Monday, Jun 1 2020 | Time 00:57 Hrs(IST)
National Share

ಕೇಂದ್ರದಿಂದ ಅಂಫಾನ್ ಚಂಡಮಾರುತ ಪೀಡಿತ ಬಂಗಾಳಕ್ಕೆ 1,000 ಕೋಟಿ, ಒಡಿಶಾಗೆ 500 ಕೋಟಿ ರೂ. ನೆರವು

ಕೇಂದ್ರದಿಂದ ಅಂಫಾನ್ ಚಂಡಮಾರುತ ಪೀಡಿತ ಬಂಗಾಳಕ್ಕೆ 1,000 ಕೋಟಿ, ಒಡಿಶಾಗೆ 500 ಕೋಟಿ ರೂ. ನೆರವು
ಕೇಂದ್ರದಿಂದ ಅಂಫಾನ್ ಚಂಡಮಾರುತ ಪೀಡಿತ ಬಂಗಾಳಕ್ಕೆ 1,000 ಕೋಟಿ, ಒಡಿಶಾಗೆ 500 ಕೋಟಿ ರೂ. ನೆರವು

ಕೊಲ್ಕತಾ/ಭುವನೇಶ್ವರ, ಮೇ 22 (ಯುಎನ್‍ಐ) ಅಂಫಾನ್ ಚಂಡಮಾರುತ ಪೀಡಿತ ಪಶ್ಚಿಮಬಂಗಾಳದಲ್ಲಿ ಪರಿಹಾರ ಕಾರ್ಯಗಳಿಗೆ 1,000 ಕೋಟಿ ಹಾಗೂ ಒಡಿಶಾ ರಾಜ್ಯಕ್ಕೆ 500 ಕೋಟಿ ರೂ. ನೆರವನ್ನು ಕೇಂದ್ರ ಸರ್ಕಾರ ಪ್ರಕಟಿಸಿದೆ.

ಪಶ್ಚಿಮ ಬಂಗಾಳ ಮತ್ತು ಒಡಿಶಾದಲ್ಲಿ ಪ್ರವಾಹ ಪೀಡಿತ ಪ್ರದೇಶಗಳ ವೈಮಾನಿಕ ನಡೆಸಿ ಪ್ರಧಾನಿ ಈ ನೆರವು ಘೋಷಿಸಿದ್ದಾರೆ.ಪಶ್ಚಿಮ ಬಂಗಾಳದ 24 ಪರಗಣಾಸ್‍ ಜಿಲ್ಲೆಯ ಬಷಿರ್‍ ಹತ್‍ ನಲ್ಲಿ ನಡೆದ ಚಂಡಮಾರುತದಿಂದ ಉಂಟಾದ ಹಾನಿಯ ಅಂದಾಜು ಹಾಗು ಪರಿಸ್ಥಿತಿ ಪರಿಶೀಲನಾ ಸಭೆಯಲ್ಲಿ ಪಶ್ಚಿಮಬಂಗಾಳಕ್ಕೆ ಪ್ರಧಾನಿ ನರೇಂದ್ರಮೋದಿ ಪರಿಹಾರವನ್ನು ಘೋಷಿಸಿದರು..ಚಂಡಮಾರುತ ಸಂಬಂಧಿತ ಘಟನೆಗಳಲ್ಲಿ ಮೃತಪಟ್ಟವರ ಕುಟುಂಬಗಳಿಗೆ ತಲಾ ಎರಡು ಲಕ್ಷ ರೂ, ಗಾಯಗೊಂಡವರಿಗೆ 50 ಸಾವಿರ ರೂ ಪರಿಹಾರವನ್ನೂ ಪ್ರಧಾನಿ ಪ್ರಕಟಿಸಿದರು.ಚಂಡಮಾರುತದಿಂದ ಭಾದಿತವಾಗಿರುವ ಪಶ್ಚಿಮ ಬಂಗಾಳಕ್ಕೆ ಕೇಂದ್ರ ಸರ್ಕಾರ ಅಗತ್ಯ ನೆರವು ಒದಗಿಸಲಿದೆ. ರಕ್ಷಣಾ ಕಾರ್ಯಗಳಿಗೆ ಹೆಚ್ಚುವರಿ ಕೇಂದ್ರದ ತಂಡಗಳನ್ನು ಕಳುಹಿಸಲಾಗುವುದು. ಹಾನಿಯ ಪ್ರಮಾಣವನ್ನು ಅಂದಾಜು ಮಾಡಲು ಕೇಂದ್ರ ತಂಡ ಶೀಘ್ರದಲ್ಲೇ ರಾಜ್ಯಕ್ಕೆ ಆಗಮಿಸಲಿದೆ. ಎಂದು ಅವರು ಹೇಳಿದರು.ಮುಖ್ಯಮಂತ್ರಿ ಮಮತಾಬ್ಯಾನರ್ಜಿ ಹಾನಿ ಕುರಿತ ವರದಿಯನ್ನು ಪ್ರಧಾನಿಗೆ ಸಲ್ಲಿಸಿದರು.ಸಭೆಯಲ್ಲಿ ಕೇಂದ್ರ ಸಚಿವ ಬಬುಲ್‍ ಸುಪ್ರೀಯೋ ಮತ್ತು ಉನ್ನತ ಅಧಿಕಾರಿಗಳು ಉಪಸ್ಥಿತರಿದ್ದರು.

