Monday, Jun 1 2020 | Time 01:18 Hrs(IST)
Karnataka

ಲಾಕ್ ಡೌನ್ ಹಿನ್ನೆಲೆ: ಪೊಲೀಸ್ ಸಬ್ ಇನ್ಸ್ ಪೆಕ್ಟರ್ ನೇಮಕಾತಿ ಸ್ಥಗಿತ

31 May 2020 | 11:39 AM

ಬೆಂಗಳೂರು, ಮೇ 31 [ಯುಎನ್ಐ] ಕೊರೋನಾ ವೈರಸ್ ಲಾಕ್ ಡೌನ್ ಹಿನ್ನೆಲೆಯಲ್ಲಿ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಗಳ ನೇಮಕಾತಿ ಮೇಲೆ ಪ್ರತಿಕೂಲ ಪರಿಣಾಮ ಬೀರಿದ್ದು, ನೇಮಕಾತಿ ಪ್ರಕ್ರಿಯೆ ಸ್ಥಗಿತಗೊಳಿಸಲಾಗಿದೆ ಪೊಲೀಸ್ ಇಲಾಖೆಯಲ್ಲಿ ಖಾಲಿ ಇರುವ 431 ಸಿವಿಲ್ ಪೊಲೀಸ್ ಸಬ್-ಇನ್ಸ್‌ಪೆಕ್ಟರ್ ಗಳು ಮತ್ತು ಕಲ್ಯಾಣ ಕರ್ನಾಟಕ ಭಾಗದ 125 ಪೊಲೀಸ್ ಸಬ್ ಇನ್ಸ್ ಪೆಕ್ಟ್ ರ್ ಗಳ ನೇಮಕಾತಿಗಾಗಿ ಪ್ರಕಟಣೆ ಹೊರಡಿಸಲಾಗಿತ್ತು.

 Sharesee more..

ತಳವಾರ, ಪರಿವಾರ, ಸಿದ್ಧಿ ಜನಾಂಗ ಪರಿಶಿಷ್ಟ ಪಂಗಡದ ಪಟ್ಟಿಗೆ ಸೇರ್ಪಡೆ

31 May 2020 | 11:20 AM

ಬೆಂಗಳೂರು, ಮೇ 31 [ಯುಎನ್ಐ] ಬಹುದಿನಗಳಿಂದ ನೆನೆಗುದಿಗೆ ಬಿದ್ದಿರುವ ತಳವಾರ, ಪರಿವಾರ, ಸಿದ್ಧಿ ಜನಾಂಗವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಲಾಗಿದೆ ಈ ಕುರಿತು ಗಜೆಟ್ ಅಧಿಸೂಚನೆ ಜಾರಿಯಾಗಿದ್ದು, ಪರಿಶಿಷ್ಟ ಪಂಗಡಗಳ ಸಂವಿಧಾನ ತಿದ್ದುಪಡಿ ಕಾಯ್ದೆ 2020ರ ರ ಅನ್ವಯ ಪರಿಷ್ಕೃತ ಪಟ್ಟಿಯಲ್ಲಿ ತಳವಾರ ಮತ್ತು ಪರಿವಾರ ಹಾಗೂ ಸಿದ್ಧಿ ಜನಾಂಗವನ್ನು ಪ್ರತ್ಯೇಕವಾಗಿ ಪರಿಶಿಷ್ಟ ಪಂಗಡದ ಪಟ್ಟಿಗೆ ಸೇರಿಸಲಾಗಿದೆ.

 Sharesee more..

