Monday, Jul 22 2019 | Time 07:16 Hrs(IST)
  • ಶಾಸಕರು ರಾಜಕೀಯ ವ್ಯಭಿಚಾರ ಮಾಡಿದ್ದಾರೆ : ದಿನೇಶ್ ಗುಂಡೂರಾವ್ ಗಂಭೀರ ಆರೋಪ
National

ಯುಜಿಸಿ – ಎನ್‌ಇಟಿ 2019 ಫಲಿತಾಂಶ ಪ್ರಕಟ

13 Jul 2019 | 11:04 PM

ನವದೆಹಲಿ, ಜುಲೈ 13 (ಯುಎನ್ಐ) ವಿಶ್ವವಿದ್ಯಾಲಯ ಧನ ಸಹಾಯ ಆಯೋಗ ಯುಜಿಸಿ ನಡೆಸುವ ಎನ್‌ಇಟಿ ಪರೀಕ್ಷಾ ಫಲಿತಾಂಶವನ್ನು ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ ಶನಿವಾರ ಪ್ರಕಟಿಸಿದೆ; ಜಾಲತಾಣ ಎನ್‌ಟಿಎಎನ್‌ಇಟಿ ಡಾಟ್ ಎನ್‌ಐಸಿ ಡಾಟ್ ಐಎನ್ ನಲ್ಲಿ ಫಲಿತಾಂಶ ಲಭ್ಯವಿದೆ.

 Sharesee more..

ದೆಹಲಿಯಲ್ಲಿ ಬಿಸಿಲ ಝಳ ಹೆಚ್ಚಳ

13 Jul 2019 | 7:52 PM

ನವದೆಹಲಿ, ಜುಲೈ 13( ಯುಎನ್ಐ) ರಾಜಧಾನಿಯಲ್ಲಿ ಶನಿವಾರ ಬಿಸಿಲ ಝಳ ಹೆಚ್ಚಗಿದ್ದು, ಸಾಮಾನ್ಯಕ್ಕಿಂತ ನಾಲ್ಕು ಡಿಗ್ರಿ ಏರಿಕೆ ಕಂಡು ಗರಿಷ್ಠ ತಾಪಮಾನ 39 6 ಡಿಗ್ರಿ ಸೆಲ್ಷಿಯಸ್ ತಾಪಮಾನವಿತ್ತು.

 Sharesee more..

ಒಡಿಎಫ್-ಪ್ಲಸ್, ಸ್ವಚ್‍ ಗ್ರಾಮ್ ದರ್ಪನ್ ಮೊಬೈಲ್‍ ಆಪ್‍ಗೆ ಚಾಲನೆ

13 Jul 2019 | 7:47 PM

ನವದೆಹಲಿ, ಜುಲೈ 13 (ಯುಎನ್‌ಐ)- ಬಯಲು ಶೌಚ ಮುಕ್ತ (ಒಡಿಎಫ್) ಚಟುವಟಿಕೆಗಳು ಹಾಗೂ ಘನ, ದ್ರವ ತ್ಯಾಜ್ಯ ನಿರ್ವಹಣೆ (ಎಸ್‌ಎಲ್‌ಡಬ್ಲ್ಯುಎಂ)ಯಲ್ಲಿ ರಾಜ್ಯಗಳು ಮತ್ತು ಜಿಲ್ಲೆಗಳ ನಡುವೆ ಆರೋಗ್ಯಕರ ಸ್ಪರ್ಧೆ ಏರ್ಪಡುವಂತಾಗಲು ಒಡಿಎಫ್-ಪ್ಲಸ್ ಮತ್ತು ಸ್ವಚ್ಛ ಗ್ರಾಮ ದರ್ಪನ್ ಮೊಬೈಲ್ ಆಪ್‍ಗಳಿಗೆ ಜಲ ಶಕ್ತಿ ಖಾತೆ ರಾಜ್ಯ ಸಚಿವ ರತನ್ ಲಾಲ್ ಕಟಾರಿಯಾ ಶನಿವಾರ ಚಾಲನೆ ನೀಡಿದರು.

