Saturday, May 25 2019 | Time 05:17 Hrs(IST)
Special
ಸೂರತ್ : ಕಟ್ಟಡದಲ್ಲಿ ಬೆಂಕಿ, ಕನಿಷ್ಠ 14 ಮಕ್ಕಳ ಸಾವು

ಸೂರತ್ : ಕಟ್ಟಡದಲ್ಲಿ ಬೆಂಕಿ, ಕನಿಷ್ಠ 14 ಮಕ್ಕಳ ಸಾವು

24 May 2019 | 8:49 PM

ಸೂರತ್, ಮೇ 24 (ಯುಎನ್‌ಐ) ಗುಜರಾತ್ ರಾಜ್ಯದ ಸೂರತ್ ನಗರದ ಸರ್ತಾನಾ ಪ್ರದೇಶದಲ್ಲಿ ಶುಕ್ರವಾರ ಕಟ್ಟಡವೊಂದರಲ್ಲಿ ಅಗ್ನಿ ಅವಘಡ ಸಂಭವಿಸಿದ್ದು ಕನಿಷ್ಠ 14 ಮಕ್ಕಳು ಮೃತಪಟ್ಟಿದ್ದು ಹಲವರು ಗಾಯಗೊಂಡಿದ್ದಾರೆ.

 Sharesee more..

ಕಾಶ್ಮೀರದಲ್ಲಿ ಪ್ರತಿಭಟನಾಕಾರರನನ್ನು ಚದುರಿಸಲು ಅಶ್ರುವಾಯು ಪ್ರಯೋಗ

24 May 2019 | 8:25 PM

ಶ್ರೀನಗರ, ಮೇ 24 (ಯುಎನ್ಐ) ಶ್ರೀನಗರ ಸೇರಿದಂತೆ ಕಾಶ್ಮೀರ ಕಣಿವೆಯ ವಿವಿಧೆಡೆ ನಿಷೇಧಾಜ್ಞೆ ನಡುವೆಯೂ ಅನ್ಸರ್ ಗಾಜ್‌ವತುಲ್ ಹಿಂದ್‌ ಜಾಕಿರ್ ಮುಸಾ ಮುಖ್ಯಸ್ಥರ ಸಾವಿಗೆ ಪ್ರತಿಭಟನೆ ನಡೆಸಲು ಬೀದಿಗಿಳಿದ ಪ್ರತಿಭಟನಾಕಾರರನ್ನು ಚದುರಿಸಲು ಭದ್ರತಾ ಪಡೆ ಲಾಠಿ ಚಾರ್ಚ್ ನಡೆಸಿ ಅಶ್ರುವಾಯು ಸಿಡಿಸಿದೆ.

 Sharesee more..

ಕಾಶ್ಮೀರದಲ್ಲಿ ರಂಜಾನ್‌ ಆಚರಣೆ ಸೋಮವಾರದವರೆಗೆ ಸ್ಥಗಿತ

24 May 2019 | 7:16 PM

ಶ್ರೀನಗರ ಮೇ 24 (ಯುಎನ್‌ಐ)- ಕಾಶ್ಮೀರದಲ್ಲಿ ಪ್ರತಿಕೂಲ ಹವಾಮಾನದಿಂದ ಕಳೆದ ವಾರ ಆರಂಭವಾದ ರಂಜಾನ್‌ ಆಚರಣೆಯನ್ನು ಮುಂದಿನ ಸೋಮವಾರದ ವರೆಗೆ ಸ್ಥಗಿತಗೊಳಿಸಲಾಗಿದೆ ಎಂದು ಅಧಿಕೃತ ವಕ್ತಾರರು ಶುಕ್ರವಾರ ತಿಳಿಸಿದ್ದಾರೆ ಪ್ರತಿಕೂಲ ವಾತಾವರಣದಿಂದ ಆಚರಣೆಯನ್ನು ಕೆಲ ದಿನಗಳು ಸ್ಥಗತಿಗೊಳಿಸಲಾಗಿದ್ದು, ಬರುವ ಮಂಗಳವಾರದಿಂದ ಪುನರಾರಂಭಗೊಳ್ಳಲಿದೆ ಎಂದು ಸಂಘಟಕರು ತಿಳಿಸಿದ್ದಾರೆ.

