Saturday, Sep 21 2019 | Time 21:10 Hrs(IST)
  • ಉಪ ಚುನಾವಣೆ ಘೋಷಣೆ: ಅನರ್ಹರಿಗೆ ಭವಿಷ್ಯದ ಚಿಂತೆ
  • ಪರಿಷತ್ ವಿಪಕ್ಷ ಸ್ಥಾನಕ್ಕೆ ಲಾಬಿ ಶುರುಮಾಡಿಕೊಂಡ ಸಿ ಎಂ ಇಬ್ರಾಹಿಂ
  • 370ನೇ ವಿಧಿ ರದ್ಧತಿ ಸಂಬಂಧ ನಾಳೆ ನಗರದಲ್ಲಿ ಜನಜಾಗೃತಿ ಸಮಾವೇಶ : ಎನ್ ರವಿಕುಮಾರ್
  • ಉಪ ಚುನಾವಣೆಗೆ ಭರ್ಜರಿ ತಯಾರಿ ನಡೆಸಿದ ಕಾಂಗ್ರೆಸ್ ಸಂಭವನೀಯ ಅಭ್ಯರ್ಥಿಗಳು ?!
  • ಮೋಟಾರು ವಾಹನ ದಂಡ ಶುಲ್ಕ ಇಳಿಕೆ : ಮುಖ್ಯಮಂತ್ರಿ
  • ಉಪಚುನಾವಣೆಗೆ ಸಜ್ಜಾಗಿದ್ದೇವೆ , 15 ಕ್ಷೇತ್ರಗಳನ್ನು ಗೆಲ್ಲುತ್ತೇವೆ : ದಿನೇಶ್ ಗುಂಡೂರಾವ್
National

ಇ – ಸಿಗರೇಟ್ ಸುಗ್ರೀವಾಜ್ಞೆಗೆ ರಾಷ್ಟ್ರಪತಿ ಅಂಕಿತ

20 Sep 2019 | 10:38 PM

ನವದೆಹಲಿ, ಸೆ 20 (ಯುಎನ್ಐ) ಇ-ಸಿಗರೇಟ್ ರದ್ದು ಮಾಡುವ ಸುಗ್ರೀವಾಜ್ಞೆಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅಂಕಿತ ಹಾಕಿದ್ದಾರೆ ಎಲೆಕ್ಟ್ರಾನಿಕ್ ಸಿಗರೇಟ್‌ನ ಮಾರಾಟ, ವಿತರಣೆ, ಉತ್ಪಾದನೆ ಹಾಗೂ ಆಮದು ಮಾಡಿಕೊಳ್ಳುವುದನ್ನು ನಿಷೇಧಿಸಿ ಕೇಂದ್ರ ಸರ್ಕಾರ ಸುಗ್ರೀವಾಜ್ಞೆ ಹೊರಡಿಸಿದೆ.

 Sharesee more..

ಪ್ರಾಮಾಣಿಕ ತೆರಿಗೆ ಪಾವತಿದಾರರ ಬಗ್ಗೆ ಸರ್ಕಾರ ಯೋಚಿಸುತ್ತಿಲ್ಲ: ಕಾಂಗ್ರೆಸ್‌

20 Sep 2019 | 10:05 PM

ನವದೆಹಲಿ, ಸೆಪ್ಟೆಂಬರ್ 20 (ಯುಎನ್‌ಐ) ಕಾರ್ಪೊರೇಟ್ ತೆರಿಗೆಯನ್ನು ವರ್ಷಕ್ಕೆ 145000 ಕೋಟಿ ರೂ ಗಳಷ್ಟು ಕಡಿತಗೊಳಿಸುವ ಬಿಜೆಪಿ ಸರ್ಕಾರದ ನಿರ್ಧಾರವನ್ನು ಟೀಕಿಸಿರುವ ಕಾಂಗ್ರೆಸ್, ಸೆನ್ಸೆಕ್ಸ್ ಸೂಚ್ಯಂಕ ಭೀತಿಗೊಳಿಸುವ ಮತ್ತೊಂದು ಪ್ರಕ್ರಿಯೆ ಎಂದು ಶುಕ್ರವಾರ ಹೇಳಿದೆ.

