Monday, Jul 13 2020 | Time 04:49 Hrs(IST)
International

ನೇಪಾಳ ಸರ್ಕಾರ ಉರುಳಿಸಲು ಭಾರತದ ಪಿತೂರಿ : ಓಲಿ ಶರ್ಮಾ ಕಿಡಿ

28 Jun 2020 | 11:37 PM

ಕಠ್ಮಂಡು, ಜೂನ್ 28 (ಯುಎನ್ಐ) ನೇಪಾಳದಲ್ಲಿ ಸರ್ಕಾರ ಪತನಗೊಳಿಸಲು ಭಾರತ ಪಿತೂರಿ ನಡೆಸಿದೆ ಎಂದು ಅಲ್ಲಿನ ಪ್ರಧಾನಿ ಕೆ ಪಿ ಶರ್ಮಾ ಓಲಿ ಭಾನುವಾರ ಕಿಡಿಕಾರಿದ್ದಾರೆ ಕಮ್ಯುನಿಸ್ಟ್ ನಾಯಕ ದಿವಂಗತ ಮದನ್ ಭಂಡಾರಿ ಜನ್ಮದಿನ ಪ್ರಯುಕ್ತ ಆಯೋಜಿಸಲಾದ ಸ್ಮರಣಾರ್ಥ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದೇಶದ ಹೊಸ ನಕ್ಷೆ ಬಿಡುಗಡೆ ಮಾಡಿದ ತಮ್ಮನ್ನು ಕುರ್ಚಿಯಿಂದ ಕೆಳಗಿಳಿಸಲು ಷಡ್ಯಂತ್ರ ನಡೆದಿದೆ ಎಂದು ಆರೋಪಿಸಿದ್ದಾರೆ.

 Sharesee more..

ದೆಹಲಿಯಲ್ಲಿ 83 ಸಾವಿರ ದಾಟಿದ ಕೊರೊನಾ ಸೋಂಕು ಪ್ರಕರಣ

28 Jun 2020 | 11:26 PM

ನವದೆಹಲಿ, ಜೂನ್ 28 (ಯುಎನ್ಐ) ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಕೊರೊನಾ ವೈರಾಣು ಸೋಂಕು ಪ್ರಕರಣಗಳ ಸಂಖ್ಯೆ 83,077 ರಷ್ಟಿದೆ ಎಂದು ಅಲ್ಲಿನ ಆರೋಗ್ಯ ಇಲಾಖೆ ತಿಳಿಸಿದೆ ಕಳೆದ 24 ಗಂಟೆಗಳಲ್ಲಿ 2889 ಹೊಸ ಸೋಂಕು ಪ್ರಕರಣಗಳು ವರದಿಯಾಗಿದ್ದು 65 ಜನರು ಸಾವನ್ನಪ್ಪಿದ್ದಾರೆ.

 Sharesee more..

ಇಂಡೋನೇಷ್ಯಾದಲ್ಲಿ 1,198 ಕೊರೊನಾ ಪೀಡಿತರು ಪತ್ತೆ

28 Jun 2020 | 5:21 PM

ನವದೆಹಲಿ, ಜೂನ್ 28 (ಯುಎನ್ಐ)- ಒಂದೇ ದಿನದಲ್ಲಿ ಇಂಡೋನೇಷ್ಯಾದಲ್ಲಿ 1,198 ಕೊರೊನಾ ಪೀಡಿತರು ಕಂಡು ಬಂದಿದ್ದು, ಒಟ್ಟು ಸೋಂಕಿತರ ಸಂಖ್ಯೆ 54,010ಕ್ಕೆ ಏರಿದ್ದು, ಒಟ್ಟು ಮೃತರ ಸಂಖ್ಯೆ 2 754 ಆಗಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

 Sharesee more..

