Tuesday, Nov 19 2019 | Time 05:04 Hrs(IST)
  • 15 ಕ್ಷೇತ್ರಗಳಲ್ಲಿ ನಾಮಪತ್ರ ಸಲ್ಲಿಕೆ ಮುಕ್ತಾಯ: ಗೋಕಾಕ್ ನಿಂದ ಸತೀಶ್ ಜಾರಕಿಹೊಳಿ,ಹಿರೇಕೆರೂರಿ ನಿಂದ ಸೃಷ್ಠಿ ಪಾಟೀಲ್,ಮಹಾಲಕ್ಷ್ಮಿ ಲೇಔಟ್ ನಿಂದ ಹೇಮಲತಾ ನಾಮಪತ್ರ ಸಲ್ಲಿಕೆ
Special

ಮಹಾರಾಷ್ಟ್ರದಲ್ಲಿ ರಾಷ್ಟ್ರಪತಿ ಆಡಳಿತಕ್ಕೆ ರಾಜ್ಯಪಾಲರ ಶಿಫಾರಸು

12 Nov 2019 | 5:58 PM

ನವದೆಹಲಿ, ನವೆಂಬರ್ 12 (ಯುಎನ್‌ಐ) ಮಹಾರಾಷ್ಟ್ರದಲ್ಲಿ ಸರ್ಕಾರ ರಚನೆಯ ಅನಿಶ್ಚಿತತೆಯ ಮಧ್ಯೆ ರಾಜ್ಯಪಾಲ ಭಗತ್ ಸಿಂಗ್ ಕೋಶಿಯಾರಿ ಮಂಗಳವಾರ ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತಕ್ಕೆ ಶಿಫಾರಸು ಮಾಡಿ ಕೇಂದ್ರಕ್ಕೆ ವರದಿ ಸಲ್ಲಿಸಿದ್ದಾರೆ ಮಹಾರಾಷ್ಟ್ರ ರಾಜ್ಯಪಾಲರು ಕಳುಹಿಸಿದ್ದ ವರದಿಯ ಆಧಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ರಾಷ್ಟ್ರಪತಿ ಆಡಳಿತ ಜಾರಿಗೆ ಒಪ್ಪಿಗೆ ಸೂಚಿಸಲಾಗಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

 Sharesee more..
ಮತ್ತೊಂದು  ಮಹತ್ವ ವಿಷಯ  ಬಗ್ಗೆ ನಾಳೆ  ಸುಪ್ರೀಂ ಕೋರ್ಟ್ ತೀರ್ಪು

ಮತ್ತೊಂದು ಮಹತ್ವ ವಿಷಯ ಬಗ್ಗೆ ನಾಳೆ ಸುಪ್ರೀಂ ಕೋರ್ಟ್ ತೀರ್ಪು

12 Nov 2019 | 5:33 PM

ನವದೆಹಲಿ, ನ 12 (ಯುಎನ್ಐ) ಭಾರತ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಕಾರ್ಯಾಲಯವನ್ನು ಮಾಹಿತಿ ಹಕ್ಕು ಕಾಯ್ದೆ ( ಆರ್ ಟಿ ಐ) ವ್ಯಾಪಿಗೆ ಒಳಪಡಿಸಬೇಕೇ ಅಥವಾ ಬೇಡವೇ ಎಂಬ ಬಗ್ಗೆ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ಅವರ ನೇತೃತ್ವದ ಸಾಂವಿಧಾನಿಕ ಪೀಠ ಬುಧವಾರ ಮಹತ್ವದ ತೀರ್ಪು ನೀಡಲಿದೆ.

 Sharesee more..
ಬ್ರಿಕ್ಸ್ ಶೃಂಗಸಭೆಯಲ್ಲಿ  ಪಾಲ್ಗೊಳ್ಳಲು ಬ್ರೆಜಿಲ್ ಗೆ ತೆರಳಿದ ಪ್ರಧಾನಿ ಮೋದಿ

ಬ್ರಿಕ್ಸ್ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಬ್ರೆಜಿಲ್ ಗೆ ತೆರಳಿದ ಪ್ರಧಾನಿ ಮೋದಿ

12 Nov 2019 | 4:43 PM

ನವದೆಹಲಿ, ನ 12( ಯುಎನ್ಐ) ಇದೇ 13 ಹಾಗೂ 14 ರಂದು ನಡೆಯಲಿರುವ 11ನೇ ಬ್ರಿಕ್ಸ್ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಅಪರಾಹ್ನ ಬ್ರೆಜಿಲ್ ಗೆ ತೆರಳಿದರು.

