Monday, Jul 13 2020 | Time 04:34 Hrs(IST)
International

ಇರಾನ್ ಜನರಲ್ ಹತ್ಯೆ ಪ್ರಕರಣ; ಡೊನಾಲ್ಡ್‌ ಟ್ರಂಪ್ ವಿರುದ್ಧ ಇಂಟರ್‌ಪೋಲ್‌ನಲ್ಲಿ ಪ್ರಕರಣ ದಾಖಲು

29 Jun 2020 | 7:52 PM

ತೆಹ್ರಾನ್, ಜೂ 29 (ಯುಎನ್ಐ) ಇರಾನ್‌ನ ಲೆಫ್ಟಿನೆಂಟ್‌ ಜನರಲ್ ಖಾಸೆಮ್ ಸೊಲೈಮನಿ ಅವರ ಹತ್ಯೆ ಮಾಡಿದ ಆರೋಪದ ಮೇಲೆ ಇರಾನ್ ಸರ್ಕಾರ ಇಂಟರ್‌ಪೋಲ್‌ ಮೊರೆ ಹೋಗಿದ್ದು, ಅಮೆರಿಕ ಅಧ್ಯಕ್ಷ ಡೊನಾಲ್ಟ್‌ ಟ್ರಂಪ್ ಸೇರಿದಂತೆ ಇತರ ರಾಜಕೀಯ ಮತ್ತು ಸೇನಾ ಅಧಿಕಾರಿಗಳ ವಿರುದ್ಧ ದೂರು ದಾಖಲಿಸಿದ್ದಾರೆ.

 Sharesee more..

ಬಾಂಗ್ಲಾದೇಶದಲ್ಲಿ ದೋಣಿ ದುರಂತ: 30 ಮೃತದೇಹಗಳು ಶೋಧ

29 Jun 2020 | 7:39 PM

ಢಾಕಾ, ಜೂನ್ 29 (ಯುಎನ್‌ಐ) ಹಳೇ ಢಾಕಾದ ಶ್ಯಾಮ್‍ಬಜಾರ್ ಪ್ರದೇಶದ ಪಕ್ಕದಲ್ಲಿರುವ ಬುರಿಗಂಗಾದಲ್ಲಿ ಸೋಮವಾರ ಬೆಳಿಗ್ಗೆ 50 ಕ್ಕೂ ಹೆಚ್ಚು ಪ್ರಯಾಣಿಕರಿದ್ದ 'ಮಾರ್ನಿಂಗ್ ಬರ್ಡ್' ಎಂಬ ಹೆಸರಿನ ದೋಣಿ ಮುಳುಗಿದ್ದು, ನಂತರ ನಡೆದ ಶೋಧ ಕಾರ್ಯಾಚರಣೆಯಲ್ಲಿ 30 ಜನರ ಮೃತದೇಹಗಳನ್ನು ನದಿಯಿಂದ ಹೊರಕ್ಕೆ ತೆಗೆಯಲಾಗಿದೆ.

 Sharesee more..
ಪಾಕ್ ಷೇರು ಮಾರುಕಟ್ಟೆ ಮೇಲೆ  ದಾಳಿ: ನಾಲ್ವರು ಉಗ್ರರ ಹತ್ಯೆ

ಪಾಕ್ ಷೇರು ಮಾರುಕಟ್ಟೆ ಮೇಲೆ ದಾಳಿ: ನಾಲ್ವರು ಉಗ್ರರ ಹತ್ಯೆ

29 Jun 2020 | 6:19 PM

ಇಸ್ಲಾಮಾಬಾದ್, ಜೂನ್ 29(ಯುಎನ್ಐ ) ಪಾಕಿಸ್ತಾನ್ ಷೇರು ಮಾರುಕಟ್ಟೆಗೆ ಸೋಮವಾರ ಬೆಳಗ್ಗೆ ಗ್ರೆನೇಡ್ ಎಸೆದ ದಾಳಿಯಲ್ಲಿ ಇಬ್ಬರು ನಾಗರಿಕರು ಮೃತಪಟ್ಟಿದ್ದು ಇತರೆ ನಾಲ್ವರು ಉಗ್ರರನ್ನು ಹತ್ಯೆ ಮಾಡಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

 Sharesee more..

