Tuesday, Jul 23 2019 | Time 00:16 Hrs(IST)
International

ಯಮೆನ್ ಹೌತಿ ಬಂಡುಕೋರರಿಂದ ವಿಮಾನ ನಿಲ್ದಾಣ ಮೇಲೆ ದಾಳಿ

09 Jul 2019 | 10:58 AM

ಸಾನಾ, ಜುಲೈ 9 (ಕ್ಸಿನ್ಹುವಾ) ಯಮೆನ್ ನ ಹೌತಿ ಬಂಡುಕೋರರು ಸೌದಿ ಅರೇಬಿಯಾದ ದಕ್ಷಿಣ ನಗರ ಅಭಾದಲ್ಲಿ ಸೋಮವಾರ ರಾತ್ರಿ ವಿಮಾನ ನಿಲ್ದಾಣ ಮತ್ತು ತಮಾಹ ವಿದ್ಯುತ್ ಸ್ಥಾವರದ ಮೇಲೆ ಡ್ರೋನ್ ಮೂಲಕ ಬಾಂಬ್ ದಾಳಿ ನಡೆಸಿದ್ದಾರೆ ಎಂದು ಸ್ಥಳೀಯ ಮಾಧ್ಯಮ ವರದಿ ಮಾಡಿದೆ.

 Sharesee more..

ಭಾರತ- ಪಾಕ್ ಮಾತುಕತೆಗೆ ವೇದಿಕೆ ಸಜ್ಜು

09 Jul 2019 | 9:17 AM

ನವದೆಹಲಿ, ಜುಲೈ 9 (ಯುಎನ್‌ಐ) ಭಾರತ ಮತ್ತು ಪಾಕಿಸ್ತಾನ ನಡುವಿನ ಮಾತುಕತೆಗೆ ವೇದಿಕೆ ಸಜ್ಜಾಗಿದ್ದು ಈ ಮೂಲಕ ರಾಜತಾಂತ್ರಿಕ ಸಂಬಂಧಗಳು ಮತ್ತೆ ಪುನರಾರಂಭವಾಗಲು ಅನುಕೂಲವಾಗಲಿದೆ ಎನ್ನಲಾಗಿದೆ ಜುಲೈ 14 ರಂದು ವಾಘಾದಲ್ಲಿ ಕರ್ತಾರ್‌ಪುರ ಕಾರಿಡಾರ್ ಮತ್ತು ಸಂಬಂಧಿತ ತಾಂತ್ರಿಕ ಸಮಸ್ಯೆಗಳ ವಿಧಾನಗಳ ಕುರಿತು ಅಂತಿಮಗೊಳಿಸುವುದಾಗಿ ಪಾಕ್ ಹೇಳಿಕೊಂಡಿದೆ.

 Sharesee more..

ಬಾಂಗ್ಲಾದಲ್ಲಿ ಭಾರೀ ಮಳೆ: 2700 ರೋಹಿಂಗ್ಯಾ ನಿರಾಶ್ರಿತರ ಸ್ಥಳಾಂತರ

08 Jul 2019 | 10:55 PM

ವಾಷಿಂಗ್ಟನ್, ಜೂ 8 (ಸ್ಪುಟ್ನಿಕ್) ಬಾಂಗ್ಲಾ ದೇಶದ ಕಾಕ್ಸ್ ಬಜಾರ್ ನಲ್ಲಿ ಸುಮಾರು ಒಂದು ವಾರಗಳ ಕಾಲ ಸುರಿದ ಭಾರಿ ಮಳೆ ಮತ್ತು ಬಿರುಗಾಳಿಯಿಂದ 2,700 ಕ್ಕೂ ಹೆಚ್ಚು ರೋಹಿಂಗ್ಯಾ ನಿರಾಶ್ರಿತರನ್ನು ಸ್ಥಳಾಂತರಿಸಲಾಗಿದೆ ಎಂದು ಅಂತಾರಾಷ್ಟ್ರೀಯ ವಲಸೆ ಸಂಸ್ಥೆ (ಐಒಎಂ) ಸೋಮವಾರ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

 Sharesee more..

