Tuesday, Jul 23 2019 | Time 00:50 Hrs(IST)
International

ಅಫಘಾನಿಸ್ತಾನದಲ್ಲಿ ಆರು ಭದ್ರತಾ ಸಿಬ್ಬಂದಿ, 35 ಉಗ್ರರ ಹತ್ಯೆ

03 Jul 2019 | 11:39 AM

ಕಾಬೂಲ್, ಜುಲೈ 3 (ಕ್ಸಿನ್ಹುವಾ) ಅಫ್ಘಾನಿಸ್ತಾನದ ಕೇಂದ್ರ ಡೈಕುಂಡಿ ಪ್ರಾಂತ್ಯದ ಕಜ್ರಾನ್ ಜಿಲ್ಲೆಯಲ್ಲಿ ನಡೆದ ಘರ್ಷಣೆಯಲ್ಲಿ ಆರು ಭದ್ರತಾ ಸಿಬ್ಬಂದಿ ಮತ್ತು 35 ಉಗ್ರರು ಹತರಾಗಿದ್ದಾರೆ ಎಂದು ಪ್ರಾಂತೀಯ ಗವರ್ನರ್ ಅಹ್ಲಾ ರಹಮತಿ ಬುಧವಾರ ಎಂದು ಹೇಳಿದ್ದಾರೆ ಜಿಲ್ಲೆಯ ಕೇಂದ್ರ ಪ್ರದೇಶಗಳಲ್ಲಿ ಸೋಮವಾರ ರಾತ್ರಿ ತಾಲಿಬಾನ್ ಭದ್ರತಾ ತಪಾಸಣಾ ಕೇಂದ್ರಗಳ ಮೇಲೆ ದಾಳಿ ನಡೆಸಿದ ನಂತರ ಭದ್ರತಾ ಪಡೆ ಮತ್ತು ಉಗ್ರ ರ ನಡುವೆ ಬಹಳ ಹೊತ್ತಿನ ತನಕ ಗುಂಡಿನ ಕಾಳಗ ನಡೆಯಿತು ಎಂದು ಅವರು ಹೇಳಿದರು.

 Sharesee more..

ಒರಯಾನ್ ಬಾಹ್ಯಾಕಾಶ ವಾಹಕ ಯಶಸ್ವಿ ಉಡಾವಣೆ ಚಂದ್ರ, ಮಂಗಳ ಅಭಿಯಾನಕ್ಕೆ ಪೂರಕ : ನಾಸಾ

02 Jul 2019 | 9:15 PM

ವಾಷಿಂಗ್‌ಟನ್‌, ಜುಲೈ 2 (ಸ್ಫುಟ್ನಿಕ್‌) ಒರಯಾನ್ ಬಾಹ್ಯಾಕಾಶ ವಾಹಕ ಉಡಾವಣೆ ತಡೆ ವ್ಯವಸ್ಥೆಯ ಪರೀಕ್ಷೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಲಾಗಿದ್ದು ಇದು ಮುಂದಿನ ಚಂದ್ರ ಮತ್ತು ಮಂಗಳ ಬಾಹ್ಯಾಕಾಶ ಉಡಾವಣೆಗೆ ಪೂರಕವಾಗಿದೆ ಎಂದು ನಾಸಾ ಮಂಗಳವಾರ ನೀಡಿರುವ ಪ್ರಕಟಣೆ ತಿಳಿಸಿದೆ.

 Sharesee more..

