Saturday, May 25 2019 | Time 05:30 Hrs(IST)
Special Share

ಪುತ್ರ ರಾಹುಲ್ “ಪ್ರಧಾನಿ” ಯಾಗಬೇಕು ಎಂಬುದೇ ಸೋನಿಯಾ ಚಿಂತೆ; ನಿತಿನ್ ಗಡ್ಕರಿ

ಪುತ್ರ  ರಾಹುಲ್  “ಪ್ರಧಾನಿ” ಯಾಗಬೇಕು  ಎಂಬುದೇ   ಸೋನಿಯಾ ಚಿಂತೆ; ನಿತಿನ್ ಗಡ್ಕರಿ
ಪುತ್ರ ರಾಹುಲ್ “ಪ್ರಧಾನಿ” ಯಾಗಬೇಕು ಎಂಬುದೇ ಸೋನಿಯಾ ಚಿಂತೆ; ನಿತಿನ್ ಗಡ್ಕರಿ

ಅಲಿರಾಜಪುರ, ಮಧ್ಯಪ್ರದೇಶ, ಮೇ 15( ಯುಎನ್ಐ) ಮಾಜಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ದೇಶದ ಅಭಿವೃದ್ಧಿ ಬಗ್ಗೆ ಚಿಂತಿಸುವುದಿಲ್ಲ ಬದಲಿಗೆ ಪುತ್ರ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನು ದೇಶದ ಪ್ರಧಾನಿ ಹುದ್ದೆಯಲ್ಲಿ ಆದಷ್ಟು ಬೇಗ ಕೂರಿಸಬೇಕೆಂಬ ಬಗ್ಗೆ ತಲೆಕೆಡಿಸಿಕೊಂಡಿದ್ದಾರೆ ಎಂದು ಹಿರಿಯ ಬಿಜೆಪಿ ನಾಯಕ ಹಾಗೂ ಕೇಂದ್ರ ಜಲಸಂಪನ್ಮೂಲ ಸಚಿವ ನಿತಿನ್ ಗಡ್ಕರಿ ಟೀಕಿಸಿದ್ದಾರೆ.



ಚುನಾವಣಾ ಸಭೆ ಉದ್ದೇಶಿಸಿ ಮಾತನಾಡುತ್ತಿದ್ದ ನಿತಿನ್ ಗಡ್ಕರಿ, ದೇಶವನ್ನು ಹೇಗೆ ದಾರಿದ್ರ್ಯ ಮುಕ್ತಗೊಳಿಸಬೇಕು, ಯಾವರೀತಿ ಉದ್ಯೋಗ ಸೃಷ್ಟಿಸಬೇಕು ಹಾಗೂ ಕೃಷಿ ಉತ್ಪನ್ನಗಳಿಗೆ ಸೂಕ್ತ ಬೆಲೆ ಕಲ್ಪಿಸಲು ಬಿಜೆಪಿನೇತೃತ್ವದ ಕೇಂದ್ರ ಸರ್ಕಾರ ಶ್ರಮಿಸುತ್ತಿದೆ ಎಂದರು.

ಪ್ರಧಾನಿ ನರೇಂದ್ರಮೋದಿ ನೇತೃತ್ವದ ಸರ್ಕಾರದ ಮೊದಲ ಐದು ವರ್ಷದ ಆಡಳಿತ ಕೇವಲ ಟ್ರೈಲರ್ ಮಾತ್ರ, ಮುಂದಿನ ಐದು ವರ್ಷ ಪೂರ್ಣ “ಸಿನಿಮಾ” ವನ್ನು ದೇಶದ ಜನತೆ ವೀಕ್ಷಿಸಲಿದ್ದಾರೆ ಎಂದು ಹೇಳಿದರು.





2008 ಮುಂಬೈ ಭಯೋತ್ಪಾದಕ ದಾಳಿಯನ್ನು ಪ್ರಸ್ತಾಪಿಸಿದ ಸಚಿವ ಗಡ್ಕರಿ, ದೇಶ ಮೊಣಕಾಲು ಊರುವ ಪ್ರಧಾನಿ ಹೊಂದಬೇಕೇ ಅಥವಾ ದೃಢ ನಿರ್ಧಾರ ಕೈಗೊಳ್ಳುವ ನರೇಂದ್ರಮೋದಿಯಂತಹ ಪ್ರಧಾನ ಮಂತ್ರಿ ಬೇಕೆ ಎಂದು ನೆರೆದ ಜನರನ್ನು ಪದೇ ಪದೇ ಪ್ರಶ್ನೆ ಹಾಕಿ ಉತ್ತರ ಪಡೆದುಕೊಂಡರು.



ಮೋದಿ ಅವರ ನೇತೃತ್ವದಲ್ಲಿ, ದೇಶ ತ್ವರಿತಗತಿಯ ಅಭಿವೃದ್ದಿ ಸಾಧಿಸಿ ಪ್ರಗತಿ ಪಥದಲ್ಲಿ ಸಾಗುತ್ತಿದೆ. ನುಸುಳುಕೋರರು, ಭಯೋತ್ಪಾದಕರಿಗೆ ಬಿಜೆಪಿ ಸರ್ಕಾರ ತಕ್ಕ ಪ್ರತ್ಯುತ್ತರ ನೀಡುತ್ತಿದ್ದು ಪಾಕಿಸ್ತಾನ ತತ್ತರಗೊಂಡಿದೆ ಎಂದರು.

ಯುಎನ್ಐ ಕೆವಿಆರ್ ಎಸ್ ಎಲ್ ಎಸ್ 2012





UNI XC-AC