Sunday, Aug 18 2019 | Time 04:35 Hrs(IST)
Parliament
ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳ ಸಂಖ್ಯೆ ಹೆಚ್ಚಳ ಮಸೂದೆಗೆ ರಾಜ್ಯಸಭೆಯಲ್ಲಿ ಅಂಗೀಕಾರ

ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳ ಸಂಖ್ಯೆ ಹೆಚ್ಚಳ ಮಸೂದೆಗೆ ರಾಜ್ಯಸಭೆಯಲ್ಲಿ ಅಂಗೀಕಾರ

07 Aug 2019 | 4:18 PM

ನವದೆಹಲಿ, ಆಗಸ್ಟ್ 7 (ಯುಎನ್ಐ) ರಾಜ್ಯಸಭೆಯಲ್ಲಿ ಬುಧವಾರ ಆಡಳಿತ ಹಾಗೂ ವಿಪಕ್ಷ ಸದಸ್ಯರ ಸಮ್ಮತಿ ಹಿನ್ನೆಲೆಯಲ್ಲಿ ಸುಪ್ರೀಂಕೋರ್ಟ್ (ನ್ಯಾಯಮೂರ್ತಿಗಳ ಸಂಖ್ಯೆ) ತಿದ್ದುಪಡಿ ಮಸೂದೆ 2019 ಯಾವುದೇ ಚರ್ಚೆಯಿಲ್ಲದೆ ಅಂಗೀಕಾರವಾಯಿತು.

 Sharesee more..

ಈ ಬಾರಿಯ ಅಧಿವೇಶನ ಫಲಪ್ರದ: ರಾಜ್ಯಸಭೆಯಲ್ಲಿ 31 ಮಸೂದೆ ಅಂಗೀಕಾರ

07 Aug 2019 | 4:10 PM

ನವದೆಹಲಿ, ಆ 07 (ಯುಎನ್ಐ) ಈ ಬಾರಿಯ 249ನೇ ಅಧಿವೇಶನದಲ್ಲಿ ರಾಜ್ಯಸಭೆಯ ಕಲಾಪ ಶೇಕಡ 104ರಷ್ಟು ಫಲಪ್ರದವಾಗಿದ್ದು, 31 ಮಸೂದೆಗಳ ಅಂಗೀಕಾರವಾಗಿದೆ ಎಂದು ಉಪ ರಾಷ್ಟ್ರಪತಿ ಹಾಗೂ ರಾಜ್ಯಸಭೆ ಅಧ್ಯಕ್ಷ ಎಂ ವೆಂಕಯ್ಯ ನಾಯ್ಡು ತಿಳಿಸಿದ್ದು, ಕಳೆದ 41 ವರ್ಷಗಳಲ್ಲಿ ಇದು 5ನೇ ಅತ್ಯುತ್ತಮ ಕಲಾಪವೆನಿಸಿದೆ ಎಂದು ಹೇಳಿದ್ದಾರೆ ಸದಸ್ಯರನ್ನು ಶ್ಲಾಘಿಸಿದ ನಾಯ್ಡು, ಉತ್ಪಾದಕತೆ ಮತ್ತು ಅಡೆತಡೆಗಳ ಕಡಿತದ ದೃಷ್ಟಿಯಿಂದ ಇದನ್ನು ಉಳಿಸಿಕೊಳ್ಳುವುದು ಸವಾಲಾಗಿದೆ.

 Sharesee more..
ರಾಜ್ಯಸಭೆಯಲ್ಲಿ ಸುಷ್ಮಾ ಸ್ವರಾಜ್‍ಗೆ ಸಂತಾಪ; ಕಲಾಪ ಅನಿರ್ದಿಷ್ಟಾವಧಿಗೆ ಮುಂದೂಡಿಕೆ

