Tuesday, Jul 23 2019 | Time 00:41 Hrs(IST)
International

ಇರಾನ್ ವಿರುದ್ಧ ಅಮೆರಿಕದ ದಿಗ್ಭಂದನಗಳಿಗೆ ಚೀನಾ ವಿರೋಧ

13 Jul 2019 | 10:36 AM

ಬೀಜಿಂಗ್, ಜುಲೈ 13 (ಯುಎನ್ಐ)-ಚೀನಾ ಇರಾನ್ ವಿರುದ್ಧ ಅಮೆರಿಕದ ಕಾನೂನು ಬಾಹಿರ ಮತ್ತು ಏಕಪಕ್ಷೀಯ ನಿರ್ಬಂಧಗಳನ್ನು ಚೀನಾ ವಿರೋಧಿಸುತ್ತದೆ ಎಂದು ಚೀನಾ ವಿದೇಶಾಂಗ ಸಚಿವಾಲಯದ ವಕ್ತಾರ ಗೆಂಗ್ ಶುವಾಂಗ್ ಪ್ರತಿಪಾದಿಸಿದ್ದಾರೆ ಸುದ್ದಿಗಾರರೊಂದಿಗೆ ಮಾತನಾಡಿದ ಗೆಂಗ್, ಇರಾನ್ ಸೇರಿದಂತೆ ಜಾಗತಿಕ ಸಮುದಾಯದೊಂದಿಗೆ ಚೀನಾದ ಆರ್ಥಿಕ ಮತ್ತು ವ್ಯಾಪಾರ ಸಂಬಂಧಗಳು ಅಂತಾರಾಷ್ಟ್ರೀಯ ನಿಯಮಗಳ ಚೌಕಟ್ಟಿನಲ್ಲಿಯೇ ಇವೆ ಎಂದು ಚೀನಾ ಹಲವು ಬಾರಿ ಒತ್ತಿ ಹೇಳಿದೆ.

 Sharesee more..

ಇಸ್ರೇಲ್ ಸೇನೆಯೊಂದಿಗೆ ಘರ್ಷಣೆ: 50ಕ್ಕೂ ಅಧಿಕ ಪ್ಯಾಲೆಸ್ತೀನಿಯನ್ನರಿಗೆ ಗಾಯ

13 Jul 2019 | 9:25 AM

ರಮಲ್ಲಾ, ಜು 13 (ಸ್ಪುಟ್ನಿಕ್) ಗಾಜಾ ಪಟ್ಟಿಯಲ್ಲಿ ಶುಕ್ರವಾರ ಇಸ್ರೇಲ್ ಸೈನಿಕರೊಂದಿಗೆ ನಡೆದ ಘರ್ಷಣೆಯಲ್ಲಿ ಕನಿಷ್ಠ 55 ಪ್ಯಾಲೆಸ್ತೀನಿಯನ್ನರು ಗಾಯಗೊಂಡಿದ್ದಾರೆ ಎಂದು ಪ್ಯಾಲೆಸ್ತೀನ್ ಆರೋಗ್ಯ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ ಇಸ್ರೇಲ್ ಪಡೆಗಳು ನಡೆಸಿದ ದಾಳಿಯಲ್ಲಿ 55 ಜನರು ಗಾಯಗೊಂಡಿದ್ದಾರೆ.

 Sharesee more..

ನೇಪಾಳದಲ್ಲಿ ಭಾರಿ ಮಳೆ; ಭೂಕುಸಿತಕ್ಕೆ ಎಂಟು ಜನರು ಸಾವು

12 Jul 2019 | 11:07 PM

ಕಠ್ಮಂಡು, ಜು 12 (ಯುಎನ್ಐ)- ಕಳೆದ ಎರಡು ದಿನಗಳಿಂದ ನೇಪಾಳದಲ್ಲಿ ಭಾರಿ ಮಳೆ ಸುರಿಯುತ್ತಿದ್ದು, ಭೂಕುಸಿತದಿಂದಾಗಿ ಎಂಟು ಜನರು ಸಾವನ್ನಪ್ಪಿದ್ದಾರೆ ಮತ್ತು ಏಳು ಮಂದಿ ನಾಪತ್ತೆಯಾಗಿದ್ದಾರೆ ಎಂದು ಸರ್ಕಾರಿ ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ ರಾಜಧಾನಿ ಕಠ್ಮಂಡು ಮತ್ತು ವಿವಿಧ ಭಾಗಗಳಲ್ಲಿ ಮಳೆ ಭಾರೀ ಮಳೆಯಾಗಿದೆ ಎಂದು ಹವಾಮಾನ ಮುನ್ಸೂಚನೆ ವಿಭಾಗ ತಿಳಿಸಿದೆ.

