Tuesday, Nov 12 2019 | Time 03:29 Hrs(IST)
National

ಪಶ್ಚಿಮ ಬಂಗಾಳದಲ್ಲಿ ಗುಟ್ಕಾ, ಪಾನ್‍ ಮಸಾಲ ಮೇಲಿನ ನಿಷೇಧ ಇನ್ನೂ ಒಂದು ವರ್ಷ ವಿಸ್ತರಣೆ

01 Nov 2019 | 3:47 PM

ಕೋಲ್ಕತ, ನ 1 (ಯುಎನ್‌ಐ) ಗುಟ್ಕಾ ಮತ್ತು ಪಾನ್‍ ಮಸಾಲ ಉತ್ಪಾದನೆ, ಸಂಗ್ರಹಣೆ , ಮಾರಾಟ ಮತ್ತು ಸೇವಿಸುವುದರ ಮೇಲಿನ ನಿಷೇಧವನ್ನು ಪಶ್ಚಿಮ ಬಂಗಾಳ ಸರ್ಕಾರ ರಾಜ್ಯದಾದ್ಯಂತ ಇನ್ನೊಂದು ವರ್ಷ ವಿಸ್ತರಿಸಿದೆ ಸದ್ಯ ಜಾರಿಯಲ್ಲಿರುವ ನಿಷೇಧ ನ 7ಕ್ಕೆ ಕೊನೆಗೊಳ್ಳುವ ಹಿನ್ನೆಲೆಯಲ್ಲಿ ಆಹಾರ ಸುರಕ್ಷತಾ ಆಯುಕ್ತ ತಪನ್ ಕುಮಾರ್ ರುದ್ರ ಇತ್ತೀಚೆಗೆ ನೋಟಿಸ್‍ ಹೊರಡಿಸಿ, ನ 7ರಿಂದ ಮತ್ತೆ ಗುಟ್ಕಾ, ಪಾನ್‍ ಮಸಾಲ ಉತ್ಪಾದನೆ, ಸಂಗ್ರಹಣೆ ಮತ್ತು ಮಾರಾಟವನ್ನು ನಿಷೇಧಿಸಲಾಗಿದೆ ಎಂದು ಹೇಳಿದ್ದಾರೆ.

 Sharesee more..

ಹುಲಿ ಉಗುರು, ನರಿ ಹಲ್ಲು ಮಾರಾಟ ಮಾಡುತ್ತಿದ್ದ ಇಬ್ಬರು ಕಳ್ಳ ಬೇಟೆಗಾರರ ಬಂಧನ

01 Nov 2019 | 3:35 PM

ಚಾಮರಾಜನಗರ, ನ 1 (ಯುಎನ್‌ಐ) ಜಿಲ್ಲೆಯ ಗುಂಡ್ಲುಪೇಟೆ ತಾಲ್ಲೂಕಿನ ಬಂಡೀಪುರ ಅರಣ್ಯ ವ್ಯಾಪ್ತಿಯಲ್ಲಿ ಹುಲಿ ಉಗುರು ಮತ್ತು ನರಿ ಹಲ್ಲುಗಳನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದ ಇಬ್ಬರನ್ನು ರಾಜ್ಯ ಅರಣ್ಯ ಅಧಿಕಾರಿಗಳು ಬಂಧಿಸಿದ್ದಾರೆ ಬಂಧಿತರನ್ನು ಹಾಸನ ಜಿಲ್ಲೆಯ ಧವನ್ (45) ಮತ್ತು ಗೋಕುಲ್ ಎಂದು ಗುರುತಿಸಲಾಗಿರುವುದಾಗಿ ಅರಣ್ಯ ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ.

 Sharesee more..

ಜರ್ಮನಿ ಚಾನ್ಸಲರ್ ಮರ್ಕೆಲ್ ಭೇಟಿ ಮಾಡಿದ ಪ್ರಧಾನಿ ಮೋದಿ: ಅನೇಕ ಕ್ಷೇತ್ರಗಳಲ್ಲಿ ಸಂಬಂಧಗಳ ವೃದ್ಧಿಗೆ ಕರೆ