ಪಾಕ್ ಪ್ರಧಾನಿ ಇಮ್ರಾನ್ ಖಾನ್ ರಾಜಿನಾಮೆ ನೀಡುವಂತೆ ಪಿಎಂಎಲ್ ಉಪಾಧ್ಯಕ್ಷೆ ಮರಿಯಮ್ ನವಾಜ್ ಒತ್ತಾಯ

08 Jul 2019 | 9:02 PM

ಇಸ್ಲಾಮಾಬಾದ್, ಜುಲೈ 8 (ಯುಎನ್ಐ) ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್ ಶರೀಫ್ ಅವರನ್ನು ಕ್ಷುಲ್ಲಕ ಪ್ರಕರಣದಲ್ಲಿ ಸೆರೆವಾಸದಲ್ಲಿರಿಸಿದ ಹಾಲಿ ಪ್ರಧಾನಿ ಇಮ್ರಾನ್ ಖಾನ್ ರಾಜಿನಾಮೆ ನೀಡಬೇಕು ಎಂದು ಶರೀಫ್ ಪುತ್ರಿ ಹಾಗೂ ಪಿಎಂಎಲ್ ನ ಉಪಾಧ್ಯಕ್ಷೆ ಮರಿಯಮ್ ನವಾಜ್ ಒತ್ತಾಯಿಸಿದ್ದಾರೆ.

 Sharesee more..

ಇರಾನ್ ನಲ್ಲಿ 5.7 ತೀವ್ರತೆಯ ಭೂಕಂಪನ

08 Jul 2019 | 4:42 PM

ಟೆಹ್ರಾನ್, ಜುಲೈ 8 (ಕ್ಸಿನ್ಹುವಾ) ನೈರುತ್ಯ ಇರಾನಿನ ಮಸ್ ಜಿದ್ ಸೊಲೈಮನ್ ಪ್ರದೇಶದ ಕಸ್ತೂನ್ ಪ್ರಾಂತ್ಯದಲ್ಲಿ ಸೋಮವಾರ 5 7 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ಇರಾನಿನ ಭೂಕಂಪನ ಕೇಂದ್ರ ವರದಿ ಮಾಡಿದೆ.

 Sharesee more..

ಮಿಟಿಗಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕ್ಷಿಪಣಿ ದಾಳಿ: ಮೂವರಿಗೆ ಗಾಯ

08 Jul 2019 | 10:08 AM

ತ್ರಿಪೋಲಿ, ಜುಲೈ 8 (ಕ್ಷಿನುಹಾ) ಲಿಬಿಯಾ ರಾಜಧಾನಿ ತ್ರಿಪೋಲಿಯ ಮಿಟಿಗಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ರವಿವಾರ ನಡೆದ ಕ್ಷಿಪಣಿ ದಾಳಿಯಲ್ಲಿ ಮೂವರು ಸಿಬ್ಬಂದಿಗಳು ಗಾಯಗೊಂಡಿದ್ದು, ಒಂದು ವಿಮಾನ ನಷ್ಟವಾಗಿದೆ ಕ್ಷಿಪಣಿ ದಾಳಿಯಿಂದಾಗಿ ಕೆಲ ಗಂಟೆಗಳ ಕಾಲ ವಿಮಾನ ಹಾರಾಟ ಸ್ಥಗಿತಗೊಳಿಸಲಾಗಿತ್ತು ಎಂದು ನಿಲ್ದಾಣದ ಆಡಳಿತ ಮಂಡಳಿ ತಿಳಿಸಿದೆ.

 Sharesee more..