ಚೀನಾದಲ್ಲಿ ಭಾರೀ ಮಳೆ: 12 ಮಂದಿ ಸಾವು, ಸಾವಿರಾರು ಜನರು ಸ್ಥಳಾಂತರ

29 Jun 2020 | 11:09 AM

ಬೀಜಿಂಗ್, ಜೂನ್ 29 (ಯುಎನ್‌ಐ) ನೈರುತ್ಯ ಚೀನಾದ ಸಿಚುವಾನ್ ಪ್ರಾಂತ್ಯದ ಮಿಯಾನಿಂಗ್ ಕೌಂಟಿಯಲ್ಲಿ ಭಾರಿ ಮಳೆ, ಬಿರುಗಾಳಿಯಿಂದಾಗಿ ಹನ್ನೆರಡು ಮಂದಿ ಸಾವನ್ನಪ್ಪಿದ್ದು, ಇತರ 10 ಮಂದಿ ನಾಪತ್ತೆಯಾಗಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ಸೋಮವಾರ ವರದಿ ಮಾಡಿವೆ.

 Sharesee more..

ಜರ್ಮನಿಯಲ್ಲಿ 262 ಕೊರೊನಾ ಪ್ರಕರಣ ದೃಢ

29 Jun 2020 | 9:46 AM

ಮಾಸ್ಕೋ, ಜೂನ್ 29 (ಯುಎನ್ಐ)- ಜರ್ಮನಿಯಲ್ಲಿ ಕೊರೊನಾ ವೈರಸ್ ನ 262 ಪ್ರಕರಣ ಕಂಡು ಬಂದಿದ್ದು, ದೇಶದಲ್ಲಿ ಒಟ್ಟು ಪೀಡಿತರ ಸಂಖ್ಯೆ 1,93,761 ತಲುಪಿದೆ ಎಂದು ಆರೊಗ್ಯ ಸಚಿವಾಲಯ ಸೋಮವಾರ ತಿಳಿಸಿದೆ ದೇಶದಲ್ಲಿ ಕೊರೊನಾದಿಂದ ಸಾವನ್ನಪ್ಪಿದವರ ಸಂಖ್ಯೆ 8,961 ಆಗಿದ್ದು, ಈ ರೋಗದಿಂದ ಚೇತರಿಸಿಕೊಂಡವರ ಸಂಖ್ಯೆ 1,78,100 ಮುಟ್ಟಿದೆ.

 Sharesee more..

ಮೆಕ್ಸಿಕೊದಲ್ಲಿ ಒಂದೇ ದಿನ ನಾಲ್ಕು ಸಾವಿರಕ್ಕೂ ಹೆಚ್ಚು ಕೊರೊನಾ ಪೀಡಿತರು

29 Jun 2020 | 9:34 AM

ಮೆಕ್ಸಿಕೊ ಸಿಟಿ, ಜೂನ್ 29 (ಯುಎನ್ಐ)- ಮೆಕ್ಸಿಕೊದಲ್ಲಿ ಒಂದೇ ದಿನ 4000ಕ್ಕೂ ಹೆಚ್ಚು ಕೊರೊನಾ ಸೋಂಕಿತರು ಪತ್ತೆಯಾಗಿದ್ದು, ದೇಶದಲ್ಲಿ ಒಟ್ಟು ಪೀಡಿತರ ಸಂಖ್ಯೆ 2,16,000ಕ್ಕೇರಿದೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ ಮೆಕ್ಸಿಕೊದಲ್ಲಿ ಸಾಂಕ್ರಾಮಿಕ ರೋಗವು ಫೆಬ್ರವರಿ 28 ರಂದು ಕಾಣಿಸಿಕೊಂಡಿತು.

 Sharesee more..

