Monday, Jul 13 2020 | Time 04:36 Hrs(IST)
International

ಕೋವಿಡ್-19: ಇಂಡೋನೇಷ್ಯಾದಲ್ಲಿ ಒಂದೇ ದಿನ 1209 ಹೊಸ ಪ್ರಕರಣ, 70 ಸಾವು

06 Jul 2020 | 5:24 PM

ನವದೆಹಲಿ, ಜುಲೈ 6 (ಯುಎನ್ಐ)- ಇಂಡೋನೇಷ್ಯಾದಲ್ಲಿ, ಒಂದೇ ದಿನದಲ್ಲಿ 1209 ಹೊಸ ಕೊರೊನಾ ವೈರಸ್ (ಕೋವಿಡ್ -19) ಸೋಂಕಿತರು ಪತ್ತೆಯಾಗಿದ್ದು, ಒಟ್ಟು ಪೀಡಿತರ ಸಂಖ್ಯೆ 64,958 ಕ್ಕೆ ಹೆಚ್ಚಿದೆ ಮತ್ತು 70 ಸಾವು ಸಂಭವಿಸಿದ್ದು, ಒಟ್ಟು ಮೃತರ ಸಂಖ್ಯೆ 3241 ಕ್ಕೆ ಏರಿದೆ.

 Sharesee more..
ವಿಶ್ವದಲ್ಲಿ ಕೊರೊನಾ ಪೀಡಿತರ ಸಂಖ್ಯೆ 1.14, ಮೃತರ ಸಂಖ್ಯೆ 5.33

ವಿಶ್ವದಲ್ಲಿ ಕೊರೊನಾ ಪೀಡಿತರ ಸಂಖ್ಯೆ 1.14, ಮೃತರ ಸಂಖ್ಯೆ 5.33

06 Jul 2020 | 4:51 PM

ನವದೆಹಲಿ, ಜುಲೈ 6 (ಯುಎನ್ಐ) ವಿಶ್ವದಲ್ಲಿ ಕೊರೊನಾ ವೈರಸ್ ಸೋಂಕಿನ ಸಂಖ್ಯೆ ಹೆಚ್ಚುತ್ತಿದ್ದು, ಒಟ್ಟು ಪೀಡಿತರ ಸಂಖ್ಯೆ 1.14 ಕೋಟಿ ಮೀರಿದೆ ಮತ್ತು 5.33 ಲಕ್ಷಕ್ಕೂ ಹೆಚ್ಚು ಜನರು ಈ ಅವಧಿಯಲ್ಲಿ ಬಲಿಯಾಗಿದ್ದಾರೆ.

 Sharesee more..

ಇಸ್ರೇಲ್ ನಿಂದ ‘ಒಫೆಕ್‍-16’ ಬೇಹುಗಾರಿಕೆ ಉಪಗ್ರಹ ಯಶಸ್ವೀ ಉಡಾವಣೆ

06 Jul 2020 | 3:30 PM

ಟೆಲ್ ಅವೀವ್, ಜುಲೈ 6 (ಸ್ಪುಟ್ನಿಕ್) ಪಲ್ಮಾಚಿಮ್ ವಾಯು ಸೇನಾ ನೆಲೆಯಿಂದ ಬೇಹುಗಾರಿಕೆ ಉಪಗ್ರಹವನ್ನು ಇಸ್ರೇಲ್ ಸೋಮವಾರ ಬಾಹ್ಯಾಕಾಶಕ್ಕೆ ಯಶಸ್ವಿಯಾಗಿ ಉಡಾವಣೆ ಮಾಡಿದೆ ಎಂದು ಅಲ್ಲಿನ ರಕ್ಷಣಾ ಸಚಿವಾಲಯ ಪ್ರಕಟಿಸಿದೆ ‘ಇಸ್ರೇಲ್ ರಕ್ಷಣಾ ಸಚಿವಾಲಯದ ಇಸ್ರೇಲ್‍ ಆಂತರಿಕ್ಷಾ ಉದ್ಯಮ ಸ್ವಾಮ್ಯದ ರಕ್ಷಣಾ ಸಂಶೋಧನಾ ಮತ್ತು ಅಭಿವೃದ್ಧಿ ನಿರ್ದೇಶನಾಲಯದಡಿ ಬರುವ ಬಾಹ್ಯಾಕಾಶ ಆಡಳಿತ 'ಒಫೆಕ್ 16' ಬೇಹುಗಾರಿಕೆ ಉಪಗ್ರಹವನ್ನು ಬಾಹ್ಯಾಕಾಶಕ್ಕೆ ಯಶಸ್ವಿಯಾಗಿ ಉಡಾವಣೆ ಮಾಡಿದೆ.

 Sharesee more..