ಅಂತರ್ ರಾಜ್ಯ, ಅಂತರ್ ಜಿಲ್ಲೆ ನಡುವಿನ ಸಂಚಾರ ನಿಯಮಗಳು ಸಡಲಿಕೆ

31 May 2020 | 11:03 AM

ನವದೆಹಲಿ, ಮೇ 31 [ಯುಎನ್ಐ] ಐದನೇ ಹಂತದ ಲಾಕ್ ಡೌನ್ ಸಂದರ್ಭದಲ್ಲಿ ಅಂತರ್ ರಾಜ್ಯ ಮತ್ತು ಅಂತರ್ ಜಿಲ್ಲೆ ನಡುವಿನ ಸಂಚಾರಕ್ಕೆ ಇದ್ದ ನಿಯಮಗಳು ಸಡಲಿಕೆಯಾಗಿವೆ ಕೇಂದ್ರ ಗೃಹ ಸಚಿವಾಲಯ ಶನಿವಾರ ಪ್ರಕಟಿಸಿರುವ ಮಾರ್ಗಸೂಚಿ ಪ್ರಕಾರ, ಜನ ಮತ್ತು ಸರಕು ಸಾಗಣೆಗೆ ಪ್ರತ್ಯೇಕ ಅನುಮತಿ ಬೇಕಾಗಿಲ್ಲ.

 Sharesee more..

ಜಯನಗರ ನಾಲ್ಕನೇ ಹಂತದ ವಿನಾಯಕ ದೇವಸ್ಥಾನ ಶುಚಿಗೊಳಿಸಿದ ಶಾಸಕಿ ಸೌಮ್ಯ ರೆಡ್ಡಿ

30 May 2020 | 10:47 PM

ಬೆಂಗಳೂರು,ಮೇ 30(ಯುಎನ್ಐ) ಜೂನ್ 1 ರಿಂದ ದೇವಾಲಯಗಳನ್ನು ತೆರೆಯಲು ರಾಜ್ಯ ಸರ್ಕಾರ ಅವಕಾಶ ನೀಡಿರುವ ಹಿನ್ನೆಲೆ ಬಹುದಿನಗಳಿಂದ ಆಗಿಯೇ ಇದ್ದ ಜಯನಗರ 4ನೇ ಬ್ಲಾಕ್ ವಿನಾಯಕ ದೇವಸ್ಥಾನವನ್ನು ಶಾಸಕಿ ಸೌಮ್ಯ ರೆಡ್ಡಿ ಇಂದು ಸ್ವಚ್ಛಗೊಳಿಸಿದರು.

 Sharesee more..

ಇಮ್ರಾನ್ ಪಾಶಾ ಕುಟುಂಬ ಸದಸ್ಯರು ಸೇರಿ 37 ಜನರ ಕ್ವಾರಂಟೈನ್

30 May 2020 | 9:59 PM

ಬೆಂಗಳೂರು, ಮೇ 30 (ಯುಎನ್ಐ) ಪಾದರಾಯನಪುರ ಕಾರ್ಪೊರೇಟರ್ ಇಮ್ರಾನ್ ಪಾಷಾ ಅವರಲ್ಲಿ ಕೊರೋನಾ ಸೋಂಕು ದೃಢಪಟ್ಟಿರುವ ಹಿನ್ನೆಲೆಯಲ್ಲಿ ಅವರ ಕುಟುಂಬ ಸದಸ್ಯರು ಸೇರಿ 37 ಜನರನ್ನು ಕ್ವಾರಂಟೈನ್ ಮಾಡಲಾಗಿದೆ ಸೋಂಕಿತರ ಪ್ರಾಥಮಿಕ ಸಂಪರ್ಕಕ್ಕೆ ಬಂದಿದ್ದ 18 ಮತ್ತು ದ್ವಿತೀಯ ಸಂಪರ್ಕಕ್ಕೆ ಬಂದಿದ್ದ 19 ಜನರನ್ನು ಗುರುತಿಸಿ ಕ್ವಾರಂಟೈನ್ ಮಾಡಲಾಗಿದೆ.

 Sharesee more..

