Sunday, Aug 9 2020 | Time 14:10 Hrs(IST)
 • ತಿರುಪತಿ ತಿಮ್ಮಪ್ಪನ ವಾರ್ಷಿಕ ಬಜೆಟ್ ೩,೨೦೦ ಕೋಟಿ
 • ಕೋವಿಡ್‌; ಸಿದ್ದರಾಮಯ್ಯ ಅವರಿಗೆ ಕರೆ ಮಾಡಿ ಆರೋಗ್ಯ ವಿಚಾರಿಸಿದ ರಾಹುಲ್‌ ಗಾಂಧಿ
 • ಕೃಷಿ ವಲಯದ 1 ಲಕ್ಷ ಕೋಟಿ ರೂ ಮೊತ್ತದ ಯೋಜನೆಗೆ ಮೋದಿ ಚಾಲನೆ; ಪಿಎಂ-ಕಿಸಾನ್‌ 6ನೇ ಕಂತಿನ ಬಿಡುಗಡೆ
 • ಪಿಎಂ ಕಿಸಾನ್ ಸಮ್ಮಾನ್ ಯೋಜನೆಗೆ ಹಣ ಬಿಡುಗಡೆ : ಹಾಸನದ ಕೃಷಿ ಪತ್ತಿನ ಸಹಕಾರ ಸಂಘದ ಸದಸ್ಯರ ಜೊತೆ ಪ್ರಧಾನಿ ಸಂವಾದ
 • ಆಯೋಧ್ಯೆ ಮಾದರಿಯಲ್ಲಿ ನೇಪಾಳದಲ್ಲೂ ಶ್ರೀರಾಮ ಮಂದಿರ !
 • ಕೇರಳದ 7 ಜಿಲ್ಲೆಗಳಲ್ಲಿ ರೆಡ್‌ ಅಲರ್ಟ್ ಘೋಷಣೆ
 • ಮುಖ್ಯಕಾರ್ಯದರ್ಶಿಗೆ ಕರೆ ಮಾಡಿ ಅತಿವೃಷ್ಠಿ,ಪ್ರವಾಹದ ಮಾಹಿತಿ ಪಡೆದ ಮುಖ್ಯಮಂತ್ರಿ ಯಡಿಯೂರಪ್ಪ
 • ಶ್ರೀಲಂಕಾ ಪ್ರಧಾನಿಯಾಗಿ ಮಹೀಂದ್ರ ರಾಜಪಕ್ಷ ಪ್ರಮಾಣವಚನ ಸ್ವೀಕಾರ
 • ಅಮಿತ್‌ ಶಾ ಕೋವಿಡ್‌ ವರದಿ ನೆಗೆಟೀವ್‌; ಮನೋಜ್ ತಿವಾರಿ ಟ್ವೀಟ್
 • ಕಳೆದ ವರ್ಷದ ಅತಿವೃಷ್ಟಿ ಹಾನಿ, ಪರಿಹಾರದ ವಿವರ ಕೇಳಿದ ಸಿದ್ದರಾಮಯ್ಯ
 • ದೇಶದಲ್ಲಿ ಕೊರೊನಾ ಸೋಂಕಿನ ಸಂಖ್ಯೆ 21 5 ಲಕ್ಷಕ್ಕೆ ಏರಿಕೆ
 • ಉತ್ತರ ಪ್ರದೇಶ ಎಸ್‍ಟಿಎಫ್‍ ಪಡೆಯಿಂದ ಮಾಫಿಯಾ ಶಾರ್ಪ್-ಶೂಟರ್ ನ ಗುಂಡಿಕ್ಕಿ ಹತ್ಯೆ
 • ಕ್ವಿಟ್ ಇಂಡಿಯಾ ಚಳವಳಿ: ಸ್ವಾತಂತ್ರ್ಯ ಹೋರಾಟಗಾರರಿಗೆ ಮುಖ್ಯಮಂತ್ರಿ ಗೌರವ ನಮನ
 • ಟ್ವಿಟರ್‌-ಟಿಕ್‌ಟಾಕ್‌ ವಿಲೀನ?-ಪ್ರಾಥಮಿಕ ಮಾತುಕತೆ ಹಂತದಲ್ಲಿ ಪ್ರಸ್ತಾವನೆ
 • ವಿಜಯವಾಡದ ಕೋವಿಡ್ ಆರೈಕೆ ಕೇಂದ್ರದಲ್ಲಿ ಬೆಂಕಿ ಘಟನೆ: ಶೋಕ ವ್ಯಕ್ತಪಡಿಸಿದ ಪ್ರಧಾನಿ
Karnataka Share

