Sunday, Jun 20 2021 | Time 11:15 Hrs(IST)
 • ಉತ್ತರ ಪ್ರದೇಶದಲ್ಲಿ ಜುಲೈ 9 ರಿಂದ ಆರ್‌ಎಸ್‌ಎಸ್ ನ ಮಹತ್ವದ ಸಭೆ
 • ದೇಶದಲ್ಲಿ ಕೋವಿಡ್ ನ ಹೊಸ 58,419 ಪ್ರಕರಣಗಳು, 1576 ಮಂದಿ ಸಾವು ವರದಿ
 • ಭಾರತ, ದಕ್ಷಿಣ ಆಫ್ರಿಕಾ , ನೈಜೀರಿಯಾಕ್ಕೆ ವಿಮಾನ ಹಾರಾಟ ಪುನರಾರಂಭ
 • ಬ್ರೆಜಿಲ್ ನಲ್ಲಿ 5 ಲಕ್ಷ ದಾಟಿದ ಕರೋನ ಸಾವಿನ ಸಂಖ್ಯೆ
 • ಕ್ಯೂಬಾದಲ್ಲಿ 1,472 ಹೊಸ ಸೋಂಕು ಪ್ರಕರಣ ವರದಿ
Special

ಮಿಲ್ಖಾ ಸಿಂಗ್ ಅಂತ್ಯಕ್ರಿಯೆ

19 Jun 2021 | 7:28 PM

ಚಂಡೀಗಢ , ಜೂನ್‌ 19( ಯುಎನ್‌ಐ) ಕೋವಿಡ್ ನಂತರದ ಅನಾರೋಗ್ಯ ಸಮಸ್ಯೆಗಳಿಂದ ವಿಧಿವಶರಾದ “ಫ್ಲೈಯಿಂಗ್ ಸಿಖ್” ಎಂದೇ ಹೆಸರುವಾಸಿಯಾಗಿದ್ದ ಕ್ರೀಡಾ ತಾರೆ, ಮಿಲ್ಖಾ ಸಿಂಗ್ ಅವರ ಅಂತ್ಯಸಂಸ್ಕಾರ ಶನಿವಾರ ಸಂಜೆ 5 ಗಂಟೆಗೆ ಸಕಲ ಸರ್ಕಾರ ಗೌರವಗಳೊಂದಿಗೆ ನೆರವೇರಿತು.

 Sharesee more..

ರಫೇಲ್‌ ಯುದ್ದ ವಿಮಾನಗಳ ಸೇರ್ಪಡೆ ಯೋಜನೆ ಪ್ರಗತಿಯಲ್ಲಿದೆ; ವಾಯುಪಡೆ

19 Jun 2021 | 7:01 PM

ಹೈದ್ರಾಬಾದ್‌, ಜೂನ್‌ 19( ಯುಎನ್‌ ಐ) ನೆರೆ ಹೊರೆ ದೇಶಗಳ ಭೌಗೋಳಿಕ ರಾಜಕೀಯ ಅನಿಶ್ಚಿತತೆ ಹಾಗೂ ಉದ್ಬವಿಸುತ್ತಿರುವ ಭದ್ರತಾ ಸವಾಲುಗಳಿಂದಾಗಿ, ಭಾರತೀಯ ವಾಯುಪಡೆ ತ್ವರಿಗತಿಯಲ್ಲಿ ತಂತ್ರಜ್ಞಾನ ಅಳವಡಿಸಿಕೊಳ್ಳುವ ಮೂಲಕ ಮಹತ್ವದ ಪರಿವರ್ತನೆಯಲ್ಲಿದೆ ಎಂದು ವಾಯುಪಡೆಯ ಮುಖ್ಯಸ್ಥ ಏರ್‌ಚೀಫ್‌ ಮಾರ್ಷಲ್‌ ಆರ್‌ಕೆ ಎಸ್‌ ಭದೂರಿಯಾ ಹೇಳಿದ್ದಾರೆ.