ಭಾನುವಾರ ಮನ್ ಕಿ ಬಾತ್ : 65 ನೇ ಸಂಚಿಕೆಯಲ್ಲಿ ಕೊರೋನಾ ನಿಯಂತ್ರ ಕುರಿತು ಪ್ರಧಾನಿ ಭಾಷಣ

30 May 2020 | 8:53 PM

ನವದೆಹಲಿ, ಮೇ 30 [ಯುಎನ್ಐ] ಪ್ರಧಾನಿ ಮಂತ್ರಿ ನರೇಂದ್ರ ಮೋದಿ ತಿಂಗಳ ಕೊನೆಯ ಭಾನುವಾರ ಆಕಾಶವಾಣಿಯ ಮನ್-ಕಿ-ಬಾತ್ ಕಾರ್ಯಕ್ರಮದಲ್ಲಿ ಕೋವಿಡ್ 19 ಸೋಂಕು ನಿಯಂತ್ರಣ ಕ್ರಮಗಳ ಕುರಿತು ದೇಶ ವಾಸಿಗಳ ಜತೆ ತಮ್ಮ ಅನಿಸಿಕೆ ಹಂಚಿಕೊಳ್ಳಲಿದ್ದಾರೆ.

 Sharesee more..

ಜೂನ್ 8 ರಿಂದ ದೇವಸ್ಥಾನ, ಮಾಲ್ ಗಳು, ಹೊಟೇಲ್, ರೆಸ್ಟೋರೆಂಟ್ ಗಳನ್ನು ತೆರೆಯಲು ಅನುಮತಿ

30 May 2020 | 8:43 PM

ನವದೆಹಲಿ, ಮೇ 30 [ಯುಎನ್ಐ]ದೇಶದಲ್ಲಿ ಕೊರೋನಾ ಸೋಂಕು ನಿಯಂತ್ರಣ ಉದ್ದೇಶದಿಂದ ಜಾರಿಗೊಳಿಸಿರುವ ಐದನೇ ಅವಧಿಯ ಲಾಕ್ ಡೌನ್ ಅವಧಿಯನ್ನು ಜೂನ್ 30ರ ವರೆಗೆ ವಿಸ್ತರಿಸಲಾಗಿದ್ದು, ಹಂತ ಹಂತವಾಗಿ ಸಡಿಲಿಕೆ ಮಾಡಲು ಕೇಂದ್ರ ಗೃಹ ಸಚಿವಾಲಯ ಪರಿಷ್ಕೃತ ಮಾರ್ಗಸೂಚಿ ಹೊರಡಿಸಿದೆ.

 Sharesee more..

ಉದ್ಯೋಗ ಖಾತರಿ ಕಾಮಗಾರಿ ಶೀಘ್ರವಾಗಿ ಪೂರ್ಣಗೊಳಿಸಿ: ಪ್ರಜ್ವಲ್ ರೇವಣ್ಣ

30 May 2020 | 8:41 PM

ಹಾಸನ, ಮೇ 30(ಯುಎನ್ಐ) ಉದ್ಯೋಗ ಖಾತರಿ ಯೋಜನೆಯಡಿ ಪ್ರಾರಂಭಿಸಿರುವ ಕಾಮಗಾರಿಗಳನ್ನು ವಾರ್ಷಿಕ ಗುರಿಗೆ ಅನುಗುಣವಾಗಿ ಜೂನ್ ಅಂತ್ಯದೊಳಗೆ ಪೂರ್ಣಗೊಳಿಸುವಂತೆ ಎಲ್ಲಾ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಸಂಸದ ಪ್ರಜ್ವಲ್ ರೇವಣ್ಣ ತಿಳಿಸಿದ್ದಾರೆ ಜಿಲ್ಲಾ ಪಂಚಾಯ್ತಿ ಹೊಯ್ಸಳ ಸಭಾಂಗಣದಲ್ಲಿಂದು ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಪ್ರಗತಿ ಪರಿಶೀಲನಾ ಸಭೆ ನಡೆಸಿ ಮಾತನಾಡಿದ ಅವರು, ಮಳೆಗಾಲ ಪ್ರಾರಂಭವಾಗಿದ್ದು ಕೆರೆ ಕಾಮಗಾರಿಗಳನ್ನು ಹೊರತು ಪಡಿಸಿ ಉದ್ಯೋಗ ಖಾತರಿ ಯೋಜನೆಯಡಿ ಸಮುದಾಯ ಮತ್ತು ವೈಯಕ್ತಿಕ ಕಾಮಗಾರಿಗಳ ಕೆಲಸ ಕೈಗೊಳ್ಳಬೇಕು ಎಂದರು.

