Saturday, Jul 4 2020 | Time 11:12 Hrs(IST)
 • ಸ್ವಾಮಿ ವಿವೇಕಾನಂದ ಅವರ ಪುಣ್ಯಸ್ಮರಣೆ: ಮುಖ್ಯಮಂತ್ರಿ, ಸಚಿವರಿಂದ ಗೌರವ ಅರ್ಪಣೆ
 • ಧರ್ಮ ಚಕ್ರ ದಿನ ಕಾರ್ಯಕ್ರಮ ಉದ್ಘಾಟಿಸಲಿರುವ ರಾಷ್ಟ್ರಪತಿ ಕೋವಿಂದ್
 • ರಾಜ್ಯದಲ್ಲಿ ಜು 31ರವರೆಗೆ ಕಂಟೈನ್ಮೆಂಟ್ ಝೋನ್‍ಗಳಲ್ಲಿ ಲಾಕ್‍ಡೌನ್ ವಿಸ್ತರಣೆ
 • ಪರವಾನಗಿ ಪಡೆಯದೆ ೭ ಲಕ್ಷ ಲೀಟರ್ ಸ್ಯಾನಿಟೈಸರ್ ತಯಾರಿಕೆ ಸ್ಥಾವರದ ನಿರ್ವಾಹಕನ ಬಂಧನ !
 • ಪರವಾನಗಿ ಪಡೆಯದೆ ೭ ಲಕ್ಷ ಲೀಟರ್ ಸ್ಯಾನಿಟೈಸರ್ ತಯಾರಿಕೆ ಸ್ಥಾವರದ ನಿರ್ವಾಹಕನ ಬಂಧನ !
 • ಸಂಡೆ ಸಂಪೂರ್ಣ ಲಾಕ್ ಡೌನ್ : ಕೆಎಸ್ ಆರ್ ಟಿಸಿ, ಬಿಎಂಟಿಸಿ ಸಂಚಾರವಿಲ್ಲ
 • ಅಮೆರಿಕದಲ್ಲಿ ಲಘು ವಿಮಾನ ಅಪಘಾತ- ನಾಲ್ವರ ಸಾವು
 • ನೀಟ್, ಜೆಇಇ, ಜೆ ಇಇ ಅಡ್ವಾನ್ಸ್ ಪರೀಕ್ಷೆಗಳು ಸೆಪ್ಟಂಬರ್ ಗೆ ಮುಂದೂಡಿಕೆ
 • ಪಾಕಿಸ್ತಾನ; ಸಿಖ್ ಯಾತ್ರಾರ್ಥಿಗಳಿದ್ದ ವ್ಯಾನ್ ಗೆ ರೈಲು ಡಿಕ್ಕಿ , ಸಾವಿನ ಸಂಖ್ಯೆ ೨೨ಕ್ಕೆ ಏರಿಕೆ
 • ಉತ್ತರ ಕೆರೊಲಿನಾದಲ್ಲಿ ರಸ್ತೆ ಅಪಘಾತ- 5 ಮಂದಿ ಸಾವು
 • ತಮಿಳುನಾಡಿನಲ್ಲಿ ಒಂದೇ ದಿನ 4329 ಕೊರೊನಾ ಸೋಂಕು ಪ್ರಕರಣ
National

ಪೂಂಚ್‍ ನಲ್ಲಿ ಪಾಕ್ ಪಡೆಗಳಿಂದ ಗುಂಡಿನ ದಾಳಿ: ಓರ್ವ ಸೈನಿಕ ಹುತಾತ್ಮ, ನಾಗರಿಕನಿಗೆ ಗಾಯ

11 Jun 2020 | 4:15 PM

ಜಮ್ಮು, ಜೂನ್ 11 (ಯುಎನ್‌ಐ) ಜಮ್ಮು ಮತ್ತು ಕಾಶ್ಮೀರದ ಪೂಂಚ್‌ನ ಮೆಂಧರ್ ಸೆಕ್ಟರ್‌ನಲ್ಲಿ ಗಡಿ ನಿಯಂತ್ರಣ ರೇಖೆಯುದ್ದಕ್ಕೂ ಪಾಕಿಸ್ತಾನ ಪಡೆಗಳು ಅಪ್ರಚೋದಿತ ದಾಳಿ ನಡೆಸಿ ಗಡಿ ಗ್ರಾಮಗಳ ಮೇಲೆ ಗುಂಡು ಹಾರಿಸಿದ್ದರಿಂದ ಸೇನೆಯ ಓರ್ವ ಸೈನಿಕ ಹುತಾತ್ಮರಾಗಿದ್ದು, ನಾಗರಿಕರೊಬ್ಬರು ಗಾಯಗೊಂಡಿದ್ದಾರೆ.