ಬಾಂಗ್ಲಾದೇಶದಲ್ಲಿ ಹೊಸದಾಗಿ 3809 ಮಂದಿಗೆ ಸೋಂಕು: ಒಟ್ಟು ಸಂಖ್ಯೆ 1,37,787ಕ್ಕೆರಿಕೆ

28 Jun 2020 | 4:12 PM

ಢಾಕ, ಜೂ 28 (ಯುಎನ್ಐ) ಕಳೆದ 24 ಗಂಟೆಗಳಲ್ಲಿ ಬಾಂಗ್ಲಾದೇಶದಲ್ಲಿ 3809 ಮಂದಿಗೆ ಸೋಂಕು ತಗುಲಿದ್ದು, ಇದರೊಂದಿಗೆ ಭಾನುವಾರ ಸೋಂಕಿತರ ಸಂಖ್ಯೆ 1,37,187ಕ್ಕೆ ಏರಿಕೆಯಾಗಿದೆ.

 Sharesee more..

ಆಫ್ಘಾನಿಸ್ತಾನದ ಪಕ್ತಿಯಾ ಪ್ರಾಂತ್ಯದಲ್ಲಿ 13 ತಾಲಿಬಾನ್‍ ಉಗ್ರರು ಹತ

28 Jun 2020 | 3:22 PM

ಗಾರ್ಡೆಜ್, ಜೂನ್ 28 (ಕ್ಸಿನ್ಹುವಾ) - ಪೂರ್ವ ಅಫ್ಘಾನಿಸ್ತಾನದ ಪಕ್ತಿಯಾ ಪ್ರಾಂತ್ಯದ ದಂಡಪತನ್ ಮತ್ತು ಸಯೀದ್ ಕರಮ್ ಜಿಲ್ಲೆಗಳ ಮೇಲೇ ತಾಲಿಬಾನ್ ನಡೆಸಿದ ದಾಳಿಗಳನ್ನು ಭದ್ರತಾ ಪಡೆಗಳು ಹಿಮ್ಮೆಟ್ಟಿಸಿದ್ದು, ಘರ್ಷಣೆಗಳಲ್ಲಿ 13 ಉಗ್ರರು ಹತರಾಗಿದ್ದಾರೆ ಎಂದು ಪ್ರಾಂತ್ಯದ ಸೇನಾ ವಕ್ತಾರ ಅಮಲ್ ಮೊಹಮದ್ ಭಾನುವಾರ ಹೇಳಿದ್ದಾರೆ.

 Sharesee more..

ಪಾಕ್ ನಲ್ಲಿ ಎರಡು ಲಕ್ಷದ ಗಡಿ ದಾಟಿದ ಕೊರೊನಾ ಸೋಂಕಿತರು

28 Jun 2020 | 1:39 PM

ಇಸ್ಲಾಮಾಬಾದ್, ಜೂನ್ 28 (ಯುಎನ್ಐ)- ಪಾಕಿಸ್ತಾನದಲ್ಲಿ ಕೊರೊನಾ ವೈರಸ್ ಪೀಡಿತರ ಸಂಖ್ಯೆ 2,01,414ಕ್ಕೆ ಏರಿದ್ದು, ಮೃತರ ಸಂಖ್ಯೆ 4,098ಕ್ಕೆರಿದೆ ಎಂದು ಆರೋಗ್ಯ ಸಚಿವಾಲಯ ಭಾನುವಾರ ತಿಳಿಸಿದೆ ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ 3,709 ರೋಗಿಗಳು ಬೆಳಕಿಗೆ ಬಂದಿದ್ದು, 94 ಜನ ಸಾವನ್ನಪ್ಪಿದ್ದಾರೆ.

 Sharesee more..

