Tuesday, Jul 23 2019 | Time 00:15 Hrs(IST)
International

ಚೀನಾದಲ್ಲಿ ರಸ್ತೆ ಅಪಘಾತ: 6 ಮಂದಿ ಸಾವು

11 Jul 2019 | 10:53 AM

ಬೀಜಿಂಗ್ , ಜುಲೈ 11 (ಯುಎನ್‌ಐ) ಚೀನಾದಲಿ ಪೂರ್ವ ಚೀನಾದ ಜಿಯಾಂಗ್ಸು ಪ್ರಾಂತ್ಯದಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಆರು ಜನರು ಸಾವನ್ನಪ್ಪಿದ್ದಾರೆ ಮತ್ತು ಏಳು ಮಂದಿ ಗಾಯಗೊಂಡಿದ್ದಾರೆ ಎಂದು ಸ್ಥಳೀಯ ಪೊಲೀಸರು ತಿಳಿಸಿದ್ದಾರೆ ಬೆಳಗಿನ ಜಾವದಲ್ಲಿ ಈ ಅಪಘಾತ ಸಂಭವಿಸಿದೆ, ಬೀಜಿಂಗ್-ಶಾಂಘೈ ಎಕ್ಸ್‌ಪ್ರೆಸ್ ಹೆದ್ದಾರಿಯ ಒಂದು ಭಾಗದಲ್ಲಿ ಟ್ರಕ್ ಮತ್ತೊಂದು ಮಿನಿವ್ಯಾನ್‌ಗೆ ಡಿಕ್ಕಿ ಹೊಡೆದಿದೆ ಎಂದು ಸ್ಥಳೀಯ ಪೊಲೀಸರು ತಿಳಿಸಿದ್ದಾರೆ.

 Sharesee more..

ನೈಋತ್ಯ ಚೀನಾದಲ್ಲಿ ಕಟ್ಟಡ ಕುಸಿತ : ಓರ್ವನಿಗೆ ಗಾಯ

11 Jul 2019 | 10:43 AM

ಗುಯಾಂಗ್, ಜುಲೈ 11 (ಯುಎನ್ಐ) ನೈಋತ್ಯ ಚೀನಾದ ಗಿಜೌ಼ ಪ್ರಾಂತ್ಯದ ಗಿಯಾಂಗ್ ನಲ್ಲಿ ಮೂರು ಅಂತಸ್ತಿನ ಕಟ್ಟಡ ಕುಸಿದು ಓರ್ವ ವ್ಯಕ್ತಿ ಗಾಯಗೊಂಡಿದ್ದು ಇತರ ಐವರು ಸಿಲುಕಿದ್ದಾರೆ ಎಂದು ಸ್ಥಳೀಯ ಪ್ರಾಧಿಕಾರ ಗುರುವಾರ ತಿಳಿಸಿದೆ.

 Sharesee more..

ಕಕ್ಷೆ ಸೇರಿದ ರಷ್ಯಾದ ನಾಲ್ಕು ಸೇನಾಪಡೆ ಉಪಗ್ರಹ

11 Jul 2019 | 8:30 AM

ಮಾಸ್ಕೋ, ಜುಲೈ 11 (ಸ್ಫುಟ್ನಿಕ್) ರಷ್ಯಾ ರಕ್ಷಣಾ ಸಚಿವಾಲಯ ಉಡಾವಣೆ ಮಾಡಿರುವ ನಾಲ್ಕು ಉಪಗ್ರಹಗಳು ನಿಗದಿತ ಕಕ್ಷೆ ಸೇರಿವೆ ಎಂದು ಗುರುವಾರ ಸಚಿವಾಲಯ ತಿಳಿಸಿದೆ ಬುಧವಾರ ಜಿಎಮ್‌ಟಿ 17.

 Sharesee more..