 Sharesee more..

ಅಮೆರಿಕದಾದ್ಯಂತ ನೆಲೆಸಿರುವ ಭಾರತೀಯರ ಸಮ್ಮಿಲನ ವೇದಿಕೆ ಹೌಡಿ ಮೋದಿ : ತುಳ್ಸಿ ಗಬ್ಬರ್ಡ್

20 Sep 2019 | 10:03 PM

ನವದೆಹಲಿ, ಸೆ 20 (ಯುಎನ್ಐ) ನ್ಯೂಯಾರ್ಕ್ ನ ಹೌಸ್ಟನ್ ನಲ್ಲಿ ನಡೆಯಲಿರುವ ಹೌಡಿ ಮೋದಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಸಾಧ್ಯವಾಗುವುದಿಲ್ಲ ಎಂದು ಹೇಳುವ ಮೂಲಕ ವಿವಾದಕ್ಕೆ ಸಿಲುಕಿದ್ದ ಅಮೆರಿಕ ಕಾಂಗ್ರೆಸ್ ನ ಮೊದಲ ಹಿಂದೂ ಮಹಿಳೆ ಮತ್ತು ಡೆಮಾಕ್ರೆಟಿಕ್ ಪಕ್ಷದ ಅಧ್ಯಕ್ಷ ಆಕಾಂಕ್ಷಿ ತುಳ್ಸಿ ಗಬ್ಬರ್ಡ್ ಈ ಬೃಹತ್ ಕಾರ್ಯಕ್ರಮ ಭಾರತ ಮತ್ತು ಅಮೆರಿಕದ ನಡುವಿನ ದ್ವಿಪಕ್ಷೀಯ ಬಾಂಧವ್ಯ ವರ್ಧನೆಗೆ ಸಹಕಾರಿ ಎಂದು ಹೇಳಿದ್ದಾರೆ.

 Sharesee more..

ತೈಲ ಸಂಸ್ಕರಣಾಗಾರದ ನಿರ್ಮಾಣವು ಭಾರತ-ಮಂಗೋಲಿಯಾ ಸಂಬಂಧಕ್ಕೆ ಕೈಗನ್ನಡಿ: ಪ್ರಧಾನ್

20 Sep 2019 | 9:25 PM

ನವದೆಹಲಿ, ಸೆಪ್ಟೆಂಬರ್ 20 (ಯುಎನ್‌ಐ) ಭಾರತದ ನೆರವಿನೊಂದಿಗೆ 1 5 ದಶಲಕ್ಷ ಮೆಟ್ರಿಕ್ ಟನ್ ಸಾಮರ್ಥ್ಯದೊಂದಿಗೆ 1 ಶತಕೋಟಿ ಡಾಲರ್‌ ವೆಚ್ಚದ ತೈಲ ಸಂಸ್ಕರಣಾಗಾರವನ್ನು ನಿರ್ಮಿಸುವುದು ಭಾರತ-ಮಂಗೋಲಿಯಾ ಸ್ನೇಹಕ್ಕೆ ಒಂದು ಉದಾಹರಣೆಯಾಗಿದೆ ಎಂದು ಭಾರತ ಶುಕ್ರವಾರ ಹೇಳಿದೆ.

 Sharesee more..

