Monday, Jun 1 2020 | Time 01:57 Hrs(IST)
International

ಪೆರುವಿನಲ್ಲಿ ದಿಗ್ಬಂಧನ ಅವಧಿ ಮೇ 24 ರವರೆಗೆ ವಿಸ್ತರಣೆ

09 May 2020 | 10:53 AM

ಲಿಮಾ, ಮೇ 9 (ಸ್ಫುಟ್ನಿಕ್) ಪೆರುವಿನಲ್ಲಿ ದಿಗ್ಬಂಧನ ಅವಧಿಯನ್ನು ಮೇ 24 ರವರೆಗೆ ವಿಸ್ತರಿಸಲಾಗಿದೆ ಎಂದು ಅಧ್ಯಕ್ಷ ಮಾರ್ಟಿನ್ ವಿಜ್ಕಾರಾ ಹೇಳಿದ್ದಾರೆ ತುರ್ತು ಪರಿಸ್ಥಿತಿಯನ್ನು ಮೇ 24 ರವರೆಗೆ ವಿಸ್ತರಿಸಲೇಬೇಕಿದೆ ಎಂದು ಅವರು ಶುಕ್ರವಾರ ತಡರಾತ್ರಿ ಹೇಳಿದ್ದಾರೆ.

 Sharesee more..

ಅರ್ಜೆಂಟಿನಾದಲ್ಲಿ ಮೇ 24 ರವರೆಗೆ ದಿಗ್ಬಂಧನ ವಿಸ್ತರಣೆ

09 May 2020 | 9:32 AM

ಬ್ಯೂನಸ್ ಏರಿಸ್, ಮೇ 9 (ಸ್ಫುಟ್ನಿಕ್) ಕೊರೊನಾ ಸಾಂಕ್ರಾಮಿಕ ಹರಡುವುದನ್ನು ತಡೆಗಟ್ಟಲು ದಿಗ್ಬಂಧನ ಅವಧಿಯನ್ನು ಮೇ 24 ರವರೆಗೆ ವಿಸ್ತರಿಸಲು ನಿರ್ಧರಿಸಲಾಗಿದೆ ಎಂದು ಅಧ್ಯಕ್ಷ ಆಲ್ಬರ್ಟೋ ಫರ್ನಾಂಡಿಸ್ ಹೇಳಿದ್ದಾರೆ ಈ ದೇಶದಲ್ಲಿ ಮಾರ್ಚ್ 20 ರಿಂದ ಕೋವಿಡ್ – 19 ನಿರ್ಬಂಧಗಳು ಜಾರಿಯಲ್ಲಿವೆ.

 Sharesee more..

ದಕ್ಷಿಣ ಆಫ್ರಿಕಾದದಲ್ಲಿ ಉಲ್ಬಣಗೊಂಡ ಕರೋನ ಅಟ್ಟಹಾಸ !!

09 May 2020 | 8:01 AM

ಕೇಪ್ ಟೌನ್, ಮೇ 9 (ಕ್ಸಿನ್ಹುವಾ) ದಕ್ಷಿಣ ಆಫ್ರಿಕಾದಲ್ಲಿ ಕಳೆದ 24 ಗಂಟೆಗಳಲ್ಲಿ ಅತಿ ಹೆಚ್ಚಿನ 663 ಹೊಸ ಕರೋನ ಸೋಂಕು ಪ್ರಕರಣ ವರದಿಯಾಗಿದೆ ಇದು ಮಾರ್ಚ್ 5 ರಿಂದ ದೇಶದಲ್ಲಿ ಮೊದಲ ಪ್ರಕರಣವನ್ನು ವರದಿಯಾದ ನಂತರ ಕಂಡು ಬಂದ ಹೆಚ್ಚು ಪ್ರಕರಣಗಳ ಸಂಖ್ಯೆಯಾಗಿದೆ.

 Sharesee more..

ಮಿಡ್-ಇಂಡಿಯನ್ ರಿಡ್ಜ್ ನಲ್ಲಿ ಭೂಕಂಪನ

09 May 2020 | 7:33 AM

ನ್ಯೂಯಾರ್ಕ್, ಮೇ 8 (ಕ್ಸಿನ್ಹುವಾ) ಮಿಡ್-ಇಂಡಿಯನ್ ರಿಡ್ಜ್ ನಲ್ಲಿ ಶುಕ್ರವಾರ ಭೂಕಂಪನ ಸಂಭವಿಸಿದೆ ಎಂದು ಅಮೆರಿಕ ಭೂವೈಜ್ಞಾನಿಕ ಸಮೀಕ್ಷೆ ತಿಳಿಸಿದೆ ಕಂಪನದ ತೀವ್ರತೆ ರಿಕ್ಟರ್ ಮಾಪನದಲ್ಲಿ5.

