Wednesday, Feb 19 2020 | Time 12:26 Hrs(IST)
 • ಆಸ್ಟ್ರೇಲಿಯಾದಲ್ಲಿ ವಿಮಾನಗಳ ಡಿಕ್ಕಿ: ನಾಲ್ವರು ಸಾವು
 • ಆಸ್ಟ್ರೇಲಿಯಾ ಎ ತಂಡದಿಂದ ಮಾರ್ಕಸ್ ಸ್ಟೋಯಿನಿಸ್ ಔಟ್
 • ಯ ಟಿ ಖಾದರ್ ಮೇಲೆ ದೇಶದ್ರೋಹ ಪ್ರಕರಣ: ವಿಧಾನಸಭೆಯಲ್ಲಿ ಗದ್ದಲ, ಕೋಲಾಹಲ
 • ಜಸ್ಪ್ರಿತ್ ಬುಮ್ರಾ ನ್ಯೂಜಿಲೆಂಡ್ ಗೆ ಆಘಾತ ನೀಡಬಲ್ಲರು: ರಾಸ್ ಟೇಲರ್
 • ದೆಹಲಿಯಲ್ಲಿ ಹೆಚ್ಚುತ್ತಿರುವ ಹನುಮಂತನ ಆರಾಧನೆ ; ಆಪ್ ಶಾಸಕರ ನೇತೃತ್ವದಲ್ಲಿ ಸುಂದರಕಾಂಡ ಪಾರಾಯಣ ಕೈಂಕರ್ಯ !!
 • ಕೊರೊನವೈರಸ್ ಪೀಡಿತ ಕ್ರೂಸ್ ಹಡಗಿನಿಂದ ಪ್ರಯಾಣಿಕರು ಇಂದು ಹೊರಕ್ಕೆ
 • ಸಚಿವರ ಗೈರು ಹಾಜರಿ: ಸಿದ್ದರಾಮಯ್ಯ ಆಕ್ಷೇಪ
 • ಕೊರೊನವೈರಸ್ ವಿರುದ್ಧದ ಹೋರಾಟದಲ್ಲಿ ಚೀನಾ ವೈದ್ಯ ಸಾವು: ವಿಶ್ವ ಆರೋಗ್ಯ ಸಂಸ್ಥೆ ಮುಖ್ಯಸ್ಥರಿಂದ ಸಂತಾಪ
 • ಸಾಧನೆ ವಯಸ್ಸು ಅಡ್ಡಿಯಾಗದು ಎಂದು ತೋರಿಸಿದ ಶಿವಸುಬ್ರಮಣ್ಯನ್ !!
 • ರಿಯೋ ಓಪನ್‌: ಪ್ರೀ ಕ್ವಾರ್ಟರ್‌ ಫೈನಲ್ಸ್‌ಗೆ ಡೊಮಿನಿಚ್‌ ಥೀಮ್‌
 • ಚಿತ್ರೋತ್ಸವ; ಆನ್‌ಲೈನ್‌ ಜೊತೆಗೆ ಖುದ್ದು ನೋಂದಣಿಗೂ ಅವಕಾಶ
 • ಭಾರತದ ಜೊತೆ ವ್ಯಾಪಾರ ಒಪ್ಪಂದ: ಅನುಮಾನ ಹೊರಹಾಕಿದ ಅಧ್ಯಕ್ಷ ಟ್ರಂಪ್ !
 • ನ್ಯೂಜಿಲೆಂಡ್‌ ವಿರುದ್ಧ ಟೆಸ್ಟ್‌ ಸರಣಿಯ ಸವಾಲಿಗೆ ನಾವು ಸಿದ್ಧ: ವಿರಾಟ್‌ ಕೊಹ್ಲಿ
 • ಕಣ್ಣು ದಾನದ ಬಗ್ಗೆ ಜಾಗೃತಿ ಮೂಡಿಸಲು ವಿಶೇಷ ಅಭಿಯಾನ
 • ಕಾಶ್ಮೀರದಲ್ಲಿ ಗುಂಡಿನ ಚಕಮಕಿ: ಮೂವರು ಹಿಜ್ಬುಲ್ ಉಗ್ರರ ಹತ್ಯೆ
International

