Tuesday, Jul 23 2019 | Time 00:14 Hrs(IST)
Special Share

'ಒಂದು ದೇಶ, ಒಂದು ಚುನಾವಣೆ' ಘೋಷಣೆ ಮೂಲಕ ಸಂಚು ರೂಪಿಸುತ್ತಿರುವ ಬಿಜೆಪಿ ; ಮಾಯಾವತಿ

'ಒಂದು ದೇಶ, ಒಂದು ಚುನಾವಣೆ' ಘೋಷಣೆ ಮೂಲಕ ಸಂಚು ರೂಪಿಸುತ್ತಿರುವ ಬಿಜೆಪಿ ; ಮಾಯಾವತಿ
'ಒಂದು ದೇಶ, ಒಂದು ಚುನಾವಣೆ' ಘೋಷಣೆ ಮೂಲಕ ಸಂಚು ರೂಪಿಸುತ್ತಿರುವ ಬಿಜೆಪಿ ; ಮಾಯಾವತಿ

ಲಖನೌ, ಜೂನ್ 23 (ಯುಎನ್ಐ) ಬಿಜೆಪಿ ಜಾರಿಗೆ ತರಲು ಮುಂದಾಗಿರುವ 'ಒಂದು ರಾಷ್ಟ್ರ ಒಂದು ಚುನಾವಣೆ' ಕಾನೂನಿನ ಹಿಂದೆ ತಮ್ಮ ಹಿಂದಿನ ಹಗರಣಗಳನ್ನು ಮುಚ್ಚಿ ಹಾಕಿ, ಭವಿಷ್ಯದ ಭದ್ರ ಬುನಾದಿ ಹೆಣೆಯುವ ಸಂಚು ಅಡಗಿದೆ ಎಂದು ಬಿಎಸ್ಪಿ ಮುಖ್ಯಸ್ಥೆ ಮಾಯಾವತಿ ಆರೋಪಿಸಿದ್ದಾರೆ.

ರಾಷ್ಟ್ರದಲ್ಲಿ ಲೋಕಸಭಾ ಹಾಗೂ ವಿಧಾನಸಭಾ ಚುನಾವಣೆಗಳನ್ನು ಏಕಕಾಲಕ್ಕೆ ನಡೆಸುವುದರಿಂದ ಬಿಜೆಪಿಯ ಸಂಚು ಯಶಸ್ವಿಯಾಗುತ್ತದೆ ಹಾಗೂ ವಿಪಕ್ಷಗಳು ಗಟ್ಟಿಯಾಗಿ ನಿಲ್ಲಲು ಆಗದಷ್ಟು ದುರ್ಬಲವಾಗಿರುತ್ತವೆ ಎಂದು ಅವರು ಪತ್ರಿಕಾ ಹೇಳಿಕೆಯಲ್ಲಿ ಆರೋಪಿಸಿದ್ದಾರೆ.

ಇತ್ತೀಚೆಗೆ ನಡೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷದ ಗೆಲುವಿನ ಹಿಂದೆ ಬಹುದೊಡ್ಡ ಸಂಚು ಅಡಗಿದೆ ಎಂದ ಅವರು, ಬಿಜೆಪಿ ಮುಂದಿನ ದಿನಗಳಲ್ಲಿ ಕೂಡ ವಿದ್ಯುನ್ಮಾನ ಯಂತ್ರಗಳ ಕುರಿತು ವಿಪಕ್ಷಗಳ ಕಾಳಜಿಯನ್ನು ಪರಿಗಣಿಸದೆ, ಇದೇ ನಿರ್ಲಕ್ಷ್ಯ ಧೋರಣೆಯನ್ನು ಮುಂದುವರಿಸಿದರೆ, ಸಾರ್ವಜನಿಕರು ಅದನ್ನು ವಿರೋಧಿಸಲು ಬೇರೆ ಮಾರ್ಗ ಹುಡುಕಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಮುಂಬರುವ ಚುನಾವಣೆಗಾಗಿ ಕೆಲಸ ಮಾಡುವಂತೆ ಪಕ್ಷದ ಕಾರ್ಯಕರ್ತರಿಗೆ ಸೂಚನೆ ನೀಡಿದ ಮಾಯಾವತಿ, ಇವಿಎಂ ಯಂತ್ರಗಳ ಸಂಚನ್ನು ಎದುರಿಸಲು ಸಜ್ಜಾಗಿರುವಂತೆ ಕರೆ ನೀಡಿದರು.

ಹಿಂದಿನ ಲೋಕಸಭಾ ಚುನಾವಣೆಯಲ್ಲಿ ಚುನಾವಣಾ ಆಯೋಗದ ಪಾತ್ರವನ್ನು ಪ್ರಶ್ನಿಸಿದ ಅವರು, ಇವಿಎಂ ಹಾಗೂ ಚುನಾವಣಾ ಆಯೋಗಗಳು ಪ್ರಧಾನಿ ನರೇಂದ್ರ ಮೋದಿ ಅವರ ನಿರ್ದೇಶನದ ಮೇರೆಗೆ ಕೆಲಸ ಮಾಡುತ್ತಿದೆ. ಎಲ್ಲಾ ಸಾಂವಿಧಾನಿಕ ಸಂಸ್ಥೆಗಳು ಇದನ್ನು ಅರಿಯಬೇಕು ಎಂದರು.

ಪಕ್ಷದ ಕಾರ್ಯಕರ್ತರು ತಳಮಟ್ಟದಲ್ಲಿ ಸಾರ್ವಜನಿಕ ಸಭೆಗಳನ್ನು ನಡೆಸಿ, ಸಾರ್ವಜನಿಕ ಕಲ್ಯಾಣ ಯೋಜನೆಗಳನ್ನು ಜಾರಿಗೊಳಿಸುವ ಮೂಲಕ ಮುಂದಿನ ಚುನಾವಣೆಗೆ ಸಜ್ಜಾಗಬೇಕು ಎಂದು ಅವರು ಕರೆ ನೀಡಿದರು.

ಯುಎನ್ಐ ಎಸ್ಎಚ್ ಕೆಎಸ್ ವಿ 2031