ಹಜ್‌ ವೇಳೆ ಪವಿತ್ರ ಕಾಬಾ ಸ್ಪರ್ಶ ನಿಷೇಧ

06 Jul 2020 | 1:53 PM

ಢಾಕ, ಜು 6 (ಯುಎನ್ಐ) ಕೋವಿಡ್‌-19 ಸೋಂಕು ಹರಡುವುದನ್ನು ತಡೆಗಟ್ಟಲು ಸೌದಿ ರಾಷ್ಟ್ರೀಯ ರೋಗ ತಡೆಗಟ್ಟುವಿಕೆ ಮತ್ತು ನಿಯಂತ್ರಣ ಕೇಂದ್ರವು ಹೊರಡಿಸಿರುವ ಆರೋಗ್ಯ ನಿಯಮಾವಳಿಗಳ ಪ್ರಕಾರ, ಈ ವರ್ಷದ ಹಜ್ ಸಮಯದಲ್ಲಿ ಪವಿತ್ರ ಕಾಬಾವನ್ನು ಸ್ಪರ್ಶಿಸುವುದಕ್ಕೆ ನಿಷೇಧ ಹೇರಲಾಗಿದೆ.

 Sharesee more..

ಇಟಲಿ : ಸಂಗೀತ ಸಂಯೋಜಕ ಎನ್ನಿಯೊ ಮೊರಿಕೋನ್ ನಿಧನ

06 Jul 2020 | 1:00 PM

ರೋಮ್, ಜುಲೈ 06 (ಸ್ಪುಟ್ನಿಕ್) ಇಟಲಿಯ ಸಂಗೀತ ಸಂಯೋಜಕ ಎನ್ನಿಯೊ ಮೊರಿಕೊನ್ (91) ಸೋಮವಾರ ನಿಧನರಾಗಿದ್ದಾರೆ ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದ ಅವರು ಇತ್ತೀಚೆಗೆ ಸೊಂಟದ ಮೂಳೆ ಮುರಿತಕ್ಕೆ ಒಳಗಾಗಿದ್ದರು ಎಂದು ತಿಳಿದುಬಂದಿದೆ.

 Sharesee more..

ನಾವು ಹೆದರುವುದಿಲ್ಲ .. ಚೈನಾಗೆ ಅಮೆರಿಕಾ ನೌಕಾ ಪಡೆ ಪ್ರತಿಕ್ರಿಯೆ..!

06 Jul 2020 | 12:26 PM

ವಾಷಿಂಗ್ಟನ್, ಜುಲೈ ೬ (ಯುಎನ್‌ಐ) ಅಮೆರಿಕಾದ ಯುದ್ಧ ನೌಕೆಗಳನ್ನು ದ್ವಂಸಗೊಳಿಸುವ ಶಸ್ತ್ರಾಸ್ತ್ರ ಭಂಡಾರ ತನ್ನ ಬಳಿಯಿದೆ ಎಂದು ಹೇಳುವ ವರದಿಗೆ ಅಮೆರಿಕಾ ನೌಕಾಪಡೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದು, ಚೈನಾ ಆಯುಧ ನೋಡಿ ಹೆದರುವುದಿಲ್ಲ ಎಂದು ಟ್ವೀಟ್ ಮೂಲಕ ತಿರುಗೇಟು ಹೇಳಿದೆ.

 Sharesee more..

ಅಮೆರಿಕದಲ್ಲಿ ಎರಡು ವಿಮಾನಗಳ ಡಿಕ್ಕಿ: ಇಬ್ಬರು ಸಾವು, ಆರು ಮಂದಿ ಕಾಣೆ

06 Jul 2020 | 12:24 PM

ಸ್ಯಾನ್ ಫ್ರಾನ್ಸಿಸ್ಕೊ, ಜುಲೈ 6 (ಕ್ಸಿನ್ಹುವಾ) ವಾಯವ್ಯ ಅಮೆರಿಕದ ಇಡಾಹೊ ರಾಜ್ಯದ ಕೊಯೂರ್ ಡಿ ಅಲೀನ್ ಸರೋವರದ ಬಳಿ ಭಾನುವಾರ ಮಧ್ಯಾಹ್ನ ಎರಡು ವಿಮಾನಗಳು ಪರಸ್ಪರ ಡಿಕ್ಕಿ ಹೊಡೆದ ಪರಿಣಾಮ ಎಂಟು ಜನರು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.

 Sharesee more..

