Wednesday, Feb 19 2020 | Time 12:24 Hrs(IST)
 • ಆಸ್ಟ್ರೇಲಿಯಾ ಎ ತಂಡದಿಂದ ಮಾರ್ಕಸ್ ಸ್ಟೋಯಿನಿಸ್ ಔಟ್
 • ಯ ಟಿ ಖಾದರ್ ಮೇಲೆ ದೇಶದ್ರೋಹ ಪ್ರಕರಣ: ವಿಧಾನಸಭೆಯಲ್ಲಿ ಗದ್ದಲ, ಕೋಲಾಹಲ
 • ಜಸ್ಪ್ರಿತ್ ಬುಮ್ರಾ ನ್ಯೂಜಿಲೆಂಡ್ ಗೆ ಆಘಾತ ನೀಡಬಲ್ಲರು: ರಾಸ್ ಟೇಲರ್
 • ದೆಹಲಿಯಲ್ಲಿ ಹೆಚ್ಚುತ್ತಿರುವ ಹನುಮಂತನ ಆರಾಧನೆ ; ಆಪ್ ಶಾಸಕರ ನೇತೃತ್ವದಲ್ಲಿ ಸುಂದರಕಾಂಡ ಪಾರಾಯಣ ಕೈಂಕರ್ಯ !!
 • ಕೊರೊನವೈರಸ್ ಪೀಡಿತ ಕ್ರೂಸ್ ಹಡಗಿನಿಂದ ಪ್ರಯಾಣಿಕರು ಇಂದು ಹೊರಕ್ಕೆ
 • ಸಚಿವರ ಗೈರು ಹಾಜರಿ: ಸಿದ್ದರಾಮಯ್ಯ ಆಕ್ಷೇಪ
 • ಕೊರೊನವೈರಸ್ ವಿರುದ್ಧದ ಹೋರಾಟದಲ್ಲಿ ಚೀನಾ ವೈದ್ಯ ಸಾವು: ವಿಶ್ವ ಆರೋಗ್ಯ ಸಂಸ್ಥೆ ಮುಖ್ಯಸ್ಥರಿಂದ ಸಂತಾಪ
 • ಸಾಧನೆ ವಯಸ್ಸು ಅಡ್ಡಿಯಾಗದು ಎಂದು ತೋರಿಸಿದ ಶಿವಸುಬ್ರಮಣ್ಯನ್ !!
 • ರಿಯೋ ಓಪನ್‌: ಪ್ರೀ ಕ್ವಾರ್ಟರ್‌ ಫೈನಲ್ಸ್‌ಗೆ ಡೊಮಿನಿಚ್‌ ಥೀಮ್‌
 • ಚಿತ್ರೋತ್ಸವ; ಆನ್‌ಲೈನ್‌ ಜೊತೆಗೆ ಖುದ್ದು ನೋಂದಣಿಗೂ ಅವಕಾಶ
 • ಭಾರತದ ಜೊತೆ ವ್ಯಾಪಾರ ಒಪ್ಪಂದ: ಅನುಮಾನ ಹೊರಹಾಕಿದ ಅಧ್ಯಕ್ಷ ಟ್ರಂಪ್ !
 • ನ್ಯೂಜಿಲೆಂಡ್‌ ವಿರುದ್ಧ ಟೆಸ್ಟ್‌ ಸರಣಿಯ ಸವಾಲಿಗೆ ನಾವು ಸಿದ್ಧ: ವಿರಾಟ್‌ ಕೊಹ್ಲಿ
 • ಕಣ್ಣು ದಾನದ ಬಗ್ಗೆ ಜಾಗೃತಿ ಮೂಡಿಸಲು ವಿಶೇಷ ಅಭಿಯಾನ
 • ಕಾಶ್ಮೀರದಲ್ಲಿ ಗುಂಡಿನ ಚಕಮಕಿ: ಮೂವರು ಹಿಜ್ಬುಲ್ ಉಗ್ರರ ಹತ್ಯೆ
 • 65 ಕಿಮೀ ಮೈಲೆಜ್ ನೀಡುವ ಇ-ಸೈಕಲ್ಸ್ ಬಿಡುಗಡೆ
International
ಕೊರೊನಾ ಸೋಂಕು : ಚೀನಾದ ಹುಬೈ ಪ್ರಾಂತ್ಯದಲ್ಲಿ ಮತ್ತೆ 116 ಬಲಿ

