪ್, ಪ್ಯಾಲೆಸ್ಟೀನಿಯಾದವರು ಮೊದಲಿಗೆ ತಮ್ಮ ಯೋಜನೆಗೆ ನಕಾರಾತ್ಮಕವಾಗಿ ಪ್ರತಿಕ್ರಿಯಿಸಬಹುದು, ಆದರೆ ಅದು ಅವರಿಗೆ ಪ್ರಯೋಜನವನ್ನು ನೀಡುತ್ತದೆ ಎಂದಿದ್ದಾರೆ.

ಮಂಗಳವಾರ ಶ್ವೇತಭವನದಲ್ಲಿ ನೆತನ್ಯಾಹು ಅವರನ್ನು ಭೇಟಿಯಾಗಲಿರುವ ಟ್ರಂಪ್, ಇದು ಒಂದು ದೊಡ್ಡ ಯೋಜನೆಯಾಗಿದ್ದು, ನಿಜವಾಗಿಯೂ ಫಲಪ್ರದವಾಗಲಿದೆ ಎಂಬ ಆಶಯವನ್ನು ವ್ಯಕ್ತಪಡಿಸಿದ್ದಾರೆ.

ಯುಎನ್‍ಐ ಎಸ್‍ಎ ವಿಎನ್‍ 0815

More News
ದಕ್ಷಿಣ ಕೊರಿಯಾದಲ್ಲಿ ಕೊರೊನ ವೈರಸ್ ನ 505 ಹೊಸ ಪ್ರಕರಣ ದೃಢ: ಒಟ್ಟು ಪ್ರಕರಣಗಳ ಸಂಖ್ಯೆ 1,766ಕ್ಕೆ ಏರಿಕೆ

ದಕ್ಷಿಣ ಕೊರಿಯಾದಲ್ಲಿ ಕೊರೊನ ವೈರಸ್ ನ 505 ಹೊಸ ಪ್ರಕರಣ ದೃಢ: ಒಟ್ಟು ಪ್ರಕರಣಗಳ ಸಂಖ್ಯೆ 1,766ಕ್ಕೆ ಏರಿಕೆ

27 Feb 2020 | 5:09 PM

ಸಿಯೋಲ್, ಫೆ 27 (ಕ್ಸಿನ್ಹುವಾ) ದಕ್ಷಿಣ ಕೊರಿಯಾದಲ್ಲಿ ಕೊರೊನವೈರಸ್ (ಕೊವಿದ್-19)ನ ಹೊಸ ಪ್ರಕರಣಗಳು ದೃಢಪಟ್ಟಿದ್ದು, ಸೋಂಕು ಪ್ರಕರಣಗಳ ಒಟ್ಟು ಸಂಖ್ಯೆ 1,766 ಕ್ಕೆ ಏರಿದೆ.

 Sharesee more..