 Sharesee more..

ಬಾಂಬ್ ಸ್ಪೋಟಿಸಿ ಆರು ಪಾಕಿಸ್ತಾನಿ ಯೋಧರ ಹತ್ಯೆ

09 May 2020 | 5:34 AM

ಮಾಸ್ಕೋ, ಮೇ 9 (ಸ್ಪುಟ್ನಿಕ್) ಇರಾನ್ ನೊಂದಿಗಿರುವ ಗಡಿ ಸಮೀಪ ಪಾಕಿಸ್ತಾನ ಸೇನಾ ವಾಹನವೊಂದನ್ನು ಐಇಡಿ ಮೂಲಕ ದಾಳಿ ನಡೆಸಿದ ಕಾರಣ ತನ್ನ ಆರು ಮಂದಿ ಯೋಧರು ಸಾವನ್ನಪ್ಪಿದ್ದಾರೆ ಎಂದು ರಾಷ್ಟ್ರೀಯ ಸಶಸ್ತ್ರ ಪಡೆಗಳ ವಕ್ತಾರ ಮೇಜರ್ ಜನರಲ್ ಬಾಬರ್ ಇಫ್ತಿಖಾರ್ ಹೇಳಿದ್ದಾರೆ.

 Sharesee more..

ಜಗತ್ತಿನಾದ್ಯಂತ 2,70,000 ಜನರ ಸಾವು – ಜಾನ್ಸ್ ಹಾಪ್ಕಿನ್ಸ್ ವಿಶ್ವವಿದ್ಯಾಲಯ

08 May 2020 | 11:26 PM

ನ್ಯೂಯಾರ್ಕ್, ಮೇ 8 (ಕ್ಸಿನ್ಹುವಾ) ಜಗತ್ತಿನಾದ್ಯಂತ ಶುಕ್ರವಾರದ ವೇಳೆಗೆ 2,70,000 ಜನರು ಕೊರೊನಾ ಸೋಂಕಿನಿಂದ ಬಳಳುತ್ತಿದ್ದಾರೆ ಎಂದು ಜಾನ್ಸ್ ಹಾಪ್ಕಿನ್ಸ್ ವಿಶ್ವವಿದ್ಯಾಲಯದ ವರದಿ ತಿಳಿಸಿದೆ ಶುಕ್ರವಾರ ಗ್ರೀನ್ ವಿಚ್ ಕಾಲಮಾನ 11:32 ರವರೆಗೆ ಲಭ್ಯವಾಗಿರುವ ವರದಿ ಅನ್ವಯ 2,70,537 ಜನರಲ್ಲಿ ಸೋಂಕು ದೃಢಪಟ್ಟಿದೆ.

 Sharesee more..

ಬ್ರಿಟನ್‍ ನಲ್ಲಿ ಕೋವಿಡ್‍ ಗೆ 626 ಸೋಂಕಿತರು ಬಲಿ: ಒಟ್ಟು ಸಾವಿನ ಸಂಖ್ಯೆ 31,000ಕ್ಕೆ ಏರಿಕೆ

08 May 2020 | 10:11 PM

ಲಂಡನ್, ಮೇ 8 (ಕ್ಸಿನ್ಹುವಾ) ಬ್ರಿಟನ್‌ನಲ್ಲಿ ಕೊವಿಡ್‍ -19 ಸೋಂಕಿತ 626 ಮಂದಿ ಸಾವನ್ನಪ್ಪಿದ್ದು, ದೇಶದಲ್ಲಿ ಒಟ್ಟು ಕರೋನವೈರಸ್ ಸಂಬಂಧಿತ ಸಾವಿನ ಸಂಖ್ಯೆ 31,241 ಕ್ಕೆ ತಲುಪಿದೆ ಎಂದು ಪರಿಸರ ಕಾರ್ಯದರ್ಶಿ ಜಾರ್ಜ್ ಯುಸ್ಟಿಸ್ ಶುಕ್ರವಾರ ತಿಳಿಸಿದ್ದಾರೆ.

 Sharesee more..

