Tuesday, Nov 12 2019 | Time 04:46 Hrs(IST)
National

ಅಯೋಧ್ಯೆ ಕುರಿತ ಸುಪ್ರೀಂಕೋರ್ಟ್ ತೀರ್ಪು ಗೌರವಿಸಲೇ ಬೇಕು- ಮಾಯಾವತಿ

07 Nov 2019 | 1:21 PM

ಲಖನೌ, ನ 7 (ಯುಎನ್‌ಐ) ಅಯೋಧ್ಯೆ ವಿಷಯ ಕುರಿತ ಸುಪ್ರೀಂ ಕೋರ್ಟ್‌ನ ತೀರ್ಪನ್ನು ಗೌರವಿಸಲೇ ಬೇಕು ಜನರಿಗೆ ಮನವಿ ಮಾಡಿರುವ ಬಹುಜನ ಸಮಾಜ ಪಕ್ಷದ (ಬಿಎಸ್‌ಪಿ) ಮುಖ್ಯಸ್ಥ ಮಾಯಾವತಿ, ತೀರ್ಪಿನ ನಂತರ ಎಲ್ಲರ ಸುರಕ್ಷತೆಗೆ ಕ್ರಮಗಳನ್ನು ತೆಗೆದುಕೊಳ್ಳುವಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳನ್ನು ಗುರುವಾರ ಒತ್ತಾಯಿಸಿದ್ದಾರೆ.

 Sharesee more..

ಶಿವಸೇನಾ-ಬಿಜೆಪಿ ಜಗಳ ಬಾಳ್ ಸಾಹೇಬ್ ಕಾಲದ್ದು!

07 Nov 2019 | 12:59 PM

ನವದೆಹಲಿ, ನವೆಂಬರ್ ೭ (ಯುಎನ್‌ಐ) ದೇವೇಂದ್ರ ಫಡ್ನವಿಸ್-ಉದ್ಧವ್ ಠಾಕ್ರೆ ನಡುವಿನ ಸರ್ಕಾರ ರಚನೆಯ ಸಮರವನ್ನು ಬದಿಗಿಟ್ಟು, ಮಹಾರಾಷ್ಟ್ರದ ರಾಜಕೀಯವನ್ನು ಸೂಕ್ಷ್ಮವಾಗಿ ಅವಲೋಕಿಸಿದರೆ, ಶಿವಸೇನೆ ಮತ್ತು ಬಿಜೆಪಿ ನಡುವಿನ ಜಗಳವು ಬಾಳ್ ಸಾಹೇಬ್ ಠಾಕ್ರೆ ಕಾಲಕ್ಕೂ ಹಿಂದಿನದಾಗಿದ್ದು, ಪ್ರಾಸಂಗಿಕವಾಗಿ ನರೇಂದ್ರ ಮೋದಿಯವರ ಉದಯಕ್ಕೆ ಹೊಂದಿಕೆಯಾಯಿತು.

 Sharesee more..

ಡಾ ಎಸ್ ಜೈಶಂಕರ್ ಮೂರು ದಿನಗಳ ಸರ್ಬಿಯಾ ಭೇಟಿ

07 Nov 2019 | 12:21 AM

ನವದೆಹಲಿ, ನ 6 (ಯುಎನ್ಐ) ವಿದೇಶಾಂಗ ವ್ಯವಹಾರಗಳ ಸಚಿವ ಡಾ ಎಸ್ ಜೈಶಂಕರ್ ಸರ್ಬಿಯಾಗೆ ಗುರುವಾರದಿಂದ ಮೂರು ದಿನಗಳ ಅಧಿಕೃತ ಭೇಟಿ ನೀಡಲಿದ್ದಾರ ಸರ್ಬಿಯಾದ ಮೊದಲ ಉಪ ಪ್ರಧಾನಿ ಮತ್ತು ವಿದೇಶಾಂಗ ವ್ಯವಹಾರಗಳ ಸಚಿವ ಇವಿಕಾ ಡ್ಯಾಸಿಸ್ ಅವರ ಆಹ್ವಾನದ ಮೇರೆಗೆ ಜೈಶಂಕರ್ ಈ ಪ್ರವಾಸ ಕೈಗೊಂಡಿದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಹೇಳಿಕೆ ತಿಳಿಸಿದೆ.