ಪಶ್ಚಿಮ ಸಿರಿಯಾದಲ್ಲಿ ಭಯೋತ್ಪಾದಕ ದಾಳಿ: ಇಬ್ಬರು ನಾಗರಿಕರು ಸಾವು

10 Jul 2019 | 10:14 PM

ಮಾಸ್ಕೋ, ಜುಲೈ 10 (ಸ್ಪುಟ್ನಿಕ್) ಪಶ್ಚಿಮ ಹಮಾ ಪ್ರಾಂತ್ಯದಲ್ಲಿರುವ ಸಿರಿಯನ್ ನಗರವಾದ ಅಸ್ ಸುಕೈಲಾಬಿಯಾ ಮೇಲೆ ನುಸ್ರಾ ಫ್ರಂಟ್ (ರಷ್ಯಾದಲ್ಲಿ ನಿಷೇಧಿತ ಭಯೋತ್ಪಾದಕ ಗುಂಪು) ಭಯೋತ್ಪಾದಕರು ನಡೆಸಿದ ರಾಕೆಟ್ ದಾಳಿಯಲ್ಲಿ ಕನಿಷ್ಠ ಇಬ್ಬರು ನಾಗರಿಕರು ಸಾವನ್ನಪ್ಪಿದ್ದಾರೆ ಮತ್ತು ಇನ್ನಿಬ್ಬರು ಗಾಯಗೊಂಡಿದ್ದಾರೆ ಎಂದು ಸನಾ ಸುದ್ದಿ ಸಂಸ್ಥೆ ಬುಧವಾರ ವರದಿ ಮಾಡಿದೆ.

 Sharesee more..

ಅಫ್ಘಾನಿಸ್ತಾನ ದಾಳಿ : 20 ಉಗ್ರರ ಹತ್ಯೆ

10 Jul 2019 | 2:39 PM

ಕುಂದುಜ್, ಅಫ್ಘಾನಿಸ್ತಾನ, ಜುಲೈ 10 (ಕ್ಸಿನ್ಹುವಾ) ಅಫ್ಘಾನಿಸ್ತಾನದ ಉತ್ತರ ಕುಂದುಜ್‌ ಪ್ರಾಂತ್ಯದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ತಾಲಿಬಾನ್ ಸಂಘಟನೆಯೊಂದಿಗೆ ನಂಟು ಹೊಂದಿದ್ದು ಸುಮಾರು 20 ಉಗ್ರರನ್ನು ಅಫ್ಘನ್ ಪಡೆಗಳು ಹತ್ಯೆ ಮಾಡಿವೆ ಎಂದು ಸೇನಾ ವಕ್ತಾರ ಗುಲ್ಹಂ ಹಜ್ರತ್ ಕರಿಮಿ ಬುಧವಾರ ಹೇಳಿದ್ದಾರೆ.

 Sharesee more..

ಬಾಂಗ್ಲಾದೇಶ, ಕತಾರ್, ತಜಕಿಸ್ತಾನಗಳಿಗೆ ಜುಲೈ 13 – 21 ರವರೆಗೆ ದಕ್ಷಿಣ ಕೊರಿಯಾ ಪ್ರಧಾನಿ ಭೇಟಿ

10 Jul 2019 | 12:41 PM

ಮಾಸ್ಕೋ, ಜುಲೈ 10 (ಸ್ಫುಟ್ನಿಕ್) ಬಾಂಗ್ಲಾದೇಶ, ತಜಕಿಸ್ತಾನ, ಕಿರ್ಗಿಸ್ತಾನ ಮತ್ತು ಕತಾರ್ ಗಳಿಗೆ ದಕ್ಷಿಣ ಕೊರಿಯಾ ಪ್ರಧಾನಿ ಲೀ ನಾಕ್ ಯೋನ್ ಜುಲೈ 13 ರಿಂದ 21 ರ ವರೆಗೆ ಭೇಟಿ ನೀಡಲಿದ್ದಾರೆ ಎಂದು ಸ್ಥಳೀಯ ಮಾಧ್ಯಮ ವರದಿ ಮಾಡಿದೆ.

 Sharesee more..