ಪಾಕಿಸ್ತಾನದಲ್ಲಿ ಎರಡು ಬುಡಕಟ್ಟು ಜನಾಂಗದ ನಡುವೆ ಗೋಲಿಬಾರ್: ಐದು ಜನರ ಸಾವು

08 Jul 2019 | 9:50 AM

ಡೇರಾ ಇಸ್ಮಾಯಿಲ್ ಖಾನ್, ಜುಲೈ 8 (ಯುಎನ್ಐ) ನೀರು ಹಂಚಿಕೆ ವಿಚಾರವಾಗಿ ಎರಡು ಬುಡಕಟ್ಟು ಸಮುದಾಯಗಳ ನಡುವೆ ಉಂಟಾದ ಹಿಂಸಾತ್ಮಕ ಘರ್ಷಣೆಯಲ್ಲಿ ಐವರನ್ನು ಗುಂಡಿಕ್ಕಿ ಹತ್ಯೆಗೈದಿರುವ ಘಟನೆ ಪಾಕಿಸ್ತಾನದ ಡೇರಾ ಇಸ್ಮಾಯಿಲ್‍ ಖಾನ್ ಸಮೀಪ ನಡೆದಿದೆ.

 Sharesee more..

ಭಾರತ-ರಷ್ಯಾ ಆರ್ಥಿಕ ಮಾತುಕತೆಗೆ ವೇದಿಕೆ ಸಿದ್ಧ: ಸೆಪ್ಟಂಬರ್‌ನಲ್ಲಿ ಮೋದಿ ರಷ್ಯಾ ಭೇಟಿ

08 Jul 2019 | 9:14 AM

ನವದೆಹಲಿ, ಜು 8 (ಯುಎನ್ಐ) ಖನಿಜ ಸಮೃದ್ಧ ಆಗ್ನೇಯ ರಷ್ಯಾದಲ್ಲಿ ಹೂಡಿಕೆ ಮಾಡಲು ಭಾರತ ಸರ್ಕಾರ ಮತ್ತು ವಿವಿಧ ಕಾರ್ಪೊರೇಟ್ ಸಂಸ್ಥೆಗಳು ಆಸಕ್ತಿ ತೋರುತ್ತಿರುವ ಸಂದರ್ಭದಲ್ಲಿಯೇ ನಿರ್ಣಾಯಕವಾಗಿರುವ ಇಂಡೋ-ರಷ್ಯಾ ಕಾರ್ಯತಂತ್ರದ ಆರ್ಥಿಕ ಮಾತುಕತೆ ಈ ವಾರ ದೆಹಲಿಯಲ್ಲಿ ನಡೆಯಲಿದೆ.

 Sharesee more..

ವೈಮಾನಿಕ ದಾಳಿಯಲ್ಲಿ ಮೂವರು ಭಯೋತ್ಪಾದಕರ ಹತ್ಯೆ

08 Jul 2019 | 9:07 AM

ಬಾಗ್ದಾದ್, ಜುಲೈ 8 (ಕ್ಷಿನುಹಾ) ಇರಾಕ್ ಉತ್ತರ ಪ್ರಾಂತ್ಯದ ಕಿರ್ಕುಕ್ ದಲ್ಲಿ ಅಮೆರಿಕ ನೇತೃತ್ವ ಪಡೆ ನಡೆಸಿದ ವೈಮಾನಿಕ ದಾಳಿಯಲ್ಲಿ ರವಿವಾರ ಇಸ್ಲಾಮಿಕ್ ಸ್ಟೇಟ್ (ಐಎಸ್) ನ ಮೂವರು ಭಯೋತ್ಪಾದಕರು ಹತರಾಗಿದ್ದಾರೆ ಸ್ಥಳೀಯ ಮಾಧ್ಯಮದನುಸಾರ, ಗುಪ್ತಚರ ಇಲಾಖೆಯ ಮಾಹಿತಿ ಮೇರೆಗೆ ಅಮೆರಿಕ ನೇತೃತ್ವದ ಸೇನೆ ಇರಾಕ್ ನ ರಾಜಧಾನಿ ಬಾಗ್ದಾದ್ ನ ಸುಮಾರು 250 ಕಿ.

 Sharesee more..

