Tuesday, Jul 23 2019 | Time 12:44 Hrs(IST)
  • ಪದ್ಮ ಪ್ರಶಸ್ತಿಗಳ ಆಯ್ಕೆಯಲ್ಲಿ ಮಹತ್ವದ ಬದಲಾವಣೆ: ರಾಯ್
  • ವಿಧಾನಸಭೆಯಲ್ಲಿ ಗದ್ದಲ, ಮೂವರು ಟಿಡಿಪಿ ಸದಸ್ಯರ ಅಮಾನತು
  • ಕಾಶ್ಮೀರ ಕುರಿತು ಟ್ರಂಪ್ ಹೇಳಿಕೆ: ರಾಜ್ಯಸಭೆಯಲ್ಲಿ ವಿಪಕ್ಷ ಗದ್ದಲ, ಕಲಾಪ ಮುಂದೂಡಿಕೆ
  • ಜಪಾನ್‌ ಓಪನ್‌: ಎರಡನೇ ಸುತ್ತಿಗೆ ಪ್ರವೇಶಿಸಿದ ಅಶ್ವಿನಿ-ರಂಕಿರೆಡ್ಡಿ ಜೋಡಿ
  • ಕಾಶ್ಮೀರ ಸಂಧಾನ ವಿಷಯ : ಭಾರತ ತಲೆಬಾಗಲು ಸಾಧ್ಯವಿಲ್ಲ ಅಧೀರ್
  • ನಮ್ಮ ಮೌನ ವಿಜಯದ ಸಂಕೇತ: ಆರ್ ಅಶೋಕ್
  • ವಿಧಾನಸಭೆ ಕಲಾಪ ಆರಂಭದಲ್ಲಿ ಆಡಳಿತ ಪಕ್ಷಗಳ ಸದಸ್ಯರ ಗೈರು: ಸ್ಪೀಕರ್ ಅಸಮಾಧಾನ
  • ಜಮ್ಮುವಿನಿಂದ ಅಮರನಾಥಕ್ಕೆ ಹೊರಟ 3060 ಯಾತ್ರಾರ್ಥಿಗಳು
  • ಪುಲ್ವಾಮದಲ್ಲಿ ಕಾಶ್ಮೀರಿ ಉದ್ಯಮಿಯ ಮನೆ ಮೇಲೆ ಎನ್‌ಐಎ ದಾಳಿ
  • ಕಲಾಪಕ್ಕೆ ಆಡಳಿತ ಪಕ್ಷಗಳ ಸದಸ್ಯರು ಗೈರು: ಸ್ಪೀಕರ್, ವಿಪಕ್ಷ ನಾಯಕ ಗರಂ
  • ಅಯೋಧ್ಯೆಯಲ್ಲಿ ವಿಶ್ವದಲ್ಲೇ ಅತಿದೊಡ್ಡ ರಾಮನ ಪ್ರತಿಮೆ ನಿರ್ಮಾಣ: ಯೋಗಿ ಆದಿತ್ಯನಾಥ್
  • ಅಮರನಾಥ ಯಾತ್ರೆಗೆ ಹೊರಟ ಹೊಸ ತಂಡ; ಇದುವರೆಗೆ 2 86 ಲಕ್ಷ ಯಾತ್ರಾರ್ಥಿಗಳಿಂದ ದರ್ಶನ
  • ರೊನಾಲ್ಡೊ ಅತ್ಯಾಚಾರದ ಆರೋಪ ಎದುರಿಸುವುದಿಲ್ಲ: ಯುಎಸ್ ಪ್ರಾಸಿಕ್ಯೂಟರ್‌
  • ಮೈತ್ರಿ ಸರ್ಕಾರ ಉಳಿಸಲು ಹೋಗಿ ಸಿದ್ದರಾಮಯ್ಯ ವರ್ಚಸ್ಸು ಹಾಳು: ರೇಣುಕಾಚಾರ್ಯ
  • ಜಪಾನ್‌ ಓಪನ್‌: ಭಾರತದ ಸಾಯಿ ಪ್ರಣೀತ್‌ ಶುಭಾರಂಭ
Karnataka Share