ಇದಕ್ಕೂ ಮುನ್ನ, ಪ್ರಧಾನಿಯವರು ಮಮತಾ ಬ್ಯಾನರ್ಜಿ ಅವರೊಂದಿಗೆ ರಾಜ್ಯದ ಚಂಡಮಾರುತ ಪೀಡಿತ ಪ್ರದೇಶಗಳಲ್ಲಿ ವೈಮಾನಿಕ ಸಮೀಕ್ಷೆ ನಡೆಸಿದರು.ಅಂಫಾನ್‍ ನಿಂದ ಹೆಚ್ಚು ಬಾಧಿತವಾದ ಉತ್ತರ 24 ಪರಗಣಾಸ್‍ ಜಿಲ್ಲೆಯ ಮಿನಾಖಾ, ನಮ್‍ಖಾನ, ಹಿಂಗಲ್‌ಗುಂಜ್, ಗೋಸಾಬ, ಬಶೀರ್‌ಹತ್‍ ಮತ್ತು ಸುಂದರ್‌ಬನ್‌ ನ ವಿಶಾಲ ಪ್ರದೇಶಗಳಲ್ಲಿನ ಪರಿಸ್ಥಿತಿಯ ಸಮೀಕ್ಷೆ ನಡೆಸಿದರು.

ಬಳಿಕ ಭುವನೇಶ್ವರದ ಬಿಜು ಪಟ್ನಾಯಕ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಪ್ರಧಾನಿ, ಮುಖ್ಯಮಂತ್ರಿ ನವೀನ್‍ ಪಟ್ನಾಯಕ್‍ ಅವರೊಂದಿಗೆ ಒಡಿಶಾದ ಚಂಡಮಾರುತ ಪೀಡಿತ ಪ್ರದೇಶಗಳಲ್ಲಿ ವೈಮಾನಿಕ ಸಮೀಕ್ಷೆ ನಡೆಸಿದರು.ನಂತರ ಭುವನೇಶ್ವರದಲ್ಲಿ ಪ್ರಧಾನಿ ಉನ್ನತಮಟ್ಟದ ಚಂಡಮಾರುತ ಪರಿಸ್ಥಿತಿಯ ಪರಿಶೀಲನಾ ಸಭೆ ನಡೆಸಿದರು. ಸಭೆಯಲ್ಲಿ ರಾಜ್ಯಪಾಲ ಪ್ರೊ ಗಣೇಶಿ ಲಾಲ್‍, ಮುಖ್ಯಮಂತ್ರಿ ನವೀನ್‍ ಪಟ್ನಾಯಕ್‍, ಕೇಂದ್ರ ಸಚಿವರಾದ ಧರ್ಮೇಂದ್ರ ಪ್ರಧಾನ್‍, ಪ್ರತಾಪ್‍ ಚಂದ್ರ ಸಾರಂಗಿ ಮತ್ತು ಉನ್ನತ ಅಧಿಕಾರಿಗಳು ಪಾಲ್ಗೊಂಡಿದ್ದರು.ಈ ಸಂದರ್ಭದಲ್ಲಿ ಮಾತನಾಡಿದ ನರೇಂದ್ರಮೋದಿ, ಕೊವಿಡ್‍-19 ಸಂಕಷ್ಟದ ಸಮಯದಲ್ಲೇ ಮತ್ತೊಂದು ವಿಕೋಪ ಎದುರಾಗಿದೆ. ಬಿಕ್ಕಟ್ಟಿನ ಸಮಯದಲ್ಲಿ ರಾಜ್ಯದೊಂದಿಗೆ ಕೇಂದ್ರ ಸರ್ಕಾರ ನಿಲ್ಲಲಿದೆ. ಒಡಿಶಾದಲ್ಲಿ ರಕ್ಷಣಾ ಹಾಗೂ ಪರಿಹಾರ ಕಾರ್ಯಗಳಿಗೆ ಕೇಂದ್ರ ಸರ್ಕಾರದಿಂದ 500 ಕೋಟಿ ರೂ. ನೆರವು ನೀಡಲಾಗುತ್ತಿದೆ. ನಷ್ಟದ ಅಂದಾಜು ಮಾಡಿದ ನಂತರ ಮತ್ತಷ್ಟು ಪರಿಹಾರ ಒದಗಿಸಲಾಗುವುದು ಎಂದು ಹೇಳಿದರು.ಈ ಮಧ್ಯೆ, ಪಶ್ಚಿಮ ಬಂಗಾಳ ಮತ್ತು ಒಡಿಶಾದಲ್ಲಿ ವ್ಯಾಪಕ ಹಾನಿಯುಂಟು ಮಾಡಿರುವ ಅಂಪಾನ್‍ ಚಂಡಮಾರುತ ವಾಯಭಾರ ಕುಸಿತವಾಗಿ ದುರ್ಬಲಗೊಂಡು ಬಾಂಗ್ಲಾದೇಶದದಲ್ಲಿ ಸಕ್ರಿಯವಾಗಿದೆ.ಪಶ್ಚಿಮ ಬಂಗಾಳದಲ್ಲಿ ಚಂಡಮಾರುತದಿಂದ ಸುಮಾರು 80 ಮಂದಿ ಸಾವನ್ನಪ್ಪಿದ್ದು, ಸಾವಿರಾರು ಮಂದಿ ನಿರಾಶ್ರಿತರಾಗಿದ್ದಾರೆ. ರಾಜ್ಯದ ಕರಾವಳಿ ಜಿಲ್ಲೆಗಳು ಹೆಚ್ಚು ಬಾಧಿತವಾಗಿದ್ದು, ಅನೇಕ ಕಡೆ ಮರಗಳು, ವಿದ್ಯುತ್‍ ಕಂಬಗಳು ಉರುಳಿಬಿದ್ದಿವೆ. ಭಾರೀ ಮಳೆಯಿಂದ ರಸ್ತೆಗಳು ಕೊಚ್ಚಿಹೋಗಿದ್ದು, ಸೇತುವೆಗಳು ಹಾನಿಗೊಂಡಿವೆ. ಒಡಿಶಾದಲ್ಲೂ ಅಂಪಾನ್ ‍ಚಂಡಮಾರುತ ವ್ಯಾಪಕ ಹಾನಿಯುಂಟು ಮಾಡಿದೆ.ಯುಎನ್‍ಐ ಎಸ್‍ಎಲ್‍ಎಸ್ 1943