01 Nov 2019 | 2:43 PM

ನವದೆಹಲಿ, ನ 1 (ಯುಎನ್ಐ)- ಭಾರತದಲ್ಲಿನ ರಕ್ಷಣಾ ಉತ್ಪಾದನಾ ಕ್ಷೇತ್ರದಲ್ಲಿ ಹೂಡಿಕೆ ಮಾಡುವಂತೆ ಹಾಗೂ ಉತ್ತರ ಪ್ರದೇಶ ಮತ್ತು ತಮಿಳುನಾಡಿನ ರಕ್ಷಣಾ ಕಾರಿಡಾರ್‌ಗಳ ಲಾಭವನ್ನು ಪಡೆದುಕೊಳ್ಳುವಂತೆ ಜರ್ಮನಿಗೆ ಪ್ರಧಾನಿ ನರೇಂದ್ರ ಮೋದಿ ಆಹ್ವಾನಿಸಿದ್ದಾರೆ ಭಾರತ ಭೇಟಿಯಲ್ಲಿರುವ ಜರ್ಮನಿ ಚಾನ್ಸಲರ್ ಏಂಜೆಲಾ ಮರ್ಕೆಲ್ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಿದ ನಂತರ ಜಂಟಿ ಪತ್ರಿಕಾ ಹೇಳಿಕೆ ನೀಡಿದ ಪ್ರಧಾನಿ ಮೋದಿ, ಹೊಸ ಮತ್ತು ಸುಧಾರಿತ ತಂತ್ರಜ್ಞಾನ, ಕೃತಕ ಬುದ್ಧಿಮತ್ತೆ, ಕೌಶಲ್ಯ, ಶಿಕ್ಷಣ ಮತ್ತು ಸೈಬರ್ ಭದ್ರತೆ ಕ್ಷೇತ್ರಗಳಲ್ಲಿ ಸಹಕಾರವನ್ನು ಹೆಚ್ಚಿಸುವತ್ತ ಉಭಯ ದೇಶಗಳು ಗಮನ ಹರಿಸಬಹುದಾಗಿದೆ.

 Sharesee more..

ಜರ್ಮನಿಯ ಕೃಷಿ ಮತ್ತು ಆಹಾರ ಸಚಿವರನ್ನು ಭೇಟಿಯಾದ ನರೇಂದ್ರ ಸಿಂಗ್ ತೋಮರ್

01 Nov 2019 | 2:12 PM

ನವದೆಹಲಿ, ನ 1 (ಯುಎನ್ಐ) ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಇಲಾಖೆ ಸಚಿವ ನರೇಂದ್ರ ಸಿಂಗ್ ತೋಮರ್ ಶುಕ್ರವಾರ ಜರ್ಮನಿಯ ಆಹಾರ ಮತ್ತು ಕೃಷಿ ಸಚಿವ ಜುಲಿಯಾ ಕೋಲ್ಕನರ್ ಅವರನ್ನು ಭೇಟಿಯಾದರು ಈ ಸಂದರ್ಭದಲ್ಲಿ ಉಭಯ ನಾಯಕರು ಭಾರತ ಹಾಗೂ ಜರ್ಮನಿ ನಡುವಿನ ಕೃಷಿ ಮಾರುಕಟ್ಟೆ ಅಭಿವೃದ್ಧಿಯಲ್ಲಿ ಪರಸ್ಪರ ಸಹಕಾರ ನೀಡುವ ಜಂಟಿ ಒಪ್ಪಂದಕ್ಕೆ ಸಹಿ ಹಾಕಿದರು.

 Sharesee more..

ಹೊಗೆ ಎಚ್ಚರಿಕೆ: ತುರ್ತಾಗಿ ಇಳಿದ ಇಂಡಿಗೊ ವಿಮಾನ

01 Nov 2019 | 1:30 PM

ಚೆನ್ನೈ, ನ 1 (ಯುಎನ್‌ಐ) ಚೆನ್ನೈನಿಂದ ಕುವೈತ್‌ನಿಂದ ಹೊರಟಿದ್ದ ಸುಮಾರು 150 ಪ್ರಯಾಣಿಕರಿದ್ದ ಇಂಡಿಗೊ ವಿಮಾನ ವಿಮಾನದಲ್ಲಿ ಹೊಗೆ ಎಚ್ಚರಿಕೆ ನೀಡಿದ್ದರಿಂದ ಅಣ್ಣಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹೊರಟ ವಿಮಾನ ಕೆಲವೇ ನಿಮಿಷಗಳಲ್ಲಿ ಮತ್ತೆ ವಿಮಾನನಿಲ್ದಾಣಕ್ಕೆ ವಾಪಸ್ಸಾಗಿ ತುರ್ತಾಗಿ ಇಳಿದ ಘಟನೆ ಶುಕ್ರವಾರ ಬೆಳಿಗ್ಗೆ ನಡೆದಿದೆ.

