Tuesday, Jul 23 2019 | Time 00:14 Hrs(IST)
International

ಇರಾಕ್ ನಲ್ಲಿ ಎರಡು ಕಡೆ ಬಾಂಬ್ ಸ್ಫೋಟ, ಓರ್ವ ಮಹಿಳೆ ಸಾವು

28 Jun 2019 | 9:24 AM

ಬಾಗ್ದಾದ್, ಜೂನ್ 28 (ಕ್ಷಿನುಹಾ) ಇರಾಕ್ ನ ಕಿರ್ಕುಕ್ ನಗರದಲ್ಲಿ ಗುರುವಾರ ಎರಡು ಸ್ಥಳಗಳಲ್ಲಿ ಬಾಂಬ್ ಸ್ಫೋಟಗೊಂಡ ಪರಿಣಾಮ ಓರ್ವ ಮಹಿಳೆ ಸಾವನ್ನಪ್ಪಿದ್ದು, 18 ಜನರಿಗೆ ಗಂಭೀರ ಗಾಯಗಳಾಗಿವೆ ಕಿರ್ಕುಕ್ ಪೊಲೀಸ್ ಅಮ್ಮರ್ ಅಲ್ ಜುಬೇರಿ ಸುದ್ದಿಗಾರರೊಂದಿಗೆ ಮಾತನಾಡಿ, ಮಧ್ಯ ಕಿರ್ಕುಕ್ ನ ಅಲ್ -ಖಾದರ ಎಂಬಲ್ಲಿ ಪ್ರಯಾಣಿಕರನ್ನು ಗುರಿಯಾಗಿಸಿಕೊಂಡು ಗುರುವಾರ ಸಂಜೆ ಮೊದಲ ಸ್ಫೋಟ ಮಾಡಲಾಗಿತ್ತು.

 Sharesee more..

ಭಾರತ-ಜಪಾನ್‌ ಬಾಂಧವ್ಯ ವೃದ್ಧಿ: ಪ್ರಧಾನಿ ಮೋದಿ

27 Jun 2019 | 9:25 PM

ಟೋಕಿಯೊ, ಜೂನ್‌ 27(ಯುಎನ್‌ಐ) ನವ ಭಾರತದಲ್ಲಿ ಭಾರತ ಹಾಗೂ ಜಪಾನ್ ನಡುವಣ ಬಾಂಧವ್ಯ ಮತ್ತಷ್ಟು ಬಲಿಷ್ಠಗೊಳ್ಳಲಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ ಜಪಾನ್ ನಗರಿ ಕೊಬೆಯಲ್ಲಿ ಗುರುವಾರ ಸಂಜೆ ಭಾರತೀಯ ಸಮುದಾಯವನ್ನು ಉದ್ದೇಶಿಸಿ ಮಾತನಾಡಿದ ಮೋದಿ, ಭಾರತದ ಆರ್ಥಿಕ ಅಭಿವೃದ್ಧಿಯಲ್ಲಿ ಜಪಾನ್ ಮಹತ್ವದ ಪಾತ್ರ ವಹಿಸುತ್ತಿದೆ.

 Sharesee more..

ರಸ್ತೆ ಅಪಘಾತ: ಏಳು ಜನರ ಸಾವು

27 Jun 2019 | 6:58 PM

ಅಫ್ಘಾನಿಸ್ತಾನ, ಜೂನ್ 27 (ಯುಎನ್ಐ) ಉತ್ತರ ಅಫ್ಘಾನಿಸ್ತಾನದ ಬಾದಾಕ್ಷನ್ ಪ್ರಾಂತ್ಯದಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಪಿಕ್ ಅಪ್ ಟ್ರಕ್ ವಾಹನವೊಂದು ಸಮೀಪದ ನದಿಗೆ ಉರುಳಿದ ಪರಿಣಾಮ ಏಳು ಜನ ಮೃತಪಟ್ಟಿರುವ ಘಟನೆ ಗುರುವಾರ ನಡೆದಿದೆ.

 Sharesee more..