 Sharesee more..
ಕಾಂಗ್ರೆಸ್  ಸಂಸದ  ಶಶಿ ಥರೂರ್ ವಿರುದ್ದ  ಬಂಧನ ವಾರೆಂಟ್

ಕಾಂಗ್ರೆಸ್ ಸಂಸದ ಶಶಿ ಥರೂರ್ ವಿರುದ್ದ ಬಂಧನ ವಾರೆಂಟ್

12 Nov 2019 | 4:39 PM

ನವದೆಹಲಿ, ನ.12 (ಯುಎನ್ಐ) ಕಾಂಗ್ರೆಸ್ ಸಂಸದ ಶಶಿ ತರೂರ್ ಅವರ ವಿರುದ್ಧ ದೆಹಲಿ ರೋಸ್ ಅವೆನ್ಯೂ ನ್ಯಾಯಾಲಯ ಬಂಧನ ವಾರಂಟ್ ಹೊರಡಿಸಿದೆ.

 Sharesee more..

ಲತಾ ಮಂಗೇಶ್ಕರ್ ಆರೋಗ್ಯ ಗಂಭೀರ

12 Nov 2019 | 2:18 PM

ಮುಂಬೈ, 12 ( ಯುಎನ್ಐ)- ಹಿರಿಯ ಗಾಯಕಿ ಲತಾ ಮಂಗೇಶ್ಕರ್ (90) ಅವರ, ಆರೋಗ್ಯ ಪರಿಸ್ಥಿತಿ ತೀವ್ರ ಗಂಭೀರವಾಗಿದೆ ಎಂದು ಆಸ್ಪತ್ರೆ ಮೂಲಗಳು ಹೇಳಿವೆ ನ್ಯೂಮೋನಿಯಾದಿಂದ ಬಳಲುತ್ತಿರುವ ಲತಾ ಮಂಗೇಶ್ಕರ್ ಅವರಿಗೆ ವೈದ್ಯರು ಕೃತಕ ಉಸಿರಾಟ ವ್ಯವಸ್ಥೆ ಆಳವಡಿಸಿ, ಚಿಕಿತ್ಸೆ ಕಲ್ಪಿಸುತ್ತಿದ್ದಾರೆ.

 Sharesee more..

ರಾಜೀವ್ ಗಾಂಧಿ ಹತ್ಯೆ : ಆರೋಪಿ ಪೆರೋಲ್ ಮೇಲೆ ಬಿಡುಗಡೆ

12 Nov 2019 | 2:04 PM

ಚೆನ್ನೈ, ನ 12(ಯುಎನ್ಐ) ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹತ್ಯಾ ಪ್ರಕರಣದ ಏಳು ಆರೋಪಿಗಳ ಪೈಕಿ ಎ ಜಿ ಪೇರರಿವಾಲನ್ ಪರೋಲ್ ಮೇಲೆ ಬಿಡುಗಡೆಯಾಗಿದ್ದಾರೆ ಪೇರರಿವಾಲನ್ ತಂದೆಯ ಅನಾರೋಗ್ಯದ ಕಾರಣ ಹಾಗೂ ಕೃಷ್ಣಗಿರಿಯಲ್ಲಿ ಆತನ ಸಹೋದರಿಯ ವಿವಾಹ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಆತನನ್ನು ವೆಲ್ಲೂರು ಕೇಂದ್ರ ಕಾರಾಗೃಹದಿಂದ 30 ದಿನಗಳ ಕಾಲ ಪರೋಲ್ ಮೇಲೆ ಬಿಡುಗಡೆ ಮಾಡಲಾಗಿದೆ.

 Sharesee more..

ಶಬರಿಮಲೆಗೆ ವಿಶೇಷ ರೈಲು

12 Nov 2019 | 2:02 PM

ತಿರುವನಂತಪುರಂ, ನ 12 (ಯುಎನ್ಐ) ಮಕರ ಜ್ಯೋತಿ ಹಿನ್ನೆಲೆಯಲ್ಲಿ ಶಬರಿಮಲೆಗೆ ವಿಶೇಷ ರೈಲುಗಳು ಸಂಚರಿಸಲಿವೆ ಎಂದು ನೈಋತ್ಯ ರೈಲ್ವೆ ತಿಳಿಸಿದೆ ನಿಜಾಮಾಬಾದ್ – ಕೊಲ್ಲಂ ವಿಶೇಷ ರೈಲು ಡಿಸೆಂಬರ್ 6,13,22 ರಂದು ನಿಜಾಮಾಬಾದ್ ನಿಂದ ಮಧ್ಯಾಹ್ನ 12.

 Sharesee more..