 Sharesee more..

ಚೀನಾ ಗಡಿ ಕುರಿತು ಅನಪೇಕ್ಷಿತ ಮತ್ತು ಬಾಲಿಶ ಹೇಳಿಕೆ; ರಾಹುಲ್ ವಿರುದ್ಧ ಸೇನಾ ಹಿರಿಯರ ಕಿಡಿ

11 Jun 2020 | 3:53 PM

ನವದೆಹಲಿ, ಜೂನ್ 11 (ಯುಎನ್‌ಐ) ಲಡಾಖ್ ಗಡಿಯಲ್ಲಿ ಚೀನಾ ಜೊತೆಗಿನ ಭಾರತದ ಪ್ರಸ್ತುತ ನಿಲುವು ಕುರಿತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಹೇಳಿಕೆಗಳು "ಅನಪೇಕ್ಷಿತ ಮತ್ತು ಶೋಚನೀಯ" ಎಂದು ಸಶಸ್ತ್ರ ಪಡೆಗಳ ಹಿರಿಯರು,ಪರಿಣತರು ಖಂಡಿಸಿದ್ದಾರೆ.

 Sharesee more..

ಜಿಎಸ್ ಟಿ ಮಂಡಳಿಸಭೆ , ಉದ್ಯಮ ವಲಯಕ್ಕೆ ಮತ್ತೆ ಸಿಹಿ ಸುದ್ದಿ !!

11 Jun 2020 | 3:29 PM

ನವದೆಹಲಿ, ಜೂನ್ 11 (ಯುಎನ್ಐ) ನಾಳೆ ಜಿಎಸ್ ಟಿ ಮಂಡಳಿ ಸಭೆ ನಡೆಯಲಿದ್ದು, ಲಾಕ್ ಡೌನ್ ನಿಂದ ಹಲವು ಸಂಕಷ್ಟದಲ್ಲಿರುವ ಉದ್ಯಮ ವಲಯಕ್ಕೆ ಕೇಂದ್ರ ಸರ್ಕಾರ ಹಿತವಾಗುವ ಸಿಹಿಸುದ್ದಿ ನೀಡಲಿದೆ ಎನ್ನಲಾಗಿದೆ ಲಾಕ್ ಡೌನ್ ನಿಂದ ತೀವ್ರ ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ಉದ್ಯಮ ವಲಯಕ್ಕೆ ಕೇಂದ್ರ ಸರ್ಕಾರ ಈಗಾಗಲೇ ಹಲವು ವಿನಾಯಿತಿ ರಿಯಾಯಿಇತಿ ಯೋಜನೆಗಳನ್ನು ಪ್ರಕಟಿಸಿದ್ದರೂ ನಾಳಿನ ಜಿಎಸ್ ಟಿ ಸಭೆಯಲ್ಲಿ ಮತ್ತಷ್ಟು ರಿಯಾಯಿತಿ ಘೋಷಿಸುವ ಸಾಧ್ಯತೆ ಇದೆ.

 Sharesee more..

