Friday, Feb 28 2020 | Time 09:34 Hrs(IST)
  • ದೀರ್ಘಾವಧಿ ಬಳಿಕ ರಾಷ್ಟ್ರೀಯ ಫುಟ್ಬಾಲ್ ಶಿಬಿರಕ್ಕೆ ಮರಳಿದ ಸಂದೇಶ್‌, ಜೆಜೆ
  • ದಕ್ಷಿಣ ಕೊರಿಯಾದಲ್ಲಿ ಮತ್ತೆ 256 ಕೊರೊನಾ ಸೋಂಕು ಪ್ರಕರಣ ದಾಖಲು
  • ಕೊರೊನಾ ಸೋಂಕು : ಹಜ್ ಯಾತ್ರೆಗೆ ನಿರ್ಬಂಧ
  • ಸಿರಿಯಾದಿಂದ ವೈಮಾನಿಕ ದಾಳಿ; 34 ಟರ್ಕಿ ಸೈನಿಕರು ಬಲಿ
  • ಚೀನಾಗೆ ಭಾರತದಿಂದ ವೈದ್ಯಕೀಯ ನೆರವು
  • ಮಹಾದಾಯಿ ನ್ಯಾಯಾಧಿರಣ ಅಧಿಸೂಚನೆ ಪ್ರಕಟ : ಯಡಿಯೂರಪ್ಪ ಹುಟ್ಟು ಹಬ್ಬಕ್ಕೆ ಕೇಂದ್ರದ ಭರ್ಜರಿ ಕೊಡುಗೆ
National

ಬ್ಯಾಂಕುಗಳ ವಿಲೀನ: ಕೇಂದ್ರ ಸಂಪುಟದಲ್ಲಿ ಮಹತ್ವದ ತೀರ್ಮಾನ

05 Feb 2020 | 9:35 AM

ನವದೆಹಲಿ, ಫೆ 5(ಯುಎನ್ಐ) ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ಇಂದು ಕೇಂದ್ರ ಸಚಿವ ಸಂಪುಟ ಸಭೆ ನಡೆಯಲಿದ್ದು, ಸಾರ್ವಜನಿಕ ವಲಯದ ಬ್ಯಾಂಕುಗಳ ವಿಲೀನಕ್ಕೆ ಸಂಬಂಧಪಟ್ಟಂತೆ ಮಹತ್ವದ ತೀರ್ಮಾ ನ ತೆಗೆದುಕೊಳ್ಳುವ ಸಾಧ್ಯತೆಯಿದೆ 10 ಸಾರ್ವಜನಿಕ ವಲಯದ ಬ್ಯಾಂಕುಗಳನ್ನು (ಪಿಎಸ್‌ಬಿ) ನಾಲ್ಕು ಬ್ಯಾಂಕುಗಳನ್ನಾಗಿ ಪರಿವರ್ತಿಸಿ, ವಿಲೀನ ಮಾಡುವ ಮಹತ್ವದ ಯೋಜನೆಗೆ ಕೇಂದ್ರ ಸಂಪುಟ ಅನುಮೋದನೆ ನೀಡಲಿದೆ ಎಂದು ಉನ್ನತ ಮೂಲಗಳು ಹೇಳಿವೆ.

 Sharesee more..

ಬಿಜೆಪಿ ಸದಸ್ಯರ ದ್ವೇಷ ಭಾಷಣ, ಪ್ರಧಾನಿ ಮೌನ : ಕಾರಣ ಕೇಳಿದ ಯೆಚೂರಿ

05 Feb 2020 | 12:05 AM

ನವದೆಹಲಿ, ಫೆ 4(ಯುಎನ್ಐ) ಬಿಜೆಪಿ ಸದಸ್ಯರು ಪದೇ ಪದೇ ದ್ವೇಷ ಭಾಷಣ ಮಾಡುತ್ತಿದ್ದರೂ ಈ ಬಗ್ಗೆ ಪ್ರಧಾನಿ ಮೋದಿ ದಿವ್ಯ ಮೌನ ವಹಿಸಿರುವುದೇಕೆ ಎಂದು ಸಿಪಿಐಎಂ ಪ್ರಶ್ನಿಸಿದೆ ಕರ್ನಾಟಕದ ಬೀದರ್ ಜಿಲ್ಲೆಯ ಶಾಲೆಯೊಂದರಲ್ಲಿ ಪೌರತ್ವ ಕಾಯ್ದೆಯ ಕುರಿತು ನಾಟಕ ಪ್ರದರ್ಶಿಸಿದ ಕಾರಣಕ್ಕೆ ಪೋಷಕರ ಹಾಗೂ ಶಿಕ್ಷಕರ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸಿರುವುದು ಖಂಡನೀಯ ಎಂದು ಹೇಳಿದೆ.