ಬೇಸಿಗೆ ರಜೆಯಲ್ಲಿ ಪಠ್ಯೇತರ ಚಟುವಟಿಕೆ ಹೊರೆ ಇಳಿಸಲು ಚೀನಾ ಶಿಕ್ಷಣ ಸಚಿವಾಲಯ ಸೂಚನೆ

02 Jul 2019 | 7:56 PM

ಬೀಜಿಂಗ್, ಜುಲೈ 2 (ಕ್ಸಿನ್ಹುವಾ) ಬೇಸಿಗೆ ರಜೆಯ ಸಂದರ್ಭದಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಾಲಾ ಮಕ್ಕಳಿಗೆ ನೀಡುವ ಪಠ್ಯೇತರ ಚಟುವಟಿಕೆಯ ಮನೆಗೆಲಸದ ಹೊರೆಯನ್ನು ಕಡಿಮೆ ಮಾಡುವಂತೆ ಚೀನಾದ ಶಿಕ್ಷಣ ಸಚಿವಾಲಯ ಸೂಚನೆ ನೀಡಿದೆ ಮಕ್ಕಳಿಗೆ ಸುರಕ್ಷಿತ, ಆರಾಮದಾಯಕ ಮತ್ತು ಅರ್ಥಪೂರ್ಣ ರಜೆ ಸಿಗುವಂತಾಗುವುದನ್ನು ಖಾತರಿಪಡಿಸಿಕೊಳ್ಳಬೇಕಿದೆ ಎಂದು ಮಂಗಳವಾರ ಸಚಿವಾಲಯ ನೀಡಿರುವ ಹೇಳಿಕೆ ತಿಳಿಸಿದೆ.

 Sharesee more..

ಈಸ್ಟರ್ ದಾಳಿಯ ವೇಳೆ ಕರ್ತವ್ಯ ಲೋಪ: ಮಾಜಿ ರಕ್ಷಣಾ ಕಾರ್ಯದರ್ಶಿ, ಮಾಜಿ ಪೊಲೀಸ್ ಐಜಿ ಬಂಧನ

02 Jul 2019 | 7:44 PM

ಕೊಲಂಬೊ, ಜು 2 (ಯುಎನ್ಐ) ಈಸ್ಟರ್ ಭಾನುವಾರದ ಭಯೋತ್ಪಾದಕ ದಾಳಿಯ ವೇಳೆ ಕರ್ತವ್ಯ ಲೋಪವೆಸಗಿದ ಆರೋಪದಲ್ಲಿ ಶ್ರೀಲಂಕಾದ ಮಾಜಿ ರಕ್ಷಣಾ ಕಾರ್ಯದರ್ಶಿ ಹೇಮಸಿರಿ ಫರ್ನಾಂಡೋ ಮತ್ತು ಪೊಲೀಸ್ ಮಹಾ ನಿರ್ದೇಶಕ ಪುಜಿತ್ ಜಯಸುಂದರ ಅವರನ್ನು ಸಿಐಡಿ ಮಂಗಳವಾರ ಬಂಧಿಸಿದೆ.

 Sharesee more..
ಕರ್ತಾರ್ ಪುರ ಕಾರಿಡಾರ್ ಮಾತುಕತೆಗೆ ಜುಲೈ 14ರ ದಿನಾಂಕ ನಿಗದಿಪಡಿಸಿದ ಪಾಕ್

ಕರ್ತಾರ್ ಪುರ ಕಾರಿಡಾರ್ ಮಾತುಕತೆಗೆ ಜುಲೈ 14ರ ದಿನಾಂಕ ನಿಗದಿಪಡಿಸಿದ ಪಾಕ್

02 Jul 2019 | 7:33 PM

ಇಸ್ಲಮಾಬಾದ್, ಜುಲೈ 2 (ಯುಎನ್ಐ) ಕರ್ತಾರ್ ಪುರ ಕಾರಿಡಾರ್ ನಿರ್ಮಾಣ ಹಾಗೂ ಇತರ ತಾಂತ್ರಿಕ ವಿಷಯಗಳ ಚರ್ಚೆಗೆ ಭಾರತದೊಂದಿಗಿನ ಎರಡನೇ ಸುತ್ತಿನ ಚರ್ಚೆ ವಾಗಾ ಪ್ರದೇಶದಲ್ಲಿ ಜುಲೈ 14ರಂದು ನಡೆಯಲಿದೆ ಎಂದು ಪಾಕಿಸ್ತಾನ ಮಂಗಳವಾರ ತಿಳಿಸಿದೆ.

 Sharesee more..

