Sunday, Sep 19 2021 | Time 21:38 Hrs(IST)
Karnataka

ಗೌರಿ, ಗಣೇಶ ಹಬ್ಬ, ಸಾವಿರ ಹೆಚ್ಚುವರಿ ಬಸ್ ಸೇವೆ

08 Sep 2021 | 5:45 PM

ಬೆಂಗಳೂರು, ಸೆ 8 (ಯುಎನ್ಐ) ಗೌರಿ, ಗಣೇಶ ಹಬ್ಬದ ಹಿನ್ನೆಲೆಯಲ್ಲಿ ಪ್ರಯಾಣಿಕರ ಅನುಕೂಲಕ್ಕಾಗಿ ಕೆಎಸ್ ಆರ್ ಟಿಸಿ ಒಂದು ಸಾವಿರ ಹೆಚ್ಚುವರಿ ಬಸ್ ಗಳ ಸೌಲಭ್ಯ ಕಲ್ಪಿಸಿದೆ ಪ್ರಯಾಣಿಕರು ಮುಂಗಡವಾಗಿ ಟಿಕೆಟ್ ಕಾಯ್ದಿರಿಸಬಹುದು, ಇನ್ನು ವಿಶೇಷ ಬಸ್ ಗಳು ಬೆಂಗಳೂರಿನ ಕೆಂಪೇಗೌಡ ನಿಲ್ದಾಣದಿಂದ ಕುಕ್ಕೆ ಸುಬ್ರಹ್ಮಣ್ಯ, ಶಿವಮೊಗ್ಗ ,ಧರ್ಮಸ್ಥಳ, ಕುಂದಾಪುರ ಮಂಗಳೂರು, ಶೃಂಗೇರಿ ,ಹೊರನಾಡು, ದಾವಣಗೆರೆ ,ಕಲ್ಬುರ್ಗಿ, ರಾಯಚೂರು, ಹುಬ್ಬಳ್ಳಿ, ಧಾರವಾಡ, ಬೆಳಗಾವಿ, ವಿಜಯಪುರ, ಗೋಕರ್ಣ, ಶಿರಸಿ ಕೊಪ್ಪಳ, ತಿರುಪತಿ, ಬೀದರ್ ಮತ್ತು ಇನ್ನಿತರ ಸ್ಥಳಗಳಿಗೆ ಸಂಚಾರ ವ್ಯವಸ್ಥೆ ಕಲ್ಪಿಸಿಕೊಡಲಾಗಿದೆ.

 Sharesee more..

ಸೆ. 24 ರಂದು ವೈಮಾನಿಕ ತರಬೇತಿ ಶಾಲೆ ಪುನಾರಂಭ

08 Sep 2021 | 5:36 PM

ಬೆಂಗಳೂರು, ಸೆ 8 (ಯುಎನ್ಐ) ರಾಜ್ಯ ವಿಧಾನ ಮಂಡಲದ ಅಧಿವೇಶನ ಮುಗಿದ ಮಾರನೆ ದಿನವೇ ವೈಮಾನಿಕ ತರಬೇತಿ ಶಾಲೆ ಪುನಾರಂಭಿಸಲಾಗುವುದು ಎಂದು ಕ್ರೀಡಾ ಸಚಿವ ಡಾ ನಾರಾಯಣಗೌಡ ತಿಳಿಸಿದರು.

 Sharesee more..

1, 666 ದೈಹಿಕ ಶಿಕ್ಷಕರಿಗೆ ಆಧುನಿಕ ತರಬೇತಿ: ನಾರಾಯಣಗೌಡ

08 Sep 2021 | 5:26 PM

ಬೆಂಗಳೂರು, ಸೆ 8 (ಯುಎನ್ಐ) ತಳಮಟ್ಟದಿಂದಲೇ ಕ್ರೀಡಾಪಟುಗಳನ್ನು ತಯಾರು ಮಾಡಲು ನಿರ್ಧಾರ ತೆಗೆದುಕೊಂಡಿದ್ದು, 1 ಸಾವಿರದ 666 ದೈಹಿಕ ಶಿಕ್ಷಕರಿಗೆ ಗುಣಮಟ್ಟದ ವೈಜ್ಞಾನಿಕ ತರಬೇತಿ ನೀಡಲು ಯೋಜನೆ ಸಿದ್ದಪಡಿಸಲಾಗಿದೆ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಚಿವ ಡಾ.