 Sharesee more..
ಸ್ವಿಸ್‌ ನಲ್ಲಿ ಭಾರತೀಯರು ಇರಿಸಿರುವ ಹಣ ಏರಿಕೆ ವರದಿ ತಳ್ಳಿಹಾಕಿದ ಕೇಂದ್ರ

ಸ್ವಿಸ್‌ ನಲ್ಲಿ ಭಾರತೀಯರು ಇರಿಸಿರುವ ಹಣ ಏರಿಕೆ ವರದಿ ತಳ್ಳಿಹಾಕಿದ ಕೇಂದ್ರ

19 Jun 2021 | 6:55 PM

ನವದೆಹಲಿ, ಜೂನ್‌ 19( ಯುಎನ್‌ಐ) ಸ್ವಿಸ್‌ ಬ್ಯಾಂಕುಗಳಲ್ಲಿ ಭಾರತೀಯರು ಅಡಗಿಸಿಟ್ಟಿರುವ ರುವ ಕಪ್ಪು ಹಣ ಏರಿಕೆಯಾಗಿದೆ ಎಂಬ ಮಾಧ್ಯಮಗಳ ವರದಿಯನ್ನು ಕೇಂದ್ರ ಹಣಕಾಸು ಸಚಿವಾಲಯ ತಳ್ಳಿಹಾಕಿದೆ.

 Sharesee more..

ಲಾಕ್‌ ಡೌನ್‌ ಸಡಲಿಸುವ ಮುನ್ನ ಎಚ್ಚರಿಕೆ ವಹಿಸಿ ರಾಜ್ಯಗಳಿಗೆ ಕೇಂದ್ರ ಸೂಚನೆ

19 Jun 2021 | 6:49 PM

ನವದೆಹಲಿ, ಜೂನ್‌ 16( ಯುಎನ್‌ ಐ) ಕೋವಿಡ್ ಸಾಂಕ್ರಾಮಿಕದ ಎರಡನೇ ಅಲೆಯ ಕಾರಣ ವಿಧಿಸಲಾಗಿದ್ದ ನಿರ್ಬಂಧಗಳನ್ನು ಸಡಿಲಗೊಳಿಸುವಾಗ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳು ಹೆಚ್ಚಿನ ಎಚ್ಚರಿಕೆಯ ಜತೆಗೆ, ಕೋವಿಡ್19 ಕುರಿತ ನಡವಳಿಕೆಗಳು ಪರೀಕ್ಷೆ, ಸಂಪರ್ಕಿತರ ಪತ್ತೆ, ಚಿಕಿತ್ಸೆ , ಲಸಿಕೆ ಎಂಬ ಐದು ಅಂಶಗಳ ಕಾರ್ಯತಂತ್ರವನ್ನು ಕಟ್ಟುನಿಟ್ಟಾಗಿ ಅನುಸರಿಸುವಂತೆ ಕೇಂದ್ರ ಗೃಹ ಸಚಿವಾಲಯ ಸೂಚನೆ ನೀಡಿದೆ.

 Sharesee more..
ಲೈಂಗಿಕ ಹಲ್ಲೆ ಪ್ರಕರಣ; ಶಿವ ಶಂಕರ ಬಾಬಾ ಜುಲೈ 1 ರವರೆಗೆ ನ್ಯಾಯಾಂಗ ಕಸ್ಟಡಿಗೆ

ಲೈಂಗಿಕ ಹಲ್ಲೆ ಪ್ರಕರಣ; ಶಿವ ಶಂಕರ ಬಾಬಾ ಜುಲೈ 1 ರವರೆಗೆ ನ್ಯಾಯಾಂಗ ಕಸ್ಟಡಿಗೆ

18 Jun 2021 | 8:44 PM

ಚೆನ್ನೈ, ಜೂನ್‌ 18(ಯುಎನ್‌ ಐ)- ಲೈಂಗಿಕ ಹಲ್ಲೆ ಹಾಗೂ ಲೈಂಗಿಕ ದುರ್ವತನೆ ಆರೋಪಗಳ ಮೇಲೆ ದೆಹಲಿ ಸಮೀಪ ಬಂಧಿಸಲಾಗಿರುವ ಸ್ವಯಂ ಘೋಷಿತ ದೇವಮಾನವ ಶಿವ ಶಂಕರ ಬಾಬಾನನ್ನು ಚೆನ್ನೈ ನಗರಕ್ಕೆ ಕರೆತರಲಾಗಿದ್ದು, ಕೋರ್ಟ್‌ ಆತನನ್ನು ಜುಲೈ 1 ರವರೆಗೆ ನ್ಯಾಯಾಂಗ ಕಸ್ಟಡಿಗೆ ಒಪ್ಪಿಸಿದೆ.