ಕುಪ್ವಾರದಲ್ಲಿ ಲಷ್ಕರ್ ಎ ತೊಯ್ಬಾ ಜಾಲ ಪತ್ತೆ: ಅಫೀಮು, ಕರೆನ್ಸಿ ವಶ

11 Jun 2020 | 2:57 PM

ಶ್ರೀನಗರ, ಜೂನ್ 11 (ಯುಎನ್‌ಐ) ಉತ್ತರ ಕಾಶ್ಮೀರದ ಗಡಿ ಜಿಲ್ಲೆಯಾದ ಕುಪ್ವಾರಾದಲ್ಲಿ ಭದ್ರತಾ ಪಡೆಗಳು ಲಷ್ಕರ್-ಎ-ತೊಯ್ಬಾ (ಎಲ್‌ಇಟಿ) ಜಾಲವನ್ನು ಪತ್ತೆ ಮಾಡಿ, ಅವರಿಂದ ಅಫೀಮು ಮತ್ತು ಭಾರತೀಯ ಕರೆನ್ಸಿಯನ್ನು ವಶಪಡಿಸಿಕೊಂಡಿವೆ ಎಂದು ಅಧಿಕೃತ ಮೂಲಗಳು ಗುರುವಾರ ತಿಳಿಸಿವೆ.

 Sharesee more..

ಕರ್ತ್ಯವ್ಯಲೋಪ: ದಾವಣಗೆರೆಯಲ್ಲಿ ಪಿಎಸ್ಐ, ಐವರು ಕಾನ್ಸ್‌ಟೇಬಲ್‍ಗಳು ಅಮಾನತು

11 Jun 2020 | 2:01 PM

ದಾವಣಗೆರೆ, ಜೂನ್ 11 (ಯುಎನ್‌ಐ) ಕರ್ತ್ಯವ್ಯಲೋಪದ ಆರೋಪದ ಮೇಲೆ ಸಹಾಯಕ ಪೊಲೀಸ್ ಸಬ್‌ಇನ್ಸ್‌ಪೆಕ್ಟರ್ ಮತ್ತು ಐವರು ಕಾನ್ಸ್‌ಟೇಬಲ್‍ಗಳನ್ನು ಅಮಾನತುಗೊಳಿಸಲಾಗಿದೆ ಎಂದು ಐಜಿಪಿ (ಪೂರ್ವ ವಲಯ) ಎಸ್ ರವಿ ಗುರುವಾರ ತಿಳಿಸಿದ್ದಾರೆ ದಾವಣಗೆರೆ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಜೂಜಾಟವನ್ನು ನಿಯಂತ್ರಿಸಲು ವಿಫಲವಾದ ಆರೋಪದ ಮೇಲೆ ಠಾಣೆಯ ಸಹಾಯಕ ಸಬ್ ಇನ್ಸ್‌ಪೆಕ್ಟರ್ ಸಂಜೀವ್ ಕುಮಾರ್ ಅವರನ್ನು ಅಮಾನತು ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ.

 Sharesee more..
ಕೋವಿಡ್‌-19; ಭಾರತದಲ್ಲಿ ಸಕ್ರಿಯ ಪ್ರಕರಣಗಳಿಗಿಂತ ಚೇತರಿಕೆ ಕಂಡವರ ಸಂಖ್ಯೆ ಹೆಚ್ಚಳ

ಕೋವಿಡ್‌-19; ಭಾರತದಲ್ಲಿ ಸಕ್ರಿಯ ಪ್ರಕರಣಗಳಿಗಿಂತ ಚೇತರಿಕೆ ಕಂಡವರ ಸಂಖ್ಯೆ ಹೆಚ್ಚಳ

10 Jun 2020 | 9:54 PM

ನವದಹೆಲಿ, ಜೂ.10 (ಯುಎನ್ಐ) ದೇಶದಲ್ಲಿ ಹೊಸದಾಗಿ 10 ಸಾವಿರ ಕೊರೋನಾ ಸೋಂಕು ದೃಢಪಟ್ಟರೂ, ಬುಧವಾರ ಒಟ್ಟು ಸೋಂಕಿತರ ಸಂಖ್ಯೆಗಿಂತ ಚೇತರಿಸಿಕೊಂಡವರ ಸಂಖ್ಯೆ ಹೆಚ್ಚಾಗಿರುವುದು ಹೊಸ ಆಶಾವಾದ ಮೂಡಿಸಿದೆ.

 Sharesee more..

