Monday, Sep 16 2019 | Time 06:09 Hrs(IST)
Karnataka
ಹಿಂದಿಯೇತರ ಭಾಷಿಗರಿಗೆ ಉದ್ಯೋಗ ಸಿಗದಂತೆ ಕೇಂದ್ರದಿಂದ ಪಿತೂರಿ:ಸಿದ್ದರಾಮಯ್ಯ

ಹಿಂದಿಯೇತರ ಭಾಷಿಗರಿಗೆ ಉದ್ಯೋಗ ಸಿಗದಂತೆ ಕೇಂದ್ರದಿಂದ ಪಿತೂರಿ:ಸಿದ್ದರಾಮಯ್ಯ

13 Sep 2019 | 6:45 PM

ಬೆಂಗಳೂರು, ಸೆ 13(ಯುಎನ್ಐ) ಕನ್ನಡದಲ್ಲಿ ಐಬಿಪಿಎಸ್ ಪರೀಕ್ಷೆ ಬರೆಯಲು ಕೇಂದ್ರ ಸರ್ಕಾರ ಅವಕಾಶ ಕಲ್ಪಸಿದಿರುವ ಬಗ್ಗೆ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಕಿಡಿಕಾರಿದ್ದು, ಹಿಂದಿಯೇತರ ಭಾಷಿಗರಿಗೆ ಬ್ಯಾಂಕ್ ಉದ್ಯೋಗ ಸಿಗದಂತೆ ತಡೆಯುವ ಪಿತೂರಿ ಎಂದಿದ್ದಾರೆ

 Sharesee more..

ಕಾಮಗಾರಿಗಳನ್ನು ಹಂತ ಹಂತವಾಗಿ ಮುಗಿಸಿ: ಆದಿಮನಿ ವೀರಲಕ್ಷ್ಮಿ

13 Sep 2019 | 6:43 PM

ರಾಯಚೂರು, ಸೆ 13 [ಯುಎನ್ಐ] ಜಿಲ್ಲೆಯಲ್ಲಿ ಕುಡಿಯುವ ನೀರು ಪೂರೈಸುವ ತೊಟ್ಟಿ ನಿರ್ಮಾಣ ಕಟ್ಟಡ ಹಾಗೂ ಕಾಮಗಾರಿಗಳು ದುರಸ್ಥಿಯಲ್ಲಿದ್ದು ಹಂತ ಹಂತವಾಗಿ ಕಾಮಗಾರಿಗಳನ್ನು ತ್ವರಿತವಾಗಿ ಮುಗಿಸಿ ಜನತೆಗೆ ಶುದ್ಧ ಕುಡಿಯುವ ನೀರು ಪೂರೈಸುವಂತೆ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಆದಿಮನಿ ವೀರಲಕ್ಷ್ಮಿ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

 Sharesee more..
ಎಸ್.ಸಿ.ಪಿ /ಟಿ.ಎಸ್.ಪಿ ಯೋಜನೆ ಅನುದಾನ ನೆರೆ ಪ್ರದೇಶಗಳ ಗೃಹ ನಿರ್ಮಾಣಕ್ಕೆ ಬಳಕೆ : ಗೋವಿಂದ ಕಾರಜೋಳ

ಎಸ್.ಸಿ.ಪಿ /ಟಿ.ಎಸ್.ಪಿ ಯೋಜನೆ ಅನುದಾನ ನೆರೆ ಪ್ರದೇಶಗಳ ಗೃಹ ನಿರ್ಮಾಣಕ್ಕೆ ಬಳಕೆ : ಗೋವಿಂದ ಕಾರಜೋಳ