 Sharesee more..
ಮಂತ್ರಾಲಯ ಗುರು ರಾಘವೇಂದ್ರ ಸ್ವಾಮಿ ದೇಗುಲ; ಜೂನ್‌ 22ರಿಂದ ಭಕ್ತರಿಗೆ ಅನುಮತಿ

ಮಂತ್ರಾಲಯ ಗುರು ರಾಘವೇಂದ್ರ ಸ್ವಾಮಿ ದೇಗುಲ; ಜೂನ್‌ 22ರಿಂದ ಭಕ್ತರಿಗೆ ಅನುಮತಿ

18 Jun 2021 | 5:11 PM

ರಾಯಚೂರು, ಜೂನ್‌ 18( ಯು ಎನ್‌ ಐ) ಮಂತ್ರಾಲಯದ ಶ್ರೀ ಗುರು ರಾಘವೇಂದ್ರ ಸ್ವಾಮಿ ದೇಗುಲ ಇದೇ ತಿಂಗಳ 22 ರಿಂದ ಭಕ್ತಾಧಿಗಳ ಪ್ರವೇಶಕ್ಕೆ ಅನುಮತಿಸಲಾಗುವುದು ಎಂದು ಮಠದ ಮೂಲಗಳು ಹೇಳಿವೆ.

 Sharesee more..
ಸೋನಿಯಾ, ರಾಹುಲ್‌ ಭೇಟಿ ಮಾಡಿದ ಎಂ.ಕೆ. ಸ್ಟಾಲಿನ್‌

ಸೋನಿಯಾ, ರಾಹುಲ್‌ ಭೇಟಿ ಮಾಡಿದ ಎಂ.ಕೆ. ಸ್ಟಾಲಿನ್‌

18 Jun 2021 | 4:44 PM

ಚೆನ್ನೈ, ಜೂನ್ 18( ಯುಎನ್ಐ) ಡಿಎಂಕೆ ಅಧ್ಯಕ್ಷರೂ ಆಗಿರುವ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್‌ ಶುಕ್ರವಾರ ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ, ಪಕ್ಷದ ಸಂಸದ ರಾಹುಲ್‌ ಗಾಂಧಿ ಅವರನ್ನು ದೆಹಲಿಯಲ್ಲಿ ಭೇಟಿ ಮಾಡಿ ಮಾತುಕತೆ ನಡೆಸಿದರು.

 Sharesee more..
ರೇಟಿಂಗ್‌ ತಗ್ಗಿದರೂ  ಜಾಗತಿಕ ನಾಯಕರಿಗಿಂತಲೂ ಪ್ರಧಾನಿ ಮೋದಿ ಮುಂದೆ

ರೇಟಿಂಗ್‌ ತಗ್ಗಿದರೂ ಜಾಗತಿಕ ನಾಯಕರಿಗಿಂತಲೂ ಪ್ರಧಾನಿ ಮೋದಿ ಮುಂದೆ

18 Jun 2021 | 4:38 PM

ನವದೆಹಲಿ, ಜೂನ್‌18( ಯು ಎನ್‌ಐ) ಭಾರತ ಪ್ರಧಾನಿ ನರೇಂದ್ರ ಮೋದಿ ಅವರನ್ನು ಶೇ 66ರಷ್ಟು ಜನರು ಅನುಮೋದಿಸಿದ್ದಾರೆ ಎಂದು ವಿಶ್ವದ ನಾಯಕರ ಬಗ್ಗೆ ಸಮೀಕ್ಷೆ ನಡೆಸಿರುವ ಅಮೆರಿಕಾ ಮೂಲದ ಮಾರ್ನಿಂಗ್ ಕನ್ಸಲ್ಟ್ ಸಂಸ್ಥೆ ತಿಳಿಸಿದೆ.

 Sharesee more..

ಮುಂಚೋಣಿ ಕಾರ್ಯಕರ್ತರಿಗೆ ಕ್ರಾಶ್‌ ಕೋರ್ಸ್‌ ಚಾಲನೆ ನೀಡಿದ ಪ್ರಧಾನಿ ಮೋದಿ

18 Jun 2021 | 1:40 PM

ನವದೆಹಲಿ, ಜೂ 18(ಯುಎನ್‌ಐ) ದೇಶಾದ್ಯಂತ ಕೋವಿಡ್ ಯೋಧರಿಗೆ ವಿಶೇಷ ತರಬೇತಿ ಕೋರ್ಸ್ ಅನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ಶುಕ್ರವಾರ ವಿಡಿಯೋ ಕಾನ್ಫರೆನ್ಸ್‌ ಮೂಲಕ ಆರಂಭಿಸಿದರು ಈ ಕೋರ್ಸ್, ಕೋವಿಡ್ -19 ಮುಂಚೋಣಿ ಕಾರ್ಯಕರ್ತರ ಕೌಶಲ್ಯವನ್ನು ಹೆಚ್ಚಿಸಲು ನೆರವಾಗಲಿದೆ.