ಕೊರೊನಾ ಸೋಂಕು : ಚೀನಾದ ಹುಬೈ ಪ್ರಾಂತ್ಯದಲ್ಲಿ ಮತ್ತೆ 116 ಬಲಿ

14 Feb 2020 | 6:19 PM

ಸೋಂಕಿತರ ಸಂಖ್ಯೆ 51: ವುಹಾನ್, ಫೆ 14 (ಸ್ಫುಟ್ನಿಕ್) ಚೀನಾದ ಹುಬೈ ಪ್ರಾಂತ್ಯದಲ್ಲಿ ಇತ್ತೀಚೆಗೆ ಕಾಣಿಸಿಕೊಂಡಿರುವ ಕೊರೊನಾ ವೈರಾಣು ಸೋಂಕಿಗೆ ಮತ್ತೆ 116 ಜನರು ಬಲಿಯಾಗಿದ್ದು ಕಳೆದ 24 ಗಂಟೆಗಳಲ್ಲಿ ಸಾವಿನ ಸಂಖ್ಯೆ 1426 ಕ್ಕೆ ಏರಿಕೆಯಾಗಿದೆ ಎಂದು ಸ್ಥಳೀಯ ಆರೋಗ್ಯ ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ.

 Sharesee more..
ಯು.ಕೆ.ಕ್ಯಾಬಿನೆಟ್‌ ಪುನರ್ರಚನೆ: ಮೂವರು ಭಾರತೀಯ ಮೂಲದ ಸಂಸದರಿಗೆ ಸಚಿವ ಸ್ಥಾನ

ಯು.ಕೆ.ಕ್ಯಾಬಿನೆಟ್‌ ಪುನರ್ರಚನೆ: ಮೂವರು ಭಾರತೀಯ ಮೂಲದ ಸಂಸದರಿಗೆ ಸಚಿವ ಸ್ಥಾನ

14 Feb 2020 | 6:00 PM

ಲಂಡನ್, ಫೆ.14 (ಯುಎನ್‌ಐ) ತನ್ನ ಐತಿಹಾಸಿಕ ಗೆಲುವಿನ ಎರಡು ತಿಂಗಳ ನಂತರ, ಯುನೈಟೆಡ್ ಕಿಂಗ್‌ಡಮ್ ಪ್ರಧಾನಿ ಬೋರಿಸ್ ಜಾನ್ಸನ್ ಅವರು ಮೂವರು ಭಾರತೀಯ ಮೂಲದ ಸಂಸದರೊಂದಿಗೆ ಸಚಿವ ಸಂಪುಟವನ್ನು ಪುನರ್ರಚಿಸಿದ್ದಾರೆ.