 Sharesee more..

ಪಕ್ಷ ವಿರೋಧಿ ಚಟುವಟಿಕೆ: ಟಿಎಂಸಿಯಿಂದ ಸುಬ್ರಾಂಶ್ ರಾಯ್‌ ಅಮಾನತ್ತು

24 May 2019 | 6:59 PM

ಕೋಲ್ಕತ್ತಾ, ಮೇ 24 (ಯುಎನ್‌ಐ) ಪಶ್ಚಿಮ ಬಂಗಾಳದಲ್ಲಿ ಆಡಳಿತಾರೂಢ ತೃಣಮೂಲ ಕಾಂಗ್ರೆಸ್‌ ಸೋಲಿನಲ್ಲಿ ಬಿಜೆಪಿ ನಾಯಕ ಮುಕುಲ್‌ರಾಯ್‌ ಪ್ರಮುಖ ಪಾತ್ರವಹಿಸಿರುವ ಬೆನ್ನಲ್ಲೇ, ಅವರ ಪುತ್ರ ಬಿಜ್‌ಪುರ್‌ನ ತೃಣಮೂಲ ಕಾಂಗ್ರೆಸ್ ಶಾಸಕ ಸುಬ್ರಾಂಶ್ ರಾಯ್ ಅವರನ್ನು ಆರು ವರ್ಷಗಳ ಕಾಲ ಪಕ್ಷದಿಂದ ಅಮಾನತ್ತುಗೊಳಿಸಿದೆತಮ್ಮ ತಂದೆ ಅಲ್ಲಿನ ಜನರೊಂದಿಗೆ ಹೆಚ್ಚಿನ ನಂಟು ಹೊಂದಿರುವುದರಿಂದ ಬ್ಯಾರಕ್‌ಪೋರ್‌ ಲೋಕಸಭಾ ಕ್ಷೇತ್ರದ ಬಿಜ್ಪುರ್ ವಿಧಾನಸಭಾ ವಿಭಾಗದಿಂದ ಟಿಎಂಸಿ ಅಭ್ಯರ್ಥಿ ದಿನೇಶ್ ತ್ರಿವೇದಿಗೆ ಹೆಚ್ಚು ಮತ ಗಳಿಸಿಕೊಡಲು ವಿಫಲವಾಗಿರುವುದಾಗಿ ಸುಬ್ರಾಂಶ್‌ ರಾಯ್ ಹೇಳಿದ್ದರು.

 Sharesee more..

"ಅಭಿವೃದ್ಧಿ" ಪ್ರತಿಪಾದಿಸಿದ ಪ್ರಗ್ಯಾ ಸಿಂಗ್ ಠಾಕೂರ್

24 May 2019 | 6:34 PM

ಭೋಪಾಲ್, ಮೇ 24( ಯುಎನ್ಐ) ಭೋಪಾಲ್ ಲೋಕಸಭಾ ಕ್ಷೇತ್ರದಲ್ಲಿ ಎದುರಾಳಿ ಕಾಂಗ್ರೆಸ್ ಹಿರಿಯ ನಾಯಕ ದಿಗ್ವಿಜಯ್ ಸಿಂಗ್ ಅವರನ್ನು ಮೂರುವರೆ ಲಕ್ಷಕ್ಕೂ ಹೆಚ್ಚುಮತಗಳಿಂದ ಪರಾಭವಗೊಳಿಸಿರುವ ಬಿಜೆಪಿಯ ವಿವಾದಾತ್ಮಕ ನಾಯಕಿ ಪ್ರಗ್ಯಾ ಸಿಂಗ್ ಠಾಕೂರ್, ಆಯ್ಕೆಗೊಂಡ ಮಾರನೇ ದಿನ ಪ್ರತಿಕ್ರಿಯಿಸಿ, ಪ್ರತಿಯೊಬ್ಬರಿಂದಲೂ ನಾನು ಕಲಿಯುತ್ತಿದ್ದೇನೆ ಎಂದು ಹೇಳಿರುವುದಲ್ಲದೆ, ಮಧ್ಯ ಪ್ರದೇಶದ ರಾಜಧಾನಿಯನ್ನು ಅಭಿವೃದ್ಧಿ ಹೊಸ ಎತ್ತರಕ್ಕೆ ಕೊಂಡೊಯ್ಯುವ ಸಕಲ ಪ್ರಯತ್ನ ನಡೆಸುವುದಾಗಿ ಭರವಸೆ ನೀಡಿದ್ದಾರೆ.