ಕಾರ್ತಿಕ ಹುಣ್ಣಿಮೆ; ಲಕ್ಷಾಂತರ ಭಕ್ತರಿಂದ ಗಂಗಾ ನದಿಯಲ್ಲಿ ಪವಿತ್ರ ಸ್ನಾನ

12 Nov 2019 | 1:10 PM

ಪಟ್ನಾ, ನ 12 (ಯುಎನ್ಐ) ಕಾರ್ತಿಕ ಹುಣ್ಣಿಮೆಯ ಅಂಗವಾಗಿ ಬಿಹಾರದ ಲಕ್ಷಾಂತರ ಜನರು ಪವಿತ್ರ ಗಂಗೆಯಲ್ಲಿ ಸ್ನಾನ ಮಾಡಿ, ದೇಗುಲಗಳಲ್ಲಿ ವಿಶೇಷ ಪೂಜೆಗಳನ್ನು ನೆರವೇರಿಸಿದರು ಸೋಮವಾರ ಮಧ್ಯರಾತ್ರಿ ಪಟ್ನಾದ ಗಂಗಾ ನದಿಯಲ್ಲಿ ಮುಳುಗೆದ್ದ ಹಲವು ಭಕ್ತರು ಮಂತ್ರೋಪನಿಷತ್ ಗಳ ನಡುವೆ ನದಿ ತಟದಲ್ಲಿರುವ ದೇಗುಲದಲ್ಲಿ ಪೂಜೆ ಸಲ್ಲಿಸಿದರು.

 Sharesee more..

ಕೆಲ ಸಚಿವರಿಗೆ ಭದ್ರತೆ ಹೆಚ್ಚಿಸಿ, ರವಿಶಂಕರ್ ಗುರೂಜಿಗೆ ಭದ್ರತೆ ಹಿಂಪಡೆದ ಯುಪಿ ಸರ್ಕಾರ

12 Nov 2019 | 12:13 PM

ಲಖನೌ, ನ 12 (ಯುಎನ್ಐ) ಅಯೋಧ್ಯಾ ತೀರ್ಪು ಹೊರಬಿದ್ದ ನಂತರ ಉತ್ತರಪ್ರದೇಶ ಸರ್ಕಾ ಹಲವು ರಾಜಕೀಯ ನಾಯಕರು ಮತ್ತು ರಾಜ್ಯ ಸಚಿವರ ಭದ್ರತೆಯನ್ನು ಹೆಚ್ಚಿಸಿದೆ ಸೋಮವಾರ ರಾಜ್ಯದ ಭದ್ರತಾ ಪರಿಸ್ಥಿತಿಯನ್ನು ಅವಲೋಕಿಸಿದ ಸರ್ಕಾರ, ಮಂಗಳವಾರ ಪ್ರಮುಖ ನಾಯಕರ ಭದ್ರತೆಯನ್ನು ಹೆಚ್ಚಿಸಿ ಆದೇಶ ಹೊರಡಿಸಿದೆ.

 Sharesee more..

ಸಂಜಯ್ ರಾವತ್ ಆರೋಗ್ಯ ವಿಚಾರಿಸಿದ ಶರದ್ ಪವಾರ್

12 Nov 2019 | 11:45 AM

ಮುಂಬೈ, ನ 12( ಯುಎನ್ಐ) ಅಸ್ವಸ್ಥತೆಯಿಂದಾಗಿ ಇಲ್ಲಿನ ಲೀಲಾವತಿ ಆಸ್ಪತ್ರೆಗೆ ದಾಖಲಾಗಿರುವ ಶಿವಸೇನೆ ಹಿರಿಯ ನಾಯಕ ಸಂಜಯ್ ರಾವತ್ ಅವರನ್ನು ಮಂಗಳವಾರ ಬೆಳಗ್ಗೆ ಎನ್ ಸಿ ಪಿ ಪರಮೋಚ್ಛ ನಾಯಕ ಶರದ್ ಪವಾರ್ ಭೇಟಿ ಮಾಡಿ ಆರೋಗ್ಯ ಕುರಿತು ವಿಚಾರಿಸಿದರು.

 Sharesee more..

ಜಮ್ಮುವಿನಲ್ಲಿ ಧಾರ್ಮಿಕ ಗುರುಪೂರಬ್ ಆಚರಣೆ

12 Nov 2019 | 11:20 AM

ಜಮ್ಮು, ನ 12 (ಯುಎನ್ಐ) ಜಮ್ಮು ಕಾಶ್ಮೀರದ ಚಳಿಗಾಲದ ರಾಜಧಾನಿ ಜಮ್ಮುವಿನಲ್ಲಿ ಸಿಖ್ ಧರ್ಮದ ಸಂಸ್ಥಾಪಕ ಗುರು ನಾನಕ್ ದೇವ್ ಜೀ ಅವರ 550ನೇ ಜನ್ಮ ದಿನಾಚರಣೆ ಅಂಗವಾಗಿ ಗುರುಪೂರಬ್ ಅನ್ನು ಧಾರ್ಮಿಕ ವಿಧಿವಿಧಾನ ಮತ್ತು ಭಕ್ತಿಯೊಂದಿಗೆ ಆಚರಿಸಲಾಯಿತು.