ಕರೋನ ನಿಯಂತ್ರಣ: ಪರಸ್ಪರ ಆರೋಪ ಬೇಡ ಪುಟಿನ್ ಸಲಹೆ

29 Jun 2020 | 9:20 AM

ಮಾಸ್ಕೋ, ಜೂನ್ 29 (ಯುಎನ್ಐ)ಕರೋನ ವಿರುದ್ಧದ ಹೋರಾಟದಲ್ಲಿ ಆರೋಪಗಳನ್ನು ವಿನಿಮಯ ಮಾಡಿಕೊಳ್ಳುವ ಬದಲು , ಸೋಂಕಿನ ವಿರುದ್ದ ಜಗತ್ತು ಸಂಘಟಿತ ಪ್ರಯತ್ನಮಾಡಬೇಕು ಎಂದು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅಂತಾರಾಷ್ಟ್ರೀಯ ಸಮುದಾಯಕ್ಕೆ ಕರೆ ನೀಡಿದ್ದಾರೆ ಎಂದು ಟಾಸ್ ಸುದ್ದಿ ಸಂಸ್ಥೆ ಭಾನುವಾರ ವರದಿ ಮಾಡಿದೆ.

 Sharesee more..

ಹಳ್ಳಿಯ ಮೇಲೆ ದಾಳಿ: ನೈಜೀರಿಯನ್ ಪಡೆಗಳಿಂದ ಬಂದೂಕುಧಾರಿಗಳ ಹತ್ಯೆ

29 Jun 2020 | 9:02 AM

ಅಬುಜಾ, ಜೂನ್ 29 (ಕ್ಸಿನ್ಹುವಾ)ವಾಯುವ್ಯ ಪ್ರದೇಶದ ಹಳ್ಳಿಯೊಂದರ ದಾಳಿ ನಡೆಸಿದ ಹಲವು ಬಂದೂಕು ಧಾರಿಗಳನ್ನು ನೈಜೀರಿಯನ್ ಪಡೆಗಳು ಹತ್ಯೆ ಮಾಡಿವೆ ಎಂದು ಮಿಲಿಟರಿ ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ ಮಿಲಿಟರಿ ಡಕಾಯಿತರೆಂದು ನಂಬಲಾದ ಹಲವು ಇತರೆ ಬಂದೂಕುಧಾರಿಗಳು ಶುಕ್ರವಾರ ಉತ್ತರ ರಾಜ್ಯ ಕಟ್ಸಿನಾದ ಮಾರ ಜಾಮ್‌ಫರಾವಾ ಗ್ರಾಮದಲ್ಲಿ ನಡೆದ ದಾಳಿಯ ವೇಳೆ ಗುಂಡೇಟಿನಿಂದ ಗಾಯಗೊಂಡಿದ್ದಾರೆ.

 Sharesee more..

ಪೆರುವಿನಲ್ಲಿ ಕರೋನ ಸೋಂಕಿಗೆ 9,317 ಸಾವು

29 Jun 2020 | 8:42 AM

ಲಿಮಾ, ಜೂನ್ 29 (ಯುಎನ್ಐ ) ಪೆರುವಿನಲ್ಲಿ ಹೊಸದಾಗಿ ಭಾನುವಾರ 3,430 ಹೊಸ ಕರೊನ ಸೋಂಕು ಪ್ರಕರಣಗಳು ವರದಿಯಾಗಿದೆ ಎಂದು ಆರೋಗ್ಯ ಸಚಿವಾಲಯ ಹೇಳಿದೆ ಇದರಿಂದಾಗಿ ದೇಶದಲ್ಲಿ ಸೋಂಕಿತರ ಸಂಖ್ಯೆ , 279,419 ಏರಿಕೆಯಾಗಿದ್ದು ಈವರೆಗೆ 9,317 ಸಾವಿನ ಪ್ರಕರಣಗಳು ದಾಖಲಾಗಿದೆ.

 Sharesee more..