13 Sep 2019 | 6:41 PM

ಬೆಂಗಳೂರು,ಸೆ 13(ಯುಎನ್ಐ) ಎಸ್ ಸಿಪಿ ಮತ್ತು ಟಿಎಸ್ ಪಿ ಯೋಜನೆಯ ಅನುದಾನದಲ್ಲಿ ಎಲ್ಲಾ ಇಲಾಖೆಗಳು ನೆರೆ ಸಂತ್ರಸ್ಥ ಪ್ರದೇಶಗಳಲ್ಲಿ ಶೇ.50 ರಷ್ಟು ಆರ್ಥಿಕ ಸಂಪನ್ಮೂಲವನ್ನು ಮನೆ ನಿರ್ಮಾಣ ಹಾಗೂ ಉಳಿದ ಅನುದಾನವನ್ನು ಮೂಲಭೂತ ಸೌಕರ್ಯ ಅಭಿವೃದ್ಧಿಗೆ ಬಳಸುವಂತೆ ಸಮಾಜ ಕಲ್ಯಾಣ ಸಚಿವ ಗೋವಿಂದ ಕಾರಜೋಳ ಸೂಚನೆ‌ ನೀಡಿದ್ದಾರೆ.

 Sharesee more..

ಕೆ.ಎಸ್.ಟಿ.ಸಿ.ಡಿ.ಸಿಯಿಂದ ಚಳಿಗಾಲದ ವಿಶೇಷ ಪ್ರವಾಸಗಳು

13 Sep 2019 | 6:03 PM

ಬೆಂಗಳೂರು, ಸೆ 13 [ಯುಎನ್ಐ] ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದಿಂದ ಪ್ರವಾಸಿಗರಿಗಾಗಿ ರಾಜ್ಯ ಹಾಗೂ ಅಂತಾರಾಜ್ಯದ ವಿವಿಧ ಪ್ರವಾಸಿ ತಾಣಗಳಿಗೆ ಅಕ್ಟೋಬರ್ - ಜನವರಿ ತಿಂಗಳಲ್ಲಿ ಉತ್ತರ ಕರ್ನಾಟಕ ಪಾರಂಪರಿಕ ಸ್ಥಳಗಳಿಗೆ ಐದು ದಿನಗಳ ವ್ಯವಸ್ಥಿತ ಪ್ರವಾಸ ಆಯೋಜಿಸಿದೆ.

 Sharesee more..

ಬೈಕ್ ಗೆ ಲಾರಿ ಡಿಕ್ಕಿ : ಓರ್ವ ಸಾವು

13 Sep 2019 | 5:24 PM

ಬೆಂಗಳೂರು, ಸೆ 13 (ಯುಎನ್ಐ) ಬೈಕ್ ಗೆ ಲಾರಿಯೊಂದು ಡಿಕ್ಕಿ ಹೊಡೆದ ಪರಿಣಾಮ ಹಿಂಬದಿಯ ಸವಾರ ಮೃತಪಟ್ಟಿರುವ ಘಟನೆ ನಗರದ ಹೆಬ್ಬಾಳದಲ್ಲಿ ಶುಕ್ರವಾರ ನಡೆದಿದೆ30 ವರ್ಷದ ಪೀಣ್ಯದ ಅಂದ್ರಹಳ್ಳಿಯ ಪ್ರೇಮ್ ಮೃತ ದುರ್ದೈವಿ.

 Sharesee more..

ಬಿಜೆಪಿ ಸರ್ಕಾರಕ್ಕೆ ಕೆಲ ಜೆಡಿಎಸ್ ಶಾಸಕರ ಅಭಯ:ಚಿಂತಿತರಾದ ಅನರ್ಹರು

13 Sep 2019 | 5:21 PM

ಬೆಂಗಳೂರು, ಸೆ 13(ಯುಎನ್ಐ)ಸ್ಪೀಕರ್ ತೀರ್ಪು ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಯ ತ್ವರಿತ ವಿಚಾರಣೆಗೆ ಸುಪ್ರಿಂಕೋರ್ಟ್ ನಿರಾಕರಿಸಿರುವುದರಿಂದ ದಿಕ್ಕಾಪಾಲಾಗಿರುವ ಅನರ್ಹ ಶಾಸಕರು,ಮುಂದಿನ ರಾಜಕೀಯ ಭವಿಷ್ಯದ ಕುರಿತು ಚಿಂತಿತರಾಗಿದ್ದಾರೆಮುಂದೇನು ಮಾಡಬೇಕು ಎಂಬ ಕುರಿತು ಶುಕ್ರವಾರ ಅನರ್ಹ ಶಾಸಕ ಡಾ|ಕೆ.