ರಾಜ್ಯಸಭೆಯಲ್ಲಿ ಸುಷ್ಮಾ ಸ್ವರಾಜ್‍ಗೆ ಸಂತಾಪ; ಕಲಾಪ ಅನಿರ್ದಿಷ್ಟಾವಧಿಗೆ ಮುಂದೂಡಿಕೆ

07 Aug 2019 | 2:32 PM

ನವದೆಹಲಿ, ಆ 7 (ಯುಎನ್ಐ) ಕಳೆದ ರಾತ್ರಿ ನಿಧನರಾದ ಮಾಜಿ ವಿದೇಶಾಂಗ ವ್ಯವಹಾರಗಳ ಸಚಿವೆ ಹಾಗೂ ಮೇಲ್ಮನೆಯ ಮಾಜಿ ಸದಸ್ಯೆ ಸುಷ್ಮಾ ಸ್ವರಾಜ್ ಅವರಿಗೆ ರಾಜ್ಯಸಭೆಯಲ್ಲಿ ಸಂತಾಪ ಸಲ್ಲಿಸಿ 249ನೇ ರಾಜ್ಯಸಭೆಯ ಕಲಾಪವನ್ನು ಬುಧವಾರ ಅನಿರ್ದಿಷ್ಟಾವಧಿಗೆ ಮುಂದೂಡಲಾಯಿತು.

 Sharesee more..

ಗ್ರಾಹಕ ಸಂರಕ್ಷಣಾ ಮಸೂದೆ 2019ಕ್ಕೆ ಸಂಸತ್‍ ಅಂಗೀಕಾರ

06 Aug 2019 | 10:36 PM

ನವದೆಹಲಿ, ಆ 6 (ಯುಎನ್ಐ) ತಪ್ಪುದಾರಿಗೆಳೆಯುವ ಜಾಹೀರಾತುಗಳನ್ನು ಪರಿಶೀಲಿಸುವುದು ಸೇರಿದಂತೆ ಗ್ರಾಹಕರ ರಕ್ಷಣೆ ಮತ್ತು ಹಕ್ಕುಗಳಿಗೆ ಹೆಚ್ಚಿನ ಒತ್ತು ನೀಡುವ 2019ರ ಗ್ರಾಹಕ ಸಂರಕ್ಷಣಾ ಮಸೂದೆಗೆ ಸಂಸತ್ತು ಮಂಗಳವಾರ ಅನುಮೋದನೆ ನೀಡಿದೆ ಈ ಮಸೂದೆಯು ಗ್ರಾಹಕರಿಗೆ ಗರಿಷ್ಠ ನ್ಯಾಯ ಒದಗಿಸಲು ಮತ್ತು ತಪ್ಪೆಸಗಿದವರಿಗೆ ಕಠಿಣ ಶಿಕ್ಷೆ ನೀಡಲು ಉದ್ದೇಶಿಸಿದೆ ಎಂದು ಆಹಾರ ಸಚಿವ ರಾಮ್ ವಿಲಾಸ್ ಪಾಸ್ವಾನ್ ರಾಜ್ಯಸಭೆಗೆ ತಿಳಿಸಿದರು.

 Sharesee more..

ಬಜೆಟ್ ಅಧಿವೇಶನ ಮುಗಿಯುತ್ತಿದ್ದಂತೆ ಲೋಕಸಭೆ ಕಲಾಪ ಅನಿರ್ದಿಷ್ಟಾವಧಿ ಮುಂದೂಡಿಕೆ

06 Aug 2019 | 8:32 PM

ನವದೆಹಲಿ, ಆ 6 (ಯುಎನ್‌ಐ) ಲೋಕಸಭಾ ಸ್ಪೀಕರ್ ಓಂ ಬಿರ್ಲಾ, ಮಂಗಳವಾರ ಬಜೆಟ್ ಅಧಿವೇಶನದ ಮುಕ್ತಾಯದ ಬಳಿಕ ಲೋಕಸಭಾ ಕಲಾಪವನ್ನು ಅನಿರ್ದಿಷ್ಟಾವಧಿಗೆ ಮುಂದೂಡಿದರು.

 Sharesee more..