ಅರ್ಜೆಂಟಿನಾ ಮಾಜಿ ಅಧ್ಯಕ್ಷ ಫೆರ್ನಾಂಡೋ ಡಾ ಲಾ ರುಆ ನಿಧನ

10 Jul 2019 | 9:04 AM

ಬ್ಯೂನಸ್ ಏರಿಸ್, ಜುಲೈ 10 (ಕ್ಸಿನ್ಹುವಾ) ಅರ್ಜೆಂಟಿನಾದ ಮಾಜಿ ಅಧ್ಯಕ್ಷ ಫೆರ್ನಾಂಡೋ ಡಿ ಲಾ ರುವಾ ಮಂಗಳವಾರ ನಿಧನರಾದರು; ಅವರಿಗೆ 81 ವರ್ಷ ವಯಸ್ಸಾಗಿತ್ತು ಅವರು ಮೂತ್ರಕೋಶ ವೈಫಲ್ಯ ಮತ್ತು ಹೃದ್ರೋಗದಿಂದ ಬಳಲುತ್ತಿದ್ದರು ಎಂದು ಸ್ಥಳೀಯ ಮಾಧ್ಯಮ ವರದಿ ಮಾಡಿದೆ.

 Sharesee more..

ಪೂರ್ವ ಸಿರಿಯಾದಲ್ಲಿ ನೆಲಬಾಂಬ್ ಸ್ಫೋಟ : ಏಳು ಮಕ್ಕಳು ಬಲಿ

10 Jul 2019 | 8:28 AM

ಡಮಾಸ್ಕಸ್, ಜುಲೈ 10 (ಕ್ಸಿನ್ಹುವಾ) ಪೂರ್ವ ಸಿರಿಯಾದಲ್ಲಿ ಮಂಗಳವಾರ ನೆಲಬಾಂಬ್ ಸ್ಫೋಟದಲ್ಲಿ ಕನಿಷ್ಠ ಏಳು ಮಕ್ಕಳು ಮೃತಪಟ್ಟಿದ್ದಾರೆ ಎಂದು ಸ್ಥಳೀಯ ಮಾಧ್ಯಮ ವರದಿ ಮಾಡಿದೆ ಡೇರ್ – ಅಲ್‌ ಜೌರ್‌ ಪೂರ್ವ ಪ್ರಾಂತ್ಯದ ದಬ್ಲಾನ್ ನಲ್ಲಿ ನೆಲ ಬಾಂಬ್ ಸ್ಫೋಟಿಸಿದೆ ಎಂದು ವರದಿಯಾಗಿದೆ.

 Sharesee more..

ಭಾರತದ ದರಗಳನ್ನು ಸ್ವೀಕರಿಸಲು ಸಾಧ್ಯವಿಲ್ಲ: ಟ್ರಂಪ್‌

09 Jul 2019 | 8:52 PM

ವಾಷಿಂಗ್ಟನ್, ಜುಲೈ 9 (ಯುಎನ್‌ಐ) ಅಮೆರಿಕದ ಉತ್ಪನ್ನಗಳಿಗೆ ಅಧಿಕ ಸುಂಕ ವಿಧಿಸುವ ಮೂಲಕ ಭಾರತವು ಅಮೆರಿಕದಿಂದ ಹೆಚ್ಚು ಲಾಭವನ್ನು ಪಡೆದುಕೊಳ್ಳುತ್ತಿದೆ ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಂಗಳವಾರ ಮತ್ತೊಮ್ಮೆ ಆರೋಪಿಸಿದ್ದು, ಇನ್ನು ಮುಂದೆ ಸ್ವೀಕಾರಾರ್ಹವಲ್ಲ ಎಂದಿದ್ದಾರೆ.

 Sharesee more..