ಗ್ರಾಮ ವಾಸ್ತವ್ಯ- ಸರ್ಕಾರದ ಶೂನ್ಯ ಸಾಧನೆ : ಬಿಜೆಪಿಯಿಂದ ಕಿರು ಹೊತ್ತಿಗೆ

ಗ್ರಾಮ ವಾಸ್ತವ್ಯ- ಸರ್ಕಾರದ ಶೂನ್ಯ ಸಾಧನೆ : ಬಿಜೆಪಿಯಿಂದ ಕಿರು ಹೊತ್ತಿಗೆ
ಗ್ರಾಮ ವಾಸ್ತವ್ಯ- ಸರ್ಕಾರದ ಶೂನ್ಯ ಸಾಧನೆ : ಬಿಜೆಪಿಯಿಂದ ಕಿರು ಹೊತ್ತಿಗೆ

ಬೆಂಗಳೂರು ಜೂನ್ 24(ಯುಎನ್ಐ) ಮುಖ್ಯಮಂತ್ರಿ ಎಚ್ ಡಿ ಕುಮಾರ ಸ್ವಾಮಿ ಅವರ ಗ್ರಾಮ ವಾಸ್ತವ್ಯ ಬಗ್ಗೆ ಹಲವು ವಿಷಯಗಳನ್ನು ಪ್ರಸ್ತಾಪ ಮಾಡಿರುವ ವಿಧಾನಸಭೆಯ ವಿಪಕ್ಷ ನಾಯಕ ಬಿ ಎಸ್ ಯಡಿಯೂರಪ್ಪ ಸರ್ಕಾರದ ವಿವಿಧ ವೈಫಲ್ಯಗಳನ್ನು ಒಳಗೊಂಡಿರುವ ಕಿರು ಹೊತ್ತಿಗೆ ಬಿಡುಗಡೆ ಮಾಡಿದ್ದಾರೆ.

ಪಕ್ಷ ಇತರೆ ನಾಯಕರಾದ ಪರಿಷತ್ ಸದಸ್ಯ ಎನ್ ರವಿಕುಮಾರ್, ಡಾ. ಎ ಬಿ ಮಾಲಕರೆಡ್ಡಿ, ಲೇಹರ್ ಸಿಂಗ್, ವಿಜಯೇಂದ್ರ ಅವರ ಜೊತೆ ಬೆಂಗಳೂರಿನಲ್ಲಿ ಸುದ್ದಿಗಾರರ ಜೊತೆ ಮಾತನಾಡಿ ಸರ್ಕಾರಕ್ಕೆ ಪ್ರಮುಖವಾಗಿ 10 ಪ್ರಶ್ನೆಗಳಿಗೆ ಉತ್ತರಿಸುವಂತೆ ಸವಾಲು ಹಾಕಿದ್ದಾರೆ.

ಬಿಜೆಪಿ ಜೊತೆ ಸೇರಿ ಸರ್ಕಾರ ಮಾಡಿದ್ದ ಸಮಯದಲ್ಲಿ ನಡೆಸಿದ ಗ್ರಾಮವಾಸ್ತವ್ಯದ ಚಿತ್ರಣ ನೀಡಿದ್ದು ಇದನ್ನು ನೀವೆ ಹೋಗಿ ಖುದ್ದಾಗಿ ಪರಿಶೀಲನೆ ಮಾಡಿ ನೋಡಿ ಎಂದು ಸವಾಲು ಹಾಕಿದ್ದಾರೆ.ಗ್ರಾಮ ವಾಸ್ತವ್ಯ ದಿಂದಲೇ ಗ್ರಾಮದ ಸಮಸ್ಯೆ ಗಳು ಪರಿಹಾರವಾಗಲಿದೆ ನಿಮ್ಮ ನಂಬಿಕೆ ಎಷ್ಟು ಸರಿಯಿದೆ. ?