 Sharesee more..

ರಾಜಧಾನಿಯಲ್ಲಿ ಹಿಂಸಾಚಾರ ಪ್ರಚೋದನೆಗೆ ಆಮ್ ಆದ್ಮಿ ಯತ್ನ: ಜಾವ್ಡೇಕರ್

04 Feb 2020 | 11:37 PM

ನವದೆಹಲಿ, ಫೆ 04 (ಯುಎನ್‍ಐ) ಇದೇ 8ರಂದು ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಮತಗಳನ್ನು ದೋಚುವ ಸಲುವಾಗಿ, ಆಮ್ ಆದ್ಮಿ ಪಕ್ಷ (ಎಎಪಿ) ಸಮಾಜದಲ್ಲಿ ಹಿಂಸಾಚಾರವನ್ನು ಪ್ರಚೋದಿಸಲು ನಿರಂತರವಾಗಿ ಪ್ರಯತ್ನಿಸುತ್ತಿದೆ, ಆದರೆ ದೆಹಲಿಯ ಜನರು ಉದ್ವಿಗ್ನತೆಯನ್ನು ಉಂಟುಮಾಡುವ ಪಿತೂರಿಯನ್ನು ವಿಫಲಗೊಳಿಸಿದ್ದಾರೆ ಎಂದು ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಮಂಗಳವಾರ ಹೇಳಿದ್ದಾರೆ.

 Sharesee more..

ನಿರ್ಭಯಾ ಹಂತಕರಿಗೆ ಗಲ್ಲು ಶಿಕ್ಷೆ ಜಾರಿ: ನಾಳೆ ಕಾದಿಟ್ಟ ತೀರ್ಪು ಪ್ರಕಟ

04 Feb 2020 | 10:57 PM

ನವದೆಹಲಿ, ಫೆ 4 (ಯುಎನ್ಐ) ನಿರ್ಭಯಾ ಅತ್ಯಾಚಾರ, ಹತ್ಯೆ ಪ್ರಕರಣದ ನಾಲ್ವರು ಆಪರಾಧಿಗಳಿಗೆ ವಿಧಿಸಲಾಗಿರುವ ಗಲ್ಲು ಶಿಕ್ಷೆ ಜಾರಿಗೆ ನೀಡಿರುವ ತಡೆಯಾಜ್ಞೆಯನ್ನು ಪ್ರಶ್ನಿಸಿ ಕೇಂದ್ರ ಸರಕಾರವು ಸಲ್ಲಿಸಿರುವ ಅರ್ಜಿಯ ಕುರಿತು ದೆಹಲಿ ಹೈಕೋರ್ಟ್ ನಾಳೆ ಕಾಯ್ದಿಟ್ಟ ತೀರ್ಪು ಪ್ರಕಟಿಸಲಿದೆ.

 Sharesee more..

ದೇಶ ವಿರೋಧಿಗಳಿಗೆ ತಕ್ಕ ಶಾಸ್ತಿ ಮಾಡಿ: ಮೋದಿ

04 Feb 2020 | 10:41 PM

ನವದೆಹಲಿ, ಫೆ 4(ಯುಎನ್ಐ ) ಯಾರು ದೇಶ ವಿರೋಧಿ ಪಡೆಯನ್ನು ಬೆಂಬಲಿಸುತ್ತಾರೋ ಅಂತಹವರಿಗೆ ಜನತೆ ಸರಿಯಾದ ಪಾಠ ಕಲಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ದೆಹಲಿ ಮತದಾರರಿಗೆ ಮನವಿ ಮಾಡಿದರು ದೆಹಲಿ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ದ್ವಾರಕಾದಲ್ಲಿ ಬೃಹತ್ ರಾಲಿಯನ್ನು ಉದ್ದೇಶಿಸಿ ಮಾತನಾಡಿ ಎಎಪಿ ವಿರುದ್ಧ ವಾಗ್ದಾಳಿ ನಡೆಸಿದರು.

 Sharesee more..