 Sharesee more..

ಮೊಬೈಲ್‍ಗಾಗಿ ವ್ಯಕ್ತಿ ಕೊಲೆ

13 Sep 2019 | 5:05 PM

ಬೆಂಗಳೂರು, ಸೆ 13 (ಯುಎನ್ಐ) ಕ್ಷುಲ್ಲಕ ಮೊಬೈಲ್‍ ವಿಷಯಕ್ಕೆ ವ್ಯಕ್ತಿಯೋರ್ವನಿಗೆ ಚಾಕು ಚುಚ್ಚಿ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ನಗರದ ಕೆಆರ್ ಮಾರುಕಟ್ಟೆಯ ಜಾಮೀಯಾ ಮಸೀದಿ ಬಳಿ ನಡೆದಿದೆತುಮಕೂರು ಮೂಲದ ಮೆಹಬೂಬ್ (30) ಕೆಲ ದಿನಗಳ ಹಿಂದೆ ಸದ್ದಾಂ ಎಂಬುವವರ ಬಳಿ ಮೊಬೈಲ್ ಪಡೆದುಕೊಂಡಿದ್ದರು.

 Sharesee more..

ಕುಮಾರಸ್ವಾಮಿ ತಮ್ಮ ಅಧಿಕಾರ ನಡೆಸಿದ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಲಿ : ಸಚಿವ ವಿ.ಸೋಮಣ್ಣ ತಿರುಗೇಟು

13 Sep 2019 | 4:47 PM

ಮೈಸೂರು,ಸೆ 13(ಯುಎನ್ಐ) ಹದಿನಾಲ್ಕು ತಿಂಗಳು ಮುಖ್ಯಮಂತ್ರಿಯಾಗಿ ಹೇಗೆ ಅಧಿಕಾರ ಮಾಡಿದ್ದರು ಎಂಬುದನ್ನು ತಾಯಿ ಚಾಮುಂಡೇಶ್ವರಿ ಮುಂದೆ ನಿಂತು ಕುಮಾರಸ್ವಾಮಿ ಆತ್ಮಾವಲೋಕನ ಮಾಡಲಿ ಎಂದು ವಸತಿ ಸಚಿವ ವಿ ಸೋಮಣ್ಣ ತಿರುಗೇಟು ನೀಡಿದ್ದಾರೆ ನಗರದ ಮುಡಾ ಆವರಣದಲ್ಲಿಂದು ಜಿಲ್ಲಾ ಉಸ್ತುವಾರಿ ಸಚಿವರ ಕಚೇರಿ ಉದ್ಘಾಟಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಲ್ಲಿ ಯಾರು ಯಾರಿಗೂ ದೊಡ್ಡವರಲ್ಲ.

 Sharesee more..

ಪಕ್ಷದ ವರಿಷ್ಠರ ನಡೆಯಿಂದ ತಮಗೂ ಸಾಕಷ್ಟು ನೋವಾಗಿದೆ : ಬಸವರಾಜ ಹೊರಟ್ಟಿ ಸ್ಪೋಟಕ ಹೇಳಿಕೆ

13 Sep 2019 | 4:40 PM

ಧಾರವಾಡ,ಸೆ 13 (ಯುಎನ್ಐ) ಪಕ್ಷದ ನಾಯಕರ ನಡೆಯಿಂದ ತಮಗೂ ಸಾಕಷ್ಟು ನೋವಾಗಿದೆ, ಆದರೆ, ನಾನು ಬಹಿರಂಗವಾಗಿ ಹೇಳಿಕೊಂಡಿಲ್ಲ ತಮ್ಮ ಬಳಿ ಅನೇಕ ಶಾಸಕರು ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

 Sharesee more..