ಕಾಂಗ್ರೆಸ್ ಜೆಡಿಎಸ್ ನ ಸಮ್ಮಿಶ್ರ ಸರ್ಕಾರದ ನಾಯಕರು, ಸಚಿವರುಗಳ ಬೀದಿ ಜಗಳ ಟಿವಿ ಹಾಗೂ ಪತ್ರಿಕೆಗಳಲ್ಲಿ ನೋಡಿ ಜನರು ಶಾಪ ಹಾಕುತ್ತಿದ್ದಾರೆ. ರಾಜ್ಯದಲ್ಲಿ ಅಭಿವೃದ್ಧಿ ಶೂನ್ಯವಾಗಿದೆ. ಸರ್ಕಾರದ ಇಲಾಖೆಗಳಲ್ಲಿ ನಿತ್ಯ ಹಗಲು ಲೂಟಿ ನಡೆಯುತ್ತಿದೆ. ಆದರೂ ಕುಮಾರಸ್ವಾಮಿ ರಾಜ್ಯದ ಅಭಿವೃದ್ಧಿ ಮಾಡುತ್ತೇನೆಂದು ಭಾಷಣ ಬಿಗಿಯುತ್ತಿದ್ದಾರೆ. ಇಂತಹ ಭ್ರಮೆಯಿಂದ ಜನರಿಗೆ ಮುಕ್ತಿ ಯಾವಾಗ ಎಂದು ಪ್ರಶ್ನೆ ಮಾಡಿದ್ದಾರೆ.

ಬಿಎಸ್‌ವೈ ಪ್ರಶ್ನೆಗಳ ಸರಮಾಲೆ ಇಂತಿದೆ.



1 ರೈತರ ಆತ್ಮಹತ್ಯೆ ಬಗ್ಗೆ ನಿಮಗೆ ಮಾಹಿತಿ ಇದೆಯೇ ?

2 ರೈತರ ಸಂಪೂರ್ಣ ಸಾಲಮನ್ನಾ ಮಾಡಿದ್ದೀರಾ?

3ರಾಜ್ಯದಲ್ಲಿ ಬರ ಇದ್ದರೂ , ನೀವು ಯಾವುದೇ ಸೂಕ್ತ ಕ್ರಮ ಕೈಗೊಂಡಿಲ್ಲ ಯಾಕೆ?

4 ಐಎಂಎ ಮಾಲೀಕನ ಜೊತೆ ಕುಳಿತು ಬಿರಿಯಾನಿ ತಿಂದ ನೀವು, ವಂಚನೆಗೆ ಒಳಗಾದವರಿಗೆ ಯಾವ ರೀತಿ ನ್ಯಾಯ ಕೊಡುತ್ತೀರಿ ?

5 ಐಎಂಎ ಹಗರಣದಲ್ಲಿ 6 ಸಾವಿರ ಕೋಟಿ ಅಲ್ಪಸಂಖ್ಯಾತ ಬಡ ಜನರ ಹಣದೊಂದಿಗೆ ಪರಾರಿಯಾದ ಮನ್ಸೂರ್ ಅಹಮದ್ ಜೊತೆ ಬಿರಿಯಾನಿ ಊಟ ಎಷ್ಟರ ಮಟ್ಟಿಗೆ ಸರಿ?



6. ಐಎಂಎ ಹಗರಣವನ್ನು ಸಿಬಿಐಗೆ ವಹಿಸಬೇಕು ಎಂದು ಶೋಷಣೆಗೊಳಗಾಗಿರುವ ಅಲ್ಪಸಂಖ್ಯಾತರು, ಕೂಲಿ ಕಾರ್ಮಿಕರು, ಹಿರಿಯರು ಮತ್ತು ಅಲ್ಲದೇ ವಿಪಕ್ಷವೂ ಕೂಡ ಬೇಡಿಕೆಯನ್ನು ಮಂಡಿಸಿದರೂ ಸಿಬಿಐ ತನಿಖೆಗೆ ನೀಡುತ್ತಿಲ್ಲವೇಕೆ?

7. ಸ್ಟಾರ್ ಹೋಟೆಲ್ ನಲ್ಲಿ ಆಡಳಿತ ನಡೆಸುವಾಗಲೇ 1500 ರೈತರು ಆತ್ಮಹತ್ಯೆಗೆ ಶರಣಾಗಿದ್ದು ಇದಕ್ಕೆ ನಿಮ್ಮ ಉತ್ತರವೇನು?