 Sharesee more..

ಭಾರತೀಯ ವಿಮಾನಗಳಿಗೆ ವಾಯುಮಾರ್ಗ ತೆರೆಯದಿರಲು ಪಾಕ್ ನಿರ್ಧಾರ

12 Jul 2019 | 10:43 PM

ನವದೆಹಲಿ / ಇಸ್ಲಾಮಾಬಾದ್, ಜುಲೈ 12 (ಯುಎನ್ಐ) ಭಾರತ ತನ್ನ ಯುದ್ಧ ವಿಮಾನಗಳನ್ನು ಇಂಡೋ-ಪಾಕ್ ಗಡಿಯಿಂದ ಹಿಂತೆಗೆದುಕೊಳ್ಳುವವರೆಗೂ ಪಾಕಿಸ್ತಾನವು ಭಾರತೀಯ ವಿಮಾನಗಳಿಗಾಗಿ ತನ್ನ ವಾಯುಪ್ರದೇಶವನ್ನು ತೆರೆಯದಿರಲು ನಿರ್ಧರಿಸಿದೆ ವಾಯುಪ್ರದೇಶವನ್ನು ಮುಕ್ತಗೊಳಿಸುವಂತೆ ಭಾರತ ಸರ್ಕಾರ ನಮ್ಮನ್ನು ಸಂಪರ್ಕಿಸಿದೆ.

 Sharesee more..

ಮೆಕ್ಸಿಕೋದಲ್ಲಿ ಭೂಕುಸಿತ: ಒಂದೇ ಕುಟುಂಬದ ಏಳು ಮಂದಿ ಸಾವು

12 Jul 2019 | 6:56 PM

ಮೆಕ್ಸಿಕೋ ನಗರ, ಜುಲೈ 12 (ಕ್ಷಿನುಹಾ) ಭೂಕುಸಿತದಿಂದ ಒಂದೇ ಕುಟುಂಬದ ಏಳು ಮಂದಿ ಮೃತಪಟ್ಟಿರುವ ಘಟನೆ ಮೆಕ್ಸಿಕೋ ನಗರದಲ್ಲಿ ನಡೆದಿದೆ ರಾಜಧಾನಿಯಿಂದ 15 ಕಿ.

 Sharesee more..

ದಕ್ಷಿಣ ಕೊರಿಯಾ ಪ್ರಧಾನಿ ನಾಳೆ ಬಾಂಗ್ಲಾದೇಶಕ್ಕೆ ಭೇಟಿ

12 Jul 2019 | 12:51 PM

ಢಾಕಾ, 12 (ಯುಎನ್‌ಐ) ದ್ವಿಪಕ್ಷೀಯ ಸಂಬಂಧ ಬಲಪಡಿಸಲು ಮತ್ತು ಬಾಂಗ್ಲಾದೇಶಕ್ಕೆ ಮೂರು ದಿನಗಳ ಅಧಿಕೃತ ಭೇಟಿಗಾಗಿ ದಕ್ಷಿಣ ಕೊರಿಯಾದ ಪ್ರಧಾನಿ ಲೀ ನಕ್-ಯೋನ್ ಶನಿವಾರ ಢಾಕಾಕ್ಕೆ ಕ್ಕೆ ಆಗಮಿಸಲಿದ್ದಾರೆ ಭೇಟಿಯ ಸಮಯದಲ್ಲಿ ಹಲವು ತಿಳುವಳಿಕೆ ಒಪ್ಪಂದಕ್ಕೆ ಸಹಿ ಹಾಕಲಾಗುವುದು ಎಂದು ವಿದೇಶಾಂಗ ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು ಗುರುವಾರ ತಿಳಿಸಿದ್ದಾರೆ.