ಭಾನುವಾರ ಪೋಲೆಂಡ್‌ ಅಧ್ಯಕ್ಷೀಯ ಚುನಾವಣೆ

28 Jun 2020 | 11:24 AM

ವಾರ್ಸಾ, ಜೂ 28 (ಯುಎನ್ಐ) ಪೋಲೆಂಡ್‌ನ ಅಧ್ಯಕ್ಷೀಯ ಚುನಾವಣೆ ಭಾನುವಾರ ನಡೆಯಲಿದ್ದು, ಪ್ರಜೆಗಳು ನೂತನ ಅಧ್ಯಕ್ಷರಿಗಾಗಿ ಮತಚಲಾಯಿಸಲಿದ್ದಾರೆ ಒಟ್ಟು 11 ಅಭ್ಯರ್ಥಿಗಳು ಅಧ್ಯಕ್ಷೀಯ ಚುನಾವಣೆಯ ಕಣದಲ್ಲಿದ್ದಾರೆ.

 Sharesee more..

ಪೆರುವಿನಲ್ಲಿ 3,625 ಹೊಸ ಕೋವಿಡ್ -19 ಪ್ರಕರಣ ದಾಖಲು

28 Jun 2020 | 10:18 AM

ಲಿಮಾ, ಜೂನ್ 28 (ಯುಎನ್ಐ ) ಪೆರುವಿನಲ್ಲಿ ಹೊಸದಾಗಿ 3,625 ಕರೋನ ಸೋಂಕು ಪ್ರಕರಣ ವರದಿಯಾಗಿದೆ ಎಂದು ಆರೋಗ್ಯ ಸಚಿವಾಲಯ ಹೇಳಿದೆ ಪರಿಣಾಮ ಈವರೆಗೆ ದೇಶದಲ್ಲಿ ಸೋಂಕಿತರ ಸಂಖ್ಯೆ 275,989 ಕ್ಕೆ ಏರಿಕೆಯಾಗಿದ್ದು ಈವರೆಗೆ 9,135 ಸಾವಿನ ಪ್ರಕರಣ ವರದಿಯಾಗಿದೆ .

 Sharesee more..

ಎರಡನೇ ಪರೀಕ್ಷೆ ನಂತರ 6 ಪಾಕ್ ಕ್ರಿಕೆಟಿಗರಿಗೆ ಕರೋನ ಮಾಯ .!!

28 Jun 2020 | 8:51 AM

ಇಸ್ಲಾಮಾಬಾದ್, ಜೂನ್ 28 (ಯುಎನ್‌ಐ) ಕರೋನ ಮೊದಲ ಪರೀಕ್ಷೆಯಲ್ಲಿ ಸೊಂಕು ಖಚಿತವಾಗಿದ್ದ 10 ಪಾಕಿಸ್ತಾನ ಕ್ರಿಕೆಟಿಗರಲ್ಲಿ ಆರು ಮಂದಿಗೆ ಮತ್ತೆ ಎರಡನೇ ಪರೀಕ್ಷೆಗೆ ನಂತರ ಕರೊನ ಸೋಂಕು ಇಲ್ಲದಿರುವುದು ಖಚಿತವಾಗಿದೆ, ಅವರು ಮರಳಿ ತಂಡಕ್ಕೆ ಸೇರಬಹುದಾಗಿದೆ ಎಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಭಾನುವಾರ ತಿಳಿಸಿದೆ.

 Sharesee more..