ಪಿ ಚಿದಂಬರಂ ವಿರುದ್ಧ ರಾಜಕೀಯ ಪಿತೂರಿ: ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ಕಿಡಿ

20 Sep 2019 | 9:06 PM

ನವದೆಹಲಿ, ಸೆ 20(ಯುಎನ್ಐ) ಮಾಜಿ ಹಣಕಾಸು ಸಚಿವ ಪಿ ಚಿದಂಬರಂ ವಿರುದ್ಧ ರಾಜಕೀಯ ಪಿತೂರಿಯಿದೆ ಎಂದು ಪುನರಚ್ಚರಿಸಿರುವ ಕಾಂಗ್ರೆಸ್, ಹನ್ನೊಂದು ಮಂದಿ ಅಧಿಕಾರಿಗಳ ಸಹಿಯ ನಂತರವಷ್ಟೆ ಚಿದಂಬರಂ ಅವರು ಐಎನ್‌ಎಕ್ಸ್ ಮಾಧ್ಯಮ ಪ್ರಕರಣದ ಕಡತವನ್ನು ಅನುಮೋದಿಸಿದ್ದಾರೆ ಎಂದು ಹೇಳಿದೆ.

 Sharesee more..

ವಾಯುಪಡೆ ಬಲ ಹೆಚ್ಚಿಸಿದ ರಫೇಲ್ : ಧನೋವ

20 Sep 2019 | 8:41 PM

ನವದೆಹಲಿ, ಸೆ 20 (ಯುಎನ್ಐ ) ರಫೇಲ್ ಸಮರ ವಿಮಾನ ಸೇರ್ಪಡೆಯಿಂದಾಗಿ ಭಾರತೀಯ ವಾಯುಪಡೆ ಮತ್ತಷ್ಟು ಶಕ್ತಿಯುತವಾಗಿದೆ ಎಂದು ವಾಯುಪಡೆ ಮುಖ್ಯಸ್ಥ ಬಿ ಎಸ್ ಧನೋವಾ ಪ್ರತಿಪಾದಿಸಿದ್ದಾರೆ ಮುಂದಿನ ದಿನದಲ್ಲಿ ವಾಯುಪಡೆ ಮತ್ತಷ್ಟು ಆಧುನೀಕರಣಗೊಳ್ಳಬೇಕಾದ ಅಗತ್ಯವೂ ಇದೆ ಎಂದು ಅವರು ಇಂಡಿಯಾ ಟುಡೇಯ ಸಮಾವೇಶದಲ್ಲಿ ರಫೇಲ್ ಯುದ್ಧ ವಿಮಾನದಲ್ಲಿನ ಹಾರಾಟ ಹೇಗಿದೆ ಎಂಬ ಪ್ರಶ್ನೆಗೆ ಉತ್ತರಿಸಿದರು.

 Sharesee more..

ಕಾರ್ಪೊರೇಟ್ ತೆರಿಗೆ ಕಡಿತ: ಉದ್ಯಮಿಗಳ ಸ್ವಾಗತ

20 Sep 2019 | 7:50 PM

ಕೋಲ್ಕತಾ, ಸೆಪ್ಟೆಂಬರ್ 20 (ಯುಎನ್‌ಐ) ದೇಶೀಯ ಕಂಪನಿಗಳು ಮತ್ತು ಹೊಸದಾಗಿ ರೂಪುಗೊಂಡ ಉತ್ಪಾದನಾ ದೇಶೀಯ ಕಂಪನಿಗಳಿಗೆ ಕಾರ್ಪೊರೇಟ್ ತೆರಿಗೆಯನ್ನು ಕ್ರಮವಾಗಿ ಶೇ 22 ಮತ್ತು 15 ಕ್ಕೆ ಇಳಿಸುವ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಅವರ ನಿರ್ಧಾರವನ್ನು ಉದ್ಯಮದ ಮುಖಂಡರು ಮತ್ತು ಮಾರುಕಟ್ಟೆ ತಜ್ಞರು ಸ್ವಾಗತಿಸಿದ್ದಾರೆ.