ಕೊರೊನಾ ವೈರಸ್ : ಚೀನಾದ ಹುಬೈ ಪ್ರಾಂತ್ಯದಲ್ಲಿ ಸಾವಿನ ಸಂಖ್ಯೆ 1068 ಕ್ಕೆ ಏರಿಕೆ

12 Feb 2020 | 7:55 AM

ಮಾಸ್ಕೋ, ಫೆ 12 (ಸ್ಫುಟ್ನಿಕ್) ಇತ್ತೀಚೆಗೆ ಕಾಣಿಸಿಕೊಂಡಿರುವ ಕೊರೊನಾ ವೈರಾಣು ಸೋಂಕಿಗೆ ಚೀನಾಧ ಹುಬೈ ಪ್ರಾಂತ್ಯದಲ್ಲಿ ಬಲಿಯಾದವರ ಸಂಖ್ಯೆ 1068 ಕ್ಕೆ ಏರಿಕೆಯಾಗಿದೆ ಪ್ರಾದೇಶಿಕ ಆರೋಗ್ಯ ಸಮಿತಿ ಬುಧವಾರ ಈ ಅಂಕಿ ಅಂಶ ನೀಡಿದೆ.

 Sharesee more..

ಆಫ್ಘಾನಿಸ್ತಾನ: ಆತ್ಮಾಹುತಿ ಬಾಂಬ್ ದಾಳಿ, ಆರು ಮಂದಿ ಸಾವು

11 Feb 2020 | 12:57 PM

ಕಾಬೂಲ್, ಫೆ 11 (ಯುಎನ್‌ಐ) ಅಫ್ಘಾನಿಸ್ತಾನ ರಾಜಧಾನಿ ಕಾಬೂಲ್‌ನ ಪಶ್ಚಿಮ ಭಾಗದಲ್ಲಿರುವ ಸೇನಾ ವಿಶ್ವವಿದ್ಯಾಲಯದ ಹೊರಗೆ ಮಂಗಳವಾರ ಆತ್ಮಾಹುತಿ ಬಾಂಬರ್ ಸ್ಫೋಟಗೊಂಡು ಆರು ಜನರು ಸಾವನ್ನಪ್ಪಿದ್ದಾರೆ ಸ್ಫೋಟದಲ್ಲಿ ಇತರ 12 ಮಂದಿ ಗಾಯಗೊಂಡಿದ್ದಾರೆ ಎಂದು ಆಫ್ಘನ್ ಆಂತರಿಕ ಸಚಿವಾಲಯ ದೃಢಪಡಿಸಿದ್ದು, ಮೃತಪಟ್ಟವರಲ್ಲಿ ಆತ್ಮಾಹುತಿ ಬಾಂಬರ್ ಸೇರಿದ್ದಾನೆ.

 Sharesee more..

ಇರಾನ್ ದಾಳಿಯಿಂದ 100ಕ್ಕೂ ಹೆಚ್ಚು ಯೋಧರ ಮೆದುಳಿಗೆ ಹಾನಿ; ಅಮೆರಿಕ

11 Feb 2020 | 12:27 PM

ವಾಷಿಂಗ್ಟನ್, ಫೆ 11 (ಕ್ಸಿನುಹ) ಇರಾಕ್ ನಲ್ಲಿ ನಿಯೋಜಿಸಲ್ಪಟ್ಟಿದ್ದ ಅಮೆರಿಕದ ಸೇನಾ ನೆಲೆಯ ಮೇಲೆ ಕಳೆದ ತಿಂಗಳು ಇರಾನ್ ನಡೆಸಿದ ಕ್ಷಿಪಣಿ ದಾಳಿಯಿಂದ 100 ಕ್ಕೂ ಹೆಚ್ಚು ಸೈನಿಕರ ಮೆದುಳಿಗೆ ಹಾನಿಯಾಗಿದೆ ಎಂದು ಅಮೆರಿಕದ ರಕ್ಷಣಾ ಇಲಾಖೆ ಸೋಮವಾರ ತಿಳಿಸಿದೆ.