ಶಾಹೀನ್‌ ಬಾಗ್ ಶೂಟರ್‌ ಎಎಪಿ ಕಾರ್ಯಕರ್ತ: ಆಪ್‌ನ ಮತ್ತೊಂದು ಕೆಟ್ಟ ಮುಖ ಅನಾವರಣ- ಜೆ.ಪಿ.ನಡ್ಡಾ

04 Feb 2020 | 10:16 PM

ನವದೆಹಲಿ, ಫೆ 4 (ಯುಎನ್ಐ) ದೆಹಲಿ ವಿಧಾನಸಭಾ ಚುನಾವಣೆಗೆ ಕೇವಲ ಮೂರು ದಿನಗಳು ಬಾಕಿ ಇರುವಾಗಲೆ ಎಎಪಿ ವಿರುದ್ಧ ವಾಗ್ದಾಳಿ ಮುಂದುವರಿಸಿರುವ ಬಿಜೆಪಿ, ಇತ್ತೀಚೆಗೆ ಶಾಹೀನ್ ಬಾಗ್‌ನಲ್ಲಿ ಗುಂಡಿನ ದಾಳಿ ನಡೆಸಿದ ಕಪಿಲ್ ಎಂಬವನು ಎಎಪಿ ಕಾರ್ಯಕರ್ತನಾಗಿದ್ದಾನೆ ಎಂದು ಹೇಳಿದ್ದಾರೆ.

 Sharesee more..

ದೇಶ,ದೆಹಲಿಯ ಜನರಿಗೆ ಎಎಪಿಯ ಕೊಳಕು ಮುಖದರ್ಶನ : ನಡ್ಡಾ

04 Feb 2020 | 9:39 PM

ನವದೆಹಲಿ, ಫೆ 4 (ಯುಎನ್ಐ) ದೇಶದ, ದೆಹಲಿಯ ಜನರು ಈಗ ಎಎಪಿಯ ಕೊಳಕು , ವಿಕಾರದ ಮುಖವನ್ನು ನೋಡುತ್ತಿದ್ದಾರೆ ಎಂದು ಬಿಜೆಪಿ ಅಧ್ಯಕ್ಷ ಜೆ ಪಿ ನಡ್ಡಾ ದೂರಿದ್ದಾರೆ.

 Sharesee more..

ಕೊರೋನಾ ವೈರಸ್; ಡಿಫೆಕ್ಸ್ ಪೋದಲ್ಲಿ ಚೀನಾ ಪ್ರತಿನಿಧಿಗಳು ಗೈರು

04 Feb 2020 | 9:29 PM

ನವದೆಹಲಿ, ಫೆ 4 (ಯುಎನ್ಐ) ಮಾರಾಣಾಂತಿಕ ಕೊರೋನಾ ವೈರಸ್ ನ ಪ್ರಕೋಪಕ್ಕೆ ನಲುಗಿರುವ ಚೀನಾದ ಪ್ರತಿನಿಧಿಗಳು ಲಖನೌದಲ್ಲಿ ಫೆ 5ರಿಂದ ನಡೆಯಲಿರುವ ರಕ್ಷಣಾ ಪ್ರದರ್ಶನ, ಡಿಫೆಕ್ಸ್ ಪೋ 2020ದಲ್ಲಿ ಭಾಗಿಯಾಗುವುದರಿಂದ ಹಿಂದೆ ಸರಿದಿದೆ.

 Sharesee more..
ರಾಜ್ಯಸಭೆಗೆ ಜೈಶಂಕರ್, ಜುಗಲ್ ಠಾಕೋರ್ ಆಯ್ಕೆ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ಗುಜರಾತ್ ಹೈಕೋರ್ಟ್‍ನಿಂದ ವಜಾ

ರಾಜ್ಯಸಭೆಗೆ ಜೈಶಂಕರ್, ಜುಗಲ್ ಠಾಕೋರ್ ಆಯ್ಕೆ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ಗುಜರಾತ್ ಹೈಕೋರ್ಟ್‍ನಿಂದ ವಜಾ

