Wednesday, Sep 29 2021 | Time 04:19 Hrs(IST)
International

ಕಾಬೂಲ್: ಆಹಾರಕ್ಕಾಗಿ ಮನೆ ವಸ್ತುಗಳ ಮಾರಾಟ

18 Sep 2021 | 12:16 PM

ಕಾಬೂಲ್, ಸೆ 18 (ಯುಎನ್ಐ) ಅಫಘಾನಿಸ್ತಾನದಲ್ಲಿ ತಾಲಿಬಾನ್ ಅಧಿಕಾರಕ್ಕೆ ಬಂದಾಗಿನಿಂದ, ಜನರು ತಮ್ಮ ಮನೆಯ ವಸ್ತುಗಳನ್ನು ಕಾಬೂಲ್ ಬೀದಿಗಳಲ್ಲಿ ಮಾರಾಟ ಮಾಡುತ್ತಿದ್ದಾರೆ.

 Sharesee more..

ಹೊಸ ಅಫ್ಗಾನ್‌ ಸರ್ಕಾರದೊಂದಿಗೆ ಸಂವಹನಕ್ಕೆ ಸಿದ್ಧ; ಚೀನಾ

15 Sep 2021 | 4:52 PM

ಬೀಜಿಂಗ್, ಸೆ 15 (ಯುಎನ್ಐ/ಸ್ಪುಟ್ನಿಕ್) ಅಫ್ಗಾನಿಸ್ತಾನದಲ್ಲಿ ಹೊಸ ಸರ್ಕಾರದೊಂದಿಗೆ ಸಂವಹನ ನಡೆಸಲು ಚೀನಾ ಸಿದ್ಧವಾಗಿದೆ ಎಂದು ಅದರ ವಿದೇಶಾಂಗ ಸಚಿವಾಲಯದ ವಕ್ತಾರ ಜಾವೊ ಲಿಜಿಯಾನ್ ಬುಧವಾರ ತಿಳಿಸಿದ್ದಾರೆ ಮಂಗಳವಾರ, ಅಫ್ಗಾನಿಸ್ತಾನದ ಚೀನಾದ ರಾಯಭಾರಿ ಅಫ್ಘಾನಿಸ್ತಾನವನ್ನು ಹೊಸ ಸರ್ಕಾರ ರಚನೆಗೆ ಅಭಿನಂದಿಸಿದ್ದಾರೆ.

 Sharesee more..

ಅಫ್ಗಾನಿಸ್ತಾನಕ್ಕೆ ಇರಾನ್‌ನ ಮೊದಲ ಪ್ರಯಾಣಿಕರ ವಿಮಾನ ಆಗಮನ

15 Sep 2021 | 2:51 PM

ಕಾಬೂಲ್, ಸೆ 15 (ಯುಎನ್ಐ/ಸ್ಪುಟ್ನಿಕ್) ಅಪ್ಗಾನಿಸ್ತಾನವನ್ನು ತಾಲಿಬಾನ್ ಸ್ವಾಧೀನಪಡಿಸಿಕೊಂಡ ನಂತರ ಇರಾನ್‌ನ ಮೊದಲ ಪ್ರಯಾಣಿಕರ ವಿಮಾನ ಬುಧವಾರ ಕಾಬೂಲ್‌ಗೆ ಬಂದಿಳಿಯಿತು ಎಂದು ವಿಮಾನ ನಿಲ್ದಾಣದ ಮೂಲವು ಸ್ಪುಟ್ನಿಕ್‌ಗೆ ತಿಳಿಸಿದೆ ಈ ವಿಮಾನದಲ್ಲಿ 14 ಜನರಿದ್ದರು ಎಂದು ಮೂಲಗಳು ತಿಳಿಸಿವೆ.

 Sharesee more..

