Saturday, Jul 4 2020 | Time 11:11 Hrs(IST)
 • ಸ್ವಾಮಿ ವಿವೇಕಾನಂದ ಅವರ ಪುಣ್ಯಸ್ಮರಣೆ: ಮುಖ್ಯಮಂತ್ರಿ, ಸಚಿವರಿಂದ ಗೌರವ ಅರ್ಪಣೆ
 • ಧರ್ಮ ಚಕ್ರ ದಿನ ಕಾರ್ಯಕ್ರಮ ಉದ್ಘಾಟಿಸಲಿರುವ ರಾಷ್ಟ್ರಪತಿ ಕೋವಿಂದ್
 • ರಾಜ್ಯದಲ್ಲಿ ಜು 31ರವರೆಗೆ ಕಂಟೈನ್ಮೆಂಟ್ ಝೋನ್‍ಗಳಲ್ಲಿ ಲಾಕ್‍ಡೌನ್ ವಿಸ್ತರಣೆ
 • ಪರವಾನಗಿ ಪಡೆಯದೆ ೭ ಲಕ್ಷ ಲೀಟರ್ ಸ್ಯಾನಿಟೈಸರ್ ತಯಾರಿಕೆ ಸ್ಥಾವರದ ನಿರ್ವಾಹಕನ ಬಂಧನ !
 • ಪರವಾನಗಿ ಪಡೆಯದೆ ೭ ಲಕ್ಷ ಲೀಟರ್ ಸ್ಯಾನಿಟೈಸರ್ ತಯಾರಿಕೆ ಸ್ಥಾವರದ ನಿರ್ವಾಹಕನ ಬಂಧನ !
 • ಸಂಡೆ ಸಂಪೂರ್ಣ ಲಾಕ್ ಡೌನ್ : ಕೆಎಸ್ ಆರ್ ಟಿಸಿ, ಬಿಎಂಟಿಸಿ ಸಂಚಾರವಿಲ್ಲ
 • ಅಮೆರಿಕದಲ್ಲಿ ಲಘು ವಿಮಾನ ಅಪಘಾತ- ನಾಲ್ವರ ಸಾವು
 • ನೀಟ್, ಜೆಇಇ, ಜೆ ಇಇ ಅಡ್ವಾನ್ಸ್ ಪರೀಕ್ಷೆಗಳು ಸೆಪ್ಟಂಬರ್ ಗೆ ಮುಂದೂಡಿಕೆ
 • ಪಾಕಿಸ್ತಾನ; ಸಿಖ್ ಯಾತ್ರಾರ್ಥಿಗಳಿದ್ದ ವ್ಯಾನ್ ಗೆ ರೈಲು ಡಿಕ್ಕಿ , ಸಾವಿನ ಸಂಖ್ಯೆ ೨೨ಕ್ಕೆ ಏರಿಕೆ
 • ಉತ್ತರ ಕೆರೊಲಿನಾದಲ್ಲಿ ರಸ್ತೆ ಅಪಘಾತ- 5 ಮಂದಿ ಸಾವು
 • ತಮಿಳುನಾಡಿನಲ್ಲಿ ಒಂದೇ ದಿನ 4329 ಕೊರೊನಾ ಸೋಂಕು ಪ್ರಕರಣ
National