ಪ್ರಖರ ಭಾಷಣದಿಂದ ಲೋಕಸಭೆ ಸದಸ್ಯರ ಮನಗೆದ್ದ ಲಡಾಖ್ ನ ಯುವ ಸಂಸದ

06 Aug 2019 | 7:52 PM

ನವದೆಹಲಿ, ಆಗಸ್ಟ್ 6 (ಯುಎನ್ಐ) ಲಡಾಖ್ ಪ್ರದೇಶವನ್ನು ಪ್ರತ್ಯೇಕ ಕೇಂದ್ರಾಡಳಿತ ಪ್ರದೇಶವನ್ನಾಗಿ ಘೋಷಿಸಿದ ಕೇಂದ್ರ ಸರ್ಕಾರಕ್ಕೆ ಬಿಜೆಪಿಯ ಯುವ ಸಂಸದ ಜಾಮ್ಯಾಂಗ್ ಟ್ಸೆರಿಂಗ್ ನಾಮ್ಗಲ್ ಧನ್ಯವಾದ ಸಮರ್ಪಿಸಿದರು ಕೇಂದ್ರ ಸರ್ಕಾರ ಮಂಡಿಸಿದ 370 ನೇ ವಿಧಿಯ ಶಾಸನಬದ್ಧ ನಿರ್ಣಯ ಹಾಗೂ ಇತರ ಸಂಬಂಧಿಸಿದ ಇತರ ಕರಡು ಕಾನೂನುಗಳ ಚರ್ಚೆಯಲ್ಲಿ ಪಾಲ್ಗೊಂಡ ಅವರು, ಕಳೆದ ಏಳು ದಶಕಗಳಲ್ಲಿ ಪ್ರಥಮ ಬಾರಿಗೆ ಲಡಾಖ್ ಗೆ ಕೇಂದ್ರ ಸರ್ಕಾರದಿಂದ ನ್ಯಾಯ ದೊರಕಿದೆ ಎಂದರು.

 Sharesee more..

371ನೇ ವಿಧಿಯಲ್ಲಿ ಯಾವುದೇ ಬದಲಾವಣೆಯಿಲ್ಲ: ಅಮಿತ್ ಶಾ ಭರವಸೆ

06 Aug 2019 | 7:24 PM

ನವದೆಹಲಿ, ಆ 06 (ಯುಎನ್ಐ) ನಾಗಾಲ್ಯಾಂಡ್ ಸೇರಿದಂತೆ 7 ರಾಜ್ಯಗಳಿಗೆ ಸಂಬಂಧಿಸಿದ 371ನೇ ವಿಧಿಯನ್ನು ದುರ್ಬಲಗೊಳಿಸುವ ಅಥವಾ ಬದಲಾವಣೆ ಮಾಡುವ ಯಾವುದೇ ಚಿಂತನೆ ಕೇಂದ್ರ ಸರ್ಕಾರಕ್ಕಿಲ್ಲ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಭರವಸೆ ನೀಡಿದ್ದಾರೆ ಲೋಕಸಭೆಯಲ್ಲಿ ಮಂಗಳವಾರ ಜಮ್ಮು ಕಾಶ್ಮೀರ ಪುನರ್ ರಚನೆ ಮತ್ತು 370ನೇ ವಿಧಿ ರದ್ದತಿ ಮಸೂದೆ ಮೇಲಿನ ಚರ್ಚೆಯ ವೇಳೆ ಈ ವಿಷಯ ತಿಳಿಸಿರುವ ಅವರು, 370 ಹಾಗೂ 371ನೇ ವಿಧಿಯ ನಡುವೆ ಸ್ಪಷ್ಟ ವ್ಯತ್ಯಾಸವಿದೆ ಎಂದರು.

 Sharesee more..

ಫಾರೂಕ್ ಆರಾಮದಲ್ಲಿದ್ದಾರೆ, ಅವರನ್ನು ಬಂಧಿಸಿಲ್ಲ; ಅಮಿತ್ ಶಾ

06 Aug 2019 | 6:46 PM

ನವದೆಹಲಿ, ಆಗಸ್ಟ್ 6 (ಯುಎನ್ಐ) ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಹಾಗೂ ನ್ಯಾಷನಲ್ ಕಾನ್ಫರೆನ್ಸ್ ನಾಯಕ ಫಾರೂಕ್ ಅಬ್ದುಲ್ಲ ಅವರನ್ನು ಗೃಹ ಬಂಧನದಲ್ಲಿರಿಸಿರುವ ವದಂತಿಯನ್ನು ತಳ್ಳಿ ಹಾಕಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ, ಫಾರೂಕ್ ಅವರನ್ನು ಬಂಧಿಸಿಯೂ ಇಲ್ಲ, ಗೃಹ ಬಂಧನದಲ್ಲಿಯೂ ಇರಿಸಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

 Sharesee more..