 Sharesee more..
ನಿಮ್ಮ ಹಣ ತೆಗೆದುಕೊಳ್ಳಿ ಬ್ಯಾಂಕುಗಳಿಗೆ ಉದ್ಯಮಿ ವಿಜಯ್ ಮಲ್ಯ ಅಲವತು

ನಿಮ್ಮ ಹಣ ತೆಗೆದುಕೊಳ್ಳಿ ಬ್ಯಾಂಕುಗಳಿಗೆ ಉದ್ಯಮಿ ವಿಜಯ್ ಮಲ್ಯ ಅಲವತು

14 Feb 2020 | 5:40 PM

ಲಂಡನ್, ಫೆ 14 (ಯುಎನ್ಐ) ನನಗೆ ನಿಮ್ಮ ಹಣ ಬೇಡ ಸಾಲ ಕಟ್ಟದೆ ಮೊಸ ಮಾಡುವ ವ್ಯಕ್ತಿ ನಾನಲ್ಲ ಅದೂ ನನ್ನ ಜಾಯಮಾನವೂ ಅಲ್ಲ ನಾನು ಪಿಎಂಎಲ್ಎ ಕಾನೂನು ಅಡಿಯಲ್ಲಿ ಯಾವುದೇ ತಪ್ಪು , ಪ್ರಮಾದ ಎಸಗಿಲ್ಲ ಬ್ಯಾಂಕ್ಗಳೇ, ನಿಮಗೆ ಕೊಡಬೇಕಿರುವ, ಬಾಕಿ ಇರುವ, ನೀವು ನೀಡಿದ ಮೂಲ ಹಣವನ್ನು ವಾಪಾಸ್ ತೆಗೆದುಕೊಳ್ಳಿ ಎಂದು ಬೆಂಗಳೂರು ಮೂಲದ ಅಬಕಾರಿ ಉದ್ಯಮಿ ವಿಜಯ್ ಮಲ್ಯ ಅಲವತು ಕೊಂಡಿದ್ದಾರೆ.

 Sharesee more..

ಚೀನಾ: ಕೊರೋನಾವೈರಸ್ ಸೋಂಕು ಚಿಕಿತ್ಸೆಗೆ ಪ್ರೊಟೊ ಪ್ಲಾಸ್ಮಾ ಅಭಿವೃದ್ಧಿ

14 Feb 2020 | 12:32 PM

ಬೀಜಿಂಗ್, ಫೆ 14 (ಯುಎನ್‌ಐ) ಮಾರಣಾಂತಿಕ ಕೊರೋನಾ ವೈರಸ್ (ಸಿಒವಿಐಡಿ -19) ಸೋಂಕು ಪೀಡಿತರ ಚಿಕಿತ್ಸೆಗೆ ಪ್ರೊಟೊ ಪ್ಲಾಸ್ಮಾ ಅಭಿವೃದ್ಧಿಪಡಿಸಿರುವುದಾಗಿ, ಚೀನಾ ನ್ಯಾಷನಲ್ ಬಯೋಟೆಕ್ ಗ್ರೂಪ್ ಮಾಹಿತಿ ನೀಡಿದೆ ಪ್ಲಾಸ್ಮಾ ಮತ್ತು ಇಮ್ಯೂನ್ ಗ್ಲೋಬ್ಯುಲಿನ್ ಸೇರಿದಂತೆ ಚಿಕಿತ್ಸಕ ಉತ್ಪನ್ನಗಳನ್ನು ತಯಾರಿಸಲು ಅವರು ಚೇತರಿಸಿಕೊಂಡ ಕೆಲವು ರೋಗಿಗಳಿಂದ ಪ್ಲಾಸ್ಮಾವನ್ನು ಸಂಗ್ರಹಿಸಿದ್ದಾರೆ ಎಂದು ಕಂಪನಿ ಹೇಳಿದೆ ಎಂದು ಕ್ಸಿನ್ಹುವಾ ವರದಿ ಮಾಡಿದೆ.

 Sharesee more..

ಪೈಪ್‌ಲೈನ್ ಯೋಜನೆ ವಿರುದ್ಧ ಪ್ರತಿಭಟನೆ: ಕೆನಡಾದಲ್ಲಿ ರೈಲು ಸೇವೆ ಸ್ಥಗಿತ

14 Feb 2020 | 9:28 AM

ಒಟ್ಟಾವಾ, ಫೆಬ್ರವರಿ 14 (ಯುಎನ್‌ಐ) ಪೈಪ್‌ಲೈನ್ ಯೋಜನೆ ವಿರುದ್ಧ ಪ್ರತಿಭಟನೆ ಪರಿಣಾಮವಾಗಿ ಕೆನಡಾದಾದ್ಯಂತ ರೈಲು ಸೇವೆ ಸ್ಥಗಿತಗೊಳಿಸಲಾಗಿದೆ ಪ್ರತಿಭಟನೆ ಪರಿಣಾಮವಾಗಿ ಎಲ್ಲಾ ರೈಲು ಸೇವೆಯನ್ನು ತಕ್ಷಣವೇ ರದ್ದುಗೊಳಿಸುವುದನ್ನು ಬಿಟ್ಟು ಬೇರೆ ದಾರಿಯಿಲ್ಲ ಎಂದು ಸಿಎನ್ ರೈಲು ಕಂಪನಿ ತಿಳಿಸಿದೆ.