8. ಬಳ್ಳಾರಿ ಜಿಲ್ಲೆಯ ಜಿಂದಾಲ್ ಕಂಪನಿಗೆ 3,667 ಎಕರೆ ಜಮೀನನ್ನು ಕೇವಲ 1.22 ಲಕ್ಷ ರೂ.ಗೆ 1 ಎಕರೆಯಂತೆ ಅತಿ ಕನಿಷ್ಠ ಬೆಲೆಗೆ ಮಾರಾಟ ಮಾಡುವ ಸಂಬಂಧ ತಾವು ಪಡೆದಿರುವ ಕಿಕ್ ಬ್ಯಾಕ್ ಎಷ್ಟು?

9. ದೇಶದಲ್ಲಿ ವಿಜ್ಞಾನ, ತಂತ್ರಜ್ಞಾನ ಇಷ್ಟೊಂದು ಪ್ರಗತಿಯಲ್ಲಿದ್ದ ಸಂದರ್ಭದಲ್ಲಿ ಅಧಿಕಾರಿಗಳು, ಸರ್ಕಾರಿ ಉದ್ಯೋಗಿಗಳು, ಮಾಧ್ಯಮಗಳಿಂದ ಮಾಹಿತಿ ಪಡೆದು ಸಮಸ್ಯೆಗಳಿಗೆ ಪರಿಹಾರ ನೀಡುವುದನ್ನು ಬಿಟ್ಟು ಗ್ರಾಮ ವಾಸ್ತವ್ಯ ಮಾಡಿಯೇ ಸಮಸ್ಯೆಗಳಿಗೆ ಪರಿಹಾರ ನೀಡಬೇಕೆಂಬ ಹಠ ಏಕೆ? ಇದು ಪ್ರಚಾರದ ಗಿಮಿಕ್ ಅಲ್ಲವೇ? ಹಿಂದಿನ ಗ್ರಾಮ ವಾಸ್ತವ್ಯದ ಸಾಧನೆಯ ಶ್ವೇತ ಪತ್ರ ನೀಡುವಿರಾ?

10. ಮುಖ್ಯಮಂತ್ರಿಗಳೇ ದಿಕ್ಕು ತಪ್ಪಿದ ಆಡಳಿತ ಹಾಗೂ ದಿನನಿತ್ಯ ನಿಮ್ಮ ಮೈತ್ರಿ ಪಕ್ಷಗಳ ಬೀದಿ ಜಗಳದಿಂದ ಕಂಗೆಟ್ಟಿರುವ ರಾಜ್ಯದ ಜನರಿಗೆ ಮುಕ್ತಿ ಯಾವಾಗ?

ರೈತರ 48 ಸಾವಿರ ಕೋಟಿ ಸಾಲ ಮನ್ನಾ 24 ಗಂಟೆಗಳಲ್ಲಿ ಮಾಡುತ್ತೇನೆಂದು ಹೇಳಿದ್ದ ತಾವು 13 ತಿಂಗಳಾದರೂ ರೈತರ ಸಾಲ ಮನ್ನಾ ಮಾಡಲಿಲ್ಲ, ರೈತರಿಗೆ ಹೊಸ ಸಾಲ ನೀಡುತ್ತಿಲ್ಲ, ಋಣಮುಕ್ತ ಪತ್ರ ಕೊಡುತ್ತೇನೆಂದು ಭಾಷಣ ಬಿಗಿಯುತ್ತೀರಿ? ಕಣ್ಣೀರು ಸುರಿಸುತ್ತೀರಿ ಇಂತಹ ನಾಟಕವನ್ನು ಜನರು ಇನ್ನು ಎಷ್ಟು ಕಾಲ ನಂಬಬೇಕು?

