Monday, Nov 18 2019 | Time 22:10 Hrs(IST)
 • ಡೆವಿಸ್ ಕಪ್: ಪಾಕ್ ವಿರುದ್ಧದ ಪಂದ್ಯಕ್ಕಿಲ್ಲ ಬೋಪಣ್ಣ
 • ಮೋದಿ ಭೇಟಿಯಾದ ಬಿಲ್‌ಗೇಟ್ಸ್: ಪ್ರಧಾನಿಗೆ ಶ್ಲಾಘನೆ
 • ತಿರುಪತಿ- ತಿರುಮಲವನ್ನು ಪ್ಲಾಸ್ಟಿಕ್ ಮುಕ್ತಗೊಳಿಸಲು ಟಿಟಿಡಿ ನಿರ್ಧಾರ
 • ಪ್ರಧಾನಿ ಮೋದಿ ಭೇಟಿ ಮಾಡಿದ ಬಿಲ್ ಗೇಟ್ಸ್
 • ಸಂಗ್ರೂರ್ ದಲಿತನ ಹತ್ಯೆ: ಸಂತ್ರಸ್ತ ಕುಟುಂಬಕ್ಕೆ 20 ಲಕ್ಷ ಪರಿಹಾರ, ಪತ್ನಿಗೆ ಸರ್ಕಾರಿ ನೌಕರಿ ಘೋಷಿಸಿದ ಪಂಜಾಬ್ ಸರ್ಕಾರ
 • ಎನ್ ಸಿಪಿ ನಾಯಕ ಶರದ್ ಪವಾರ್ ಬಗ್ಗೆ ಪ್ರಧಾನಿ ಮೋದಿ ಶ್ಲಾಘನೆ
 • ಡಿ 9ರ ಬಳಿಕ ರಾಜ್ಯದಲ್ಲಿ ಬಿಜೆಪಿಗೆ‌ ಅಸ್ತಿತ್ವವಿಲ್ಲ: ಕುಮಾರಸ್ವಾಮಿ ಭವಿಷ್ಯ
 • ಡಿ 9ರ ಬಳಿಕ ರಾಜ್ಯದಲ್ಲಿ ಬಿಜೆಪಿಗೆ‌ ಅಸ್ತಿತ್ವವಿಲ್ಲ: ಕುಮಾರಸ್ವಾಮಿ ಭವಿಷ್ಯ
 • ಚಿಕ್ಕಬಳ್ಳಾಪುರ ಉಪಕದನದ ಅಖಾಡಕ್ಕೆ ಡಿ ಶಿ ವಕುಮಾರ್ ಪ್ರವೇಶ
 • ಎಟಿಪಿ ಶ್ರೇಯಾಂಕ: ಐದನೇ ಬಾರಿ ಅಗ್ರ ಸ್ಥಾನಕ್ಕೇರಿದ ನಡಾಲ್
 • “ಮಹಾ” ಟ್ವಿಸ್ಟ್ ಶಿವಸೇನೆ - ಬಿಜೆಪಿ ನಡುವೆ ಹೊಸ ಸೂತ್ರ !!
 • ಮಹಾಲಕ್ಷ್ಮೀ ಲೇಔಟ್ ಬಿಜೆಪಿ ಅಭ್ಯರ್ಥಿ ಗೋಪಾಲಯ್ಯ ಹಾಗೂ ಪತ್ನಿ ಹೇಮಲತಾ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಕೆ
 • ಲಖನ್ ಜೊತೆ ಸತೀಶ್ ಜಾರಕಿಹೊಳಿ ಸಹ ನಾಮಪತ್ರ ಸಲ್ಲಿಕೆ: ರಂಗೇರುತ್ತಿರುವ ಕಣ
 • ಓಮನ್ ವಿರುದ್ಧ ಭಾರತಕ್ಕೆೆ ಮಾಡು ಇಲ್ಲವೆ ಮಡಿ ಪಂದ್ಯ ನಾಳೆ
 • ಪವಾರ್- ಸೋನಿಯಾ ಮಾತುಕತೆ: ಇನ್ನೂ ಬಹಿರಂಗವಾಗದ ಸರಕಾರ ರಚನೆಗೆ ಗುಟ್ಟು !!!
National Share