 Sharesee more..

ಕೊರೊನಾ ಲಸಿಕೆ ಪಡೆಯದಿದ್ದರೆ ಪ್ರವಾಸಿಗರಿಗೆ ಎಂಟ್ರಿಯಿಲ್ಲ ….!

17 Jun 2021 | 8:20 PM

ಪಣಜಿ, ಜೂನ್ 17 (ಯುಎನ್ಐ) ಕೊರೊನಾ ಲಸಿಕೆ ಪಡೆಯದೇ ಯಾವ ಪ್ರವಾಸಿಗರಿಗೂ ಕೂಡ ಗೋವಾಕ್ಕೆ ಬರಲು ಅವಕಾಶ ಕೊಡುವುದಿಲ್ಲ ಎಂದು ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ತಿಳಿಸಿದ್ದಾರೆ ಇಂದು ಸುದ್ದಿಗಾರರ ಜೊತೆ ಮಾತನಾಡಿದ ಅವರು, ಜುಲೈ 30ರೊಳಗೆ ಎಲ್ಲರಿಗೂ ಕೊರೊನಾ ವ್ಯಾಕ್ಸಿನ್ ಮೊದಲ ಡೋಸ್ ನನ್ನು ನೀಡುವ ಗುರಿಯನ್ನು ಗೋವಾ ಸರ್ಕಾರ ಹೊಂದಿದೆ.

 Sharesee more..
ಆಲಮಟ್ಟಿ ನೆರೆ ನಿಯಂತ್ರಣ; ನಾಡಿದ್ದು, ಕರ್ನಾಟಕ, ಮಹಾರಾಷ್ಟ್ರ ಮಹತ್ವದ ಸಭೆ

ಆಲಮಟ್ಟಿ ನೆರೆ ನಿಯಂತ್ರಣ; ನಾಡಿದ್ದು, ಕರ್ನಾಟಕ, ಮಹಾರಾಷ್ಟ್ರ ಮಹತ್ವದ ಸಭೆ

17 Jun 2021 | 8:14 PM

ಔರಂಗಾಬಾದ್ / ಮುಂಬೈ, ಜೂನ್ 17( ಯುಎನ್ಐ) ಆಲಮಟ್ಟಿ ಜಲಾಶಯಕ್ಕೆ ಸಂಬಂಧಿಸಿದಂತೆ ಪ್ರವಾಹ ನಿಯಂತ್ರಣ ಕ್ರಮಗಳ ಕುರಿತು ಕರ್ನಾಟಕ ಮುಖ್ಯಮಂತ್ರಿ ಬಿ.ಎಸ್.‌ ಯಡಿಯೂರಪ್ಪ ಅವರೊಂದಿಗೆ ಶನಿವಾರ ಸಭೆ ನಡೆಸಲು ಯೋಜಿಸಲಾಗಿದೆ ಎಂದು ಮಹಾರಾಷ್ಟ್ರ ಜಲ ಸಂಪನ್ಮೂಲ ಸಚಿವ ಜಯಂತ್‌ ಪಾಟೀಲ್‌ ಗುರುವಾರ ಹೇಳಿದ್ದಾರೆ.

 Sharesee more..

ಪಶುಪತಿ ನಾಥ್‌ ಎಲ್‌ ಜೆ ಪಿ ರಾಷ್ಟ್ರೀಯ ಅಧ್ಯಕ್ಷ

17 Jun 2021 | 6:08 PM

ಪಾಟ್ನಾ, ಜೂನ್‌ 17( ಯು ಎನ್‌ಐ) ಲೋಕ ಜನ ಶಕ್ತಿ ಪಕ್ಷ ( ಎಲ್‌ ಜೆ ಪಿ)ದ ರಾಷ್ಟ್ರೀಯ ಅಧ್ಯಕ್ಷರಾಗಿ ಸಂಸದ, ಚಿರಾಗ್‌ ಪಾಸ್ವಾನ್‌ ಅವರ ಚಿಕ್ಕಪ್ಪ ಪಶುಪತಿನಾಥ್‌ ಪಾರಸ್‌ ಸರ್ವಾನುಮತದಿಂದ ಆಯ್ಕೆಗೊಂಡಿದ್ದಾರೆ ಗುರುವಾರ ನಡೆದ ಪಕ್ಷದ ರಾಷ್ಟ್ರೀ ಯ ಕಾರ್ಯಕಾರಿಣಿಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.