ರಿಪಬ್ಲಿಕ್ ಟಿವಿಯ ಅರ್ನಾಬ್ ಗೋಸ್ವಾಮಿ ವಿರುದ್ಧದ 2 ಎಫ್‌ಐಆರ್ ರದ್ದುಗೊಳಿಸಲು ಹೈಕೋರ್ಟ್ ನಕಾರ

09 Jun 2020 | 10:08 PM

ಮುಂಬೈ, ಜೂನ್ 7 (ಯುಎನ್‌ಐ) ರಿಪಬ್ಲಿಕ್ ಟಿವಿ ಸಂಸ್ಥಾಪಕ ಅರ್ನಾಬ್ ಗೋಸ್ವಾಮಿ ವಿರುದ್ಧ ನಗರದಲ್ಲಿ ಮತ್ತು ನಾಗ್ಪುರದಲ್ಲಿ ದಾಖಲಿಸಲಾದ ಎರಡು ಎಫ್‌ಐಆರ್ (ಪ್ರಾಥಮಿಕ ಮಾಹಿತಿ ವರದಿಗಳು)ಗಳನ್ನು ರದ್ದುಗೊಳಿಸಲು ಬಾಂಬೆ ಹೈಕೋರ್ಟ್ ಮಂಗಳವಾರ ನಿರಾಕರಿಸಿದೆ ಎಫ್‌ಐಆರ್‌ಗಳನ್ನು ರದ್ದುಪಡಿಸುವಂತೆ ಮತ್ತು ವಿಚಾರಣೆಗೆ ಪೊಲೀಸರ ಮುಂದೆ ಹಾಜರಾಗುವುದಕ್ಕೆ ವಿನಾಯಿತಿ ಕೋರಿ ಅರ್ನಾಬ್ ಸಲ್ಲಿಸಿದ್ದ ಅರ್ಜಿಯನ್ನು ಆಲಿಸಿದ ನ್ಯಾಯಾಲಯ ಈ ಆದೇಶ ಹೊರಡಿಸಿದೆ.

 Sharesee more..

ಮುಂದಿನ ತಿಂಗಳಾತ್ಯಕ್ಕೆ ಕರೋನ ಸೋಂಕಿತರ ಸಂಖ್ಯೆ 5ಲಕ್ಷಕ್ಕೆ ಏರಿಕೆ: ಸಿಸೋಡಿಯಾ ಆತಂಕ

09 Jun 2020 | 10:06 PM

ನವದೆಹಲಿ, ಜೂನ್ 9 (ಯುಎನ್ಐ) ದೆಹಲಿಯಲ್ಲಿ ಕೊರೋನಸೋಂಕು ಸಮುದಾಯ ಹರಡುವಿಕೆಯಿಲ್ಲ ಎಂದು ಕೇಂದ್ರದ ಅಧಿಕಾರಿಗಳು ಹೇಳುತ್ತಿದ್ದರೂ ಮುಂದಿನ ತಿಂಗಳ ಕೊನೆಯ ವೇಳೆಗೆ ಸೋಂಕು ಪ್ರಕರಣಗಳ ಸಂಖ್ಯೆ 5ಲಕ್ಷ ದಾಟಿ ಹೋಗಬಹುದು ಎಂಬ ಕಳವಳವನ್ನು ದೆಹಲಿ ಉಪ ಮುಖ್ಯಮಂತ್ರಿ ಮನೀಷ್ ಸಿಸೋಡಿಯಾ ವ್ಯಕ್ತಪಡಿಸಿದ್ದಾರೆ.

 Sharesee more..

ತಮಿಳುನಾಡಿನಲ್ಲಿ ಕರೋನ ರಣಕೇಕೆ, 1,685 ಹೊಸ ಪ್ರಕರಣ ದಾಖಲು

09 Jun 2020 | 8:27 PM

ಚೆನ್ನೈ ಜೂನ್ 9 (ಯುಎನ್ಐ) ತಮಿಳುನಾಡಿನಲ್ಲಿ ಕೊರೋನಾ ಸೋಂಕು ತೀವ್ರಗತಿಯಲ್ಲಿ ಹರಡುತ್ತಿದೆ ಇಂದು ಒಂದೇ ದಿನದಲ್ಲಿ ದಾಖಲೆ 1,685 ಹೊಸ ಕೊರೋನಾ ಪ್ರಕರಣಗಳು ವರದಿಯಾಗಿದ್ದು, ಇದರೊಂದಿಗೆ ರಾಜ್ಯದಲ್ಲಿ ಒಟ್ಟು ಪ್ರಕರಣಗಳ ಸಂಖ್ಯೆ 34914 ಕ್ಕೆ ಏರಿಕೆಯಾಗಿದೆ.

 Sharesee more..