ರಷ್ಯಾದ ಇರ್ಕುಟಸ್ಕ್‌ ಪ್ರವಾಹ: ಕನಿಷ್ಠ 18 ಮಂದಿ ಮೃತ, 13 ಮಂದಿ ಕಾಣೆ

02 Jul 2019 | 7:32 PM

ಮಾಸ್ಕೋ, ಜುಲೈ 2 (ಕ್ಸಿನ್ಹುವಾ) ರಷ್ಯಾದ ಆಗ್ನೇಯ ಸೈಬೀರಿಯನ್ ಪ್ರದೇಶದ ಇರ್ಕುಟಸ್ಕ್‌ನಲ್ಲಿ ಸಂಭವಿಸಿದ ಪ್ರವಾಹದಲ್ಲಿ ಕನಿಷ್ಠ 18 ಜನರು ಸಾವನ್ನಪ್ಪಿದ್ದಾರೆ ಮತ್ತು 13 ಮಂದಿ ನಾಪತ್ತೆಯಾಗಿದ್ದಾರೆ ಎಂದು ಪ್ರಾದೇಶಿಕ ಮಾಧ್ಯಮಗಳು ವರದಿ ಮಾಡಿವೆ ಸ್ಥಳೀಯ ಆಡಳಿತದ ಪ್ರಕಾರ, ಜೂನ್ 25 ರಿಂದ ಈ ಪ್ರದೇಶದ 96 ವಸಾಹತುಗಳು ಪ್ರವಾಹಕ್ಕೆ ಸಿಲುಕಿದ್ದು, 32,798 ಜನರು ವಾಸಿಸುವ 10,097 ವಸತಿ ಮನೆಗಳಿಗೆ ಹಾನಿಯಾಗಿವೆ.

 Sharesee more..

ನೈಜೀರಿಯಾದಲ್ಲಿ ಗ್ಯಾಸೊಲಿನ್ ಟ್ರಕ್ ಸ್ಫೋಟ : 50 ಸಾವು, 70 ಜನರಿಗೆ ಗಾಯ

02 Jul 2019 | 6:44 PM

ಅಬುಜಾ, ಜುಲೈ 2 (ಯುಎನ್ಐ) ನೈಜೀರಿಯಾದ ಆಗ್ನೇಯ ಬಿನ್ಯೂಯ್ ನಲ್ಲಿ ಸಂಸ್ಕರಿತ ತೈಲ ಸಾಗಾಟ ವಾಹನ (ಗ್ಯಾಸೊಲಿನ್ ಟ್ರಕ್) ಸ್ಫೋಟಗೊಂಡ ಪರಿಣಾಮ 50 ಜನರು ಮೃತಪಟ್ಟಿದ್ದು 70 ಜನರಿಗೆ ಗಾಯಗಳಾಗಿವೆ ಎಂದು ಸ್ಥಳೀಯ ಮಾಧ್ಯಮ ಮಂಗಳವಾರ ವರದಿ ಮಾಡಿದೆ.

 Sharesee more..

ಬಸ್ ಅಪಘಾತ: 13 ಮಂದಿ ಸಾವು, 30 ಮಂದಿಗೆ ಗಾಯ

02 Jul 2019 | 9:58 AM

ಮೆಕ್ಸಿಕೋ ಸಿಟಿ, ಜು 2 (ಸ್ಪುಟ್ನಿಕ್) ಬಸ್ಸು ಅಪಘಾತಕ್ಕೀಡಾಗಿ ಕನಿಷ್ಠ 13 ಮಂದಿ ಸಾವನ್ನಪ್ಪಿ, ಇತರ 30 ಮಂದಿ ಗಾಯಗೊಂಡಿರುವ ಘಟನೆ ಅರ್ಜಿಂಟೈನಾದ ಟುಕುಮನ್ ಪ್ರಾಂತ್ಯದಲ್ಲಿ ಸಂಭವಿಸಿದೆ ಎಂದು ಸ್ಥಳೀಯ ಮಾಧ್ಯಮ ವರದಿ ಮಾಡಿದೆ.

 Sharesee more..