ಪಶ್ಚಿಮ ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್ ಮುಖಂಡ ಗುಂಡಿಗೆ ಬಲಿ

10 Jun 2020 | 6:45 PM

ಕೋಲ್ಕತಾ, ಜೂನ್ 10 (ಯುಎನ್‌ಐ) ಪಶ್ಚಿಮ ಬಂಗಾಳದ ದಕ್ಷಿಣ 24 ಪರಗಣಾಸ್‌ ಜಿಲ್ಲೆಯಲ್ಲಿ ಎರಡು ಗುಂಪುಗಳ ನಡುವೆ ನಡೆದ ಘರ್ಷಣೆಯಲ್ಲಿ ಮಧ್ಯವಯಸ್ಕ ವ್ಯಕ್ತಿಯೊಬ್ಬನನ್ನು ಇಂದು ಗುಂಡಿಕ್ಕಿ ಕೊಲ್ಲಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ ನತದೃಷ್ಟ ವ್ಯಕ್ತಿ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ ಮುಖಂಡನೆಂದು ಹೇಳಲಾಗಿದ್ದು, ಈತನ ಮೇಲೆ ಸಶಸ್ತ್ರ ಧಾರಿಗಳು ಕಚ್ಚಾ ಬಾಂಬ್‌ಗಳನ್ನು ಎಸೆದಿದ್ದಾರೆ, ನಂತರ ಉತ್ತರ 24 ರ ಬಸಂತಿ ಪೊಲೀಸ್ ಠಾಣೆ ವ್ಯಾಪ್ತಿಯ ಫೂಲ್ ಮಲಂಚೊದಲ್ಲಿ ಅವರನ್ನು ಗುಂಡಿಕ್ಕಿ ಸಾಯಿಸಲಾಗಿದೆ.

 Sharesee more..

ಲಾಕ್‌ಡೌನ್ ತೆರವು ನಂತರವೂ ರೈಲ್ವೆಯಿಂದ ಅಗತ್ಯ ಸರಕು ಸಾಗಣೆ ಮುಂದುವರಿಕೆ

10 Jun 2020 | 6:21 PM

ನವದೆಹಲಿ, ಜೂನ್ 10 (ಯುಎನ್‌ಐ) ಲಾಕ್‌ಡೌನ್‌ ಅವಧಿಯಲ್ಲಿ ಅಗತ್ಯ ವಸ್ತುಗಳನ್ನು ಇಡೀ ಭಾರತಕ್ಕೆ ಪೂರೈಸಿದ ಭಾರತೀಯ ರೈಲ್ವೆ, ಲಾಕ್‌ಡೌನ್ ತೆರವಿನ ನಂತರವೂ ಸೇವೆಯನ್ನು ಮುಂದುವರೆಸಿದ್ದು, ಮೇ ತಿಂಗಳಲ್ಲಿ 82 27 ದಶಲಕ್ಷ ಟನ್ ಅಗತ್ಯ ಸರಕುಗಳನ್ನು ಸಾಗಿಸಿದೆ.

 Sharesee more..

ಲಡಾಖ್ ಭೂಪ್ರದೇಶದ ಮೇಲೆ ಚೀನಾ ಹಿಡಿತ; ಪ್ರಧಾನಿ ಮೌನ ಪ್ರಶ್ನಿಸಿದ ರಾಹುಲ್

10 Jun 2020 | 5:48 PM

ನವದೆಹಲಿ, ಜೂನ್ 10(ಯುಎನ್ಐ) ಭಾರತ-ಚೀನಾ ಗಡಿ ವಿವಾದಕ್ಕೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ವಿರುದ್ಧದ ದಾಳಿಯನ್ನು ಮುಂದುವರಿಸಿರುವ ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ, ಚೀನಾ ಲಡಾಖ್‌ನಲ್ಲಿರುವ ಭಾರತದ ಭೂಪ್ರದೇಶವನ್ನು ಕಸಿದುಕೊಂಡಿದೆ ಮತ್ತು ಈ ಕುರಿತು ಪ್ರಧಾನಿ ಮೌನವಹಿಸಿದ್ದಾರೆ ಎಂದು ಟೀಕಿಸಿದ್ದಾರೆ.

 Sharesee more..