 Sharesee more..

ಬಾಂಗ್ಲಾದೇಶ: ದೋಣಿ ಮಗುಚಿ 15 ರೋಹಿಂಗ್ಯನ್ನರ ಸಾವು, 40 ಮಂದಿ ಕಾಣೆ

11 Feb 2020 | 11:17 AM

ಢಾಕ, ಫೆ 11 (ಯುಎನ್ಐ) ದೋಣಿ ಮಗುಚಿ 15 ಮಂದಿ ರೋಹಿಂಗ್ಯನ್ನರು ಸಾವನ್ನಪ್ಪಿ, ಇತರ 40 ಮಂದಿ ಕಾಣೆಯಾಗಿರುವ ಘಟನೆ ಬಂಗಾಳ ಕೊಲ್ಲಿಯ ಕಾಕ್ಸ್‌ ಬಜಾರ್‌ನ ಟೆಂಕಫ್‌ ಉಪ ಜಿಲ್ಲಾದಲ್ಲಿ ನಡೆದಿದೆ.

 Sharesee more..

ಕೊರೊನಾ ವೈರಾಣು : ಚೀನಾದಲ್ಲಿ ಸಾವಿರ ತಲುಪಿದ ಸಾವಿನ ಸಂಖ್ಯೆ

11 Feb 2020 | 10:50 AM

ಬೀಜಿಂಗ್, ಫೆ 11 (ಯುಎನ್ಐ) ಚೀನಾದಲ್ಲಿ ಕೊರೋನಾ ವೈರಾಣು ಸೋಂಕಿನ ಮರಣ ಮೃದಂದ ಮುಂದುವರಿದಿದ್ದು, ಸಾವರ ಸಂಖ್ಯೆ 1000 ದಾಟಿದೆ ಎಂದು ಅಲ್ಲಿನ ಆರೋಗ್ಯ ಇಲಾಖೆ ತಿಳಿಸಿದೆ ಸೋಮವಾರ 108 ಜನರು ಸೋಂಕಿನಿಂದ ಮೃತಪಟ್ಟಿದ್ದಾರೆ.

 Sharesee more..

ಫೆ 24 ರಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತಕ್ಕೆ ಭೇಟಿ

11 Feb 2020 | 9:38 AM

ವಾಷಿಂಗ್ಟನ್, ಫೆಬ್ರವರಿ 11 (ಯುಎನ್‌ಐ) ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇದೆ 24-25ರಂದು ಭಾರತಕ್ಕೆ ಭೇಟಿ ನೀಡಲಿದ್ದಾರೆ ಎಂದು ಶ್ವೇತಭವನ ಮಂಗಳವಾರ ದೃಢಪಡಿಸಿದೆ ಅಧ್ಯಕ್ಷ ಟ್ರಂಪ್ ಅವರ ಪತ್ನಿ ಮೆಲಾನಿಯಾ ಟ್ರಂಪ್ ಅವರೊಂದಿಗೆ ಆಗಮಿಸಲಿದ್ದಾರೆ .

 Sharesee more..

ಚಿಕಾಗೋ ಶೂಟೌಟ್‍: 9 ಸಾವು, 14 ಮಂದಿಗೆ ಗಾಯ

11 Feb 2020 | 7:47 AM

ಚಿಕಾಗೋ, ಫೆ 11 (ಕ್ಸಿನುವಾ) ನಗರದಲ್ಲಿ ಶುಕ್ರವಾರ ಹಾಗೂ ಭಾನುವಾರದ ನಡುವೆ ನಡೆದಿರುವ ಗುಂಡಿನ ದಾಳಿ ಪ್ರಕರಣಗಳಲ್ಲಿ ಒಟ್ಟು 9 ಜನರು ಸಾವನ್ನಪ್ಪಿದ್ದು, 14 ಮಂದಿ ಗಾಯಗೊಂಡಿರುವ ವರದಿಯಾಗಿದೆ ನಗರದ ವಾರಾಂತ್ಯದ ಮೊದಲ ಮಾರಣಾಂತಿಕ ಶೂಟಿಂಗ್‌ನಲ್ಲಿ, ವೆಸ್ಟ್ ಮನ್ರೋದ 3300 ಬ್ಲಾಕ್‌ನಲ್ಲಿ ಶುಕ್ರವಾರ ರಾತ್ರಿ 39 ವರ್ಷದ ವ್ಯಕ್ತಿಯನ್ನು ಗುಂಡಿಕ್ಕಿ ಕೊಲ್ಲಲಾಯಿತು.