ತೈಲ ಪೂರೈಕೆಗೆ ಇರಾಕ್ ಸಿದ್ಧ; ತಮಿರ್ ಗಾಡ್ಬನ್

27 Jun 2019 | 6:43 PM

ಲಂಡನ್, ಜೂನ್ 27 (ಯುಎನ್ಐ) ದಿನಕ್ಕೆ 5 ಮಿಲಿಯನ್ ಬ್ಯಾರೆಲ್ ಗಳ ಉತ್ಪಾದನಾ ಸಾಮರ್ಥ್ಯವನ್ನು ಇರಾಕ್ ಹೊಂದಿದ್ದು, ಬೇಡಿಕೆಯನ್ನು ಪೂರೈಸಲು ಸಿದ್ದರಿದ್ದೇವೆ ಎಂದು ಇರಾಕ್ ತೈಲ ಸಚಿವ ತಮಿರ್ ಗಾಡ್ಬನ್ ಗುರುವಾರ ತಿಳಿಸಿದರು ಸದ್ಯ ಇರಾಕ್ ಕುರ್ದಿಸ್ತಾನ್ ನಲ್ಲಿ 5 ಮಿಲಿಯನ್ ಬ್ಯಾರೆಲ್ ತೈಲ್ ಉತ್ಪಾದನಾ ಸಾಮರ್ಥ್ಯ ಹೊಂದಿದ್ದು, ಇದು (ಒಪಿಇಸಿ) ಪೆಟ್ರೋಲಿಯಂ ರಫ್ತು ಮಾಡುವ ದೇಶಗಳ ಸಂಘಟನೆಗಳಲ್ಲಿ ಎರಡನೇ ಸ್ಥಾನವನ್ನು ಹೊಂದಿದೆ ತಿಳಿಸಿದರು.

 Sharesee more..

ಅಮೆರಿಕದೊಂದಿಗೆ ರಚನಾತ್ಮಕ ಮಾತುಕತೆಗೆ ಸಿದ್ಧ; ಇರಾಕ್

27 Jun 2019 | 6:05 PM

ಲಂಡನ್, ಜೂನ್ 27 (ಸ್ಪುಟ್ನಿಕ್ ) ಅಮೆರಿಕ ಹಾಗೂ ಇರಾನ್ ನಡುವಿನ ಓಮನ್ ಹಾಗೂ ಪರ್ಷಿಯಾ ಗಡಿ ಭಾಗದ ಹರ್ಮಜ್ ಸ್ಟ್ರೇಟ್ ಪ್ರದೇಶಕ್ಕೆ ಸಂಬಂಧಿಸಿದ ಬಿಕ್ಕಟ್ಟನ್ನು ರಚನಾತ್ಮಕ ಮಾತುಕತೆಯಿಂದ ಬಗೆಹರಿಸಿಕೊಳ್ಳಬಹುದು ಎಂದು ಇರಾಕ್ ಸಲಹೆ ನೀಡಿದೆ.

 Sharesee more..

ಬಾಂಬ್ ಬೆದರಿಕೆ; ಏರ್ ಇಂಡಿಯಾ ವಿಮಾನ ತುರ್ತು ಭೂಸ್ಪರ್ಶ

27 Jun 2019 | 4:33 PM

ಲಂಡನ್, ಜೂನ್ 27 (ಯುಎನ್ಐ) ವಿಮಾನದಲ್ಲಿ ಬಾಂಬ್ ಇರಿಸಿರುವ ಬೆದರಿಕೆ ಹಿನ್ನೆಲೆಯಲ್ಲಿ ಭಾರತದಿಂದ ಅಮೆರಿಕಕ್ಕೆ ಪ್ರಯಾಣ ಬೆಳೆಸಿದ್ದ ಏರ್ ಇಂಡಿಯಾ ವಿಮಾನವೊಂದು ಲಂಡನ್ ನ ಸ್ಟಾನ್ ಸ್ಟೆಡ್ ವಿಮಾನನಿಲ್ದಾಣದಲ್ಲಿ ತುರ್ತು ಭೂಸ್ಪರ್ಶಮಾಡಿದೆ ಮುಂಬೈನಿಂದ ಅಮೆರಿಕದ ನೆವಾರ್ಕ್ ಪ್ರದೇಶಕ್ಕೆ ಪ್ರಯಾಣ ಬೆಳೆಸಿದ್ದ ಎ1191 ಪ್ರಯಾಣಿಕರ ವಿಮಾನದಲ್ಲಿ ಬಾಂಬ್ ಇರಿಸಿರುವುದಾಗಿ ಮಾಹಿತಿ ತಿಳಿದ ಹಿನ್ನೆಲೆಯಲ್ಲಿ ಏರ್ ಇಂಡಿಯಾ ತುರ್ತು ಭೂಸ್ಪರ್ಶಕ್ಕೆ ಆದೇಶಿಸಿತ್ತು.