370ನೇ ವಿಧಿಯ ಕುರಿತು ಜಮ್ಮು ಕಾಶ್ಮೀರ ಸರ್ಕಾರವನ್ನು ಕೇಂದ್ರ ಸಂಪರ್ಕಿಸಿಲ್ಲ, ಅಮಿತ್ ಶಾ ಹೇಳಿಕೆ ಸುಳ್ಳು: ಅಖಿಲೇಶ್

06 Aug 2019 | 5:41 PM

ನವದೆಹಲಿ, ಆ 06 (ಯುಎನ್ಐ) ಕಾಶ್ಮೀರ ನೀತಿ ಅಥವಾ 370ನೇ ವಿಧಿಯ ಕುರಿತು ಜಮ್ಮು ಕಾಶ್ಮೀರ ಸರ್ಕಾರವನ್ನು ಸಂಪರ್ಕಿಸಲಾಗಿತ್ತು ಎಂಬ ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿಕೆಯನ್ನು ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಬಲವಾಗಿ ತಳ್ಳಿಹಾಕಿದ್ದಾರೆ ಲೋಕಸಭೆಯಲ್ಲಿ ಮಂಗಳವಾರ ಜಮ್ಮು ಕಾಶ್ಮೀರಕ್ಕೆ ಸಂಬಂಧಿಸಿದ ಮಸೂದೆ ಹಾಗೂ 370ನೇ ವಿಧಿಯ ಮೇಲಿನ ಚರ್ಚೆಯಲ್ಲಿ ಭಾಗವಹಿಸಿದ ಅಖಿಲೇಶ್, “ಅಮಿತ್ ಶಾ ಹೇಳಿಕೆ ಸುಳ್ಳು, ಏಕೆಂದರೆ ಜಮ್ಮು ಕಾಶ್ಮೀರಕ್ಕೆ ಸಂಬಂಧಿಸಿದ ಬೆಳವಣಿಗೆಯ ಬಗ್ಗೆ ತಮಗೇನೂ ತಿಳಿದಿಲ್ಲ ಎಂದು ಕೆಲ ದಿನಗಳ ಹಿಂದಷ್ಟೇ ರಾಜ್ಯಪಾಲ ಸತ್ಯಪಾಲ್ ಮಲಿಕ್ ತಿಳಿಸಿದ್ದರು ಅದಾದ ಬಳಿಕ 24 ಗಂಟೆಗಳಲ್ಲಿ ಏನಾಯಿತು ಎಂಬುದು ಎಲ್ಲರಿಗೂ ತಿಳಿದಿದೆ” ಎಂದರು ಬಿಜೆಪಿಯಲ್ಲಿ ಪ್ರತಿಯೊಬ್ಬರೂ ಸರ್ಕಾರದ ನಿರ್ಧಾರವನ್ನು ವೈಭವೀಕರಿಸಲು ಪ್ರಯತ್ನಿಸುತ್ತಿದ್ದಾರೆ ಎಂಬ ಅಂಶವನ್ನು ಕಥೆಯೊಂದಕ್ಕೆ ಸಮೀಕರಿಸಿದ ಅಖಿಲೇಶ್, ರಾಜನ ನ್ಯಾಯಾಲಯದ ಒಂದು ದೃಷ್ಟಾಂತವನ್ನು ಹಂಚಿಕೊಂಡರು,.

 Sharesee more..

ನೆರೆ: ರಾಜ್ಯಕ್ಕೆ ಹೆಚ್ಚಿನ ನೆರವು ಬೇಕು- ಡಾ. ಎಲ್ ಹನುಮಂತಯ್ಯ

06 Aug 2019 | 5:16 PM

ನವದೆಹಲಿ, ಆ 6 [ಯುಎನ್ಐ] ರಾಜ್ಯದಲ್ಲಿ ನೆರೆ ಮತ್ತು ಬರ ಗಂಭೀರವಾಗಿದ್ದು, ಪರಿಸ್ಥಿತಿ ಎದುರಿಸಲು ಸೂಕ್ತ ಆರ್ಥಿಕ ನೆರವು ನೀಡುವಂತೆ ಕಾಂಗ್ರೆಸ್ ಸದಸ್ಯ ಡಾ ಎಲ್ ಹನುಮಂತಯ್ಯ ರಾಜ್ಯ ಸಭೆಯಲ್ಲಿ ಮಂಗಳವಾರ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದರು.