 Sharesee more..

ವಸತಿ ಯೋಜನೆಗಳನ್ನು ಪೂರ್ಣಗೊಳಿಸಲು 10 ಸಾವಿರ ಕೋಟಿ ರೂ ನಿಧಿ : ನಿರ್ಮಲಾ ಸೀತಾರಾಮನ್

06 Nov 2019 | 11:32 PM

ನವದೆಹಲಿ, ನ 6 (ಯುಎನ್ಐ) ದೇಶದಲ್ಲಿ ನಿಂತುಹೋಗಿರುವ 1,600 ವಸತಿ ಯೋಜನೆಗಳಿಗೆ ಮರುಚಾಲನೆ ನೀಡಲು ಹತ್ತು ಸಾವಿರ ಕೋಟಿ ರೂ ಗಳನ್ನು ವಿನಿಯೋಗ ಮಾಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

 Sharesee more..

ಕೃಷಿ ತ್ಯಾಜ್ಯ ಸುಡುವಿಕೆ ತಡೆಗಟ್ಟುವಿಕೆಗೆ ಆದ್ಯತೆ ನೀಡುವಂತೆ ಕೃಷಿ ಸಚಿವಾಲಯಕ್ಕೆ ಪ್ರಧಾನಿ ಸೂಚನೆ

06 Nov 2019 | 11:15 PM

ನವದೆಹಲಿ, ನ 6 (ಯುಎನ್‌ಐ) ಕೃಷಿ ತ್ಯಾಜ್ಯಗಳ ಸುಡುವಿಕೆ ಕುರಿತ ಪ್ರಕರಣಗಳನ್ನು ಪರಿಶೀಲಿಸುವಂತೆ ಹರಿಯಾಣ ಮತ್ತು ಪಂಜಾಬ್ ರಾಜ್ಯಗಳನ್ನು ಸೂಚಿಸಿದ ಕೆಲ ದಿನಗಳಲ್ಲೇ ಪ್ರಧಾನಿ ನರೇಂದ್ರ ಮೋದಿ ಅವರು ಬುಧವಾರ ಕೇಂದ್ರ ಕೃಷಿ ಸಚಿವಾಲಯಕ್ಕೂ ಇದೇ ಸೂಚನೆ ನೀಡಿ, ಅಂತಹ ಘಟನೆಗಳನ್ನು ತಡೆಗಟ್ಟಲು ಉಪಕರಣಗಳ ವಿತರಣೆಗೆ ಕ್ರಮ ತೆಗೆದುಕೊಳ್ಳಬೇಕೆಂದು ಸೂಚಿಸಿದ್ದಾರೆ.

 Sharesee more..