ಮಾಲೆ ತಲುಪಿದ “ಐನ್ಎ ಜಲಾಶ್ವ ಯುದ್ಧನೌಕೆ'

08 May 2020 | 4:43 PM

ಮಾಲೆ, ಮೇ 8 (ಯುಎನ್ಐ) ಕೊರೊನಾ ಸಂಕಷ್ಟ, ಮತ್ತು ಲಾಕ್ಡೌನ್ನಿಂದಾಗಿ ಮಾಲ್ಡೀವ್ಸ್ನಲ್ಲಿ ಸಿಲುಕಿರುವ ಭಾರತೀಯರನ್ನು ಸ್ವದೇಶಕ್ಕೆ ಕರೆತರಲು 'ಸಮುದ್ರ ಸೇತು ಮಿಷನ್'ನ ಮೊದಲ ಹಂತದ 'ಐಎನ್ಎ ಜಲಾಶ್ವ ಯುದ್ಧನೌಕೆ' ಈಗಾಗಲೇ ಮಾಲ್ಡೀವ್ಸ್ ನ ಮಾಲೆ ಬಂದರು ತಲುಪಿದೆ.

 Sharesee more..
ಜಪಾನ್ ನಲ್ಲಿ 5.1 ತೀವ್ರತೆಯ ಭೂಕಂಪ

ಜಪಾನ್ ನಲ್ಲಿ 5.1 ತೀವ್ರತೆಯ ಭೂಕಂಪ

08 May 2020 | 4:22 PM

ಹಾಂಕಾಂಗ್, ಮೇ 8 (ಕ್ಸಿನ್ಹುವಾ) ಜಪಾನ್ ನ ಇಜು ದ್ವೀಪ ಪ್ರದೇಶದಲ್ಲಿ ಪ್ರಬಲ ಭೂಕಂಪ ಸಂಭವಿಸಿದೆ ಎಂದು ಅಮೆರಿಕದ ಭೂಗರ್ಭ ಸರ್ವೇಕ್ಷಣಾಲಯ ತಿಳಿಸಿದೆ.

 Sharesee more..
ಕೊರೊನಾ; ಅಮೆರಿಕಾದಲ್ಲಿ 75 ಸಾವಿರದ ಗಡಿ ದಾಟಿದ ಸಾವಿನ ಸಂಖ್ಯೆ

ಕೊರೊನಾ; ಅಮೆರಿಕಾದಲ್ಲಿ 75 ಸಾವಿರದ ಗಡಿ ದಾಟಿದ ಸಾವಿನ ಸಂಖ್ಯೆ

08 May 2020 | 4:16 PM

ವಾಷಿಂಗ್ಟನ್, ಮೇ 8(ಯುಎನ್ಐ)- ಅಮೆರಿಕಾದಲ್ಲಿ ನೋವಲ್ ಕೋರೊನಾ ವೈರಸ್( ಕೋವಿಡ್ -19) ಸೋಂಕಿನಿಂದ ಮೃತಪಟ್ಟವರ ಸಂಖ್ಯೆ ಗುರುವಾರ 75000 ಗಡಿ ದಾಟಿದೆ ಎಂದು ಜಾನ್ಸ್ ಹಾಪ್ಕಿನ್ಸ್ ವಿಶ್ವವಿದ್ಯಾಲಯ ಇತ್ತೀಚಿನ ದತ್ತಾಂಶದಲ್ಲಿ ತಿಳಿಸಿದೆ.

 Sharesee more..
ರಷ್ಯಾ ಅಧ್ಯಕ್ಷ ಪುಟಿನ್ ಜೊತೆ ಡೊನಾಲ್ಡ್ ಟ್ರಂಪ್ ದೂರವಾಣಿ ಮಾತುಕತೆ

ರಷ್ಯಾ ಅಧ್ಯಕ್ಷ ಪುಟಿನ್ ಜೊತೆ ಡೊನಾಲ್ಡ್ ಟ್ರಂಪ್ ದೂರವಾಣಿ ಮಾತುಕತೆ

08 May 2020 | 4:09 PM

ವಾಷಿಂಗ್ಟನ್, ಮೇ 8( ಸ್ಪುಟ್ನಿಕ್) ರಷ್ಯಾ ಅಧ್ಯಕ್ಷ ವ್ಲಾಡಿಮೀರ್ ಪುಟಿನ್ ಅವರೊಂದಿಗೆ ತಾವು ಇತ್ತಿಚಿನ ನಡೆಸಿ ದೂರವಾಣಿ ಮಾತುಕತೆಯಲ್ಲಿ ರಷ್ಯಾಕ್ಕೆ ವೆಂಟಿಲೇಟರ್ ಪೂರೈಸಲು ಸಿದ್ದ ಎಂದು ಹೇಳಿರುವುದಾಗಿ ಅಮೆರಿಕಾ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಗುರುವಾರ ತಿಳಿಸಿದ್ದಾರೆ.