04 Feb 2020 | 7:14 PM

ಅಹಮದಾಬಾದ್, ಫೆ 4 (ಯುಎನ್ಐ) ಕಳೆದ ಜುಲೈನಲ್ಲಿ ರಾಜ್ಯಸಭಾ ಉಪಚುನಾವಣೆಯಲ್ಲಿ ವಿದೇಶಾಂಗ ಸಚಿವ ಎಸ್.ಜೈಶಂಕರ್ ಮತ್ತು ಜುಗಲ್ ಎಂ ಲೋಖಂಡ್ವಾಲಾ ಅವರನ್ನು ಬಿಜೆಪಿ ಸಂಸದರಾಗಿ ಆಯ್ಕೆ ಮಾಡಿರುವುದನ್ನು ಪ್ರಶ್ನಿಸಿ ಸಲ್ಲಿಸಿ ಸಲ್ಲಿಸಲಾಗಿದ್ದ ಎಲ್ಲ ಮೂರು ಮನವಿ ಅರ್ಜಿಗಳನ್ನು ಗುಜರಾತ್ ಹೈಕೋರ್ಟ್ ಮಂಗಳವಾರ ತಿರಸ್ಕರಿಸಿದೆ.

 Sharesee more..
ಮೋದಿ ಭಾರತದ ಆತ್ಮವನ್ನು ವಿಭಜಿಸುತ್ತಿದ್ದಾರೆ; ಶಶಿ ತರೂರ್

ಮೋದಿ ಭಾರತದ ಆತ್ಮವನ್ನು ವಿಭಜಿಸುತ್ತಿದ್ದಾರೆ; ಶಶಿ ತರೂರ್

04 Feb 2020 | 6:50 PM

ನವದೆಹಲಿ, ಫೆ 4 (ಯುಎನ್ಐ) ಪ್ರಧಾನಿ ನರೇಂದ್ರ ಮೋದಿ ಉತ್ತಮ ಆಡಳಿತ ನೀಡುವ ಸೋಗಿನಲ್ಲಿ ದೇಶದ 'ಆತ್ಮವನ್ನು ವಿಭಜಿಸುತ್ತಿದ್ದಾರೆ' ಎಂದು ಕಾಂಗ್ರೆಸ್ ನಾಯಕ ಶಶಿ ತರೂರ್ ಹೇಳಿದ್ದಾರೆ.

 Sharesee more..
ದೆಹಲಿ ಚುನಾವಣೆ: ರಾಹುಲ್, ಪ್ರಿಯಾಂಕಾ ಅಬ್ಬರದ ಪ್ರಚಾರ

ದೆಹಲಿ ಚುನಾವಣೆ: ರಾಹುಲ್, ಪ್ರಿಯಾಂಕಾ ಅಬ್ಬರದ ಪ್ರಚಾರ

04 Feb 2020 | 6:17 PM

ನವದೆಹಲಿ, ಫೆ 4 (ಯುಎನ್ಐ ) ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ವಿಧಾನಸಭಾ ಚುನಾವಣೆಯ ಪ್ರಚಾರದ ಕಾವು ದಿನದಿಂದ ದಿನಕ್ಕೆ ಏರುತ್ತಲೇ ಇದೆ, ಚುನಾವಣೆಯೂ ಸಮೀಪವಾಗುತ್ತಿದೆ.

 Sharesee more..

ವಿದ್ಯಾರ್ಥಿಗಳಿಬ್ಬರ ವಿರುದ್ಧ ಯುಎಪಿಎ ಪ್ರಕರಣ ದಾಖಲು: ಕೇರಳ ವಿಧಾನಸಭೆಯಲ್ಲಿ ಪ್ರತಿಪಕ್ಷಗಳ ಸಭಾತ್ಯಾಗ

04 Feb 2020 | 6:03 PM

ತಿರುವನಂತಪುರಂ, ಫೆ 4 (ಯುಎನ್‍ಐ) ಕೊಜಿಕೋಡ್ ಸಮೀಪದ ಪಂತೀರನ್ ಕಾವುನಲ್ಲಿನ ಇಬ್ಬರು ವಿದ್ಯಾರ್ಥಿಗಳ ಮೇಲೆ ಕಾನೂನು ಬಾಹಿರ ಚಟುವಟಿಕೆ ತಡೆ ಕಾಯ್ದೆ(ಯುಎಪಿಎ)ಯಡಿ ಪ್ರಕರಣ ದಾಖಲಿಸಿರುವುದಕ್ಕೆ ಸಂಬಂಧಿಸಿ ಸಲ್ಲಿಸಿದ್ದ ನಿಲುವಳಿ ಸೂಚನೆಗೆ ಅವಕಾಶ ನೀಡದಿದ್ದನ್ನು ಪ್ರತಿಭಟಿಸಿ ಪ್ರತಿಪಕ್ಷವಾದ ಕಾಂಗ್ರೆಸ್ ನೇತೃತ್ವದ ಸಂಯುಕ್ತ ಪ್ರಜಾಸತ್ತಾತ್ಮಕ ರಂಗ (ಯುಡಿಎಫ್)ದ ಸದಸ್ಯರು ಕೇರಳ ವಿಧಾನಸಭೆಯಲ್ಲಿ ಮಂಗಳವಾರ ಸಭಾತ್ಯಾಗ ನಡೆಸಿದರು.