ರಾಜ್ಯದಲ್ಲಿ ಒಂದೇ ದಿನ 216 ಕೊರೋನ ಪ್ರಕರಣಗಳು; 2 ಸಾವಿರ ದಾಟಿದ ಕೊರೋನಾ ಸೋಂಕಿತರ ಸಂಖ್ಯೆ

ರಾಜ್ಯದಲ್ಲಿ ಒಂದೇ ದಿನ 216 ಕೊರೋನ ಪ್ರಕರಣಗಳು; 2 ಸಾವಿರ ದಾಟಿದ ಕೊರೋನಾ ಸೋಂಕಿತರ ಸಂಖ್ಯೆ
ರಾಜ್ಯದಲ್ಲಿ ಒಂದೇ ದಿನ 216 ಕೊರೋನ ಪ್ರಕರಣಗಳು; 2 ಸಾವಿರ ದಾಟಿದ ಕೊರೋನಾ ಸೋಂಕಿತರ ಸಂಖ್ಯೆ

ಬೆಂಗಳೂರು, ಮೇ 23 (ಯುಎನ್ಐ) ರಾಜ್ಯದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಶರವೇಗದಲ್ಲಿ ಏರುತ್ತಿದ್ದು 2 ಸಾವಿರದ ಗಡಿ ದಾಟಿದೆ. ಶನಿವಾರ 24 ಗಂಟೆಗಳಲ್ಲಿ ಒಟ್ಟು 216 ಜನರಲ್ಲಿ ಸೊಂಕು ಪತ್ತೆಯಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 1959ಕ್ಕೇರಿಕೆಯಾಗಿದೆ.ಬೆಂಗಳೂರು ನಿವಾಸಿಯಾಗಿದ್ದ 32 ವರ್ಷದ ವ್ಯಕ್ತಿ ಕೊರೋನಾ ಸೋಂಕಿಗೆ ಬಲಿಯಾಗಿದ್ದಾರೆ. ಇವರು ಮೇ 19ರಂದು ಉಸಿರಾಟದ ತೊಂದರೆಯಿಂದ ನಿಗದಿತ ಆಸ್ಪತ್ರೆಗೆ ದಾಖಲಾಗಿದ್ದರು. ಇವರು ಶನಿವಾರ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಇವರು ದೀರ್ಘಕಾಲೀನ ಕ್ಷಯದಿಂದ ಬಳಲುತ್ತಿದ್ದರು ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.ಇವರು ಇಲ್ಲಿಯವರೆಗೆ ರಾಜ್ಯದಲ್ಲಿ ಕೊರೋನದಿಂದ ಮೃತಪಟ್ಟ ಅತಿ ಕಿರಿಯ ರೋಗಿಯಾಗಿದ್ದಾರೆ. ಇದರಿಂದ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 43 ಕ್ಕೆ ಏರಿಕೆಯಾಗಿದೆ.ಯಾದಗಿರಿ ಜಿಲ್ಲೆಯೊಂದರಲ್ಲೇ ಬರೋಬ್ಬರಿ 72 ಪ್ರಕರಣಗಳು ಪತ್ತೆಯಾಗಿವೆ.ಗದಗದಲ್ಲಿ 15 ಮಂದಿಗೆ ಸೋಂಕು ತಗುಲಿದೆ, ರಾಯಚೂರಿನಲ್ಲಿ 40 ಪ್ರಕರಣಗಳು ವರದಿಯಾಗಿವೆ.ಚಿಕ್ಕಬಳ್ಳಾಪುರದಲ್ಲಿ 26, ಮಂಡ್ಯದಲ್ಲಿ 28, ಬೆಂಗಳೂರಿನಲ್ಲಿ 4, ಕಲಬುರಗಿಯಲ್ಲಿ 1, ಬೆಳಗಾವಿಯಲ್ಲಿ 1, ದಾವಣಗೆರೆಯಲ್ಲಿ 3, ಯಾದಗಿರಿಯಲ್ಲಿ 72, ಗದಗದಲ್ಲಿ 15, ಉತ್ತರ ಕನ್ನಡದಲ್ಲಿ 2, ಹಾಸನದಲ್ಲಿ 4, ಬೀದರ್ ನಲ್ಲಿ 3, ದಕ್ಷಿಣ ಕನ್ನಡದಲ್ಲಿ 3, ಧಾರವಾಡದಲ್ಲಿ 5. ಬಳ್ಳಾರಿಯಲ್ಲಿ 3, ಕೋಲಾರದಲ್ಲಿ 3 ಪ್ರಕರಣಗಳು ದೃಢಪಟ್ಟಿವೆ.ಈ ಪೈಕಿ 200ಕ್ಕೂ ಸೋಂಕಿತರಿಗೆ ಮುಂಬೈ ನಂಟಿದೆ ಎಂದು ಆರೋಗ್ಯ ಇಲಾಖೆ ಪ್ರಕಟಣೆ ತಿಳಿಸಿದೆ.

ಯುಎನ್ಐ ಎಸ್ಎಚ್ 1759

More News