Sunday, Aug 9 2020 | Time 14:29 Hrs(IST)
  • ಸುಶಾಂತ್‌ ಪ್ರಕರಣ; ರಿಯಾ ಸಹೋದರನನ್ನು 18 ಗಂಟೆಗಳ ಕಾಲ ವಿಚಾರಣೆ ನಡೆಸಿದ ಇಡಿ
  • ಕನ್ನಡಿಗರು-ತಮಿಳರನ್ನು ಬೆಸೆದ ಸರ್ವಜ್ಞ,ತಿರುವಳ್ಳುವರ್ : ಡಿಸಿಎಂ ಅಶ್ವತ್ಥ್ ನಾರಾಯಣ್
  • ತಿರುಪತಿ ತಿಮ್ಮಪ್ಪನ ವಾರ್ಷಿಕ ಬಜೆಟ್ ೩,೨೦೦ ಕೋಟಿ
  • ಕೋವಿಡ್‌; ಸಿದ್ದರಾಮಯ್ಯ ಅವರಿಗೆ ಕರೆ ಮಾಡಿ ಆರೋಗ್ಯ ವಿಚಾರಿಸಿದ ರಾಹುಲ್‌ ಗಾಂಧಿ
  • ಕೃಷಿ ವಲಯದ 1 ಲಕ್ಷ ಕೋಟಿ ರೂ ಮೊತ್ತದ ಯೋಜನೆಗೆ ಮೋದಿ ಚಾಲನೆ; ಪಿಎಂ-ಕಿಸಾನ್‌ 6ನೇ ಕಂತಿನ ಬಿಡುಗಡೆ
  • ಪಿಎಂ ಕಿಸಾನ್ ಸಮ್ಮಾನ್ ಯೋಜನೆಗೆ ಹಣ ಬಿಡುಗಡೆ : ಹಾಸನದ ಕೃಷಿ ಪತ್ತಿನ ಸಹಕಾರ ಸಂಘದ ಸದಸ್ಯರ ಜೊತೆ ಪ್ರಧಾನಿ ಸಂವಾದ
  • ಆಯೋಧ್ಯೆ ಮಾದರಿಯಲ್ಲಿ ನೇಪಾಳದಲ್ಲೂ ಶ್ರೀರಾಮ ಮಂದಿರ !
  • ಕೇರಳದ 7 ಜಿಲ್ಲೆಗಳಲ್ಲಿ ರೆಡ್‌ ಅಲರ್ಟ್ ಘೋಷಣೆ
  • ಮುಖ್ಯಕಾರ್ಯದರ್ಶಿಗೆ ಕರೆ ಮಾಡಿ ಅತಿವೃಷ್ಠಿ,ಪ್ರವಾಹದ ಮಾಹಿತಿ ಪಡೆದ ಮುಖ್ಯಮಂತ್ರಿ ಯಡಿಯೂರಪ್ಪ
  • ಶ್ರೀಲಂಕಾ ಪ್ರಧಾನಿಯಾಗಿ ಮಹೀಂದ್ರ ರಾಜಪಕ್ಷ ಪ್ರಮಾಣವಚನ ಸ್ವೀಕಾರ
  • ಅಮಿತ್‌ ಶಾ ಕೋವಿಡ್‌ ವರದಿ ನೆಗೆಟೀವ್‌; ಮನೋಜ್ ತಿವಾರಿ ಟ್ವೀಟ್
  • ಕಳೆದ ವರ್ಷದ ಅತಿವೃಷ್ಟಿ ಹಾನಿ, ಪರಿಹಾರದ ವಿವರ ಕೇಳಿದ ಸಿದ್ದರಾಮಯ್ಯ
  • ದೇಶದಲ್ಲಿ ಕೊರೊನಾ ಸೋಂಕಿನ ಸಂಖ್ಯೆ 21 5 ಲಕ್ಷಕ್ಕೆ ಏರಿಕೆ
  • ಉತ್ತರ ಪ್ರದೇಶ ಎಸ್‍ಟಿಎಫ್‍ ಪಡೆಯಿಂದ ಮಾಫಿಯಾ ಶಾರ್ಪ್-ಶೂಟರ್ ನ ಗುಂಡಿಕ್ಕಿ ಹತ್ಯೆ
  • ಕ್ವಿಟ್ ಇಂಡಿಯಾ ಚಳವಳಿ: ಸ್ವಾತಂತ್ರ್ಯ ಹೋರಾಟಗಾರರಿಗೆ ಮುಖ್ಯಮಂತ್ರಿ ಗೌರವ ನಮನ
Karnataka Share

ಅರಮನೆ ಮೈದಾನದ ಬಳಿ ಈಶಾನ್ಯ ರಾಜ್ಯಗಳ ಜನರ ಜಮಾವಣೆ: ಸ್ಥಳಕ್ಕೆ ಧಾವಿಸಿ ಪರಿಶೀಲಿಸಿದ ಡಾ.ಕೆ.ಸುಧಾಕರ್

ಅರಮನೆ ಮೈದಾನದ ಬಳಿ ಈಶಾನ್ಯ ರಾಜ್ಯಗಳ ಜನರ ಜಮಾವಣೆ: ಸ್ಥಳಕ್ಕೆ ಧಾವಿಸಿ ಪರಿಶೀಲಿಸಿದ ಡಾ.ಕೆ.ಸುಧಾಕರ್
ಅರಮನೆ ಮೈದಾನದ ಬಳಿ ಈಶಾನ್ಯ ರಾಜ್ಯಗಳ ಜನರ ಜಮಾವಣೆ: ಸ್ಥಳಕ್ಕೆ ಧಾವಿಸಿ ಪರಿಶೀಲಿಸಿದ ಡಾ.ಕೆ.ಸುಧಾಕರ್

