Tuesday, Nov 19 2019 | Time 06:35 Hrs(IST)
  • 15 ಕ್ಷೇತ್ರಗಳಲ್ಲಿ ನಾಮಪತ್ರ ಸಲ್ಲಿಕೆ ಮುಕ್ತಾಯ: ಗೋಕಾಕ್ ನಿಂದ ಸತೀಶ್ ಜಾರಕಿಹೊಳಿ,ಹಿರೇಕೆರೂರಿ ನಿಂದ ಸೃಷ್ಠಿ ಪಾಟೀಲ್,ಮಹಾಲಕ್ಷ್ಮಿ ಲೇಔಟ್ ನಿಂದ ಹೇಮಲತಾ ನಾಮಪತ್ರ ಸಲ್ಲಿಕೆ
National Share

ಶತಮಾನದ ಅಂಕಿಅಂಶಗಳ ಆಧಾರದಲ್ಲಿ ಮಳೆ ಪ್ರಮಾಣ ಅಷ್ಟೇನು ಕುಸಿತಗೊಂಡಿಲ್ಲ: ಡಾ. ಹರ್ಷವರ್ಧನ್

ಶತಮಾನದ ಅಂಕಿಅಂಶಗಳ ಆಧಾರದಲ್ಲಿ ಮಳೆ ಪ್ರಮಾಣ ಅಷ್ಟೇನು ಕುಸಿತಗೊಂಡಿಲ್ಲ: ಡಾ. ಹರ್ಷವರ್ಧನ್
ಶತಮಾನದ ಅಂಕಿಅಂಶಗಳ ಆಧಾರದಲ್ಲಿ ಮಳೆ ಪ್ರಮಾಣ ಅಷ್ಟೇನು ಕುಸಿತಗೊಂಡಿಲ್ಲ: ಡಾ. ಹರ್ಷವರ್ಧನ್

ನವದೆಹಲಿ, ಜೂ 23 [ಯುಎನ್ಐ] ದೇಶದಲ್ಲಿ ಕಳೆದ 115 ವರ್ಷಗಳ ಇತಿಹಾಸದ ಅಂಕಿ ಅಂಶಗಳ ಆಧಾರದಲ್ಲಿ ಸರಾಸರಿ ಮಳೆಯ ಪ್ರಮಾಣದಲ್ಲಿ ಅಷ್ಟೇನು ಕುಸಿತವಾಗಿಲ್ಲ ಎಂದು ಕೇಂದ್ರ ಭೂ ವಿಜ್ಞಾನ ಖಾತೆ ಸಚಿವ ಡಾ. ಹರ್ಷವರ್ಧನ್ ಹೇಳಿದ್ದಾರೆ.

ಈ ಕುರಿತು ಅಂಕಿ ಅಂಶಗಳನ್ನು ನೀಡಿರುವ ಅವರು, 1901 ರಿಂದ 2017ರವರೆಗಿನ ಅವಧಿಯ ಅಂಕಿ ಅಂಶಗಳನ್ನು ಪರಿಗಣಿಸುವುದಾದರೆ ಮಳೆ ಪ್ರಮಾಣದಲ್ಲಿ ಇಳಿಕೆಯಾಗಿಲ್ಲ. ನೈರುತ್ಯ ಮುಂಗಾರು ಮಳೆಯಲ್ಲೂ ಸಹ ಅಷ್ಟೇನು ಏರಿಳಿಕೆ ಕಂಡು ಬಂದಿಲ್ಲ ಎಂದು ಹೇಳಿದ್ದಾರೆ.

ಬಿಸಿ ಗಾಳಿಯ ಬಗ್ಗೆ ಕೇಳಲಾದ ಪ್ರಶ್ನೆಗೆ ಡಾ. ಹರ್ಷವರ್ಧನ್, ಉತ್ತರದಲ್ಲಿ ದೇಶದ ಹಲವು ಭಾಗಗಳಲ್ಲಿ ಬೇಸಿಗೆಯಲ್ಲಿ

ಗರಿಷ್ಠ ತಾಪಮಾನ 50 ಡಿಗ್ರಿ ಸೆಲ್ಷಿಯಸ್ ಗೂ ಹೆಚ್ಚಾಗಿದೆ. ಬಿಸಿಗಾಳಿಯಲ್ಲಿ ಏರಿಳಿತವಿದೆ ಎಂದು ತಿಳಿಸಿದ್ದಾರೆ.

ಯುಎನ್ಐ ವಿಎನ್ 1945