 Sharesee more..
ಅಕ್ಸಾಯ್ ಚಿನ್ ಮತ್ತು ಪಿಒಕೆ ಕಾಶ್ಮೀರದ ಅವಿಭಾಜ್ಯ ಅಂಗ: ಅಮಿತ್ ಶಾ ಗುಡುಗು

ಅಕ್ಸಾಯ್ ಚಿನ್ ಮತ್ತು ಪಿಒಕೆ ಕಾಶ್ಮೀರದ ಅವಿಭಾಜ್ಯ ಅಂಗ: ಅಮಿತ್ ಶಾ ಗುಡುಗು

06 Aug 2019 | 4:59 PM

ನವದೆಹಲಿ, ಆ 06 (ಯುಎನ್ಐ) ಜಮ್ಮು ಕಾಶ್ಮೀರ ಭಾರತದ ಅವಿಭಾಜ್ಯ ಅಂಗವಾಗಿದ್ದು, ಈ ಸಂಬಂಧ ಸಂಸತ್ ನಲ್ಲಿ ಶಾಸನ ರೂಪಿಸುವುದನ್ನು ಅಥವಾ ನಿರ್ಣಯ ಕೈಗೊಳ್ಳುವದನ್ನು ನಿಲ್ಲಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ

 Sharesee more..
ಶ್ಯಾಮ ಪ್ರಸಾದ್ ಮುಖರ್ಜಿ ಕುರಿತ  ನ್ಯಾಷನಲ್ ಕಾನ್ಫರೆನ್ಸ್  ಸಂಸದನ ಹೇಳಿಕೆಗೆ  ರಾಜನಾಥ್,  ಶಾ  ಆಕ್ರೋಶ

ಶ್ಯಾಮ ಪ್ರಸಾದ್ ಮುಖರ್ಜಿ ಕುರಿತ ನ್ಯಾಷನಲ್ ಕಾನ್ಫರೆನ್ಸ್ ಸಂಸದನ ಹೇಳಿಕೆಗೆ ರಾಜನಾಥ್, ಶಾ ಆಕ್ರೋಶ

06 Aug 2019 | 4:53 PM

ನವದೆಹಲಿ, ಆಗಸ್ಟ್ 6( ಯುಎನ್ಐ)- ದಿವಗಂತ ಶ್ಯಾಮ ಪ್ರಸಾದ್ ಮುಖರ್ಜಿ ಅವರು ಕೂಡಾ ಸಂವಿಧಾನ ವಿಧಿ 370 ಅನ್ನು ಅನುಮೋದಿಸಿದ್ದರು ಎಂಬ ಜಮ್ಮು – ಕಾಶ್ಮೀರದ ದ ನ್ಯಾಷನಲ್ ಕಾನ್ಪರೆನ್ಸ್ ಪಕ್ಷದ ಸಂಸದ ಹಸ್ನೈನ್ ಮಸೂದಿ ಹೇಳಿಕೆಯನ್ನು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹಾಗೂ ಗೃಹ ಸಚಿವ ಅಮಿತ್ ಷಾ ನೇತೃತ್ವದ ಆಡಳಿತಾರೂಡಾ ಬಿಜೆಪಿ ಸದಸ್ಯರು ಲೋಕಸಭೆಯಲ್ಲಿ ಮಂಗಳವಾರ ಆಕ್ರೋಶ ವ್ಯಕ್ತಪಡಿಸಿದರು.

 Sharesee more..
ಕೇಂದ್ರದಿಂದ ಜಮ್ಮು-ಕಾಶ್ಮೀರ ನಿರ್ಲಕ್ಷ-ಕಾಂಗ್ರೆಸ್‌ ಟೀಕೆ

ಕೇಂದ್ರದಿಂದ ಜಮ್ಮು-ಕಾಶ್ಮೀರ ನಿರ್ಲಕ್ಷ-ಕಾಂಗ್ರೆಸ್‌ ಟೀಕೆ

06 Aug 2019 | 4:20 PM

ನವದೆಹಲಿ, ಆಗಸ್ಟ್ 6 (ಯುಎನ್‌ಐ) ಜಮ್ಮು-ಕಾಶ್ಮೀರವನ್ನು ವಿಭಜಿಸುವ ಕುರಿತು ಆ ರಾಜ್ಯದ ಶಾಸಕಾಂಗದ ಜೊತೆ ಕೇಂದ್ರ ಸರ್ಕಾರ ಸಮಾಲೋಚಿಸದೆ ನಿರ್ಧಾರ ತೆಗೆದುಕೊಂಡಿದೆ ಎಂದು ಕಾಂಗ್ರೆಸ್ ಪಕ್ಷ ಮಂಗಳವಾರ ಮೋದಿ ನೇತೃತ್ವದ ಸರ್ಕಾರವನ್ನು ಟೀಕಿಸಿದೆ.