ಚೀನಾ : ಟವರ್ ಕ್ರೇನ್ ಕುಸಿದು ಐವರ ದುರ್ಮರಣ

06 Jul 2020 | 11:43 AM

ಬೀಜಿಂಗ್, ಜುಲೈ 06 (ಯುಎನ್‍ಐ) ಪೂರ್ವ ಚೀನಾದ ಅನ್ಹುಯಿ ಪ್ರಾಂತ್ಯದ ನಿರ್ಮಾಣ ಸ್ಥಳದಲ್ಲಿ ಟವರ್ ಕ್ರೇನ್ ಕುಸಿದು ಭಾನುವಾರ ಐದು ಜನರು ಸಾವನ್ನಪ್ಪಿದ್ದಾರೆ ಎಂದು ಸ್ಥಳೀಯ ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ ಪ್ರಾಂತೀಯ ತುರ್ತುಸ್ಥಿತಿ ನಿರ್ವಹಣಾ ವಿಭಾಗದ ಪ್ರಕಾರ, ಹುಯೈನಾನ್ ನಗರದ ಫೆಂಗ್ಟೈ ಕೌಂಟಿಯಲ್ಲಿ ಸ್ಥಳಿಯ ಕಾಲಮಾನ ಸಂಜೆ 5:00 ಗಂಟೆಗೆ ಅಪಘಾತ ಸಂಭವಿಸಿದೆ ಎಂದು ಕ್ಸಿನ್ಹುವಾ ವರದಿ ಮಾಡಿದೆ.

 Sharesee more..

ಯುಎಇನಲ್ಲಿ ಕೋವಿಡ್-19 ಪೀಡಿತರ ಸಂಖ್ಯೆ 51,540

06 Jul 2020 | 9:50 AM

ದುಬೈ, ಜುಲೈ 6 (ಯುಎನ್ಐ)- ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಯಲ್ಲಿ ಭಾನುವಾರ ಜಾಗತಿಕ ಸಾಂಕ್ರಾಮಿಕ ಕೊರೊನಾ ವೈರಸ್ (ಕೋವಿಡ್ 19) ನಿಂದ 683 ಹೊಸ ಪ್ರಕರಣ ದೃಢಪಟ್ಟಿದ್ದು, ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 51,540 ಕ್ಕೆ ಏರಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

 Sharesee more..

ಬ್ರಿಟನ್ ನಲ್ಲಿ ಕೊರೊನಾದಿಂದ ಮೃತರ ಸಂಖ್ಯೆ 44,220ಕ್ಕೇರಿಕೆ

06 Jul 2020 | 9:42 AM

ಲಂಡನ್, ಜುಲೈ 6 (ಯುಎನ್ಐ)- ವಿಶ್ವದಲ್ಲಿ ಕೊರೊನಾ ವೈರಸ್ ಪ್ರಕರಣಗಳ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ ಬ್ರಿಟನ್ ನಲ್ಲೂ ಈ ರೋಗದಿಂದ ಸತ್ತವರ ಸಂಖ್ಯೆಯೂ ಹೆಚ್ಚುತ್ತಿದೆ.

 Sharesee more..

ಈಜಿಪ್ಟ್‌ನಲ್ಲಿ ಕೊರೊನಾದಿಂದ 3300 ಜನರ ಸಾವು

06 Jul 2020 | 9:41 AM

ಕೈರೋ, ಜುಲೈ 6 (ಯುಎನ್ಐ)- ಜಾಗತಿಕ ಸಾಂಕ್ರಾಮಿಕ ರೋಗ ಕೊರೊನಾ ವೈರಸ್ “ಕೋವಿಡ್ 19” ಪ್ರಕರಣಗಳು ದೇಶದಲ್ಲಿ ಹೆಚ್ಚುತ್ತಿರುವ ಮಧ್ಯೆ ಕೊರೊನಾ ಸೋಂಕಿತರ ಸಂಖ್ಯೆ 75,000 ಕ್ಕೆ ಏರಿದೆ ಮತ್ತು ಸುಮಾರು 3,300 ಜನರು ಸಾವನ್ನಪ್ಪಿದ್ದಾರೆ.

 Sharesee more..

ಈಜಿಪ್ಟ್‌ನಲ್ಲಿ 75,000 ಕ್ಕೂ ಹೆಚ್ಚು ಕರೋನ ಸೋಂಕು ಪ್ರಕರಣ ದಾಖಲು

06 Jul 2020 | 9:41 AM

ಕೈರೋ, ಜುಲೈ 6 (ಸ್ಪುಟ್ನಿಕ್) ಈಜಿಪ್ಟ್‌ನಲ್ಲಿ ದೃಡಪಡಿಸಿದ ಕರೋನಸೋಂಕು ಪ್ರಕರಣಗಳ ಸಂಖ್ಯೆ 75,000 ಮೀರಿದ್ದು, ದೇಶದಲ್ಲಿ ಈವರೆಗೆ ಮೃತಪಟ್ಟವರ ಸಂಖ್ಯೆ 3,300 ಕ್ಕಿಂತಲೂ ಹೆಚ್ಚಿದೆ ಎಂದು ಆರೋಗ್ಯ ಸಚಿವಾಲಯದ ಇತ್ತೀಚಿನ ಮಾಹಿತಿ ತಿಳಿಸಿದೆ ಕಳೆದ 24 ಗಂಟೆಗಳಲ್ಲಿ 1,218 ಹೊಸ ಪ್ರಕರಣಗಳು ದಾಖಲಾಗಿವೆ ಮಾರಕ ಸೋಂಕಿನಿಂದ 63 ಜನರು ಸಾವನ್ನಪ್ಪಿದ್ದಾರೆ ಎಂದೂ ಆರೋಗ್ಯ ಸಚಿವಾಲಯದ ವಕ್ತಾರ ಖಲೀದ್ ಮೊಗಾಹೆದ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

 Sharesee more..