 Sharesee more..

ಜಿ-20 ಶೃಂಗಸಭೆಯಲ್ಲಿ ಭಾಗವಹಿಸಲು ಜಪಾನ್‌ ತಲುಪಿದ ಮೋದಿ; ಇಂದು ಶಿಂಜೊ ಅಬೆ ಅವರೊಂದಿಗೆ ಮಾತುಕತೆ

27 Jun 2019 | 10:47 AM

ಒಸಾಕ, ಜೂನ್ 27 (ಯುಎನ್ಐ) ನಾಳೆ ಮತ್ತು ನಾಡಿದ್ದು ಒಸಾಕದಲ್ಲಿ ನಡೆಯುವ ಜಿ-20 ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಪ್ರಧಾನಮಂತ್ರಿ ನರೇಂದ್ರ ಮೋದಿ ಇಂದು ಜಪಾನ್ ತಲುಪಿದ್ದಾರೆ ಶೃಂಗಸಭೆಯ ಸಂದರ್ಭದಲ್ಲಿ ಮೋದಿ ಅವರು ಪ್ರಮುಖ ಪಾಲುದಾರ ದೇಶಗಳ ನಾಯಕರೊಂದಿಗೆ ಮಾತುಕತೆ ನಡೆಸಲಿದ್ದಾರೆ.

 Sharesee more..

ರಷ್ಯಾದ ಪ್ರಯಾಣಿಕ ವಿಮಾನ ತುರ್ತು ಭೂಸ್ಪರ್ಶ: ಇಬ್ಬರು ಪೈಲಟ್‌ಗಳು ಸಾವು, 7 ಮಂದಿಗೆ ಗಾಯ

27 Jun 2019 | 10:13 AM

ಮಾಸ್ಕೋ, ಜೂ 27 (ಯುಎನ್ಐ) ರಿಪಬ್ಲಿಕ್ ಆಫ್ ಬುರ್ಯಾಟಿಯಾದ ನಿಜ್ನಿಯಾಂಗಾರ್ಸ್ಕ್‌ ನಗರದಲ್ಲಿ ರಷ್ಯಾದ 'ಆನ್-24' ಪ್ರಯಾಣಿಕ ವಿಮಾನ ತುರ್ತು ಭೂಸ್ಪರ್ಶ ಮಾಡಿದ ಪರಿಣಾಮ ಅದರಲ್ಲಿದ್ದ ಇಬ್ಬರು ಪೈಲಟ್‌ಗಳು ಸಾವನ್ನಪ್ಪಿ, 7 ಮಂದಿ ಪ್ರಯಾಣಿಕರು ಗಾಯಗೊಂಡಿರುವ ಘಟನೆ ಗುರುವಾರ ನಡೆದಿದೆ ಎಂದು ರಷ್ಯಾದ ಫೆಡರಲ್ ವಾಯು ಸಾರಿಗೆ ಸಂಸ್ಥೆಯ ವಕ್ತಾರರು ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.

 Sharesee more..

ಈಜಿಪ್ಟ್‌ನ ಸಿನಾಯ್‌ಯಲ್ಲಿ ಉಗ್ರರ ದಾಳಿ: ಏಳು ಪೊಲೀಸರ ಸಾವು

27 Jun 2019 | 9:50 AM

ಕೈರೋ, ಜೂನ್ 27 (ಯುಎನ್ಐ) ಉತ್ತರ ಸಿನಾಯ್‌ಯಲ್ಲಿ ಐಎಸ್‌ಐಎಲ್ ಉಗ್ರರು ನಡೆಸಿದ ದಾಳಿಯಲ್ಲಿ ಏಳು ಮಂದಿ ಈಜಿಪ್ಟ್ ಪೊಲೀಸರು ಸಾವನ್ನಪ್ಪಿದ್ದಾರೆ ಎಂದು ಮೂಲಗಳು ತಿಳಿಸಿವೆ ಪ್ರಾದೇಶಿಕ ರಾಜಧಾನಿ ಅಲ್ ಆರಿಶ್ ಬಳಿ ಮಂಗಳವಾರ ತಡರಾತ್ರಿ ಪೊಲೀಸರ "ಅಸೆಂಬ್ಲಿ ಸೆಂಟರ್" ಅನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಲಾಗಿದೆ.

 Sharesee more..