ದಕ್ಷಿಣ ಕೊರಿಯಾದಲ್ಲಿ 42 ಹೊಸ ಕರೋನ ಪ್ರಕರಣ ದಾಖಲು

29 Jun 2020 | 8:31 AM

ಸಿಯೋಲ್, ಜೂನ್ 29 (ಯುಎನ್ಐ) ದಕ್ಷಿಣ ಕೊರಿಯಾದಲ್ಲಿ ಸೋಮವಾರ ಕಳೆದ 24 ಗಂಟೆಗಳಲ್ಲಿ 42 ಹೊಸ ಕರೋನ ಸೋಂಕು ಪ್ರಕರಣಗಳು ವರದಿಯಾಗಿದ್ದು, ಒಟ್ಟಾರೆ ಸೋಂಕಿತರ ಸಂಖ್ಯೆ 12,757 ಕ್ಕೆ ಏರಿಕೆಯಾಗಿದೆ ಇದೇ ಅವಧಿಯಲ್ಲಿ ಯಾವುದೇ ಸಾವುನೋವು ದಾಖಲಾಗಿಲ್ಲ ಎಂದು ಸುದ್ದಿ ಸಂಸ್ಥೆ ಯೋನ್ಹಾಪ್ ವರದಿ ಮಾಡಿದೆ.

 Sharesee more..

ಚೀನಾದಲ್ಲಿ ಭಾರಿ ಮಳೆ, 12 ಸಾವು

29 Jun 2020 | 7:54 AM

ಬೀಜಿಂಗ್, ಜೂನ್ 29 (ಯುಎನ್ಐ) ಚೀನಾದ ನೈಋತ್ಯ ಸಿಚುಯಾನ್ ಪ್ರಾಂತ್ಯದ ಮಿಯಾನ್ನಿಂಗ್ ಕೌಂಟಿಯಲ್ಲಿ ಬಿರುಗಾಳಿ ಮತ್ತು ಭಾರಿ ಮಳೆಗೆ ಕನಿಷ್ಠ 12 ಜನರು ಬಲಿಯಾಗಿದ್ದು ಇತರೆ 10 ಮಂದಿ ಕಣ್ಮರೆಯಾಗಿದೆ ಎಂದು ಸ್ಥಳೀಯ ಮಾಧ್ಯಮ ಸೋಮವಾರ ವರದಿ ಮಾಡಿದೆ.

 Sharesee more..

ಮಾಸ್ಕೋದಲ್ಲಿ ಕೊರೊನಾ ವೈರಾಣು ಸೋಂಕಿಗೆ ಮತ್ತೆ 23 ಬಲಿ; ಒಟ್ಟು 3761 ಸಾವು

29 Jun 2020 | 7:49 AM

ಮಾಸ್ಕೋ, ಜೂನ್ 29 (ಸ್ಫುಟ್ನಿಕ್) ಮಾಸ್ಕೋದಲ್ಲಿ ಕಳೆದ 24 ಗಂಟೆಗಳಲ್ಲಿ 23 ಜನರು ಕೊರೊನಾ ವೈರಾಣು ಸೋಂಕಿನಿಂದ ಮೃತಪಟ್ಟಿದ್ದು ರಷ್ಯಾ ರಾಜಧಾನಿಯಲ್ಲಿ ಸೋಂಕು ಸಂಬಂಧಿತ ಸಾವಿನ ಸಂಖ್ಯೆ 3,761 ಕ್ಕೆ ಏರಿಕೆಯಾಗಿದೆ ಎಂದು ಅಲ್ಲಿನ ಕೊರೊನಾ ವೈರಾಣು ಪ್ರತಿಕ್ರಿಯಾ ಕೇಂದ್ರ ತಿಳಿಸಿದೆ.

 Sharesee more..