 Sharesee more..

ಶ್ರೀ ಹರ್ ಮಂದಿರ ಸಾಹಿಬ್‌ನ ತಬಲಾ ವಾದಕ ಆತ್ಮಹತ್ಯೆ

01 Nov 2019 | 12:51 PM

ಪಾಟ್ನಾ, ನ 1 (ಯುಎನ್‌ಐ) ಸಿಖ್ಖರ ತುಂಬಾ ಪೂಜ್ಯನೀಯ ಪ್ರಾರ್ಥನಾ ಮಂದಿಗಳಲ್ಲಿ ಒಂದಾದ ಇಲ್ಲಿನ ಶ್ರೀ ಹರ್ ಮಂದಿರ ಸಾಹಿಬ್ ಗುರುದ್ವಾರದ ತಬಲಾ ವಾದಕ ಕಳೆದ ರಾತ್ರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಆತ್ಮಹತ್ಯೆಗೆ ಶರಣಾದ ತಬಲಾ ವಾದಕನನ್ನು ಚಿತ್ಕೊರಾ ಮೂಲದ ಪರ್ವಜಿತ್‍ ಸಿಂಗ್ (35) ಎಂದು ಗುರುತಿಸಲಾಗಿದೆ ಎಂದು ಪೊಲೀಸರು ಇಂದು ಇಲ್ಲಿ ಹೇಳಿದ್ದಾರೆ ರಾಜ್ಯ ರಾಜಧಾನಿಯಲ್ಲಿರುವ ಗುರುದ್ವಾರದಲ್ಲಿನ ಸಿಬ್ಬಂದಿಯ ವಸತಿಗೃಹದಲ್ಲಿನ ತನ್ನ ಕೋಣೆಯಲ್ಲಿ ನೇಣು ಬಿಗಿದು ಈತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

 Sharesee more..

ತಮಿಳುನಾಡು: ಹೊಸದಾಗಿ ಚುನಾಯಿತರಾದ ಎಐಎಡಿಎಂಕೆ ಶಾಸಕರಿಂದ ಪ್ರಮಾಣವಚನ ಸ್ವೀಕಾರ

01 Nov 2019 | 12:51 PM

ಚೆನ್ನೈ, ನ 1 (ಯುಎನ್‌ಐ) -ಆಡಳಿತಾರೂಢ ಎಐಎಡಿಎಂಕೆಯ ಹೊಸದಾಗಿ ಆಯ್ಕೆಯಾದ ಶಾಸಕರಾದ ಎಂ ಆರ್ ಮುತಮಿಳಸೆಲ್ವನ್ ಮತ್ತು ರೆಡ್ಡಿಯಾರ್‍ಪಟ್ಟಿ ವಿ ನಾರಾಯಣನ್ ಇಂದು ತಮಿಳುನಾಡು ವಿಧಾನಸಭೆಯ ಸದಸ್ಯರಾಗಿ ಪ್ರಮಾಣವಚನ ಸ್ವೀಕರಿಸಿದರು ರಾಜ್ಯ ಸಚಿವಾಲಯದ ತಮ್ಮ ಕಚೇರಿಯಲ್ಲಿ ಸ್ಪೀಕರ್ ಪಿ ಧನಪಾಲ್ ಇಬ್ಬರೂ ಸದಸ್ಯರಿಗೆ ಪ್ರಮಾಣ ವಚನ ಭೋದಿಸಿದರು.

 Sharesee more..

ಜರ್ಮನ್ ಚಾನ್ಸಲರ್ ಮಾರ್ಕೆಲ್ - ಪ್ರಧಾನಿ ಮೋದಿ ಭೇಟಿ

01 Nov 2019 | 12:22 PM

ನವದೆಹಲಿ, ನವೆಂಬರ್ 1 (ಯುಎನ್‌ಐ) ಭಾರತ ಭೇಟಿಯಲ್ಲಿರುವ ಜರ್ಮನಿಯ ಚಾನ್ಸೆಲರ್ ಏಂಜೆಲಾ ಮಾರ್ಕೆಲ್ ಶುಕ್ರವಾರ ಇಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಿದರು ಇದು ಚಾನ್ಸಲರ್ ಮಾರ್ಕೆಲ್ ಅವರ ನಾಲ್ಕನೇ ಭಾರತ ಭೇಟಿಯಾಗಿದೆ.