 Sharesee more..

ವಾಷಿಂಗ್ಟನ್‌ನಲ್ಲಿ ಗುಂಡಿನ ದಾಳಿಗೆ ಓರ್ವ ಬಲಿ: ಶಂಕಿತ ವಶಕ್ಕೆ

14 Feb 2020 | 9:21 AM

ವಾಷಿಂಗ್ಟನ್, ಫೆಬ್ರವರಿ 14 (ಸ್ಪುಟ್ನಿಕ್) ಅಮೆರಿಕ ರಾಜಧಾನಿ ವಾಷಿಂಗ್ಟನ್‌ನ ಡೌನ್‌ಟೌನ್‌ ಪ್ರದೇಶದಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಓರ್ವ ಮೃತಪಟ್ಟಿದ್ದು, ದಾಳಿಕೋರ ಶಂಕಿತನನ್ನು ಬಂಧಿಸಲಾಗಿದೆ ಎಂದು ಡಿಸಿ ಪೊಲೀಸ್ ಇಲಾಖೆ ಮುಖ್ಯಸ್ಥ ಪೀಟರ್ ನ್ಯೂಶಮ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

 Sharesee more..

ಚೀನಾ: ಒಂದೇ ದಿನ 4,823 ಹೊಸ ಕರೋನವೈರಸ್ ಪ್ರಕರಣಗಳ ವರದಿ

14 Feb 2020 | 8:52 AM

ವುಹಾನ್, ಫೆಬ್ರವರಿ 14 (ಕ್ಸಿನ್ಹುವಾ) ಚೀನಾ ಹಾಗೂ ಇಡಿ ವಿಶ್ವವೇ ತತ್ತರಗೊಳ್ಳುವಂತೆ ಮಾಡಿರುವ ಕರೋನವೈರಸ್ ಕೇಂದ್ರವಾದ ಹುಬೈ ಪ್ರಾಂತ್ಯದಲ್ಲಿ ಗುರುವಾರ ಅದೂ ಒಂದೇ ದಿನ 4,823 ಹೊಸ ದೃಡಪಡಿಸಿದ ಪ್ರಕರಣಗಳು ವರದಿಯಾಗಿ ಮತ್ತಷ್ಟು ಬೆಚ್ಚಿ ಬೀಳುವಂತೆ ಮಾಡಿದೆ.

 Sharesee more..

ಮ್ಯಾನ್ಮಾರ್‌ನ ರಾಖೈನ್ ನಲ್ಲಿ ಶಾಲೆಯ ಮೇಲೆ ಮೋರ್ಟಾರ್‌ ದಾಳಿ; 20 ವಿದ್ಯಾರ್ಥಿಗಳಿಗೆ ಗಾಯ

14 Feb 2020 | 8:41 AM

ಯಂಗಾನ್‌, ಫೆ 14 (ಕ್ಸಿನ್ಹುವಾ) ಸ್ಥಳೀಯ ಬಂಡುಕೋರರ ಗುಂಪಾದ ಅರಾಕನ್ ಆರ್ಮಿಯ ಸದಸ್ಯರು, ಮ್ಯಾನ್ಮಾರ್ ರಾಖೈನ್‌ ಸ್ಟೇಟ್‌ನ ಪ್ರಾಥಮಿಕ ಶಾಲೆಯೊಂದರ ಮೇಲೆ ಮೋರ್ಟಾರ್‌ ದಾಳಿ ನಡೆಸಿದ ಪರಿಣಾಮ ಒಟ್ಟು 20 ವಿದ್ಯಾರ್ಥಿಗಳು ಗಾಯಗೊಂಡಿರುವ ಘಟನೆ ಗುರುವಾರ ತಡರಾತ್ರಿ ನಡೆದಿದೆ ಎಂದು ರಕ್ಷಣಾ ಸೇವೆಯ ಕಮಾಂಡರ್ ಇನ್ ಛೀಫ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

 Sharesee more..