 Sharesee more..

ಗ್ರೀಸ್ ನಲ್ಲಿ 5 ತೀವ್ರತೆಯ ಭೂಕಂಪ

11 Feb 2020 | 7:29 AM

ನ್ಯೂಯಾರ್ಕ್, ಫೆ 11 (ಕ್ಸಿನ್ಹುವಾ) ಗ್ರೀಸ್ ನ ಕರ್ಪಾತೋಸ್ ನಿಂದ 73 ಕಿಲೋಮೀಟರ್ ಪೂರ್ವ ಆಗ್ನೇಯದಲ್ಲಿ ಪ್ರಬಲ ಭೂಕಂಪ ಸಂಭವಿಸಿದೆ ಸೋಮವಾರ ಗ್ರೀನ್ ವಿಚ್ ಕಾಲಮಾನ 22.

 Sharesee more..

ಫಿಲಿಪೈನ್ಸ್; ಮೊದಲ ಕೊರೋನಾ ಸೋಂಕು ತಗುಲಿದ ವ್ಯಕ್ತಿ ಗುಣಮುಖ

10 Feb 2020 | 5:46 PM

ಮನಿಲಾ, ಫೆ 10 (ಕ್ಸಿನುಹ) ಫಿಲಿಪೈನ್ಸ್ ನಲ್ಲಿ ಕೊರೋನಾ ವೈರಾಣು ಸೋಂಕಿಗೆ ಗುರಿಯಾಗಿದ್ದ ವ್ಯಕ್ತಿಯೋರ್ವ ಗುಣಮುಖನಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ ಇದು ದೇಶದಲ್ಲಿ ಪತ್ತೆಯಾಗಿದ್ದ ಮೊದಲ ಸೋಂಕು ಪ್ರಕರಣವಾಗಿತ್ತು.

 Sharesee more..
ಕರೋನಾವೈರಸ್‌ ಸೋಂಕು: ಚೀನಾದಲ್ಲಿ ಸಾವಿನ ಸಂಖ್ಯೆ 910ಕ್ಕೇರಿಕೆ: 40,000 ಪ್ರಕರಣ ಪತ್ತೆ

ಕರೋನಾವೈರಸ್‌ ಸೋಂಕು: ಚೀನಾದಲ್ಲಿ ಸಾವಿನ ಸಂಖ್ಯೆ 910ಕ್ಕೇರಿಕೆ: 40,000 ಪ್ರಕರಣ ಪತ್ತೆ

10 Feb 2020 | 4:38 PM

ಬೀಜಿಂಗ್, ಫೆ.10 (ಯುಎನ್‌ಐ) ಸೋಮವಾರ ಮಧ್ಯರಾತ್ರಿಯ ಹೊತ್ತಿಗೆ 3,062 ಹೊಸ ಕರೊನಾವೈರಸ್ ಸೋಂಕಿನ ಪ್ರಕರಣಗಳು ವರದಿಯಾಗಿದ್ದು, ಇದರೊಂದಿಗೆ ಈ ಸೋಂಕಿಗೆ ಒಳಗಾದವರ ಸಂಖ್ಯೆ 40,171 ಕ್ಕೆ ತಲುಪಿದೆ. ಸಾವಿನ ಸಂಖ್ಯೆ 910ಕ್ಕೇರಿದ್ದು, ಒಂದೇ ದೇಶದಲ್ಲಿ ಒಂದೇ ದಿನ 97 ಸಾವು ಸಂಭವಿಸಿದೆ.

 Sharesee more..