ದಲಿತರ, ಆದಿವಾಸಿಗಳ ಮೇಲಿನ ದಾಳಿಯನ್ನು ಸಹಿಸುವುದಿಲ್ಲ- ಪ್ರಿಯಾಂಕಾ ವಾದ್ರಾ

06 Nov 2019 | 10:57 PM

ನವದೆಹಲಿ, ನವೆಂಬರ್ 6 (ಯುಎನ್‌ಐ) ಉತ್ತರಪ್ರದೇಶದಲ್ಲಿ ಕಾನೂನು ಸುವ್ಯವಸ್ಥೆ ಕುರಿತು ಯೋಗಿ ಆದಿತ್ಯನಾಥ್ ಸರ್ಕಾರದ ವಿರುದ್ಧ ವಾಗ್ಧಾಳಿಯನ್ನು ಮುಂದುವರಿಸಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ, ದಲಿತ ವ್ಯಕ್ತಿಯ ಮೇಲೆ ಹಲ್ಲೆ ನಡೆಸಿದ ವಿಷಯದ ಬಗ್ಗೆ ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡು, ಬಿಜೆಪಿ, ದಲಿತರು ಮತ್ತು ಆದಿವಾಸಿಗಳ ಮೇಲೆ ದಾಳಿ ನಡೆಸುತ್ತಿದ್ದರೂ, ಸರ್ಕಾರ ಮೂಕ ಪ್ರೇಕ್ಷಕವಾಗಿದೆ ಎಂದು ಆರೋಪಿಸಿದ್ದಾರೆ.

 Sharesee more..

ಭಾರತ-ಪೆರುಗ್ವೆ ನಡುವೆ ಪ್ರವಾಸೋದ್ಯಮ ಒಪ್ಪಂದ: ಸಂಪುಟ ಸಮ್ಮತಿ

06 Nov 2019 | 10:23 PM

ನವದೆಹಲಿ, ನವೆಂಬರ್ 6 (ಯುಎನ್‌ಐ) ಪ್ರವಾಸೋದ್ಯಮ ಕ್ಷೇತ್ರದಲ್ಲಿ ಸಹಕಾರವನ್ನು ಬಲಪಡಿಸುವ ಸಲುವಾಗಿ ಭಾರತ ಮತ್ತು ಪೆರುಗ್ವೆ ನಡುವಿನ ತಿಳುವಳಿಕೆ ಒಪ್ಪಂದಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ಸಚಿವ ಸಂಪುಟ ಘಟನೋತ್ತರ ಅನುಮೋದನೆ ನೀಡಿದೆ.

 Sharesee more..

ಆರೋಗ್ಯ ಕ್ಷೇತ್ರದಲ್ಲಿ ಭಾರತ-ಜರ್ಮನಿ ಒಪ್ಪಂದ: ಕೇಂದ್ರ ಸಂಪುಟ ಅನುಮೋದನೆ

06 Nov 2019 | 10:14 PM

ನವದೆಹಲಿ, ನ 6 (ಯುಎನ್ಐ) ವೃತ್ತಿಯಿಂದ ಬರುವ ಕಾಯಿಲೆಗಳು, ಪುನರ್ವಸತಿ ಮತ್ತು ವಿಶಿಷ್ಟಚೇತನರ ವೃತ್ತಿಪರ ತರಬೇತಿ ಕ್ಷೇತ್ರದಲ್ಲಿ ಸಹಯೋಗಕ್ಕಾಗಿ ಭಾರತ ಮತ್ತು ಜರ್ಮನಿ ನಡುವಿನ ಒಡಂಬಡಿಕೆಗಳಿಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ಕೇಂದ್ರ ಸಚಿವ ಸಂಪುಟ ಘಟನೋತ್ತರ ಅನುಮೋದನೆ ನೀಡಿದೆ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ.

 Sharesee more..

ಮಾಲ್ಡೀವ್ಸ್‌ ನ್ಯಾಯಾಂಗ ಅಧಿಕಾರಿಗಳಿಗೆ ತರಬೇತಿ: ಉಭಯ ದೇಶಗಳ ನಡುವಿನ ಒಡಂಬಡಿಕೆಗೆ ಸಂಪುಟ ಒಪ್ಪಿಗೆ

06 Nov 2019 | 9:45 PM

ನವದೆಹಲಿ, ನವೆಂಬರ್ 6 (ಯುಎನ್ಐ) ಭಾರತದಲ್ಲಿ ಮಾಲ್ಡೀವ್ಸ್‌ನ ನ್ಯಾಯಾಂಗ ಅಧಿಕಾರಿಗಳಿಗೆ ತರಬೇತಿ ಮತ್ತು ಸಾಮರ್ಥ್ಯ ವೃದ್ಧಿ ಕಾರ್ಯಕ್ರಮ ಆಯೋಜಿಸಲು ಭಾರತ ಮತ್ತು ಮಾಲ್ಡೀವ್ಸ್ ನಡುವಿನ ತಿಳುವಳಿಕೆ ಒಪ್ಪಂದಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ಕೇಂದ್ರ ಸಚಿವ ಸಂಪುಟವು ಅನುಮೋದನೆ ನೀಡಿದೆ ಎಂದು ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ.