ದಿ.ಶ್ಯಾಮ್ ಪ್ರಸಾದ್ ಮುಖರ್ಜಿಗೆ ಪ್ರಧಾನಿ, ಬಿಜೆಪಿ ನಾಯಕರ ಶ್ರದ್ಧಾಂಜಲಿ

ದಿ.ಶ್ಯಾಮ್ ಪ್ರಸಾದ್ ಮುಖರ್ಜಿಗೆ ಪ್ರಧಾನಿ, ಬಿಜೆಪಿ ನಾಯಕರ ಶ್ರದ್ಧಾಂಜಲಿ
ದಿ.ಶ್ಯಾಮ್ ಪ್ರಸಾದ್ ಮುಖರ್ಜಿಗೆ ಪ್ರಧಾನಿ, ಬಿಜೆಪಿ ನಾಯಕರ ಶ್ರದ್ಧಾಂಜಲಿ

ನವದೆಹಲಿ, ಜೂ 23 (ಯುಎನ್ಐ) ಬಿಜೆಪಿ ಸಂಸ್ಥಾಪಕ ಶ್ಯಾಮ್ ಪ್ರಸಾದ್ ಮುಖರ್ಜಿ ಅವರ ಪುಣ್ಯತಿಥಿ ಅಂಗವಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಇತರ ಬಿಜೆಪಿ ನಾಯಕರು ಭಾನುವಾರ ಶ್ರದ್ಧಾಂಜಲಿ ಸಲ್ಲಿಸಿದರು

ಡಾ ಶ್ಯಾಮ್ ಪ್ರಸಾದ್ ಮುಖರ್ಜಿ ಅವರ ಬಲಿದಾನ ದಿನದ ಹಿನ್ನೆಲೆಯಲ್ಲಿ ಅವರನ್ನು ಸ್ಮರಿಸುತ್ತಿದ್ದೇವೆ, ಧರ್ಮನಿಷ್ಠ ದೇಶಭಕ್ತ ಮತ್ತು ಹೆಮ್ಮೆಯ ರಾಷ್ಟ್ರೀಯವಾದಿ ಡಾ ಮುಖರ್ಜಿ ಅವರು ತಮ್ಮ ಜೀವನವನ್ನು ಭಾರತದ ಏಕತೆ ಮತ್ತು ಸಮಗ್ರತೆಗಾಗಿ ವ್ಯಯಿಸಿದರು ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ

ದಿವಂಗತ ಮುಖರ್ಜಿ ಅವರ ಬಲಿಷ್ಠ ಮತ್ತು ಏಕೀಕೃತ ಭಾರತದ ಬಗೆಗಿನ ಉತ್ಸಾಹವು ನಮಗೆ ಸ್ಫೂರ್ತಿ ನೀಡುತ್ತಲೇ ಇದೆ ಮತ್ತು 130 ಕೋಟಿ ಭಾರತೀಯರಿಗೆ ಸೇವೆ ಸಲ್ಲಿಸಲು ನಮಗೆ ಶಕ್ತಿ ನೀಡುತ್ತಿದೆ ಎಂದು ಪ್ರಧಾನಿ ಹೇಳಿದ್ದಾರೆ

ದಿವಂಗತ ಮುಖರ್ಜಿ ಅವರಿಗೆ ಕೇಂದ್ರ ಸಚಿವ ಮತ್ತು ಬಿಜೆಪಿ ಅಧ್ಯಕ್ಷ ಅಮಿತ್ ಶಾ ಕೂಡ ಗೌರವ ಸಲ್ಲಿಸಿದ್ದಾರೆ

ಬಿಜೆಪಿಯ ಕೇಂದ್ರ ಕಚೇರಿಯಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಭಾರತೀಯ ಜನ ಸಂಘದ ಸ್ಥಾಪಕ, ಮಹಾನ್ ದೇಶಭಕ್ತನಿಗೆ ಅಮಿತ್ ಶಾ ಮತ್ತು ಪಕ್ಷದ ಕಾರ್ಯಾಧ್ಯಕ್ಷ ಜೆ ಪಿ ನಡ್ಡಾ ಪುಷ್ಪನಮನ ಸಲ್ಲಿಸಿದರು