 Sharesee more..

ಮದುವೆ ಸಮಾರಂಭದ ಮೇಲೆ ಬಾಂಬ್ ದಾಳಿ, 4 ಸಾವು

12 Jul 2019 | 11:46 AM

ಕಾಬೂಲ್, ಜುಲೈ 12 (ಯುಎನ್‌ಐ) ಪೂರ್ವ ಅಫ್ಘಾನ್ ಪ್ರಾಂತ್ಯದ ನಂಗರ್‌ಹಾರ್‌ನಲ್ಲಿ ಶುಕ್ರವಾರ ವಿವಾಹ ಸಮಾರಂಭದ ಮೇಲೆ ಉಗ್ರರು ನಡೆಸಿದ್ದಾರೆ ಎನ್ನಲಾದ ಬಾಂಬ್ ದಾಳಿಯಲ್ಲಿ ,ಕನಿಷ್ಠ ನಾಲ್ಕು ಜನರು ಸಾವನ್ನಪ್ಪಿದ್ದಾರೆ ಎಂದು ಪ್ರಾಂತೀಯ ಗವರ್ನರ್ ಅತ್ತೌಲ್ಲಾ ಖೋಗ್ಯಾನಿ,ಅವರ ವಕ್ತಾರರು ಹೇಳಿದ್ದಾರೆ.

 Sharesee more..

ಕೆನಡಾ ವಿಮಾನ ತುರ್ತುಭೂಸ್ಪರ್ಶ: 37 ಪ್ರಯಾಣಿಕರಿಗೆ ಗಾಯ

12 Jul 2019 | 10:52 AM

ಒಟ್ಟಾವ, ಜು 12 (ಯುಎನ್ಐ) ವಾಯು ಪ್ರಕ್ಷುಬ್ಧತೆ ಉಂಟಾದ ಹಿನ್ನೆಲೆಯಲ್ಲಿ ವ್ಯಾಂಕೋವರ್‌ನಿಂದ ಸಿಡ್ನಿಗೆ ಹೊರಟಿದ್ದ ಏರ್ ಕೆನಡಾ ವಿಮಾನ ತುರ್ತು ಭೂಸ್ಪರ್ಶ ಮಾಡಿದ ಪರಿಣಾಮ ಕನಿಷ್ಠ 27 ಮಂದಿ ಪ್ರಯಾಣಿಕರು ಗಾಯಗೊಂಡಿರುವ ಘಟನೆ ನಡೆದಿದೆ.

 Sharesee more..
ಜುಲೈ 22 ರಂದು ಟ್ರಂಪ್ – ಇಮ್ರಾನ್ ಖಾನ್ ಭೇಟಿ

ಜುಲೈ 22 ರಂದು ಟ್ರಂಪ್ – ಇಮ್ರಾನ್ ಖಾನ್ ಭೇಟಿ

11 Jul 2019 | 5:27 PM

ವಾಷಿಂಗ್ಟನ್, ಜುಲೈ 11 (ಯುಎನ್ಐ) ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಜುಲೈ 22 ರಂದು ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಅವರೊಂದಿಗೆ ಭಯೋತ್ಪಾದನಾ ನಿಗ್ರಹ ಸೇರಿದಂತೆ ಹಲವು ವಿಷಯಗಳ ಕುರಿತು ಚರ್ಚೆ ನಡೆಸಲಿದ್ದಾರೆ ಎಂದು ಶ್ವೇತಭವನದ ಪ್ರಕಟಣೆ ತಿಳಿಸಿದೆ.

 Sharesee more..

