Tuesday, Nov 19 2019 | Time 06:36 Hrs(IST)
  • 15 ಕ್ಷೇತ್ರಗಳಲ್ಲಿ ನಾಮಪತ್ರ ಸಲ್ಲಿಕೆ ಮುಕ್ತಾಯ: ಗೋಕಾಕ್ ನಿಂದ ಸತೀಶ್ ಜಾರಕಿಹೊಳಿ,ಹಿರೇಕೆರೂರಿ ನಿಂದ ಸೃಷ್ಠಿ ಪಾಟೀಲ್,ಮಹಾಲಕ್ಷ್ಮಿ ಲೇಔಟ್ ನಿಂದ ಹೇಮಲತಾ ನಾಮಪತ್ರ ಸಲ್ಲಿಕೆ
Karnataka Share

ಸಂವಿಧಾನ, ಕಾನೂನಿಗೆ ಅಪಚಾರವೆಸಗುವುದಿಲ್ಲ- ರಮೇಶ್ ಕುಮಾರ್

ಸಂವಿಧಾನ, ಕಾನೂನಿಗೆ ಅಪಚಾರವೆಸಗುವುದಿಲ್ಲ- ರಮೇಶ್ ಕುಮಾರ್
ಸಂವಿಧಾನ, ಕಾನೂನಿಗೆ ಅಪಚಾರವೆಸಗುವುದಿಲ್ಲ- ರಮೇಶ್ ಕುಮಾರ್

ಬೆಂಗಳೂರು, ಜು 12 (ಯುಎನ್ಐ) ನಾನು ಸಂವಿಧಾನದಡಿ ನೇಮಕಗೊಂಡ ಪ್ರತಿನಿಧಿ, ನನಗೆ ಸಂವಿಧಾನವೇ ಮುಖ್ಯ, ಸಂವಿಧಾನ, ಕಾನೂನಿಗೆ ಅಪಚಾರವೆಸಗುವುದಿಲ್ಲ ಎಂದು ಸ್ಪೀಕರ್ ರಮೇಶ್ ಕುಮಾರ್ ಖಡಕ್ಕಾಗಿ ಹೇಳಿದ್ದಾರೆ

ಬೆಂಗಳೂರಿನಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, ಜನರ ನೋವಿಗೆ ಗೌರವ ಕೊಡುವುದು ನನ್ನ ಆದ್ಯ ಕರ್ತವ್ಯ, ಅದರಿಂದ ನಾನು ವಿಮುಖನಾಗುವುದಿಲ್ಲ, ಸಂವಿಧಾನದಲ್ಲಿ ಹೇಳಿರುವ ನಿಯಮಗಳಿಗೆ ನಾನು ಅಪಚಾರ ಮಾಡುವುದಿಲ್ಲ, ಸಂವಿಧಾನದ ಮೇಲೆ ಅತ್ಯಾಚಾರ ಮಾಡುವುದಿಲ್ಲ, ಯಾರನ್ನಾದರೂ ಖುಷಿಪಡಿಸಲು ಅಥವಾ ಅಸಂತೋಷಪಡಿಸುವುದಕ್ಕೆ ನಾನು ಸಿದ್ಧನಿಲ್ಲ, ಯಾರಾದರೂ ಹೇಳಿದ ರೀತಿ ನೃತ್ಯ ಮಾಡಲು ನಾನು ನೃತ್ಯಗಾರನೂ ಅಲ್ಲ, ಸಂವಿಧಾನ ಮಾತ್ರ ನನಗೆ ಮುಖ್ಯ ಎಂದು ಹೇಳಿದ್ದಾರೆ

ಶಾಸಕರು ಕ್ರಮಬದ್ಧವಾಗಿ ರಾಜೀನಾಮೆ ಸಲ್ಲಿಸದ ಕಾರಣ ನಿನ್ನೆ ಮತ್ತೊಮ್ಮೆ ಕ್ರಮಬದ್ಧವಾಗಿ ರಾಜೀನಾಮೆ ಸಲ್ಲಿಸಿದ್ದಾರೆ. ಅವರಿಗೆ ವಿವರಣೆ ನೀಡುವಂತೆ ಕ್ರಮಸಂಖ್ಯೆ ಪ್ರಕಾರ ದಿನಾಂಕ ಮತ್ತು ಸಮಯ ನೀಡಲಾಗಿದೆ ಎಂದು ರಮೇಶ್ ಕುಮಾರ್ ಸ್ಪಷ್ಟಪಡಿಸಿದರು.