ಜಮ್ಮು ಮತ್ತು ಕಾಶ್ಮೀರದಲ್ಲಿ ಏಕ ರಾಷ್ಟ್ರ, ಏಕ ಸಂವಿಧಾನದ ಮಾನದಂಡಗಳನ್ನು ಖಾತ್ರಿಪಡಿಸುವಲ್ಲಿ ಶ್ಯಾಮ್ ಪ್ರಸಾದ್ ಮುಖರ್ಜಿ ಅವರ ಕೊಡುಗೆಯನ್ನು ಅಮಿತ್ ಶಾ ಟ್ವಿಟರ್ ಮೂಲಕ ಸ್ಮರಿಸಿಕೊಂಡಿದ್ದಾರೆ

ಇಂದು ನಾವು ಜಮ್ಮು ಮತ್ತು ಕಾಶ್ಮೀರದಲ್ಲಿ ವ್ಯವಸ್ಥೆ ಉಳಿದಿದ್ದರೆ ಅದಕ್ಕೆ ಶ್ಯಾಮ್‌ ಪ್ರಸಾದ್ ಮುಖರ್ಜಿ ಕಾರಣ ಎಂದು ಅವರು ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ

ಜನ ಸಂಘದ ಸಂಸ್ಥಾಪಕ ಡಾ ಶ್ಯಾಮ್ ಪ್ರಸಾದ್ ಮುಖರ್ಜಿ ಅವರ ಪುಣ್ಯತಿಥಿ ಹಿನ್ನೆಲೆಯಲ್ಲಿ ಅವರಿಗೆ ನನ್ನ ವಿನಮ್ರ ಶ್ರದ್ಧಾಂಜಲಿ, ಅವರು ನಮ್ಮ ದೇಶಕ್ಕೆ ಕೊಟ್ಟ ಕೊಡುಗೆ ಎಂದಿಗೂ ಸ್ಮರಣೀಯ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಟ್ವೀಟ್ ಮಾಡಿದ್ದಾರೆ

ಇದಕ್ಕೂ ಮೊದಲು ನಡ್ಡಾ ಅವರು ಫಿರೋಜ್‌ಶಾ ಕೋಟ್ಲಾ ಮೈದಾನದ ಶಾಹಿದಿ ಪಾರ್ಕ್‌ನಲ್ಲಿ ಮುಖರ್ಜಿಗೆ ಅವರಿಗೆ ಗೌರವ ಸಲ್ಲಿಸಿದರು

ಭಾರತೀಯ ಜನ ಸಂಘದ ಸಂಸ್ಥಾಪಕ, ಶಿಕ್ಷಣ ತಜ್ಞ ಮತ್ತು ಶ್ರೇಷ್ಠ ದೇಶಭಕ್ತನಿಗೆ ನಾನು ಗೌರವ ಸಲ್ಲಿಸುತ್ತಿದ್ದೇನೆ, ದೇಶದ ಏಕತೆ ಮತ್ತು ಸಮಗ್ರತೆಗೆ ಅವರ ಕೊಡುಗೆ ವಿಶಿಷ್ಟವಾದುದು ಎಂದು ನಡ್ಡಾ ಅವರು ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ

"ಒಂದು ದೇಶ ಒಂದು ಸಂವಿಧಾನ" ಎಂಬ ಪರಿಕಲ್ಪನೆಯನ್ನು ದಿವಂಗತ ಮುಖರ್ಜಿ ಹೊಂದಿದ್ದರು, ಸ್ವಾತಂತ್ರ್ಯನಂತರ ಅವರ ತ್ಯಾಗವು ದೇಶದ ಸಮಗ್ರತೆ ಮತ್ತು ಏಕತೆಯನ್ನು ಖಚಿತಪಡಿಸಿಕೊಳ್ಳಲು ಮೊದಲ ಆಂದೋಲನವಾಗಿ ಆರಂಭಗೊಂಡಿತು ಎಂದು ಅವರು ಮತ್ತೊಂದು ಟ್ವೀಟ್ ನಲ್ಲಿ ತಿಳಿಸಿದ್ದಾರೆ