ಅರ್ಜೆಂಟೀನಾದ ಮಾಜಿ ಅಧ್ಯಕ್ಷ ಡಿ ಲಾ ರುವಾ ನಿಧನ

09 Jul 2019 | 8:05 PM

ಮಾಸ್ಕೋ, ಜುಲೈ 9 (ಸ್ಪುಟ್ನಿಕ್) ಅರ್ಜೆಂಟೀನಾದ ಮಾಜಿ ಅಧ್ಯಕ್ಷ ಫರ್ನಾಂಡೊ ಡಿ ಲಾ ರುವಾ ಮಂಗಳವಾರ ನಿಧನರಾದರು, ಅವರಿಗೆ 81 ವರ್ಷ ವಯಸ್ಸಾಗಿತ್ತು ಎಂದು ಸ್ಥಳೀಯ ಮಾಧ್ಯಮ ವರದಿ ಮಾಡಿದೆ 1999-2001ರವರೆಗೆ ದೇಶವನ್ನು ಮುನ್ನಡೆಸಿದ 81 ವರ್ಷದ ರಾಜಕಾರಣಿ ಹೃದಯ, ಮೂತ್ರಪಿಂಡ ವೈಫಲ್ಯಕ್ಕಾಗಿ ಬ್ಯೂನಸ್ ಅಲೆಕ್ಸಾಂಡರ್ ಫ್ಲೆಮಿಂಗ್ ಆಸ್ಪತ್ರೆಗೆ ಸೇರಿಸಲಾಗಿತ್ತು.

 Sharesee more..

ಭಾರತದಿಂದ ಬಹುಪಾತ್ರದ 18 ಹೊಸ ಸುಖೋಯ್ -30 ಎಂಕೆಐ ಯುದ್ಧ ವಿಮಾನಗಳ ಖರೀದಿ

09 Jul 2019 | 8:04 PM

ಮಾಸ್ಕೋ, ಜುಲೈ 9 (ಯುಎನ್‌ಐ) ಭಾರತೀಯ ವಾಯುಪಡೆಯು 18 ಹೊಸ ಸುಖೋಯ್ -30 ಎಂಕೆಐ ಯುದ್ಧ ವಿಮಾನಗಳನ್ನು ಖರೀದಿಸಲಿದೆ ಎಂದು ರಷ್ಯಾದ ಸೇನಾ ಫೆಡರಲ್ ಸರ್ವಿಸ್ ಉಪ ನಿರ್ದೇಶಕ ವ್ಲಾಡಿಮಿರ್ ಡ್ರೊಜ್‍ಜೊವ್ ಮಂಗಳವಾರ ತಿಳಿಸಿದ್ದಾರೆ.

 Sharesee more..

ಅಫ್ಘಾನಿಸ್ತಾನದಲ್ಲಿ ಸೇನಾ ಕಾರ್ಯಾಚರಣೆ: 37 ಭಯೋತ್ಪಾದಕರ ಹತ್ಯೆ

09 Jul 2019 | 5:15 PM

ಕಾಬೂಲ್, ಜುಲೈ 09 (ಯುಎನ್ಐ) ಅಫ್ಘಾನಿಸ್ತಾನದ ರಾಷ್ಟ್ರೀಯ ರಕ್ಷಣಾ ಮತ್ತು ಭದ್ರತಾ ಪಡೆಗಳು ಕಳೆದ 24 ಗಂಟೆಗಳಲ್ಲಿ 10 ಕಾರ್ಯಾಚರಣೆ ನಡೆಸಿದ್ದು, ಇದರಲ್ಲಿ ಕನಿಷ್ಠ 37 ಭಯೋತ್ಪಾದಕರು ಸಾವನ್ನಪ್ಪಿದ್ದಾರೆ ಅಫ್ಘಾನಿಸ್ತಾನನ್ 101 ವಿಶೇಷ ಕಮಾಂಡೋ ಪಡೆ ದೇಶದ ವಿವಿಧ ಭಾಗಗಳಲ್ಲಿ ನಾಗರಿಕರ ಭದ್ರತಾ ಸುರಕ್ಷೆಯ ಹಿತದೃಷ್ಠಿಯಿಂದ ಕಾರ್ಯಾಚರಣೆ ಆರಂಭಿಸಿ, ಭಯೋತ್ಪಾದಕರ ಅಡಗುತಾಣಗಳನ್ನು ಧ್ವಂಸಗೊಳಿಸಿದೆ ಎಂದು ಅಫ್ಘಾನ್ ರಕ್ಷಣಾ ಸಚಿವಾಲಯ ಮಂಗಳವಾರ ಪ್ರಕಟಣೆಯಲ್ಲಿ ಈ ಮಾಹಿತಿ ನೀಡಿದೆ.