 Sharesee more..
ಹೆಚ್ಚು ಭಾಷೆ ಕಲಿಯಿರಿ,ಮಾತೃಭಾಷೆ ಮರೆಯದಿರಿ: ವೆಂಕಯ್ಯ ನಾಯ್ಡು

ಹೆಚ್ಚು ಭಾಷೆ ಕಲಿಯಿರಿ,ಮಾತೃಭಾಷೆ ಮರೆಯದಿರಿ: ವೆಂಕಯ್ಯ ನಾಯ್ಡು

20 Sep 2019 | 5:25 PM

ನವದೆಹಲಿ,ಸೆಪ್ಟೆಂಬರ್ 20 (ಯುಎನ್‌ಐ) ಜನರು ಸಾಧ್ಯವಾದಷ್ಟು ಹೆಚ್ಚು ಭಾಷೆಗಳನ್ನು ಕಲಿಯಬೇಕು ಯಾವುದೇ ಭಾಷೆಯನ್ನು ಬಲವಂತವಾಗಿ ಹೇರಬಾರದು,ಅದೆ ರೀತಿ ಯಾವುದೇ ನಿರ್ದಿಷ್ಟ ಭಾಷೆಯ ವಿರುದ್ಧ ಕಠಿಣ ವಿರೋಧವೂ ಇರಬಾರದು ಎಂದು ಉಪರಾಷ್ಟಪತಿ ಎಂ.

 Sharesee more..

ಕಲ್ಲಿದ್ದಲು ಸಚಿವಾಲಯದ ನೂತನ ಕಾರ್ಯದರ್ಶಿಯಾಗಿ ಅನಿಲ್ ಕುಮಾರ್ ಜೈನ್

20 Sep 2019 | 5:04 PM

ನವದೆಹಲಿ, ಸೆಪ್ಟೆಂಬರ್ 20 (ಯುಎನ್‌ಐ) ಹಿರಿಯ ಐಎಎಸ್ ಅಧಿಕಾರಿ ಅನಿಲ್ ಕುಮಾರ್ ಜೈನ್ ಅವರನ್ನು ಕಲ್ಲಿದ್ದಲು ಸಚಿವಾಲಯದ ನೂತನ ಕಾರ್ಯದರ್ಶಿಯಾಗಿ ಸರ್ಕಾರ ಶುಕ್ರವಾರ ನೇಮಿಸಿದೆ 1986ರ ಬ್ಯಾಚ್‌ನ ಮಧ್ಯಪ್ರದೇಶದ ಕೇಡರ್ ಐಎಎಸ್ ಅಧಿಕಾರಿಯಾಗಿರುವ, ಪರಿಸರ ಸಚಿವಾಲಯದ ವಿಶೇಷ ಕಾರ್ಯದರ್ಶಿ ಜೈನ್ ಅವರು ಪ್ರಸ್ತುತ ಹುದ್ದೆಯಲ್ಲಿರುವ ಸುಮಂತಾ ಚೌಧುರಿ ಅವರ ಸ್ಥಾನವನ್ನು ಅಲಂಕರಿಸಲಿದ್ದಾರೆ.

 Sharesee more..