ಜನವರಿ 2020ರಲ್ಲಿ ಅತಿ ಹೆಚ್ಚಿನ ತಾಪ

14 Feb 2020 | 7:51 AM

ವಾಷಿಂಗ್ಟನ್, ಫೆ 14 (ಸ್ಫುಟ್ನಿಕ್) ಈ ವರ್ಷದ ಮೊದಲ ತಿಂಗಳು ಅತಿ ಹೆಚ್ಚು ಜಾಗತಿಕ ತಾಪಮಾನ ದಾಖಲಿಸಿದೆ ಜನವರಿ 2020 ರ ತಾಪಮಾನ 141 ವರ್ಷಗಳಲ್ಲೇ ಅತಿ ಗರಿಷ್ಠ ತಾಪ ಎಂದು ಅಮೆರಿಕದ ರಾಷ್ಟ್ರೀಯ ಸಮುದ್ರ ಮತ್ತು ವಾತಾವರಣ ನಿರ್ವಹಣಾ ಸಂಸ್ಥೆ ಎನ್ ಒ ಎ ಎ ತಿಳಿಸಿದೆ.

 Sharesee more..

ಭಾರತಕ್ಕೆ ಟ್ರಂಪ್ ಭೇಟಿ : ಸ್ವಾಗತಕ್ಕೆ ಸಕಲ ಸಿದ್ಧತೆ

13 Feb 2020 | 4:42 PM

ನವದೆಹಲಿ, ಫೆ 13 (ಯುಎನ್‍ಐ) ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಪ್ರಥಮ ಮಹಿಳೆ ಮೆಲಾನಿಯಾ ಟ್ರಂಪ್ ಮುಂದಿನ ವಾರ ಭಾರತಕ್ಕ ಭೇಟಿ ನೀಡಲಿದ್ದು, ಅವರ ಸ್ವಾಗತಕ್ಕೆ ಸಕಲ ಸಿದ್ಧತೆಗಳಾಗಿವೆ ಚುನಾವಣಾ ರಾಜಕೀಯ, ವ್ಯಾಪಾರ ಮತ್ತು ರಕ್ಷಣಾ ಸಹಕಾರ ಮತ್ತು ಆಚರಣೆಯ ಸಂಯೋಜನೆಯ ಮೂರು ಆಯಾಮಗಳ ಮಿಶ್ರಣವಾಗಿರುವ ಟ್ರಂಪ್ ದಂಪತಿಯ ಈ ಭೇಟಿ ಅತಿಥಿಗಳಿಗೆ ಮಾತ್ರವಲ್ಲದೆ ದೇಶವಾಸಿಗಳಿಗೂ ಸ್ಮರಣೀಯವಾಗುವ ಮಟ್ಟಿಗೆ ಸಿದ್ಧತೆಯಾಗಿದೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರ ಆಹ್ವಾನದ ಮೇರೆಗೆ ಟ್ರಂಪ್ ಮತ್ತು ಅವರ ಪತ್ನಿ ಫೆಬ್ರವರಿ 24 ರಂದು ಎರಡು ದಿನಗಳ ಭಾರತ ಪ್ರವಾಸದಲ್ಲಿ ಅಹಮದಾಬಾದ್ ತಲುಪಲಿದ್ದಾರೆ.

 Sharesee more..