 Sharesee more..

ಕೋರೋನಾ ವಾರಿಯರ್ಸ್‍ಗೆ ಆಯುಷ್ ಔಷಧ ವಿತರಣೆಗೆ ಕೋಟ ಶ್ರೀನಿವಾಸ ಪೂಜಾರಿ ಚಾಲನೆ

30 May 2020 | 8:39 PM

ಮಂಗಳೂರು, ಮೇ 30(ಯುಎನ್ಐ) ಕೋವಿಡ್-19 ರೋಗ ನಿಯಂತ್ರಣದಲ್ಲಿ ಮಹತ್ತರವಾದ ಪಾತ್ರವನ್ನು ವಹಿಸುತ್ತಿರುವ ಕೊರೋನಾ ವಾರಿಯರ್ಸ್ ಆಶಾ ಕಾರ್ಯಕರ್ತೆಯರಿಗೆ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಆಯುಷ್ ಔಷಧಿ ಕಿಟ್ ವಿತರಣೆಗೆ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಚಾಲನೆ ನೀಡಿದರು.

 Sharesee more..

ಎಸ್.ಎಸ್.ಎಲ್.ಸಿ ಪರೀಕ್ಷೆಗೆ ಅಗತ್ಯ ಸುರಕ್ಷತಾ ಕ್ರಮ: ಎಸ್.ಸುರೇಶ್ ಕುಮಾರ್

30 May 2020 | 8:36 PM

ಕೋಲಾರ, ಮೇ 30 (ಯುಎನ್ಐ) ಎಸ್ ಎಸ್.

 Sharesee more..

ಮುಂದಿನ ಮೂರು ವರ್ಷಗಳಲ್ಲಿ ರಾಜ್ಯದ ಪ್ರತಿಯೊಬ್ಬರಿಗೂ ಸೂರು; ಸಚಿವ ವಿ.ಸೋಮಣ್ಣ

30 May 2020 | 8:33 PM

ಬೆಂಗಳೂರು, ಮೇ 30 [ಯುಎನ್ಐ]ಬೆಂಗಳೂರು ನಗರ ಜಿಲ್ಲೆಯ ಜಿಗಣಿ ಹೋಬಳಿಯ ಸ್ವಾಮಿ ವಿವೇಕಾನಂದ ಯೋಗ ವಿಶ್ವವಿದ್ಯಾನಿಲಯದ ಬಳಿ 1938 ಎಕರೆ ಪ್ರದೇಶದಲ್ಲಿ ಅತ್ಯಾಧುನಿಕ ಮೂಲ ಸೌಕರ್ಯಗಳುಳ್ಳ 30000 ನಿವೇಶನಗಳನ್ನು ಪ್ರಧಾನಮಂತ್ರಿ ಟೌನ್‍ಶಿಪ್ ಯೋಜನೆಯಡಿ ನಿರ್ಮಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ವಸತಿ ಸಚಿವ ವಿ.

 Sharesee more..

ವಲಸೆ ಕಾರ್ಮಿಕರ ಬದಲಿಗೆ ಕನ್ನಡಿಗರಿಗೆ ಅವಕಾಶ ನೀಡಿ: ನಾಗಾಭರಣ

30 May 2020 | 8:33 PM

ಬೆಂಗಳೂರು, ಮೇ 30 (ಯುಎನ್ಐ) ವಿವಿಧ ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಿದ್ದ ವಲಸೆ ಕಾರ್ಮಿಕರು ಕೊರೋನಾ ಕಾರಣದಿಂದ ತಮ್ಮ ರಾಜ್ಯಕ್ಕೆ ಹಿಂದಿರುಗಿದ್ದು ಆತಂಕಪಡುವ ಅಗತ್ಯವಿಲ್ಲ ನೈಪುಣ್ಯತೆ ಹೊಂದಿರುವ ಸಾಕಷ್ಟು ಮಂದಿ ಸ್ಥಳೀಯ ಕನ್ನಡಿಗರಿದ್ದು, ಅವರನ್ನು ಬಳಸಿಕೊಳ್ಳುವಂತೆ ಉಪಮುಖ್ಯಮಂತ್ರಿ ಡಾ.