ಪಾಕಿಸ್ತಾನದಲ್ಲಿ ರೈಲು ದುರಂತ; 16 ಪ್ರಯಾಣಿಕರ ಸಾವು, 84 ಮಂದಿಗೆ ಗಾಯ

11 Jul 2019 | 5:15 PM

ಇಸ್ಲಾಮಾಬಾದ್, ಜು 11 (ಯುಎನ್ಐ) ಪ್ರಯಾಣಿಕ ರೈಲೊಂದು ಸರಕು ಸಾಗಣೆ ರೈಲಿಗೆ ಡಿಕ್ಕಿ ಹೊಡೆದ ಪರಿಣಾಮ ಕನಿಷ್ಠ 16 ಮಂದಿ ಸಾವನ್ನಪ್ಪಿ, 84 ಮಂದಿ ಗಾಯಗೊಂಡಿರುವ ಘಟನೆ ಗುರುವಾರ ಕರಾಚಿಯಲ್ಲಿ ನಡೆದಿದೆ ಲಾಹೋರ್‌ನಿಂದ ಕ್ವೆಟ್ಟಾಗೆ ಹೋಗುತ್ತಿದ್ದ ಅಕ್ಬರ್ ಎಕ್ಸ್‌ ಪ್ರೆಸ್‌ ರೈಲು ಪಂಜಾಬ್‌ ಪ್ರಾಂತ್ಯದ ರಹೀಮ್ ಯಾರ್ ಖಾನ್ ಜಿಲ್ಲೆಯಲ್ಲಿ ಸರಕು ಸಾಗಣೆ ರೈಲಿಗೆ ಡಿಕ್ಕಿ ಹೊಡೆದು ಈ ಅವಘಡ ಉಂಟಾಗಿದೆ.

 Sharesee more..

ಪಾಕಿಸ್ತಾನದಲ್ಲಿ ಬಸ್ ಕಮರಿಗೆ ಬಿದ್ದು 13 ಮಂದಿ ಸಾವು

11 Jul 2019 | 2:01 PM

ಇಸ್ಲಾಮಾಬಾದ್, ಜುಲೈ 11 (ಯುಎನ್‌ಐ) ಪಾಕಿಸ್ತಾನದ ಪೂರ್ವ ಪಂಜಾಬ್ ಪ್ರಾಂತ್ಯದ ಅಟೋಕ್ ಜಿಲ್ಲೆಯಲ್ಲಿ ಗುರುವಾರ ಬೆಳಿಗ್ಗೆ ಪ್ರಯಾಣಿಕರ ಬಸ್ ಕಮರಿಗೆ ಬಿದ್ದು 13 ಜನರು ಸಾವನ್ನಪ್ಪಿದ್ದು, ಇತರೆ 30 ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

 Sharesee more..

ಭಯೋತ್ಪಾದನೆ ವ್ಯಾಪಕದಿಂದ ಇಡೀ ಕೀನ್ಯಾ ಅಸ್ಥಿರ: ಗುಟೇರೆಸ್ ಕಳವಳ

11 Jul 2019 | 1:25 PM

ವಿಶ್ವಸಂಸ್ಥೆ, ಜುಲೈ 11 (ಯುಎನ್‌ಐ)- ಭಯೋತ್ಪಾದನೆ ಮತ್ತು ಸಂಘರ್ಷಗಳಿಂದ ಕೀನ್ಯಾದ ಇಡೀ ಪ್ರಾಂತ್ಯ ಅಸ್ಥಿರಗೊಳ್ಳುತ್ತಿದ್ದು, ಕುಟುಂಬಗಳು ಮತ್ತು ಸಮುದಾಯಗಳು ನಲುಗುತ್ತಿವೆ ಎಂದು ವಿಶ್ವಸಂಸ್ಥೆ ಮಹಾಕಾರ್ಯದರ್ಶಿ ಅಂಟೊನಿಯೋ ಗುಟೇರಸ್‍ ಕಳವಳ ವ್ಯಕ್ತಪಡಿಸಿದ್ದಾರೆ ನೈರೋಬಿಯಲ್ಲಿ ನಡೆದ ಭಯೋತ್ಪಾದನೆ ನಿಗ್ರಹ ಕುರಿತ ಸಮಾವೇಶದ ಉದ್ಘಾಟನಾ ಗೋಷ್ಠಿಯಲ್ಲಿ ಮಾತನಾಡಿದ ಗುಟೆರೆಸ್, ಕಳೆದ ಜನವರಿಯಲ್ಲಿ ಕೀನ್ಯಾ ರಾಜಧಾನಿಯಾದ ಇಲ್ಲಿ ಹೋಟೆಲ್ ಸಂಕೀರ್ಣವೊಂದರ ಮೇಲೆ ದಾಳಿಕೋರರು ವಶಕ್ಕೆ ತೆಗೆದುಕೊಂಡ ಘಟನೆಯಲ್ಲಿ 21 ಮಂದಿ ಸಾವನ್ನಪ್ಪಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ ಎಂದು ಹೇಳಿದ್ದಾರೆ.