ಬಾರಾಮುಲ್ಲಾದಲ್ಲಿ ಭದ್ರತಾ ಪಡೆಗಳಿಂದ ಪ್ರಬಲ ಸುಧಾರಿತ ಸ್ಫೋಟಕ ಸಾಧನ ನಿಷ್ಕ್ರಿಯ

09 Jun 2020 | 7:45 PM

ಬಾರಾಮುಲ್ಲಾ, ಜೂನ್ 9 (ಯುಎನ್‌ಐ) ಉತ್ತರ ಕಾಶ್ಮೀರ ಜಿಲ್ಲೆಯಾದ ಇಲ್ಲಿ ಮಂಗಳವಾರ ಭದ್ರತಾ ಪಡೆಗಳು ಪ್ರಬಲ ಸುಧಾರಿತ ಸ್ಫೋಟಕ ಸಾಧನ (ಐಇಡಿ)ವನ್ನು ಪತ್ತೆ ಹಚ್ಚಿ ನಿಷ್ಕ್ರಿಯಗೊಳಿಸಿದ್ದು, ಸಂಭವಿಸಬಹುದಾದ ಭಾರೀ ದುರಂತ ತಪ್ಪಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

 Sharesee more..

ರಾಜ್ಯಗಳಿಂದ ಮನವಿ ಸ್ವೀಕರಿಸಿದ 24 ತಾಸಿನೊಳಗೆ ವಲಸಿಗರಿಗಾಗಿ ರೈಲು ಒದಗಿಸಲು ಸಿದ್ಧ-ರೈಲ್ವೆ ಸಚಿವಾಲಯ

09 Jun 2020 | 6:10 PM

ನವದೆಹಲಿ, ಜೂನ್ 9 (ಯುಎನ್‌ಐ) ಮೇ 1 ರಿಂದ 4,347 ಶ್ರಮಿಕ್ ವಿಶೇಷ ರೈಲುಗಳ ಮೂಲಕ ಸುಮಾರು 60 ಲಕ್ಷ ಜನರನ್ನು ತಮ್ಮ ಸ್ವಂತ ರಾಜ್ಯಗಳಿಗೆ ಸಾಗಿಸಿರುವ ಭಾರತೀಯ ರೈಲ್ವೆ, ರಾಜ್ಯಗಳಿಂದ ಬೇಡಿಕೆ ಸ್ವೀಕರಿಸಿದ 24 ಗಂಟೆಗಳ ಒಳಗೆ ಈ ರೈಲುಗಳನ್ನು ಒದಗಿಸುವುದನ್ನು ಮುಂದುವರಿಸುವುದಾಗಿ ತಿಳಿಸಿದೆ.

 Sharesee more..
ಲಡಾಕ್ ನಲ್ಲಿ ಭಾರತದ ಭೂಮಿಯನ್ನು ಚೀನಾ ಆಕ್ರಮಿಸಿಕೊಂಡಿದೆಯೇ? ರಕ್ಷಣಾ ಸಚಿವರಿಗೆ ರಾಹುಲ್ ಗಾಂಧಿ ಪ್ರಶ್ನೆ

ಲಡಾಕ್ ನಲ್ಲಿ ಭಾರತದ ಭೂಮಿಯನ್ನು ಚೀನಾ ಆಕ್ರಮಿಸಿಕೊಂಡಿದೆಯೇ? ರಕ್ಷಣಾ ಸಚಿವರಿಗೆ ರಾಹುಲ್ ಗಾಂಧಿ ಪ್ರಶ್ನೆ

09 Jun 2020 | 6:02 PM

ನವದೆಹಲಿ, ಜೂನ್ 09 (ಯುಎನ್ಐ) ಲಡಾಖ್‌ನಲ್ಲಿ ಚೀನಾ ಜೊತೆಗಿನ ಗಡಿರೇಖೆ ಬಿಕ್ಕಟ್ಟಿನ ಕುರಿತು ಎನ್‌ಡಿಎ ಸರ್ಕಾರದ ವಿರುದ್ಧ ವಾಗ್ದಾಳಿ ಮುಂದುವರಿಸಿರುವ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ, ಲಡಾಕ್‌ನಲ್ಲಿ ಭಾರತದ ಭೂಪ್ರದೇಶವನ್ನು ಚೀನಾ ಆಕ್ರಮಿಸಿಕೊಂಡಿದೆಯೇ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರನ್ನು ಪ್ರಶ್ನಿಸಿದ್ದಾರೆ.