ರಾಜ್ಯಾದ್ಯಂತ ಆವರಿಸಿರುವ ಬರದಿಂದ ಜನರಿಗೆ ಕುಡಿಯುವ ನೀರು ಸಿಗುತ್ತಿಲ್ಲ, ದನಕರುಗಳಿಗೆ ಪಶು-ಪಕ್ಷಿಗಳಿಗೆ ಮೇವು ನೀರಿಲ್ಲದ ಪರಿಸ್ಥಿತಿಯಲ್ಲಿ ರಾಜ್ಯದ ಹಿಂದುಳಿದ ಜಿಲ್ಲೆಗಳ ಜನರು ಉದ್ಯೋಗಕ್ಕಾಗಿ ಬೇರೆ ರಾಜ್ಯಗಳಿಗೆ ಹೋಗುತ್ತಿದ್ದಾರೆ. ಇಂತಹ ಸಮಯದಲ್ಲಿ ಗ್ರಾಮ ವಾಸ್ತವ್ಯದ ನಾಟಕ ಸರಿಯೇ?

ರಾಜ್ಯದಲ್ಲಿ ಸಾವಿರಾರು ಶಾಲೆ-ಕಾಲೇಜುಗಳ ಸುಣ್ಣ-ಬಣ್ಣ ಶೌಚಾಲಯಗಳಿಗೆ ಹಣವಿಲ್ಲ. ವಿಶ್ವವಿದ್ಯಾಲಯಗಳಿಗೆ ಹಣಕಾಸಿನ ನೆರವು ನೀಡುತ್ತಿಲ್ಲ, 40 ಸಾವಿರಕ್ಕೂ ಹೆಚ್ಚು ಶಿಕ್ಷಕರ ಹುದ್ದೆಗಳು ಖಾಲಿ ಇವೆ. ಗುಣಮಟ್ಟದ ಶಿಕ್ಷಣ ಅಧೋಗತಿಗೆ ತಲುಪಿದೆ. 4 ತಿಂಗಳುಗಳಿಂದ ಶಿಕ್ಷಕರಿಗೆ, ವೈದ್ಯರುಗಳಿಗೆ ವೇತನ ಕೊಟ್ಟಿಲ್ಲ , ಮಕ್ಕಳಿಗೆ ಸಮವಸ್ತ್ರ, ಸೈಕಲ್, ಶೂ, ಸಿಕ್ಕಿಲ್ಲ. ಈಗ ಶಾಲಾ ಸಮಸ್ಯೆಗಳಿಗೆ ಪರಿಹಾರ ನೀಡಬೇಕೆಂಬ ಜ್ಞಾನೋದಯ ಸ್ಟಾರ್ ಹೋಟೆಲಿನಲ್ಲಿ ಆಯಿತೇ?

ನಿಮ್ಮ ಕನಸಿನ ಬಜೆಟ್ ಕೆಲವೇ ಬೆರಳೆಣಿಕೆಯ ಜಿಲ್ಲೆಗಳಿಗೆ ಸೀಮಿತವಾಗಿ ಈಗ ಉತ್ತರ ಕರ್ನಾಟಕ ಅಭಿವೃದ್ಧಿ ಮಾಡುವೆ ಎಂದು ಗ್ರಾಮ ವಾಸ್ತವ್ಯ ಮಾಡುವ ನೀವು ಉತ್ತರ ಕರ್ನಾಟಕದ ಅಭಿವೃದ್ಧಿಗೆ ಬಜೆಟ್ ನಲ್ಲಿ ಎಷ್ಟು ಹಣ ಇಟ್ಟಿದ್ದೀರಿ? ಸರ್ಕಾರದಲ್ಲಿ ನಿಮ್ಮ ಘೋಷಣೆಗಳನ್ನು ಪೂರ್ತಿ ಮಾಡಲು ಹಣ ಎಲ್ಲಿಂದ ತರುತ್ತೀರಿ? ಎಂದು ಯಡಿಯೂರಪ್ಪ ಪ್ರಶ್ನಿಸಿದ್ದಾರೆ.