 Sharesee more..

ದೆಹಲಿ ವಿಮಾನನಿಲ್ದಾಣದಲ್ಲಿ ಸ್ಫೋಟಕವಸ್ತು ಪತ್ತೆ, ಆತಂಕ ಸ್ಥಿತಿ

01 Nov 2019 | 12:13 PM

ನವದೆಹಲಿ, ನ1(ಯುಎನ್ಐ ) ಇಲ್ಲಿನ ಇಂದಿರಾಗಾಂಧಿ ಅಂತಾರಾಷ್ಟ್ರಿಯ ವಿಮಾನನಿಲ್ದಾಣದಲ್ಲಿ ಆರ್‌ಡಿಎಕ್ಸ್ ಸ್ಫೋಟಕ ಇರುವ ಅನುಮಾನಾಸ್ಪದ ಬ್ಯಾಗ್‌ವೊಂದು ಪತ್ತೆಯಾಗಿ ಕೆಲ ಕಾಲ ಆತಂಕದ ಪರಿಸ್ಥಿತಿ ಉಂಟಾಗಿತ್ತು ಇದರ ಪರಿಣಾಮ ಕೆಲವು ಗಂಟೆಗಳ ಕಾಲ ವಿಮಾನನಿಲ್ದಾಣದಲ್ಲಿ ಪ್ರಯಾಣಿಕರ ಚಲನವಲನಕ್ಕೆ ನಿರ್ಬಂಧ ಹಾಕಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

 Sharesee more..

ರಾಷ್ಟ್ರಪತಿ ಭವನದಲ್ಲಿ ಜರ್ಮನ್ ಚಾನ್ಸಲರ್‌ ಮಾರ್ಕೆಲ್ ಗೆ ಸಾಂಪ್ರದಾಯಿಕ ಸ್ವಾಗತ

01 Nov 2019 | 10:26 AM

ನವದೆಹಲಿ, ನ 1 (ಯುಎನ್ಐ) ಮೂರು ದಿನಗಳ ಭಾರತ ಭೇಟಿಗಾಗಿ ನವದೆಹಲಿಗೆ ಆಗಮಿಸಿರುವ ಜರ್ಮನ್ ಚಾನ್ಸಲರ್ ಡಾ.

 Sharesee more..

ಜರ್ಮನಿ ಪಿಎಂ ಮರ್ಕೆಲ್ ಗೆ ಭವ್ಯ, ಅದ್ದೂರಿ ಸ್ವಾಗತ

01 Nov 2019 | 9:12 AM

ನವದೆಹಲಿ ನ,1 (ಯುಎನ್ಐ ) ಭಾರತಕ್ಕೆ ಮೂರು ದಿನಗಳ ಅಧಿಕೃತಭೇಟಿ ನೀಡಿರುವ ಜರ್ಮನ್ ಪ್ರಧಾನಿ ಏಂಜೆಲಾ ಮರ್ಕೆಲ್ ಅವರಿಗೆ ಇಂದು ರಾಷ್ಟ್ರಪತಿ ಭವನದ ಅಂಗಳದಲ್ಲಿ ಭವ್ಯ ಮತ್ತು ಅದ್ದೂರಿ ಸ್ವಾಗತ ನೀಡಲಾಯಿತು ಉನ್ನತ ಮಟ್ಟದ ನಿಯೋಗದೊಂದಿಗೆ ಆಗಮಿಸಿರುವ ಅವರು, ಭೇಟಿಯ ಅವಧಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ದ್ವಿಪಕ್ಷಿಯ ಮಾತುಕತೆ ನಡೆಸಲಿದ್ದು ಕೃಷಿ, ವಿಜ್ಞಾನ ತಂತ್ರಜ್ಞಾನ ಸೇರಿದಂತೆ ಒಟ್ಟು 20 ಮಹತ್ವದ ಒಪ್ಪಂದಗಳಿಗೆ ಸಹಿ ಹಾಕಲಿದ್ದಾರೆ.

 Sharesee more..