ಸುಪ್ರೀಂಕೋರ್ಟ್‌ ಯಾವ ತೀರ್ಪು ನೀಡುತ್ತದೆ ನೋಡೋಣ. ಅದರ ತೀರ್ಪನ್ನು ಪಾಲಿಸೋಣ. ತಪ್ಪು ತೀರ್ಪು ನೀಡಿದರೆ, ಅದರ ಬಗ್ಗೆ ವಿವರಣೆ ಕೇಳೋಣ, ದೇಶದಲ್ಲಿ ಒಂದು ಸುಪ್ರೀಂಕೋರ್ಟ್ ಇರಬೇಕು, ದೇಶ ಉಳಿಯಬೇಕು, ಶಾಸಕಾಂಗ, ನ್ಯಾಯಾಂಗ ಕೂಡ ಉಳಿಯಬೇಕು ಎಂದು ಮಾರ್ಮಿಕವಾಗಿ ಹೇಳಿದರು.

ಕೈಮುಗಿಯುವ ಸೋಗಿನಲ್ಲಿ ಗಾಂಧೀಜಿಯನ್ನು ಕೊಂದ ದೇಶವಿದು, ಇನ್ನು ರಮೇಶ್ ಕುಮಾರ್ ಅವರನ್ನು ಬಿಡುತ್ತಾರಾ, ಗಾಂಧಿಯನ್ನು ಕೊಂದರೂ ಅವರ ತತ್ವವನ್ನು ಕೊಲ್ಲಲು ಯಾರಿಂದಲೂ ಸಾಧ್ಯವಾಗಿಲ್ಲ. ನಾನು ಗಾಂಧಿ ತತ್ವದಡಿ ಬದುಕುತ್ತಿರುವ ವ್ಯಕ್ತಿ. ನನ್ನ ವಿರುದ್ಧವೂ ಬಹಳ ದಿನಗಳಿಂದ ತೇಜೋವಧೆ ಮಾಡುವ ಕೆಲಸ ನಡೆಯುತ್ತಿದೆ ಎಂದು ಆರೋಪಿಸಿದರು.

ಯುಎನ್ಐ ಎಎಚ್ ಕೆಆರ್‌ 1142

More News
ಚಿಕ್ಕಬಳ್ಳಾಪುರ ಉಪಕದನದ ಅಖಾಡಕ್ಕೆ ಡಿ ಶಿ ವಕುಮಾರ್ ಪ್ರವೇಶ

ಚಿಕ್ಕಬಳ್ಳಾಪುರ ಉಪಕದನದ ಅಖಾಡಕ್ಕೆ ಡಿ ಶಿ ವಕುಮಾರ್ ಪ್ರವೇಶ

18 Nov 2019 | 9:15 PM

ಚಿಕ್ಕಬಳ್ಳಾಪುರ, ನ.18(ಯುಎನ್ಐ) ಚಿಕ್ಕಬಳ್ಳಾಪುರ ಕ್ಷೇತ್ರದ ಉಪ ಚುನಾವಣೆಗೆ ಕಾಂಗ್ರೆಸ್‌ ಅಭ್ಯರ್ಥಿ ನಂದಿ ಅಂಜಿನಪ್ಪ ನಾಮಪತ್ರ ಸಲ್ಲಿಕೆ ಕಾರ್ಯಕ್ರಮದಲ್ಲಿ ಭಾಗವಹಿಸುವ ಮೂಲಕ ಮಾಜಿ ಸಚಿವ ಕಾಂಗ್ರೆಸ್ ನ ಹಿರಿಯ ನಾಯಕ ಡಿ.ಕೆ.ಶಿವಕುಮಾರ್ ಚುನಾವಣಾ ಅಖಾಡಕ್ಕೆ ಪ್ರವೇಶ ಮಾಡಿದ್ದಾರೆ.

 Sharesee more..
ಡಿ 9ರ ಬಳಿಕ ರಾಜ್ಯದಲ್ಲಿ ಬಿಜೆಪಿಗೆ‌ ಅಸ್ತಿತ್ವವಿಲ್ಲ: ಕುಮಾರಸ್ವಾಮಿ ಭವಿಷ್ಯ

ಡಿ 9ರ ಬಳಿಕ ರಾಜ್ಯದಲ್ಲಿ ಬಿಜೆಪಿಗೆ‌ ಅಸ್ತಿತ್ವವಿಲ್ಲ: ಕುಮಾರಸ್ವಾಮಿ ಭವಿಷ್ಯ

18 Nov 2019 | 9:04 PM

ಚಿಕ್ಕಬಳ್ಳಾಪುರ, ನ.18 (ಯುಎನ್ಐ) ಮುಂದಿನ ದಿನಗಳಲ್ಲಿ ಯಾವುದೇ ಕಾರಣಕ್ಕೂ ರಾಜ್ಯದಲ್ಲಿ ಬಿಜೆಪಿ ಪಕ್ಷ ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ, ಮುಂದಿನ ಡಿ.9ರಂದು ಹೊರಬೀಳಲಿರುವ ಉಪಚುನಾವಣೆಯ ಫಲಿತಾಂಶದ ಬಳಿಕ ರಾಜ್ಯದಲ್ಲಿ ಬಿಜೆಪಿಗೆ ಅಸ್ತಿತ್ವವಿರುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಭವಿಷ್ಯ ನುಡಿದಿದ್ದಾರೆ.

 Sharesee more..