 Sharesee more..

ಪೊಲೀಸ್ ಇಲಾಖೆಗೆ ಮೂಲ ಸೌಕರ್ಯ: ಆರಗ ಜ್ಞಾನೇಂದ್ರ

08 Sep 2021 | 5:17 PM

ಬೆಳಗಾವಿ, ಸೆ 8 (ಯುಎನ್ಐ) ರಾಜ್ಯದ ಪೊಲೀಸರ ಕಾರ್ಯಕ್ಷಮತೆ ಹೆಚ್ಚಿಸಲು ಇಲಾಖೆಗೆ ಬೇಕಾದ ಎಲ್ಲ ಸೌಕರ್ಯ ಒದಗಿಸಲಿದೆ ಎಂದು ಗೃಹ ಸಚಿವ ಶ್ರೀ ಆರಗ ಜ್ಞಾನೇಂದ್ರ, ತಿಳಿಸಿದ್ದಾರೆ ಸಚಿವರು ಬೆಳಗಾವಿಯಲ್ಲಿಂದು ಕೆ ಎಸ್ ಆರ್ ಪಿ ವತಿಯಿಂದ ಆಯೋಜಿಸಲಾದ ನೂತನ ಅಭ್ಯರ್ಥಿಗಳ ನಿರ್ಗಮನ ಪಥ ಸಂಚಲನ ಕಾರ್ಯಕ್ರಮದಲ್ಲಿ ಪಾಲ್ಗೊಂಡ ನಂತರ, ಸುದ್ದಿಗಾರರ ಜೊತೆ ಮಾತನಾಡಿದರು .

 Sharesee more..

ಪೊಲೀಸ್ ಇಲಾಖೆ ಸಿಬ್ಬಂದಿಗೆ ಸಂಬಳದ ವಿಚಾರವಾಗಿ ನಾವು ಯಾವುದೇ ತಾರತಮ್ಯ ಮಾಡಿಲ್ಲ: ಆರಗ ಜ್ಞಾನೇಂದ್ರ

08 Sep 2021 | 5:14 PM

ಬೆಳಗಾವಿ, ಸೆ 8 (ಯುಎನ್ಐ) ರಾಜ್ಯದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವ ಪೊಲೀಸರಿಗೆ ಆಧುನಿಕ ಉಪಕರಣ ಒದಗಿಸಲಾಗಿದ್ದು, ಆ ಮೂಲಕ ರಾಜ್ಯದಲ್ಲಿ ಅಪರಾಧ ಚಟುವಟಿಕೆಗಳಿಗೆ ಕಡಿವಾಣ ಹಾಕುವ ಕಾರ್ಯವನ್ನು ಸರ್ಕಾರ ಮಾಡುತ್ತಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು.

 Sharesee more..

ಚಾರ್ಜ್​ಶೀಟ್​ನಲ್ಲಿ ಅನುಶ್ರೀ ಹೆಸರಿಲ್ಲ, ಕಿಶೋರ್ ಹೇಳಿಕೆಯಲ್ಲಷ್ಟೇ ಇದೆ: ಎನ್.ಶಶಿಕುಮಾರ್

08 Sep 2021 | 5:07 PM

ಮಂಗಳೂರು, ಸೆ 8 (ಯುಎನ್ಐ) ಚಾರ್ಜ್​ಶೀಟ್​ನಲ್ಲಿ ಅನುಶ್ರೀ ಹೆಸರು ಉಲ್ಲೇಖವಾಗಿಲ್ಲ.

 Sharesee more..