 Sharesee more..

ಶಾಹೀನ್ ಬಾಗ್ ಪ್ರತಿಭಟನೆ ಪ್ರಶ್ನಿಸಿದ್ದ ಅರ್ಜಿ ತುರ್ತು ವಿಚಾರಣೆಗೆ ಸುಪ್ರೀಂ ನಕಾರ

04 Feb 2020 | 5:35 PM

ನವದೆಹಲಿ, ಫೆ 4 (ಯುಎನ್ಐ) ದೆಹಲಿಯ ಶಾಹೀನ್ ಬಾಗ್ ನಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಕಳೆದ 50 ದಿನಗಳಿಂದ ನಡೆಯುತ್ತಿರುವ ಪ್ರತಿಭಟನೆ ಪ್ರಶ್ನಿಸಿ ಬಿಜೆಪಿ ರಾಷ್ಟ್ರೀಯ ಕಾರ್ಯನಿರ್ವಾಹಕ ಸದಸ್ಯ ಸಲ್ಲಿಸಿದ್ದ ಅರ್ಜಿಯ ತುರ್ತು ವಿಚಾರಣೆ ನಡೆಸಲು ಸುಪ್ರೀಂಕೋರ್ಟ್ ನಿರಾಕರಿಸಿದೆ.

 Sharesee more..

ಚೀನಾಗೆ ವಿಮಾನಯಾನ ರದ್ದು ಹಿನ್ನೆಲೆ- ಗೋಏರ್ ನಿಂದ ಸಂಪೂರ್ಣ ಹಣ ವಾಪಾಸ್

04 Feb 2020 | 3:59 PM

ಹೈದರಾಬಾದ್, ಫೆ 4 (ಯುಎನ್ಐ) ಚೀನಾದಲ್ಲಿ ಕೊರೋನಾ ವೈರಾಣು ಸೋಂಕು ವ್ಯಾಪಿಸಿರುವ ಹಿನ್ನೆಲೆಯಲ್ಲಿ, ಅಲ್ಲಿಗೆ ತೆರಳವು ವಿಮಾನ ಪ್ರಯಾಣಗಳನ್ನು ರದ್ದುಗೊಳಿಸಲಾಗಿದೆ ಇದೊಂದಿಗೆ ಸಿಂಗಾಪುರ, ಬಾಂಕಾಕ್ ಮತ್ತು ಫುಕೆಟ್ ವಿಮಾನಗಳನ್ನು ಕೂಡ ಸ್ಥಗಿತಗೊಳಿಸಿದ್ದು, ಪ್ರಯಾಣಿಕರಿಗೆ ಸಂಪೂರ್ಣ ಹಣ ಮರುಪಾವತಿಸಲು ಗೋಏರ್ ವಿಮಾನಯಾನ ಸಂಸ್ಥೆ ಮುಂದಾಗಿದೆ.

 Sharesee more..

ಅತ್ಯಾಚಾರ ಪ್ರಕರಣ; ಸ್ವಾಮಿ ಚಿನ್ಮಯಾನಂದಗೆ ಜಾಮೀನು

03 Feb 2020 | 9:55 PM

ಪ್ರಯಾಗ್ ರಾಜ್, ಫೆ 3 (ಯುಎನ್ಐ) ಅತ್ಯಾಚಾರ ಪ್ರಕರಣದ ಆರೋಪಿ ಹಾಗೂ ಮಾಜಿ ಕೇಂದ್ರ ಸಚಿವ ಸ್ವಾಮಿ ಚಿನ್ಮಯಾನಂದ ಅವರಿಗೆ ಅಲಹಾಬಾದ್ ಹೈಕೋರ್ಟ್ ಜಾಮೀನು ಮಂಜೂರು ಮಾಡಿದೆ ಕಳೆದ ಐದು ತಿಂಗಳುಗಳಿಂದ ಜೈಲಿನಲ್ಲಿದ್ದ ಅವರು, ಲಕ್ಷ ರೂ.

 Sharesee more..