ಬ್ರಿಟಿಷ್ ರಾಕ್ ಬ್ಯಾಂಡ್ ಸಂಗೀತ ಬಳಸದಂತೆ ಟ್ರಂಪ್ ಗೆ ಎಚ್ಚರಿಕೆ

28 Jun 2020 | 8:34 AM

ವಾಷಿಂಗ್ಟನ್, ಜೂನ್ 28 (ಸ್ಫುಟ್ನಿಕ್) ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಮ್ಮ ಚುನಾವಣಾ ಪ್ರಚಾರ ಸಭೆಗಳಲ್ಲಿ ಪ್ರಸಿದ್ಧ ಬ್ರಿಟಿಷ್ ರಾಕ್ ಬ್ಯಾಂಡ್ “ದಿ ರೋಲಿಂಗ್ ಸ್ಟೋನ್ಸ್” ತನ್ನ ಸಂಗೀತ ಬಳಸದಂತೆ ಎಚ್ಚರಿಕೆ ನೀಡಿದೆ ರಾಕ್ ಬ್ಯಾಂಡ್ ನ ಪ್ರಸಿದ್ಧ ಹಾಡುಗಳಾದ “ಯೂ ಕಾಂಟ್ ಆಲ್ವೇಸ್ ಗೆಟ್ ವಾಟ್ ಯು ವಾಂಟ್”, ಮೊದಲಾದವುಗಳನ್ನು ಟ್ರಂಪ್ ತಮ್ಮ ಚುನಾವಣಾ ಪ್ರಚಾರ ಸಭೆಗಳಲ್ಲಿ ಪ್ರಸಾರ ಮಾಡದಂತೆ ಅಮೆರಿಕ ಅಧ್ಯಕ್ಷರಿಗೆ ಎಚ್ಚರಿಕೆ ನೀಡಿದೆ.

 Sharesee more..

ವಾಲ್ಮಾರ್ಟ್ ವಿತರಣಾ ಕೇಂದ್ರದಲ್ಲಿ ಗುಂಡಿನ ದಾಳಿ, ಇಬ್ಬರ ಸಾವು

28 Jun 2020 | 8:26 AM

ವಾಷಿಂಗ್ಟನ್, ಜೂನ್ 28 (ಸ್ಪುಟ್ನಿಕ್) ಕ್ಯಾಲಿಫೋರ್ನಿಯಾದ ರೆಡ್ ಬ್ಲಫ್‌ನಲ್ಲಿರುವ ವಾಲ್‌ಮಾರ್ಟ್ ವಿತರಣಾ ಕೇಂದ್ರದಲ್ಲಿ ಭಾನುವಾರ ನಡೆದ ಗುಂಡಿನ ದಾಳಿಯಲ್ಲಿ ಇಬ್ಬರು ಮೃತಪಟ್ಟಿದ್ದು, ಇತರೆ ಮತ್ತು ನಾಲ್ವರು ಗಾಯಗೊಂಡಿದ್ದಾರೆ ಎಂದು ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ.

 Sharesee more..

ಪೂರ್ವ ಅಫ್ಘಾನಿಸ್ತಾನದಲ್ಲಿ ಕಾಳಗ : ಓರ್ವ ಪೊಲೀಸ್ ಅಧಿಕಾರಿ, 12 ತಾಲಿಬಾನ್ ಉಗ್ರರ ಸಾವು

28 Jun 2020 | 8:23 AM

ಕಾಬುಲ್, ಜೂನ್ 28 (ಸ್ಫುಟ್ನಿಕ್) ಅಫ್ಘಾನಿಸ್ತಾನದಲ್ಲಿ ಪೂರ್ವ ಪ್ರಾಂತ್ಯ ಪಾಕ್ಟಿಯಾದ ಮಿರ್ಜಾಕಾ ಜಿಲ್ಲೆಯಲ್ಲಿ ನಡೆದ ಕಾಳಗದಲ್ಲಿ ಓರ್ವ ಪೊಲೀಸ್ ಅಧಿಕಾರಿ ಮತ್ತು 12 ತಾಲಿಬಾನ್ ಉಗ್ರರು ಸಾವನ್ನಪ್ಪಿದ್ದಾರೆ ಎಂದು ಸ್ಥಳೀಯ ಪೊಲೀಸರು ಭಾನುವಾರ ತಿಳಿಸಿದ್ದಾರೆ.

 Sharesee more..