ವಾಷಿಂಗ್ಟನ್ ಡಿ ಸಿಯಲ್ಲಿ ಜುಲೈ 2 ರಂದು ಹೂಡಿಕೆದಾರರೊಂದಿಗೆ ಮುಖ್ಯಮಂತ್ರಿ ಅನೌಪಚಾರಿಕ ಸಭೆ

01 Jul 2019 | 11:32 PM

ವಾಷಿಂಗ್ಟನ್ , ಜು 1 (ಯುಎನ್ಐ) ಜುಲೈ 2 ರಂದು ಅವರು ವಾಷಿಂಗ್ಟನ್ ಡಿ ಸಿ ಯಲ್ಲಿ ಕನ್ನಡಿಗರು ಏರ್ಪಡಿಸಿರುವ ಹೂಡಿಕೆದಾರರೊಂದಿಗಿನ ಅನೌಪಚಾರಿಕ ಸಭೆಯಲ್ಲಿ ಪಾಲ್ಗೊಂಡು, ಕರ್ನಾಟಕದಲ್ಲಿ ಹೂಡಿಕೆಗೆ ಇರುವ ಅವಕಾಶಗಳ ಕುರಿತು ಚರ್ಚಿಸುವರು.

 Sharesee more..

ಶ್ರೀಲಂಕಾದಲ್ಲಿ ಡೆಂಗ್ಯೂ ಜ್ವರದಿಂದ 35 ಮಂದಿ ಸಾವು

01 Jul 2019 | 6:35 PM

ಕೊಲಂಬೊ, ಜುಲೈ 1 ( ಕ್ಸಿನ್ಹುವಾ) ವರ್ಷದ ಮೊದಲ ಆರು ತಿಂಗಳಲ್ಲಿ ಡೆಂಗ್ಯೂ ಜ್ವರದಿಂದ 35 ಮಂದಿ ಸಾವನ್ನಪ್ಪಿದ್ದು, 23 ಸಾವಿರಕ್ಕೂ ಹೆಚ್ಚು ಮಂದಿ ಡೆಂಗ್ಯೂ ವೈರಸ್ ಸೋಂಕಿಗೆ ಒಳಗಾಗಿದ್ದಾರೆ ಎಂದು ಸಾಂಕ್ರಾಮಿಕ ರೋಗ ಶಾಸ್ತ್ರ ಘಟಕ ಸೋಮವಾರ ತಿಳಿಸಿದೆ.

 Sharesee more..

261 ಭಾರತೀಯ ಕೈದಿಗಳ ಪಟ್ಟಿ ಬಿಡುಗಡೆ ಮಾಡಿದ ಪಾಕಿಸ್ತಾನ

01 Jul 2019 | 6:06 PM

ಇಸ್ಲಮಾಬಾದ್, ಜುಲೈ 1 (ಯುಎನ್ಐ) ಪಾಕಿಸ್ತಾನ ತಮ್ಮ ದೇಶದಲ್ಲಿರುವ 261 ಭಾರತೀಯ ಸಜಾಬಂಧಿಗಳ ಪಟ್ಟಿಯನ್ನು ಭಾರತದ ಹೈಕಮಾಂಡ್ ಗೆ ಸೋಮವಾರ ಸಲ್ಲಿಸಿದೆ ಈ ಪಟ್ಟಿ 52 ನಾಗರೀಕರು ಹಾಗೂ 209 ಮೀನುಗಾರರನ್ನು ಒಳಗೊಂಡಿದೆ ಎಂದು ಪಾಕಿಸ್ತಾನ ರೇಡಿಯೋ ತಿಳಿಸಿದೆ.

 Sharesee more..
ಕನ್ನಡಿಗರು ಒಂದಾಗಲು ವೇದಿಕೆಯಾಗಲಿರುವ ದೇವಾಲಯ: ಎಚ್.ಡಿ. ಕುಮಾರಸ್ವಾಮಿ

ಕನ್ನಡಿಗರು ಒಂದಾಗಲು ವೇದಿಕೆಯಾಗಲಿರುವ ದೇವಾಲಯ: ಎಚ್.ಡಿ. ಕುಮಾರಸ್ವಾಮಿ

01 Jul 2019 | 4:18 PM

ನ್ಯೂಜೆರ್ಸಿ, ಜು 1 (ಯುಎನ್ಐ) ಮುಖ್ಯಮಂತ್ರಿ ಎಚ್.

 Sharesee more..