ಪುಟಿದೆದ್ದ ಸೆನ್ಸೆಕ್ಸ್ : 290.36 ಅಂಕ ಏರಿಕೆ

10 Jun 2020 | 5:32 PM

ಮುಂಬೈ, ಜೂನ್ 10 (ಯುಎನ್‌ಐ) ರಿಯಾಲ್ಟಿ, ಬ್ಯಾಂಕಿಂಗ್, ಹಣಕಾಸು ಮತ್ತು ಇಂಧನ ವಲಯದ ಷೇರುಗಳಲ್ಲಿ ಹೊಸ ಖರೀದಿ ಉತ್ಸಾಹದಿಂದ ಮುಂಬೈ ಷೇರು ವಿನಿಮಯ ಕೇಂದ್ರದ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್ ಬುಧವಾರ 290 36 ಅಂಕ ಏರಿಕೆ ಕಂಡು 34,247.

 Sharesee more..

ಲಾಕ್ ಡೌನ್ ಹಿಂಪಡೆತದ ನಂತರ ರೈಲ್ವೆ ಸಗಟು ಸಾಗಾಟ ಪ್ರಮಾಣ ಹೆಚ್ಚಳ

10 Jun 2020 | 5:24 PM

ನವದೆಹಲಿ, ಜೂ 10 (ಯುಎನ್ಐ) ಲಾಕ್ ಡೌನ್ ಸಡಿಲಿಕೆ ನಂತರ ಭಾರತೀಯ ರೈಲ್ವೆಯ ಮತ್ತಷ್ಟು ಹೆಚ್ಚಾಗಿದೆ ಮೇ ತಿಂಗಳಲ್ಲಿ ರೈಲ್ವೇ 82.

 Sharesee more..

ಶೋಪಿಯಾನ್‌ನಲ್ಲಿ ಭದ್ರತಾ ಪಡೆಗಳಿಂದ ಐವರು ಹಿಜ್ಬುಲ್‌ ಮುಜಾಹಿದ್ದೀನ್‌, ಲಷ್ಕರ್- ಎ- ತೊಯ್ಬಾ ಉಗ್ರರು ಹತ್ಯೆ

10 Jun 2020 | 5:02 PM

ಶ್ರೀನಗರ, ಜೂನ್ 10 (ಯುಎನ್‌ಐ) ದಕ್ಷಿಣ ಕಾಶ್ಮೀರ ಜಿಲ್ಲೆಯಾದ ಶೋಪಿಯಾನ್‌ನಲ್ಲಿ ಭದ್ರತಾ ಪಡೆಗಳು ನಡೆಸಿದ ತೀವ್ರ ಶೋಧ ಕಾರ್ಯಾಚರಣೆ ವೇಳೆ ನಡೆದ ಗುಂಡಿನ ಚಕಮಕಿಯಲ್ಲಿ ಹಿಜ್ಬುಲ್ ಮುಜಾಹಿದ್ದೀನ್ ಕಮಾಂಡರ್ ಸೇರಿದಂತೆ ಐವರು ಉಗ್ರರು ಹತರಾಗಿದ್ದಾರೆ.

 Sharesee more..

ಪ್ರಧಾನಿಯವರಿಂದ ಕೇದಾರನಾಥ ಪುನರ್‌ ನಿರ್ಮಾಣ ಯೋಜನೆ ಪರಿಶೀಲನೆ

10 Jun 2020 | 4:22 PM

ನವದೆಹಲಿ, ಜೂನ್ 10 (ಯುಎನ್‌ಐ) ಕೇದಾರನಾಥ ಅಭಿವೃದ್ಧಿ ಮತ್ತು ಪುನರ್‌ ನಿರ್ಮಾಣ ಯೋಜನೆಯ ಕುರಿತು ಪ್ರಧಾನಿ ನರೇಂದ್ರ ಮೋದಿ ಬುಧವಾರ ಉತ್ತರಾಖಂಡ ರಾಜ್ಯ ಸರ್ಕಾರದೊಂದಿಗೆ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಪರಿಶೀಲನೆ ನಡೆಸಿದರು ದೇವಾಲಯದ ಪುನರ್‌ ನಿರ್ಮಾಣದ ಬಗ್ಗೆ ತಮ್ಮ ದೃಷ್ಟಿಕೋನವನ್ನು ತಿಳಿಸಿದ ಪ್ರಧಾನಿ, ಕೇದಾರನಾಥ ಮತ್ತು ಬದರಿನಾಥ್‌ ನಂತಹ ಪವಿತ್ರ ತಾಣಗಳಿಗೆ ಅಭಿವೃದ್ಧಿ ಯೋಜನೆಗಳನ್ನು ರಾಜ್ಯ ಸರ್ಕಾರ ರೂಪಿಸಿ,ಇದಕ್ಕಾಗಿ ವಿನ್ಯಾಸ ಸಿದ್ಧಪಡಿಸಬೇಕು.