ಶ್ರೀಲಂಕಾದಲ್ಲಿ ಈಸ್ಟರ್ ದಾಳಿಯ ಎಲ್ಲಾ ಪ್ರಮುಖ ಶಂಕಿತರನ್ನು ಬಂಧಿಸಲಾಗಿದೆ: ಅಧ್ಯಕ್ಷ

26 Jun 2019 | 9:16 PM

ಕೊಲಂಬೊ, ಜೂನ್ 26 (ಕ್ಸಿನ್ಹುವಾ) ಈಸ್ಟರ್ ಭಾನುವಾರದ ಭಯೋತ್ಪಾದಕ ದಾಳಿಯಲ್ಲಿ ಭಾಗಿಯಾಗಿರುವ ಎಲ್ಲ ಪ್ರಮುಖ ಶಂಕಿತರನ್ನು ಬಂಧಿಸಲಾಗಿದೆ ಅಥವಾ ಅವರೆಲ್ಲ ಸಾವನ್ನಪ್ಪಿದ್ದು, ದ್ವೀಪ ರಾಷ್ಟ್ರದ ಭದ್ರತಾ ಪರಿಸ್ಥಿತಿಯ ಬಗ್ಗೆ ತೃಪ್ತಿ ಹೊಂದಿದ್ದೇನೆ ಎಂದು ಶ್ರೀಲಂಕಾದ ಅಧ್ಯಕ್ಷ ಮೈತ್ರಿಪಾಲ ಸಿರಿಸೇನಾ ಬುಧವಾರ ಹೇಳಿದ್ದಾರೆ.

 Sharesee more..

ಆಫ್ಘಾನಿಸ್ತಾನದಲ್ಲಿ ದಾಳಿ: ಎಂಟು ಭದ್ರತಾ ಸಿಬ್ಬಂದಿ ಸಾವು, 16 ಮಂದಿಗೆ ಗಾಯ

26 Jun 2019 | 3:57 PM

ಕಾಬೂಲ್, ಜೂನ್ 26 (ಯುಎನ್‌ಐ)-ಆಫ್ಘಾನಿಸ್ತಾನದ ಪಶ್ಚಿಮ ಭಾಗದ ಹೆರಾತ್ ಪ್ರಾಂತ್ಯದ ಜಿಲ್ಲಾ ಕೇಂದ್ರದ ಮೇಲೆ ಮಂಗಳವಾರ ರಾತ್ರಿ ಶಂಕಿತ ತಾಲಿಬಾನ್ ಉಗ್ರರು ನಡೆಸಿದ ದಾಳಿಯಲ್ಲಿ ಕನಿಷ್ಠ ಎಂಟು ಮಂದಿ ಭದ್ರತಾ ಸಿಬ್ಬಂದಿ ಸಾವನ್ನಪ್ಪಿದ್ದು, 16 ಮಂದಿ ಗಾಯಗೊಂಡಿದ್ದಾರೆ ಎಂದು ಅಲ್ಲಿನ ಪೊಲೀಸರು ಬುಧವಾರ ತಿಳಿಸಿದ್ದಾರೆ.

 Sharesee more..

ಉತ್ತರ ಇರಾಕ್‌ನಲ್ಲಿ ಬಾಂಬ್ ದಾಳಿ : ಐವರು ಪೊಲೀಸರ ದುರ್ಮರಣ

26 Jun 2019 | 2:14 PM

ಬಾಗ್ದಾದ್, ಜೂನ್ 26 (ಕ್ಸಿನ್ಹುವಾ) ದೇಶದ ಉತ್ತರ ಪ್ರಾಂತ್ಯದ ಕಿರ್ಕುಕ್‌ನಲ್ಲಿ ರಸ್ತೆ ಬದಿಯಲ್ಲಿ ನಡೆದ ಬಾಂಬ್ ದಾಳಿಯಲ್ಲಿ ಐವರು ಇರಾಕಿ ಪೊಲೀಸರು ಮೃತಪಟ್ಟಿದ್ದಾರೆ ಎಂದು ಭದ್ರತಾ ಅಧಿಕಾರಿಯೊಬ್ಬರು ತಿಳಿಸಿದ್ದಾರೆ ಇಸ್ಲಾಮಿಕ್ ಸ್ಟೇಟ್ (ಐಎಸ್) ಉಗ್ರರು ಹುದಗಿಸಿದ್ದ ರಸ್ತೆಬದಿಯಲ್ಲಿನ ಬಾಂಬ್, ಪ್ರಾಂತೀಯ ರಾಜಧಾನಿ ಕಿರ್ಕುಕ್‌ನ ದಕ್ಷಿಣದಲ್ಲಿರುವ ಅಲ್-ರಶಾದ್ ನಗರದ ಸಮೀಪದ ಹೆದ್ದಾರಿಯಲ್ಲಿ ಬೆಳಗ್ಗೆ ಸ್ಫೋಟಗೊಂಡು ಪೊಲೀಸರು ಮೃತಪಟ್ಟಿದ್ದಾರೆ ಎಂದು ಪೊಲೀಸ್ ಇಲಾಖೆಯ ಸಾಹಿಲ್ ಅಲ್ ಒಬೈಡಿ ಹೇಳಿದ್ದಾರೆ.