ಬಿಎಸ್‌ಎಫ್‌ನಿಂದ ಬಾಂಗ್ಲಾದೇಶಿ ಪ್ರಜೆ ಹತ್ಯೆ

07 Jul 2019 | 9:40 PM

ಡಾಕಾ, ಜುಲೈ 7 (ಯುಎನ್‌ಐ) ಲಾಲ್‌ಮೋನಿರ್‌ಹತ್‌ನ ಪ್ಯಾಟ್‌ಗ್ರಾಮ್ ಉಪಜಿಲ್ಲೆಯ ಬುರಿಮರಿ ಗಡಿಯಲ್ಲಿ ಬಾಂಗ್ಲಾದೇಶದ ಪ್ರಜೆಯೊಬ್ಬನನ್ನು ಭಾರತೀಯ ಗಡಿ ಭದ್ರತಾ ಪಡೆ (ಬಿಎಸ್‌ಎಫ್) ಭಾನುವಾರ ಗುಂಡಿಕ್ಕಿ ಕೊಂದಿದೆ ಮೃತನನ್ನು ಅರ್ಷಾದುಲ್ ಹಕ್ (30) ಎಂದು ಗುರುತಿಸಲಾಗಿದೆ.

 Sharesee more..

ಇರಾನ್‍ ವಿರುದ್ಧ ಐರೋಪ್ಯ ಒಕ್ಕೂಟದ ಕ್ರಮಕ್ಕೆ ನೆತನ್‍ಯಾಹು ಕರೆ

07 Jul 2019 | 9:16 PM

ಜೆರುಸಲೆಮ್, ಜುಲೈ 7(ಯುಎನ್‍ಐ)- ಪರಮಾಣು ಒಪ್ಪಂದಗಳ ಮಿತಿಗಳನ್ನು ದಾಟಿ ಯುರೇನಿಯಂ ಸಂಗ್ರಹ ಹೆಚ್ಚಿಸಿಕೊಳ್ಳುವುದಾಗಿ ಇರಾನ್‍ ಪ್ರಕಟಿಸಿದ ಕೆಲವೇ ತಾಸಿನಲ್ಲಿ ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಇಸ್ರೇಲ್ ಪ್ರಧಾನಿ ಬೆಂಜಮಿನ್‍ ನೆತನ್‍ಯಾಹು, ಇರಾನ್‍ ವಿರುದ್ಧ ಆರ್ಥಿಕ ದಿಗ್ಭಂದನಗಳನ್ನು ಮತ್ತೆ ಹೇರುವುದಾಗಿ ಎಚ್ಚರಿಸಿದ್ದಾರೆ.

 Sharesee more..

737 ಮ್ಯಾಕ್ಸ್ ವಿಮಾನಗಳ ಖರೀದಿ ರದ್ದುಗೊಳಿಸಿದ ಸೌದಿ ವಿಮಾನಯಾನ ಸಂಸ್ಥೆ

07 Jul 2019 | 8:53 PM

ದುಬೈ, ಜುಲೈ 7 (ಯುಎನ್‌ಐ) ಸೌದಿ ಅರೇಬಿಯಾದ ಬಜೆಟ್ ವಿಮಾನಯಾನ ಸಂಸ್ಥೆ ಫ್ಲೈಡಿಯಲ್ ,30 ಬೋಯಿಂಗ್ 737 ಮ್ಯಾಕ್ಸ್ ವಿಮಾನಗಳ ಖರೀದಿ ಆದೇಶವನ್ನು ರದ್ದುಗೊಳಿಸಿದೆ ಎಂದು ಬೋಯಿಂಗ್ ಭಾನುವಾರ ತಿಳಿಸಿದೆ ನಿಗದಿತ ವೇಳಾಪಟ್ಟಿಯಂತೆ ಫ್ಲೈಡಿಯಲ್ 737ಮ್ಯಾಕ್ಸ್‌ ವಿಮಾನ ಖರೀದಿ ವ್ಯವಹಾರ ಅಂತಿಮಗೊಳಿಸಿಲ್ಲ ಎಂದು ಬೋಯಿಂಗ್ ವಕ್ತಾರರು ತಿಳಿಸಿದ್ದಾರೆ.