 Sharesee more..

ಜಮ್ಮು-ಕಾಶ್ಮೀರ ಮಸೂದೆಗೆ ಬಿಜೆಪಿ ಮಿತ್ರ ಪಕ್ಷ ಜೆಡಿಯು ವಿರೋಧ: ಲೋಕಸಭೆಯಲ್ಲಿ ಸಭಾತ್ಯಾಗ

06 Aug 2019 | 3:52 PM

ನವದೆಹಲಿ, ಆಗಸ್ಟ್ 6 (ಯುಎನ್‌ಐ) ಭಾರತೀಯ ಜನತಾ ಪಾರ್ಟಿಯ ಮಿತ್ರ ಪಕ್ಷವಾದ ಜನತಾದಳ (ಸಂಯುಕ್ತ) ಸದಸ್ಯರು ಮಂಗಳವಾರ ಜಮ್ಮು ಮತ್ತು ಕಾಶ್ಮೀರ ಪುನರ್‌ ವಿಂಗಡೆನೆ ಮಸೂದೆಯನ್ನು ವಿರೋಧಿಸಿ ಲೋಕಸಭೆಯಲ್ಲಿ ಸಭಾತ್ಯಾಗ ಮಾಡಿದರು ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ ಸಂವಿಧಾನದ 370 ನೇ ವಿಧಿಯನ್ನು ರದ್ದುಗೊಳಿಸುವ ಮತ್ತು ಜಮ್ಮು-ಕಾಶ್ಮೀರವನ್ನು ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ(ಲಡಕ್‌ ಮತ್ತು ಕಾಶ್ಮೀರ) ವಿಭಜಿಸುವ ಜಮ್ಮು-ಕಾಶ್ಮೀರ ಪುನರ್‌ ವಿಂಗಡನೆ ಮಸೂದೆಯನ್ನು ರಾಜ್ಯಸಭೆ ಸೋಮವಾರ ಅಂಗೀಕರಿಸಿತ್ತು.

 Sharesee more..
ಕೇಂದ್ರದಿಂದ ಜಮ್ಮು-ಕಾಶ್ಮೀರ ನಿರ್ಲಕ್ಷ, ಆಂಧ್ರ ವಿಭಜನೆಯೂ 'ಕೆಟ್ಟ ರೀತಿಯಲ್ಲಿ ನಿರ್ವಹಣೆ' –ಕಾಂಗ್ರೆಸ್‌ ಟೀಕೆ

ಕೇಂದ್ರದಿಂದ ಜಮ್ಮು-ಕಾಶ್ಮೀರ ನಿರ್ಲಕ್ಷ, ಆಂಧ್ರ ವಿಭಜನೆಯೂ 'ಕೆಟ್ಟ ರೀತಿಯಲ್ಲಿ ನಿರ್ವಹಣೆ' –ಕಾಂಗ್ರೆಸ್‌ ಟೀಕೆ

06 Aug 2019 | 3:50 PM

ನವದೆಹಲಿ, ಆಗಸ್ಟ್ 6 (ಯುಎನ್‌ಐ) ಜಮ್ಮು-ಕಾಶ್ಮೀರವನ್ನು ವಿಭಜಿಸುವ ಕುರಿತು ಆ ರಾಜ್ಯದ ಶಾಸಕಾಂಗದ ಜೊತೆ ಕೇಂದ್ರ ಸರ್ಕಾರ ಸಮಾಲೋಚಿಸದೆ ನಿರ್ಧಾರ ತೆಗೆದುಕೊಂಡಿದೆ ಎಂದು ಕಾಂಗ್ರೆಸ್ ಪಕ್ಷ ಮಂಗಳವಾರ ಮೋದಿ ನೇತೃತ್ವದ ಸರ್ಕಾರವನ್ನು ಟೀಕಿಸಿದೆ.

 Sharesee more..