 Sharesee more..

ಕೋವಿಡ್ 19: ದೆಹಲಿ ಕೊರೋನಾ ಸೋಂಕಿತ ಪತ್ರಕರ್ತನ ವಿಡಿಯೋ ಹಂಚಿಕೊಂಡ ರಾಹುಲ್ ಗಾಂಧಿ

09 Jun 2020 | 5:33 PM

ನವದೆಹಲಿ, ಜೂ 9 (ಯುಎನ್ಐ) ರಾಷ್ಟ್ರೀಯ ರಾಜಧಾನಿ ದೆಹಲಿಯಲ್ಲಿ ಕೋವಿಡ್ -19 ಆತಂಕಕಾರಿಯಾಗಿ ಏರುತ್ತಿರುವ ಬೆನ್ನಲ್ಲೇ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ಕೊರೋನಾ ಸೋಂಕಿತ ಪತ್ರಕರ್ತರೊಬ್ಬರ ಎಸ್ ಓಎಸ್ (ಸೇವ್ ಅವರ್ ಸೋಲ್) ವಿಡಿಯೋ ಒಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

 Sharesee more..
ರಾಜಕೀಯ ಹಿಂಸಾಚಾರ ಪ್ರಚೋದಿಸುತ್ತಿರುವ ಏಕಮಾತ್ರ ರಾಜ್ಯವೆಂದರೆ ಅದು ಬಂಗಾಳ ಮಾತ್ರ-ಅಮಿತ್‍ ಶಾ

ರಾಜಕೀಯ ಹಿಂಸಾಚಾರ ಪ್ರಚೋದಿಸುತ್ತಿರುವ ಏಕಮಾತ್ರ ರಾಜ್ಯವೆಂದರೆ ಅದು ಬಂಗಾಳ ಮಾತ್ರ-ಅಮಿತ್‍ ಶಾ

09 Jun 2020 | 5:20 PM

ಕೋಲ್ಕತಾ, ಜೂನ್ 09 (ಯುಎನ್‌ಐ) ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಬಡವರ ಹಕ್ಕುಗಳ ಮೇಲೆ ರಾಜಕೀಯ ಆಟ ಆಡುತ್ತಿದ್ದಾರೆ ಎಂದು ತೀವ್ರ ವಾಗ್ದಾಳಿ ನಡೆಸಿರುವ ಗೃಹ ಸಚಿವ ಅಮಿತ್ ಶಾ, ರಾಜಕೀಯ ಹಿಂಸಾಚಾರ ಪ್ರಚೋದಿಸುತ್ತಿರುವ ಏಕೈಕ ರಾಜ್ಯವೆಂದರೆ ಅದು ಪಶ್ಚಿಮ ಬಂಗಾಳ ಮಾತ್ರ ಎಂದು ಕಿಡಿಕಾರಿದ್ದಾರೆ.

 Sharesee more..

ಕೋವಿಡ್ ಹಿನ್ನೆಲೆ; ರಾಜ್ಯದಲ್ಲಿ ಎಸ್ಎಸ್ ಎಲ್ ಸಿ ಪರೀಕ್ಷೆ ರದ್ದುಗೊಳಿಸುವಂತೆ ಕೋರಿ ಸುಪ್ರೀಂಕೋರ್ಟ್ ಗೆ ಅರ್ಜಿ

09 Jun 2020 | 4:47 PM

ಬೆಂಗಳೂರು, ಜೂ 9 (ಯುಎನ್ಐ) ರಾಜ್ಯದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದ್ದರೂ, ರಾಜ್ಯ ಸರ್ಕಾರ ಜೂ 25ರಿಂದ ಎಸ್ ಎಸ್ ಎಲ್ ಸಿ ಪರೀಕ್ಷೆ ನಡೆಸಲು ಮುಂದಾಗಿರುವುದನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್ ಗೆ ಅರ್ಜಿ ಸಲ್ಲಿಕೆಯಾಗಿದೆ.