ಪಾಕ್ ನಲ್ಲಿ 2580 ಕೊರೊನಾ ಪ್ರಕರಣ ದಾಖಲು

14 Sep 2021 | 4:48 PM

ಕರಾಚಿ, ಸೆ 14 (ಯುಎನ್ಐ)- ಕಳೆದ 24 ಗಂಟೆಗಳಲ್ಲಿ, ಪಾಕಿಸ್ತಾನದಲ್ಲಿ 2580 ಹೊಸ ಕೊರೊನಾ ವೈರಸ್ (ಕೋವಿಡ್ -19) ಸೋಂಕಿನ ಪ್ರಕರಣಗಳು ವರದಿಯಾಗಿವೆ ಎಂದು ರಾಷ್ಟ್ರೀಯ ಕಮಾಂಡ್ ಮತ್ತು ಕಾರ್ಯಾಚರಣೆ ಕೇಂದ್ರ (ಎನ್ ಸಿಒಸಿ) ಇಂದು ಈ ಮಾಹಿತಿಯನ್ನು ನೀಡಿದೆ.

 Sharesee more..

ಆ 28 ವಸ್ತುಗಳು ನಮ್ಮವರ ಬಳಿಯಿಂದಲೇ ಖರೀದಿಸಿ.. ಸೌದಿ ದೊರೆ ಸಂಚಲನ ಆದೇಶ

14 Sep 2021 | 1:43 PM

ರಿಯಾದ್, ಸೆ 14( ಯುಎನ್‌ ಐ) ಅರಬ್ ದೇಶ ಸೌದಿ ಅರೇಬಿಯಾ ಕೂಡ ಈಗ ಸ್ವದೇಶಿ ಮಂತ್ರ ಜಪಿಸುತ್ತಿದೆ ತಮ್ಮ ದೇಶದಲ್ಲಿ ತಯಾರಾಗುವ ಸ್ಥಳೀಯ ಉತ್ಪನ್ನಗಳನ್ನು ಮಾತ್ರ ಖರೀದಿಸಲು ಸರ್ಕಾರಿ ಗುತ್ತಿಗೆದಾರರಿಗೆ ಸೂಚಿಸಿದೆ.

 Sharesee more..

ಪಠ್ಯಕ್ರಮದಿಂದ ಶರಿಯಾ ಕಾನೂನಿನ ವಿರುದ್ಧದ ವಿಷಯಗಳನ್ನು ತೆಗೆದುಹಾಕಲಿರುವ ತಾಲಿಬಾನ್‌

13 Sep 2021 | 5:31 PM

ಮಾಸ್ಕೋ, ಸೆ 13 (ಯುಎನ್ಐ/ಸ್ಪುಟ್ನಿಕ್) ಅಫ್ಗಾನಿಸ್ತಾನದ ವಿಶ್ವವಿದ್ಯಾನಿಲಯಗಳ ಪಠ್ಯಕ್ರಮದಿಂದ ಇಸ್ಲಾಂನ ಶರಿಯಾ ಕಾನೂನಿಗೆ ವಿರುದ್ಧವಾದ ವಿಷಯಗಳನ್ನು ತೆಗೆದುಹಾಕುವುದಾಗಿ ತಾಲಿಬಾನ್‌ನ ಉನ್ನತ ಶಿಕ್ಷಣ ಸಚಿವಾಲಯ ಘೋಷಿಸಿತು ಎಂದು ಉನ್ನತ ಶಿಕ್ಷಣದ ಹಂಗಾಮಿ ಸಚಿವ ಶೇಖ್ ಅಬ್ದುಲ್ ಬಾಕಿ ಹಕ್ಕಾನಿ ಸೋಮವಾರ ಸುದ್ದಿ ಸಂಸ್ಥೆ ಗೆ ಈ ಕುರಿತು ಮಾಹಿತಿ ನೀಡಿದ್ದು, ಇಸ್ಲಾಮಿಕ್ ಕಾನೂನುಗಳಿಗೆ ವಿರುದ್ಧವಾದ ಪ್ರತಿಯೊಂದು ವಿಷಯವನ್ನು ತೆಗೆದುಹಾಕಲಾಗುತ್ತದೆ ಎಂದರು.