ಜಪಾನ್: ಪ್ರವಾಸಿ ಹಡಗಿನಲ್ಲಿದ್ದ 60 ಜನರಿಗೆ ಕೊರೋನಾವೈರಸ್ ಸೋಂಕು

10 Feb 2020 | 1:50 PM

ಟೋಕಿಯೊ, ಫೆ 10 (ಯುಎನ್‌ಐ) ಯೊಕೊಹಾಮಾ ಸಮೀಪ ಸಮುದ್ರದಲ್ಲೇ ಪ್ರತ್ಯೇಕವಾಗಿ ನಿಲ್ಲಿಸಲಾಗಿರುವ ಪ್ರವಾಸಿ ಹಡಗಿನಲ್ಲಿ (ಕ್ರೂಸ್) ಹೆಚ್ಚುವರಿ 60ಕ್ಕೂ ಹೊಸ ಕೊರೋನವೈರಸ್‌ ಸೋಂಕು ಪ್ರಕರಣಗಳು ದೃಢಪಟ್ಟಿವೆ ಎಂದು ಸರ್ಕಾರಿ ಅಧಿಕಾರಿಯೊಬ್ಬರು ಸೋಮವಾರ ತಿಳಿಸಿದ್ದಾರೆ ಇದರೊಂದಿಗೆ ಜಪಾನ್‌ನಲ್ಲಿ ಸದ್ಯ, ಡೈಮಂಡ್ ಪ್ರಿನ್ಸೆಸ್‌ ಕ್ರೂಸ್ ಹಡಗಿನಲ್ಲಿನ 130 ಪ್ರಕರಣಗಳು ಸೇರಿದಂತೆ 150 ಕ್ಕೂ ಹೆಚ್ಚು ಕೊರೋನವೈರಸ್‌ ನ ಪ್ರಕರಣಗಳು ದೃಢಪಟ್ಟಿವೆ.

 Sharesee more..

ಕ್ಯಾಮರೂನ್‌: ಮತದಾನ ಕೇಂದ್ರಗಳ ಮೇಲೆ ನಡೆದ ಗುಂಡಿನ ದಾಳಿ, ಏಳು ಮಂದಿ ಸಾವು

10 Feb 2020 | 12:03 PM

ಯೌಂಡೆ(ಕ್ಯಾಮರೂನ್), ಫೆ 10 (ಕ್ಸಿನ್ಹುವಾ) ದೇಶದ ನೈರುತ್ಯ ಭಾಗದಲ್ಲಿರುವ ಇಂಗ್ಲಿಷ್ ಮಾತನಾಡುವ ಪ್ರದೇಶದಲ್ಲಿ ಮತದಾನ ಕೇಂದ್ರಗಳ ಮೇಲೆ ಗುಂಡಿನ ದಾಳಿ ನಡೆಸಿದ ಏಳು ಸಶಸ್ತ್ರ ಪ್ರತ್ಯೇಕತಾವಾದಿಗಳು ಸಾವನ್ನಪ್ಪಿದ್ದಾರೆ ಎಂದು ಸೇನೆ ತಿಳಿಸಿದೆ ಮಧ್ಯ ಆಫ್ರಿಕಾದ ದೇಶದಲ್ಲಿ ವಿಧಾನಸಭೆ ಮತ್ತು ಪುರಸಭೆ ಚುನಾವಣೆಗಳು ನಡೆಯುತ್ತಿದ್ದ ಸಂದರ್ಭದಲ್ಲಿ ಬಂಗೇಮ್ ಪಟ್ಟಣದಲ್ಲಿ ಭಾನುವಾರ ಈ ಘಟನೆ ನಡೆದಿದೆ.

 Sharesee more..