ಕಣಿವೆಯಲ್ಲಿ ಮಕ್ಕಳ ಬಂಧನ:ಹೈಕೋರ್ಟ್‌ನಿಂದ ವರದಿ ಕೋರಿದ ಸುಪ್ರೀಂ ಕೋರ್ಟ್

20 Sep 2019 | 2:45 PM

ನವದೆಹಲಿ, ಸೆ 20(ಯುಎನ್ಐ) ಜಮ್ಮು ಕಾಶ್ಮೀರದಲ್ಲಿ 370 ನೇ ವಿಧಿಯನ್ನು ರದ್ದುಪಡಿಸಿದ ನಂತರ ಕಣಿವೆಯಲ್ಲಿ ಮಕ್ಕಳನ್ನು ಬಂಧಿಸಲಾಗಿದೆ ಎಂಬ ಆರೋಪದ ಬಗ್ಗೆ ಸುಪ್ರೀಂ ಕೋರ್ಟ್ ಜಮ್ಮು ಮತ್ತು ಕಾಶ್ಮೀರ ಹೈಕೋರ್ಟ್‌ನಿಂದ ವರದಿ ಕೋರಿದೆ ಕಾಶ್ಮೀರದಲ್ಲಿ ಮಕ್ಕಳನ್ನು ಬಂಧಿಸಲಾಗಿದೆ ಎಂದು ಆರೋಪಿಸಿರುವ ಮಕ್ಕಳ ಹಕ್ಕು ಕಾರ್ಯಕರ್ತರಾದ ಇನಾಕ್ಷಿ ಗಂಗೂಲಿ ಮತ್ತು ಶಾಂತಾ ಸಿನ್ಹಾ ಅವರ ವಕೀಲರು ಇದಕ್ಕಾಗಿ ಕಣಿವೆಯ ಜನರು ಅಲ್ಲಿನ ಹೈಕೋರ್ಟ್ ಅನ್ನು ಸಂಪರ್ಕಿಸಲು ಸಾಧ್ಯವಾಗಿಲ್ಲ ಎಂದು ಸುಪ್ರೀಂ ಕೋರ್ಟ್ ಗೆ ತಿಳಿಸಿದ್ದರು.

 Sharesee more..

ನಾಳೆಯಿಂದ ಮೋದಿ ಅಮೆರಿಕ ಪ್ರವಾಸ: ಸಿಇಒಗಳೊಂದಿಗೆ ದುಂಡುಮೇಜಿನ ಸಭೆ

20 Sep 2019 | 12:46 PM

ನವದೆಹಲಿ,ಸೆಪ್ಟೆಂಬರ್ 20 (ಯುಎನ್‌ಐ) ಪ್ರಧಾನಿ ನರೇಂದ್ರ ಮೋದಿಯವರ ಅಮೆರಿಕ ಪ್ರವಾಸ ನಾಳೆಯಿಂದ ಶುರುವಾಗಲಿದ್ದು,ಆರ್ಥಿಕ ಮತ್ತು ಇಂಧನ ಪ್ರಮುಖ ವಿಷಯಗಳ ಬಗ್ಗೆ ಚರ್ಚಿಸಲು ಪ್ರಮುಖ ಸಿಇಒಗಳೊಂದಿಗೆ ಮಹತ್ವದ ದುಂಡುಮೇಜಿನ ಸಭೆ ನಡೆಸಲು ಭರ್ಜರಿ ತಯಾರಿ ನಡೆದಿದೆ.

 Sharesee more..

ಈರುಳ್ಳಿ ಬೆಲೆ ಗಗನಕ್ಕೆ: ಗ್ರಾಹಕರು, ಬೆಳಗಾರರ ಕಣ್ಣಲ್ಲಿ ನೀರು !!!

20 Sep 2019 | 12:11 PM

ನವದೆಹಲಿ, ಸೆ 20 ( ಯುಎನ್ ಐ) ದೇಶದ ರಾಜಧಾನಿ ದೆಹಲಿ ಸೇರಿದಂತೆ ಅನೇಕ ನಗರಗಳಲ್ಲಿ ಮತ್ತೊಮ್ಮೆ ಈರುಳ್ಳಿ ಬೆಲೆ ಗಗನಕ್ಕೇರಿದ್ದು,ಪರಿಣಾಮ ಗ್ರಾಹಕರು ಜೊತೆಗೆ ಬೆಳಗಾರರ ಕಣ್ಣಲ್ಲಿ ನೀರು ತರಿಸುತ್ತಿದೆ ಬೆಳೆಹಾಳಾಯಿತಲ್ಲ ರೈತರು, ದುಬಾರಿ ದರದಲ್ಲಿ ಹೇಗಪ್ಪ ಕೊಳ್ಳುವುದು ಎಂಬ ಚಿಂತೆಯಲ್ಲಿ ಗ್ರಾಹಕರು ಸಹ ಕಣ್ಣೀರು ಹಾಕುತ್ತಿದ್ದಾರೆ .