 Sharesee more..

ವಿವಿ ಪಠ್ಯದಲ್ಲಿನ್ನು ಶರಿಯಾ ಕಾನೂನಿಗೆ ವಿರುದ್ಧವಾದ ವಿಷಯಗಳಿರದು: ತಾಲಿಬಾನ್

13 Sep 2021 | 5:19 PM

ಮಾಸ್ಕೋ, ಸೆ 13(ಯುಎನ್ಐ) ಇಸ್ಲಾಮಿಕ್ ಕಾನೂನುಗಳಿಗೆ ವಿರುದ್ಧವಾದ ಪ್ರತಿಯೊಂದು ವಿಷಯವನ್ನೂ ವಿಶ್ವವಿದ್ಯಾಲಯಗಳ ಪಠ್ಯಕ್ರಮದಿಂದ ತೆಗೆದುಹಾಕಲಾಗುತ್ತದೆ ಎಂದು ಅಫಘಾನಿಸ್ತಾನದಲ್ಲಿ ಅಧಿಕಾರ ಹಿಡಿದಿರುವ ತಾಲಿಬಾನ್ ತಿಳಿಸಿದೆ.

 Sharesee more..

ಕೋವಿಡ್-19: ಪಾಕ್ ನಲ್ಲಿ ಒಂದೇ ದಿನ 67 ಸಾವು, 2988 ಹೊಸ ಪ್ರಕರಣ

13 Sep 2021 | 3:43 PM

ಕರಾಚಿ, ಸೆ 13 (ಯುಎನ್ಐ)- ಪಾಕಿಸ್ತಾನದಲ್ಲಿ ಕಳೆದ 24 ಗಂಟೆಗಳಲ್ಲಿ ಕೊರೋನಾ ವೈರಸ್ (ಕೋವಿಡ್ -19) ಸೋಂಕಿನಿಂದ 67 ಜನರು ಪ್ರಾಣ ಕಳೆದುಕೊಂಡಿದ್ದು, 2988 ಹೊಸ ಪ್ರಕರಣಗಳು ವರದಿಯಾಗಿವೆ ಎಂದು ರಾಷ್ಟ್ರೀಯ ಕಮಾಂಡ್ ಮತ್ತು ಕಾರ್ಯಾಚರಣೆ ಕೇಂದ್ರ (ಎನ್ಸಿಒಸಿ) ಇಂದು ಈ ಮಾಹಿತಿಯನ್ನು ನೀಡಿದೆ.

 Sharesee more..

ಇರಾನ್‌ನಲ್ಲಿ 5.1 ತೀವ್ರತೆಯ ಭೂಕಂಪನ

13 Sep 2021 | 3:34 PM

ತೆಹ್ರಾನ್, ಸೆ 13 (ಯುಎನ್ಐ)- ಇರಾನ್‌ನ ವಾಯುವ್ಯ ತುರ್ಕಮೆನಿಸ್ತಾನದ ಗಡಿಯಲ್ಲಿ ಸೋಮವಾರ ಪ್ರಬಲ ಭೂಕಂಪನದ ಅನುಭವವಾಗಿದೆ.

 Sharesee more..