More News
ಜೂನ್ 3ರ ವೇಳೆಗೆ ಗುಜರಾತ್,ಮಹಾರಾಷ್ಟ್ರ ಕರಾವಳಿಗೆ ಚಂಡಮಾರುತ ಬೀಸುವ ಸಾಧ್ಯತೆ:ಹವಾಮಾನ ಇಲಾಖೆ ಎಚ್ಚರಿಕೆ

ಜೂನ್ 3ರ ವೇಳೆಗೆ ಗುಜರಾತ್,ಮಹಾರಾಷ್ಟ್ರ ಕರಾವಳಿಗೆ ಚಂಡಮಾರುತ ಬೀಸುವ ಸಾಧ್ಯತೆ:ಹವಾಮಾನ ಇಲಾಖೆ ಎಚ್ಚರಿಕೆ

31 May 2020 | 9:35 PM

ನವದೆಹಲಿ, ಮೇ 31 (ಯುಎನ್‌ಐ) ಅರಬ್ಬಿ ಸಮುದ್ರ ಮತ್ತು ಲಕ್ಷದ್ವೀಪಗಳ ಮೇಲೆ ರೂಪುಗೊಂಡ ಕಡಿಮೆ ಒತ್ತಡ ಪ್ರದೇಶವು ಚಂಡಮಾರುತವಾಗಿ ಮತ್ತಷ್ಟು ತೀವ್ರಗೊಳ್ಳುವ ಸಾಧ್ಯತೆಯಿದ್ದು, ಜೂನ್ 3 ರೊಳಗೆ ಕರಾವಳಿ ರಾಜ್ಯಗಳಾದ ಮಹಾರಾಷ್ಟ್ರ ಮತ್ತು ಗುಜರಾತ್ ಗೆ ಬೀಸುವ ಸಾಧ್ಯತೆ ಇದೆ ಎಂದು ಭಾರತ ಹವಾಮಾನ ಇಲಾಖೆ ತಿಳಿಸಿದೆ.

 Sharesee more..
ದೇಶದಲ್ಲಿ ಒಂದೇ ದಿನ 8380 ಕೊರೋನಾ ಸೋಂಕು ಪತ್ತೆ: ಸಾವಿನ ಸಂಖ್ಯೆ 5164ಕ್ಕೆ ಏರಿಕೆ

ದೇಶದಲ್ಲಿ ಒಂದೇ ದಿನ 8380 ಕೊರೋನಾ ಸೋಂಕು ಪತ್ತೆ: ಸಾವಿನ ಸಂಖ್ಯೆ 5164ಕ್ಕೆ ಏರಿಕೆ

31 May 2020 | 9:26 PM

ನವದೆಹಲಿ, ಮೇ 31 (ಯುಎನ್ಐ) ರಾಷ್ಟ್ರವ್ಯಾಪಿ ಲಾಕ್‌ಡೌನ್ 4.0 ಭಾನುವಾರ ಮುಕ್ತಾಯಗೊಳ್ಳುತ್ತಿದ್ದಂತೆ, ದೇಶದಲ್ಲಿ ಒಂದೇ ದಿನ ಕೊರೋನಾ ಸೋಂಕು 8380 ಜನರಲ್ಲಿ ಕಂಡುಬಂದಿದೆ.

 Sharesee more..