 Sharesee more..

ಹಿರಿಯ ಪತ್ರಕರ್ತ ಜಯಂತಾ ಸರ್ಕಾರ್ ನಿಧನ

24 May 2019 | 6:21 PM

ಕೋಲ್ಕತಾ, ಮೇ 24 (ಯುಎನ್‌ಐ) ಹಿರಿಯ ಪತ್ರಕರ್ತ ಜಯಂತ ಸರ್ಕಾರ್ ಶುಕ್ರವಾರ ಬೆಳಗಿನ ಜಾವ ದಕ್ಷಿಣ ಕೋಲ್ಕತಾದಲ್ಲಿ ನಿಧನರಾದರು; ಅವರಿಗೆ 88 ವರ್ಷ ವಯಸ್ಸಾಗಿತ್ತು ಅವರು ಪತ್ನಿ ಮತ್ತು ಪುತ್ರಿಯನ್ನು ಅಗಲಿದ್ದಾರೆ.

 Sharesee more..

ಲಂಡನ್ ಆಸ್ತಿ ಹಗರಣ; ವಾದ್ರಾ ನಿರೀಕ್ಷಣಾ ಜಾಮೀನು ರದ್ದು ಕೋರಿ ಜಾರಿ ನಿರ್ದೇಶನಾಲಯ ಅರ್ಜಿ

24 May 2019 | 6:11 PM

ನವದೆಹಲಿ, ಮೇ 24 (ಯುಎನ್ಐ) ಲಂಡನ್ ಮೂಲದ ಆಸ್ತಿ ಖರೀದಿ ಅಕ್ರಮಕ್ಕೆ ಸಂಬಂಧಿಸಿದಂತೆ ಪೂರ್ವ ಉತ್ತರಪ್ರದೇಶದ ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಪತಿ ರಾಬರ್ಟ್ ವಾದ್ರಾ ಅವರಿಗೆ ಮತ್ತೊಂದು ಕಂಟಕ ಎದುರಾಗಿದೆ ರಾಬರ್ಟ್ ವಾದ್ರಾ ವಿರುದ್ಧದ ಹಣಕಾಸು ಅಕ್ರಮ ತಡೆ ಕಾಯ್ದೆಯಡಿ ಮಂಜೂರು ಮಾಡಿರುವ ನಿರೀಕ್ಷಣಾ ಜಾಮೀನು ರದ್ದುಗೊಳಿಸುವಂತೆ ಕೋರಿ ಜಾರಿ ನಿರ್ದೇಶನಾಲಯ ಶುಕ್ರವಾರ ದೆಹಲಿ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದೆ.

 Sharesee more..

"ವಯನಾಡು" ಜನರಿಗೆ ಮಲೆಯಾಳಂ ನಲ್ಲಿ ಕೃತಜ್ಞತೆ ಸಮರ್ಪಿಸಿದ ರಾಹುಲ್ ಗಾಂಧಿ !

24 May 2019 | 6:07 PM

ನವದೆಹಲಿ, ಮೇ 24(ಯುಎನ್ಐ) ನೆಹರೂ- ಗಾಂಧಿ ಕುಟುಂಬದ ಪಾರಂಪರಿಕ ಭದ್ರಕೋಟೆ ಅಮೇಥಿ ಲೋಕಸಭಾ ಕ್ಷೇತ್ರದಲ್ಲಿ ಹೀನಾಯ ಸೋಲು ಅನುಭವಿಸಿದ ಒಂದು ದಿನದ ನಂತರ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ತಾವು ಲೋಕಸಭೆ ಪ್ರವೇಶಿಸಲು ಅನುವು ಮಾಡಿಕೊಟ್ಟಿರುವ “ವಯನಾಡು” ಲೋಕಸಭಾ ಕ್ಷೇತ್ರದ ಮತದಾರರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.

 Sharesee more..