 Sharesee more..
ಅಮಿತ್ ಶಾ ಜೊತೆ ಎಬಿವಿಪಿ ನಿಯೋಗ ಮಾತುಕತೆ

ಅಮಿತ್ ಶಾ ಜೊತೆ ಎಬಿವಿಪಿ ನಿಯೋಗ ಮಾತುಕತೆ

13 Jul 2019 | 6:14 PM

ನವದೆಹಲಿ, ಜುಲೈ 13: ಆಡಳಿತಾರೂಢ ಬಿಜೆಪಿಯ ವಿದ್ಯಾರ್ಥಿ ವಿಭಾಗ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ಪದಾಧಿಕಾರಿಗಳು ಕೇಂದ್ರ ಗೃಹ ಸಚಿವ ಮತ್ತು ಪಕ್ಷದ ಮುಖ್ಯಸ್ಥ ಅಮಿತ್ ಶಾ ಮತ್ತು ಇತರ ಕೇಂದ್ರ ಸಚಿವರನ್ನು ಶನಿವಾರ ಭೇಟಿಯಾಗಿ ನಗರ ನಕ್ಸಲಿಸಂ, ಭಯೋತ್ಪಾದನೆಗೆ ಸಂಬಂಧಿಸಿದ ವಿಷಯಗಳ ಬಗ್ಗೆ ಮಾತುಕತೆ ನಡೆಸಿದ್ದಾರೆ.

 Sharesee more..

ಅಗ್ನಿ ಅವಘಡದಲ್ಲಿ ಮೂವರು ಸಾವು; ಮಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ವಿಷಾದ

13 Jul 2019 | 6:04 PM

ನವದೆಹಲಿ, ಜುಲೈ 13 (ಯುಎನ್ಐ) ರಾಷ್ಟ್ರ ರಾಜಧಾನಿಯ ಜಿಲ್ಮಿಲ್ ಕೈಗಾರಿಕಾ ಪ್ರದೇಶದ ರಬ್ಬರ್ ಮತ್ತು ಪ್ಲಾಸ್ಟಿಕ್ ಕಾರ್ಖಾನೆಯೊಂದರಲ್ಲಿ ಶನಿವಾರ ಸಂಭವಿಸಿದ ಅಗ್ನಿ ಅವಘಡದಲ್ಲಿ ಮೂವರು ಸಾವನ್ನಪ್ಪಿರುವ ಘಟನೆಗೆ ಮಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ದಿಗ್ಬ್ರಮೆ ವ್ಯಕ್ತಪಡಿಸಿದ್ದಾರೆ.

 Sharesee more..

ಅರುಣಾಚಲ ಮಾಜಿ ಸಿಎಂ ವಿರುದ್ಧ ಸಿಬಿಐ ಪ್ರಕರಣ ದಾಖಲು

13 Jul 2019 | 4:55 PM

ನವದೆಹಲಿ, ಜುಲೈ 13 (ಯುಎನ್‌ಐ) ಭ್ರಷ್ಟಾಚಾರದ ಆರೋಪದ ಮೇಲೆ ಕೇಂದ್ರ ತನಿಖಾ ದಳ ಅರುಣಾಚಲ ಪ್ರದೇಶದ ಮಾಜಿ ಮುಖ್ಯಮಂತ್ರಿ ನಬಮ್ ಟುಕಿ ವಿರುದ್ಧ ಪ್ರಕರಣ ದಾಖಲಿಸಿದೆ ನಿಯಮ ಪಾಲಿಸದೆ ಮತ್ತು ಟೆಂಡರ್‌ಗಳನ್ನು ಆಹ್ವಾನಿಸದೆ ಅವರು 2003 ರಲ್ಲಿ ನಬಮ್ ಟುಕಿ ತನ್ನ ಸಹೋದರ ನಬಮ್ ಟಗಮ್‌ಗೆ 3.

 Sharesee more..