'ನಾರಾಯಣ ಗುರು' ನಿಗಮ ಸ್ಥಾಪನೆಗೆ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ-ಸಚಿವ ಶ್ರೀನಿವಾಸ ಪೂಜಾರಿ

13 Sep 2019 | 4:35 PM

ಉಡುಪಿ, ಸೆ 13 (ಯುಎನ್‌ಐ) ಸಮಾಜದಲ್ಲಿನ ಶೋಷಿತ ವರ್ಗಗಳ ಅಭಿವೃದ್ಧಿಗೆ ಬ್ರಹ್ಮಶ್ರೀ ನಾರಾಯಣ ಗುರುಗಳ ಹೆಸರಿನಲ್ಲಿ ನಿಗಮ ಸ್ಥಾಪಿಸಲು ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವುದಾಗಿ ಮೀನುಗಾರಿಕೆ, ಬಂದರು ಮತ್ತು ಒಳನಾಡಿನ ಸಾರಿಗೆ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.

 Sharesee more..

ಯಡಿಯೂರಪ್ಪ ಭೇಟಿ ಮಾಡಿದ ಸಂಸದ ಜಿ.ಎಂ.ಸಿದ್ದೇಶ್ವರ್ ನೇತೃತ್ವದ ನಿಯೋಗ

13 Sep 2019 | 4:05 PM

ಬೆಂಗಳೂರು,ಸೆ 13(ಯುಎನ್ಐ) ಮಧ್ಯ ಕರ್ನಾಟಕ ಭಾಗದ ಭದ್ರಾ ಮೇಲ್ದಂಡೆ ಮೂಲಕ‌ ಕೆರೆಗಳಿಗೆ‌ ನೀರು ತುಂಬಿಸುವ ಯೋಜನೆ ಸಂಬಂಧ ದಾವಣಗೆರೆ ಸಂಸದ ಜಿ ಎಂ ಸಿದ್ದೇಶ್ವರ್ ನೇತೃತ್ವದ ನಿಯೋಗ, ಶುಕ್ರವಾರ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಮಹತ್ವದ ಚರ್ಚೆ ನಡೆಸಿತುಸಭೆಯಲ್ಲಿ ಈಗಾಗಲೇ ಟೆಂಡರ್ ಪ್ರಕ್ರಿಯೆ ಮುಗಿದಿರುವುದರಿಂದ ಹೊಸ ಟೆಂಡರ್ ಗೆ ಅವಕಾಶವಿರುವುದಿಲ್ಲ.

 Sharesee more..

ಸೆ. 29ರಿಂದ ದಸರಾ ಚಟುವಟಿಕೆ ಆರಂಭ: ಹಿಂದಿಗಿಂತಲೂ ಹೆಚ್ಚು ಝಗಮಗಿಸಲಿರುವ ಮೈಸೂರು

13 Sep 2019 | 3:41 PM

ಮೈಸೂರು, ಸೆ 13 (ಯುಎನ್ಐ) ಮೈಸೂರು ದಸರಾ ವೀಕ್ಷಿಸಲು ಬರುವ ಪ್ರವಾಸಿಗರ ಕಣ್ಮನ ಸೆಳೆಯಲು ಸಜ್ಜಾಗಿರುವ ಜಿಲ್ಲಾಡಳಿತ, ರಾತ್ರಿ ವೇಳೆ ನಗರವನ್ನು ಇನ್ನಷ್ಟು ವೈಭವಯುತವಾಗಿಸಲು ಕ್ರಮ ಕೈಗೊಂಡಿದೆ ನಗರದ 75 ಕಿಮೀ ಉದ್ದದ ರಸ್ತೆ ಹಾಗೂ 91 ವೃತ್ತಗಳಲ್ಲಿ ದೀಪಾಲಂಕಾರ ಮಾಡಲು ಜಿಲ್ಲಾಡಳಿತ ನಿರ್ಧರಿಸಿದೆ.