ಮಹದಾಯಿ ವಿವಾದ: ದೆಹಲಿಗೆ ಸರ್ವಪಕ್ಷ ನಿಯೋಗಕ್ಕೆ ಗೋವಾ ಮುಖ್ಯಮಂತ್ರಿ ನೇತೃತ್ವ

01 Nov 2019 | 12:45 AM

ಪಣಜಿ, ಅಕ್ಟೋಬರ್ 31 (ಯುಎನ್‌ಐ) ಮಹದಾಯಿ ವಿವಾದ ಕುರಿತಂತೆ ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಅವರು ಕೇಂದ್ರ ಪರಿಸರ ಮತ್ತು ಅರಣ್ಯ ಸಚಿವ ಪ್ರಕಾಶ್‍ ಜಾವ್ಡೇಕರ್ ಅವರನ್ನು ಭೇಟಿ ಮಾಡಲು ಸರ್ವಪಕ್ಷಗಳ ನಿಯೋಗದ ನೇತೃತ್ವ ವಹಿಸಲಿದ್ದಾರೆ.

 Sharesee more..

ಜರ್ಮನಿ ಚಾನ್ಸೆಲರ್ ಏಂಜೆಲಾ ಮರ್ಕೆಲ್ ಮೂರು ದಿನಗಳ ಭಾರತಯ ಭೇಟಿಗೆ ದೆಹಲಿಗೆ ಆಗಮನ

01 Nov 2019 | 12:09 AM

ನವದೆಹಲಿ, ಅ 31 (ಯುಎನ್‌ಐ) ಜರ್ಮನಿ ಚಾನ್ಸೆಲರ್ ಡಾ ಏಂಜೆಲಾ ಮರ್ಕೆಲ್ ಗುರುವಾರ ಸಂಜೆ ಮೂರು ದಿನಗಳ ಭಾರತ ಭೇಟಿಗೆ ಇಲ್ಲಿಗೆ ಆಗಮಿಸಿದರು ಮರ್ಕೆಲ್‍ ಅವರ ಭೇಟಿಯು ಉಭಯ ದೇಶಗಳ ನಡುವಿನ ದ್ವಿಪಕ್ಷೀಯ ಆರ್ಥಿಕ ಮತ್ತು ಕಾರ್ಯತಂತ್ರದ ಸಂಬಂಧಗಳನ್ನು ಬಲಪಡಿಸುವ ನಿರೀಕ್ಷೆ ಹೊಂದಲಾಗಿದೆ.

 Sharesee more..

ಮಹಾರಾಷ್ಟ್ರದಲ್ಲಿ ಬೆಳೆ ಹಾನಿ ಅಂದಾಜಿಗೆ ಕೇಂದ್ರ ತಂಡ: ಅಮಿತ್ ಶಾ

31 Oct 2019 | 11:53 PM

ಮುಂಬೈ, ಅ 31(ಯುಎನ್‍ಐ)-ಮಹಾರಾಷ್ಟ್ರದಲ್ಲಿ ಅಕಾಲಿಕ ಮಳೆಯಿಂದ ಉಂಟಾಗುವ ಬೆಳೆ ನಷ್ಟವನ್ನು ಅಂದಾಜು ಮಾಡಲು ಶೀಘ್ರದಲ್ಲೇ ಕೇಂದ್ರ ತಂಡವನ್ನು ಕಳುಹಿಸುವುದಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಗುರುವಾರ ರಾಜ್ಯಪಾಲ ಭಗತ್ ಸಿಂಗ್ ಕೊಶಿಯಾರಿಗೆ ಭರವಸೆ ನೀಡಿದರು.

 Sharesee more..
ನಾಗಾ ಒಪ್ಪಂದ ಇನ್ನೂ ಅಂತಿಮಗೊಂಡಿಲ್ಲ: ಕೇಂದ್ರ ಗೃಹ ಸಚಿವಾಲಯ

ನಾಗಾ ಒಪ್ಪಂದ ಇನ್ನೂ ಅಂತಿಮಗೊಂಡಿಲ್ಲ: ಕೇಂದ್ರ ಗೃಹ ಸಚಿವಾಲಯ

31 Oct 2019 | 9:32 PM

ನವದೆಹಲಿ, ಅಕ್ಟೋಬರ್ 31 (ಯುಎನ್ಐ) ನಾಗಾ ಶಾಂತಿ ಒಪ್ಪಂದದ ಕುರಿತು ನಡೆಯುತ್ತಿರುವ ಮಾತುಕತೆ ಇನ್ನೂ ಮುಕ್ತಾಯಗೊಂಡಿಲ್ಲ.

 Sharesee more..