ಚೀನಾದಲ್ಲಿ ತುರ್ತು ಸಾರ್ವಜನಿಕ ಆರೋಗ್ಯ ಮೂಲಸೌಕರ್ಯಗಳಿಗೆ ಎಐಐಬಿನಿಂದ ಆರ್ಥಿಕ ನೆರವು

10 Feb 2020 | 11:37 AM

ಬೀಜಿಂಗ್, ಫೆ 10 (ಕ್ಸಿನ್ಹುವಾ) ಚೀನಾದಲ್ಲಿ ತ್ವರಿತ ಮತ್ತು ದೀರ್ಘಕಾಲೀನ ಸಾರ್ವಜನಿಕ ಆರೋಗ್ಯ ಅಗತ್ಯತೆಗಳನ್ನು ಪೂರೈಸಲು ಸಾರ್ವಜನಿಕ ಆರೋಗ್ಯ ಮೂಲಸೌಕರ್ಯಗಳಿಗೆ ಸಾಲಗಳನ್ನು ಒದಗಿಸುವ ಮೂಲಕ ಸಂಕಷ್ಟಕ್ಕೆ ಸಿಲುಕಿರುವ ಆ ದೇಶವನ್ನು ಬೆಂಬಲಿಸಲು ಸಿದ್ಧವಾಗಿರುವುದಾಗಿ ಏಷ್ಯಾ ಮೂಲಸೌಕರ್ಯ ಬಂಡವಾಳ ಹೂಡಿಕೆ ಬ್ಯಾಂಕ್ (ಎಐಐಬಿ) ಸೋಮವಾರ ಹೇಳಿದೆ.

 Sharesee more..

ಪಾಕಿಸ್ತಾನಕ್ಕೆ ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ ಗುಟೆರೆಸ್ ಭೇಟಿ

10 Feb 2020 | 10:43 AM

ವಾಷಿಂಗ್ಟನ್, ಫೆಬ್ರವರಿ 10 (ಯುಎನ್‌ಐ) ನಿರಾಶ್ರಿತರ ಸಮಾವೇಶದಲ್ಲಿ ಪಾಲ್ಗೊಳ್ಳಲು ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರೆಸ್ ಈ ತಿಂಗಳ ಅಂತ್ಯಕ್ಕೆ ಪಾಕಿಸ್ತಾನಕ್ಕೆ ಭೇಟಿ ನೀಡುವ ಸಾಧ್ಯತೆ ಇದೆ ಎಂದು ರಾಜತಾಂತ್ರಿಕ ಮೂಲಗಳು ತಿಳಿಸಿವೆ ನಾಲ್ಕು ದಶಕಗಳ ಕಾಲ ಅಫ್ಘಾನ್ ನಿರಾಶ್ರಿತರು ದೇಶದಲ್ಲಿರುವುದನ್ನು ಗುರುತಿಸಲು ಪಾಕಿಸ್ತಾನವು ಈ ತಿಂಗಳ ಕೊನೆಯಲ್ಲಿ ಅಂತಾರಾರಾಷ್ಟ್ರೀಯ ಸಮಾವೇಶವನ್ನು ನಡೆಸಲಿದೆ ಎಂದು ಇಸ್ಲಾಮಾಬಾದ್‌ನಲ್ಲಿ ಅಧಿಕೃತ ಹೇಳಿಕೆ ತಿಳಿಸಿದೆ ಎಂದು ಡಾನ್ ಪತ್ರಿಕೆ ಸೋಮವಾರ ವರದಿ ಮಾಡಿದೆ.

 Sharesee more..

ಆಸ್ಕರ್ ಪ್ರಶಸ್ತಿ: ಬ್ರಾಡ್ ಪಿಟ್ ಅತ್ಯುತ್ತಮ ಪೋಷಕ ನಟ

10 Feb 2020 | 10:30 AM

ಲಾಸ್ ಏಂಜಲೀಸ್, ಫೆ 10 (ಯುಎನ್ಐ) "ಒನ್ಸ್ ಅಪ್ ಅನ್ ಟೈಮ್ ಇನ್ ಹಾಲಿವುಡ್ " ಚಿತ್ರದ ಉತ್ತಮ, ಮನೋಜ್ಞ ಅಭಿನಯಕ್ಕಾಗಿ ಬ್ರಾಡ್ ಪಿಟ್ 92 ನೇ ಆಸ್ಕರ್ ಪ್ರಶಸ್ತಿಯಲ್ಲಿ ಅತ್ಯುತ್ತಮ ಪೋಷಕ ನಟ ಮುಡಿಗೇರಿಸಿಕೊಂಡು ಮಿಂಚಿದ್ದಾರೆ.

 Sharesee more..