ಮಾರ್ಕ್ ಜುಕರ್‌ಬರ್ಗ್ ಬಗ್ಗೆ ಡೊನಾಲ್ಡ್ ಟ್ರಂಪ್ ಆಕ್ಷೇಪಾರ್ಹ ಹೇಳಿಕೆ

12 Sep 2021 | 4:17 PM

ವಾಷಿಂಗ್ಟನ್‌, ಸೆ 12(ಯುಎನ್‌ ಐ) ಅಮೆರಿಕಾ ಅಧ್ಯಕ್ಷ ಚುವಾವಣೆಯಲ್ಲಿ ಭಾರಿ ಪರಾಭವದ ನಂತರ ಕ್ಯಾಪಿಟಲ್ ಹಿಲ್ ಹಿಂಸಾಚಾರದ ಕಾರಣ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿರುದ್ದ ಸಾಮಾಜಿಕ ಮಾಧ್ಯಮಗಳು ವಿಧಿಸಿರುವ ನಿಷೇಧ ಜಾರಿಯಲ್ಲಿದೆ ಈ ಹಿನ್ನಲೆಯಲ್ಲಿ ಅವಕಾಶ ದೊರೆತಾಗಲೆಲ್ಲಾ ಸಾಮಾಜಿಕ ಮಾಧ್ಯಮಗಳ ಪ್ರವೃತ್ತಿಯನ್ನು ಟ್ರಂಪ್‌ ತೀಕ್ಷ್ಣವಾಗಿ ಟೀಕಿಸುತ್ತಿರುತ್ತಾರೆ.

 Sharesee more..

ವಿಶ್ವಸಂಸ್ಥೆ ಅಧಿಕಾರಿಗಳನ್ನು ಸ್ಥಳಾಂತರಿಸಿ ಕಾಬೂಲ್‌ಗೆ ಮರಳಿದ ವಿಮಾನಗಳು

12 Sep 2021 | 3:30 PM

ಮಾಸ್ಕೋ, ಸೆ 12 (ಯುಎನ್ಐ/ಸ್ಪುಟ್ನಿಕ್) ಅಫ್ಗಾನಿಸ್ತಾನ ಸರ್ಕಾರ ಪತನಗೊಂಡ ನಂತರ ಕಳೆದ ತಿಂಗಳು ವಿಶ್ವಸಂಸ್ಥೆಯ ಅಧಿಕಾರಿಗಳನ್ನು ಹೊತ್ತು ದೇಶದಿಂದ ಹೊರಟಿದ್ದ ಎರಡು ವಿಮಾನಗಳು ಕಾಬೂಲ್ ವಿಮಾನ ನಿಲ್ದಾಣದಲ್ಲಿ ಮರಳಿ ಬಂದಿಳಿದಿವೆ ಎಂದು ವಿಮಾನ ನಿಲ್ದಾಣದ ಅಧಿಕಾರಿಯನ್ನು ಉಲ್ಲೇಖಿಸಿ ಅಲ್ ಜಜೀರಾ ಭಾನುವಾರ ವರದಿ ಮಾಡಿದೆ.

 Sharesee more..

ಸಿಐಎ ತರಬೇತಿ ಪಡೆದ ತಂಡಕ್ಕೆ ತಾಲಿಬಾನ್ ಬೆದರಿಕೆ

11 Sep 2021 | 12:14 PM

ವಾಷಿಂಗ್ಟನ್, ಸೆ 11(ಯುಎನ್ಐ/ಸ್ಪುಟ್ನಿಕ್) ಭಯೋತ್ಪಾದನಾ ಚಟುವಟಿಕೆಗಳ ವಿರುದ್ಧ ಕೇಂದ್ರ ಗುಪ್ತಚರ ವಿಭಾಗ ಸಿಐಎಯಿಂದ ತರಬೇತಿ ಪಡೆದ ತಂಡಕ್ಕೆ ತಾಲಿಬಾನ್ ಸಂಘಟನೆ ಜೀವ ಬೆದರಿಕೆಯೊಡ್ಡಿದೆ ಎಂದು ವರದಿಗಳು ತಿಳಿಸಿವೆ.

 Sharesee more..