ಅಮಿತ್ ಶಾ ಅವರಿಗೆ ಪಶ್ಚಿಮ ಬಂಗಾಳದಲ್ಲಿ ರೋಡ್ ಶೋ ಮೂಲಕ ಗೆಲುವನ್ನು ಸಂಭ್ರಮಿಸುವಾಸೆ: ದಿಲೀಪ್ ಘೋಷ್

24 May 2019 | 6:01 PM

ಕೋಲ್ಕತಾ, ಮೇ 24 (ಯುಎನ್ಐ) ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ಪಶ್ಚಿಮ ಬಂಗಾಳದಲ್ಲಿ ಗೆದ್ದ ಅಭ್ಯರ್ಥಿಗಳ ಜೊತೆ ರೋಡ್ ಶೋ ಮೂಲಕ ಗೆಲುವನ್ನು ಸಂಭ್ರಮಿಸುವ ಆಸೆ ಹೊಂದಿದ್ದಾರೆ ಎಂದು ನೂತನ ಸಂಸದ ದಿಲೀಪ್ ಘೋಷ್ ತಿಳಿಸಿದ್ದಾರೆ.

 Sharesee more..
ಬಿಜೆಪಿಯ ಜಯಭೇರಿಯಿಂದ ಮುಸ್ಲಿಮರು ಆತಂಕ ಪಡಬೇಕಿಲ್ಲ: ಮುಸ್ಲಿಂ ಪರ್ಸನಲ್ ಲಾ

ಬಿಜೆಪಿಯ ಜಯಭೇರಿಯಿಂದ ಮುಸ್ಲಿಮರು ಆತಂಕ ಪಡಬೇಕಿಲ್ಲ: ಮುಸ್ಲಿಂ ಪರ್ಸನಲ್ ಲಾ

24 May 2019 | 5:34 PM

ಲಕ್ನೋ, ಮೇ 24 (ಯುಎನ್ಐ) ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭೂತಪೂರ್ವ ಜಯಗಳಿಸಿರುವುದಕ್ಕೆ ತೀವ್ರ ಕಳವಳ ವ್ಯಕ್ತಪಡಿಸಿರುವ ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ (ಎಐಎಂಪಿಎಲ್‌ಬಿ), ಆದರೆ ಮುಸ್ಲಿಂ ಸಮುದಾಯ ಈ ಬಗ್ಗೆ ಯಾವುದೇ ಆತಂಕ ಪಡುವ ಅಗತ್ಯವಿಲ್ಲ ಎಂದು ಹೇಳಿದೆ.

 Sharesee more..
ಕಾಂಗ್ರೆಸ್ ಕಾರ್ಯಕಾರಿಣಿ ಸಭೆಯಲ್ಲಿ  ರಾಹುಲ್ ಗಾಂಧಿ  ರಾಜೀನಾಮೆ ಸಂಭವ

ಕಾಂಗ್ರೆಸ್ ಕಾರ್ಯಕಾರಿಣಿ ಸಭೆಯಲ್ಲಿ ರಾಹುಲ್ ಗಾಂಧಿ ರಾಜೀನಾಮೆ ಸಂಭವ

24 May 2019 | 5:17 PM

ನವದೆಹಲಿ,ಮೇ 24 (ಯುಎನ್ಐ)-ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗೆ ಉಂಟಾಗಿರುವ ಹೀನಾಯ ಸೋಲಿನ ಕಾರಣಗಳನ್ನು ವಿಶ್ಲೇಷಿಸಲು ಶನಿವಾರ ದೆಹಲಿಯಲ್ಲಿ ಪಕ್ಷದ ಅತ್ಯುನ್ನತ ನೀತಿ ನಿರ್ಧಾರ ಸಮಿತಿಯಾಗಿರುವ ಕಾಂಗ್ರೆಸ್ ಕಾರ್ಯಕಾರಿಣಿ ಸಭೆ ನಡೆಯಲಿದೆ

 Sharesee more..