 Sharesee more..

ವಿಶ್ವ ಪರಂಪರೆ ಪಟ್ಟಿಗೆ ತನ್ನ ಎರಡು ತಾಣಗಳ ಸೇರ್ಪಡೆಗೆ ಪೋರ್ಚುಗಲ್‍ ಸ್ವಾಗತ

07 Jul 2019 | 7:40 PM

ಲಿಸ್ಬನ್, ಜುಲೈ 7 (ಕ್ಸಿನ್ಹುವಾ) ದೇಶದ ಎರಡು ಪುರಾತತ್ವ ತಾಣಗಳನ್ನು ವಿಶ್ವ ಸಾಂಸ್ಕೃತಿಕ ಪರಂಪರೆ ಪಟ್ಟಿಗೆ ಸೇರಿಸುವ ವಿಶ್ವಸಂಸ್ಥೆಯ ಶೈಕ್ಷಣಿಕ, ವೈಜ್ಞಾನಿಕ ಮತ್ತು ಸಾಂಸ್ಕೃತಿಕ ಸಂಸ್ಥೆ (ಯುನೆಸ್ಕೋ) ನಿರ್ಧಾರವನ್ನು ಪೋರ್ಚುಗೀಸ್ ನಾಯಕರು ಭಾನುವಾರ ಸ್ವಾಗತಿಸಿದ್ದಾರೆ.

 Sharesee more..

ಕಳೆದ 24 ಗಂಟೆಗಳಲ್ಲಿ ಅಫಘಾನ್ ವಿಶೇಷ ಪಡೆಯಿಂದ 65 ಬಂಡುಕೋರರ ಹತ್ಯೆ

07 Jul 2019 | 7:04 PM

ಕಾಬೂಲ್, ಜುಲೈ 7 (ಯುಎನ್‌ಐ) ಕಳೆದ 24 ಗಂಟೆಗಳಲ್ಲಿ ಅಫಘಾನ್ ವಿಶೇಷ ಪಡೆ ನಡೆಸಿದ 15 ಜಂಟಿ ಕಾರ್ಯಾಚರಣೆಯಲ್ಲಿ ಕನಿಷ್ಠ 65 ದಂಗೆಕೋರರು ಸಾವನ್ನಪ್ಪಿದ್ದಾರೆ ಮತ್ತು 28 ಮಂದಿ ಗಾಯಗೊಂಡಿದ್ದಾರೆ ಎಂದು ಅಫಘಾನ್ ರಕ್ಷಣಾ ಸಚಿವಾಲಯ ಭಾನುವಾರ ಹೇಳಿದೆ.

 Sharesee more..

ಐಇಡಿ ಸ್ಫೋಟದಿಂದ ಅಫ್ಘಾನಿಸ್ತಾನದಲ್ಲಿ ಏಳು ಮಕ್ಕಳು ಸಾವು

07 Jul 2019 | 6:43 PM

ಕಾಬೂಲ್, ಜುಲೈ 7 (ಯುಎನ್‌ಐ) ಅಫ್ಘಾನಿಸ್ತಾನದ ಮಧ್ಯ ಘೋರ್ ಪ್ರಾಂತ್ಯದಲ್ಲಿ ಸುಧಾರಿತ ಸ್ಫೋಟಕ ಸಾಧನದ ದಾಳಿಯಿಂದಾಗಿ ಕನಿಷ್ಠ ಏಳು ಮಕ್ಕಳು ಸಾವನ್ನಪ್ಪಿದ್ದಾರೆ ಮತ್ತು ಒಬ್ಬರು ಗಾಯಗೊಂಡಿದ್ದಾರೆ ಎಂದು ಪ್ರಾಂತೀಯ ರಾಜ್ಯಪಾಲರ ಕಚೇರಿ ಭಾನುವಾರ ತಿಳಿಸಿದೆ.

 Sharesee more..