ಯುಎನ್ಐ ಕೆಎಎಸ್ಆರ್ ಎಎಂ ಎಸ್ ಆರ್

More News

25ರಂದು 'ಅನಲ' ತಂಡದಿಂದ ಸಹಗಮನ ನಾಟಕ ಪ್ರದರ್ಶನ

23 Jul 2019 | 11:43 AM

 Sharesee more..
ಮೈತ್ರಿ ಸರ್ಕಾರ ಉಳಿಸಲು ಹೋಗಿ ಸಿದ್ದರಾಮಯ್ಯ ವರ್ಚಸ್ಸು ಹಾಳು: ರೇಣುಕಾಚಾರ್ಯ

ಮೈತ್ರಿ ಸರ್ಕಾರ ಉಳಿಸಲು ಹೋಗಿ ಸಿದ್ದರಾಮಯ್ಯ ವರ್ಚಸ್ಸು ಹಾಳು: ರೇಣುಕಾಚಾರ್ಯ

23 Jul 2019 | 11:13 AM

ಬೆಂಗಳೂರು, ಜು 23 (ಯುಎನ್ಐ) ಸರ್ಕಾರ ಉಳಿಸಲು ಹೋಗಿ ಕಾಂಗ್ರೆಸ್ ನಾಯಕರಾದ ಸಿದ್ದರಾಮಯ್ಯ, ಡಿ ಕೆ ಶಿವಕುಮಾರ್ ಅವರ ವರ್ಚಸ್ಸು ಹಾಳಾಗುತ್ತಿದೆ ಎಂದು ಬಿಜೆಪಿ ಶಾಸಕ ಎಂ ಪಿ ರೇಣುಕಾಚಾರ್ಯ ಹೇಳಿದ್ದಾರೆ.

 Sharesee more..
ಇವತ್ತೇ ಕಡೆ  ಇಂದು ಎಲ್ಲಾ ಮುಕ್ತಾಯವಾಗುತ್ತದೆ - ಸ್ಪೀಕರ್ ರಮೇಶ್ ಕುಮಾರ್

ಇವತ್ತೇ ಕಡೆ ಇಂದು ಎಲ್ಲಾ ಮುಕ್ತಾಯವಾಗುತ್ತದೆ - ಸ್ಪೀಕರ್ ರಮೇಶ್ ಕುಮಾರ್

23 Jul 2019 | 11:11 AM

ಬೆಂಗಳೂರು, ಜು 23 (ಯುಎನ್ಐ) ಇವತ್ತೇ ಕಡೆ, ಇಂದು ಎಲ್ಲಾ ಮುಕ್ತಾಯವಾಗುತ್ತದೆ  ಎಂದು ಸ್ಪೀಕರ್ ರಮೇಶ್ ಕುಮಾರ್ ವಿಶ್ವಾಸಮತ ಯಾಚನೆ ನಿರ್ಣಯದ ಬಗ್ಗೆ ಕೇಳಿದ ಪ್ರಶ್ನೆಗೆ ಬಹಳ ಸ್ಪಷ್ಟವಾಗಿ ಉತ್ತರಿಸಿದ್ದಾರೆ

 Sharesee more..
ಕಲಾಪಕ್ಕೆ ಆಡಳಿತ ಪಕ್ಷಗಳ ಸದಸ್ಯರು ಗೈರು: ಸ್ಪೀಕರ್, ವಿಪಕ್ಷ ನಾಯಕ ಗರಂ

ಕಲಾಪಕ್ಕೆ ಆಡಳಿತ ಪಕ್ಷಗಳ ಸದಸ್ಯರು ಗೈರು: ಸ್ಪೀಕರ್, ವಿಪಕ್ಷ ನಾಯಕ ಗರಂ

23 Jul 2019 | 11:09 AM

ಬೆಂಗಳೂರು, ಜು 23 (ಯುಎನ್ಐ) ವಿಧಾನಸಭೆಯ ಕಲಾಪ ನಿಗದಿಯಂತೆ ಇಂದು ಬೆಳಗ್ಗೆ 10 ಗಂಟೆಗೆ ಪ್ರಾರಂಭಗೊಂಡಾಗ ಆಡಳಿತ ಪಕ್ಷಗಳ ಮೂವರು ಸದಸ್ಯರನ್ನು ಹೊರತುಪಡಿಸಿ ಯಾರೂ ಹಾಜರಾಗದ್ದನ್ನು ಕಂಡ ಸ್ಪೀಕರ್ ರಮೇಶ್ ಕುಮಾರ್ ಗರಂ ಆದ ಘಟನೆ ನಡೆಯಿತು

 Sharesee more..