ಬೆಂಗಳೂರು, ಮೇ 23 (ಯುಎನ್ಐ) ಈಶಾನ್ಯ ರಾಜ್ಯದ ನೂರಾರು ಕಾರ್ಮಿಕರು ಭಾರಿ ಸಂಖ್ಯೆಯಲ್ಲಿ ಅರಮನೆ ಮೈದಾನದ ಬಳಿ ಜಮಾಯಿಸಿ ಗೊಂದಲ ಉಂಟಾಗಿದ್ದನ್ನು ಗಮನಿಸಿದ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಖುದ್ದು ಧಾವಿಸಿ ಪರಿಸ್ಥಿತಿ ನಿಯಂತ್ರಿಸಿದರು.

ತಪ್ಪು ಮಾಹಿತಿಯಿಂದಾಗಿ ಮಣಿಪುರ, ಒಡಿಶಾ ರಾಜ್ಯಗಳ ಸಾವಿರಾರು ಮಂದಿ ಜಮಾಯಿಸಿದ್ದರಿಂದ ಈ ಗೊಂದಲ ಉಂಟಾಗಿತ್ತು. ಒಂದೂವರೆ ಸಾವಿರ ಮಂದಿಗೆ ಆಯಾ ರಾಜ್ಯಗಳಿಗೆ ಕಳುಹಿಸಲು ವ್ಯವಸ್ಥೆ ಮಾಡಿಕೊಂಡು ಸೇವಾಸಿಂಧು ಆ್ಯಪ್ ಮೂಲಕ ಮೊಬೈಲ್ ಗಳಿಗೆ ಸಂದೇಶ ರವಾನಿಸಲಾಗಿತ್ತು.

ಆ ಸಂದೇಶ ಅವರ ಮಧ್ಯೆಯೇ ಫಾರ್ವರ್ಡ್‌ ಆಗಿ ಇಂದು ಪ್ರಯಾಣಕ್ಕೆ ಆಯ್ಕೆ ಆಗದಿದ್ದವರೂ ನೂರಾರು ಸಂಖ್ಯೆಯಲ್ಲಿ ಆಗಮಿಸಿ ಭಾರಿ ದಟ್ಟಣೆ ಉಂಟಾಗಿತ್ತು.

ಚಿಕ್ಕಬಳ್ಳಾಪುರ ಪ್ರವಾಸಕ್ಕೆ ಹೊರಟ್ಟಿದ್ದ ಸಚಿವರು ಭಾರಿ ದಟ್ಟಣೆ ಗಮನಿಸಿ ಸ್ಥಳಕ್ಕೆ ಧಾವಿಸಿ ಗೊಂದಲಕ್ಕೆ ಕಾರಣಗಳನ್ನು ಅಧಿಕಾರಿಗಳಿಂದ ಪಡೆದರು.

ತಕ್ಷಣವೇ ಮೊಬೈಲ್ ಮೂಲಕ ಮುಖ್ಯ ಕಾರ್ಯದರ್ಶಿ ಸಹಿತ ಹಿರಿಯ ಅಧಿಕಾರಿಗಳ ಜತೆ ಮಾತನಾಡಿ ಗೊಂದಲ ಬಗೆಹರಿಸಲು ಕ್ರಮಕೈಗೊಳ್ಳುವಂತೆ ಆದೇಶ ನೀಡಿದರು.

ಈ ಸಂದರ್ಭದಲ್ಲಿ ಮೂರ್ಛೆ ರೋಗದಿಂದ ಬಳಲುತ್ತಿದ್ದ ಇರ್ಷಾದ್ ಎಂಬಾತ ಕುಸಿದು ಬಿದ್ದಾಗ ಆತನ ಬಳಿ ಧಾವಿಸಿದ, ಸ್ವತಃ ವೈದ್ಯರೂ ಆಗಿರುವ ಸಚಿವ ಸಧಾಕರ್ ಅವರು ಪ್ರಾಥಮಿಕ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಆಸ್ಪತ್ರೆಗೆ ಕಳುಹಿಸಿಕೊಟ್ಟರು.

ನಂತರ ಈಶಾನ್ಯ ರಾಜ್ಯಗಳ ಜನರುದ್ದೇಶಿಸಿ ಮಾತನಾಡಿ, ಯಾರೊಬ್ಬರೂ ಆತಂಕ ಪಡುವ ಅಗತ್ಯವಿಲ್ಲ. ಎಲ್ಲರಿಗೂ ಸರ್ಕಾರದ ವೆಚ್ಚದಲ್ಲಿ ಪ್ರಯಾಣಕ್ಕೆ ವ್ಯವಸ್ಥೆ ಮಾಡಲಾಗುವುದು. ಮುಖ್ಯಮಂತ್ರಿ ಅವರು ಅದಕ್ಕೆ ಬೇಕಾದ ಎಲ್ಲಾ ಕ್ರಮಕ್ಕೆ ಸೂಚನೆ ನೀಡಿದ್ದಾರೆ. ನೀವು ನಿಮ್ಮ ಊರಿಗೆ ಹೋಗಲು ಹೆಚ್ಚುವರಿ ಬೋಗಿಗಳನ್ನು ಒದಗಿಸಲು ರೈಲ್ವೆ ಸಚಿವರಿಗೂ ಮನವಿ ಮಾಡಲಾಗುವುದು ಎಂದು ಭರವಸೆ ನೀಡಿದರು.

ಯುಎನ್ಐ ಎಎಚ್ 1242

More News