 Sharesee more..

ಫೆನಿ ನದಿಯಿಂದ ನೀರು ಹಿಂಪಡೆದುಕೊಳ್ಳುವ ಭಾರತ-ಬಾಂಗ್ಲಾ ನಡುವಿನ ಒಪ್ಪಂದಕ್ಕೆ ಕೇಂದ್ರ ಸಂಪುಟ ಅನುಮೋದನೆ

06 Nov 2019 | 9:38 PM

ನವದೆಹಲಿ, ನವೆಂಬರ್ 6 (ಯುಎನ್ಐ) ತ್ರಿಪುರದ ಸಬ್ರೂಮ್‌ ಪಟ್ಟಣಕ್ಕೆ ಕುಡಿಯುವ ನೀರು ಪೂರೈಕೆ ಯೋಜನೆಗಾಗಿ ಭಾರತ, ಫೆನಿ ನದಿಯಿಂದ 1 82 ಕ್ಯೂಸೆಕ್ ನೀರನ್ನು ಹಿಂಪಡೆದುಕೊಳ್ಳಲು ಅವಕಾಶ ಕಲ್ಪಿಸುವ ಭಾರತ ಮತ್ತು ಬಾಂಗ್ಲಾದೇಶ ನಡುವಿನ ಒಪ್ಪಂದಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ಕೇಂದ್ರ ಸಚಿವ ಸಂಪುಟ ಘಟನೋತ್ತರ ಅನುಮೋದನೆ ನೀಡಲಾಗಿದೆ.

 Sharesee more..
ಈರುಳ್ಳಿ ಬೆಲೆ ಏರಿಕೆ:  ಎಚ್ಚೆತ್ತ  ಸರಕಾರದಿಂದ ಬಿಗಿ ಕ್ರಮ- ಪಾಸ್ವಾನ್

ಈರುಳ್ಳಿ ಬೆಲೆ ಏರಿಕೆ: ಎಚ್ಚೆತ್ತ ಸರಕಾರದಿಂದ ಬಿಗಿ ಕ್ರಮ- ಪಾಸ್ವಾನ್

06 Nov 2019 | 8:16 PM

ನವದೆಹಲಿ, ನವೆಂಬರ್ 6 (ಯುಎನ್‌ಐ) ದೇಶಾದ್ಯಂತ ಈರುಳ್ಳಿ ಬೆಲೆ ಏರಿಕೆಯಾಗುತ್ತಿದ್ದಂತೆ ಎಚ್ಚರಗೊಂಡ ಕೇಂದ್ರ ಸರಕಾರ ಬೆಲೆ ಏರಿಕೆ ತಡೆಯಲು , ಅಕ್ರಮ ದಾಸ್ತಾನು ಮಾಡದಂತೆ ಹಲವು ಬಿಗಿ ಕ್ರಮ ಕೈಗೊಂಡಿದೆ.

 Sharesee more..
ಹಕ್ಕು- ಜವಾಬ್ದಾರಿ ಒಂದೇ ನಾಣ್ಯದ ಎರಡು ಮುಖಗಳು-ಕಿರಣ್‍ ಬೇಡಿ

ಹಕ್ಕು- ಜವಾಬ್ದಾರಿ ಒಂದೇ ನಾಣ್ಯದ ಎರಡು ಮುಖಗಳು-ಕಿರಣ್‍ ಬೇಡಿ

06 Nov 2019 | 7:33 PM

ಪುದುಚೇರಿ, ನ 6 (ಯುಎನ್‌ಐ) ಹಕ್ಕುಗಳು ಮತ್ತು ಜವಾಬ್ದಾರಿಗಳು ಒಂದೇ ನಾಣ್ಯದ ಎರಡು ಮುಖಗಳಾಗಿದ್ದು, ನಾಗರಿಕರು ಇದನ್ನು ಎಂದಿಗೂ ಮರೆಯಬಾರದು ಎಂದು ಪುದುಚೆರಿ ಲೆಫ್ಟಿನೆಂಟ್ ಗವರ್ನರ್ ಕಿರಣ್ ಬೇಡಿ ಬುಧವಾರ ಹೇಳಿದ್ದಾರೆ.