ನೈಜೀರಿಯಾದಲ್ಲಿ ರಸ್ತೆ ಅಪಘಾತ, 8 ಸಾವು, 8 ಜನರಿಗೆ ಗಾಯ

28 Jun 2020 | 8:18 AM

ಅಬುಜಾ, ಜೂನ್ 28 (ಕ್ಸಿನ್ಹುವಾ) ನೈಜೀರಿಯಾದಲ್ಲಿ ಶನಿವಾರ ಸಂಭವಿಸಿದ ರಸ್ತೆ ಅಪಘಾತದಲ್ಲಿ ಎಂಟು ಜನರು ಮೃತಪಟ್ಟಿದ್ದು ಇತರೆ ಎಂಟು ಮಂದಿ ಗಾಯಗೊಂಡಿದ್ದಾರೆ ಎಂದು ರಸ್ತೆ ಸುರಕ್ಷತಾ ಪಡೆ ಭಾನುವಾರ ತಿಳಿಸಿದೆ ಬಸ್ ಮತ್ತು ಜಂಟಿ ವಾಹನದ ನಡುವೆ ಲಬೋಜಿಪ್ ಹಳ್ಳಿಯಲ್ಲಿ ಮೋಕ್ವಾ - ಬಿಡಾ ರಸ್ತೆಯಲ್ಲಿ ಈ ಅಪಘಾತ ಸಂಭವಿಸಿದೆ ಎಂದು ನೈಜೀರಿಯಾದ ಉತ್ತರ - ಕೇಂದ್ರ ಪ್ರಾಂತ್ಯದ ರಸ್ತೆ ಸುರಕ್ಷತಾ ಪೊಲೀಸ್ ಕಮಾಂಡರ್ ಜೋಯಲ್ ದಗ್ವಾ ತಿಳಿಸಿದ್ದಾರೆ.

 Sharesee more..

ನ್ಯೂಜಿಲೆಂಡ್ ನಲ್ಲಿ ಹೊಸದಾಗಿ 4 ಕರೋನ ಪ್ರಕರಣ ದಾಖಲು

28 Jun 2020 | 8:12 AM

ವೆಲ್ಲಿಂಗ್ಟನ್, ಜೂನ್ 28 (ಯುಎನ್ಐ) ನ್ಯೂಜಿಲೆಂಡ್ ನಲ್ಲಿ ಹೊಸದಾಗಿ ನಾಲ್ಕು ಹೊಸ ಕರೋನ ಪ್ರಕರಣಗಳು ವರದಿ ಯಾಗಿದೆ ಎಂದು ಆರೋಗ್ಯ ಸಚಿವಾಲಯ ಭಾನುವಾರ ಪ್ರಕಟಣೆಯಲ್ಲಿ ತಿಳಿಸಿದೆ ಈ ನಾಲ್ಕು ಪ್ರಕರಣಗಳು ಇತ್ತೀಚೆಗೆ ವಿದೇಶದಿಂದ ಹಿಂದಿರುಗಿದ ಮತ್ತು ನಿರ್ವಹಿಸಲ್ಪಟ್ಟ ಪ್ರತ್ಯೇಕ ಸೌಲಭ್ಯಗಳಲ್ಲಿರುವ ಜನರನ್ನು ಒಳಗೊಂಡಿವೆ.

 Sharesee more..

ಮ್ಯಾನ್ಮಾರ್ ನಲ್ಲಿ ಮತ್ತೆ 3 ಕೊರೊನಾ ಸೋಂಕು ಪ್ರಕರಣ; ಒಟ್ಟು 296 ಪ್ರಕರಣ

28 Jun 2020 | 8:08 AM

ನೇ ಪ್ಯೈ ತೌವ್, ಜೂನ್ 28 (ಕ್ಸಿನ್ಹುವಾ) ಮ್ಯಾನ್ಮಾರ್ ನಲ್ಲಿ ಮತ್ತೆ ಮೂರು ಪ್ರಕರಣಗಳು ವರದಿಯಾಗಿದ್ದು ಭಾನುವಾರ ಬೆಳಗಿನ ವೇಳೆಗೆ ಒಟ್ಟು 296 ಪ್ರಕರಣಗಳು ದೃಢಪಟ್ಟಿವೆ ಎಂದು ಅಲ್ಲಿನ ಆರೋಗ್ಯ ಸಚಿವಾಲಯ ಬಿಡುಗಡೆ ಮಾಡಿರುವ ವರದಿ ತಿಳಿಸಿದೆ.

 Sharesee more..