ರಾಜೀನಾಮೆ ಪ್ರಹಸನ : ಸುಪ್ರೀಂ ಕದ ತಟ್ಟಿದ ಇನ್ನೂ ಐವರು ಶಾಸಕರು

13 Jul 2019 | 4:04 PM

ನವದೆಹಲಿ, ಜುಲೈ 13 (ಯುಎನ್‌ಐ) ಶಾಸಕ ಸ್ಥಾನಕ್ಕೆ ನೀಡಿರುವ ತಮ್ಮ ರಾಜೀನಾಮೆಯನ್ನು ಅಂಗೀಕರಿಸುವಂತೆ ವಿಧಾನಸಭಾ ಸ್ಪೀಕರ್‌ ಅವರಿಗೆ ನಿರ್ದೇಶನ ನೀಡಬೇಕು ಎಂದು ಕರ್ನಾಟಕದ ಇನ್ನೂ ಐವರು ಶಾಸಕರು ಸುಪ್ರೀಂ ಕೋರ್ಟ್‌ಗೆ ಮೊರೆ ಹೋಗಿದ್ದಾರೆ ಶಾಸಕರಾದ ಸುಧಾಕರ್, ರೋಷನ್ ಬೇಗ್, ಎಂಟಿಬಿ ನಾಗರಾಜ್, ಮುನಿರತ್ನ, ಮತ್ತು ಆನಂದ್ ಸಿಂಗ್ ಅವರುಗಳು ರಾಜಿನಾಮೆ ಅಂಗೀಕಾರ ಮಾಡುವಂತೆ ನ್ಯಾಯಾಲಯದ ಮೊರೆ ಹೋಗಿದ್ದಾರೆ.

 Sharesee more..

ಎಬಿವಿಪಿ ನಿಯೋಗದಿಂದ ಶಾ, ಕೇಂದ್ರ ನಾಯಕರ ಭೇಟಿ; ಪ್ರಮುಖ ವಿಷಯಗಳ ಚರ್ಚೆ

13 Jul 2019 | 10:32 AM

ನವದೆಹಲಿ, ಜು 13 (ಯುಎನ್ಐ) ಆಡಳಿತಾರೂಢ ಬಿಜೆಪಿ ವಿದ್ಯಾರ್ಥಿ ಘಟಕವಾದ, ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ)ನ ಪದಾಧಿಕಾರಿಗಳು ಕೇಂದ್ರ ಗೃಹ ಸಚಿವ ಮತ್ತು ಪಕ್ಷದ ಅಧ್ಯಕ್ಷ ಅಮಿತ್ ಶಾ ಮತ್ತು ಇತರ ಕೇಂದ್ರ ನಾಯಕರನ್ನು ಭೇಟಿಯಾಗಿ ನಗರ ನಕ್ಸಲಿಸಂ, ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದನೆ ಮತ್ತು ಶಿಕ್ಷಣಕ್ಕೆ ಸಂಬಂಧಿಸಿದ ವಿಷಯಗಳ ಬಗ್ಗೆ ಚರ್ಚಿಸಿದರು.

 Sharesee more..

ವಿಶ್ವ ಬ್ಯಾಂಕ್‌ ವ್ಯವಸ್ಥಾಪಕ ನಿರ್ದೇಶಕ, ಸಿಎಫ್‌ಒ ಆಗಿ ಅನ್ಶುಲಾ ಕಾಂತ್ ನೇಮಕ

13 Jul 2019 | 9:49 AM

ನವದೆಹಲಿ, ಜು 12 (ಯುಎನ್ಐ) ಸ್ಟೇಟ್ ಬ್ಯಾಂಕ್‌ ಆಫ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ಅನ್ಶುಲಾ ಕಾಂತ್ ಅವರನ್ನು ವಿಶ್ವಬ್ಯಾಂಕ್‌ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಮುಖ್ಯ ಹಣಕಾಸು ಅಧಿಕಾರಿಯಾಗಿ ನೇಮಿಸಲಾಗಿದೆ ಎಂ.

 Sharesee more..

ನೆರೆ ರಾಷ್ಟ್ರಗಳ ಕುರಿತು ವಾಜಪೇಯಿ ಸೂತ್ರ ಇಂದಿನ ಸರ್ಕಾರಕ್ಕೆ ಮಾರ್ಗಸೂಚಿ ; ಸೈಫುದ್ದೀನ್

12 Jul 2019 | 7:58 PM

ಶ್ರೀನಗರ, ಜುಲೈ 12 (ಯುಎನ್ಐ) ನೆರೆಹೊರೆಯ ರಾಷ್ಟ್ರಗಳೊಂದಿಗಿನ ಸಂಬಂಧದ ಕುರಿತು ಮಾಜಿ ಪ್ರಧಾನಿ ದಿ ಅಟಲ್ ಬಿಹಾರಿ ವಾಜಪೇಯಿ ಅವರ ದೃಷ್ಟಿಕೋನ ಇಂದಿನ ಸರ್ಕಾರಕ್ಕೆ ಮಾರ್ಗದರ್ಶಿಯಾಗಬೇಕು ಎಂದು ಹಿರಿಯ ಕಾಂಗ್ರೆಸ್ ನಾಯಕ ಪ್ರೊ.