ಉತ್ತರ ಚೀನಾದಲ್ಲಿ ರಸ್ತೆ ಅಪಘಾತ : ಆರು ಸಾವು

01 Jul 2019 | 3:02 PM

ಹೋಹಾಟ್, ಜುಲೈ 1 (ಕ್ಸಿನ್ಹುವಾ) ಉತ್ತರ ಚೀನಾದಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಆರು ಜನರು ಮೃತಪಟ್ಟಿದ್ದು ಇತರ 38 ಜನರು ಗಾಯಗೊಂಡಿದ್ದಾರೆ ಎಂದು ಸ್ಥಳೀಯ ಪ್ರಾಧಿಕಾರ ತಿಳಿಸಿದೆ ಏರ್ಷನ್ ಕ್ಸಿಯಾಂಗ್ ಲೀಗ್ ಹೆದ್ದಾರಿಯಲ್ಲಿ ಉಲನ್ಹಾಟ್ ನಿಂದ ಏರ್‌ಷಾನ್‌ಯೆಡೆಗೆ ತೆರಳಿದ್ದ ಲಾರಿ ಹಿಂದಿಕ್ಕುವ ಭರದಲ್ಲಿ ನುಗ್ಗಿದ ಪರಿಣಾಮ ಟ್ರಕ್ ಗೆ ಡಿಕ್ಕಿ ಹೊಡೆದು ಮೂರು ವಾಹನಗಳೂ ಬೆಂಕಿಗಾಹುತಿಯಾಗಿವೆ.

 Sharesee more..

ಆಫ್ಘಾನಿಸ್ತಾನ: ಕಾರ್ ಬಾಂಬ್ ಸ್ಫೋಟಕ್ಕೆ 34 ಜನರ ಬಲಿ

01 Jul 2019 | 2:57 PM

ಕಾಬೂಲ್, ಜುಲೈ 01 (ಯುಎನ್ಐ) ಪ್ರಬಲ ಕಾರ್ ಬಾಂಬ್ ಸ್ಫೋಟಕ್ಕೆ 34 ಜನರು ಬಲಿಯಾಗಿ, 68 ಮಂದಿ ಗಾಯಗೊಂಡಿರುವ ಘಟನೆ ಕಾಬೂಲ್ ನಲ್ಲಿ ಬುಧವಾರ ನಡೆದಿದೆ ರಕ್ಷಣಾ ಸಚಿವಾಲಯದಿಂದ ಹೆಚ್ಚೇನೂ ದೂರವಿಲ್ಲದ, ಹಲವಾರು ರಾಜತಾಂತ್ರಿಕ ಮತ್ತು ಭದ್ರತಾ ಇಲಾಖೆಗಳಿರುವ ಪುಲಿ ಮೊಹಮೂದ್ ಖಾನ್ ಪ್ರದೇಶವನ್ನು ಗುರಿಯಾಗಿಸಿ ಕಾರ್ ಬಾಂಬ್ ಸ್ಪೊಟಿಸಲಾಗಿದೆ ಎಂದು ಸ್ಥಳೀಯ ರೇಡಿಯೋ ಹಾಗೂ ದೃಶ್ಯ ಮಾಧ್ಯಮಗಳು ವರದಿ ಮಾಡಿವೆ.

 Sharesee more..

ರಷ್ಯಾದ ಕಮ್ಚಟ್ಕಾ ದ್ವೀಪ ಪ್ರದೇಶದಲ್ಲಿ ಭೂಕಂಪ

01 Jul 2019 | 12:24 PM

ಪೆಟ್ರೋಪಾವ್ಲೋಸ್ಕ್, ಜುಲೈ 1 (ಸ್ಫುಟ್ನಿಕ್) ರಷ್ಯಾದ ಕಮ್ಚಟ್ಕಾ ದ್ವೀಪ ಪ್ರದೇಶದ ಕರಾವಳಿಯಲ್ಲಿ ಭೂಕಂಪ ಸಂಭವಿಸಿದೆ ಎಂದು ರಷ್ಯಾದ ಭೂಗರ್ಭ ಸರ್ವೇಕ್ಷಣಾಲಯ ತಿಳಿಸಿದೆ ಸೋಮವಾರ ಸಂಭವಿಸಿದ ಭೂಕಂಪದ ತೀವ್ರತೆ ರಿಕ್ಟರ್ ಮಾಪಕದಲ್ಲಿ 4.

 Sharesee more..