 Sharesee more..
ಲಡಾಖ್ ಲೆಫ್ಟಿನೆಂಟ್ ಗವರ್ನರ್-ಪ್ರಧಾನಿ ಮೋದಿ ಭೇಟಿ

ಲಡಾಖ್ ಲೆಫ್ಟಿನೆಂಟ್ ಗವರ್ನರ್-ಪ್ರಧಾನಿ ಮೋದಿ ಭೇಟಿ

06 Nov 2019 | 7:26 PM

ನವದೆಹಲಿ, ನ ೦೬ (ಯುಎನ್‌ಐ) ಲಡಾಖ್ ಗವರ್ನರ್ ಆಗಿ ಹೊಸದಾಗಿ ನೇಮಕ ಗೊಂಡಿರುವ ಆರ್‌ಕೆ ಮಾಥುರ್‌ನ ಬುಧವಾರ ದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿ ಮಾಡಿದರು.

 Sharesee more..

ಭಾರತೀಯ ಉಕ್ಕು ಉದ್ಯಮವು ಜಾಗತಿಕವಾಗಿ ಸ್ಪರ್ಧಾತ್ಮಕವಾಗಿದೆ: ಪ್ರಧಾನ್

06 Nov 2019 | 3:05 PM

ನವದೆಹಲಿ, ನ 06 (ಯುಎನ್‌ಐ) ದೇಶದಲ್ಲಿ ಉಕ್ಕಿನ ಬಳಕೆ ಕ್ವಾಂಟಮ್ ಜಿಗಿತಕ್ಕೆ ಸಜ್ಜಾಗಿದ್ದು, ಭಾರತೀಯ ಉಕ್ಕು ಉದ್ಯಮವು ಜಾಗತಿಕವಾಗಿ ಸ್ಪರ್ಧಾತ್ಮಕವಾಗಿದೆ ಎಂದು ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಮತ್ತು ಉಕ್ಕು ಖಾತೆ ಸಚಿವ ಧರ್ಮೇಂದ್ರ ಪ್ರಧಾನ್ ಬುಧವಾರ ಹೇಳಿದ್ದಾರೆ.

 Sharesee more..

ಆರ್ಥಿಕತೆಯ ಸುಧಾರಣೆಗೆ ಸಮುದಾಯಗಳ ಪರಸ್ಪರ ಅವಲಂಬನೆ ಅಗತ್ಯ; ಮುಜಾಫರ್ ಅಲಿ

06 Nov 2019 | 3:02 PM

ನವದೆಹಲಿ, ನ 6 (ಯುಎನ್ಐ) ಕೋಮು ಗಲಭೆಗಳು ರಾಜ್ಯದ ಆರ್ಥಿಕತೆಯ ಮೇಲೆ ಪರಿಣಾಮ ಬೀರುತ್ತವೆ ಎಂದಿರುವ ಖ್ಯಾತ ಚಿತ್ರ ನಿರ್ಮಾಪಕ ಮುಜಾಫರ್ ಅಲಿ, ದೇಶದಲ್ಲಿ ಸಮುದಾಯಗಳು ಪರಸ್ಪರ ಅವಲಂಬಿತರಾಗಿರುವುದು ಆರ್ಥಿಕತೆಯ ಸುಧಾರಣೆ ಅಗತ್ಯ ಎಂದಿದ್ದಾರೆ.

 Sharesee more..