 Sharesee more..

ಪ್ರತಿ ಕುಟುಂಬಕ್ಕೂ ಆಹಾರ ತಲುಪಿಸಿ: ಸಚಿವ ಕೆ.ಗೋಪಾಲಯ್ಯ ಸೂಚನೆ

30 May 2020 | 8:31 PM

ಮಡಿಕೇರಿ, ಮೇ 30(ಯುಎನ್ಐ) ಮಲೆನಾಡು ಭಾಗದಲ್ಲಿ ಅಲ್ಲಲ್ಲಿ ಮನೆಗಳು ಇರುವುದರಿಂದ ಜೊತೆಗೆ ಬೆಟ್ಟಗುಡ್ಡಗಳಿಂದ ಕೂಡಿರುವುದರಿಂದ ಸಾಧಾರಣ ಕುಟುಂಬಗಳು ಸಹ ನಾಲ್ಕು ಚಕ್ರದ ವಾಹನ ಉಪಯೋಗಿಸುತ್ತಿದ್ದು, ಅಂತಹ ಕುಟುಂಬಗಳಿಗೆ ಬಿಪಿಎಲ್ ಪಡಿತರ ಚೀಟಿ ನೀಡುವ ಬಗ್ಗೆ ಪರಿಶೀಲಿಸಲಾಗುವುದು ಎಂದು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಸಚಿವರಾದ ಕೆ.

 Sharesee more..

ಕೋವಿಡ್-19 ಗೆದ್ದ ಪೊಲೀಸ್ ಗೆ ಪುಷ್ಪ ವೃಷ್ಟಿಯ ಸ್ವಾಗತ

30 May 2020 | 8:20 PM

ಬೆಂಗಳೂರು, ಮೇ 30 (ಯುಎನ್ಐ) ಕೊರೊನಾ ಸೋಂಕು ತಗುಲಿದ್ದ ನಗರದ ಸಂಚಾರಿ ಠಾಣೆ ಕಾನ್ ಸ್ಟೇಬಲ್ ಕೋವಿಡ್-19 ಅನ್ನು ಮಣಸುವ ಮೂಲಕ ಸಮರದಲ್ಲಿ ಜಯಶೀಲರಾಗಿದ್ದಾರೆ ಕರ್ತವ್ಯ‌ನಿರತ ಫ್ರೇಜರ್ ಟೌನ್ ಸಂಚಾರಿ ಠಾಣೆ ಕಾನ್ ಸ್ಟೇಬಲ್ ಗುರುಮೂರ್ತಿ ಅವರಿಗೆ ಇತ್ತೀಚೆಗೆ ಕೊರೊನಾ ಸೋಂಕು ತಗುಲಿತ್ತು.

 Sharesee more..

ಕಲಬುರಗಿಯಲ್ಲಿ ಸೋಂಕಿತರ ಸಂಖ್ಯೆ 253ಕ್ಕೆ ಏರಿಕೆ

30 May 2020 | 8:18 PM

ಕಲಬುರಗಿ, ಮೇ 30(ಯುಎನ್ಐ) ಕಲಬುರಗಿಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 253ಕ್ಕೆ ಏರಿಕೆ ಆಗಿದೆ ಜಿಲ್ಲೆಯಲ್ಲಿ ಶನಿವಾರ ಮತ್ತೆರಡು ಕೊರೊನಾ ಸೋಂಕು ಪತ್ತೆಯಾಗಿದೆ ಎಂದು ಜಿಲ್ಲಾಧಿಕಾರಿ ಶರತ್ ಬಿ.

 Sharesee more..