 Sharesee more..

ಅ 22 ರಂದು ಬ್ಯಾಂಕ್ ಮುಷ್ಕರ

20 Sep 2019 | 12:53 AM

ಹೈದರಾಬಾದ್, ಸೆ 19 (ಯುಎನ್ಐ) ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಅಕ್ಟೋಬರ್ 22 ರಂದು ಮುಷ್ಕರ ನಡೆಸುವುದಾಗಿ ಭಾರತೀಯ ಬ್ಯಾಂಕ್ ಸಂಘ (ಐಬಿಎ) ಅಧ್ಯಕ್ಷ ಸುನಿಲ್ ಮೆಹ್ತಾ ಮತ್ತು ಕೇಂದ್ರ ಮುಖ್ಯ ಕಾರ್ಮಿಕ ಆಯುಕ್ತ ರಾಜನ್ ವರ್ಮಾ ಅವರುಗಳಿಗೆ ಅಖಿಲ ಭಾರತ ಬ್ಯಾಂಕ್ ಉದ್ಯೋಗಿಗಳ ಸಂಘ (ಎಐಬಿಇಎ) ಮತ್ತು ಭಾರತದ ಬ್ಯಾಂಕ್ ಉದ್ಯೋಗಿಗಳ ಒಕ್ಕೂಟ (ಬಿಇಎಫ್ಐ) ತಿಳಿಸಿದೆ.

 Sharesee more..

ರಾಜೀವ್ ಕುಮಾರ್ ತನಿಖೆಗೆ ಸಹಕರಿಸದಿದ್ದರೆ ಸಿಬಿಐ ಬಂಧಿಸಬಹುದು: ಅಲಿಪುರ ನ್ಯಾಯಾಲಯ

19 Sep 2019 | 10:44 PM

ಕೋಲ್ಕತ್ತಾ, ಸೆ 19 (ಯುಎನ್ಐ) ಶಾರದಾ ಚಿಟ್ ಫಂಡ್ ಹಗರಣದಲ್ಲಿ ಕೋಲ್ಕತಾ ಮಾಜಿ ಪೊಲೀಸ್ ಆಯುಕ್ತ ರಾಜೀವ್ ಕುಮಾರ್ ಕೇಂದ್ರ ತನಿಖಾ ಸಂಸ್ಥೆಗೆ ಸಹಕರಿಸದಿದ್ದರೆ ಅವರನ್ನು ವಶಕ್ಕೆ ತೆಗೆದುಕೊಳ್ಳಲು ಸಿಬಿಐಗೆ ಬಂಧನದ ವಾರಂಟ್ ಪಡೆಯುವ ಅಗತ್ಯವಿಲ್ಲ ಎಂದು ಅಲಿಪುರ್ ನ್ಯಾಯಾಲಯ ಇಂದು ಅಭಿಪ್ರಾಯಪಟ್ಟಿದೆ.

 Sharesee more..

ಕೇಂದ್ರ ದಿವ್ಯಾಂಗ ಸಲಹಾ ಮಂಡಳಿಯ ಮೂರನೇ ಸಭೆ

19 Sep 2019 | 8:46 PM

ನವದೆಹಲಿ, ಸೆ 19 (ಯುಎನ್‌ಐ) ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವ ಥಾವರ್‌ಚಂದ್ ಗೆಹ್ಲೋಟ್ ಅವರ ಅಧ್ಯಕ್ಷತೆಯಲ್ಲಿ ಅಂಗವೈಕಲ್ಯ ಕುರಿತ ಕೇಂದ್ರ ಸಲಹಾ ಮಂಡಳಿಯ ಮೂರನೇ ಸಭೆ ಗುರುವಾರ ನಡೆಯಿತು.

 Sharesee more..