 Sharesee more..

ಕಾಂಗ್ರೆಸ್ ಜೊತೆ ಮಾತನಾಡುತ್ತೇನೆ; ಶರದ್ ಪವಾರ್

12 Nov 2019 | 11:15 AM

ಮುಂಬೈ, ನ, 12( ಯುಎನ್ಐ)- ಮಹಾರಾಷ್ಟ್ರ ವಿಧಾನಸಭೆಯಲ್ಲಿ ಮೂರನೇ ಅತಿದೊಡ್ಡ ಪಕ್ಷವಾಗಿರುವ ಎನ್ ಸಿ ಪಿ ಗೆ ಸರ್ಕಾರ ರಚಿಸುವಂತೆ ಮಹಾರಾಷ್ಟ್ರ ರಾಜ್ಯಪಾಲ ಭಗತ್ ಸಿಂಗ್ ಕೊಶ್ಯಾರಿ ಆಹ್ವಾನ ನೀಡಿರುವ ಬೆನ್ನಲ್ಲೇ ಪಕ್ಷದ ಮುಖ್ಯಸ್ಥ ಶರದ್ ಪವಾರ್ ತ್ವರಿತ ಸಭೆಗಳನ್ನು ನಡೆಸುತ್ತಿದ್ದಾರೆ.

 Sharesee more..

ಗಂದೇರ್‌ಬಾಲ್‌ನಲ್ಲಿ ಗುಂಡಿನ ಚಕಮಕಿ: ಇಬ್ಬರು ಉಗ್ರರು ಹತ

12 Nov 2019 | 10:13 AM

ಶ್ರೀನಗರ, ನ 12 (ಯುಎನ್ಐ) ಕೇಂದ್ರ ಕಾಶ್ಮೀರದ ಗಂದೇರ್‌ಬಾಲ್‌ನಲ್ಲಿ ಭದ್ರತಾ ಪಡೆ ನಡೆಸಿದ ಶೋಧ ಕಾರ್ಯಾಚರಣೆಯ ವೇಳೆ ಉಗ್ರರೊಂದಿಗೆ ಗುಂಡಿನ ಚಕಮಕಿ ನಡೆದಿದ್ದು, ಈ ವೇಳೆ ಇಬ್ಬರು ಉಗ್ರರು ಹತರಾಗಿದ್ದಾರೆ.

 Sharesee more..

ಗಂದೇರ್‌ಬಾಲ್‌ನಲ್ಲಿ ಗುಂಡಿಕ ಚಕಮಕಿ: ಇಬ್ಬರು ಉಗ್ರರು ಹತ

12 Nov 2019 | 10:12 AM

ಶ್ರೀನಗರ, ನ 12 (ಯುಎನ್ಐ) ಕೇಂದ್ರ ಕಾಶ್ಮೀರದ ಗಂದೇರ್‌ಬಾಲ್‌ನಲ್ಲಿ ಭದ್ರತಾ ಪಡೆ ನಡೆಸಿದ ಶೋಧ ಕಾರ್ಯಾಚರಣೆಯ ವೇಳೆ ಉಗ್ರರೊಂದಿಗೆ ಗುಂಡಿನ ಚಕಮಕಿ ನಡೆದಿದ್ದು, ಈ ವೇಳೆ ಇಬ್ಬರು ಉಗ್ರರು ಹತರಾಗಿದ್ದಾರೆ.

 Sharesee more..

ಅಯೋಧ್ಯೆ ತೀರ್ಪು : ಮುಸ್ಲಿಂ ಲೀಗ್ ಅಸಮಾಧಾನ

12 Nov 2019 | 9:38 AM

ಕೋಝಿಕೋಡ್, ನ 12 (ಯುಎನ್ಐ) ಅಯೋಧ್ಯೆಯ ಬಾಬರಿ ಮಸೀದಿ- ರಾಮಜನ್ಮಭೂಮಿ ವಿವಾದ ಇತ್ಯರ್ಥಕ್ಕೆ ಸಂಬಂಧಪಟ್ಟಂತೆ ಸುಪ್ರೀಂಕೋರ್ಟ್ ನ ಸಂವಿಧಾನಪೀಠ ನೀಡಿರುವ ಸರ್ವ ಸಮ್ಮತ ತೀರ್ಪು ನಿರಾಶೆ ಉಂಟುಮಾಡಿದೆ ಎಂದು ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ ಅಸಮಾಧಾನ ಹೊರಹಾಕಿದೆ.

 Sharesee more..