2ನೇ ಅವಧಿಗೆ ಮೋದಿ ಸರ್ಕಾರ: ರಾಮ ಮಂದಿರ ನಿಮಾಣಕ್ಕೆ ಹೆಚ್ಚಿದ ಒತ್ತಡ

24 May 2019 | 4:33 PM

ಜೂನ್ 3 ರಂದು ಅಯೋಧ್ಯೆಯಲ್ಲಿ ಪ್ರಮುಖ ಸಾಧು ಸಂತರ ಸಭೆ ಅಯೋಧ್ಯಾ, ಮೇ 24 (ಯುಎನ್ಐ) ಲೋಕಸಭಾ ಚುನಾವಣೆಯಲ್ಲಿ ಎರಡನೇ ಅವಧಿಗೂ ಗೆಲುವು ಸಾಧಿಸಿರುವ ಪ್ರಧಾನಿ ನರೇಂದ್ರ ಮೋದಿಯವರಿಗೆ ರಾಮ ಮಂದಿರ ನಿರ್ಮಾಣ ಸವಾಲಾಗಿ ಪರಿಣಮಿಸಿದ್ದು, ಸಾಧು ಸಂತರ ಒತ್ತಡ ಹೆಚ್ಚಿದೆ.

 Sharesee more..

ಮೋದಿಗೆ ರಾಬರ್ಟ್‌ ವಾದ್ರಾ ಅಭಿನಂದನೆ

24 May 2019 | 4:24 PM

ನವದೆಹಲಿ, ಮೇ 24 (ಯುಎನ್ಐ) ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ, ಎನ್‌ಡಿಎ ಅಭೂತಪೂರ್ವ ವಿಜಯ ಸಾಧಿಸಿರುವುದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ವಾದ್ರಾ ಪತಿ ರಾಬರ್ಟ್‌ ವಾದ್ರಾ ಅಭಿನಂದನೆ ಸಲ್ಲಿಸಿದ್ದಾರೆ.

 Sharesee more..
ತಮಿಳುನಾಡಿಗೆ ಸಮಾನ ಪ್ರಾಮುಖ್ಯತೆ ನೀಡಿ: ಕಮಲ್ ಹಾಸನ್

ತಮಿಳುನಾಡಿಗೆ ಸಮಾನ ಪ್ರಾಮುಖ್ಯತೆ ನೀಡಿ: ಕಮಲ್ ಹಾಸನ್

24 May 2019 | 4:09 PM

ಚೆನ್ನೈ, ಮೇ 24 (ಯುಎನ್ಐ) ಅಭಿವೃದ್ಧಿ ವಿಚಾರದಲ್ಲಿ ಬಿಜೆಪಿ ರಾಜ್ಯಗಳಿಗೆ ಒಂದು ಮತ್ತು ಇತರೆ ರಾಜ್ಯಗಳಿಗೆ ಒಂದು ಎಂಬ ತಾರತಮ್ಯ ಮಾಡದೆ ತಮಿಳುನಾಡಿಗೆ ಸಮಾನ ಪ್ರಾಮುಖ್ಯತೆ ನೀಡಬೇಕು ಎಂದು ನಟ ಕಮಲ್ ಹಾಸನ್ ಪ್ರಧಾನಿ ಮೋದಿ ಅವರಿಗೆ ಮನವಿ ಮಾಡಿದ್ದಾರೆ.

 Sharesee more..

ಮಾಜಿ ಕೊಲ್ಕತ್ತಾ ಪೊಲೀಸ್ ಆಯುಕ್ತರಿಗೆ ಪರಿಹಾರ ಕಲ್ಪಿಸಲು ಸುಪ್ರೀಂ ನಕಾರ

24 May 2019 | 4:02 PM

ನವದೆಹಲಿ, ಮೇ 24(ಯುಎನ್ಐ)-ಶಾರದ ಚಿಟ್ ಫಂಡ್ ಹಗರಣ ಸಂಬಂಧ ತನಗೆ ಕಲ್ಪಿಸಿರುವ ಮಧ್ಯಂತರ ಪರಿಹಾರವನ್ನು ವಿಸ್ತರಿಸಬೇಕು ಎಂದು ಮಾಜಿ ಕೊಲ್ಕತ್ತಾ ಪೊಲೀಸ್ ಆಯುಕ್ತ ರಾಜೀವ್ ಕುಮಾರ್ ಸಲ್ಲಿಸಿದ್ದ ಮನವಿಯನ್ನು ವಿಚಾರಣೆಗೆ ಅಂಗೀಕರಿಸಲು ಸುಪ್ರೀಂ ಕೋರ್ಟ್ ಶುಕ್ರವಾರ ನಿರಾಕರಿಸಿದೆ.

 Sharesee more..