1901, ಜುಲೈ 6ರಂದು ಜನಿಸಿದ್ದ ಮುಖರ್ಜಿ 1953, ಜೂನ್ 23ರಂದು ಕೊನೆಯುಸಿರೆಳೆದರು

ಬಿಜೆಪಿ ಕೇಂದ್ರ ಕಚೇರಿಯಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ನಡ್ಡಾ, ದಿವಂಗತ ಮುಖರ್ಜಿ ಅವರು ಜಮ್ಮು-ಕಾಶ್ಮೀರದ ಸಮಗ್ರತೆಗೆ ನೀಡಿದ ಕೊಡುಗೆ ಈಗಲೂ ಪ್ರಸ್ತುತ ಎಂದು ಹೇಳಿದರು

"ಅವರ ಸಾವು ಸಂಶಯಾಸ್ಪದ ಸನ್ನಿವೇಶದಲ್ಲಿ ಸಂಭವಿಸಿದೆ" ಎಂದು ನಡ್ಡಾ ಹೇಳಿದರು,

ದಿವಂಗತ ನಾಯಕ ತನ್ನ ಕಾಶ್ಮೀರ ನೀತಿಯ ವಿಷಯದಲ್ಲಿ ದೇಶದ ಮೊದಲ ಪ್ರಧಾನಿ ಪಂಡಿತ್ ಜವಾಹರಲಾಲ್ ನೆಹರೂ ಅವರೊಂದಿಗೆ ಭಿನ್ನಾಭಿಪ್ರಾಯ ಹೊಂದಿದ್ದರು ಎಂದು ನಡ್ಡಾ ಸ್ಮರಿಸಿದರು

ದಿವಂಗತ ಮುಖರ್ಜಿ ಅವರು ನೆಹರೂ-ಲಿಯಾಕತ್ ಅಲಿ ಒಪ್ಪಂದವನ್ನು ಸಮಾಧಾನಗೊಳಿಸುವ ನೀತಿ ಎಂದು ಟೀಕಿಸಿದ್ದರು ಎಂದು ನಡ್ಡಾ ಹೇಳಿದರು

ಲಿಯಾಖತ್ –ನೆಹರೂ ಒಪ್ಪಂದ (ದೆಹಲಿ ಒಪ್ಪಂದ) ಭಾರತ ಮತ್ತು ಪಾಕಿಸ್ತಾನದ ನಡುವಿನ ಒಪ್ಪಂದವಾಗಿದ್ದು, ಇದಕ್ಕೆ 1950, ಏಪ್ರಿಲ್ 8ರಂದು ಸಹಿ ಹಾಕಲಾಗಿದೆ

ಒಪ್ಪಂದದ ಪ್ರಕಾರ, ನಿರಾಶ್ರಿತರಿಗೆ ತಮ್ಮ ಆಸ್ತಿಯನ್ನು ವಿಲೇವಾರಿ ಮಾಡಿಕೊಳ್ಳಲು ಇಲ್ಲಿಗೆ ಬರಲು ಅವಕಾಶ ನೀಡಲಾಯಿತು, ಅಪಹರಿಸಿದ ಮಹಿಳೆಯರನ್ನು ಮತ್ತು ಲೂಟಿ ಮಾಡಿದ ಆಸ್ತಿಯನ್ನು ಹಿಂದಿರುಗಿಸಬೇಕಾಗಿತ್ತು, ಆದರೆ ಬಲವಂತದ ಮತಾಂತರಗಳನ್ನು ಗುರುತಿಸಲಾಗಲಿಲ್ಲ ಮತ್ತು ಅಲ್ಪಸಂಖ್ಯಾತರ ಹಕ್ಕುಗಳನ್ನು ದೃಢಪಡಿಸಲಾಯಿತು.

ಯುಎನ್ಐ ಎಎಚ್ ಡಿವಿ 1200