ಜಪಾನ್ ರಾಜಧಾನಿಯಲ್ಲಿ ಹೆಚ್ಚುತ್ತಿರುವ ಕರೋನ ಸೋಂಕು ಪ್ರಕರಣಗಳು

06 Jul 2020 | 9:21 AM

ಟೋಕಿಯೊ, ಜುಲೈ 6 (ಯುಎನ್ಐ) ಟೋಕಿಯೊದಲ್ಲಿ ಭಾನುವಾರ 111 ಹೊಸ ಕೋವಿಡ್ -19 ಪ್ರಕರಣಗಳು ದಾಖಲಾಗಿವೆ ಎಂದು ಜಪಾನ್ ಟೈಮ್ಸ್ ತಿಳಿಸಿದೆ ಜಪಾನಿನ ರಾಜಧಾನಿಯಲ್ಲಿ ಸತತ ನಾಲ್ಕನೇ ದಿನವೂ 100 ಕ್ಕೂ ಹೆಚ್ಚು ಹೊಸ ಕರೋನ ಸೋಂಕು ಪ್ರಕರಣಗಳು ವರದಿಯಾಗಿದ್ದು ಒಟ್ಟಾರೆಯಾಗಿ, ರಾಜಧಾನಿಯಲ್ಲಿ ಈವರೆಗೆ 6,760 ಕ್ಕೂ ಹೆಚ್ಚು ದೃಡಪಡಿಸಿದ ಪ್ರಕರಣಗಳು ದಾಖಲಾಗಿವೆ.

 Sharesee more..

ಬ್ರೆಜಿಲ್‌: 24 ಗಂಟೆಯಲ್ಲಿ 26 ಸಾವಿರ ಹೊಸ ಪ್ರಕರಣ ದಾಖಲು

06 Jul 2020 | 9:06 AM

ಬ್ರೆಸಿಲಿಯಾ, ಜುಲೈ 6 (ಯುಎನ್‌ಐ) ಕಳೆದ 24 ಗಂಟೆಗಳಲ್ಲಿ 26,000 ಕ್ಕೂ ಹೆಚ್ಚು ಹೊಸ ಪ್ರಕರಣಗಳೊಂದಿಗೆ ಬ್ರೆಜಿಲ್‌ನಲ್ಲಿ ದೃಡಪಡಿಸಿದ ಕೊರೊನಾಸೋಂಕು ಪ್ರಕರಣಗಳ ಸಂಖ್ಯೆಈಗ 1 6 ದಶಲಕ್ಷ ಮೀರಿದೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.

 Sharesee more..

ಪೆರುವಿನಲ್ಲಿ 3 ಲಕ್ಷ ಕರೋನ ಸೋಂಕು ಪ್ರಕರಣ ದಾಖಲು

06 Jul 2020 | 8:49 AM

ಬ್ಯೂನಸ್ ಐರಿಸ್, ಜುಲೈ 6 (ಯುಎನ್ಐ) ಪೆರುವಿನಲ್ಲಿ ಈಗ 3 ಲಕ್ಷಕ್ಕೂ ಹೆಚ್ಚು ದೃಡಪಡಿಸಿದ ಕರೋನ ಸೋಂಕು ಪ್ರಕರಣಗಳು ದಾಖಲಾಗಿವೆಎಂದು ದೇಶದ ಆರೋಗ್ಯ ಸಚಿವಾಲಯ ಪ್ರಕಟಿಸಿದೆ ಜುಲೈ 5 ರ ಹೊತ್ತಿಗೆ, 1,782,846 ಜನರನ್ನು ಸೋಂಕು ಪರೀಕ್ಷೆಗೆ ಒಳಪಡಿಸಲಾಗಿದ್ದು ಇವುಗಳ ಪೈಕಿ 302,718 ಮಾದರಿ ಪ್ರಕರಣಗಳು ಸಕಾರಾತ್ಮಕವಾಗಿದ್ದರೆ, 1,480,128 ಪ್ರಕರಣಗಳು ನೆಗೆಟಿವ್ ಆಗಿವೆ ಎಂದು ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿದೆ.

 Sharesee more..