 Sharesee more..
ಮೇಕೆದಾಟು ಯೋಜನೆಗೆ ಅನುಮತಿ ಬೇಡ: ಸ್ಟಾಲಿನ್

ಮೇಕೆದಾಟು ಯೋಜನೆಗೆ ಅನುಮತಿ ಬೇಡ: ಸ್ಟಾಲಿನ್

17 Jun 2021 | 5:07 PM

ಚೆನ್ನೈ, ಜೂನ್ 17 (ಯುಎನ್‌ಐ) ತಮಿಳುನಾಡು ಮುಖ್ಯಮಂತ್ರಿ ಮತ್ತು ಡಿಎಂಕೆ ಅಧ್ಯಕ್ಷ ಎಂ ಕೆ ಸ್ಟಾಲಿನ್ ಇಂದು ಇಲ್ಲಿಗೆ ತೆರಳಿ ನವದೆಹಲಿಗೆ ತೆರಳಿದ್ದಾರೆ.

 Sharesee more..

ವಾಹನ ದಾಖಲೆಗಳ ಸಿಂಧುತ್ವ ಅವಧಿ 6ನೇ ಬಾರಿ ವಿಸ್ತರಿಸಿದ ಕೇಂದ್ರ ಸರ್ಕಾರ

17 Jun 2021 | 4:45 PM

ನವದೆಹಲಿ, ಜೂನ್ 17 ( ಯುಎನ್‌ಐ) ದೇಶದಲ್ಲಿ ಕೊರೊನಾ ಬಿಕ್ಕಟ್ಟಿನಿಂದಾಗಿ ವಾಹನ ದಾಖಲೆಗಳ ಸಿಂಧುತ್ವ ಅವಧಿಯನ್ನು ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿಗಳ ಸಚಿವಾಲಯ ಮತ್ತೊಮ್ಮೆ ವಿಸ್ತರಿಸಿ ಗುರುವಾರ ಆದೇಶ ಹೊರಡಿಸಿದೆ ವಾಹನಗಳ ಚಾಲನಾ ಪರವಾನಗಿ , ನೋಂದಣಿ ಪತ್ರ , ಫಿಟ್ನೆಸ್‌ಪ್ರಮಾಣ ಪತ್ರ ಸೇರಿದಂತೆ ಮೋಟಾರು ವಾಹನ ಇತರೆ ದಾಖಲೆಗಳ ಸಿಂಧುತ್ವ ಅವಧಿಯನ್ನು ಸೆಪ್ಟೆಂಬರ್ 30ರವರೆಗೂ ವಿಸ್ತರಣೆ ಮಾಡಲಾಗಿದೆ.

 Sharesee more..

ಬೆಂಗಳೂರು ಸೇರಿ 9 ನಗರಗಳಲ್ಲಿ ಸ್ಪುಟ್ನಿಕ್-ವಿ ಲಸಿಕೆ ಲಭ್ಯ

17 Jun 2021 | 4:17 PM

ನವದೆಹಲಿ, ಜೂನ್‌17( ಯುಎನ್‌ಐ)-ಕೊರೊನಾ ಸಾಂಕ್ರಾಮಿಕ ಚಿಕಿತ್ಸೆಗೆ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ ಡಿ ಓ) ವಿನ್ಯಾಸಗೊಳಿಸಿದ ಮತ್ತೊಂದು ಪ್ರಮುಖ ಔಷಧಿಯನ್ನು ಇತ್ತೀಚೆಗೆ ಬಿಡುಗಡೆ ಮಾಡಿದ್ದ ದೇಶಿಯ ಫಾರ್ಮಾ ದಿಗ್ಗಜ ಡಾ ರೆಡ್ಡೀಸ್‌ ಮತ್ತೊಂದು ಶುಭ ಸುದ್ದಿ ನೀಡಿದೆ.

 Sharesee more..