ಭಯೋತ್ಪಾದನಾ ವಿರೋಧಿ ಕಾರ್ಯಾಚರಣೆ: ಸೊಮಾಲಿಯಾಕ್ಕೆ ಅಮೆರಿಕದ ನೆರವು ಪುನಾರಂಭ

13 Feb 2020 | 4:28 PM

ಮೊಗಾಡಿಶು, ಫೆಬ್ರವರಿ 13 (ಕ್ಸಿನ್ಹುವಾ) ಅಲ್-ಶಬಾಬ್ ಉಗ್ರರ ವಿರುದ್ಧ ದಕ್ಷಿಣ ಪ್ರದೇಶದಲ್ಲಿ ಭಯೋತ್ಪಾದನೆ ನಿಗ್ರಹ ಕಾರ್ಯಾಚರಣೆಯನ್ನು ಹೆಚ್ಚಿಸುವ ಸಲುವಾಗಿ ಸೊಮಾಲಿಯಾಕ್ಕೆ ಕೆಲವು ನೇರ ಭದ್ರತಾ ಸಹಾಯವನ್ನು ಪುನರಾರಂಭಿಸಲಾಗಿದೆ ಎಂದು ಅಮೆರಿಕ ಬುಧವಾರ ತಿಳಿಸಿದೆ 2017 ರಲ್ಲಿ ಭ್ರಷ್ಟಾಚಾರದ ಬಗ್ಗೆ ಸೊಮಾಲಿಯಾದ ಹೆಚ್ಚಿನ ಸಶಸ್ತ್ರ ಪಡೆಗಳಿಗೆ ಆಹಾರ ಮತ್ತು ಇಂಧನ ಸಹಾಯವನ್ನು ಸ್ಥಗಿತಗೊಳಿಸಿದ್ದ ಅಮೆರಿಕ, ಸೊಮಾಲಿ ರಾಷ್ಟ್ರೀಯ ಸಶಸ್ತ್ರ ಪಡೆಗಳ (ಎಸ್‌ಎನ್‌ಎಎಫ್) ಸಾರ್ವಜನಿಕ ಹಣಕಾಸು ನಿರ್ವಹಣೆಯನ್ನು ಸುಧಾರಿಸಲು ಸರ್ಕಾರ ಕೈಗೊಂಡ ಪ್ರಯತ್ನಗಳನ್ನು ಶ್ಲಾಘಿಸಿದೆ.

 Sharesee more..

ಸೈಬರ್ ಕನ್ನ: ಅಮೆರಿಕ ಆರೋಪಕ್ಕೆ ಚೀನಾ ರಕ್ಷಣಾ ಸಚಿವಾಲಯ ಖಂಡನೆ

13 Feb 2020 | 1:59 PM

ಬೀಜಿಂಗ್, ಫೆ 13 (ಸ್ಪುಟ್ನಿಕ್) ಸೈಬರ್ ಅಪರಾಧಗಳಿಗೆ ಸಂಬಂಧಿಸಿದಂತೆ ಚೀನಾದ ನಾಲ್ವರು ಸೇನಾ ಸಿಬ್ಬಂದಿ ಮೇಲೆ ದೋಷಾರೋಪಣೆ ಹೊರಿಸಲು ಅಮೆರಿಕ ನಡೆಸಿರುವ ಕ್ರಮವನ್ನು ಚೀನಾ ರಕ್ಷಣಾ ಸಚಿವಾಲಯ ಗುರುವಾರ ಖಂಡಿಸಿ, ಪ್ರತಿಭಟಿಸಿದೆ ಚೀನಾ ಪೀಪಲ್ಸ್ ಲಿಬರೇಶನ್ ಆರ್ಮಿ (ಪಿಎಲ್‌ಎ) ಯ ನಾಲ್ವರು ಸಿಬ್ಬಂದಿ 2017 ರಲ್ಲಿ ಕ್ರೆಡಿಟ್ ರಿಪೋರ್ಟಿಂಗ್ ಏಜೆನ್ಸಿಯಾದ ಇಕ್ವಿಫಾಕ್ಸ್‌ನ ವ್ಯವಸ್ಥೆಗಳಿಗೆ ಕನ್ನ ಹಾಕಿ ಕನಿಷ್ಠ 150 ದಶಲಕ್ಷ ಅಮೆರಿಕ ನಾಗರಿಕರ ಹೆಸರು ಮತ್ತು ಸಾಮಾಜಿಕ ಭದ್ರತೆ ಸಂಖ್ಯೆಯನ್ನು ಕದ್ದಿದ್ದಾರೆ ಎಂದು ಅಮೆರಿಕ ಅಟಾರ್ನಿ ಜನರಲ್ ವಿಲಿಯಂ ಬಾರ್ ಸೋಮವಾರ ವರದಿಗಾರರಿಗೆ ಮಾಹಿತಿ ನೀಡಿದ್ದರು.

 Sharesee more..