 Sharesee more..

ಕೊವಿಡ್‍-19: ರಾಜಸ್ಥಾನದಲ್ಲಿ ಚೇತರಿಕೆ ಪ್ರಮಾಣ ಶೇ 75ಕ್ಕೆ ಏರಿಕೆ

09 Jun 2020 | 4:32 PM

ಜೈಪುರ, ಜೂನ್ 9 (ಯುಎನ್‌ಐ) ರಾಜಸ್ಥಾನದಲ್ಲಿ ಇದುವರೆಗೆ 11,000 ಕ್ಕೂ ಹೆಚ್ಚು ಕೊವಿಡ್‍-19 ಪ್ರಕರಣಗಳು ವರದಿಯಾಗಿದ್ದರೂ ರಾಜ್ಯದಲ್ಲಿ ಸೋಂಕಿನಿಂದ ಚೇತರಿಸಿಕೊಂಡವರ ಪ್ರಮಾಣ ಶೇ 75 ರಷ್ಟು ಕಂಡುಬಂದಿದೆ ಮಾರಕ ಸೋಂಕಿನಿಂದ ತೀವ್ರ ಬಾಧಿತ ರಾಜ್ಯಗಳು ಮಾಡದಿರುವ ಸಾಧನೆಯನ್ನು ರಾಜಸ್ಥಾನ ಮಾಡಿ ತೊರಿಸಿದೆ.

 Sharesee more..

ಮಹಾರಾಷ್ಟ್ರದ ಥಾಣೆಯಲ್ಲಿ ಒಂದೇ ದಿನ ಕರೋನವೈರಸ್‌ನಿಂದ 25 ಮಂದಿ ಸಾವು

09 Jun 2020 | 12:38 AM

ಥಾಣೆ, ಜೂನ್ 8 (ಯುಎನ್‌ಐ) ಥಾಣೆ ಜಿಲ್ಲೆಯಲ್ಲಿ ಸೋಮವಾರ ಒಂದೇ ದಿನದಲ್ಲಿ 25 ಕರೋನವೈರಸ್‍ ಪೀಡಿತ ರೋಗಿಗಳು ಸಾವನ್ನಪ್ಪಿದ್ದು, ಇದರೊಂದಿಗೆ ಜಿಲ್ಲೆಯಲ್ಲಿ ಸಾಂಕ್ರಾಮಿಕ ರೋಗದಿಂದ ಸಾವನ್ನಪ್ಪಿದವರ ಸಂಖ್ಯೆ 391 ಕ್ಕೆ ಏರಿದೆ ಎಂದು ಜಿಲ್ಲಾಡಳಿತದ ಪ್ರಕಟಣೆ ತಿಳಿಸಿದೆ.

 Sharesee more..

ಅಂಫಾನ್‍ ಪೀಡಿತ ಪ್ರದೇಶಗಳಿಗೆ ನಿಯೋಜನೆಯಾಗಿದ್ದ 50 ಎನ್‌ಡಿಆರ್‌ಎಫ್ ಸಿಬ್ಬಂದಿಗೆ ಕೊವಿಡ್‍ ಸೋಂಕು ದೃಢ

09 Jun 2020 | 12:25 AM

ಭುವನೇಶ್ವರ, ಜೂನ್ 8 (ಯುಎನ್‌ಐ) ಒಡಿಶಾದ ಕಟಕ್ ಜಿಲ್ಲೆಯ ಮುಂಡಾಲಿಯಲ್ಲಿ ನಿಯೋಜನೆಯಾಗಿದ್ದ 3 ನೇ ಬೆಟಾಲಿಯನ್‌ನ ಕನಿಷ್ಠ 50 ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‍ಎಫ್‍) ಸಿಬ್ಬಂದಿಗೆ ಕೋವಿಡ್ -19 ಸೋಂಕು ದೃಢಪಟ್ಟಿದೆ 167 ಎನ್‌ಡಿಆರ್‌ಎಫ್ ಸಿಬ್ಬಂದಿ ಇತ್ತೀಚೆಗೆ ಕೋಲ್ಕತ್ತಾಗೆ ಪಶ್ಚಿಮ ಬಂಗಾಳ ಸರ್ಕಾರಕ್ಕೆ ನೆರವಾಗಲು ಅಲ್ಲಿಗೆ ತೆರಳಿದ್ದರು.