 Sharesee more..
ಟಿವಿಎಸ್ ನಿಂದ ಎಥನಾಲ್ ಆಧಾರಿತ ಬೈಕ್ ಬಿಡುಗಡೆ

ಟಿವಿಎಸ್ ನಿಂದ ಎಥನಾಲ್ ಆಧಾರಿತ ಬೈಕ್ ಬಿಡುಗಡೆ

12 Jul 2019 | 5:42 PM

ನವದೆಹಲಿ, ಜುಲೈ 12 (ಯುಎನ್ ಐ ) ದ್ವಿಚಕ್ರ ಹಾಗೂ ತ್ರಿಚಕ್ರ ವಾಹನ ಉತ್ಪಾದನಾ ಸಂಸ್ಥೆ ಟಿವಿಎಸ್ ಮೋಟಾರ್ ಶುಕ್ರವಾರ ದೇಶದ ಮೊದಲ ಎಥನಾಲ್ ಆಧಾರಿತ 'ಟಿವಿಎಸ್ ಅಪಾಚಿ ಆರ್ ಟಿ ಆರ್ 200 ಎಫ್ ಐ ಇ-100' ಮೋಟಾರ್ ಸೈಕಲ್ ಅನ್ನು ಬಿಡುಗಡೆಗೊಳಿಸಿದೆ.

 Sharesee more..

ಕೇಂದ್ರಾಡಳಿತ ಪ್ರದೇಶದ ಅಧಿಕಾರ ವ್ಯಾಪ್ತಿ ವಿವಾದ; ಕಿರಣ್ ಬೇಡಿ ಅರ್ಜಿ ತಿರಸ್ಕರಿಸಿದ ಸುಪ್ರೀಂಕೋರ್ಟ್

12 Jul 2019 | 4:33 PM

ನವದೆಹಲಿ, ಜುಲೈ 12 (ಯುಎನ್ಐ) ಕೇಂದ್ರಾಡಳಿತ ಪ್ರದೇಶದ ಆಡಳಿತ ವ್ಯಾಪ್ತಿ ವಿವಾದಕ್ಕೆ ಸಂಬಂಧಿಸಿದಂತೆ ಪುದುಚೆರಿ ಲೆಫ್ಟಿನೆಂಟ್ ಗವರ್ನರ್ ಕಿರಣ್ ಬೇಡಿ ಸಲ್ಲಿಸಿದ್ದ ಅರ್ಜಿಯಲ್ಲಿ ಮಧ್ಯಪ್ರವೇಶಿಸಲು ಸುಪ್ರೀಂಕೊರ್ಟ್ ನಿರಾಕರಿಸಿದೆ ಹಣಕಾಸಿನ ವಿಷಯಕ್ಕೆ ಸಂಬಂಧಿಸಿದಂತೆ ಯಾವುದೇ ಸ್ವತಂತ್ರ್ಯ ನಿರ್ಧಾರ ಕೈಗೊಳ್ಳಲು ಕೇಂದ್ರಾಡಳಿತ ಪ್ರದೇಶದ ಲೆಫ್ಟಿನೆಂಟ್ ಗವರ್ನರ್ ಗೆ ಅಧಿಕಾರವಿಲ್ಲ.