 Sharesee more..

ಪಶ್ಚಿಮ ಪನಾಮಾದಲ್ಲಿ 6 ತೀವ್ರತೆಯ ಭೂಕಂಪ

26 Jun 2019 | 1:20 PM

ಬೀಜಿಂಗ್, ಜೂನ್ 26 (ಕ್ಸಿನ್ಹುವಾ) ಪಶ್ಚಿಮ ಪನಾಮಾದ ಲಾ ಎಸ್ಪೆನ್ಜಾ ಪ್ರದೇಶದಲ್ಲಿ ಬುಧವಾರ ಭೂಕಂಪ ಸಂಭವಿಸಿದೆ ರಿಕ್ಟರ್ ಮಾಪದಲ್ಲಿ ಭೂಕಂಪದ ತೀವ್ರತೆ 6.

 Sharesee more..

ದಕ್ಷಿಣ ಚೀನಾದಲ್ಲಿ ಬೆಂಕಿ ಅವಘಡ : ಆರು ಸಾವು

26 Jun 2019 | 12:26 PM

ಗುಂಗ್ ಜೋ಼ , ಜೂನ್ 26 (ಕ್ಸಿನ್ಹುವಾ) ದಕ್ಷಿಣ ಚೀನಾದ ಗುಂಗಾಡಾಂಗ್ ಪ್ರಾಂತ್ಯದಲ್ಲಿ ಬುಧವಾರ ಬೆಳಗಿನ ಜಾವ ಸಂಭವಿಸಿದ ಅಗ್ನಿ ಆಕಸ್ಮಿಕದಲ್ಲಿ ಆರು ಜನರು ಸಾವನ್ನಪ್ಪಿದ್ದಾರೆ ಘಟನಾ ಸ್ಥಳಕ್ಕೆ ಅಗ್ನಿ ಶಾಮಕ ದಳ ತಕ್ಷಣವೇ ಧಾವಿಸಿದ್ದು ಬೆಳಗ್ಗೆ 4 ಗಂಟೆಯಿಂದಲೇ ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿದೆ ಎಂದು ಜೋ಼ಗ್‌ಶಾನ್ ಸಾರ್ವಜನಿಕ ಇಲಾಖೆ ಮಾಹಿತಿ ನೀಡಿದೆ.

 Sharesee more..

ಬಾಂಧವ್ಯ ಬಲವರ್ಧನೆಗೆ ಅಮೆರಿಕದ ಯತ್ನ : ನಿರ್ಮಲಾ ಸೀತಾರಾಮನ್ ಮತ್ತು ರಾಜ್‌ನಾಥ್ ಸಿಂಗ್ ಭೇಟಿ

26 Jun 2019 | 8:52 AM

ನವದೆಹಲಿ, ಜೂನ್ 26 (ಯುಎನ್‌ಐ) ಭಾರತ ಮತ್ತು ಅಮೆರಿಕ ನಡುವೆ ಬಾಂಧವ್ಯ ವೃದ್ಧಿಗೆ ಅದರಲ್ಲೂ ಆರ್ಥಿಕ ಮತ್ತು ರಕ್ಷಣಾ ವಲಯಗಳಲ್ಲಿನ ಸಹಕಾರ ಬಲವರ್ಧನೆಗೆ ಅಮೆರಿಕದ ರಾಯಭಾರಿ ಕೆನ್ ಜಸ್ಟರ್ ಕಳೆದೆರಡು ದಿನಗಳಿಂದ ಭಾರತದೊಂದಿಗೆ ಸರಣಿ ಸಭೆ ನಡೆಸಿದರು.

 Sharesee more..