ಇರಾಕ್ ಕೊರೊನಾ ಬಿಕ್ಕಟ್ಟು : ಸಂಸತ್ ಅಧಿವೇಶನದಲ್ಲಿ ಪಾಲ್ಗೊಳ್ಳಲು ಸದಸ್ಯರ ಹಿಂದೇಟು

29 Jun 2020 | 7:43 AM

ಮಾಸ್ಕೋ, ಜೂನ್ 29 (ಸ್ಫುಟ್ನಿಕ್) ಕೋವಿಡ್ - 19 ಬಿಕ್ಕಟ್ಟಿನ ಕಾರಣ ಇರಾಕ್ ನಲ್ಲಿ ಸಂಸತ್ ಸದಸ್ಯರು ಸಂಸತ್ ಅಧಿವೇಶನದಲ್ಲಿ ಪಾಲ್ಗೊಳ್ಳಲು ಹಿಂದೇಟು ಹಾಕುತ್ತಿದ್ದಾರೆ ಎಂದು ಸ್ಥಳೀಯ ಮಾಧ್ಯಮ ವರದಿ ಮಾಡಿದೆ ಶೀಘ್ರದಲ್ಲೇ ಸಂಸತ್ ಅಧಿವೇಶನ ಮುಂದುವರಿಯುವ ಲಕ್ಷಣಗಳು ಕಾಣುತ್ತಿಲ್ಲ ಎಂದು ಮೂಲಗಳು ತಿಳಿಸಿವೆ.

 Sharesee more..

ಐಸ್ ಲ್ಯಾಂಡ್ ಅಧ್ಯಕ್ಷೀಯ ಚುನಾವಣೆ : ಜೋಹನ್ನೆಸನ್ ಎರಡನೇ ಅವಧಿಗೆ ಮರು ಆಯ್ಕೆ

29 Jun 2020 | 7:35 AM

ಮಾಸ್ಕೋ, ಜೂನ್ 29 (ಸ್ಫುಟ್ನಿಕ್) ಐಸ್ ಲ್ಯಾಂಡ್ ನಲ್ಲಿ ನಡೆದ ಅಧ್ಯಕ್ಷೀಯ ಚುನಾವಣೆಯಲ್ಲಿ ಶೇ 92 2 ರಷ್ಟು ಮತಗಳನ್ನು ಪಡೆದು ಹಾಲಿ ಅಧ್ಯಕ್ಷ ಗುಡ್ನಿ ಜೋಹಾನ್ನೆಸನ್ ಎರಡನೇ ಅವಧಿಗೆ ಆಯ್ಕೆಯಾಗಿದ್ದಾರೆ.

 Sharesee more..

ಅಫ್ಘಾನಿಸ್ತಾನದ ಹೆಲ್ಮಾಂಡ್ ಪ್ರಾಂತ್ಯದಲ್ಲಿ ಬಾಂಬ್ ಸ್ಫೋಟಕ್ಕೆ ಆರು ಬಲಿ

29 Jun 2020 | 7:29 AM

ಮಾಸ್ಕೋ, ಜೂನ್ 29 (ಸ್ಫುಟ್ನಿಕ್) ದಕ್ಷಿಣ ಅಫ್ಘನ್ ಪ್ರಾಂತ್ಯ ಹೆಲ್ಮಾಂಡ್ ನಲ್ಲಿ ರಸ್ತೆ ಬದಿ ನೆಲ ಬಾಂಬ್ ಸ್ಫೋಟದಿಂದಾಗಿ ಆರು ನಾಗರಿಕರು ಮೃತಪಟ್ಟಿದ್ದು ಇಬ್ಬರು ಗಾಯಗೊಂಡಿದ್ದಾರೆ ಪ್ರಾಂತ್ಯದ ವಾಷಿರ್ ಜಿಲ್ಲೆಯಲ್ಲಿ ಈ ಸ್ಫೋಟ ಸಂಭವಿಸಿದ್ದು ಮಹಿಳೆಯರು ಮತ್ತು ಮಕ್ಕಳು ಸ್ಫೋಟಕ್ಕೆ ಬಲಿಯಾಗಿದ್ದಾರೆ ಎಂದು ವರದಿಯಾಗಿದೆ.

 Sharesee more..