Friday, Feb 28 2020 | Time 08:22 Hrs(IST)
  • ಸಿರಿಯಾದಿಂದ ವೈಮಾನಿಕ ದಾಳಿ; 34 ಟರ್ಕಿ ಸೈನಿಕರು ಬಲಿ
  • ಚೀನಾಗೆ ಭಾರತದಿಂದ ವೈದ್ಯಕೀಯ ನೆರವು
  • ಮಹಾದಾಯಿ ನ್ಯಾಯಾಧಿರಣ ಅಧಿಸೂಚನೆ ಪ್ರಕಟ : ಯಡಿಯೂರಪ್ಪ ಹುಟ್ಟು ಹಬ್ಬಕ್ಕೆ ಕೇಂದ್ರದ ಭರ್ಜರಿ ಕೊಡುಗೆ
Special Share

ಪ್ಯಾನ್ ಕಾರ್ಡ್ ಸಲ್ಲಿಸದಿದ್ದರೆ ಶೇ ೨೦ರಷ್ಟು ಟಿಡಿಎಸ್ ಕಡತ !

ಪ್ಯಾನ್ ಕಾರ್ಡ್ ಸಲ್ಲಿಸದಿದ್ದರೆ ಶೇ ೨೦ರಷ್ಟು ಟಿಡಿಎಸ್ ಕಡತ !
ಪ್ಯಾನ್ ಕಾರ್ಡ್ ಸಲ್ಲಿಸದಿದ್ದರೆ ಶೇ ೨೦ರಷ್ಟು ಟಿಡಿಎಸ್ ಕಡತ...!

ನವದೆಹಲಿ, ಜ ೨೪(ಯುಎನ್‌ಐ) ಪ್ಯಾನ್ ಕಾರ್ಡ್ ಅಥವಾ ಆಧಾರ್ ಕಾರ್ಡ್ ಸಲ್ಲಿಸದ ಉದ್ಯೋಗಿಗಳ ಶೇ. ೨೦ ರಷ್ಟು ಅಥವಾ ಅದಕ್ಕಿಂತ ಹೆಚ್ಚಿನ ಮೊತ್ತವನ್ನು ವೇತನ ನೀಡುವ ಸಮಯದಲ್ಲಿ ಟಿಡಿಎಸ್ (ಮೂಲದಲ್ಲಿಯೇ ತೆರಿಗೆ ಕಡಿತ) ಕಡಿತ ಗೊಳಿಸಬೇಕೆಂದು ಆದಾಯ ತೆರಿಗೆ ಇಲಾಖೆ ಎಲ್ಲ ಉದ್ಯೋಗದಾತ ಸಂಸ್ಥೆಗಳ ಮಾಲೀಕರಿಗೆ ಮತ್ತೊಮ್ಮೆ ಸೂಚಿಸಿದೆ.ಆದಾಯ ತೆರಿಗೆ ಕಾಯ್ದೆಯ ಪ್ರಕಾರ, ಉದ್ಯೋಗಿಗಳು ತಮ್ಮ ಪ್ಯಾನ್ ಕಾರ್ಡ್ ವಿವರಗಳನ್ನು ಉದ್ಯೋಗ ದಾತ ಕಂಪನಿಗಳಿಗೆ ಕಡ್ಡಾಯವಾಗಿ ಒದಗಿಸಬೇಕಾಗುತ್ತದೆ. ಒದಗಿಸದಿದ್ದರೆ, ಕಾನೂನಿನಲ್ಲಿ ಅನ್ವಯವಾಗುವ ದರಕ್ಕಿಂತ ಶೇ. ೨೦ರಷ್ಟು, ಅದಕ್ಕಿಂತ ಹೆಚ್ಚಿನ ಮೊತ್ತವನ್ನು ತೆರಿಗೆ ರೂಪದಲ್ಲಿ ಕಡಿತಗೊಳಿಸಲಾಗುತ್ತದೆ.

ವರ್ಷದ ಅಂತ್ಯದೊಂದಿಗೆ, ಸಂಸ್ಥೆಗಳು ತಮ್ಮ ಲೆಕ್ಕಪತ್ರ ಸಿದ್ಧಪಡಿಸುತ್ತಿವೆ. ಈ ಹಿನ್ನೆಲೆಯಲ್ಲಿಯೇ ಆದಾಯ ತೆರಿಗೆ ಇಲಾಖೆ ಈ ಸೂಚನೆ ನೀಡಿದೆ. ತಮ್ಮ ವೇತನ ಶೇ ೨೦ ಸ್ಲಾಬ್ ಗಿಂತ ಕಡಿಮೆ ಇರುವ ಉದ್ಯೋಗಿಗಳು ಪ್ಯಾನ್ ಅಥವಾ ಆಧಾರ್ ಸಂಖ್ಯೆಯನ್ನು ನೀಡದಿದ್ದರೆ ಅವರ ವೇತನದ ಶೇ. ೨೦ ರಷ್ಟು ತೆರಿಗೆ ವಿಧಿಸಲಾಗುತ್ತದೆ. ಜೊತೆಗೆ ಶೇ. ೪ ಆರೋಗ್ಯ ಮತ್ತು ಶಿಕ್ಷಣ ಸೆಸ್ ಕೂಡಾ ಸೇರಲಿದೆ.

ಯುಎನ್‌ಐ ಕೆವಿಆರ್ ೧೭೨೧