 Sharesee more..
ಎಲ್ಲೆಡೆ ಆಷಾಢ ಏಕಾದಶಿ : ಚಾತುರ್ಮಾಸ್ಯ ವ್ರತಾರಂಭ, ಶುಭ ಕೋರಿದ ಪ್ರಧಾನಿ

ಎಲ್ಲೆಡೆ ಆಷಾಢ ಏಕಾದಶಿ : ಚಾತುರ್ಮಾಸ್ಯ ವ್ರತಾರಂಭ, ಶುಭ ಕೋರಿದ ಪ್ರಧಾನಿ

12 Jul 2019 | 2:59 PM

ನವದೆಹಲಿ/ಬೆಂಗಳೂರು, ಜುಲೈ 12 (ಯುಎನ್ಐ) ಇಂದು ಆಷಾಢ ಏಕಾದಶಿ ಮಹಾವಿಷ್ಣುವಿನ ಪ್ರೀತ್ಯರ್ಥ ಚಾತುರ್ಮಾಸ್ಯ ವ್ರತ ಆರಂಭವಾಗುತ್ತದೆ ಈ ದಿನ ಶಯನಿ ಏಕಾದಶಿ, ಮಹಾ ಏಕಾದಶಿ, ಪ್ರಥಮ ಏಕಾದಶಿ, ಪದ್ಮ ಏಕಾದಶಿ, ಹರಿಶಯನಿ, ದೇವಶಯನಿ ಏಕಾದಶಿ ಮೊದಲಾದ ಹೆಸರುಗಳಿಂದ ಕರೆಯಲ್ಪಡುತ್ತದೆ ಪ್ರಧಾನಿ ನರೇಂದ್ರ ಮೋದಿಯವರು ಏಕಾದಶಿ ಅಂಗವಾಗಿ ದೇಶದ ಜನತೆಗೆ ಶುಭ ಕೋರಿದ್ದು, ಈ ದಿನದ ಮಹತ್ವ ಸಾರುವ ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ

 Sharesee more..

ಬಿಜೆಪಿ ಸೇರಿದ ಕಾಂಗ್ರೆಸ್ ಶಾಸಕರಿಗೆ ನಾಳೆ ಮಂತ್ರಿ ಯೋಗ !

12 Jul 2019 | 12:28 PM

ಪಣಜಿ, ಜುಲೈ 12 (ಯುಎನ್‌ಐ) ಬಿಜೆಪಿ ರಾಷ್ಟ್ರೀಯ ಕಾರ್ಯಾದ್ಯಕ್ಷ ಜೆ ಪಿ ನಡ್ಡಾ ಅವರ ಸಮ್ಮುಖದಲ್ಲಿ ವಿದ್ಯುಕ್ತ ವಾಗಿ ಭಾರತೀಯ ಜನತಾ ಪಕ್ಷಕ್ಕೆ ಸೇರ್ಪಡೆಗೊಂಡ ಹತ್ತು ಕಾಂಗ್ರೆಸ್ ಶಾಸಕರು ಶುಕ್ರವಾರ ಗೋವಾಕ್ಕೆ ಆಗಮಿಸಿದ್ದು, ಅದರಲ್ಲಿ ಕೆಲವರಿಗೆ ನಾಳೆ ಮಂತ್ರಿಯಾಗುವ ಯೋಗ ಲಭಿಸಲಿದೆ.

 Sharesee more..

ಸಾಗರೋತ್ತರ ಭಾರತೀಯ ವ್ಯವಹಾರಗಳ ಕಾರ್ಯದರ್ಶಿಯಾಗಿ ವಿಕಾಸ್ ಸ್ವರೂಪ್ ನೇಮಕ

12 Jul 2019 | 12:23 PM

ನವದೆಹಲಿ, ಜುಲೈ 12 (ಯುಎನ್ಐ) ರಾಜತಾಂತ್ರಿಕ ಮತ್ತು ವಿದೇಶಾಂಗ ಸಚಿವಾಲಯದ ಮಾಜಿ ವಕ್ತಾರ ವಿಕಾಸ್ ಸ್ವರೂಪ್ ಅವರನ್ನು ಸಾಗರೋತ್ತರ ಭಾರತೀಯ ವ್ಯವಹಾರಗಳ ಕಾರ್ಯದರ್ಶಿಯಾಗಿ ನೇಮಿಸಲಾಗಿದೆ ಸಚಿವ ಸಂಪುಟ ಸಮಿತಿಯು ವಿಕಾಸ್ ಸ್ವರೂಪ್ ಅವರ ನೇಮಕಕ್ಕೆ ಅನುಮತಿ ನೀಡಿದ್ದು, ಆಗಸ್ಟ್ 1 ರಿಂದ ಅಧಿಕಾರ ವಹಿಸಿಕೊಳ್ಳಲಿದ್ದಾರೆ ಎಂದು ಅಧಿಕೃತ ಪ್ರಕಟಣೆ ಶುಕ್ರವಾರ ತಿಳಿಸಿದೆ.

 Sharesee more..