ಶಾಸಕಾಂಗಕ್ಕೆ ಮನೆಗಳ ಕೊರತೆ: ಕಾಗೇರಿ

08 Sep 2021 | 1:47 PM

ಬೆಂಗಳೂರು, ಸೆ 8 (ಯುಎನ್ಐ) ಶಾಸಕಾಂಗದ ಸಿಬ್ಬಂದಿಗೆ ಮನೆಗಳ ಕೊರತೆಯಿದ್ದು ಇದನ್ನು ಬೇಗ ನಿವಾರಿಸುವಂತೆ ಸರ್ಕಾರಕ್ಕೆ ಮನವಿ ಮಾಡಲಾಗಿದೆ ಎಂದು ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಕಡೆ ಕಾಗೇರಿ ಹೇಳಿದ್ದಾರೆ ಬೆಂಗಳೂರಿನಲ್ಲಿಂದು ಸುದ್ದಿಗಾರರ ಜೊತೆ ಮಾತನಾಡಿದ ಅವರು ವಿಧಾನ ಪರಿಷತ್ತಿನ ಸಭಾಪತಿ ಬಸವರಾಜ ಹೊರಟ್ಟಿ ಅವರಿಗೆ ಮನೆ ಸಿಗದೆ ಇರುವ ವಿಚಾರ ಪ್ರಸ್ತಾಪ ಮಾಡಿ, ಶಾಸಕಾಂಗಕ್ಕೆ ಸಾಕಷ್ಟು ಮನೆಗಳು ಇಲ್ಲದಿದ್ದರೂ ನಾವು ನ್ಯಾಯಾಂಗಕ್ಕೆ ಹೆಚ್ಚಿನ ಮನೆಗಳನ್ನು ಬಿಟ್ಟುಕೊಟ್ಟಿದ್ದೇವೆ ಇದರಿಂದಾಗಿ ಶಾಸಕಾಂಗದಲ್ಲಿ ಗುರುತರ ಜವಾಬ್ದಾರಿ ನಿರ್ವಹಣೆ ಮಾಡುತ್ತಿರುವವರಿಗೆಮನೆಗಳು ಲಭ್ಯವಿಲ್ಲದಂತಾಗಿದೆ ಈ ವಿಚಾರವನ್ನು ಮುಖ್ಯಮಂತ್ರಿ ಗಮನಕ್ಕೆ ತಂದು ಸಮಸ್ಯೆ ಪರಿಹರಿಸುವ ಯತ್ನ ನಡೆಸಲಾಗಿದೆ ಎಂದೂ ಸ್ಪೀಕರ್ ಕಾಗೇರಿ ಹೇಳಿದರು.

 Sharesee more..

24 ರಂದು ವಿಶೇಷ ಜಂಟಿ ಅಧಿವೇಶನ: ವಿಶ್ವೇಶ್ವರ ಹೆಗಡೆ ಕಾಗೇರಿ

08 Sep 2021 | 1:29 PM

ಬೆಂಗಳೂರು, ಸೆ 8 (ಯುಎನ್ಐ) ಇದೇ 13 ರಿಂದ ರಿಂದ 24 ವರೆಗೆ ವಿಧಾನಮಂಡಲದ ಅಧಿವೇಶನ ನಡೆಯಲಿದ್ದು 24 ರಂದು ಬೋಜನ ವಿರಾಮದ ಬಳಿಕ ವಿಶೇಷ ಜಂಟಿ ಅಧಿವೇಶನ ಜರುಗಲಿದೆ ಎಂದು ವಿಧಾನಸಭಾದ್ಯಕ್ಷ ವಿಶ್ವೇಶ್ವರ ಹೆಗಡೆ ಹೇಳಿದ್ದಾರೆ.

 Sharesee more..

ಜಾತ್ರೆಗೆ ಹೊರಟವರ ಕ್ರೂಸರ್​ಗೆ ಬಸ್​ ಡಿಕ್ಕಿ: ಬಾಲಕ ಸಾವು, ಐವರಿಗೆ ಗಾಯ

08 Sep 2021 | 12:26 PM

ಗಂಗಾವತಿ, ಸೆ 8 (ಯುಎನ್ಐ) ಮನೆದೇವರ ಜಾತ್ರೆಗೆ ಹೊರಟಿದ್ದವರ ಕ್ರೂಸರ್ ವಾಹನಕ್ಕೆ ಖಾಸಗಿ ಬಸ್​​ ವೊಂದು ಡಿಕ್ಕಿ ಹೊಡೆದ ಪರಿಣಾಮ ಓರ್ವ ಬಾಲಕ ಮೃತಪಟ್ಟಿರುವ ಘಟನೆ ತಾಲೂಕಿನ ಜಂಗಮರ ಕಲ್ಗುಡಿ ಬಳಿ ಬುಧವಾರ ಬೆಳಗಿನಜಾವ ಸಂಭವಿಸಿದೆ.

 Sharesee more..

ಹಾಸ್ಯ ನಟ ಬುಲೆಟ್ ಪ್ರಕಾಶ್ ಪುತ್ರನ ಮೇಲೆ‌ ಮಂಗಳಮುಖಿಯರಿಂದ ದಾಳಿ !