 Sharesee more..

lಲೋಕಸ್ಟ್‌ ಮಿಡತೆ ಹಿಂಡು ಮಹಾರಾಷ್ಟ್ರದ ನಾಗ್ಪುರಕ್ಕೆ ಪ್ರವೇಶ: ಕೀಟನಾಶಕ ಸಿಂಪಡಣೆಗೆ ಡ್ರೋನ್‌ಗಳ ಬಳಕೆ

10 Jun 2020 | 3:58 PM

ನಾಗ್ಪುರ, ಜೂನ್ 10 (ಯುಎನ್‌ಐ) ಕೃಷಿ ಬೆಳೆಯನ್ನು ತಿನ್ನುವ ಕೀಟಗಳಾದ lಲೋಕಸ್ಟ್‌ ಮಿಡತೆ ಹಿಂಡುಗಳು ಪೆಂಚ್ ಹುಲಿ ರಕ್ಷಿತಾರಣ್ಯದಿಂದ ಮಹಾರಾಷ್ಟ್ರದ ನಾಗ್ಪುರ ಜಿಲ್ಲೆಯ ಅಜ್ನಿ ಗ್ರಾಮಕ್ಕೆ ಪ್ರವೇಶಿಸಿದ್ದು, ಇವುಗಳನ್ನು ನಿಯಂತ್ರಿಸಲು ಬೆಳೆಗಳು ಮತ್ತು ಮರಗಳ ಮೇಲೆ ಕೀಟನಾಶಕಗಳ ಸಿಂಪಡಣೆಗೆ ಡ್ರೋನ್‌ಗಳನ್ನು ಬಳಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.

 Sharesee more..

ನೈರುತ್ಯ ಮುಂಗಾರು ಪಶ್ಚಿಮ-ಮಧ್ಯ ಮತ್ತು ಉತ್ತರ ಬಂಗಾಳದ ಕೊಲ್ಲಿಯ ಕೆಲ ಭಾಗಗಳಿಗೆ ಪ್ರವೇಶ

09 Jun 2020 | 11:47 PM

ನವದೆಹಲಿ, ಜೂನ್ 9 (ಯುಎನ್ಐ) ನೈರುತ್ಯ ಮುಂಗಾರು, ಬಂಗಾಳಕೊಲ್ಲಿಯ ಪಶ್ಚಿಮ-ಮಧ್ಯ ಮತ್ತು ಉತ್ತರದ ಇನ್ನೂ ಕೆಲ ಭಾಗಗಳಿಗೆ ಪ್ರವೇಶಿಸುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮಂಗಳವಾರ ತಿಳಿಸಿದೆ ಮಧ್ಯ ಅರಬ್ಬಿ ಸಮುದ್ರ, ಗೋವಾ, ಮಹಾರಾಷ್ಟ್ರದ ಕೆಲ ಭಾಗಗಳು, ಕರ್ನಾಟಕದ ಕೆಲ ಭಾಗಗಳು ಮತ್ತು ರಾಯಲಸೀಮ, ತಮಿಳುನಾಡಿನ ಉಳಿದ ಭಾಗಗಳಲ್ಲಿ ನೈರುತ್ಯ ಮುಂಗಾರು ಮತ್ತಷ್ಟು ಚುರುಕುಗೊಳ್ಳಲು ಪರಿಸ್ಥಿತಿಗಳು ಅನುಕೂಲಕರವಾಗಿವೆ.

 Sharesee more..