 Sharesee more..

ರಾಜ್ಯದಲ್ಲಿ ಪೋಷಣ್ ಅಭಿಯಾನ್ ಅನುಷ್ಠಾನ: ಯಡಿಯೂರಪ್ಪ ಜೊತೆ ಸ್ಮೃತಿ ಇರಾನಿ ಸಭೆ

13 Sep 2019 | 3:23 PM

ಬೆಂಗಳೂರು, ಸೆ 13 (ಯುಎನ್‍ಐ) ಪ್ರಧಾನಿ ನರೇಂದ್ರ ಮೋದಿ ಅವರ ಸ್ವಸ್ಥ ಭಾರತ ನಿರ್ಮಾಣ ಕನಸಿನ ಭಾಗವಾಗಿರುವ 'ಪೋಷಣ್ ಅಭಿಯಾನ್ ಯೋಜನೆ' ಸಂಬಂಧ ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಸ್ಮೃತಿ ಇರಾನಿ, ರಾಜ್ಯದಲ್ಲಿನ ಸ್ಥಿತಿಗತಿ ಬಗ್ಗೆ ಪರಾಮರ್ಶೆ ನಡೆಸಿದರುಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣದಲ್ಲಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರೊಂದಿಗೆ ಪ್ರಗತಿಪರಿಶೀಲನೆ ನಡೆಸಿದ ಅವರು, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಮಹತ್ವಾಕಾಂಕ್ಷಿಯ ಪೋಷಣ್ ಅಭಿಯಾನ್ ಯಶಸ್ಸಿಗೆ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಹೆಚ್ಚಿನ ಶ‍್ರಮವಹಿಸಬೇಕೆಂದು ಸಲಹೆ ನೀಡಿದರು.

 Sharesee more..

ಕುಮಾರಸ್ವಾಮಿ ವಿರುದ್ಧ ಮತ್ತಷ್ಟು ಚೂರಿಗಳು ಹೊರಬರಲಿವೆ : ಸಾ.ರಾ.ಮಹೇಶ್

13 Sep 2019 | 3:15 PM

ಮೈಸೂರು,ಸೆ 13(ಯುಎನ್ಐ) ಜೆಡಿಎಸ್ ನಿಂದ ಕೆಲವು ಶಾಸಕರು ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ವಿರುದ್ಧ ತಿರುಗಿ ಬಿದ್ದಿದ್ದು, ಇನ್ನಷ್ಟು ಶಾಸಕರು ಬಂಡಾಯದ ಹಾದಿ ತುಳಿಯುವ ಸಾಧ್ಯತೆಯಿದೆ ಎಂದು ಮಾಜಿ ಸಚಿವ ಸಾ ರಾ ಮಹೇಶ್ ಹೇಳಿದ್ದಾರೆ.

 Sharesee more..

‘ನೈತಿಕತೆ ಮರೆತು ಆಡಳಿತ ನಡೆಸುತ್ತಿರುವ ರಾಜ್ಯ ಸರ್ಕಾರ’

13 Sep 2019 | 3:15 PM

ಬೆಂಗಳೂರು, ಸೆ 13 (ಯುಎನ್ಐ) ನೆರೆಯಿಂದ ನೊಂದ ನಿರಾಶ್ರಿತರಿಗೆ ಪರಿಹಾರ ಒದಗಿಸದೆ ನೈತಿಕತೆ ಮರೆತು ಆಡಳಿತ ನಡೆಸುತ್ತಿರುವ ರಾಜ್ಯ ಸರ್ಕಾರದ ನೀತಿಯನ್ನು ಜನತಾದಳ ( ಸಂಯುಕ್ತ) ಪಕ್ಷವು ಖಂಡಿಸಿದೆ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಪಕ್ಷದ ರಾಜ್ಯ ವಕ್ತಾರ ಚಂದ್ರಶೇಖರ ವಿ.

 Sharesee more..