ಅಫ್ಘಾನ್ ತಾಲಿಬಾನ್ ಸ್ವಾಧೀನಕ್ಕೆ ರಾಜಕೀಯ, ಸೇನಾ ನಾಯಕತ್ವ ಕುಸಿತ ಕಾರಣ: ನ್ಯಾಟೋ ಮುಖ್ಯಸ್ಥ

11 Sep 2021 | 11:07 AM

ವಾಷಿಂಗ್ಟನ್, ಸೆ 11 (ಯುಎನ್ಐ/ಸ್ಪುಟ್ನಿಕ್) ರಾಜಕೀಯ ಮತ್ತು ಸೇನಾ ನಾಯಕತ್ವದ ಕುಸಿತದಿಂದಾಗಿ ಅಫ್ಘಾನಿಸ್ತಾನವನ್ನು ತಾಲಿಬಾನ್ ಇಸ್ಲಾಮಿಸ್ಟ್ ಚಳುವಳಿ ವಶಪಡಿಸಿಕೊಂಡಿದೆ ಎಂದು ನ್ಯಾಟೋ ಪ್ರಧಾನ ಕಾರ್ಯದರ್ಶಿ ಜೆನ್ಸ್ ಸ್ಟೋಲ್ಟೆನ್ಬರ್ಗ್ ಹೇಳಿದ್ದಾರೆ.

 Sharesee more..

9/11 ದಾಳಿಯ 20 ನೇ ವಾರ್ಷಿಕೋತ್ಸವ

11 Sep 2021 | 10:19 AM

ವಿಶ್ವಸಂಸ್ಥೆ, ಸೆ 11(ಯುಎನ್ಐ/ಕ್ಸಿನ್ಹುವಾ) ಇಂದು 90 ಕ್ಕೂ ಹೆಚ್ಚು ದೇಶಗಳ ಸುಮಾರು 3 ಸಾವಿರ ಜೀವಗಳನ್ನು ಭಯೋತ್ಪಾದಕರು ಅಮೆರಿಕಾದಲ್ಲಿ ಹೇಡಿತನ ಮತ್ತು ಭೀಕರ ದಾಳಿಗಳಲ್ಲಿ ತೆಗೆದುಕೊಂಡ ದಿನ.

 Sharesee more..

ಈಶಾನ್ಯ ಚೀನಾ: ಅನಿಲ ಸ್ಫೋಟದಲ್ಲಿ 8 ಸಾವು, 5 ಜನರಿಗೆ ಗಾಯ

11 Sep 2021 | 8:20 AM

ಡೇಲಿಯನ್, ಸೆಪ್ಟೆಂಬರ್ 11 (ಯುಎನ್ಐ/ಕ್ಸಿನ್ಹುವಾ) ಈಶಾನ್ಯ ಚೀನಾದ ಲಿಯಾನಿಂಗ್ ಪ್ರಾಂತ್ಯದ ಡೇಲಿಯನ್ ನಗರದ ವಸತಿ ಕಟ್ಟಡದಲ್ಲಿ ಗ್ಯಾಸ್ ಸಿಲಿಂಡರ್ ಸೋರಿಕೆಯಿಂದ ಉಂಟಾದ ಬೆಂಕಿಯಲ್ಲಿ ಎಂಟು ಜನರು ಬಲಿಯಾಗಿ ಐವರು ಗಾಯಗೊಂಡಿದ್ದಾರೆ ನಗರದ ಪುಲಂಡಿಯನ್ ಜಿಲ್ಲೆಯಲ್ಲಿ ಮಧ್ಯರಾತ್ರಿ ಈ ಅಪಘಾತ ಸಂಭವಿಸಿದೆ ಕೂಡಲೇ ಸ್ಥಳಕ್ಕೆ ದೌಡಾಯಿಸಿದ ಅಗ್ನಿಶಾಮಕ ದಳ ಮತ್ತು ಸ್ಥಳೀಯ ಪೊಲೀಸರು ಮಧ್ಯರಾತ್ರಿ 2: 30 ರ ಸುಮಾರಿಗೆ ಬೆಂಕಿಯನ್ನು ನಂದಿಸಿದ್ದಾರೆ.

 Sharesee more..