 Sharesee more..

ಯುಕೆ ತೈಲ ಟ್ಯಾಂಕರ್ ವಶಕ್ಕೆ ಇರಾನ್ ಯತ್ನ ಆರೋಪ : ಇರಾನ್ ವಿದೇಶಾಂಗ ಸಚಿವರ ನಿರಾಕರಣೆ

11 Jul 2019 | 1:01 PM

ತೆಹ್ರಾನ್, ಜುಲೈ 11 (ಯುಎನ್ಐ) ಪರ್ಷಿಯನ್ ಗಲ್ಫ್ ನಲ್ಲಿ ಯುಕೆ ತೈಲ ಟ್ಯಾಂಕರ್ ಅನ್ನು ಐದು ಇರಾನಿ ದೋಣಿಗಳು ವಶಕ್ಕೆ ಇರಾನ್ ಯತ್ನಿಸಿದೆ ಎಂಬ ವಾಷಿಂಗ್‌ಟನ್ ಆರೋಪವನ್ನು ಇರಾನ್ ವಿದೇಶಾಂಗ ಸಚಿವ ಮೊಹಮದ್ ಜವಾದ್ ಜ಼ರಿಫ್ ಗುರುವಾರ ನಿರಾಕರಿಸಿದ್ದಾರೆ.

 Sharesee more..

ದಕ್ಷಿಣ ಆಫ್ಘಾನಿಸ್ತಾನದಲ್ಲಿ ಭದ್ರತಾ ಪಡೆಗಳಿಂದ 7 ಉಗ್ರರು ಹತ

11 Jul 2019 | 12:34 PM

ಲಷ್ಕರ್ಗಾ, ಜುಲೈ 11 (ಕ್ಸಿನ್ಹುವಾ) ಆಫ್ಘಾನಿಸ್ತಾನದ ದಕ್ಷಿಣ ಹೆಲ್ಮಾಂಡ್ ಪ್ರಾಂತ್ಯದಲ್ಲಿ ಭದ್ರತಾ ಪಡೆಗಳು ಹೊಂಚು ಹಾಕಿ ನಡೆಸಿದ ದಾಳಿಯಲ್ಲಿ ತಾಲಿಬಾನ್ ಸಂಘಟನೆಗೆ ನಿಷ್ಠರಾಗಿದ್ದ ಕನಿಷ್ಠ ಏಳು ಉಗ್ರರು ಸಾವನ್ನಪ್ಪಿದ್ದು, ಇತರ ಎಂಟು ಮಂದಿ ಗಾಯಗೊಂಡಿದ್ದಾರೆ ಎಂದು ಪ್ರಾಂತೀಯ ಪೊಲೀಸ್ ಮುಖ್ಯಸ್ಥ ಅಬ್ದುಲ್ ಸಲಾಮ್ ಅಫ್ಘನ್‍ ಗುರುವಾರ ತಿಳಿಸಿದ್ದಾರೆ.

 Sharesee more..

ಪಾಕ್ ನಲ್ಲಿ ರೈಲು ಡಿಕ್ಕಿ: 10 ಮಂದಿ ಸಾವು, 50 ಮಂದಿಗೆ ಗಾಯ

11 Jul 2019 | 11:53 AM

ಇಸ್ಲಾಮಾಬಾದ್, ಜುಲೈ 11 (ಯುಎನ್‌ಐ) ಪಾಕಿಸ್ತಾನದ ಪೂರ್ವ ನಗರ ರಹೀಂ ಯಾರ್ ಖಾನ್‌ನಲ್ಲಿ ಗುರುವಾರ ಬೆಳಿಗ್ಗೆ ಪ್ರಯಾಣಿಕರ ರೈಲು ಸರಕು ರೈಲಿಗೆ ಡಿಕ್ಕಿ ಹೊಡೆದ ಪರಿಣಾಮ 10 ಜನರು ಸಾವನ್ನಪ್ಪಿ, ಇತರೆ 50 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.

 Sharesee more..