 Sharesee more..

ದೆಹಲಿ ಆಸ್ಪತ್ರೆಗಳಲ್ಲಿ ಹೊರಗಿನವರಿಗೂ ಚಿಕಿತ್ಸೆ ನೀಡುವ ಲೆಫ್ಟಿನೆಂಟ್‍ ಗವರ್ನರ್ ನಿರ್ಧಾರಕ್ಕೆ ಕೇಜ್ರಿವಾಲ್, ಸಿಸೋಡಿಯಾ ಅಸಮಾಧಾನ

08 Jun 2020 | 11:28 PM

ನವದೆಹಲಿ, ಜೂನ್ 8 (ಯುಎನ್‌ಐ)- ದೆಹಲಿ ಸರ್ಕಾರಿ ಆಸ್ಪತ್ರೆಗಳಲ್ಲಿ ಎಲ್ಲರಿಗೂ ಚಿಕಿತ್ಸೆ ನೀಡಲು ಅವಕಾಶ ನೀಡಿರುವ ಲೆಫ್ಟಿನೆಂಟ್ ಗವರ್ನರ್ ಅನಿಲ್ ಬೈಜಾಲ್ ಅವರ ನಿರ್ಧಾರದ ಬಗ್ಗೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮತ್ತು ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

 Sharesee more..

ಪೂಂಚ್‍ನಲ್ಲಿ ಗಡಿ ನಿಯಂತ್ರಣ ರೇಖೆಯುದ್ದಕ್ಕೂ ಪಾಕ್‍ನಿಂದ ಕದನ ವಿರಾಮ ಉಲ್ಲಂಘನೆ

08 Jun 2020 | 11:07 PM

ಜಮ್ಮು, ಜೂನ್ 8 (ಯುಎನ್‌ಐ)- ಜಮ್ಮು ಮತ್ತು ಕಾಶ್ಮೀರದ ಪೂಂಚ್ ಜಿಲ್ಲೆಯ ನಿಯಂತ್ರಣ ರೇಖೆಯ ಉದ್ದಕ್ಕೂ ಗುಂಡಿನ ದಾಳಿ ನಡೆಸಿರುವ ಪಾಕಿಸ್ತಾನ ಪಡೆಗಳು ಸೋಮವಾರ ಮತ್ತೆ ಕದನ ವಿರಾಮವನ್ನು ಉಲ್ಲಂಘಿಸಿದ್ದು, ಇದಕ್ಕೆ ಭಾರತೀಯ ಸೇನೆ ತಕ್ಕ ಪ್ರತ್ಯುತ್ತರ ನೀಡಿವೆ.

 Sharesee more..

ಇಂಧನ ವಲಯದಲ್ಲಿ ಸಹಕಾರಕ್ಕೆ ಭಾರತ - ಡೆನ್ಮಾರ್ಕ್ ಸಹಿ

08 Jun 2020 | 11:06 PM

ನವದೆಹಲಿ, ಜೂನ್ 8 (ಯುಎನ್ಐ) ಇಂಧನ ವಲಯದಲ್ಲಿ ಸಹಕಾರ ವೃದ್ಧಿಗೆ ಭಾರತ ಮತ್ತು ಡೆನ್ಮಾರ್ಕ್ ಸಹಿ ಹಾಕಿವೆ ಇಂಧನ ವಲಯದಲ್ಲಿ ಸಮಾನತೆಯ ದೃಢ, ದೀರ್ಘಾವಧಿ ಸಹಕಾರಕ್ಕೆ ಉಭಯ ದೇಶಗಳ ಇಂಧನ ಸಚಿವಾಲಯ ಈ ಒಡಂಬಡಿಕೆಗೆ ಸಹಿ ಹಾಕಿವೆ.

 Sharesee more..