 Sharesee more..

ಪಾಕಿಸ್ತಾನದ ಪ್ರಸಿದ್ಧ ರಂಗಕರ್ಮಿ ಜಾಹೀನ್ ತಾಹೀರ್ ಸಿಧನ

09 Jul 2019 | 4:58 PM

ಇಸ್ಲಾಮಾಬಾದ್, ಜುಲೈ 9 (ಯುಎನ್ಐ) ಪಾಕಿಸ್ತಾನ ರಂಗಭೂಮಿಯ ಪ್ರಸಿದ್ಧ ಕಲಾವಿದ ಜಾಹೀನ್ ತಾಹೀರ್ ಮಂಗಳವಾರ ಹೃದಯಘಾತದಿಂದ ನಿಧನ ಹೊಂದಿದ್ದಾರೆ ಅವರಿಗೆ 79 ವರ್ಷ ವಯಸ್ಸಾಗಿತ್ತು.

 Sharesee more..

ಅಫ್ಘಾನ್ ದಲ್ಲಿ ತಾಲಿಬಾನ್ ದಾಳಿ: 20 ಯೋಧರ ಹತ್ಯೆ

09 Jul 2019 | 4:05 PM

ಕಾಬೂಲ್, ಜುಲೈ 9 (ಸ್ಫುಟ್ನಿಕ್) ಅಫ್ಘಾನಿಸ್ತಾನದ ಕುಡುಂಜ್ ಪ್ರಾಂತ್ಯದಲ್ಲಿ ತಾಲಿಬಾನ್ ಭಯೋತ್ಪಾದಕರು ನಡೆಸಿದ ದಾಳಿಯಲ್ಲಿ ಅಫ್ಘಾನ್ ಸೇನೆಯ 20 ಭದ್ರತಾ ಪಡೆಯ ಯೋಧರು ಹತರಾಗಿದ್ದಾರೆ ಸೋಮವಾರ ಇಮಾಮ್ ಸಾಹೀಬ್ ಜಿಲ್ಲೆಯಲ್ಲಿ ಯೋಧರ ಚೆಕ್ ಪೋಸ್ಟ್ ಗುರಿಯಾಗಿಸಿಕೊಂಡು ತಾಲಿಬಾನ್ ಭಯೋತ್ಪಾದಕರು ದಾಳಿ ನಡೆಸಿದ ಪರಿಣಾಮ 20 ಯೋಧರು ಮೃತಪಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ.

 Sharesee more..

ಪುಟಿನ್ – ಕಿಮ್ ಭೇಟಿ ಸ್ಮರಣಾರ್ಥ ಉತ್ತರ ಕೊರಿಯಾದಿಂದ ಅಂಚೆ ಚೀಟಿ ಬಿಡುಗಡೆ

09 Jul 2019 | 1:59 PM

ವ್ಲಾಡಿವೋಸ್ಟಾಕ್, ಜುಲೈ 9 (ಸ್ಫುಟ್ನಿಕ್) ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಮತ್ತು ಉತ್ತರ ಕೊರಿಯಾ ನಾಯಕ ಕಿಮ್ ಜಾನ್ ಉನ್ ನಡುವೆ ಕಳೆದ ಏಪ್ರಿಲ್ ನಲ್ಲಿ ನಡೆದ ಭೇಟಿಯ ಸ್ಮರಣಾರ್ಥ ಉತ್ತರ ಕೊರಿಯಾ ಅಂಚೆ ಚೀಟಿ ಬಿಡುಗಡೆ ಮಾಡಿದೆ ಎಂದು ರಷ್ಯಾ ರಾಯಭಾರ ಕಚೇರಿ ಮಂಗಳವಾರ ತಿಳಿಸಿದೆ.

 Sharesee more..