ಇರಾಕ್‌ನಲ್ಲಿ ಬಾಂಬ್ ಸ್ಫೋಟ: ಇಬ್ಬರು ಸಾವು

13 Feb 2020 | 1:23 PM

ಮಾಸ್ಕೋ, ಫೆಬ್ರವರಿ 13 (ಸ್ಪುಟ್ನಿಕ್) ಪೂರ್ವ ಇರಾಕ್‌ನ ಖಾನಕಿನ್ ನಗರದಲ್ಲಿ ಗುರುವಾರ ನಡೆದ ಭಯೋತ್ಪಾದಕ ದಾಳಿಯಲ್ಲಿ ಇಬ್ಬರು ಮೃತಪಟ್ಟಿದ್ದು, ಇತರೆ 12 ಮಂದಿ ಗಾಯಗೊಂಡಿದ್ದಾರೆ ಎಂದು ಮೂಲಗಳನ್ನು ಉಲ್ಲೇಖಿಸಿ ಅಲ್ಸುಮೇರಿಯಾ ಪ್ರಸಾರ ಸಂಸ್ಥೆ ವರದಿ ಮಾಡಿದೆ.

 Sharesee more..

ಕೊರೋನವೈರಸ್ ನ ದೃಢಪಟ್ಟ ಪ್ರಕರಣಗಳ ಸಂಖ್ಯೆ ಹತ್ತು ಪಟ್ಟು ಏರಿಕೆ

13 Feb 2020 | 11:44 AM

ಬೀಜಿಂಗ್, ಫೆ 13 (ಯುಎನ್‌ಐ) ಚೀನಾದಲ್ಲಿ ಹೊಸದಾಗಿ 14,840 ಕೊರೊನ ವೈರಸ್ ಪ್ರಕರಣಗಳು ದೃಢಪಟಿದ್ದು, ಇದು ಒಂದು ದಿನ ಹಿಂದೆ ವರದಿಯಾದ ಪ್ರಕರಣಗಳ ಸಂಖ್ಯೆಗಿಂತ ಹತ್ತು ಪಟ್ಟು ಹೆಚ್ಚು ಎಂದು ಕರೋನವೈರಸ್ ಸಾಂಕ್ರಾಮಿಕ ರೋಗ ಕೇಂದ್ರಬಿಂದುವಾದ ಹುಬೈ ಪ್ರಾಂತ್ಯದ ಆರೋಗ್ಯ ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ.

 Sharesee more..

ಬಂದೂಕುದಾರಿಗಳಿಂದ ಗುಂಡಿನ ದಾಳಿ: ನೈಜೀರಿಯಾದಲ್ಲಿ 21 ಮಂದಿ ಸಾವು

13 Feb 2020 | 9:49 AM

ಮಾಸ್ಕೋ, ಫೆಬ್ರವರಿ 13 (ಸ್ಪುಟ್ನಿಕ್) ಮಧ್ಯ ನೈಜೀರಿಯಾದ ಕಡುನಾ ಎಂಬ ಹಳ್ಳಿಯಲ್ಲಿ ಬಂದೂಕುಧಾರಿಗಳು ಗುಂಡಿನ ದಾಳಿ ನಡೆಸಿದ ಪರಿಣಾಮ 21 ಜನರು ಸಾವನ್ನಪ್ಪಿದ್ದಾರೆ ಎಂದು ಮಾಧ್ಯಮಗಳು ಗುರುವಾರ ವರದಿ ಮಾಡಿವೆ ಫಿಕಾ ಜಿಲ್ಲೆಯ ಬಕಾಲಿ ಗ್ರಾಮದಲ್ಲಿ ಮಂಗಳವಾರ ಈ ಘಟನೆ ನಡೆದಿದೆ ಎಂದು ಪೊಲೀಸ್ ವಕ್ತಾರ ಮುಹಮ್ಮದ್ ಜಲೀಗ್‌ ಅವರ ಹೇಳಿಕೆಯನ್ನು ಉಲ್ಲೇಖಿಸಿ ಕ್ಸಿನ್ಹುವಾ ಸುದ್ದಿ ಸಂಸ್ಥೆ ವರದಿ ಮಾಡಿದೆ.

 Sharesee more..