08 Sep 2021 | 12:18 PM

ಬೆಂಗಳೂರು, ಸೆ 8 (ಯುಎನ್ಐ) ಸ್ಯಾಂಡಲ್ ವುಡ್ ನ ಹಾಸ್ಯನಟ ಬುಲೆಟ್ ಪ್ರಕಾಶ್ ಪುತ್ರನ ಮೇಲೆ ಕೆಲ ಮಂಗಳಮುಖಿಯರು ದಾಳಿ ನಡೆಸಿರುವ ಆರೋಪ ಕೇಳಿ ಬಂದಿದೆ.

 Sharesee more..

ಮಹಿಳೆ ಮೇಲೆ ಹಲ್ಲೆ ಮಾಡಿದ್ದವನ ಬಂಧನ

08 Sep 2021 | 12:13 PM

ಬೆಂಗಳೂರು, ಸೆ 8 (ಯುಎನ್ಐ) ಮಹಿಳೆ ಮೇಲೆ ಹಲ್ಲೆ ಮಾಡಿದ್ದ ವ್ಯಕ್ತಿ ಓರ್ವನನ್ನು ಮೈಕೋ ಲೇಔಟ್​ ಪೊಲೀಸರು ಬಂಧಿಸಿದ್ದಾರೆ.

 Sharesee more..

ಕ್ಯಾಮ್ಸ್​ ಕಾರ್ಯದರ್ಶಿ ಕೊಲೆಗೆ ಸುಪಾರಿ ನೀಡಿದ್ದ ಆರ್​ಟಿಐ ರವಿ ಬಂಧನ

08 Sep 2021 | 12:08 PM

ಬೆಂಗಳೂರು, ಸೆ 8 (ಯುಎನ್ಐ) ಕ್ಯಾಮ್ಸ್ ಕಾರ್ಯದರ್ಶಿ ಶಶಿಕುಮಾರ್ ಕೊಲೆ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪಾರಿ ನೀಡಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

 Sharesee more..

ಡ್ರಗ್ ಲಿಂಕ್ ಪ್ರಕರಣ: ಚಾರ್ಜ್​ಶೀಟ್​ನಲ್ಲಿ ಆ್ಯಂಕರ್ ಅನುಶ್ರೀ ಹೆಸರು ಉಲ್ಲೇಖ

08 Sep 2021 | 11:53 AM

ಮಂಗಳೂರು, ಸೆ 8 (ಯುಎನ್ಐ) ಸ್ಯಾಂಡಲ್ ನಟಿ, ಕಿರುತೆರೆಯ ಖ್ಯಾತ ನಿರೂಪಕಿ ಅನುಶ್ರೀಗೆ ಮತ್ತೆ ಕಂಟಕ ಎದುರಾಗಿದೆ.

 Sharesee more..

ವಾಯುಭಾರ ಕುಸಿತ, ಮುಂದುವರೆದ ಮಳೆ ಅಬ್ಬರ

08 Sep 2021 | 9:16 AM

ಬೆಂಗಳೂರು, ಸೆ 8 (ಯುಎನ್ಐ) ಬಂಗಾಳಕೊಲ್ಲಿಯಲ್ಲಿ ಕಾಣಿಸಿಕೊಂಡ ವಾಯುಭಾರ ಕುಸಿತದ ಕಾರಣ ರಾಜ್ಯದ ಹಲವು ಜಿಲ್ಲೆಗಳಲ್ಲಿ ಮುಂದಿನ 48 ಗಗಂಟೆಗಳ ಕಾಲ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

 Sharesee more..

ಮೈಸೂರು ಸಾಮೂಹಿಕ ಅತ್ಯಾಚಾರ ಪ್ರಕರಣ: 7 ನೇ ಆರೋಪಿ ಬಂಧನ

07 Sep 2021 | 9:49 PM

ಬೆಂಗಳೂರು, ಸೆ 7 (ಯುಎನ್ಐ) ಕೆಲ ದಿನಗಳ ಹಿಂದೆ ಮೈಸೂರಿನಲ್ಲಿ ನಡೆದಿದ್ದ ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೋರ್ವ ಆರೋಪಿಯನ್ನು ಪೊಲೀಸರು ಬಂಧಿಸಿದ್ದು, ಈ ಮೂಲಕ ಬಂಧಿತ ಆರೋಪಿಗಳ ಸಂಖ್ಯೆ 7‌ಕ್ಕೆ ಏರಿಕೆ ಆಗಿದೆ.

 Sharesee more..