 Sharesee more..

ಆಗಸ್ಟ್ 9 ಕ್ಕೆ ಬೆಲರಸ್ ಅಧ್ಯಕ್ಷೀಯ ಚುನಾವಣೆಗೆ ಪ್ರಸ್ತಾಪ

08 May 2020 | 12:19 PM

ಮಿನ್ಸ್ಕ್, ಮೇ 8 (ಸ್ಪುಟ್ನಿಕ್) ಅಧ್ಯಕ್ಷೀಯ ಚುನಾವಣೆಯನ್ನು ಆಗಸ್ಟ್ 9 ರಂದು ನಿಗದಿಪಡಿಸಲು ಬೆಲರೂಸಿಯನ್ ಕೇಂದ್ರ ಚುನಾವಣಾ ಆಯೋಗದ ಮುಖ್ಯಸ್ಥ ಲಿಡಿಯಾ ಯರ್ಮೋಶಿನಾ ಸಂಸತ್ತಿನ ಲೋಕಸಭೆಗೆಶುಕ್ರವಾರ ಆಹ್ವಾನ ನೀಡಿದ್ದಾರೆ "ಆಗಸ್ಟ್ 9 ರಂದು ಬೆಲರೂಸಿಯನ್ ಅಧ್ಯಕ್ಷೀಯ ಚುನಾವಣೆಯನ್ನು ನಡೆಸಲು ನಾನು ಸಲಹೆ ನೀಡುತ್ತೇನೆ" ಎಂದು ಯರ್ಮೋಶಿನಾ ಉಲ್ಲೇಖಿಸಿರುವುದಾಗಿ ಬೆಲ್ಟಾ ರಾಜ್ಯ ಸುದ್ದಿ ಸಂಸ್ಥೆ ವರದಿ ಮಾಡಿದೆ.

 Sharesee more..

ಕೋವಿಡ್-19: ಜರ್ಮನಿಯಲ್ಲಿ 1,209 ಹೊಸ ಪ್ರಕರಣ ಪತ್ತೆ

08 May 2020 | 11:47 AM

ಬರ್ಲಿನ್, ಮೇ 8 (ಯುಎನ್ಐ)- ಕಳೆದ 24 ಗಂಟೆಗಳಲ್ಲಿ ಜರ್ಮನಿಯಲ್ಲಿ 1,209 ಕೊವಿಡ್-19 ಪ್ರಕರಣ ವರದಿಯಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 1,67,300 ತಲುಪಿದೆ ಎಂದು ರಾಬರ್ಟ್ ಕೋಚ್ ಸಂಸ್ಥೆ ಶುಕ್ರವಾರ ಹೇಳಿದೆ ಗುರುವಾರ 147 ಜನ ಮಹಾಮಾರಿಯಿಂದ ಜೀವಕಳೆದುಕೊಂಡಿದ್ದು, ಸತ್ತವರ ಸಂಖ್ಯೆ 7,226ಕ್ಕೆ ಏರಿದೆ.

 Sharesee more..

ಕೋವಿಡ್-19: ಮೆಕ್ಸಿಕೊದಲ್ಲಿ 257 ಸಾವು

08 May 2020 | 10:50 AM

ಮೆಕ್ಸಿಕೊ, ಮೇ 8 (ಯುಎನ್ಐ)- ಕೋವಿಡ್-19ನಿಂದ ಮೆಕ್ಸಿಕೊದಲ್ಲಿ ಒಂದೇ ದಿನ 257 ಜನರು ಸಾವನ್ನಪ್ಪಿದ್ದು, ಒಟ್ಟ ಸತ್ತವರ ಸಂಖ್ಯೆ 2,961ಕ್ಕೆ ಏರಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ ಇದೇ ಅವಧಿಯಲ್ಲಿ ದೃಢಪಡಿಸಿದ ಕೊರೊನಾ ವೈರಸ್ ಪ್ರಕರಣಗಳ ಸಂಖ್ಯೆ 1,982 ರಿಂದ 29,616 ಕ್ಕೆ ಏರಿದೆ ಎಂದು ಸಚಿವಾಲಯದ ನಿರ್ದೇಶಕ ಜೋಸ್ ಲೂಯಿಸ್ ಅಲೋಮಿಯಾ ಗುರುವಾರ ಹೇಳಿದ್ದಾರೆ.

 Sharesee more..